Category: ಚಿಕ್ಕಮಗಳೂರು ನಗರ

  • ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪೌರಸೇವಾ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

    ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪೌರಸೇವಾ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

    ಚಿಕ್ಕಮಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಸೇವಾ ಕಾರ್ಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ನಗರಸಭೆ ಆವರಣದಲ್ಲಿ ಪೌರಸೇವಾ ನೌಕರರ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

    ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಹಾಗೂ ಕೆಜಿಐಡಿ, ಜಿವಿಎಫ್, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುತ್ತಿರುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ.

    ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್. ಅಣ್ಣಯ್ಯ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿರುವ ಪೌರ ಕಾರ್ಮಿಕರನ್ನು ಮಾತ್ರ ಕಾಯಂಗೊಳಿಸಲಾಗಿದೆ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಸೇವಾ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಜೊತೆಗೆ ಆರೋಗ್ಯ ವಿಮೆ, ಕೆಜಿಐಡಿ ಸೌಲಭ್ಯಗಳನ್ನು ಕಳೆದ ೩೦ ವರ್ಷಗಳಿಂದ ವಾಟರ್ ಮ್ಯಾನ್‌ಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ನೇರ ಪಾವತಿ ಅಡಿಗೆ ತರಬೇಕೆಂದು ಒತ್ತಾಯಿಸಿದರು.

    ಸರ್ಕಾರ ಇಂದು ಸಂಜೆ ವೇಳೆಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವ ತೀರ್ಮಾನ ಕೈಗೊಂಡು ಭರವಸೆ ನೀಡಿದರೆ ಮುಷ್ಕರವನ್ನು ವಾಪಸ್ ಪಡೆಯುತ್ತೇವೆ. ಇಲ್ಲದಿದ್ದರೆ ಮುಷ್ಕರವನ್ನು ತೀವ್ರತರದಲ್ಲಿ ಮುಂದುವರೆಸುತ್ತೇವೆಂದು ಎಚ್ಚರಿಸಿದ ಅವರು, ಈ ಸಂಬಂಧ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ೪೫ ದಿನಗಳ ಗಡುವು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲದ ಹಿನ್ನೆಲೆಯಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದೇವೆಂದರು.

    ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಪೌರ ಸೇವಾ ನೌಕರರು ಎದುರಿಸುತ್ತಿರುವ ಹಲವು ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಪ್ರತೀ ಇಲಾಖೆ, ಸಚಿವರಿಗೆ, ಸರ್ಕಾರಕ್ಕೆ ಸಲ್ಲಿಸಿ ಒತ್ತಾಯಿಸಿದ್ದರೂ ಗಮನಹರಿಸಿಲ್ಲ, ನೇರ ಪಾವತಿ ಮತ್ತು ಗುತ್ತಿಗೆ ಆಧಾರದ ನೌಕರರು, ಮನೆ ಮನೆ ಕಸ ಸಂಗ್ರಹಣೆ ನೌಕರರು ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಕಾಯಂ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

    ತಮ್ಮ ಬೇಡಿಕೆಗಳು ಈಡೇರುವವರೆಗೆ ಮುಷ್ಕರ ಮುಂದುವರೆಸುತ್ತೇವೆ, ಸರ್ಕಾರ ಈ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಸೂಕ್ತ ಕ್ರಮ ಕೈಗೊಂಡು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.

    ನಗರಸಭೆ ಕಚೇರಿ ವ್ಯವಸ್ಥಾಪಕ ರವಿ ಮಾತನಾಡಿ, ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ೭೪ನೇ ಸಂವಿಧಾನಾತ್ಮಕ ತಿದ್ದುಪಡಿಯಾಗಿದ್ದರೂ ಪೌರ ನೌಕರರಿಗೆ ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿದ್ದು, ಕಳೆದ ೫೦ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ನೌಕರರ ನ್ಯಾಯಯುತವಾದ ಬೇಡಿಕೆಗಳು ಈಡೇರಿಲ್ಲ. ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ದೂರಿದರು.

    ಪೌರಸೇವಾ ನೌಕರರಿಗೆ ಆರೋಗ್ಯ ವಿಮೆ ನೀಡದೆ ಸರ್ಕಾರ ತಾತ್ಸಾರ ಮನೋಭಾವ ತಾಳುತ್ತಿದೆ. ಕೂಡಲೇ ಪೌರ ನೌಕರರಿಗೆ ಕೆಜಿಐಡಿ ಸೌಲಭ್ಯ ನೀಡಿ ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂದು ಆಗ್ರಹಿಸಿದರು.

    ಪ್ರತಿಭಟನೆಯಲ್ಲಿ ಆರ್.ಓ ಶಿವಾನಂದ್, ಸೂಪರ್‌ಡೆಂಟ್ ಲತಾಮಣಿ. ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಈಶ್ವರ್, ನಾಗಪ್ಪ, ರಂಗಪ್ಪ, ಹೊರಗುತ್ತಿಗೆ ನೌಕರರಾದ ಕೃಷ್ಣ, ಮೂರ್ತಿ, ಪ್ರಸನ್ನ ಇತರರು ಉಪಸ್ಥಿತರಿದ್ದರು.

    Indefinite strike by civil service employees demanding fulfillment of various demands

  • ಜಿಲ್ಲೆಯಲ್ಲಿ ಇಂದಿನಿಂದ ಪೌರನೌಕರರ ಅನಿರ್ದಿಷ್ಟಕಾಲ ಮುಷ್ಕರ

    ಜಿಲ್ಲೆಯಲ್ಲಿ ಇಂದಿನಿಂದ ಪೌರನೌಕರರ ಅನಿರ್ದಿಷ್ಟಕಾಲ ಮುಷ್ಕರ

    ಚಿಕ್ಕಮಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿರುವುದರಿಂದ ಮೇ.೨೭ ರಂದು ಅನಿರ್ದಿಷ್ಟಕಾಲ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪೌರನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಅಣ್ಣಯ್ಯ ತಿಳಿಸಿದರು.

    ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ, ಬೇಡಿಕೆ ಈಡೇರುವ ತನಕ ಹಂತಹಂತವಾಗಿ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದ ಅವರು, ಬೇಡಿಕೆ ಈಡೇರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ದಿನಾಂಕ ನಿಗದಿಪಡಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಇದುವರೆಗೂ ರಾಜ್ಯಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಲು ಸಭೆಯನ್ನು ಕರೆದಿಲ್ಲವೆಂದು ಹೇಳಿದರು.

    ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಲು ಒತ್ತಾಯಿಸಿ ೪೫ ದಿನಗಳ ಅನಿರ್ದಿಷ್ಟಕಾಲ ಮುಷ್ಕರ ನಡೆಸುವ ಬಗ್ಗೆ ನೋಟಿಸ್ ನೀಡಿದ್ದು, ರಾಮನಗರದಲ್ಲಿ ರಾಜ್ಯ ಪರಿಷತ್ತಿನ ಸರ್ವಸದಸ್ಯರ ಸಭೆ ನಡೆಸಿದ್ದು, ಮೇ.೨೭ರಿಂದ ಮುಷ್ಕರ ನಡೆಸಲಾಗುತ್ತಿದೆ. ಇಂದು ಸಾಂಕೇತಿಕವಾಗಿ ರಾಜ್ಯಾದ್ಯಂತ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇಖನಿ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ ಎಂದರು.

    ಕರ್ನಾಟಕ ನಾಗರಿಕ ನಿಯಮ ಅಧಿನಿಯಮ ೧೯೭೮ರನ್ನು ಕರ್ನಾಟಕ ಪೌರಸೇವಾ ನೌಕರರಿಗೆ ಅನ್ವಯಿಸುವುದು ಹಾಗೂ ಪಂಚಾಯತ್ ರಾಜ್ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿರುವ ಮಾದರಿಯಲ್ಲಿಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ನೌಕರರನ್ನು ಸರ್ಕಾರಿ ನೌಕರೆಂದು ಪರಿಗಣಿಸಬೇಕು. ಸರ್ಕಾರಿ ನೌಕರರು ಪಡೆಯುವ ಸೌಲಭ್ಯಗಳನ್ನು ನಮಗೂ ವಿಸ್ತರಿಸಲು ಶಾಸನ ಸಭೆಯಲ್ಲಿ ಕಾಯ್ದೆರೂಪಿಸಬೇಕೆಂದು ಒತ್ತಾಯಿಸಿದರು.

    ಹೊರಗುತ್ತಿಗೆ ಆಧಾರದ ಮೇಲೆ ನೀರುಸರಬರಾಜು ಸಹಾಯಕರು, ವಾಹನ ಚಾಲಕರು, ಬೀದಿದೀನ ಸಹಾಯಕರು ಲೋಡರ್ಸ್, ಪಾರ್ಕ್, ಗಾರ್ಡನರ್‌ಕಾವಲುಗಾರ, ಸ್ಯಾನಿಟರಿ ಸೂಪರ್‌ವೈಸರ್ ಸೇರಿದಂತೆ ವಿವಿಧ ವೃಂದಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ನೌಕರರನ್ನು ನೇರಪಾವತಿಗೆ ಒಳಪಡಿಸಬೇಕೆಂದು ತಿಳಿಸಿದರು.

    ಘನತ್ಯಾಜ್ಯ ವಸ್ತು ನಿರ್ವಹಣೆಗೆ ಮತ್ತು ಮಾಲಿನ್ಯ ನೀರು ನಿರ್ವಹಣೆಗೆ ಅಗತ್ಯವಾದ ವಾಹನಗಳನ್ನು ಖರೀದಿಸುತ್ತಿದ್ದು, ಈ ವಾಹನಗಳಿಗೆ ಪೂರಕವಾಗಿ ವೃಂದ ಮತ್ತು ನೇಮಕಾತಿಯಲ್ಲಿ ವಾಹನ ಚಾಲಕ ಹುದ್ದಗಳನ್ನು ಮಂಜೂರು ಮಾಡದೆ ಇರುವುದರಿಂದ ಶಾಶ್ವತ ವಾಹನ ಚಾಲಕರನ್ನು ನೇಮಕಮಾಡಿಕೊಳ್ಳಲು ತೊಡಕಾಗಿದ್ದು, ಈ ಅಂಶವನ್ನು ಸಮಗ್ರವಾಗಿ ಪರಿಶೀಲಿಸಿ ಮಂಜೂರಾತಿ ಹುದ್ದೆಗಳನ್ನು ಸಕ್ರಮಗೊಳಿಸಬೇಕೆಂದು ಆಗ್ರಹಿಸಿದರು.

    ನಗರ ಸ್ಥಳೀಯ ಸಂಸ್ಥೆಗಳಿಗೆ ಮುಖ್ಯವಾಗಿ ನಗರಸಭೆ ಮತ್ತು ಪುರಸಭೆಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನುಅನುಷ್ಟಾನಗೊಳಿಸಿ ನಗರಸ್ಥಳೀಯ ಸಂಸ್ಥೆಗಳಲ್ಲಿ ನಿರ್ವಹಣೆಗೆ ಹಸ್ತಾಂತರಿಸುತ್ತಿದ್ದು, ಇವುಗಳ ನಿರ್ವಹಣೆಗೆ ಅಗತ್ಯವಾದ ತಜ್ಞ ಸಿಬ್ಬಂದಿಗಳನ್ನು ಮಹಾನಗರಪಾಲಿಕೆ ವೃಂದ ಮತ್ತು ನೇಮಕಾತಿಯಲ್ಲಿ ಅವಕಾಶ ಕಲ್ಪಿಸಿರುವಂತೆ ನಗರಸ್ಥಳೀಯ ಸಂಸ್ಥೆಗಳ ವೃಂದ ಮತ್ತು ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕೆಂದು ಸರ್ಕಾರವನ್ನು ಕೋರಿದರು.

    ನೇರ ಪಾವತಿಯಲ್ಲಿರುವ ಪೌರಕಾರ್ಮಿಕರು,ಲೋಡರ್ಸ್, ಕ್ಲೀನರ್ಸ್ ಮರಣಹೊಂದಿದಲ್ಲಿ ೧೦ ಲಕ್ಷ ರೂ.ಗಳನ್ನು ಅವಲಂಬಿತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು. ಮಾನವೀಯ ದೃಷ್ಟಿಯಿಂದ ಅನುಕಂಪ ಆಧಾರದ ಮೇಲೆ ಕುಟುಂಬದವರಿಗೆ ಹುದ್ದೆ ನೀಡುವುದು ಸೇರಿದಂತೆ ಒಟ್ಟು ೧೯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ಹಮ್ಮಿಕೊಂಡಿರುವುದಾಗಿ ಹೇಳಿದರು.

    ಪೌರನೌಕರ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ, ಪದಾಧಿಕಾರಿಗಳಾದ ಸುನೀಲ್‌ಕುಮಾರ್, ಪಾಪಣ್ಣ, ರಮೇಶ್ ಇದ್ದರು.

    Indefinite strike by civic employees in the district from today

  • ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾಭಾರತಿ ಶಾಲೆಗೆ ಶೇ.100 ಫಲಿತಾಂಶ

    ಎಸ್‌ಎಸ್‌ಎಲ್‌ಸಿಯಲ್ಲಿ ವಿದ್ಯಾಭಾರತಿ ಶಾಲೆಗೆ ಶೇ.100 ಫಲಿತಾಂಶ

    ಚಿಕ್ಕಮಗಳೂರು: ನಗರದ ಗೌರಿಕಾಲುವೆಯಲ್ಲಿರುವ ವಿದ್ಯಾಭಾರತಿ ಇಂಗ್ಲಿಷ್ ಪ್ರೈಮರಿ ಮತ್ತು ಹೈಸ್ಕೂಲ್‌ಗೆ ೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಬಂದಿದೆ ಎಂದು ಮುಖ್ಯೋಪಾಧ್ಯಾಯರಾದ ಸಾಯರಾ ಫಾತಿಮಾ ತಿಳಿಸಿದ್ದಾರೆ.

    ಮಹಮದ್ ಅನಾಸ್ ಶೇ.೯೪.೦೪, ಜೈನ್ ಸಾಲಿಕ್ ಶೇ.೯೨.೧೪, ಮಹಮದ್ ಶಮಾಸ್ ಶೇ.೮೯.೧೨, ಅಮೃತ ಹೆಚ್.ಸಿ ಶೇ.೮೯, ವೈಷ್ಣವಿ.ಎ.ಕೆ ಶೇ.೮೮, ಧನಷ್ ಶೇ.೮೭, ಅಫೀಫಾ ಶೇ.೮೪.೩೨, ಮಹಮದ್ ಅಜಾನ್ ಶೇ.೮೪ ರಷ್ಟು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆಂದು ಶ್ಲಾಘಿಸಿದರು.

    ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆಂದು ತಿಳಿಸಿರುವ ಅವರು, ಇದಕ್ಕೆ ಶ್ರಮಿಸಿದ ಶಿಕ್ಷಕರು ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.

    Vidya Bharathi School achieves 100% results in SSLC

  • ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾಗಿ ಕೆ.ಎಸ್. ಶಾಂತೇಗೌಡ ಆಯ್ಕೆ

    ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾಗಿ ಕೆ.ಎಸ್. ಶಾಂತೇಗೌಡ ಆಯ್ಕೆ

    ಚಿಕ್ಕಮಗಳೂರು: ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾಗಿ ಗುತ್ತಿಗೆದಾರರಾದ ಕೆ.ಎಸ್. ಶಾಂತೇಗೌಡ ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಲಾಗಿದೆ. ಇಂದು ನಗರದ ಕನಕ ಭವನದಲ್ಲಿ ನಡೆದ ಜಿಲ್ಲಾ ಕುರುಬರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸಂಘದಲ್ಲಿ ಹಾಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೆ.ಎಸ್. ಶಾಂತೇಗೌಡ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.

    ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಶಾಂತೇಗೌಡರು ಸಮಾಜದ ಕೆಲಸ ಮಾಡಿಕೊಂಡು ಬರುತ್ತಿದ್ದು, ಈಗ ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆಮಾಡಿರುವುದರಿಂದ ಉತ್ತಮವಾಗಿ ಸಮುದಾಯದ ಕೆಲಸ ಮಾಡಲು ಗುರಿ ಹೊಂದಿದ್ದೇನೆ ಎಂದರು.

    ಕನಕ ಭವನಕ್ಕೆ ಕಾಂಪೌಂಡ್ ನಿರ್ಮಾಣ, ಅಡುಗೆ ಮನೆ ಮುಂತಾದವುಗಳ ನಿರ್ಮಾಣದ ಜೊತೆಗೆ ಕುರುಬ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಕಳೆದ ಹತ್ತಾರು ವರ್ಷಗಳಿಂದ ಕುರುಬರ ಸಂಘದ ಅಧ್ಯಕ್ಷರಾಗಿದ್ದ ಕೆ.ಎಂ. ಮಂಜುನಾಥ್ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ಸಹಕರಿಸಿದ ಎಲ್ಲಾ ಸರ್ವ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

    ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರುಗಳಾದ ಕೆ.ಎ. ಗೋಪಾಲಕೃಷ್ಣ, ಕೆ.ವಿ. ಮಂಜುನಾಥ, ಎನ್.ಹೆಚ್. ಮೋಹನ್, ರೇಖಾಹುಲಿಯಪ್ಪಗೌಡ, ಡಿ.ಸಿ. ಪುಟ್ಟೇಗೌಡ, ಹೆಚ್.ಪಿ ಮಂಜೇಗೌಡ, ಲಾಯರ್ ಮಂಜುನಾಥ, ರಾಮಣ್ಣ, ಹೆಚ್.ಎಸ್. ಪುಟ್ಟೇಗೌಡ, ದೇವರಹಳ್ಳಿ ಡಿ.ಎಂ ಜನಾರ್ಧನ, ಸಿದ್ದೇಗೌಡ, ಬೀರೇಗೌಡ ದೇವೇಗೌಡ, ರೇವಣ್ಣ, ಡಿ.ಎಸ್. ಚಂದ್ರೇಗೌಡ, ಭದ್ರೇಗೌಡ, ಧರ್ಮೇಶ್, ತ್ರಿಭುವನ್, ಪುಷ್ವರಾಜ್, ರಾಮಣ್ಣ, ಲಕ್ಷ್ಮೀಕಾಂತ್, ಜಗಧೀಶ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

    K.S. Shantegowda elected as the President of the Jillā kurubara saṅgha

  • ಮಳೆಯಿಂದ ಅವಘಡಗಳ ಸರಣಿ: ಬಣಕಲ್ ಬಳಿ ಒಂದೇ ರಸ್ತೆಯಲ್ಲಿ ಮೂರು ಕಾರು ಪಲ್ಟಿ

    ಮಳೆಯಿಂದ ಅವಘಡಗಳ ಸರಣಿ: ಬಣಕಲ್ ಬಳಿ ಒಂದೇ ರಸ್ತೆಯಲ್ಲಿ ಮೂರು ಕಾರು ಪಲ್ಟಿ

    ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ರಾಮಣ್ಣನಗಂಡಿ ಬಳಿ ಕಳೆದ 24 ಗಂಟೆಗಳೊಳಗೆ ಒಂದು ಹಿಂದೊಂದು ಮೂರು ಕಾರುಗಳು ಪಲ್ಟಿಯಾದ ಘಟನೆ ಉಂಟಾಗಿದೆ. ಭಾರೀ ಮಳೆಯಿಂದಾಗಿ ರಸ್ತೆ ಸ್ಪಷ್ಟವಾಗಿ ಕಾಣದೆ ಚಾಲಕರು ನಿಯಂತ್ರಣ ಕಳೆದುಕೊಂಡು ಈ ಅವಘಡಗಳು ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

    ಶನಿವಾರ ಬೆಳಿಗ್ಗೆ ಸಂಭವಿಸಿದ ಪ್ರಥಮ ಅಪಘಾತದ ನಂತರ, ಅದೇ ಸ್ಥಳದಲ್ಲಿ ಇನ್ನೂ ಎರಡು ಕಾರುಗಳು ಪಲ್ಟಿಯಾದವು. ಒಂದು ಕಾರು ನೇರವಾಗಿ ಹೇಮಾವತಿ ನದಿಗೆ ಬಿದ್ದಿದ್ದು, ಇನ್ನೊಂದು ಕಾರು ರಸ್ತೆಯ ಬದಿಯ ಎಡೆದಾರಿಗೆ ಜಾರಿದೆ. ವಾಹನ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಬಣಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ 73ರಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಅವೈಜ್ಞಾನಿಕ ಮತ್ತು ಅಸುರಕ್ಷಿತ ಎಂದು ಟೀಕಿಸಿದ್ದು, ಇದನ್ನು ಅಪಘಾತಗಳಿಗೆ ಕಾರಣವಾಗುತ್ತಿರುವುದಾಗಿ ಆರೋಪಿಸಿದ್ದಾರೆ. ಹೆದ್ದಾರಿ ಬದಿ ಎಚ್ಚರಿಕೆ ಫಲಕಗಳ ಹಾಗೂ ಸರಿಯಾದ ನಿಕಾಸಿ ವ್ಯವಸ್ಥೆಯ ಕೊರತೆಯು ಮಳೆಯ ಸಮಯದಲ್ಲಿ ವಾಹನ ಚಾಲನೆಗೆ ಭಾರೀ ಅಡಚಣೆಯಾಗುತ್ತಿದೆ ಎಂಬುದು ಸ್ಥಳೀಯರ ವಾದ.

    ಅಪಘಾತದ ಬಳಿಕ ಸ್ಥಳೀಯ ಯುವಕರಾದ ‘ಬಣಕಲ್ ಬಾಯ್ಸ್’ ತಂಡದಿಂದ  ರಕ್ಷಣಾ ಕಾರ್ಯಕ್ಕೆ ಸಹಕಾರ ನೀಡಲಾಯಿತು. ಈ ತಂಡದಲ್ಲಿ ಸಿದ್ದೀಕ್, ಫರ್ಹನ್,ರಶೀದ್, ಅರಫಾತ್, ಅಝರ್, ನಯಾಜ್, ಆಫೀಲ್, ಸಿರಾಜ್, ಅರೀಫ್, ಸದ್ದು, ಅಕ್ಮಲ್, ಆಫನ್,ರಿಯಾಜ್ ಅದ್ದು, ಮುಖರಮ್, ಫಿದ್ದು, ಆತೀಫ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

    ಈ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಮಳೆಯ ಸಮಯದಲ್ಲಿ ಎಚ್ಚರಿಕೆಯಿಂದ ಹಾಗೂ ನಿಧಾನವಾಗಿ ವಾಹನ ಚಲಾಯಿಸುವಂತೆ ಪ್ರಾಧಿಕಾರಗಳು ಮನವಿ ಮಾಡಿವೆ.

    Series of accidents due to rain: Three cars overturn on the same road near Banakal

  • ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಮರ ಬಿದ್ದು ಚಾಲಕ ಸಾವು

    ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಮರ ಬಿದ್ದು ಚಾಲಕ ಸಾವು

    ಚಿಕ್ಕಮಗಳೂರು: ಚಲಿಸುತ್ತಿದ್ದ ಆಟೋ ಮೇಲೆ ಬೃಹತ್ ಮರವೊಂದು ಬಿದ್ದು ಚಾಲಕ ಕುಳಿತ ಜಾಗದಲ್ಲೇ ಸಾವನ್ನಪ್ಪಿರುವ ಘಟನೆ ಜಯಪುರ ಸಮೀಪ ಸಂಭವಿಸಿದ್ದು, ಈ ಬಾರಿಯ ಮುಂಗಾರು ಮಳೆಗೆ ಜಿಲ್ಲೆಯಲ್ಲಿ ಮೊದಲ ಬಲಿಯಾದಂತಾಗಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪ ಬೈರೇದೇವರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಘಟನೆ ನಡೆದಿದೆ. ಮೃತರನ್ನು ೩೮ ವರ್ಷದ ರತ್ನಾಕರ್ ಎಂದು ಗುರುತಿಸಲಾಗಿದೆ.

    ಕೊಪ್ಪ ತಾಲೂಕಿನಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು ಊಟಕ್ಕೆಂದು ಮನೆಗೆ ತೆರಳುವಾಗ ರಸ್ತೆ ಬದಿಯ ಭಾರೀ ಗಾತ್ರದ ಮರವೊಂದು ಆಟೋ ರಿಕ್ಷಾದ ಮೇಲೆ ಉರುಳಿ ಬಿದ್ದಿದೆ. ಆಟೋದ ಮುಂಭಾಗದಲ್ಲೇ ಮರ ಬಿದ್ದಿರುವುದರಿಂದ ಜೀವ ಉಳಿಸಿಕೊಳ್ಳಲು ಚಾಲಕನಿಗೆ ಯಾವುದೇ ಅವಕಾಶವೂ ಸಿಕ್ಕಿಲ್ಲ. ತಕ್ಷಣ ರಕ್ಷಣಾ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮರವನ್ನು ಯಂತ್ರಗಳಿಂದ ಕತ್ತರಿಸಿ ತೆರವು ಮಾಡಿದ್ದಾರೆ.

    ಮಲೆನಾಡಿನಲ್ಲಿ ಈ ವರ್ಷದ ಮಹಾಮಳೆಗೆ ಇದು ಮೂರನೇ ಬಲಿಯಾಗಿದ್ದು, ಮುಂಗಾರಿಗೆ ಮೊದಲ ಬಲಿಯಾಗಿದೆ. ಇತ್ತಿಚೆಗೆ ಅಜ್ಜಂಪುರ ಹಾಗೂ ಚಿಕ್ಕಮಗಳೂರು ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದರು. ಪೂರ್ವ ಮುಂಗಾರಿನ ಅಬ್ಬರಕ್ಕೆ ಜಿಲ್ಲೆಯು ನಲುಗುತ್ತಿದ್ದು, ವಿದ್ಯುತ್ ಸಂಪರ್ಕ ಸಂಪೂರ್ಣ ಅಸ್ತವ್ಯಸ್ಥಗೊಂಡು ಮಲೆನಾಡು ತಾಲ್ಲೂಕುಗಳು ಕತ್ತಲಲ್ಲಿ ಮುಳುಗುವಂತಾಗಿದೆ.

    ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜನತೆ ತತ್ತರಿಸುತ್ತಿದ್ದು, ಮನೆಯಿಂದ ಹೊರಕ್ಕೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ನೂರಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿರುವುದರಿಂದ ತೋಟದ ಮನೆಗಳು, ಕೂಲಿ ಲೈನ್‌ನ ನಿವಾಸಿಗಳು ಹೊರಕ್ಕೆ ಬರಲು ಹೆದರುತ್ತಿದ್ದಾರೆ. ಎಲ್ಲಿ ವಿದ್ಯುತ್ ಪ್ರವಾಹ ಉಂಟಾಗುತ್ತದೋ ಎನ್ನುವ ಭೀತಿ ಕಾಡಲಾರಂಭಿಸಿದೆ.

    ದಿನವಿಡೀ ದಟ್ಟವಾದ ಮಂಜು, ಅಬ್ಬರದ ಮಳೆ, ಭಾರೀ ಬಿರುಸಿನ ಗಾಳಿಯಿಂದಾಗಿ ಕ್ಷಣಕ್ಕೊಂದು ಮರ ಉರುಳಿ ಬೀಳುತ್ತಿದೆ. ನಿರಂತರ ಮಳೆಯಿಂದ ಭೂಮಿ ಸಂಪೂವರ್ಣ ತೇವಗೊಂಡು ವಿದ್ಯುತ್ ಕಂಬಗಳು ಬುಡಮೇಲಾಗುತ್ತಿವೆ. ಹಲವು ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದಿರುವುದರಿಂದ ಕಂಬಗಳು ಒತ್ತಡ ತಾಳಲಾರದೆ ಕುಸಿದು ಬಿದ್ದಿವೆ. ಕೆಲವು ಕಂಬಗಳು ಮುರಿದು ಬಿದ್ದಿವೆ. ತೀವ್ರ ಪ್ರಮಾಣದಲ್ಲಿ ಮಳೆ ಬೀಳುತ್ತಿರುವುದರಿಂದ ಕಂಬಗಳ ಮರು ಸ್ಥಾಪನೆ, ಲೈನ್‌ಗಳ ದುರಸ್ಥಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಹಲವಾರು ಹಳ್ಳಿಗಳು, ನೂರಾರು ಮನೆಗಳು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ.

    ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ, ದಿಣ್ಣೇಕೆರೆ, ಕೂದುವಳ್ಳಿ, ತೋರಣಮಾವು, ಕೋಡುವಳ್ಳಿ, ಕೋಟೆವೂರು, ಹುಣಸೇಮಕ್ಕಿ, ಕೆಸರಿಕೆ, ಮುಳ್ಳಾರೆ, ಕಲ್ಲುಗುಡ್ಡೆ, ಕಟ್ರುಮನೆ, ಹಳ್ಳಿಹಿತ್ಲು, ಮಿಂಚೇರಿ ಇನ್ನಿತರೆ ಗ್ರಾಮಗಳು ವಿದ್ಯುತ್ ಕಡಿತಗೊಂಡು ಕತ್ತಲ ಕೂಪವಾಗಿವೆ. ಮೂಡಿಗೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ತಾಲ್ಲೂಕುಗಳಲ್ಲೂ ಭಾರೀ ಮಳೆ ಗಾಳಿಯಿಂದ ಸಾವಿರಾರು ಕಂಬಗಳು ಉರುಳಿಬಿದ್ದು ಹಲವು ಗ್ರಾಮಗಳಿಗೆ ವಿದ್ಯುತ್ ಕಡಿತ ಉಂಟಾಗಿದೆ.

    ಮೆಸ್ಕಾಂಗೆ ಬಿಡುವಿಲ್ಲದ ದೂರುಗಳು, ಕರೆಗಳು ಬರುತ್ತಿದ್ದು ಸಿಬ್ಬಂದಿಗಳು ದಿಕ್ಕು ತೋಚದಂತಾಗಿದ್ದಾರೆ. ಭಾರೀ ಮಳೆಯಿಂದಾಗಿ ತೋಟಗಳು ಹಾಗೂ ಹಳ್ಳ, ಕೊಳ್ಳಗಳನ್ನು ದಾಟಿಕೊಂಡು ಹೋಗಿ ಲೈನ್‌ಗಳು, ಕಂಬಗಳನ್ನು ದುರಸ್ಥಿ ಪಡಿಸುವುದು ಸವಾಲಿನ ಕೆಲಸವಾಗಿದ್ದು, ಪರದಾಡುವಂತಾಗಿದೆ. ಕೆಲವು ಗ್ರಾಮಗಳಿಗೆ ಸಧ್ಯಕ್ಕೆ ವಿದ್ಯುತ್ ಸಂಪರ್ಕ ಸಿಗುವುದು ಅನುಮಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

    ಬಹುತೇಕ ಮನೆಗಳಲ್ಲಿ ಕ್ಯಾಂಡಲ್‌ಗಳು, ದೀಪದ ಬೆಳಕಿನಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲವು ತಾಂತ್ರಿಕ ಕೋರ್ಸ್‌ಗಳ ಪರೀಕ್ಷೆಗಳು ನಡೆಯುತ್ತಿದ್ದು, ಮನೆಗಳಿಂದ ಓಡಾಡುವ ವಿದ್ಯಾರ್ಥಿಗಳು ಓದಲೂ ಆಗದೇ ಪರೀಕ್ಷಾ ಕೇಂದ್ರಗಳನ್ನು ತಲುಪು ಆಗದೆ ತೊಂದರೆ ಅನುಭವಿಸುತ್ತಿದ್ದಾರೆ.

    Driver dies after huge tree falls on moving auto

  • ಬುಡಕಟ್ಟು ಜನಾಂಗ ಶಿಕ್ಷಣ-ಆರೋಗ್ಯದತ್ತ ಗಮನಹರಿಸಿ

    ಬುಡಕಟ್ಟು ಜನಾಂಗ ಶಿಕ್ಷಣ-ಆರೋಗ್ಯದತ್ತ ಗಮನಹರಿಸಿ

    ಚಿಕ್ಕಮಗಳೂರು: ಪ್ರಕೃತಿಯ ನಡುವೆ ಜೀವನ ರೂಪಿಸಿಕೊಂಡಿರುವ ಆದಿವಾಸಿಯ ಬುಡ ಕಟ್ಟು ಜನಾಂಗದವರು ಮೊದಲು ಶಿಕ್ಷಣ, ಆರೋಗ್ಯದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡು ಸಮರ್ಥ ವ್ಯಕ್ತಿ ಗಳಾಗಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಕರೆ ನೀಡಿದರು.

    ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ನ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ಧ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.

    ಪೂರ್ವಿಕರ ಕಾಲದಿಂದಲೂ ಕಾಡಿನ ಮಧ್ಯೆಯೇ ಬದುಕು ಕಟ್ಟಿಕೊಂಡು ಸಾಗುತ್ತಿರುವ ಜನಾಂಗದವ ರು ತಮ್ಮ ಮಕ್ಕಳ ಭವಿಷ್ಯವನ್ನು ಶಿಕ್ಷಣದಿಂದ ವಂಚಿತಗೊಳಿಸಬಾರದು. ಐಎಎಸ್, ಐಪಿಎಸ್ ಅಥವಾ ಸ ರ್ಕಾರಿ ಹುದ್ದೆಗಳ ಕನಸುಗಳನ್ನು ಹೊತ್ತಿರುವ ಮಕ್ಕಳಿಗೆ ಪಾಲಕರು ಎಲ್ಲಾ ಹಂತದಲ್ಲೂ ಪ್ರೋತ್ಸಾಹಿಸಬೇಕು ಎಂದರು.

    ಬುಡಕಟ್ಟು ಸಮುದಾಯವನ್ನು ಮೇಲ್ದರ್ಜೇಗೇರಿಸಲು ಕೇಂದ್ರ ಹಾಗೂ ರಾಜ್ಯಸರ್ಕಾರ ಅನೇಕ ಸವಲ ತ್ತುಗಳನ್ನು ಪೂರೈಸಿ ಹೊಸಬದುಕನ್ನು ರೂಪಿಸುತ್ತಿದೆ. ಆ ನಿಟ್ಟಿನಲ್ಲಿ ಜನಾಂಗದ ಮಕ್ಕಳು ಕಠಿಣ ಪರಿಶ್ರಮ, ನಿರಂತರ ಕಲಿಕೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಜೊತೆಗೆ ಪೂರ್ವಿಕರ ಆಚಾರ-ವಿಚಾರ ,ಪೂಜಾಪದ್ಧತಿ, ಹಿಂದಿನ ಕಸುಬುನ್ನು ಉಳಿಸಬೇಕು ಎಂದು ತಿಳಿಸಿದರು.

    ಈಗಾಗಲೇ ಆದಿವಾಸಿ ಪರಿಷತ್ ರಾಜ್ಯಾದ್ಯಂತ ಸಂಘಟನೆಯಲ್ಲಿ ತೊಡಗಿಸಿಕೊಂಡು ಬುಡಕಟ್ಟು ಜನಾ ಂಗದವರನ್ನು ಒಗ್ಗೂಡಿಸುತ್ತಿದೆ. ಪರಿಷತ್‌ನ ಹೋರಾಟಗಳಿಗೆ ಜನಾಂಗದವರು ಕೈಜೋಡಿಸಬೇಕು. ಅಲ್ಲದೇ ಸಂಕಷ್ಟದ ನೆರವಿಗೆ ಆಸರೆಯಾಗುತ್ತಿರುವ ಪರಿಷತ್ ಮುಖಂಡರುಗಳ ಕೈಬಲಪಡಿಸಬೇಕು ಎಂದರು.

    ಆದಿವಾಸಿ ಬುಡಕಟ್ಟು ಪರಿಷತ್ ಗೌರವಾಧ್ಯಕ್ಷ ಡಾ|| ಕೆ.ಎಂ.ಮೈತ್ರಿ ಮಾತನಾಡಿ ತಮಿಳುನಾಡು ಹಾ ಗೂ ಕರ್ನಾಟಕದಲ್ಲಿ ಆದಿವಾಸಿ ಜನಾಂಗವು ನೆಲೆಯೂರಿದೆ. ಪ್ರಸ್ತುತ ರಾಜ್ಯಸರ್ಕಾರ ಸಮುದಾಯಕ್ಕೆ ನೀಡು ತ್ತಿರುವ ಸೌಕರ್ಯವು ತಮಿಳುನಾಡಿನಲ್ಲಿ ಸಿಗುತ್ತಿಲ್ಲ. ಕೇವಲ ಜಾತಿಪ್ರಮಾಣ ಪತ್ರ ಪಡೆಯಲು ನ್ಯಾಯಾಲ ಯದ ಮೆಟ್ಟಿಲೇರಬೇಕಿದೆ ಎಂದರು.

    ಬುಡಕಟ್ಟು ಜನತೆಯನ್ನು ಹೊರಕಳಿಸುವ ಕೆಲಸಕ್ಕೆ ಕೈಹಾಕಿದರೆ ಸಮುದಾಯವು ಕ್ಷೀಣಿಸಲಿದೆ. ಹೀಗಾಗಿ ಹೊರತೆರಳಿರುವ ಜನರನ್ನು ಮತ್ತೊಮ್ಮೆ ಕರೆತರುವ ಪ್ರಯತ್ನಕ್ಕೆ ಮುಂದಾಗುವ ಮೂಲಕ ಸರ್ಕಾರದ ಮುಂ ದೆ ಶಕ್ತಿ ಪ್ರದರ್ಶಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಜನಾಂಗದ ಸಂತತಿ ಅವಿನಾಶದತ್ತ ಸಾಗಲಿದೆ ಎಂದು ಎಚ್ಚರಿ ಸಿದರು.

    ಮುಂದಿನ ಪೀಳಿಗೆಯ ಮಕ್ಕಳಿಗೆ ಕಾಡುವೃಕ್ಷಗಳನ್ನು ಪೂಜಿಸುವ ಸಂಪ್ರದಾಯ, ಪದ್ಧತಿಗಳನ್ನು ಪರಿಚ ಯಿಸುವುದು ಅತಿಮುಖ್ಯ. ಆಧುನಿಕತೆಗೆ ಒಗ್ಗಿದರೆ ಕಾಲಕ್ರಮೇಣ ಎಲ್ಲಾವು ಮರೆಯಾಗಲಿದೆ. ಜೊತೆಗೆ ಪರಿಷ ತ್‌ನ ಸಭೆ, ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಿಂದಿನಂತೆ ವೃಕ್ಷದಡಿ ಅಥವಾ ಜಲಪಾತಗಳ ಸಮೀಪ ನಡೆಸಬೇಕು ಎಂದು ಕಿವಿಮಾತು ಹೇಳಿದರು.

    ಇತ್ತೀಚೆಗೆ ಅಲೆಮಾರಿ ಜನಾಂಗದ ಮಕ್ಕಳನ್ನು ಅತ್ಯಾಚಾರಗೈದು ಮುಚ್ಚಿಹಾಕುವ ಪ್ರಕರಣಗಳು ಬಲಾಡ್ಯ ಜನಾಂಗವು ಮಾಡುತ್ತಿದೆ. ಅಲ್ಲದೇ ಸಮಾಜದ ವ್ಯವಸ್ಥೆಯು ಬಲಾಡ್ಯರ ಪರವಾಗಿ ನಿಂತಿರುವುದು ದುರ್ದೈವ ಇದನ್ನು ತಡೆಗಟ್ಟಲು ಪರಿಷತ್‌ನ ಸಂಘಟನಾತ್ಮಕ ಶಕ್ತಿಯಿಂದ ಮಾತ್ರ ಸಾಧ್ಯವಿದೆ ಎಂದು ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಮಾತನಾಡಿ ಆದಿವಾಸಿ ಜನಾಂಗದವರ ಮೇ ಲೆ ದೌರ್ಜನ್ಯ, ಶೋಷಣೆ ಅಥವಾ ಇನ್ಯಾವುದೇ ಸಂಕಷ್ಟಗಳು ಎದುರಾದರೆ ಕಾನೂನಾತ್ಮಕವಾಗಿ ಪೊಲೀಸ್ ಇಲಾಖೆ ಸದಾ ಜೊತೆಗಿರಲಿದೆ. ಅಲ್ಲದೇ ಬುಡಕಟ್ಟು ಸಮುದಾಯವು ಎಲ್ಲಾ ರೀತಿಯಲ್ಲೂ ಸಹಕಾರವು ಅತ್ಯ ವಶ್ಯ ಎಂದು ತಿಳಿಸಿದರು.

    ಅ.ಭಾ.ಆದಿವಾಸಿ ವಿಕಾಸ ಪರಿಷತ್ ದಕ್ಷಿಣ ಪ್ರಾಂತಿಯ ಅಧ್ಯಕ್ಷ ತಿರುಕೇಶವನ್, ಸದಸ್ಯ ತಿರುಮಾ ಧವನ್, ತಮಿಳುನಾಡು ಅಧ್ಯಕ್ಷ ಡಿ.ಲೋಕನಾಥನ್ ಮಾತನಾಡಿದರು.

    ಈ ಸಂದರ್ಭದಲ್ಲಿ ರಾಜ್ಯ ಆದಿವಾಸಿ ರಕ್ಷಣಾ ಪರಿಷತ್ ಕಾರ್ಯಾಧ್ಯಕ್ಷ ಮಹಾಂತೇಶ್ ಎಸ್.ಕೌಲಗಿ, ಕಾನೂನು ಸಲಹೆಗಾರ ಡಾ. ಮಧುಕುಮಾರ್, ಕ.ಆ.ರ.ಪರಿಷತ್ ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ್, ಖಜಾಂಚಿ ಶ್ರೀನಿವಾಸ್‌ಗೌಡ, ಸಂಚಾಲಕ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡೆನೆರಳು ಶಂಕರ್, ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಬಿ.ಕಾವೇರ, ಹರಿಣಾಶಿಕಾರಿ ಬುಡಕಟ್ಟಿನ ಮುಖಂಡ ಸಿದ್ದಣ್ಣ ಕಾಳೆ, ಹಕ್ಕಿ ಪಿಕ್ಕಿ ಬುಡಕಟ್ಟು ಮುಖಂಡ ಶಿಕಾರಿ ರಾಮು, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಾಣಿಕ್ ಮತ್ತಿತರರು ಉಪ ಸ್ಥಿತರಿದ್ದರು.

    Focus on tribal education and health

  • ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ರೋಡ್ ಷೋ:

    ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ರೋಡ್ ಷೋ:

    ಚಿಕ್ಕಮಗಳೂರು: ಪಾಪ ಅವರು ಸದನದಲ್ಲಿ ಮಾಡಬಾರದ ಅವಮಾನ ಮಾಡಿದ್ದಾರೆ. ಈಗ ಬಾಗಿನ ನೀಡಲು ಬಂದಿದ್ದಾರೆ. ಬಿಜೆಪಿಯವರ ಸೋಗಿನ ಬಾಗಿನದ ಅವಶ್ಯಕತೆ ನನಗಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಿನ ಜನತೆ ನನಗೆ ಮನೆ ಮಗಳಂತೆ ಸ್ವಾಗತ ಕೋರಿದ್ದಾರೆ. ಅದು ನನಗೆ ಸಾಕು ಎಂದರು.

    ಬೆಳಗಾವಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಕಠಿಣ ಶಬ್ದದಿಂದ ಖಂಡಿಸುತ್ತೇನೆ. ಆರೋಪಿಗಳು ಯಾರೇ ಆಗಿದ್ದರೂ ಅತ್ಯಂತ ಕಠಿಣವಾದ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.

    ಪ್ರಕರಣವನ್ನು ಕಂಪ್ಲೀಟ್ ಆಗಿ ಟ್ರ್ಯಾಕ್ ಮಾಡುತ್ತಿದ್ದೇನೆ. ಸಂತ್ರಸ್ತೆಯ ಮನೆಯವರು ಹಾಗೂ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಜೊತೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿನ್ ಟು ಪಿನ್ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಅವರಿಗೆ ಕ್ಷಮೆ ಎನ್ನುವುದೇ ಇಲ್ಲ ಎಂದು ಹೇಳಿದರು.

    ಬಿಜೆಪಿ ನಡೆಸುತ್ತಿರುವ ಕಲಬುರ್ಗಿ ಚಲೋ ಹೋರಾಟಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವವಿದೆ. ಅವರು ಎಲ್ಲಿಗೆ ಬೇಕಾದರೂ ಚಲೋ ಕೊಡಬಹುದು ಎಂದು ವ್ಯಂಗ್ಯವಾಡಿದರು.

    ಬಾಗಿನ ಕೊಡಲು ಮುಂದಾದ ಬಿಜೆಪಿ: ಕಾಫಿ ನಾಡಿಗೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅರಿಶಿನ ಕುಂಕುಮ ಕಾಯಿ ಬಳೆ ಸಹಿತ ಬಾಗಿನ ನೀಡಿ ಸ್ವಾಗತಿಸಲು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ.

    ಸಚಿವರು ನಗರದ ಪ್ರವಾಸಿ ಮಂದಿರದಲ್ಲಿರುವ ವಿಷಯ ತಿಳಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಹೂವು, ಹಣ್ಣು, ಬಳೆ, ಅರಿಸಿನ ಕುಂಕುಮ, ಲಕ್ಷ್ಮಿ ವಿಗ್ರಹ ಸೇರಿದಂತೆ ಬಾಗಿನ ಸಹಿತ ಪ್ರವಾಸಿ ಮಂದಿರದ ಎದುರು ತೆರಳಿದ್ದರು.

    ಆದರೆ ಪೊಲೀಸರು ಪ್ರವಾಸಿ ಮಂದಿರದ ಒಳಗೆ ತೆರಳಲು ಬಿಜೆಪಿ ಕಾರ್ಯಕರ್ತೆಯರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಬಾಗಿನ ಹಿಡಿದು ಕಾರ್ಯಕರ್ತೆಯರು ಪ್ರವಾಸಿ ಮಂದಿರದ ಗೇಟ್ ಬಳಿಯೇ ಕಾದು ನಿಂತಿದ್ದರು.

    ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳಿದರು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರತ್ತ ತಿರುಗಿಯೂ ನೋಡಲಿಲ್ಲ.

    ಇದರಿಂದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತೆಯರು, ಸಚಿವರ ಮನೆಗೆ ಯಾರಾದರೂ ಹೋದರೆ ಅರಿಶಿನ ಕುಂಕುಮ ಕೊಡುವುದಿಲ್ಲವೇ? ಕಾಂಗ್ರೆಸ್ಸಿಗರಿಗೆ ಅರಿಶಿನ ಕುಂಕುಮ ಕಂಡರೆ ಭಯ ಎಂದು ಲೇವಡಿ ಮಾಡಿ ತಾವು ತಂದಿದ್ದ ಬಾಗಿನವನ್ನು ಹಿರಿಯ ಬಿಜೆಪಿ ಕಾರ್ಯಕರ್ತೆಗೆ ನೀಡಿ ವಾಪಸ್ ತೆರಳಿದರು.

    ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ರೋಡ್ ಷೋ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ನಡುವೆ ಟಾಕ್ ವಾರ್ ನಡೆದ ಬಳಿಕ ಮೊದಲ ಬಾರಿಗೆ ಕಾಫಿ ನಾಡು ಚಿಕ್ಕಮಗಳೂರಿಗೆ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರ್ಜರಿ ರೋಡ್ ಶೋ ನಡೆಸಿದರು.

    ನಗರದಲ್ಲಿ ಶನಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮುನ್ನ ಬೋಳ ರಾಮೇಶ್ವರ ದೇವಸ್ಥಾನದ ಆವರಣದಿಂದ ಹನುಮಂತಪ್ಪ ವೃತ್ತದ ವರೆಗೆ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ ಸಚಿವೆಗೆ ಜೈಕಾರ ಹಾಕಿದರು.

    ಇನ್ನು ರೋಡ್ ಶೋ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ದಾರಿ ಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು. ಜೆಸಿಬಿ ಬಳಸಿ ಬೃಹತ್ ಹಾರ ಹಾಕುವ ಮೂಲಕ ಸಚಿವೆಗೆ ಸ್ವಾಗತಿಸುತಿದ್ದ ದೃಷ್ಯ ಸಾಮಾನ್ಯವಾಗಿತ್ತು.

    Minister Lakshmi Hebbalkar Bharjari Road Show

  • ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಅವಧಿ ವಿಸ್ತರಣೆ

    ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ಅವಧಿ ವಿಸ್ತರಣೆ

    ಚಿಕ್ಕಮಗಳೂರು: ಸರ್ಕಾರದ ಆದೇಶ ಕಳೆದ ವರ್ಷದ ನವೆಂಬರ್ ೧೨ ರಂದು ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು (ಎಂಪೆರಿಕಲ್ ಡಾಟಾ) ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ಸಲ್ಲಿಸಲು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಡಾ.ಹೆಚ್.ಎನ್.ನಾಗಮೋಹನ್‌ದಾಸ್ ಇವರ ಅಧ್ಯಕ್ಷತೆಯಲ್ಲಿ ಈಗಾಗಲೇ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ.

    ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶವನ್ನು (ಎಂಪೆರಿಕಲ್ ಡಾಟಾ) ಸಂಗ್ರಹಿಸಲು ಹೊಸದಾದ ಸಮೀಕ್ಷೆಯನ್ನು ನಡೆಸಲು ಕಳೆದ ಮಾರ್ಚ್ ೨೭ರ ಆಯೋಗದ ಮಧ್ಯಂತರ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾದ ಹಿನ್ನೆಲೆಯಲ್ಲಿ ಮೇ ೫ರಿಂದ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದರ ಮೂಲಕ ರಾಜ್ಯಾದ್ಯಂತ ಈಗಾಗಲೇ ಸಮೀಕ್ಷೆ ನಡೆಯುತ್ತಿದೆ.

    ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಪರಿಶಿಷ್ಟ ಜಾತಿ ಜನಾಂಗದ ಸಮೀಕ್ಷೆ ಕಾರ್ಯವು ಇನ್ನೂ ಪ್ರಗತಿಯಾಗಬೇಕಾಗಿರುವುದರಿಂದ, ಮಳೆ, ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಅನೇಕ ಪರಿಶಿಷ್ಟ ಜಾತಿ ಸಂಘಗಳಿಂದ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ಕೋರಿಕೆ ಮೇರೆಗೆ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲು ಅನುವಾಗುವಂತೆ ದಿನಾಂಕವನ್ನು ವಿಸ್ತರಿಸಲು ನಿರ್ಣಯಿಸಲಾಗಿದೆ.

    ಮನೆ-ಮನೆ ಭೇಟಿ ನೀಡುವ ಸಮೀಕ್ಷೆಯನ್ನು ಮೇ ೨೬ ರಿಂದ ೨೯ ರವರೆಗೆ ವಿಸ್ತರಿಸಲಾಗಿದೆ. ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ) ಮೂರು ದಿನಗಳ ಕಾಲ ಅಂದರೆ ಮೇ ೩೦, ೩೧ ಹಾಗೂ ಜೂನ್ ೧ ರವರೆಗೆ ಮರು ನಿಗದಿಪಡಿಸಲಾಗಿದೆ ಮತ್ತು ಆನ್‌ಲೈನ್ ಮೂಲಕ ಸ್ವಯಂಘೋಷಣೆ- ಜೂನ್ ೧ ರವರೆಗೆ ಮುಂದುವರೆಯಲಿದೆ ಎಂದು ಏಕ ಸದಸ್ಯ ಆಯೋಗದ ಕಾರ್ಯದರ್ಶಿಗಳು ತಿಳಿಸಿರುವುದಾಗಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Comprehensive Survey of Scheduled Castes-2025 Extension

  • ಉಪಪಂಗಡಗಳು ಒಂದಾಗಿ ವೀರಶೈವ-ಲಿಂಗಾಯಿತರೆನ್ನಿ

    ಉಪಪಂಗಡಗಳು ಒಂದಾಗಿ ವೀರಶೈವ-ಲಿಂಗಾಯಿತರೆನ್ನಿ

    ಚಿಕ್ಕಮಗಳೂರು: – ರಾಜ್ಯದಲ್ಲಿ ನೂರಕ್ಕೂ ಹೆಚ್ಚಿರುವ ಸಮಾಜದ ಉಪಪಂಗಡಗಳು ಒಂದಾ ಗುವ ಮೂಲಕ ವೀರಶೈವ ಲಿಂಗಾಯಿತರೆಂದು ಪ್ರತಿಪಾದಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

    ನಗರದ ಎಐಟಿ ಕಾಲೇಜು ಸಮೀಪದ ವೀರಶೈವ ಲಿಂಗಾಯಿತ ಸಮುದಾಯ ಭವನದಲ್ಲಿ ಶನಿವಾರ ನಡೆದ ಜಗದ್ಗುರು ಶ್ರೀ ರೇಣುಕಾ ಮತ್ತು ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ವೀರಶೈವ ಮತ್ತು ಲಿಂಗಾಯಿತ ಸಮಾಜವು ಹಸುವಿನಂತೆ, ಹಿಂದೆ ಬಂದರೆ ಒದೆಯುವದಿಲ್ಲ, ಮುಂದೆ ಬಂದರೆ ಹಾಯುವುದಿಲ್ಲ. ನಾಡಿನ ಪ್ರತಿಯೊಂದು ಜಾತಿ, ಧರ್ಮ, ಸಮಾಜವನ್ನು ಜೊತೆಗೂಡಿಸಿಕೊಂಡು ಅಸುಯೆಪಡದೇ ಅತ್ಯಂತ ಪ್ರೀತಿಯಿಂದ ಕಾಣುವ ಸಮಾಜ ವೀರಶೈವ-ಲಿಂಗಾಯಿತ ಎಂದು ಹೇಳಿದರು.

    ರಾಜ್ಯದಾದ್ಯಂತ ಮೂಲೆ ಮೂಲೆಗಳಲ್ಲಿ ನಮ್ಮ ಸಮಾಜವು ನೆಲೆಯೂರಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುನ್ನೆಲೆಗೆ ಕರೆತರುವ ನಿಟ್ಟಿನಲ್ಲಿ ಎಲ್ಲಾ ಉಪಪಂಗಡಗಳು ಒಂದಾಗುವು ದು ಮುಖ್ಯವಾಗಿದ್ದು ಬಸವಣ್ಣನವರ ಆದರ್ಶದಲ್ಲಿ ಸಾಗುತ್ತಿರುವ ಜನಾಂಗವು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.

    ಸರ್ಕಾರದ ಅನುದಾನ, ಸಮಾಜದ ಮುಖಂಡರು ಹಾಗೂ ದಾನಿಗಳ ಸಹಕಾರದಿಂದ ಬೃಹತ್ ಮಟ್ಟ ದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಅಂತಿಮವಾಗಿ ಪೂರ್ಣಗೊಳ್ಳುತ್ತಿರುವುದು ಸ್ವಾಗತಾ ರ್ಹ ಹೀಗಾಗಿ ಸಮಾಜದ ಮಗಳಾಗಿ ತಾವು ಸಮುದಾಯ ಭವನಕ್ಕೆ ೧೦ ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

    ವೀರಶೈವ-ಲಿಂಗಾಯಿತ ಸಮಾಜವನ್ನು ಕಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ಯಾಮನೂರು ಶಿವಶಂಕರಪ್ಪ, ಈಶ್ವ ರ್‌ಖಂಡ್ರ ಮಾರ್ಗದರ್ಶನದಲ್ಲಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಪಕ್ಷಾತೀತವಾಗಿ ಸಮಾಜ ದ ಪರವಾಗಿ ಮನೆಮಗಳಂತೆ ಕೆಲಸ ಮಾಡಲು ಸಿದ್ದವಾಗಿದ್ದೇನೆ ಎಂದರು.

    ಹನ್ನೇರಡನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಮೊಟ್ಟಮೊದಲು ಮಹಿಳೆ ಯರನ್ನು ಮುಖ್ಯವಾಹಿನಿಗೆ ಕರೆತಂದರು. ಧಯವೇ ಧರ್ಮದ ಮೂಲವಯ್ಯ ಎಂಬ ಸಂದೇಶವನ್ನು ನೀಡಿ ರುವ ಬಸವೇಶ್ವರರ ಜೀವನದ ಸಾರಾಂಶ, ಸತ್ಯವನ್ನು ನಾಗರೀಕರು ಮೈಗೂಡಿಸಿಕೊಳ್ಳಬೇಕು ಎಂದರು.

    ನಿಸರ್ಗದ ಸೊಬಗು, ಸಂಸ್ಕೃತಿ, ಧಾರ್ಮಿಕತೆಯ ಪ್ರತೀಕದಿಂದ ಕೂಡಿರುವ ಜಿಲ್ಲೆ ಶ್ರೀಮಂತಿಕೆಯನ್ನು ಹೊಂದಿದೆ. ಇಲ್ಲಿನ ನಿವಾಸಿಗಳು ಸುಸಂಸ್ಕೃತ ಹಾಗೂ ಹೃದಯವಂತರು. ಜಿಲ್ಲೆಗಾಗಮಿಸಿದ ತಮಗೆ ತವರಿನ ಮನೆಯಂತೆ ಅದ್ದೂರಿ ಸ್ವಾಗತ ನೀಡಿರುವುದು ಹೆಮ್ಮೆಯಿದೆ ಎಂದರು.

    ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ರಾಜ್ಯದಲ್ಲಿ ಬದುಕು ರೂಪಿಸಿಕೊಂಡಿರುವ ಸಮಾಜದ ಒಳ ಪಂಗಡಗಳ ನಿವಾಸಿಗಳು ಶೈಕ್ಷಣಿವಾಗಿ ಒಗ್ಗಟ್ಟಾಗಲು ಒಳಪಂಗಡ ಮರೆತು ವೀರಶೈವ-ಲಿಂಗಾಯಿತರೆಂದು ಒಂದಾಗಬೇಕು. ಜೊತೆಗೆ ಸಮುದಾಯದ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.

    ನೂತನ ಸಮುದಾಯ ಭವನಕ್ಕೆ ಪಕ್ಷಾತೀತವಾಗಿ ಎಲ್ಲರೂ ಆರ್ಥಿಕವಾಗಿ ಕೈಜೋಡಿಸಿದ್ದಾರೆ. ಇನ್ನೂ ಕೆಲವು ಕೆಲಸಗಳು ಬಾಕಿಯಿರುವ ಕಾರಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳೊಂದಿಗೆ ನಿಯೋಗ ತೆರಳಿ ಉಳಿದ ಕೆಲಸಕ್ಕೆ ಅನುದಾನ ಬಿಡುಗಡೆಗೊಳಿಸಿ ಭವನವನ್ನು ಲೋಕಾರ್ಪಣೆಗೊಳಿಸಲಾಗು ವುದು ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ ಸಮಾ ಜದ ಏಳಿಗೆಗೆ ಭವನ ನಿರ್ಮಿಸುವ ಉದ್ದೇಶದಿಂದ ಬಸವೇಗೌಡ ಕುಟುಂಬದವರ ಸಹಕಾರದಿಂದ ಪ್ರಾರಂಭಿ ಸಿದ ಸಮುದಾಯ ಭವನವು ೯ ಎಕರೆ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ನಿರ್ಮಾಣವಾಗುತ್ತಿದ್ದು ಜೊತೆಗೆ ಶಾಸಕರು ಸಮಾಜದ ಬಗ್ಗೆ ಕಾಳಜಿ ವಹಿಸಿ ಎರಡು ಕೋಟಿ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷ ಬಿ.ಎ.ಶಿವಶಂಕರ್ ವಹಿ ಸಿದ್ದರು. ನೈಸರ್ಗಿಕ ಕೃಷಿಕ ಚಂದ್ರಶೇಖರ ನಾರಣಾಪುರ ಶ್ರೀ ರೇಣುಕಾಚಾರ್ಯ ಮತ್ತು ಬಸವೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿದರು.

    ಈ ಸಂದರ್ಭದಲ್ಲಿ ಅ.ಭಾ.ವಿ.ಲಿಂ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ್, ಕಾಫಿ ಬೆಳೆಗಾರ ಎ.ಬಿ.ಸುದರ್ಶನ್, ಸಮಾಜದ ಉಪಾಧ್ಯಕ್ಷರಾದ ಹೆಚ್.ಎನ್.ನಂಜೇಗೌಡ, ಹೆಚ್.ಎಂ.ರೇಣುಕಾರಾಧ್ಯ, ಎಂ. ಎಸ್.ನಿರಂಜನ್, ಕಾರ್ಯದರ್ಶಿಗಳಾದ ಸಿ.ಬಿ.ನಂದೀಶ್, ಡಿ.ಎಸ್.ಮಮತ, ಖಜಾಂಚಿ ಎಸ್.ದೇವರಾಜ್, ಮುಖಂಡರುಗಳಾದ ಕೆ.ಸಿ.ನಿಶಾಂತ್, ದಿವಾಕರ್, ಬಸವರಾಜು, ಜಗದೀಶ್, ಜಿ.ಕೆ.ನಂಜೇಶ್ ಮತ್ತಿತರರು ಉಪಸ್ಥಿತರಿದ್ದರು.

    Sub-sects unite Veerashaiva-Lingayat