Category: ಜಿಲ್ಲಾ ಸುದ್ದಿ

  • ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಒಟ್ಟು 9,137 ವಿದ್ಯಾರ್ಥಿಗಳು

    ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಒಟ್ಟು 9,137 ವಿದ್ಯಾರ್ಥಿಗಳು

    ಚಿಕ್ಕಮಗಳೂರು: ಜಿಲ್ಲೆಯ 19 ಪರೀಕ್ಷಾ ಕೇಂದ್ರಗಳಲ್ಲಿ ಮಾ. 1ರಿಂದ 20ರವರೆಗೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೆಲಸಕ್ಕೆ ಹಾಜರಾಗುವ ಅಧಿಕಾರಿಗಳು ಕಟ್ಟುನಿಟ್ಟಿನಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಸೂಚಿಸಿದರು.

    ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ದತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ಒಟ್ಟು 9,137 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

    ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಯಾವುದೇ ಲೋಪದೋಷ ಸಂಭವಿಸದಂತೆ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆ ರೂಪಿಸಿರುವ ಪರೀಕ್ಷಾ ಮಾರ್ಗದರ್ಶಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪರೀಕ್ಷಾ ಕಾರ್ಯನಿರ್ವಹಿಸುವಲ್ಲಿ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯ ಬೇಡ. ಪರೀಕ್ಷೆಗಳು ಸುಸೂತ್ರವಾಗಿ ನಡೆಯಬೇಕು. ನಿಯಮಗಳು ಸರಿಯಾದ ರೀತಿಯಲ್ಲಿ ಪಾಲನೆ ಮಾಡದಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

    ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಆಯಾ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರದಲ್ಲಿ ಫೋನ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಕೊಂಡೊಯ್ಯಲು ಅವಕಾಶವಿಲ್ಲ ಎಂದರು.

    ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಮೇಲ್ವಿಚಾರಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಹ ಮೊಬೈಲ್ ಫೋನ್ ಬಳಸುವಂತಿಲ್ಲ. ಪರೀಕ್ಷಾ ಕೇಂದ್ರದ ಒಳಗೆ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ. ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

    ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಕೊಂಡೊಯ್ಯಲು ತಹಶೀಲ್ದಾರ್, ಬಿಇಒ ಹಾಗೂ ಪ್ರಾಂಶುಪಾಲರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಪರೀಕ್ಷಾ ಕೇಂದ್ರದ ಸಂಕೇತಗಳನ್ನು ಸರಿಯಾಗಿ ಪರಿಶೀಲಿಸಿ ಜಿಪಿಎಸ್ ಆಳವಡಿಸಿದ ವಾಹನದಲ್ಲಿ ನಿಗದಿತ ಮಾರ್ಗ ಹಾಗೂ ಸಮಯಾನುಸಾರ ಪೊಲೀಸ್ ರಕ್ಷಣೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ತಲುಪಿಸಬೇಕು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಸಿಸಿಟಿವಿ ಕ್ಯಾಮೆರೆ ಕಣ್ಗಾವಲಿನಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಪಡೆದು ಸರಿಯಾದ ಸಮಯಕ್ಕೆ ಪರೀಕ್ಷಾ ಮೇಲ್ವಿಚಾರಕರಿಗೆ ತಲುಪಿಸಬೇಕು ಎಂದು ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಂಕರ್ ಕೊರವರ, ಜಿಲ್ಲಾ ಖಜಾನಾಧಿಕಾರಿ ಓಂಕಾರಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟನಾಯ್ಕ, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ಬಿಇಒಗಳು ಹಾಗೂ ಉಪನ್ಯಾಸಕರು ಹಾಜರಿದ್ದರು.

    A total of 9137 students appeared for the second PUC annual examination in the district.

  • ಜನಸ್ನೇಹಿ ಆಡಳಿತದ ಪ್ರತೀಕವೆ ಜನ ಸಂಪರ್ಕ ಸಭೆ

    ಜನಸ್ನೇಹಿ ಆಡಳಿತದ ಪ್ರತೀಕವೆ ಜನ ಸಂಪರ್ಕ ಸಭೆ

    ಚಿಕ್ಕಮಗಳೂರು: ರೈತರು, ಕೂಲಿ ಕಾರ್ಮಿಕರು, ಅನಕ್ಷರಸ್ಥರು ಮತ್ತು ವಿವಿಧ ವರ್ಗದ ಜನರ ಸಮಸ್ಯೆಗಳನ್ನು ಗ್ರಾಮ ಮಟ್ಟದಲ್ಲೇ ಪರಿಹರಿಸಿ ಜನಸ್ನೇಹಿ ಆಡಳಿತ ನೀಡುವುದೇ ಜನ ಸಂಪರ್ಕ ಸಭೆಯ ಮುಖ್ಯ ಉದ್ದೇಶ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.

    ಜಿಲ್ಲಾ ಪಂಚಾಯಿತಿ ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ ಕಡೂರು ಹಾಗೂ ಹುಲಿಕೆರೆ, ಪಿಳ್ಳೇನಹಳ್ಳಿ, ಮತ್ತು ಎಸ್ ಬಿದರೆ ಗ್ರಾಮ ಪಂಚಾಯಿತಿ ವತಿಯಿಂದ ಹುಲಿಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಗೆಹರಿಸಬಹುದಾದ ಸಾರ್ವಜನಿಕರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳೆ ಸ್ವತಹ ಜನ ಸಾಮಾನ್ಯರ ಮನೆ ಅಂಗಳಗಳಲ್ಲಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಜನ ಸಂಪರ್ಕ ಸಭೆ ಕಾರ್ಯಕ್ರಮ ಉತ್ತಮ ವೇಧಿಕೆಯಾಗಿದೆ ಎಂದರು

    ಜನ ಸಂಪರ್ಕ ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದು ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರು ಅವುಗಳನ್ನು ಬಿತ್ತರಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಗೆಹರಿಯಬಹುದಾದ ಎಲ್ಲಾ ಸಮಸ್ಯೆಗಳಿಗೆ ಸ್ಥಳದಲ್ಲೆ ಸೂಕ್ತ ಪರಿಹಾರ ನೀಡಿ ಬಗೆಹರಿಸಲಾಗುವುದು. ಅಧಿಕಾರಿಗಳು ಒಮ್ಮೆ ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ತಂದರೆ ಶೀಘ್ರವಾಗಿ ಪರಿಹಾರ ಕ್ರಮ ಕೈಗೊಂಡು ಸಮಸ್ಯೆಗಳ ಅಹವಾಲುಗಳು ಪುನರಾವರ್ತನೆ ಆಗದಂತೆ ಕ್ರಮ ವಹಿಸಬೇಕು ಎಂದರು.

    ಪಿಳ್ಳೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ೧ ಕೋಟಿ ೨೩ ಲಕ್ಷ, ಎಸ್ ಬಿದರೆ ಗ್ರಾಮ ಪಂಚಾಯಿತಿಗೆ ೭೩ ಲಕ್ಷ ಹಾಗೂ ಹುಲಿಕೆರೆ ಗ್ರಾಮ ಪಂಚಾಯಿತಿಗೆ ೧ ಕೋಟಿ ೮೦ ಲಕ್ಷ ಅನುದಾನವನ್ನು ನೀಡಿ ರಸ್ತೆ, ದೇವಾಲಯ, ಸಮುದಾಯ ಭವನ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಹಾಗೂ ಎಲ್ಲಾ ಕಾಮಗಾರಿಗಳನ್ನು ಗುಣ ಮಟ್ಟದ ಕಾಮಗಾರಿ ನಿರ್ವಹಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಮುಖ್ಯಮಂತ್ರಿಗಳು ಜಿಲ್ಲೆಯ ಗ್ರಾಮಾಂತರ ಭಾಗಗಳಿಗೆ ೧೦ ಕೋಟಿ ವಿಶೇಷ ಅನುದಾನವನ್ನು ನೀಡುತ್ತಿದ್ದಾರೆ ಅದರ ಕ್ರಿಯಾ ಯೋಜನೆಯು ನಿರ್ವಹಿಸಲಾಗುತ್ತಿದೆ ಎಂದ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ವಿಳಂಬವಾಗಿಲ್ಲ ಎಂದು ಹೇಳಿದರು.

    ವಿದ್ಯುತ್ ನಿಲುಗಡೆಯಿಂದ ಗ್ರಾಮಸ್ಥರಿಗೆ ಬಹಳ ಸಮಸ್ಯೆ ಆಗುತ್ತಿದೆ ಸರ್ಕಾರ ಏಳು ಗಂಟೆ ವಿದ್ಯುತ್ ನೀಡಬೇಕು. ನಮ್ಮ ಗ್ರಾಮಕ್ಕೆ ಕೇವಲ ಎರಡು ಗಂಟೆ ಮಾತ್ರ ನೀಡುತ್ತಾರೆ ಮೆಸ್ಕಾಂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಸರ್ಕಾರಿ ಶಾಲೆಗಳ ಶಿಕ್ಷಕರು ಸರಿಯಾದ ಸಮಯಕ್ಕೆ ಆಗಮಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

    ಜಲ್ ಜೀವನ ಮಿ?ನ್ ಯೋಜನೆಯಡಿ ನೀರು ಸರಿಯಾಗಿ ಬರುತ್ತಿಲ್ಲ. ರಸ್ತೆಗಳೆಲ್ಲ ಸಂಪೂರ್ಣ ಹದಗೆಟ್ಟಿವೆ ತಕ್ಷಣವೇ ದುರಸ್ಥಿ ಪಡಿಸಬೇಕು. ೪೮ ಕೋಟಿ ರೂ ಅನುದಾನ ಬಿಡುಗಡೆ ಮಾಡಿ ಸಮಯ ಮುಗಿದಿದ್ದರೂ ಕೆಲಸ ಪ್ರಾರಂಭಿಸಿಲ್ಲ ಎ? ದೊಡ್ಡ ಗುತ್ತಿಗೆದಾರರಾಗಿದ್ದರು ಸಹ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವಾರದ ಒಳಗಾಗಿ ಕೆಲಸ ಪ್ರಾರಂಭಿಸದಿದ್ದರೆ ಅವರ ಟೆಂಡರ್ ರದ್ದುಗೊಳಿಸಿ, ಹೊಸ ಟೆಂಡರ್ ಕರೆದು ತಕ್ಷಣ ಕೆಲಸ ಪ್ರಾರಂಭಿಸಬೇಕು. ಮನೆಯಲ್ಲಿಯೇ ಅಕ್ರಮ ಮಧ್ಯವನ್ನು ವ್ಯಾಪಾರ ಮಾಡುತ್ತಿದ್ದಾರೆ ಇದನ್ನು ನಿಲ್ಲಿಸಬೇಕು ಎಂದು ಆರೋಪಿಸಿದರು.

    ಗ್ರಾಮೀಣ ಭಾಗದ ಮಹಿಳೆಯರಿಗೆ ಗೃಹ ಲಕ್ಷ್ಮಿ ಹಣ ಸರಿಯಾಗಿ ಬರುತ್ತಿಲ್ಲ ಅಕ್ಕಿಯ ಹಣ ಸಹ ಮೂರು ನಾಲ್ಕು ತಿಂಗಳಿಂದ ಬಂದಿಲ್ಲ ತಕ್ಷಣವೇ ಹಣ ನೀಡಬೇಕೆಂದು ಮನವಿ ಮಾಡಿದರು

    ಕಡೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್ ಪ್ರಾಸ್ಥಾವಿಕವಾಗಿ ಮಾತನಾಡಿ ಆಡಳಿತ ವ್ಯವಸ್ತೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವಂತ ಕಾರ್ಯಕ್ರಮ ಜನ ಸಂಪರ್ಕ ಸಭೆ. ಕ್ಷೇತ್ರದಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಶಾಸಕರು ಹೆಚ್ಚಿನ ಕ್ರಮ ವಹಿಸುತಿದ್ದಾರೆ. ಈ ಸಭೆಯಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು ಈ ಸಭೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ತಿತರಿದ್ದು ಯಾವುದೇ ಯೋಜನೆಗೆ ಸಂಬಂಧಿಸಿದ ಅಹವಾಲು, ಕುಂದು ಕೊರತೆಗಳು ಇದಲ್ಲಿ ಅವುಗಳನ್ನು ಬಿತ್ತಿರಿ ಪರಿಹರಿಸಿಕೊಳ್ಳಿ ಎಂದರು.

    ಕಾರ್ಯಕ್ರಮದಲ್ಲಿ ಹುಲಿಕೆರೆ ಗ್ರಾ.ಪಂ ಅಧ್ಯಕ್ಷೆ ರತ್ನಮ್ಮ, ಪಿಳ್ಳೇನಹಳ್ಳಿ ಗ್ರಾ.ಪಂ ಅಧ್ಯಕ್ಷ ಮಹೇಂದ್ರ ಆಚಾರ್, ಎಸ್.ಬಿದರೆ ಗ್ರಾ.ಪಂ ಅಧ್ಯಕ್ಷ ಸತೀಶ್, ಕಡೂರು ತಾಲ್ಲೂಕು ತಹಶೀಲ್ದಾರ್ ಮಂಜುನಾಥ್, ಕಡೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಮೂರು ಗ್ರಾಮ ಪಂಚಾಯಿತಿಗಳ ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

    Public relations meeting organized in Hulikere village

  • ಕೇಂದ್ರದ ಬಜೆಟ್ ಅಭಿವೃದ್ಧಿ ಪಥದಲ್ಲಿನ ಮೈಲಿಗಲ್ಲು

    ಕೇಂದ್ರದ ಬಜೆಟ್ ಅಭಿವೃದ್ಧಿ ಪಥದಲ್ಲಿನ ಮೈಲಿಗಲ್ಲು

    ಚಿಕ್ಕಮಗಳೂರು: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕೇಂದ್ರ ಬಜೆಟ್  ಸರ್ವಜನ ಸ್ನೇಹಿ ಹಾಗೂ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಪಥದಲ್ಲಿನ ಮೈಲಿಗಲ್ಲಾಗಿದೆ ಎಂದು ಆರ್ಥಿಕ ತಜ್ಞ ವಿಶ್ವನಾಥ್ ಭಟ್ ಹೇಳಿದರು.

    ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕೇಂದ್ರ ಬಜೆಟ್ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮತನಾಡಿದ ಅವರು ನಂರೇದ್ರ ಮೋದಿಯವರು ಬಜೆಟ್ ಮಂಡನೆಯಾದ ನಂತರದಲ್ಲೆ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲು ಬಜೆಟ್ ಕುರಿತು ಉದ್ಯಮದಾರರು, ಚಾರ್ಟೆಡ್ ಅಕೌಂಟ್, ಇಂಜಿನಿಯರ್‌ಗಳು, ಸಮಾಜ ಚಿಂತಕರನ್ನು ಒಳಗೊಂಡಂತೆ ವಿವಿಧ ಜನ ಸಾಮಾನ್ಯರೊಂದಿಗೆ ಹಿಂದಿನ  ಬಜೆಟ್ ಹಾಗೂ ಮುಂದೆ ಕೈಗೊಳ್ಳಬಹುದಾದ ಕ್ರಮಗಳು, ತೆರಿಗೆ, ಹೂಡಿಕೆ ಸೇರಿದಂತೆ ಹಲವಾರು ವಿಷಯಗಳನ್ನು ಸಂವಾದ ನಡೆಸುವ ಮಹತ್ವದ ಉದ್ದೇಶವನ್ನು ಹೊಂದಿದ್ದಾರೆ. ಆದರೆ ೫೭ ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈ ಉತ್ತಮ ಕಾರ್ಯವನ್ನು ನಿರ್ವಹಿಸುವ ಯೋಚನೆ ಕೂಡ ಬಂದಿಲ್ಲ. ಸರ್ಕಾರದ ಕರ್ತವ್ಯವನ್ನೇ ಮರೆತಿದ್ದರೂ ಅಥವಾ ಅವರ ಬಜೆಟ್ ಮಂಡನೆ ವಿಷಯದಲ್ಲಿ ಅವರಿಗೆ ಸ್ವತಹ ವಿಶ್ವಾಸವಿಲ್ಲದಿರುವುದನ್ನು ಸೂಚಿಸುತ್ತದೆ ಎಂದರು.

    ರಷ್ಯಾ ಮತ್ತು ಉಕ್ರೇನ್, ಇಸ್ರೇಲ್ ಮತ್ತು ಹಾಮಾಸ ನಡುವಿನ ಭೌಗೋಳಿಕ ರಾಜಕೀಯ ಸಂಘರ್ಷ ಜಗತ್ತಿನಾದ್ಯಂತ ಅಂತರಾಷ್ಟ್ರೀಯ ವ್ಯಾಪರ ವಹಿವಾಟು ತೀವ್ರವಾಗಿ ಕುಸಿದು ಆಹಾರ ಪಾದಾರ್ಥಗಳು ಸೇರಿದಂತೆ ವಿವಿಧ ವಸ್ತುಗಳ ಬೆಲೆ ಗಗನಕ್ಕೇರಿ ಅನೇಕ ರಾಷ್ಟ್ರಗಳು ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸಮಾಜದಲ್ಲಿ ತಪ್ಪು ಮಾಹಿತಿಯನ್ನು ಅರಿಬಿಡುವ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.

    ದೇಶದ ಬಹುತೇಕ ರಾಜ್ಯಗಳು ಸಬ್ಸಿಡಿ ಹಣವನ್ನು ವಿಪರೀತವಾಗಿ ನೀಡಿ ಮೂಲ ಸೌಕರ್ಯಗಳ ಹೂಡಿಕೆಗೆ ಹಣವಿಲ್ಲದಂತಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಗ್ರಾಮೀಣಾ ಹಾಗೂ ನಗರ ಪ್ರದೇಶಗಳಲ್ಲಿ ಬಹು ಆಯಾಮದ ಬಡತನ ರೇಖೆಯೂ ಶೇಕಡಾ ೫ ಕ್ಕಿಂತ ಕಡಿಮೆಯಾಗಿದೆ ಎಂದು ತಿಳಿಸಿದೆ.

    ದೇಶದಲ್ಲಿ ಖಾಸಗಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ೨೦೦೪ ರಿಂದ ೨೦೧೪ರ ವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಐ ಸರ್ಕಾರದಲ್ಲಿ ೨ ಕೋಟಿ ೯೦ ಲಕ್ಷ ಉದ್ಯೋಗ ಸೃಷ್ಠಿಯಾಗಿತ್ತು ಆದರೆ ೨೦೧೪ ರಿಂದ ೨೦೨೪ ರವರೆಗೆ ೧೭.೯ ಕೋಟಿ ಹೊಸ ಉದ್ಯೋಗಗಳು ನಿರ್ಮಾಣವಾಗಿದೆ ಹಾಗೂ  ನರೆಂದ್ರ ಮೋದಿಯವರಿಗೆ ಅಧಿಕಾರವನ್ನು ಹಸ್ತಾಂತರ ಮಾಡುವಾಗ ಸಾಲದ ಶೇಕಡ ೧೪.೫೮ ರಷ್ಠಿದ್ದ ೨೦೨೪ ರಲ್ಲಿ  ಅಂತ್ಯಗೊಂಡ ತ್ರೈ ಮಾಸಿಕದಲ್ಲಿ ಭಾರತದ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಮಗ್ರ ಕೆಟ್ಟ ಸಾಲವು(ಜಿಎಂಪಿ) ಯು ೩.೧೨ ಕ್ಕೆ ಇಳಿದು ಬ್ಯಾಂಕ್‌ಗಳು ಲಾಭದಾಯಕವಾಗಿವೆ ಈ ರೀತಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿಯನ್ನು ಏರಿಕೆ ಧರದಲ್ಲಿ ಕೊಂಡೊಯ್ಯುತ್ತಿದೆ ಎಂದರು.

    ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ೩ನೇ ಅವಧಿಯ ೨ನೇ ಬಜೆಟ್‌ನಲ್ಲಿ ನಿರುದ್ಯೋಗ ಸಮಸ್ಯೆಯನ್ನು ಕೇಂದ್ರವಾಗಿರಿಸಿಕೊಂಡು ಉತ್ಪಾದನಾ ವಲಯದಲ್ಲಿ ಕ್ರಾಂತಿಯನ್ನು ತರಿಸಿ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವುದರ ಜೊತೆಗೆ ದೇಶದಲ್ಲಿ ಅಭಿವೃದ್ಧಿಯ ಪರ್ವವನ್ನು ಪ್ರಾರಂಭಿಸುವ ಯೋಜನೆ ಇದಾಗಿದೆ ಎಂದರು ಅವರು ಕೇಂದ್ರದ ಬಜೆಟ್ ಸರ್ವ ವ್ಯಾಪಿಯಾಗಿದೆ ಎಂದರು

    ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿನ ರಾಷ್ಟ್ರೀಯ ಸಮಸ್ಯೆಗಳ ಜೊತೆಗೆ ಹಸಿವು, ಬಡತನ, ನಿರುದ್ಯೋಗ ಸಮಸ್ಯೆಗಳಂತ ಹಲವಾರು ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಈ ಬಾರಿಯ ಬಜೆಟ್‌ನಲ್ಲು ನಿರುದ್ಯೋಗ ಸಮಸ್ಯೆಯನ್ನು ಬುಡದಿಂದ ಕಿತ್ತೊಗೆದು ಅಭಿವೃದ್ಧಿ ಹೋಂದಿದ ಭಾರತವನ್ನು ನಿರ್ಮಿಸಲು ಶ್ರಮವಹಿಸುತಿದ್ದಾರೆ. ಹೂಡಿಕೆ, ಮಹಿಳಾ ಸಬಲೀಕರಣ, ಮಧ್ಯಮ ವರ್ಗದವರ ಆರ್ಥಿಕ ಸುಧಾರಿಕೆ ಒಳಗೊಂಡಂತೆ ಸಾಮಾಜದ ಎಲ್ಲಾ ವರ್ಗದ ಜನರಿಗೆ ಬಜೆಟ್ ಸ್ನೇಹ ಮಾಯವಾಗಿದೆ ಎಂದ ಅವರು ವಿರೋಧಿಸುವವರ ಮಾತಿಗೆ ತಲೆದೂರದೇ ಬಜೆಟ್‌ನ ಹಿಂದಿನ ಉದ್ದೇಶವನ್ನು ಅರಿತು ಸಾರ ಸತ್ಯತೆಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ಜವಬ್ದಾರಿ ನಮ್ಮದು ಎಂದರು

    ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಡಾ. ನರೇಂದ್ರ, ಕಲ್ಮರುಡಪ್ಪ, ಬಸವರಾಜ್, ಸೇರಿದಂತೆ ಉದ್ಯಮಿಗಳು, ವಿವಿಧ ಸಂಘದ ಪದಾಧಿಕಾರಿಗಳು, ವೈದ್ಯರು, ಕಾಲಜು ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

    Union Budget Dialogue Program organized at BJP office

  • ನಕ್ಷಾ ಯೋಜನೆ ಮೂಲಕ ನಗರ ಸರ್ವೆಕಾರ್ಯ ಸರಳ

    ನಕ್ಷಾ ಯೋಜನೆ ಮೂಲಕ ನಗರ ಸರ್ವೆಕಾರ್ಯ ಸರಳ

    ಚಿಕ್ಕಮಗಳೂರು:  ಡಿಜಿಟಲೀಕೃತ ಭೂ ನಕ್ಷೆಯಿಂದ ಭೂ ಅಕ್ರಮವನ್ನು ತಡೆಗಟ್ಟುವುದರ ಜೊತೆಗೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಸರ್ವೆ ನಡೆಸಿ ಸ್ಪ?ವಾದ ಮಾಲೀಕತ್ವದ ಮಾಹಿತಿ ಪಡೆಯಲು ಸಹಕಾರಿಯಾಗುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

    ಕಂದಾಯ ಇಲಾಖೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ವತಿಯಿಂದ ಇಂದು ನಗರ ಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ನಗರ ಪ್ರದೇಶಗಳಲ್ಲಿ ಆಸ್ತಿಗಳ ಭೂ ದಾಖಲೆಗಳ ರಚನೆ ನಕ್ಷಾ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಜನೆ ಅಡಿಯಲ್ಲಿ ಪ್ರಾಯೋಗಿಕವಾಗಿ ರಾಜ್ಯದ ೧೦ ನಗರ, ಪಟ್ಟಣಗಳನ್ನು ಆಯ್ಕೆಮಾಡಲಾಗಿದೆ. ಇದರಲ್ಲಿ ಜಿಲ್ಲೆಯ ನಗರ ಸಭೆಯನ್ನು ಆಯ್ಕೆ ಮಾಡಲಾಗಿದ್ದು ಯೋಜನೆಯೂ ನಗರ ಸಭೆ ವ್ಯಾಪ್ತಿಯ ಎಲ್ಲಾ ಸ್ಥಳಿಯ ಸಂಸ್ಥೆಗಳ ಸರಳ ಸರ್ವೆ ಕಾರ್ಯಗಳ ಜೊತೆಗೆ ನಾಗರೀಕರು ಸಾಲ ಮತ್ತು ಇತರ ಪ್ರಯೋಜನಗಳನ್ನು ಬ್ಯಾಂಕ್ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳಿಂದ ಪಡೆಯುವ ಸುಲಭ ಪ್ರಕ್ರಿಯೆಗೆ ಸಹಕಾರಿಯಾಗಲಿದೆ ಎಂದರು.

    ನಕ್ಷಾ ಯೋಜನೆಯನ್ನು ಭಾರತ ಸರ್ಕಾರದ ಭೂಸಂಪನ್ಮೂಲ ಇಲಾಖೆಯು ಆರಂಭಿಸಿದ್ದು, ಕೇಂದ್ರ ಬಜೆಟ್‌ನಲ್ಲಿ ನಗರ ಪ್ರದೇಶಗಳಲ್ಲಿ ಭೂ-ಸಂಬಂಧಿತ ಸುಧಾರಣೆಗಳು ಮತ್ತು ಕ್ರಮಗಳನ್ನು ಸೂಕ್ತ ಹಣಕಾಸಿನ ಬೆಂಬಲದ ಮೂಲಕ ಮುಂದಿನ ೩ ವ?ಗಳಲ್ಲಿ ಪೂರ್ಣಗೊಳಿಸಲು ಪ್ರೋತ್ಸಾಹಿಸಲಾಗುವುದು. ಪ್ರಾಯೋಗಿಕವಾಗಿ ದೇಶದ ೧೫೨ ನಗರ/ಪಟ್ಟಣ ಗಳಲ್ಲಿ ಈ ಯೋಜನೆ ಅನು?ನಗೊಳಿಸಲು ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮಾಡ್ರನೈಸೇ?ನ್ ಪ್ರೋಗ್ರಾಮ್ ಅಡಿಯಲ್ಲಿ ಯೋಜನೆಯನ್ನು ಅನು?ನಗೊಳಿಸಲು ಆಯ್ಕೆಮಾಡಲಾಗಿದೆ ಎಂದ ಅವರು ಯೋಜನೆ ಮೂಲಕ ನಾಗರೀಕರು ಕೆರೆ ಪ್ರದೇಶ, ಸರ್ಕಾರಿ ಆಸ್ತಿ, ಅಥವಾ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಆಸ್ತಿಗಳನ್ನು ಸೃಜಿಸಿ ಮಾರಾಟ ಮಾಡುವ ಪ್ರಕ್ರಿಯೆಯಂತಹ ಅಕ್ರಮಗಳಿಗೆ ಒಳಗಾಗುವುದು ತಪ್ಪುತ್ತದೆ ಎಂದು ಹೇಳಿದರು.

    ಶಾಸಕ ಹೆಚ್.ಡಿ ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ನಕ್ಷಾ ಯೋಜನೆಯನ್ನು ನಗರ ಸ್ಥಳೀಯ ಸಂಸ್ಥೆಗಳ ಭೂ ಸಮೀಕ್ಷೆ ಸರಳೀಕರಣದ ಉದ್ದೇಶದಿಂದ ಜಾರಿ ಮಾಡಲಾಗಿದೆ. ಇದರಿಂದ ಆಸ್ತಿಗಳ ವಿಭಜನೆ, ಅನುವಂಶಿಕ ಬದಲಾವಣೆ, ಉತ್ತರಾಧಿತ್ವ ಪ್ರಕ್ರಿಯೆಗಳು ಸುಲಭವಾಗುತ್ತದೆ. ಕಾರ್ಡ್ ಮೂಲಕ ಲಭ್ಯವಾಗುವ ಗಣಕೀಕೃತ ಭೌಗೋಳಿಕ ಉಲ್ಲೇಖಿತ ನಕ್ಷೆಗಳು ನಾಗರೀಕರಿಗೆ ತಮ್ಮ ಆಸ್ತಿಗಳ ವಿಭಜನೆ ಪ್ರಕ್ರಿಯೆಯನ್ನು ಸ್ವಯಂ ನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ನಾಗರೀಕರಿಗೆ ಮೊದಲ ಬಾರಿಗೆ ತನ್ನ ಆಸ್ತಿಯ ಮಾಲೀಕತ್ವ ಪ್ರಮಾಣಪತ್ರವನ್ನು ಸರ್ಕಾರದಿಂದ ನೀಡಲಾಗುತ್ತದೆ, ಇದು ಪ್ರತಿ ಆಸ್ತಿಯ ಪಾರದರ್ಶಕ ಮತ್ತು ಸ್ಪ?ವಾದ ಮಾಲೀಕತ್ವದ ಪ್ರಮಾಣಪತ್ರವಾಗಿದೆ. ಆಸ್ತಿಯ ನಕ್ಷೆ, ಮಾಲೀಕತ್ವದ ವಿವರಗಳು ಮತ್ತು ಅದರ ಹಕ್ಕುಗಳು ಮತ್ತು ಆಸ್ತಿಯ ಮೇಲಿನ ವಿವರಗಳನ್ನು ಕಾರ್ಡ್ ಒಳಗೊಂಡಿರುತ್ತದೆ. ಆದ್ದರಿಂದ ನಾಗರೀಕರು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿ ತಮ್ಮ ಆಸ್ತಿಯ ಗಡಿಗಳನ್ನು ಸ್ಥಳದಲ್ಲಿರುವಂತೆ ಗುರುತಿಸಿಕೊಳ್ಳಬಹುದಾಗಿದೆ ಎಂದ ಅವರು ನಗರ ಪ್ರದೇಶದಲ್ಲಿನ ಭೂ ವಿವಾಧಗಳ ಪರಿಹಾರಕ್ಕೆ ನಕ್ಷಾ ಯೋಜನೆಯೂ ಉತ್ತಮ ಮಾರ್ಗವಾಗಿದೆ ಎಂದು ಹೇಳಿದರು.

    ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿ ನಗರ ಪ್ರದೇಶದ.. ಪ್ರತಿಯೊಂದು ಆಸ್ತಿಯ ಹಕ್ಕು ಅಥವಾ ಮಾಲೀಕತ್ವದ ದಾಖಲೆಯನ್ನು ಕಾನೂನಿನ ಅಡಿಯಲ್ಲಿ ಆಸ್ತಿ ಮಾಲೀಕತ್ವದ ಪುರಾವೆ ಅಥವಾ ಮಾಲೀಕತ್ವದ ಪ್ರಮಾಣಪತ್ರವನ್ನು ಸಿದ್ಧಪಡಿಸುವುದೇ ರಾಷ್ಟ್ರೀಯ ಜಿಯೋಸೋಷಿಯಲ್ ಫಾನ ಆಧಾರಿತ ನಗರ ವಸತಿಗಳ ಭೂ ಸಮೀಕ್ಷೆ (ನಕ್ಷಾ) ಯೋಜನೆಯಾಗಿದೆ. ಈ ಯೋಜನೆಯನ್ನು ಭಾರತ ಸರ್ಕಾರದ ಭೂಸಂಪನ್ಮೂಲ ಇಲಾಖೆಯು ಆರಂಭಿಸಿದ್ದು, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ಮತ್ತು ಸರ್ವೆ ಆಫ್ ಇಂಡಿಯಾ ಇವರ ಸಹಭಾಗಿತ್ವದಿಂದ ಯೋಜನೆಯನ್ನು ಅನು?ನಗೊಳಿಸಲಾಗುತ್ತಿದೆ ಎಂದರು.

    ನಗರದಲ್ಲಿ ರಸ್ತೆ, ಒಳಚರಂಡಿ, ನೀರು ಪೂರೈಕೆ ಯೋಜನೆಗಳನ್ನು ರೂಪಿಸಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಯೋಜನೆಯು ಅತ್ಯಂತ ಸಹಾಯಕಾರಿಯಾಗಿದೆ. ಜಿಲ್ಲೆಯೂ ಭೌಗೋಳಿಕವಾಗಿ ಉತ್ತಮ ಪರಿಸರವನ್ನು ಹೊಂದಿದ್ದು ಯೋಜನೆ ಮೂಲಕ ಹಲವಾರು ಅಭಿವೃದ್ದಿ ಕಾರ್ಯಗಳನ್ನು ನಿರ್ವಹಿಸಿ ಅಭಿವೃದ್ಧಿ ಹೊಂದಿದ ನಗರ ನಿರ್ಮಾಣ ಮಾಡಬಹುದು. ಎಂದ ಅವರು ಯೋಜನೆಯಲ್ಲಿ ಡೋನ್ ಫೆಯಿಂಗ್ ನಿಂದ ಜೆಯೋ ರೆಫರೆನೈಡ್ ನಕ್ಷೆಯನ್ನು ತಯಾರಿಸಲಾಗುವುದು. ವಿಚಾರಣಾಧಿಕಾರಿಗಳು ನೀಡಿದ ದಾಖಲೆಗಳ ಮೇಲೆ ಕರಡು ಆಸ್ತಿ ಪತ್ರ ನೀಡಲಾಗುವುದು.  ತಕರಾರು ಸಲ್ಲಿಸಿದಲ್ಲಿ, ವಿಚಾರಣೆ ಮಾಡಿ ಅಂತಿಮ ಆಸ್ತಿ ಪತ್ರವನ್ನು ನೀಡಲಾಗುತ್ತದೆ. ಸಾರ್ವಜನಿಕರ ಸಹಕಾರವಿದ್ದಲ್ಲಿ ಸರ್ವೇ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಭೂ ಸಂಬಂಧ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ತಿಳಿಸಿದರು.

    ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ ನಗರ ಸಭೆ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ತಿಗಳು, ಖಾಲಿ ನಿವೇಶನಗಳು, ಸಾರ್ವಜನಿಕ ಆಸ್ತಿಗಳು, ನಗರ ಸಭೆ ಆಸ್ತಿಗಳು, ದೇವಸ್ಥಾನ, ಬಸ್ ನಿಲ್ದಾಣ, ರಸ್ತೆ, ಹಳ್ಳ, ಕೆರೆ, ಕಟ್ಟೆ, ಸ್ಮಶಾನ ಮತ್ತು ಇತರೆ ಸರ್ಕಾರಿ ಆಸ್ತಿಗಳನ್ನು ಒಳಗೊಂಡಂತೆ ನೀರಿನ ಪೈಪ್ ಲೈನ್, ವಿದ್ಯುತ್ ಲೈನ್, ಯು.ಜಿ.ಡಿ ಲೈನ್, ಟೆಲೆಪೋನ್ ಲೈನ್ ಮತ್ತು ಸ್ಥಳದಲ್ಲಿ ದೊರೆಯುವ ಇತರೆ ಆಸ್ತಿಗಳನ್ನು ಅಳತೆಗೆ ಒಳಪಡಿಸಿ ನಿಖರವದ ಸರ್ವೆಕಾರ್ಯ ನಡೆಸಲು ಸಹಕರಿಯಾಗಲಿದ್ದು ತೆರಿಗೆ ವಸೂಲಿಗೂ ಅನುಕೂಲವಾಗಲಿದೆ ಎಂದರು.

    ಕಾರ್ಯಕ್ರಮದಲ್ಲಿ ನಗರ ಸಭೆ ಆಯುಕ್ತ ಬಿ.ಸಿ ಬಸವರಾಜ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನ ನಿರ್ದೇಶಕಿ ನಾಗರತ್ನ, ಭೂ ದಾಖಲೆಗಳ ಉಪನಿರ್ದೇಶಕ ಲೋಹಿತ್.ಟಿ.ಕೆ. ಸಹಾಯಕ ನಿರ್ದೇಶಕ ರುದ್ರೇಶ್, ಸರ್ವೇ ಸೂಪರ್‌ವೈಸರ್ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.

    Inauguration of the mapping project for the creation of land records of properties in urban areas

  • ಮುಳ್ಳಯ್ಯನಗಿರಿ ಸಮೀಪದ ಅರಣ್ಯ ಪ್ರದೇಶದ ಬೆಟ್ಟದಲ್ಲಿ ಕಾಡ್ಗಿಚ್ಚು

    ಮುಳ್ಳಯ್ಯನಗಿರಿ ಸಮೀಪದ ಅರಣ್ಯ ಪ್ರದೇಶದ ಬೆಟ್ಟದಲ್ಲಿ ಕಾಡ್ಗಿಚ್ಚು

    ಚಿಕ್ಕಮಗಳೂರು: ತಾಲೂಕಿನ ಹೆಸರಾಂತ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ಸಮೀಪದ ಅರಣ್ಯ ಪ್ರದೇಶದ ಬೆಟ್ಟದಲ್ಲಿ ಕಾಡ್ಗಿಚ್ಚು ವ್ಯಾಪಿಸಿದ್ದು, ನೂರಾರು ಎಕರೆ ಅರಣ್ಯ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ.

    ಸೋಮವಾರ ಸಂಜೆ ವೇಳೆ ಕಿಡಿಗೇಡಿಗಳು ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತಗಳ ಸಾಲಿನ ಬೆಟ್ಟಕ್ಕೆ ಬೆಂಕಿ ಹಾಕಿದ್ದಾರೆಂದು ಹೇಳಲಾಗುತ್ತಿದ್ದು, ಕಿಡಿಗೇಡಿಗಳ ಕೃತ್ಯದಿಂದಾಗಿ ಮುಳ್ಳಯ್ಯನಗಿರಿ ಸಮೀಪದಲ್ಲಿ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದೆ.

    ಸುದ್ದಿ ತಿಳಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದು, ಗಿರಿ ಭಾಗದಲ್ಲಿ ಭಾರೀ ಗಾಳಿ ಇರುವ ಕಾರಣದಿಂದಾಗಿ ಬೆಂಕಿಯ ತೀವ್ರತೆ ಹೆಚ್ಚುತ್ತಿರುವುದರಿಂದ ಬೆಂಕಿನAದಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    ಮುಳ್ಳಯ್ಯನಗಿರಿ ಭಾಗದಲ್ಲಿ ಅಪರೂಪದ ಶೋಲಾ ಕಾಡುಗಳು, ವನ್ಯಜೀವಿಗಳು ಬೆಂಕಿಗೆ ಆಹುತಿಯಾಗುತ್ತಿದ್ದು, ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ರಾತ್ರಿಯೂ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳೀಯರು ಸಿಬ್ಬಂದಿಯೊAದಿಗೆ ಸೇರಿ ಬೆಂಕಿನಿಂದಿಸಲು ಶ್ರಮಿಸುತ್ತಿದ್ದಾರೆ.

    Forest fire in a forested hill near Mullayanagiri

  • ಮಳಲೂರು ಏತ ನೀರಾವರಿ ಯೋಜನೆಗೆ ಆಗ್ರಹಿಸಿ ರೈತಸಂಘ ಪ್ರತಿಭಟನೆ

    ಮಳಲೂರು ಏತ ನೀರಾವರಿ ಯೋಜನೆಗೆ ಆಗ್ರಹಿಸಿ ರೈತಸಂಘ ಪ್ರತಿಭಟನೆ

    ಚಿಕ್ಕಮಗಳೂರು: ಕಳೆದ ೨೫ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಳಲೂರು ಏತ ನೀರಾವರಿ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಿ ರೈತರ ಭೂಮಿಗೆ ನೀರು ಹರಿಸದಿದ್ದರೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಮನೆಯ ಮುಂದೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಚಳುವಳಿ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ನಿರ್ಧರಿಸಿದೆ.

    ಪತ್ರಿಕಾಗೋಷ್ಠಿಯಲ್ಲಿ ಸೊಮವಾರ ಈ ವಿಷಯ ತಿಳಿಸಿದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೈ.ಎಸ್ ಸುನೀಲ್ ಕುಮಾರ್ ಕಳೆದ ೨೫ ವರ್ಷಗಳಿಂದ ಮಳಲೂರು ಏತ ನೀರಾವರಿ ಯೋಜನೆ ಸ್ಥಗಿತಗೊಂಡಿದ್ದು, ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಕಾಮಗಾರಿಯನ್ನು ಪ್ರಾರಂಭಿಸಿ ರೈತರ ಜಮೀನಿಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.

    ಸದಾ ಕಾಲ ಬರಗಾಲಕ್ಕೆ ತುತ್ತಾಗುವ ಮಲೆನಾಡಿಗೆ ಹೊಂದಿಕೊಂಡಿರುವ ಗ್ರಾಮಗಳಾದ ಮಳಲೂರು,ಕಲ್ಲಹಳ್ಳಿ, ಸಿರಗಾಪುರ, ಕಂಬೀಹಳ್ಳಿ, ಬಿಗ್ಗನಹಳ್ಳಿ, ತಗಡೂರು, ಕದ್ರಿಮಿದ್ರಿ, ಬಿಕ್ಕೇಮನೆ ಈ ಗ್ರಾಮಗಳ ಸುಮಾರು ೧೬೦೦ ಎಕರೆ ಪ್ರದೇಶದ ರೈತರ ಜಮೀನುಗಳಿಗೆ ನೀರು ಒದಗಿಸುವ ಉದ್ದೇಶದಿಂದ ಹಿಂದೆ ಆರಂಭಗೊಂಡ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳ್ಳದೆ ಈ ಭಾಗದ ರೈತರು ತೊಂದರೆ ಅನುಭವಿಸುತ್ತಿದ್ದಾರೆಂದು ದೂರಿದರು.

    ಅಂಬಳೆ ಹೋಬಳಿ ಮತ್ತಿಕೆರೆ ಗ್ರಾಮದ ಬಳಿ ಯಗಚಿ ಉಪನದಿ ಬಿರಂಜಿ ಹಳ್ಳಿದಿಂದ ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿಯುವ ನೀರನ್ನು ಏತ ನೀರಾವರಿ ಮೂಲಕ ಮಳಲೂರು ಹಾಗೂ ಕೆ.ಆರ್. ಪೇಟೆ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳ ಜಮೀನಿಗೆ ನೀರೊದಗಿಸುವ ಯೋಜನೆ ೧೯೯೮ ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತು ೨೦೦೦ ನೇ ಇಸವಿಯಲ್ಲಿ ಶಂಕುಸ್ಥಾಪನೆಗೊಂಡು ೨.೫೮ ಕೋಟಿ ರೂ ಅನುದಾನದೊಂದಿಗೆ ಪ್ರಾರಂಭಿಸಲಾಗಿತ್ತು ಎಂದು ತಿಳಿಸಿದರು.

    ನಂತರ ಆಮೆ ಗತಿಯಲ್ಲಿ ಸಾಗಿದ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಆಗ್ರಹಿಸಿ ರೈತಸಂಘ ಅಂದಿನ ಶಾಸಕರು ಹಾಗೂ ಸಚಿವರಾಗಿದ್ದ ಸಿ.ಆರ್. ಸಗೀರ್ ಅಹಮದ್ ಅವರ ಮನೆ ಮುಂದೆ ಅಹೋರಾತ್ರಿ ಚಳುವಳಿ ನಡೆಸಿದ್ದ ಪರಿಣಾಮ ಜಾಕ್‌ವೆಲ್, ಇಂಟಕ್ ವೆಲ್ ಪಂಪ್‌ಹೌಸ್ ಹಾಗೂ ಕಂಬೀಹಳ್ಳಿವರೆಗೆ ಪೈಪ್‌ಲೈನ್ ಕಾಮಗಾರಿ ಪ್ರಾರಂಭವಾಯಿತು ಎಂದರು.

    ಬದಲಾದ ರಾಜಕೀಯ ಸನ್ನಿವೇಶದಿಂದ ಯೋಜನಾ ವೆಚ್ಚ ಹೆಚ್ಚುವರಿಯಾಗಿ ೩.೫೦ ಕೋಟಿಗೆ ಮರು ಅಂದಾಜು ಮಾಡಿದ್ದು ಹೊರತುಪಡಿಸಿದರೆ ಕಾಮಗಾರಿಗೆ ಯಾವುದೇ ಚಾಲನೆ ದೊರೆಯಲಿಲ್ಲ. ಇದನ್ನು ವಿರೋಧಿಸಿ ಜನಪ್ರತಿನಿಧಿಗಳ ಮನೆಯ ಮುಂದೆ ಚಳುವಳಿ ನಡೆಸಿದಾಗ ೭.೫೦ ಕೋಟಿ ರೂ ಹೆಚ್ಚುವರಿ ಅನುದಾನಕ್ಕೆ ಅನುಮೋದನೆ ದೊರೆತು ಸಣ್ಣ ನೀರಾವರಿ ಇಲಾಖೆ ನಿರ್ವಹಿಸುತ್ತಿದ್ದ ಕಾಮಗಾರಿಯನ್ನು ಕಾವೇರಿ ನೀರಾವರಿ ನಿಗಮಕ್ಕೆ ವರ್ಗಾಯಿಸಲಾಯಿತು ಎಂದು ಮಾಹಿತಿ ನೀಡಿದರು.

    ಈ ಸಂಬಂಧ ನಾಲಾ ಕಾಮಗಾರಿಗೆ ಭೂಮಿ ವಶಪಡಿಸಿಕೊಂಡ ರೈತರಿಗೆ ಅಲ್ಪಸ್ವಲ್ಪ ಪರಿಹಾರ ಕೊಟ್ಟು ಪ್ರಾರಂಭಗೊಂಡ ಕಾಮಗಾರಿ ವಿದ್ಯುತ್ ಪಂಪ್ ಅಳವಡಿಕೆ ಕಾರ್ಯಕ್ಕೆ ಸೀಮಿತವಾಯಿತು. ಭೂಮಿ ವಶಪಡಿಸಿಕೊಂಡ ರೈತರಿಗೆ ಪರಿಹಾರ ಕೊಡಲು ವಿಳಂಭ ಮಾಡಿದ ಪರಿಣಾಮ ಕಾಮಗಾರಿ ವೆಚ್ಚ ಏರುತ್ತಲೇ ಹೋಯಿತೇ ವಿನಾಃ ಕಾಮಗಾರಿ ಮಾತ್ರ ಪೂರ್ಣಗೊಳ್ಳಲಿಲ್ಲ ಎಂದು ಆರೋಪಿಸಿದರು.

    ಸದರಿ ಕಾಮಗಾರಿ ಪೂರ್ಣಗೊಂಡಿದ್ದರೆ ರೈತರ ಭೂಮಿಗೆ ನೀರೊದಗಿಸುವ ಜೊತೆಗೆ ಈ ಭಾಗದ ಹಳ್ಳಿಗಳಿಗೆ ಕುಡಿಯುವ ನೀರಿನ ಭವಣೆಯನ್ನು ತಪ್ಪಿಸಬಹುದಿತ್ತು. ಇದರಲ್ಲಿ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ ಯೋಜನೆಯನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಲಿಲ್ಲ ಎಂದು ದೂರಿದ ಅವರು, ಈಗ ಕಾವೇರಿ ನೀರಾವರಿ ನಿಗಮದಲ್ಲಿ ೬.೫೦ ಕೋಟಿ ರೂ ಇದ್ದು, ಅವಶ್ಯಕತೆ ಇರುವ ೮.೫೦ ಕೋಟಿ ರೂ ಹಣವನ್ನು ಈ ಬಾರಿಯ ಬಜೆಟ್‌ನಲ್ಲಿ ಮೀಸಲಿರಿಸಿ ನಿಗಮಕ್ಕೆ ಹಣ ಮಂಜೂರು ಮಾಡುವಂತೆ ಆಗ್ರಹಿಸಿದರು.

    ನಿಕಟಪೂರ್ವ ಗುರುಶಾಂತಪ್ಪ ಮಾತನಾಡಿ, ಜಿಲ್ಲೆಯ ಎಲ್ಲಾ ನೀರಾವರಿ ಯೋಜನೆಗಳನ್ನು ಹಾಗೂ ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸುವ ಯೋಜನೆ ಸಮಗ್ರ ಕುಡಿಯುವ ನೀರು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಅವರು, ಮಳಲೂರು ಏತ ನೀರಾವರಿ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಿ ರೈತರ ಭೂಮಿಗೆ ನೀರೊದಗಿಸಬೇಕು. ಇಲ್ಲದಿದ್ದರೆ ಆಹಾರದ ಅಭಾವ ತಲೆದೋರಲಿದೆ ಎಂದು ಎಚ್ಚರಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್.ಡಿ, ಪ್ರಧಾನ ಕಾರ್ಯದರ್ಶಿ ಎಂ.ಬಿ ಚಂದ್ರಶೇಖರ್, ರಾಜ್ಯ ಸಮಿತಿ ವರಿಷ್ಠ ಕೆ.ಕೆ. ಕೃಷ್ಣೇಗೌಡ, ಮುಖಂಡರಾದ ಹೆಚ್.ಡಿ. ಉಮೇಶ್, ದಯಾನಂದ್, ರಾಮೇಗೌಡ, ಸೋಮೇಗೌಡ ಮತ್ತಿತರರು ಉಪಸ್ಥಿತರಿದ್ದರು

    Farmers’ union protests demanding Malaur lift irrigation project

  • ಪೊಲೀಸರಿಗೆ ಸಾರ್ವಜನಿಕರ ಸಹಕಾರವಿದ್ದಲ್ಲಿ ಸಾಮಾಜ ಸುಸ್ಥಿರ

    ಪೊಲೀಸರಿಗೆ ಸಾರ್ವಜನಿಕರ ಸಹಕಾರವಿದ್ದಲ್ಲಿ ಸಾಮಾಜ ಸುಸ್ಥಿರ

    ಚಿಕ್ಕಮಗಳೂರು:  ಸಾಮಾಜದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗಾಗಿ ಕಾರ್ಯನಿರ್ವಹಿಸುವ ಪೊಲೀಸರೊಂದಿಗೆ ಸಾರ್ವಜನಿಕರು ಉತ್ತಮ ಭಾಂದವ್ಯವನ್ನಿರಿಸಿಕೊಂಡು ಅವರ ಕರ್ತವ್ಯಕ್ಕೆ ಸಹಕಾರ ನೀಡಿದರೆ ಸುಸ್ಥಿರ ಸಮಾಜ ನಿರ್ಮಾಣ ಮಾಡಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.

    ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಂದು ನಗರದ ರಾಮನಹಳ್ಳಿ ಪೊಲೀಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ನಾಗರೀಕ ಬಂದೂಕು ಶಿಬಿರದ ಸಮಾರೋಪ ಸಮಾರಂಭ ಮತ್ತು ಯಶಸ್ವಿಯಾಗಿ ಬಂದೂಕು ತರಬೇತಿ ಪೂರ್ಣಗೊಳಿಸಿದ ನಾಗರೀಕರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಲಾಖೆಯು ಭದ್ರತೆ ಹಾಗೂ ರಕ್ಷಣೆ ಜೊತೆಗೆ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ನಿಷ್ಠೆಯಿಂದ ಕರ್ತವ್ಯದಲ್ಲಿ ತೊಡಗಿಕೊಂಡಿದೆ ಪ್ರತಿಯೊಬ್ಬ ನಾಗರೀಕನೂ ಕಾನೂನು ಅರಿತು ಪಾಲಿಸಿದಲ್ಲಿ ಅಪರಾಧ ಸಂಖ್ಯೆ ಕ್ಷೀಣಿಸುವುದರೊಂದಿಗೆ ಸ್ವಾಸ್ಥ್ಯ ಸಮಾಜವು ನಿರ್ಮಾಣವಾಗುತ್ತದೆ ಎಂದರು.

    ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ಸಮಾಜದ ಎಲ್ಲಾ ಸ್ಥಿತಿಗತಿಗಳು, ಆಗು-ಹೋಗುಗಳನ್ನು ಸ್ಫಷ್ಟವಾಗಿ ಅರಿತ ವಿದ್ಯಾವಂತರೇ ಸೈಬರ್ ಕ್ರೈಂನಿಂದ ತಮ್ಮ ಹಣ ಕಳೆದುಕೊಂದು ವಂಚಿತರಾಗಿದ್ದಾರೆ. ಯಾವುದೇ ಅಪರಿಚಿತ ಸಂಖ್ಯೆಯಿಂದ ಕರೆಗಳು ಬಂದಲ್ಲಿ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ ೧೯೩೦ಗೆ ಕರೆ ಮಾಡಿ ಮಾಹಿತಿ ನೀಡಿ ಅವುಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು.

    ಜಿಲ್ಲೆಯೂ ಕಾಫಿ ಬೆಳೆಗೆ ಪ್ರಸಿದ್ಧಿಯಾಗಿದ್ದು ಇದು ಉದ್ಯೋಗ ಸೃಷ್ಠಿಗೂ ಸಹಕಾರಿಯಾಗಿದೆ. ಜಿಲ್ಲೆಯಲ್ಲಿರುವ ವಿವಿಧ ಕಾಫಿ ಎಸ್ಟೇಟ್‌ಗಳಿಗೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಕೂಲಿ ಕಾರ್ಮಿಕರು ಉದ್ಯೋಗ ಅರಿಸಿ ಬರುತ್ತಾರೆ. ಕಾಫಿ ಎಸ್ಟೇಟ್ ಮಾಲೀಕರುಗಳು ತಮ್ಮಲ್ಲಿಗೆ ಬರುವ ಹೊರ ರಾಜ್ಯಗಳ ಕೂಲಿ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಿ ಹತ್ತಿರದ ಪೊಲೀಸ್ ಠಾಣೆಗೆ ನೀಡಬೇಕು. ಇದರಿಂದ ಕಾರ್ಮಿಕರ ಹಿನ್ನೆಲೆಯನ್ನು ಗುರುತಿಸಿ ಸಂಭವಿಸಬಹುದಾದ ಅಪರಾಧಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದರು.

    ಅಕ್ರಮ ಗಾಂಜ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಯಾವುದೇ ಅಕ್ರಮ ಗಾಂಜ ಸೇವನೆ ಹಾಗೂ ಮಾರಾಟ ಕಂಡುಬಂದಲ್ಲಿ ಸಾರ್ವಜನಿಕರು ಕರ್ನಾಟಕ ಡ್ರಗ್ ಫಿ ಆಪ್ ಮೂಲಕ ದೂರು ನೀಡಬೇಕು. ಇದರಲ್ಲಿ ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು ಅಕ್ರಮ ವೆಸಗುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಹಾಗೂ ತುರ್ತು ಕಾರ್ಯಗಳಿಗೆ ೧೧೨ ಗೆ ಕರೆ ಮಾಡಿ ತಿಳಿಸಿದಲ್ಲಿ ಕರೆ ಮಾಡಿದ ೨೦ ನಿಮಿಷದೊಳಗಾಗಿ ತುರ್ತು ಪೊಲೀಸ್ ಸಿಬ್ಬಂಧಿಗಳು ಸ್ಫಂಧಿಸುತ್ತಾರೆ ಎಂದರು.

    ಜಿಲ್ಲೆಯೂ ಭೌಗೋಳಿಕವಾಗಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದ್ದು ವನ್ಯ ಜೀವಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹಾಗೂ ತಮ್ಮ ರಕ್ಷಣೆಯ ಉದ್ದೇಶದಿಂದ ಇಲಾಖೆ ವತಿಯಿಂದ ಬಂದೂಕು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿ ತರಬೇತಿ ನೀಡಲಾಗುತ್ತಿದೆ. ಬಂದೂಕುದಾರರು ತಮಗೆ ನೀಡಿರುವ ಬಂದೂಕು ಪರವಾನಗಿಗಳನ್ನು ದುರುಪಯೋಗ ಪಡಿಸಿಕೊಳ್ಳದೆ ಬಂದೂಕು ಸುರಕ್ಷತೆ ಹಾಗೂ ನಿರ್ವಹಣೆಗಳ ಕುರಿತು ಹೆಚ್ಚು ಎಚ್ಚರವಾಗಿರಬೇಕು. ತರಬೇತಿ ಸಮಯದಲ್ಲಿ ನೀಡಿರುವ ಎಲ್ಲಾ ಮಾಹಿತಿಗಳನ್ನು ಚಾಚು ತಪ್ಪದೆ ಪಾಲಿಸಿ ಸಂದಿಗ್ಧ ಸ್ಥಿತಿಯಲ್ಲಿ ಸ್ವಯಂ ಪ್ರೇರಿತರಾಗಿ ಇಲಾಖೆಯೊಂದಿಗೆ ಕೈ ಜೋಡಿಸಿದಲ್ಲಿ ಭಾಂದವ್ಯದ ಜೊತೆ ಆರೋಗ್ಯಯುತ ಸಮಾಜವು ಸ್ಥಾಪನೆಯಾಗುತ್ತದೆ ಎಂದು ಹೇಳಿದರು.

    ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ್ ಕ್ಷಿರಸಾಗರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ಇಲ್ಲಿ ತರಬೇತಿಯೊಂದಿಗೆ ಪರವಾನಗಿಯನ್ನು ಪಡೆದು ಬಂದೂಕುಗಳನ್ನು ಬಳಕೆ ಮಾಡುವ ಪ್ರತಿಯೊಬ್ಬರು ಅದರ ಸುರಕ್ಷತೆ ಬಗ್ಗೆ ಹೆಚ್ಚು ಗಮನ ವಹಿಸಬೇಕು. ಬಂದೂಕುಗಳನ್ನು ಕೇವಲ ತಮ್ಮ ರಕ್ಷಣೆಗೆ ಮಾತ್ರ ಬಳಸಿಕೊಳ್ಳಿ ಯಾವುದೇ ಕಾನೂನು ಬಾಹಿರ ಕಾರ್ಯಗಳಲ್ಲಿ ತೊಡಗಿಕೊಳ್ಳದೇ ಹಾಗೂ ತಮ್ಮ ಬಂದೂಕುಗಳನ್ನು ಇತರರು ಬಳಕೆ ಮಾಡದಂತೆ ಎಚ್ಚರವಹಿಸಬೇಕು ಎಂದರು.

    ಪ್ರಾಣಿಗಳಿಂದ ಯಾವುದೇ ಪ್ರಾಣ ಹಾನಿಯಾದ ಪ್ರಕರಣಗಳಿಗೆ ಸಕಾಲದಲ್ಲಿ ಪರಿಹಾರ ನೀಡಲಾಗುತ್ತಿದೆ. ಬೆಳೆ ನಾಶ ಹಾಗೂ ಪ್ರಕರಣಳಿಗೆ ಸಮೀಕ್ಷೆ ನಡೆಸಿ ಅತಿ ಶೀಘ್ರವಾಗಿ ಪರಿಹಾರ ಒದಗಿಸಿಕೊಡುವ ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದೆ. ಜಿಲ್ಲೆಯಲ್ಲಿ ಆನೆ ದಾಮ ನಿರ್ಮಿಸಲು ಅರಣ್ಯ ಸಚಿವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗಿದೆ ಇದರಿಂದ ಆನೆಗಳ ಸ್ಥಳಾಂತರ ಕಾರ್ಯಗಳು ವೇಗಗತಿಯಲ್ಲಿ ಸಾಗುತ್ತವೆ ಎಂದ ಅವರು ಪ್ರಾಣಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಬುದ್ಧಿ ಜೀವಿಗಳಾದ ನಾವುಗಳು ಪರಿಸರ ಕಾಳಜಿ ಹೊಂದಿರಬೇಕು. ಅರಣ್ಯ ಉಳಿದರೆ ಪ್ರತಿಯೊಂದು ಜೀವಿಯೂ ಸುರಕ್ಷಿತವಾಗಿರಬಹುದು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಸುಮಂತ್. ಡಿ.ಐ.ಆರ್ ಸಹದೇವ್ ಎಸ್.ವೈ, ಬಂದೂಕು ತರಬೇತಿದಾರರಾದ ಅಬ್ದುಲ್‌ರೆಹಮಾನ್, ಸತೀಶ್, ಪ್ರಸನ್ನ ಜಿ.ಕೆ., ಗಂಗಾಧರ್ ಸೇರಿದಂತೆ ಶಿಬಿರಾರ್ಥಿಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂಧಿಗಳು ಉಪಸ್ಥಿತರಿದ್ದರು.

    Closing ceremony of the Civilian Firearms Camp

  • ದೆಹಲಿವಿಧಾನಸಭೆ ಬಿಜೆಪಿಗೆ ಜಯ: ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

    ದೆಹಲಿವಿಧಾನಸಭೆ ಬಿಜೆಪಿಗೆ ಜಯ: ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

    ಚಿಕ್ಕಮಗಳೂರು: : ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವು ಹೊಸ ವಿಶ್ವಾಸ ಜೊತೆಗೆ ಸಂತೋಷ ತಂದಿದೆ. ಇದರೊಂದಿಗೆ ದೆಹಲಿ ವಿಧಾನ ಸಭೆಯಲ್ಲಿ ಸತತ ಮೂರನೇ ಬಾರಿಗೆ ಶೂನ್ಯ ಸಾಂಪಾದನೆ ಮೂಲಕ ಸೋಲನುಭವಿಸಿ ದಿಕ್ಕಾಪಾಲಾಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕು ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆಂದು ಕಾರ್ಕಳಾ ಶಾಸಕ ಸುನಿಲ್ ಕುಮಾರ್ ಹೇಳಿದರು.

    ದೆಹಲಿ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನಗರದ ಬಿಜೆಪಿ ಕಚೇರಿಯಿಂದ ಆಜಾದ್ ವೃತ್ತದ ವರೆಗೆ ಮೋದಿ ಕಟೌಟ್ ಹಿಡಿದು ಮೆರವಣಿಗೆ ಮಾಡಿ ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿ ನಂತರ ಮಾತನಾಡಿದ ಅವರು.ದೇಶದ ರಾಜಧಾನಿಯಲ್ಲಿ ಕೇಸರಿ ಆಡಳಿತ ಮುಂದುವರಿಯುತ್ತಿದೆ. ಇನ್ನು ಐದು ವರ್ಷ ಡಬಲ್ ಇಂಜೀನ್ ಸರ್ಕಾರದ ಮೂಲಕ ವಿಶ್ವಾಸದ ಆಡಳಿತ ನೀಡಲು ಬಿಜೆಪಿ ಸರ್ಕಾರ ಮುಂದಾಗಿದೆ. ನರೇಂದ್ರ ಮೋದಿ ಯವರ ಜನಪ್ರೀಯತೆಗೆ ದೆಹಲಿಯ ಮತದಾರರು ದೊಡ್ಡ ಪ್ರಮಾಣದ ಗೆಲುವನ್ನು ನೀಡಿದ್ದಾರೆ ಎಂದರು.

    ದೇಶದ ಅಖಂಡತೆ ವಿರುದ್ಧ ಸಧಾ ಕಾಲಾ ಮಾತನಾಡುತಿದ್ದ ಕೇಜ್ರಿವಾಲ್‌ರವರನ್ನು ಜನ ತಿರಸ್ಕರಿಸಿದ್ದಾರೆ. ಭಾಷಣಗಳಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡಿ ಆಡಳಿತದಲ್ಲಿ ಭ್ರಷ್ಟಾಚಾರವನ್ನೆ ಅಸ್ತ್ರವಾಗಿರಿಸಿ, ಅಣ್ಣ ಅಜಾರೆಯವರ ಹೋರಾಟವನ್ನು ದುರುಪಯೋಗೊಳಿಸಿಕೊಂಡು ದೇಶದ ಜನತೆಗೆ ನಿರಂತರ ಸುಳ್ಳುಗಳನ್ನು ಹೇಳಿ ಆಡಳಿತ ನಡೆಸುತ್ತಿದ್ದ ಹತ್ತು ವರ್ಷಗಳ ಅವರ ಅಧಿಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಉತ್ತಮ ಆಡಳಿತ ನೀಡಿ ದೆಹಲಿಯ ವಿಜಯ ಯಾತ್ರೆ ಕರ್ನಾಟಕದಲ್ಲು ಮುಂದುವರೆಯುವಂತೆ ಮಾಡಲಾಗುತ್ತದೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಮಾತನಾಡಿ ದೆಹಲಿ ವಿಧಾನ ಚುನಾವಣೆಯಲ್ಲಿ ಬಹುಮತ ಪಡೆದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಕೇಜ್ರಿವಾಲ್‌ರವರ ದುಷ್ಟ ಆಡಳಿತಕ್ಕೆ ಅಂತ್ಯವಾಡಿದೆ. ದೇಶದ ಜನತೆಗೆ ದೆಹಲಿ ಚುನಾವಣಾ ಫಲಿತಾಂಶವು ಉತ್ತಮ ಸಂದೇಶವನ್ನು ನೀಡಿದೆ ಎಂದ ಅವರು ದೇಶದಲ್ಲಿ ಕೇವಲ ಬೆರಳೆಣಿಕೆ ರಾಜ್ಯಗಳಲ್ಲಿರುವ ಕಾಂಗ್ರೆಸ್ ಸರ್ಕಾರವು ಪತನಗೊಳ್ಳುವ ಕಾಲ ಹತ್ತಿರದಲ್ಲಿದೆ ಎಂದರು.

    ವಿಜಯೋತ್ಸವದಲ್ಲಿ ನಗರ ಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಮುಖಂಡರಾದ ಕಲ್ಮರುಡಪ್ಪ, ಕೋಟೆ ರಂಗನಾಥ್, ಬಿ.ರಾಜಪ್ಪ, ಪ್ರೇಮ್‌ಕುಮಾರ್, ಪುಷ್ವರಾಜ್, ಜದಂತಾ ಅನಿಲ್ ಕುಮಾರ್, ಜಯವರ್ಧನ್, ಸಂತೋಷ್ ಕೋಟ್ಯಾನ್, ಕೆ.ಪಿ.ವೆಂಕಟೇಶ್, ಕವೀಶ್, ಪುಟ್ಟಸ್ವಾಮಿ ಜಯ್ಯಣ್ಣ, ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.

    Delhi Assembly victory for BJP: BJP workers celebrate in the city

  • ನಗರದಲ್ಲಿ ಜಂಬೂ ಸರ್ಕಸ್-ಸಾಹಸ ಚಟುವಟಿಕೆಗಳ ಪ್ರದರ್ಶನ

    ನಗರದಲ್ಲಿ ಜಂಬೂ ಸರ್ಕಸ್-ಸಾಹಸ ಚಟುವಟಿಕೆಗಳ ಪ್ರದರ್ಶನ

    ಚಿಕ್ಕಮಗಳೂರು:  ಏಷ್ಯ ಖಂಡದಲ್ಲೇ ಅತಿ ದೊಡ್ಡ ಸರ್ಕಸ್ ತಂಡವಾದ ಜಂಬೂ ಸರ್ಕಸ್‌ರವರಿಂದ ನಗರದ ಬೈಪಾಸ್ ರಸ್ತೆ, ಕಲ್ಯಾಣ ನಗರದಲ್ಲಿ ಅತ್ಯದ್ಭುತ ಸರ್ಕಸ್ ಪ್ರದರ್ಶನಗೊಳ್ಳುತ್ತಿದ್ದು ಕಲಾಭಿಮಾನಿಗಳೂ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಸರ್ಕಸ್ ಫ್ಯಾನ್ಸ್ ಫೇರ್‌ವೆಲ್ ಅಸೋಷಿಯೇಷನ್ ಅಧ್ಯಕ್ಷ ನಾಗೇಶ್ ಹೇಳಿದರು

    ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಜಂಬೂ ಸರ್ಕಸ್ ತಂಡವೂ ೧೯೭೭ರ ಅಕ್ಟೋಬರ್ ೨ರಂದು ಎಂ.ವಿ ಶಂಕರನ್ ಅವರ ಮಾಲೀಕತ್ವದಲ್ಲಿ ಬಿಹಾರಿನ ದಾನಪುರದಲ್ಲಿ ಪ್ರಾರಂಭವಾಗಿದ್ದು. ಪ್ರಸ್ತುತ ಅವರ ಮಕ್ಕಳಾದ ಅಜಯ್‌ಶಂಕರ್ ಹಾಗೂ ಅಶೋಕ್‌ಶಂಕರ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ತಂಡದಲ್ಲಿ ನೂರು ಜನ ಕಲಾವಿದರು, ಮಹಿಳೆಯರು, ಪುರು?ರು, ಕಚೇರಿ ನೌಕರರು ಇತರ ಸಹಾಯಕ ನೌಕರರು ಸೇರಿದಂತೆ ಒಟ್ಟು ೩೦೦ಕ್ಕೂ ಹೆಚ್ಚು ಜನ ಸರ್ಕಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

    ಸರ್ಕಸ್ಸಿನಲ್ಲಿ ಆಫ್ರಿಕಾ, ರಷ್ಯಾದ ವಿದೇಶಿ ಕಲಾವಿದರು ಒಳಗೊಂಡಂತೆ ದೇಶದ ವಿವಿದ ರಾಜ್ಯಗಳ ಕಲಾವಿದರು ಮೈ ಜುಮ್ ಎನಿಸುವಂತಹ ಸಾಹಸಗಳು, ಅಮೆರಿಕನ್ ಸ್ಪೀಡ್ ವೀಲ್, ಡಬಲ್ ರಿಂಗ್ ಅಕ್ರೋಬ್ಯಾಟ್, ಪೀಕಾಕ್ ಡ್ಯಾನ್ಸ್, ಗ್ಲೋಬಲ್ ಡೆತ್ ಇನ್ ಡಾರ್ಕ್‌ನೆಸ್ ಹಾಗೂ ರೊಮ್ಯಾಂಟಿಕ್ ಸ್ಯಾರಿ ಡ್ಯಾನ್ ಸೇರಿದಂತೆ ವಿವಿದ ಸಾಹಸಮಯ ಚಟುಚಟಿಕೆಗಳನ್ನು ಪ್ರದರ್ಶಿಸುತ್ತಾರೆ,

    ಬಹು ಭಾಷಾ ಚಿತ್ರಗಳಲ್ಲಿ ಈ ಸರ್ಕಸ್‌ನ ಬಳಸಿ ಹಲವಾರು ಚಿತ್ರಗಳನ್ನು ಚಿತ್ರಿಸಲಾಗಿದೆ. ನೆಹರು, ಇಂದಿರಾಗಾಂಧಿ, ವಿದೇಶಿ ಗಣ್ಯರು, ಅಮಿತಾ ಬಚ್ಚನ್, ಧಮೇಂದ್ರ ರಾಜೇಶ್ ಖನ್ನ, ಹೇಮಮಾಲಿನಿ ಸೇರಿದಂತೆ ಇನ್ನೂ ಅನೇಕ ಚಲನಚಿತ್ರ ನಟ-ನಟಿಯರು ಸರ್ಕಸ್ ವೀಕ್ಷಿಸಿ ಅಚ್ಚರಿ ವ್ಯಕ್ತಪಡಿಸಿ ಹೆಮ್ಮೆಯಿಂದ ಬೆನ್ನು ತಟ್ಟಿದ್ದಾರೆ ಎಂದರು.

    ಸರ್ಕಸ್‌ನ ಕಲಾವಿದರು ವ?ವಿಡಿ ಭಾರತದ ಉದ್ದಗಲಕ್ಕು ಸಂಚರಿಸಿ ಜನರನ್ನು ರಂಜಿಸಿ ಮೆಚ್ಚಿಸಿದ್ದಾರೆ. ಇದೀಗ ಚಿಕ್ಕಮಗಳೂರಿನಲ್ಲಿ ಪ್ರಾರಂಭಿಸಿದ್ದು ಮಧ್ಯಾಹ್ನ ೧ ಗಂಟೆ, ಸಂಜೆ ೪ ಗಂಟೆ ಹಾಗೂ ರಾತ್ರಿ ೭ ಗಂಟೆಗೆ ಪ್ರತಿ ದಿನ ೩ ಆಟಗಳು ಪ್ರದರ್ಶಿಸಲಾಗುತ್ತಿದೆ ಎಂದು ತಿಳಿಸಿದರು.

    ಪದರ್ಶನಕ್ಕೆ ಮುಂಗಡ ಬುಕಿಂಗ್ ಸೌಲಭ್ಯವಿದ್ದು  ದೂ.ಸಂ ೬೨೩೮೩೪೭೦೦೬, ೮೨೮೧೬೦೬೮೯೨ ಅಥವಾ ೮೮೦೯೦೦೦೧೭೫.ಗೆ ಕರೆ ಮಾಡಿ ಬುಕಿಂಗ್ ಮಾಡಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ರಾಜೀವ್, ವರ್ಗೀಸ್, ಅಂಥೋಣಿ, ಮೂರ್ತಿ ಉಪಸ್ಥಿತರಿದ್ದರು.

    Jumbo Circus-Adventure activities show in the city

  • ಜಿಲ್ಲೆಯ ಸರ್ಕಾರಿ ಕೆರೆಗಳ ಸಮಗ್ರ ವರದಿ ಸಲ್ಲಿಸಲು ಸೂಚನೆ

    ಜಿಲ್ಲೆಯ ಸರ್ಕಾರಿ ಕೆರೆಗಳ ಸಮಗ್ರ ವರದಿ ಸಲ್ಲಿಸಲು ಸೂಚನೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸರ್ಕಾರಿ ಜಾಗದಲ್ಲಿರುವ ಎಲ್ಲಾ ಕೆರೆಗಳ ಸರ್ವೆ ನಂ ಸಹಿತ ಸಮಗ್ರ ವರದಿಯನ್ನು ಕೂಡಲೇ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಸರ್ವೆ, ಒತ್ತುವರಿ, ತೆರವು ಕುರಿತಂತೆ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಗೆ ಒಳಪಡುವ ಒಟ್ಟು ಕೆರೆಗಳನ್ನು ಸರ್ವೆ ಮಾಡಿಸಿ ಒತ್ತುವರಿಯಾಗಿರುವ ಕೆರೆಗಳನ್ನು ಕೂಡಲೇ ತೆರವುಗೊಳಿಸಿ ಅವುಗಳನ್ನು ಸಂರಕ್ಷಣೆ ಮಾಡಲು ಸಂಬಂಧಿಸಿದ ಇಲಾಖೆಗಳು ತಕ್ಷಣ ಕ್ರಮಕೈಗೊಳ್ಳುವುದರ ಜೊತೆಗೆ ಅವುಗಳ ಅಭಿವೃದ್ದಿಗೆ ಕ್ರಿಯಾ ಯೋಜನೆ ಸಿದ್ದಪಡಿಸಿ ಸಲ್ಲಿಸಬೇಕು ಎಂದ ಅವರು ಕೆರೆಗಳ ಸ್ಥಿತಿಗತಿಗಳು ಸೇರಿದಂತೆ ಅಲ್ಲಿನ ನೀರಿನ ಗುಣಮಟ್ಟವನ್ನು ಪರಿಶೀಲಿಸಿ ಎರಡು-ಮೂರು ದಿನಗಳಲ್ಲಿ ವರದಿಯನ್ನು ನೀಡಬೇಕು ಎಂದು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ತಿಳಿಸಿದರು.

    ಕೆರೆಗಳ ಅಪೆಕ್ಸ್ ಸಮಿತಿಯಲ್ಲಿರುವ ಎಲ್ಲ ಜಿಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಬಗ್ಗೆ ಸಭೆಗಳನ್ನು ಮಾಡಿ ಅಲ್ಲಿನ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದ ಅವರು ಗ್ರಾಮ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ, ಅರಣ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ತಮ್ಮ ವ್ಯಾಪ್ತಿಗೆ ಬರುವ ಸುಮಾರು ೧೭೨೯ ಕೆರೆಗಳ ದಾಖಲಾತಿಗಳು ಸೇರಿದಂತೆ ಕೆರೆಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಜಾಗವನ್ನು ರಕ್ಷಿಸಲು ಮುಂದಾಗಬೇಕು ಎಂದು ಹೇಳಿದರು.

    ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮಾತನಾಡಿ ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ ಕೆರೆಗಳ ಅಂಕಿ-ಅಂಶಗಳು ವ್ಯತ್ಯಾಸವಾಗದಂತೆ ಪಿಆರ್‌ಇಡಿ ಕಂದಾಯ, ಸಣ್ಣ ನೀರಾವರಿ, ಮತ್ತಿತರ ಇಲಾಖೆಗಳು ಸೇರಿ ಸರ್ಕಾರಿ ಸರ್ವೆ ನಂಬರ್‌ಗಳಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಳಕೆಯಾಗುವ ಕೆರೆಗಳ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಸರಿಯಾದ ಅಂಕಿ-ಅಂಶಗಳನ್ನು ನೀಡಬೇಕು ಎಲ್ಲಾ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿಗಳು, ತಹಸೀಲ್ದಾರರುಗಳು ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ. ಹನುಮಂತಪ್ಪ, ಉಪವಿಭಾಗಾಧಿಕಾರಿಗಳಾದ ಕಾಂತರಾಜ್, ರಶ್ಮಿ, ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು, ಜಿ.ಪಂ. ಉಪಕಾರ್ಯದರ್ಶಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    Instructions to submit a comprehensive report on government lakes in the district