Category: ಜಿಲ್ಲಾ ಸುದ್ದಿ

  • ಮಾ.2 ಐಡಿಎಸ್‌ಜಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ

    ಮಾ.2 ಐಡಿಎಸ್‌ಜಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ

    ಚಿಕ್ಕಮಗಳೂರು: ನಿರುದ್ಯೋಗಿಗಳ ಜೀವನೋಪಾಯಕ್ಕೆ ಅನುಕೂಲವಾಗುವಂತೆ ರಾಜ್ಯ ಸರ್ಕಾರದ ಸಂಕಲ್ಪ ಯೋಜನೆಯಡಿ ಜಿಲ್ಲಾಮಟ್ಟದ ಕೌಶಲ್ಯ ರೋಜ್ಗಾರ್ ಉದ್ಯೋಗ ಮೇಳ-೨೦೨೫ ನ್ನು ಮಾ.೨ ರಂದು ಭಾನುವಾರ ಬೆಳಗ್ಗೆ ೯.೩೦ ರಿಂದ ೪.೩೦ ರವರೆಗೆ ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಶಾಂತ್ ಹೆಚ್.ಸಿ ಅವರು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಸಂಜೀವಿನಿ), ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಜಿಲ್ಲಾ ಸರ್ಕಾರಿ ನೌಕರರ ಸಂಘ, ಉದ್ಯೋಗದಾತ ಫೌಡೇಷನ್, ಐಡಿಎಸ್‌ಜಿ ಸರ್ಕಾರಿ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.

    ಈ ಉದ್ಯೋಗ ಮೇಳದಲ್ಲಿ ವಿವಿಧ ವಲಯಗಳ ಮಾಹಿತಿ ಮತ್ತು ತಂತ್ರಜ್ಞಾನ, ಉತ್ಪಾದನಾ ವಲಯ, ಸೇವಾವಲಯ, ಪ್ರವಾಸೋದ್ಯಮ ಸೇರಿದಂತೆ ಇತ್ಯಾದಿ ವಲಯಗಳಿಂದ ಸುಮಾರು ೭೦ ರಿಂದ ೭೫ ಉದ್ಯೋಗದಾತ ಕಂಪನಿಗಳು ಭಾಗವಹಿಸುತ್ತಿವೆ. ಸುಮಾರು ೧೧ ಸಾವಿರ ಹುದ್ದೆಗಳಿಗೆ ಬೇಡಿಕೆ ಇರುವುದಾಗಿ ಈ ಕಂಪನಿಗಳು ಮಾಹಿತಿ ನೀಡಿವೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ೩೯೦೦ ಕ್ಕೂ ಹೆಚ್ಚು ಡಿಪ್ಲೊಮೊ ಹಾಗೂ ಪದವೀಧರ ಯುವ ಫಲಾನುಭವಿಗಳು ಉದ್ಯೋಗಾಕಾಂಕ್ಷಿಗಳಾಗಿದ್ದು, ಅವರೊಂದಿಗೆ ೭ನೇ ತರಗತಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಉದ್ಯೋಗದ ನಿರೀಕ್ಷೆಯಲ್ಲಿದ್ದು, ಅವರುಗಳನ್ನು ಗುರಿಯಾಗಿಟ್ಟುಕೊಂಡು ಸರ್ಕಾರದ ಆದೇಶದಂತೆ ಈ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

    ಈಗಾಗಲೇ ಎಲ್ಲಾ ಸಾಮಾಜಿಕ ಜಾಲತಾಣಗಳ ಮೂಲಕ ಉದ್ಯೋಗ ಮೇಳದ ಬಗ್ಗೆ ಪ್ರಚಾರ ಕೈಗೊಂಡು ಆನ್‌ಲೈನ್ ಮೂಲಕ ೧೫೦೦ ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ನೊಂದಣಿಯಾಗಿದ್ದು, ನೊಂದಣಿ ಮಾಡದಿರುವವರೂ ಸಹ ಈ ಮೇಳದಲ್ಲಿ ಭಾಗವಹಿಸಲು ಅವಕಾಶವಿದ್ದು, ಈ ಸಂಬಂಧ ಗ್ರಾ.ಪಂ ವ್ಯಾಪ್ತಿಯಲ್ಲಿ ಹೆಚ್ಚು ಪ್ರಚುರಪಡಿಸಲಾಗಿದ್ದು, ಒಂದು ಪಂಚಾಯಿತಿಯಿಂದ ಕನಿಷ್ಟ ೫೦ ಜನರನ್ನು ಕರೆತರಲು ಸೂಚಿಸಲಾಗಿದೆ ಎಂದರು.

    ಈ ಉದ್ಯೋಗ ಮೇಳದಲ್ಲಿ ನೇರ ಸಂದರ್ಶನ ಮೂಲಕ ಆಯ್ಕೆಮಾಡಿಕೊಳ್ಳಲಾಗುವುದು. ತಮ್ಮ ವಯಕ್ತಿಕ ವಿವರ ಹಾಗೂ ಇನ್ನಿತರ ದಾಖಲೆಗಳೊಂದಿಗೆ ಭಾಗವಹಿಸುವಂತೆ ವಿನಂತಿಸಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬೇಕೆಂದು ಹೇಳಿದರು.ಹೆಚ್ಚಿನ ಮಾಹಿತಿಗೆ ಹಾಗೂ ನೊಂದಾವಣೆಗೆ http://forms.gle/Ast7zzfc59bHuJHB6  ಸಂಪರ್ಕಿಸುವಂತೆ ತಿಳಿಸಿದರು.

    ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಮಾತನಾಡಿ, ಈ ಉದ್ಯೋಗ ಮೇಳದಲ್ಲಿ ಸುಮಾರು ೫ ಸಾವಿರ ನಿರುದ್ಯೋಗಿ ಯುವಕರು ಭಾಗವಹಿಸುವ ನಿರೀಕ್ಷೆ ಇದ್ದು, ಕನಿಷ್ಟ ೨ ಸಾವಿರ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದರು.

    ಸಂಘದ ವತಿಯಿಂದ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಯುವಜನತೆಗೆ ಆರೋಗ್ಯ ಇಲಾಖೆಯಿಂದ ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ. ರಕ್ತದಾನ ಶಿಬಿರ, ವಿವಿಧ ಇಲಾಖೆಗಳಲ್ಲಿ ದೊರೆಯುವ ಯೋಜನೆಗಳ ಬಗ್ಗೆ ಪ್ರಚಾರಪಡಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಾದ ರುಕ್ಮಾಂಗದ, ರಾಜೇಶ್, ಶಿವಲಿಂಗಯ್ಯ, ರಾಜೇಂದ್ರ, ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    Huge job fair at IDSG College on March 2

  • ಇಂದು ವಿಧಾನ ಪರಿಷತ್ ಚುನಾವಣೆ ಮತ ಮರುಎಣಿಕೆ

    ಇಂದು ವಿಧಾನ ಪರಿಷತ್ ಚುನಾವಣೆ ಮತ ಮರುಎಣಿಕೆ

    ಚಿಕ್ಕಮಗಳೂರು: 2021ರಲ್ಲಿ ನಡೆದಿದ್ದ ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆ ಕಾರ್ಯವನ್ನು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಫೆ. 28ರಂದು ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8 ಗಂಟೆಗೆ ಕಾಲೇಜಿನ ನೂತನ ಕಟ್ಟಡದಲ್ಲಿ ಪರಿಷತ್ ಚುನಾವಣೆಯ ಮರು ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

    ಚುನಾವಣಾ ಆಯೋಗದ ಮಾರ್ಗಸೂಚಿಯಂತೆಯೇ ಮರು ಮತ ಎಣಿಕೆ ನಡೆಯಲಿದೆ. 2021 ರಲ್ಲಿ ನಡೆದ ಚುನಾವಣೆಯ ಮತಯಂತ್ರಗಳನ್ನು ಬಾಕ್ಸ್ ನಲ್ಲಿ ಹಾಕಿ ಟ್ರೆಸರಿಯಲ್ಲಿ ಇರಿಸಲಾಗಿದೆ. ಫೆ. 28ರಂದು ಬೆಳಗ್ಗೆ 6:30ಕ್ಕೆ ಟ್ರಸರಿಯಿಂದ ಮತಯಂತ್ರಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅಥವಾ ಏಜೆಂಟ್ಗಳ ಸಮ್ಮುಖದಲ್ಲಿ ಮರುಮತ ಎಣಿಕೆ ಕೇಂದ್ರಕ್ಕೆ ಬಿಗಿಬಂದೋಬಸ್ ನಲ್ಲಿ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದರು.

    ಮತ ಎಣಿಕೆಗೆ ಮೂರು ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಎರಡು ಟೇಬಲ್ ಗಳಲ್ಲಿ ಮತ ಎಣಿಕೆ ನಡೆದರೆ ಇನ್ನೊಂದು ಟೇಬಲ್ ರಿಟರ್ನಿಂಗ್ ಆಫೀಸರ್ ನಿರ್ವಹಿಸಲಿದ್ದಾರೆ. ಜಿಲ್ಲೆಯ ಇಬ್ಬರು ಎಸಿಗಳನ್ನು ಸೂಪರ್ವೈಸರ್ಗಳನ್ನಾಗಿ ಹಾಗೂ ಇಬ್ಬರು ತಹಸೀಲ್ದಾರ್ಗಳನ್ನು ಅವರಿಗೆ ಸಹಾಯಕರನ್ನಾಗಿ ನೇಮಿಸಲಾಗಿದೆ ಎಂದರು.

    ಇನ್ನು ಮರುಮತ ಎಣಿಕೆಯನ್ನು ಸೂಕ್ಷ್ಮವಾಗಿ ನಿರ್ವಹಿಸುವ ಉದ್ದೇಶದಿಂದ ಚುನಾವಣಾ ಆಯೋಗ ಮೈಕ್ರೋ ಅಬ್ಸರ್ವರ್ ರನ್ನಾಗಿ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರನ್ನು ನೇಮಿಸಿದೆ. ಉಜ್ವಲ್ ಕುಮಾರ್ ಘೋಷ್ ಅವರು ಬುಧವಾರವೇ ಚಿಕ್ಕಮಗಳೂರಿಗೆ ಆಗಮಿಸಿ ಎಲ್ಲಾ ಸಿದ್ಧತೆ ಗಮನಿಸುವ ಜೊತೆಗೆ ಅಗತ್ಯ ಮಾಹಿತಿಯನ್ನು ಪಡೆದಿದ್ದಾರೆ ಎಂದು ಹೇಳಿದರು.

    ಪರಿಷತ್ ಚುನಾವಣೆಯ ಮರುಮತ ಎಣಿಕೆಯನ್ನು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ 3 ಕ್ಯಾಮರಾ ಗಳನ್ನು ಅಳವಡಿಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ಮೀನಾ ನಾಗರಾಜ್ ತಿಳಿಸಿದರು.
    ಮರುಮತ ಎಣಿಕೆ ಕೊಠಡಿಯಲ್ಲಿ ಎರಡು ಸ್ಟ್ಯಾಂಡಿಂಗ್ ಕ್ಯಾಮರಾ ಹಾಗೂ ಒಂದು ಮೂವಿ ಕ್ಯಾಮೆರಾ ಮೂಲಕ ಇಡೀ ಮರು ಮತ ಎಣಿಕೆ ಪ್ರಕ್ರಿಯೆಯನ್ನು ರೆಕಾರ್ಡ್ ಮಾಡಲಾಗುವುದು. ಬಳಿಕ ರೆಕಾರ್ಡಿಂಗ್ ಅನ್ನು ಸೀಲ್ಡ್ ಕವರಿನಲ್ಲಿ ಚುನಾವಣಾ ಆಯೋಗದ ಮೂಲಕ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗಳಿಗೆ ಸಲ್ಲಿಕೆ ಮಾಡಲಾಗುವುದು ಎಂದು ವಿವರಿಸಿದರು.

    ಗುರುವಾರ ಪರಿಷತ್ ಚುನಾವಣೆಯ ಮರುಮತ ಎಣಿಕೆ ನಡೆಯಲಿದ್ದು ಮರುಮತ ಎಣಿಕೆಯ ಸಂಪೂರ್ಣ ವಿವರವನ್ನು ಹಾಗೂ ಮತ ಎಣಿಕೆಯ ವಿಡಿಯೋ ಚಿತ್ರೀಕರಣವನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗದ ಮೂಲಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗಳಿಗೆ ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಿದರು.

    ಗುರುವಾರ ಮತ ಎಣಿಕೆ ನಡೆದರೂ ಫಲಿತಾಂಶ ಪ್ರಕರಣ ಮಾಡುವಂತಿಲ್ಲ. ಹೀಗಾಗಿ ನ್ಯಾಯಾಲಯಗಳ ಆದೇಶದಂತೆ ನ್ಯಾಯಾಲಯಗಳಿಗೆ ಮುಚ್ಚಿದ ಲಕೋಟೆಯಲ್ಲಿ ಸಂಪೂರ್ಣ ವಿವರ ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಿದರು.

    ಗುರುವಾರ ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ಪರಿಷತ್ ಚುನಾವಣೆಯ ಮರುಮತ ಎಣಿಕೆ ಕಾರ್ಯ ನಡೆಯುವ ಹಿನ್ನೆಲೆಯಲ್ಲಿ ಕಾಲೇಜು ಆವರಣದಲ್ಲಿ ಹಾಗೂ ನಗರಾಧ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ಎಸ್ ಪಿ ಡಾ.ವಿಕ್ರಮ ಅಮಟೆ ತಿಳಿಸಿದರು.

    ಐ ಡಿ ಎಸ್ ಜಿ ಕಾಲೇಜಿನ ಆವರಣದಲ್ಲಿ ನಾಲ್ಕು ಕೆ ಎಸ್ ಆರ್ ಪಿ ತುಕಡಿಗಳು ಹಾಗೂ 300 ಪೋಲಿಸ್ ಸಿಬ್ಬಂದಿ ನಿಯೋಜಿಸಲಾಗುವುದು. ಇದಲ್ಲದೆ ನಗರಾಧ್ಯಂತವೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಇದಲ್ಲದೆ ಕಾಲೇಜಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮರುಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಐಡಿ ಕಾರ್ಡ್ ಇದ್ದ ಸಿಬ್ಬಂದಿ, ಚುನಾವಣಾ ಅಭ್ಯರ್ಥಿಗಳು ಹಾಗೂ ಗುರುತಿನ ಪತ್ರ ಹೊಂದಿರುವ ಕೌಂಟಿಂಗ್ ಏಜೆಂಟ್ ಗಳನ್ನು ಮಾತ್ರ ಮತ ಎಣಿಕೆ ಕೇಂದ್ರದೊಳಗೆ ಬಿಡಲಾಗುವುದು. ಉಳಿದಂತೆ ಎಲ್ಲರಿಗೂ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.

    Legislative election vote recount today

  • electricity bill:ಆಲ್ದೂರು ರೈತನಿಗೆ ೩.೨೦ ಲಕ್ಷ ರೂ ವಿದ್ಯುತ್ ಬಿಲ್

    electricity bill:ಆಲ್ದೂರು ರೈತನಿಗೆ ೩.೨೦ ಲಕ್ಷ ರೂ ವಿದ್ಯುತ್ ಬಿಲ್

    ಚಿಕ್ಕಮಗಳೂರು: ಜಿಲ್ಲೆಯ ರೈತರೊಬ್ಬರಿಗೆ ಕಳೆದ ೧೩ ವರ್ಷಗಳ ಬಳಿಕ ಬರೋಬ್ಬರಿ ಮೂರು ಲಕ್ಷ ಇಪ್ಪತ್ತು ಸಾವಿರ ರೂ. ವಿದ್ಯುತ್ ಬಿಲ್ ಬಂದಿದ್ದು, ಇಲಾಖೆಯ ವಿರುದ್ಧ ರೈತ ಆಕ್ರೋಶ ಹೊರ ಹಾಕಿದ್ದಾನೆ.

    ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದಿದ್ದು, ತಾಲೂಕಿನ ಆಲ್ದೂರು ಸಮೀಪದ ವಿಕ್ಕರಣೆ ಗ್ರಾಣದ ರೈತ ಉಮೇಶ್ ಎಂಬುವರಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಬಾರೀ ಮೊತ್ತದ ಬಿಲ್ ನೀಡಲಾಗಿದೆ.

    ರೈತ ಉಮೇಶ್ ಜಮೀನಿನಲ್ಲಿ ಅಡಿಕೆ, ಕಾಫಿ ಬೆಳೆಗಳನ್ನು ಬೆಳೆಯುತ್ತಿದ್ದು ನೀರು ಹಾಯಿಸಲು ೧೦ ಎಚ್.ಪಿ. ಪಂಪ್‌ಸೆಟ್ ಆಳ ವಡಿಸಿ ತೋಟಕ್ಕೆ ನೀರು ಹಾಯಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ| ಬಂಗಾರಪ್ಪ ಅವರ ಕಾಲದಿಂದಲೂ ೧೦ ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ.

    ಆದರೆ, ಈಗ ಏಕೆ ವಿದ್ಯುತ್ ಬಿಲ್ ಕಟ್ಟಿ ಎಂದು ನೋಟಿಸ್ ಕಳಿಸಿ ದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೇ ಅಧಿಕಾರಿಗಳು ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಇಲ್ಲವೆಂದು ಉತ್ತರಿಸು ತ್ತಾರೆಂದು ತಿಳಿಸಿದ್ದಾರೆ.

    ಅಧಿಕಾರಿಗಳ ಈ ನಡೆ ಕಾಫಿ ಬೆಳೆಗಾರರ ಕಂಗೆಣ್ಣಿಗೆ ಗುರಿಯಾಗಿದ್ದು, ೧೩ವರ್ಷಗಳ ಬಳಿಕ ಮೂರು ಲಕ್ಷ ಇಪ್ಪತ್ತು ಸಾವಿರ ರೂ. ವಿದ್ಯುತ್ ಬಿಲನ್ನು ೧೫ದಿನಗಳಲ್ಲಿ ಪಾವತಿ ಮಾಡುವಂತೆ ನೋಟಿಸ್ ನೀಡಿದ್ದು. ಹಣ ಪಾವತಿಸದಿದ್ದರೇ ವಿದ್ಯುತ್ ಸಂಪರ್ಕ ಕಟ್ ಮಾಡುತ್ತೇವೆಂದು ತಿಳಿಸಿದ್ದು ಅಧಿಕಾರಿಗಳ ಈ ನಡೆಗೆ ರೈತ ಉಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Aldur farmer gets Rs 3.20 lakh electricity bill

  • children’s education:ಮೂಲಸೌಲಭ್ಯ ಕಲ್ಪಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು

    children’s education:ಮೂಲಸೌಲಭ್ಯ ಕಲ್ಪಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು

    ಚಿಕ್ಕಮಗಳೂರು:  ಶಾಲಾ ಮಕ್ಕಳಿಗೆ ರಾಜ್ಯಸರ್ಕಾರ ಬಿಸಿಯೂಟ, ಪಠ್ಯಪುಸ್ತಕ, ಸಮ ವಸ್ತ್ರ, ವಿದ್ಯಾರ್ಥಿವೇತನ ಸೇರಿದಂತೆ ಮೂಲಭೂತ ಸೌಲಭ್ಯವನ್ನು ಒದಗಿಸಿ ಸಂಪೂರ್ಣ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುತ್ತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ಶಾಂತಿನಗರದಲ್ಲಿ ಪಿಎಂಶ್ರೀ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರ ಗತಿ ಮಕ್ಕಳ ಸ್ನೇಹ ಸಮ್ಮೇಳನ ಹಾಗೂ ಚಿಣ್ಣರ ವೈಭವ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ಉದ್ಘಾ ಟಿಸಿ ಅವರು ಮಾತನಾಡಿದರು.

    ಖಾಸಗೀ ಶಾಲೆಗಳ ಅಬ್ಬರದ ನಡುವೆಯು ಶಾಂತಿನಗರದ ಶಾಲೆಗೆ ಸುಮಾರು ೧೬೦ಕ್ಕೂ ಹೆಚ್ಚು ಮಕ್ಕಳು ದಾಖಲಾಗಿರುವುದು ಹೆಮ್ಮೆಯ ಸಂಗತಿ ಎಂದ ಅವರು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳೆಂಬ ಕೀಳರಿಮೆ ಹೊಂದಿರದೇ, ಪಠ್ಯದ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಶಾಲೆಗೆ ಕೀರ್ತಿ ತರ ಬೇಕು ಎಂದರು.

    ವಿದ್ಯೆ ಬದುಕು ಅಥವಾ ನೌಕರಿಗಷ್ಟೇ ಸೀಮಿತವಾಗಬಾರದು. ಸಂಸ್ಕಾರಯುತ ಜೀವನ ಹಾಗೂ ಸಾ ಮಾಜಿಕ ಕಳಕಳಿಯಿಂದ ಕೂಡಿರಬೇಕು. ಮಕ್ಕಳಿಗೆ ಆಸ್ತಿ, ಅಂತಸ್ತು ಸಂಪಾದಿಸಿದರೆ, ಇನ್ನೊಬ್ಬರು ದೋಚ ಬಹುದು. ಆದರೆ ನೈತಿಕ ಶಿಕ್ಷಣ, ಗುರುಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಸಿಕೊಟ್ಟರೆ ಶಾಶ್ವತವಾಗಿ ಬೇ ರೂರಲಿದೆ ಎಂದರು.

    ಶಾಂತಿನಗರ ಸುತ್ತಮುತ್ತಲು ಅತಿಹೆಚ್ಚು ಸಂಖ್ಯೆಯಲ್ಲಿ ಕೂಲಿಕಾರ್ಮಿಕರು ವಾಸಿಸುತ್ತಿರುವ ಹಿನ್ನೆಲೆ ಸರಿ ಯಾಗಿ ಹಕ್ಕುಪತ್ರ ದೊರೆತಿಲ್ಲ. ಕೆಲವರಿಗೆ ಹಕ್ಕುಪತ್ರ ದೊರೆತರೂ ಖಾತೆಯಾಗಿಲ್ಲ. ಈ ಬಗ್ಗೆ ಸ್ಥಳೀಯ ನಗರ ಸಭಾ ಸದಸ್ಯರು ಗಮನಕ್ಕೆ ತಂದಿದ್ದು ಸದ್ಯದಲ್ಲೇ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

    ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಅ ಭ್ಯಾಸಿದಂತೆ ಅನೇಕ ವಿದ್ಯಾರ್ಥಿಗಳು ದೇಶದ ಉನ್ನತ ಸ್ಥಾನದಲ್ಲಿದ್ದಾರೆ. ಹೀಗಾಗಿ ಮಕ್ಕಳು ಅಂತಿಮ ಪರೀಕ್ಷೆ ಎದುರಾಗುವ ಹಿನ್ನೆಲೆ ಹೆಚ್ಚು ವಿದ್ಯಾಭ್ಯಾಸದ ಕಡೆ ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

    ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಗೆ ಪ್ರಧಾನ ಮಂತ್ರಿ ಯೋಜನೆಯಡಿ ಪೂರ್ವ ಪ್ರಾಥಮಿಕ ಶಾಲೆ ಆರಂಭಗೊಂಡು ಪೀಠೋಪಕರಣ, ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಗ್ರಂಥಾಲಯ ನಿರ್ಮಿಸಲು ಕೊಠಡಿ ಮಂಜೂರಾಗಿದೆ. ಶಾಲೆಯಲ್ಲಿ ಬಾಲಕಿಯರ ಶೌಚಾಲ ಯ ಕೊರತೆಯಿರುವ ಕಾರಣ ಶಾಸಕರು ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

    ಇದೇ ವೇಳೆ ಶಾಲಾ ಮಕ್ಕಳು, ಪಾಲಕರಿಗೆ ಏರ್ಪಡಿಸಿದ್ಧ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

    ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಮಣಿಕಂಠ, ಮುನೀರ್ ಅಹ್ಮದ್, ಸಿಡಿಎ ಸದಸ್ಯೆ ಗುಣ ವತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ವಸಂತ್‌ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷೆ ತಬಸುಮ್, ಸದಸ್ಯರುಗಳು, ದಾನಿಗಳು ಸೇರಿದಂತೆ ಮತ್ತಿತರರಿದ್ದರು.

    Facilitate children’s education by providing infrastructure

  • Taluk Kannada Sahitya Parishad:ಕುವೆಂಪು ಜನಿಸಿದ ಜಿಲ್ಲೆಯಲ್ಲಿ ಕನ್ನಡ ಕಂಪು ಹೆಚ್ಚಿಸಿ

    Taluk Kannada Sahitya Parishad:ಕುವೆಂಪು ಜನಿಸಿದ ಜಿಲ್ಲೆಯಲ್ಲಿ ಕನ್ನಡ ಕಂಪು ಹೆಚ್ಚಿಸಿ

    ಚಿಕ್ಕಮಗಳೂರು: – ಸಾಹಿತ್ಯದ ಲೋಕದ ದಿಗ್ಗಜ ಕುವೆಂಪು ಜನಿಸಿದ ಜಿಲ್ಲೆಯಲ್ಲಿ ಕನ್ನಡ ದ ತೇರನ್ನು ಒಂದಾಗಿ ಎಳೆದು, ಮುಂದಿನ ಪೀಳಿಗೆಗೆ ಭಾಷಾ ಸೊಗಡನ್ನು ಕೊಂಡೊಯ್ಯುವ ಮಹತ್ತರ ಜ ವಾಬ್ದಾರಿ ಪ್ರತಿಯೊಬ್ಬರು ಹೊರಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೇವಾದೀಕ್ಷಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ದೇಶದಲ್ಲಿ ಹಲವಾರು ಭಾಷೆಗಳಿವೆ. ಅವುಗಳಲ್ಲಿ ಅತ್ಯಂತ ಸುಂದರವಾದ ಭಾಷೆ ಕನ್ನಡ. ಸುಲಭವಾಗಿ ಕಲಿತುಕೊಳ್ಳಲು, ಅರ್ಥಮಾಡಿಕೊಳ್ಳಲು ಪೂರಕ ಎಂದ ಅವರು ಬದುಕು ಅಥವಾ ವೃತ್ತಿಗನುಸಾರ ಅನ್ಯ ಭಾ ಷೆ ಕಲಿಯುವುದು ತಪ್ಪಲ್ಲ. ಆದರೆ ಮಾತೃಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಅತಿಮುಖ್ಯ ಎಂದರು.

    ಮಾತೃಭಾಷೆ ಕನ್ನಡಕ್ಕೆ ಧಕ್ಕೆಯುಂಟಾದಲ್ಲಿ ಹೊಂದಾಣಿಕೆ ಪ್ರಶ್ನೆ ಇರಬಾರದು. ನ್ಯಾಯಬದ್ಧ ಹೋರಾ ಟಕ್ಕೆ ಎಲ್ಲರೂ ಸಜ್ಜಾಗಬೇಕು. ಜೊತೆಗೆ ಕನ್ನಡಪರ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡು ಭಾ ಷೆಯ ಪರಿಮಳವನ್ನು ಎಲ್ಲೆಡೆ ಹಬ್ಬಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

    ಕಸಾಪದಲ್ಲಿ ಅಜ್ಜಂಪುರ ಸೂರಿ, ಚಂದ್ರಯ್ಯನಾಯ್ಡು ಕಾಲಘಟ್ಟದಲ್ಲಿ ಅನೇಕ ಕಾರ್ಯಕ್ರಮಗಳು ಹಮ್ಮಿ ಕೊಂಡು ಭಾಷೆಯ ಸಂಸ್ಕೃತಿ ಸಕ್ರೀಯವಾಗಿ ಪರಿಚಯಿಸಿದ್ದರು. ಆದರೀಗ ಕನ್ನಡ ಉಳಿವಿಗಾಗಿ ಹೋರಾಟ ಮಾಡುತ್ತಿರುವುದು ವಿಷಾಧನೀಯ. ಹೀಗಾಗಿ ಕನ್ನಡಿಗರು ಎದೆಗುದದೇ ಹಿರಿಯ ಮಾರ್ಗದರ್ಶನದಲ್ಲಿ ಸಾ ಗಬೇಕಿದೆ ಎಂದರು.

    ಆಧುನಿಕತೆ ಬೆಳೆದಂತೆ ಮಕ್ಕಳು ಕೂಡಾ ಅಪ್ಪ-ಅಮ್ಮ ಎನ್ನುವ ಬದಲು, ಮಮ್ಮಿ-ಡ್ಯಾಡಿ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ. ಆಟೋಟ ಸ್ಪರ್ಧೆಗಳಲ್ಲಿ ಮಕ್ಕಳು ಎಡವಿ ಬಿದ್ದರೆ, ತಕ್ಷಣವೇ ಬಾಯಿಗೆ ಕನ್ನಡದ ಅಮ್ಮ ಎನ್ನುವ ಪದ ಬರಲಿದೆ. ಹೀಗಾಗಿ ಆಂಗ್ಲವ್ಯಾಮೋಹಕ್ಕೆ ಒಳಗಾಗದೇ ಭಾಷೆಯನ್ನು ಉಸಿರಾಗಿಸಿಕೊಳ್ಳಬೇಕು ಎಂದು ತಿಳಿಸಿದರು.

    ಸಂಸ್ಕೃತಿ ಚಿಂತಕ ಡಾ|| ಜೆ.ಪಿ.ಕೃಷ್ಣೇಗೌಡ ಮಾತನಾಡಿ ಎರಡು ಸಾವಿರ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ವಿಶೇಷತನವಿದೆ. ನಾಡಿನ ಖ್ಯಾತ ಕವಿಗಳು, ಸಾಹಿತಿಗಳ ಭವ್ಯ ಕೃತಿಗಳಿಗೆ ಅತಿಹೆಚ್ಚು ಜ್ಞಾನಪೀಠ ಪ್ರಶ ಸ್ತಿ ನಾಡಿಗೆ ಒಲಿದು ಬಂದಿದೆ. ಈ ಪುಣ್ಯಭೂಮಿಯಲ್ಲಿ ಜನಿಸಿರುವ ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ಗರಿ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ನೂತನ ಅಧ್ಯಕ್ಷರು ಕನ್ನಡಾಂಬೆಯ ಸೇವೆಯಲ್ಲಿ ತೊಡಗುವ ಮೂಲಕ ತಾಲ್ಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ಕನ್ನಡ ಕಾರ್ಯಕ್ರಮ ಹಮ್ಮಿಕೊಂಡು ಸಾಹಿತ್ಯಾಸಕ್ತರನ್ನು ಗುರುತಿಸಿ ವೇದಿಕೆಗೆ ಕರೆತರಬೇಕು ಎಂದು ಸೂಚಿ ಸಿದರು.

    ನಿಕಟಪೂರ್ವ ಅಧ್ಯಕ್ಷ ಬಿಸಲೇನಹಳ್ಳಿ ಸೋಮಶೇಖರ್ ಮಾತನಾಡಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಕನ್ನಡ ಕಟ್ಟುವ ಕಾಯಕದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ಅಲ್ಲದೇ ತಾಲ್ಲೂಕು ಮ ಟ್ಟದ ಸಮ್ಮೇಳನ ಹಮ್ಮಿಕೊಂಡು ಕವಿಗಳು, ಲೇಖಕರು, ಬರಹಗಾರರ ಒಂದೆಡೆ ಸೇರಿಸಿ ಯಶಸ್ವಿಗೊಳಿಸಿದ್ದೇ ನೆ ಎಂದರು.

    ತಾಲ್ಲೂಕು ಪದಾಧಿಕಾರಿಗಳು : ಮಾವಿನಕೆರೆ ದಯಾನಂದ್ (ಅಧ್ಯಕ್ಷ), ಹಳೇಬೀಡ ಬಸವರಾಜು (ಗೌ. ಕಾರ್ಯದರ್ಶಿ), ಆಶಾ ರಾಜು (ಕೋಶಾಧ್ಯಕ್ಷೆ), ಡಿ.ರಘು, ಹೆಚ್.ಸಿ.ಲಾವಣ್ಯ, ಕಾಂತರಾಜು, ಜೆ. ಸು ನಿಲ್, ಸಯ್ಯದ್ ತಾಜುದ್ದೀನ್ (ಸಹ ಕಾರ್ಯದರ್ಶಿ), ಡಾ.ಹೆಚ್.ಅಹ್ಮದ್ ಷರೀಫ್ (ಸಂಘಟನಾ ಕಾರ್‍ಯ ದರ್ಶಿ).

    ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಕೋಶಾಧ್ಯಕ್ಷ ಬಿ. ಪ್ರಕಾಶ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಹೆಚ್.ಕೆ.ವಿಜಯಲಕ್ಷ್ಮೀ, ಅಂಬಳೆ ಹೋಬಳಿ ಅಧ್ಯಕ್ಷೆ ಕೆ.ಜಿ.ಮಾಸ್ತೇಗೌಡ, ಖಾಂಡ್ಯ ಅಧ್ಯಕ್ಷ ಹುಣಸೇಹಳ್ಳಿ ರಾಜಪ್ಪಗೌಡ ಮತ್ತಿತರರು ಉಪಸ್ಥಿತರಿದ್ದರು.

    Taluk Kannada Sahitya Parishad Seva Deeksha Ceremony at Kannada Bhavan in the city

  • Basavatatva Convention:ಫೆ.೨೮-ಮಾ.೧ ಬಸವತತ್ವ ಸಮಾವೇಶ, ನೂತನ ಕಟ್ಟಡ ಉದ್ಘಾಟನೆ

    Basavatatva Convention:ಫೆ.೨೮-ಮಾ.೧ ಬಸವತತ್ವ ಸಮಾವೇಶ, ನೂತನ ಕಟ್ಟಡ ಉದ್ಘಾಟನೆ

    ಚಿಕ್ಕಮಗಳೂರು: ಬಸವತತ್ವದ ಪ್ರಚಾರವನ್ನೇ ಮುಖ್ಯ ಆಶಯದೊಂದಿಗೆ ನಗರದಲ್ಲಿ ಆರಂಭಗೊಂಡ ಶ್ರೀ ಬಸವತತ್ವ ಪೀಠ ಈಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದ್ದು, ಕಲ್ಯಾಣ ನಗರದ ಬಸವ ಮಂದಿರದಲ್ಲಿ ಸುಮಾರು ೩.೫೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ನೂತನ ಕಟ್ಟಡ ಉದ್ಘಾಟನೆ ಹಾಗೂ ಬಸವತತ್ವ ಸಮಾವೇಶ ಫೆ.೨೮ ಹಾಗೂ ಮಾ.೧ ರಂದು ನಡೆಯಲಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿಗಳು ಈ ವಿಷಯ ತಿಳಿಸಿ, ತಮ್ಮ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಂದ್ರಶೇಖರ ಮಹಾ ಸ್ವಾಮಿಗಳ ೧೭೦ ನೇ ಜಯಂತಿ ಮತ್ತು ಜಯಚಂದ್ರಶೇಖರ ಮಹಾಸ್ವಾಮಿಗಳ ೨೯ನೇ ಸಂಸ್ಮರಣೆ ಕಾರ್ಯಕ್ರಮ ಜರುಗಲಿದೆ ಸುಮಾರು ೧೫ ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

    ಫೆ.೨೮ ರಂದು ಸಂಜೆ ೬ ಗಂಟೆಗೆ ಬಸವತತ್ವ ಸಮಾವೇಶ ಶಿವಾನುಭವಗೋಷ್ಠಿ-೪೩ ನಡೆಯಲಿದ್ದು, ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಅವರನ್ನು ಅಭಿನಂದಿಸಲಾಗುವುದು ಎಂದರು.

    ಕಡೂರು ಯಳನಾಡು ಸಂಸ್ಥಾನ ಮಠದ ಶ್ರೀ ಜ್ಞಾನಪ್ರಭು ದೇಶಿಕೇಂದ್ರ ಸ್ವಾಮೀಜಿ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಜಡೆ ಸಂಸ್ಥಾನ ಮಠದ ಗುರುಮಟ್ಕಲ್‌ನ ಖಾಸಾ ಮಠ, ಶಂಕರದೇವರ ಮಠ, ಕೋಡಿಹಳ್ಳಿ ಭೃಗೀಶ್ವರ ಮಠ, ಹಾಸ ಮುಕಂದೂರು ಮಠ, ಸಿಂದಿಗೆರೆ ಕರಡಿಗವಿ ಮಠ, ಅಥಣಿಯ ಗಚ್ಚಿನ ಮಠದ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸುವರು ಎಂದು ಮಾಹಿತಿ ನೀಡಿದರು.

    ಇದೇ ಸಂದರ್ಭದಲ್ಲಿ ಡಾ. ಜಯರಾಜಶೇಖರ್‌ರವರ ಗಮಕ ರೂಪಕಗಳು ಎಂಬ ಪುಸ್ತಕವನ್ನು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬಿಡುಗಡೆ ಮಾಡುವರು. ದಾಕ್ಷಾಯಣಿ ಜಯದೇವಪ್ಪ ಅವರ ದಾಕ್ಷಾಯಣಿ ವಚನಗಳು ಕೃತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಿಡುಗಡೆ ಮಾಡುವರು. ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ, ಕಾರ್ಗಿಲ್ ಯೋಧ ನವೀನ್ ನಾಗಪ್ಪ, ಐಕ್ಯಾಟ್ ಸಂಸ್ಥಾಪಕಿ ಡಾ. ಶಾಲಿನಿ ನಲೋಡ ಇವರುಗಳನ್ನು ಸನ್ಮಾನಿಸಲಾಗುವುದೆಂದರು.

    ಮುಖ್ಯ ಅತಿಥಿಗಳಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಡಿ.ಎಸ್. ಸುರೇಶ್, ಎಂ.ಕೆ. ಪ್ರಾಣೇಶ್, ಎಸ್. ರುದ್ರೇಗೌಡ, ಗಾಯಿತ್ರಿ ಶಾಂತೇಗೌಡ, ಮತ್ತಿತರರು ಪಾಲ್ಗೊಳ್ಳುವರು ಎಂದು ಹೇಳಿದರು. ಮಾ.೧ ರಂದು ಬೆಳಗ್ಗೆ ೧೦ ಗಂಟೆಗೆ ಮಠದ ನೂತನ ಕಟ್ಟಡ ಉದ್ಘಾಟನೆಯನ್ನು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ೧೧೦೮ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ವಹಿಸಲಿದ್ದಾರೆ ಎಂದರು.

    ಇದೇ ದಿನ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮಿಯವರ ಅಲ್ಲಮ ಪ್ರಭುದೇವರ ಕುರಿತ ಉಪನ್ಯಾಸಗಳ ಸಂಗ್ರಹ ಕೃತಿ ಬಿಡುಗಡೆ ಮಾಡುವರು. ಅಲ್ಲಮ ಅನುಸಂಧಾನ ಕೃತಿಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಿಡುಗಡೆ ಮಾಡುವರು. ಐಸಿರಿ ಪತ್ರಿಕೆ ಸಂಪಾದಕ ರೋಹನ್ ಭಾರ್ಗವಪುರಿ ಅವರ ಲತೆಯ ರೋಹಣ ಕೃತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಬಿಡುಗಡೆ ಮಾಡಲಿದ್ದು, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ವಿಶೇಷ ಉಪನ್ಯಾಸ ನೀಡುವರು ಎಂದು ಹೇಳಿದರು.

    ಶಾಸಕರು ಹಾಗೂ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರೂ ಆದ ಹೆಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಶಾಸಕರಾದ ನಯನ ಮೋಟಮ್ಮ, ಎಸ್.ಎಲ್. ಭೋಜೇಗೌಡ, ಡಾ. ಧನಂಜಯ ಸರ್ಜಿ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

    ಕಾರ್ಯಕ್ರಮಕ್ಕೂ ಮುನ್ನ ಫೆ.೨೮ ರಂದು ಬೆಳಗ್ಗೆ ೮.೩೦ ಕ್ಕೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಇಬ್ಬರು ಶ್ರೀಗಳ ಉತ್ಸವ ಮೆರವಣಿಗೆ ಆದಿಚುಂಚನಗಿರಿ ವೃತ್ತದಿಂದ ಆರಂಭಗೊಂಡು ಬಸವೇಶ್ವರ ರಸ್ತೆಯ ಮೂಲಕ ಮಠವನ್ನು ತಲುಪಲಿದೆ. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಮಠದ ಸದ್ಭಕ್ತರು, ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

    ಮಠದ ಇತಿಹಾಸ

    ೧೯೭೬ ರಲ್ಲಿ ಶ್ರೀ ಜಯಚಂದ್ರ ಶೇಖರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸ್ಥಾಪನೆಯಾದ ಶ್ರೀ ಬಸವತತ್ವ ಪೀಠವು ೨೦೨೬ ಕ್ಕೆ ಸುವರ್ಣ ಮಹೋತ್ಸವಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಮಠದ ಪೀಠಾಧ್ಯಕ್ಷರಾದ ಡಾ. ಬಸವಮರುಳಸಿದ್ದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ವೈಚಾರಿಕ ನೆಲೆಯಾಗ ಪೀಠ ರೂಪುಗೊಂಡಿದೆ. ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಬಸವತತ್ವ ಅಭಿಮಾನಿಗಳ ಶ್ರದ್ಧಾಕೇಂದ್ರವಾಗಿದೆ. ಬಸವಾಭಿಮಾನಿಗಳ ಆಶಯದಂತೆ ಸುಸಜ್ಜಿತ ಬಸವಮಂದಿರ ನಿರ್ಮಾಣವಾಗಿದ್ದು, ಎಲ್ಲರ ತನು-ಮನ-ಧನದ ಸಹಾಯದೊಂದಿಗೆ ಮುಂದಿನ ದಿನಗಳಲ್ಲಿ ಈ ಮಂದಿರ ನಾಡಿನಲ್ಲಿ ಬಸವತತ್ವ ಹಾಗೂ ಶರಣ ಚಳುವಳಿಯ ಆಶಯವನ್ನು ಮುಂದುವರೆಸಿಕೊಂಡು ಹೋಗುವ ಗುರಿ ಹೊಂದಿದ್ದು ಧಾರ್ಮಿಕ ಚಟುವಟಿಕೆಗಳಿಗೆ ಪೂರಕವಾಗಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮನಸ್ಸುಗಳ ನೆಲೆಯಾಗುವ ಉದ್ದೇಶ ಹೊಂದಿದೆ.

    ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ, ವಿವಿಧ ಪಕ್ಷಗಳ ಮುಖಂಡರಾದ ಎಂ.ಎಸ್. ನಿರಂಜನ್, ಹೆಚ್.ಸಿ. ಕಲ್ಮರುಡಪ್ಪ, ಸೊಮಶೇಖರ್, ಮಹಡಿಮನೆ ಸತೀಶ್, ಚಿದಾನಂದ್, ಸದಾಶಿವ, ಜಗದೀಶ್ ಬಾಬು ಹಾಗೂ ಟ್ರಸ್ಟಿ ಬಿ. ತಿಪ್ಪೇರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

    Feb. 28-Mar. 1 Basavatatva Convention inauguration of new building

  • Vajpayee is a model politician:ಮಾಜಿ ಪ್ರಧಾನಿ ವಾಜಪೇಯಿ ಮಾದರಿ ರಾಜಕಾರಣಿ

    Vajpayee is a model politician:ಮಾಜಿ ಪ್ರಧಾನಿ ವಾಜಪೇಯಿ ಮಾದರಿ ರಾಜಕಾರಣಿ

    ಚಿಕ್ಕಮಗಳೂರು: : ಅಜಾತಶತ್ರು, ಜನಪರ ಆಡಳಿತಗಾರ, ಸ್ನೇಹಜೀವಿ, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪು ಸದಾ ಕಾಲ ಈ ರಾಷ್ಟ್ರಕ್ಕೆ ಇರುತ್ತದೆ, ಅವರೊಬ್ಬ ಮಾದರಿ ರಾಜಕಾರಣಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಿಸಿದರು.

    ಅವರು ಇಂದು ತಮ್ಮ ನಿವಾಸದಲ್ಲಿ ಜಿಲ್ಲಾ ಬಿಜೆಪಿ ಏರ್ಪಡಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತದಿನೋತ್ಸವ ಅಂಗವಾಗಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

    ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಚಿಕ್ಕಮಗಳೂರಿಗೂ ಹಳೇ ಸಂಬಂಧ ಇದೆ, ತುರ್ತು ಪರಿಸ್ಥಿತಿ ಬಳಿಕ ನಡೆದ ಉಪಚುನಾವಣೆ ಸಂದರ್ಭದಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉದ್ದಗಲಕ್ಕೆ ಸಂಚರಿಸಿ ಕಾರ್ಯಕರ್ತರನ್ನು ಹುರಿದುಂಬಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ವೀರೇಂದ್ರ ಪಾಟೀಲ್ ಪರವಾಗಿ ಪ್ರಚಾರ ಮಾಡಿದ್ದರು ಎಂದು ಹೇಳಿದರು.

    ಚಿಕ್ಕಮಗಳೂರು ನಗರಕ್ಕಾಗಮಿಸಿದ್ದಾಗ ವಿಠಲ್ ರಾವ್ ಜೊತೆ ಹೋಗಿ ಭೇಟಿಮಾಡಿರುವುದಾಗಿ ಹೇಳಿದ ಅವರು, ಆಲ್ದೂರಿಗೂ ಬಂದು ೧೯೯೦-೯೧ ರ ಲೋಕಸಭಾ ಚುನಾವಣೆ ನಡೆಯುವ ಮುನ್ನವೇ ಅಟಲ್ ಜೀ ಅವರನ್ನು ಆಹ್ವಾನಿಸಿ ಎ.ಸಿ. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಅಭಿನಂದನಾ ಸಮಿತಿ ಮೂಲಕ ನಿಧಿ ಸಂಗ್ರಹ ಮಾಡಿ ಐಬಿಯಲ್ಲಿ ಭೇಟಿಮಾಡಿ ಮೊದಲ ಬಾರಿಗೆ ಫೋಟೋ ತೆಗೆಸಿಕೊಂಡಾಗ ಬೂತ್ ಮಟ್ಟದ ಅಧ್ಯಕ್ಷನಾಗಿದ್ದೆ ಎಂದು ತಿಳಿಸಿದರು.

    ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಿ ಈ ಸಂದರ್ಭದಲ್ಲಿ ನಿಧಿಯನ್ನು ಸಮರ್ಪಿಸಲಾಯಿತು. ೧೯೯೬ ರಲ್ಲಿ ೧೩ ದಿನಗಳ ಕಾಲ ಪ್ರಧಾನ ಮಂತ್ರಿಯಾಗಿ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಭಾವನಾತ್ಮಕವಾಗಿ ಒಂದು ವಿಚಾರ ಹೇಳಿದರು. ‘ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದು ರಾಜಕೀಯ ವಿಪ್ಲವದ ಬಗ್ಗೆ ಹೇಳಿದ್ದನ್ನು ಸ್ಮರಿಸಿದರು.

    ೧೯೯೮ ರಲ್ಲಿ ೧೩ ತಿಂಗಳ ಕಾಲ ಪ್ರಧಾನ ಮಂತ್ರಿಯಾಗಿ ಕೆಲಸ ಮಾಡಿದ ಅಟಲ್ ಜೀಯವರು ಆ ಸಂದರ್ಭದಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಡಿ.ಸಿ. ಶ್ರೀಕಂಠಪ್ಪ ಅವರನ್ನು ಆಯ್ಕೆಮಾಡಿ ಸಂಸತ್ತಿಗೆ ಕಳುಹಿಸಲಾಗಿತ್ತು. ೧೯೯೫-೯೬ ರಲ್ಲಿ ರಾಷ್ಟ್ರೀಯ ಅಧಿವೇಶನ ಮುಂಬೈನಲ್ಲಿ ನಡೆದಾಗ ಕೋಟೆ ರಂಗನಾಥ್, ದಿವಾಕರ್, ಲೋಕೇಶ್, ಸುಬ್ರಹ್ಮಣ್ಯ ತಾವೂ ಸೇರಿದಂತೆ ಭಾಗವಹಿಸಿದ್ದನ್ನು ನೆನಪಿಸಿಕೊಂಡರು.

    ಎಲ್.ಕೆ. ಅಡ್ವಾಣಿ ಅವರು ಬಿಜೆಪಿಯನ್ನು ಕಟ್ಟಿ ಬೆಳಸಿದ್ದಾರೆ. ಅವರೇ ಪ್ರಧಾನಿಯಾಗಬೇಕು ಎಂದು ಅಟಲ್ ಜೀ ಹೇಳಿದರು. ಅದಕ್ಕೆ ಅಡ್ವಾಣಿ ಅವರು ನೀವೇ ಪ್ರಧಾನಿಯಾಗಿ ಎಂದು ರಾಜಕೀಯವಾಗಿ ಜಗಳವಾಗಿ ಜಗಳವಾಡಿದ್ದರು, ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿ ನಮಗರಿವಿಲ್ಲದೇ ಕಣ್ಣಲ್ಲಿ ನೀರು ಬಂತು ಎಂಬುದನ್ನು ಸ್ಮರಿಸಿದರು.

    ದೂರದರ್ಶನ ವಾಹಿನಿ ಹೊರತುಪಡಿಸಿ ಇನ್ಯಾವುದೇ ವಾಹಿನಿಗಳು ಇರಲಿಲ್ಲ. ಈಗ ನೂರಾರು ಚಾನಲ್‌ಗಳು ಬರುತ್ತಿವೆ ಎಂಬುದಕ್ಕೆ ಅಟಲ್ ಜೀ ಪ್ರಮುಖ ಕಾರಣ. ದೇಶ ಮತ್ತು ಜನರನ್ನು ಜೋಡಿಸುವ ಮಹತ್ ಕಾರ್ಯಕ್ಕೆ ಸಾಕ್ಷಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಶಕ್ತಿ ತಂದವರು ವಾಜಪೇಯಿ ಎಂದು ಬಣ್ಣಿಸಿದರು.

    ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ. ಲಕ್ಷ್ಮಿ ಅಶ್ವಿನ್‌ಗೌಡ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರ ನೂರನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಪ್ರಸಕ್ತ ವರ್ಷ ವಿಶೇಷವಾಗಿ ಜನಮಾನಸದಲ್ಲಿ ಉಳಿಯುವಂತ ಕಾರ್ಯಕ್ರಮಗಳನ್ನು ರಾಜ್ಯ ಬಿಜೆಪಿ ಆಯೋಜಿಸಲು ನಿರ್ಧರಿಸಿದೆ ಎಂದರು.

    ಫೆ.೧೪ ರಿಂದ ಮಾ.೧೪ ರವರೆಗೆ ವಾಜಪೇಯಿ ಅವರೊಂದಿಗೆ ಒಡನಾಟ ಹೊಂದಿರುವವರ ಮನೆಗೆ ಹೋಗಿ ಸ್ಮರಣಿಕೆ ನೀಡುವ ಮೂಲಕ ಅವರನ್ನು ಸನ್ಮಾನಿಸಿ ಸಮಾಲೋಚನೆ ನಡೆಸಿ ಜನ್ಮ ಶತಮಾನೋತ್ಸವವನ್ನು ತುಂಬ ಅರ್ಥಗರ್ಭಿತವಾಗಿ ಮಾಡಲು ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಜಿಲ್ಲೆಯಲ್ಲಿ ೧೫ ಪ್ರಮುಖರನ್ನು ಆಯ್ಕೆಮಾಡಲಾಗಿದೆ. ವಿರಾಸತ್ ಸಮ್ಮೇಳನ ನಡೆಸಲು ಸಹ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಡೂರು ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ, ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ವರಾಜ್, ಮುಖಂಡರಾದ ಕೋಟೆ ರಂಗನಾಥ್, ಸಿ.ಹೆಚ್ ಲೋಕೇಶ್, ಕನಕರಾಜ್ ಅರಸ್, ಜಯವರ್ಧನ್, ಜಸಂತಅನಿಲ್ ಕುಮಾರ್, ಬಸವರಾಜ್, ಕುಮಾರ್, ಮಧು, ಸತೀಶ್ ಉಪಸ್ಥಿತರಿದ್ದರು.

    Former Prime Minister Vajpayee is a model politician

  • Kannada Sena protests:ಬಸ್ ನಿರ್ವಾಹಕನ ಮೇಲಿನ ದೌರ್ಜನ್ಯ ಖಂಡಿಸಿ ಕನ್ನಡಸೇನೆ ಪ್ರತಿಭಟನೆ

    Kannada Sena protests:ಬಸ್ ನಿರ್ವಾಹಕನ ಮೇಲಿನ ದೌರ್ಜನ್ಯ ಖಂಡಿಸಿ ಕನ್ನಡಸೇನೆ ಪ್ರತಿಭಟನೆ

    ಚಿಕ್ಕಮಗಳೂರು: ಬೆಳಗಾವಿಯ ಬಸ್ ನಿರ್ವಾಹಕನ ಮೇಲೆ ಮರಾಠಿಗರು ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಜಿಲ್ಲಾ ಕನ್ನಡಸೇನೆ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

    ಬಳಿಕ ಮಾತನಾಡಿದ ಕನ್ನಡಸೇನೆ ಅಧ್ಯಕ್ಷ ಪಿ.ಸಿ.ರಾಜೇಗೌಡ ವಿಶಾಲ ಹೃದಯ ಹೊಂದಿರುವ ಕನ್ನಡಿ ಗರು ಅನ್ಯ ಭಾಷಿಗರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ ಗಡಿ ಭಾಗದಲ್ಲಿ ಕೆಲವು ಕಿಡಿ ಗೇಡಿಗಳು ರಾಜ್ಯದ ಕಂಡೆಕ್ಟರ್ ಮೇಲೆ ಹಲ್ಲೆಗೆ ನಡೆಸಿರುವುದು ಖಂಡನೀಯ. ಕೂಡಲೇ ಅವರ ವಿರುದ್ಧ ಕಠಿ ಣ ಕ್ರಮ ಕೈಗೊಳ್ಳಬೇಕು ಎಂದರು.

    ಕರ್ನಾಟಕದಲ್ಲಿ ಕನ್ನಡಿಗರು ಸಾರ್ವಭೌಮ, ನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರು ಕನ್ನಡದಲ್ಲೇ ವ್ಯವ ಹರಿಸಬೇಕು. ಕನ್ನಡಿಗರಿಗೆ ಉದ್ಯೋಗವೆಂಬ ಆದೇಶ ಮಾಡಿದರೂ ಇದನ್ನೆ ಲೆಕ್ಕಸದೇ ಕೆಲವರು ಕನ್ನಡಿಗರ ಮೇಲೆ ಹೆಚ್ಚು ದೌರ್ಜನ್ಯಕ್ಕೆ ಮುಂದಾಗುತ್ತಿರುವುದು ನ್ಯಾಯಸಮಂಜಸವಲ್ಲ ಎಂದು ಹೇಳಿದರು.

    ನಾಡಿನ ಮತದಾರರ ಮೂಲಕ ಅಧಿಕಾರ ಹಿಡಿದು, ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಳಕರ್ ಅವರು ಕ ನ್ನಡಿಗರ ಪರವಾಗಿ ಕೈಜೋಡಿಸಿ, ಕಷ್ಟ-ಸುಖಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳದೇ, ಹಲ್ಲೆ ನಡೆಸಿರುವ ಮರಾಠಿಗರ ಬೆನ್ನೆಲುಬಾಗಿ ನಿಲ್ಲುವ ಮೂಲಕ ಕನ್ನಡಿಗರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

    ಕನ್ನಡಿಗನ ಮೇಲೆ ಹಲ್ಲೆ ನಡೆಸಿರುವ ಮರಾಠಿ ಪುಂಡರನ್ನು ಕೂಡಲೇ ಗಡಿಪಾರು ಮಾಡಬೇಕು. ಪ್ರಕರ ಣ ತಿರುಚಲು ಬಸ್ ನಿರ್ವಾಹಕನ ಮೇಲೆ ಪೋಕ್ಸೋ ಕೇಸು ದಾಖಲಿಸಿರುವುದು ಹಿಂಪಡೆದುಕೊಂಡು ನಿರ್ವಾಹಕನ ಪರವಾಗಿ ನ್ಯಾಯಬದ್ಧ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ರಾಜಕೀಯ ದೊಂಬರಾಟಕ್ಕೆ ಹೆಚ್ಚು ಕನ್ನಡಿಗರೇ ಬಲಿಯಾಗುತ್ತಿರುವುದು ಶೋಚನೀಯ. ಅಲ್ಪ ಸಂಖ್ಯೆಯ ಮರಾಠಿಗರ ಒಲೈಕೆಗಾಗಿ ಕೋ ಟ್ಯಾಂತರ ಕನ್ನಡಿಗರಿಗೆ ದ್ರೋಹವೆಸಗುತ್ತಿದೆ. ಕೂಡಲೇ ಒಲೈಕೆ ರಾಜಕಾರಣ ಕೈಬಿಟ್ಟು ರಾಜ್ಯದ ಪ್ರಜೆಗಳ ಪರ ವಾಗಿ ಕೈಜೋಡಿಸಬೇಕು ಎಂದರು.

    ನೆರೆರಾಜ್ಯದಿಂದ ಹಲವಾರು ಮಂದಿ ಕನ್ನಡ ನಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಮಾತೃಭಾಷೆ ಬೇ ರೆಯಾದರೂ ವ್ಯವಹಾರಿಕ ಭಾಷೆಯನ್ನು ಕನ್ನಡವಾಗಿ ಬಳಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಮ ಹಾರಾಷ್ಟ್ರದ ಗಡಿಯಲ್ಲಿ ದ್ವೇಷ ಭಾವನೆ ಕೆರಳಿಸುತ್ತಿರುವ ಕಿಡಿಕೇಡಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾ ಉಪಾಧ್ಯಕ್ಷ ಅನ್ವರ್, ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್, ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರುಗಳಾದ ಸತೀಶ್, ರೋಷನ್, ಶಿವಣ್ಣ, ನವೀನ್, ಡಿಂಪನ, ಪುಷ್ಪ, ಪಾಲಾಕ್ಷಿ, ಹೊನ್ನಪ್ಪ ಮತ್ತಿತರರು ಹಾಜರಿದ್ದರು.

    Kannada Sena protests against violence against bus driver

  • ಮಲೆನಾಡು ಗಿಡ್ಡ ಹಸುಗಳ ರಕ್ಷಣೆಗೆ ಆಗ್ರಹ

    ಮಲೆನಾಡು ಗಿಡ್ಡ ಹಸುಗಳ ರಕ್ಷಣೆಗೆ ಆಗ್ರಹ

    ಚಿಕ್ಕಮಗಳೂರು:  ಮಲೆನಾಡು ಗಿಡ್ಡ ಹಸುಗಳು ಸಂರಕ್ಷಣೆಗೆ ಶಾಶ್ವತ ಗೋಮಾಳ ಮೀಸಲಿಡಲು ಪಶುಸಂಗೋಪನಾ ಇಲಾಖೆ ಮುಂದಾಗಿರುವುದನ್ನು ಕೊಪ್ಪ ತಾಲ್ಲೂಕು ಹೇರೂರು ಕೆಮ್ಮಣ್ಣು ಶ್ರೀ ಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ ಸ್ವಾಗತಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕಳಸಾ ತಾಲ್ಲೂಕಿನ ಮಾವಿನಕೆರೆ ಗ್ರಾಮದ ಖ್ಯಾತನಮಕ್ಕಿ ಹುಲ್ಲುಗಾವಲು ಪ್ರದೇಶವನ್ನು ಮಲೆನಾಡು ಗಿಡ್ಡು ಹಸುಗಳ ಸಂರಕ್ಷಣೆಗೆ ಶಾಶ್ವತ ಗೋಮಾಳವನ್ನಾಗಿ ಮೀಸಲಿಡುವ ಜೊತೆಗೆ ಕ್ಷೀಣಿಸುವ ಹಂತದಲ್ಲಿರುವ ಗಿಡ್ಡ ಗೋತಳಿಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಬೇಕೆಂದು ಒತ್ತಾಯಿಸಿದರು.

    ಈ ಕಾರ್ಯಕ್ಕೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಜಿಲ್ಲಾಡಳಿತದ ವಿಶೇಷ ಪ್ರಯತ್ನದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

    ದೇಶದ ವಿಶಿಷ್ಟ ಗೋ ಸಂತತಿ ಮಲೆನಾಡು ಗಿಡ್ಡಗಳು ಕೇವಲ ಪಶ್ಚಿಮ ಘಟ್ಟ ಪ್ರದೇಶಗಳ ಹವಾಮಾನಕ್ಕೆ ಗಾಳಿ, ಚಳಿ, ಬಿಸಿಲಿಗೆ ಹೊಂದಿಕೊಂಡು ಬದುಕುವಂತಹವುಗಳಾಗಿದ್ದು, ಪ್ರಸ್ತುತ ಈ ತಳಿ ಮಾನ್ಯತೆಯೊಂದಿಗೆ ವಿಶಿಷ್ಟ ತಳಿಯ ಸಾಲಿನಲ್ಲಿದ್ದು, ಪಶ್ಚಿಮ ಘಟ್ಟಗಳ ಅತೀ ಹೆಚ್ಚು ಮಳೆ ಬೀಳುವ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಜಿಲ್ಲೆಯ ಕೆಲವು ಭಾಗ ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು, ಕಾರವಾರ ವ್ಯಾಪ್ತಿಯಲ್ಲಿ ಈ ತಳಿ ಇದ್ದು, ೧೫ ರಿಂದ ೨೫ ವರ್ಷದವರೆಗೂ ಗಟ್ಟಿಯಾಗಿ ಬದುಕಬಲ್ಲದು ಎಂದು ವಿವರಿಸಿದ್ದಾರೆ.

    ಮಲೆನಾಡಿನಲ್ಲಿ ಹಿಂದೆ ಕೊಟ್ಟಿಗೆಯಲ್ಲಿ ಹಸು ಇದ್ದರೆ ಶ್ರೀಮಂತ ಎಂದು ಕರೆಯಲಾಗುತ್ತಿತ್ತು. ಕೃಷಿ ಜಮೀನು ಹೊಂದಿರುವ ರೈತ ಈ ಮಲೆನಾಡು ಗಿಡ್ಡಗಳಿಲ್ಲದೆ ಕೃಷಿ ಚಟುವಟಿಕೆ ನಡೆಸಲಾಗುವುದಿಲ್ಲ ಎಂದು ಹೇಳಿದರು.

    ನೂರಾರು ಎಕರೆ ಗೋಮಾಳವನ್ನು ಮಲೆನಾಡು ಗಿಡ್ಡಗಳ ಮೇವಿಗಾಗಿಯೇ ಮೀಸಲಿದ್ದು, ಪ್ರಸ್ತುತ ಈ ಎಲ್ಲಾ ಪ್ರದೇಶ ಬಲಾಢ್ಯರ ಪಾಲಾಗಿರುವುದರಿಂದ ಮೇಯಲು ಜಾಗವಿಲ್ಲದೆ ಹಸಿವಿನಿಂದ ತತ್ತರಿಸಿ ಪ್ರಾಣ ಬಿಡುತ್ತಿವೆ. ಜೊತೆಗೆ ಮಾಂಸ ಮಾಫಿಯಾದ ಪಾಲಾಗುತ್ತಿವೆ ಎಂದು ತಿಳಿಸಿದರು.

    ಕಂಪನಿ ಎಸ್ಟೇಟ್‌ಗಳು ಹಾಗೂ ಮಾಲೀಕರ ಮಿತಿ ಮೀರಿದ ಕ್ರೌರ್ಯ ಕಾರ್ಮಿಕರ ರೂಪದಲ್ಲಿ ಕಳ್ಳ ಸಾಗಾಣಿಕೆ ಮಾಡುತ್ತಿರುವ ವಲಸೆ ರೋಹಿಂಗ್ಯಾಗಳ ಕ್ರೌರ್ಯಕ್ಕೆ ಅಳಿದುಳಿದ ಗೋವುಗಳು ಬಲಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಗೋಮಾಳ ಸಂರಕ್ಷಿಸುವ ಮೂಲಕ ಗಿಡ್ಡ ತಳಿ ಗೋವುಗಳನ್ನು ಉಳಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.

    Demand for protection of Malnad short-horned cows

  • ಅಂಜುಮನ್ ಇ ಇಸ್ಲಾಮಿಯಾ ಸಂಸ್ಥೆಯ ಆಡಳಿತ ಮಂಡಳಿಗೆ ಅಂಜುಮನ್ ವೆಲ್ಫೇರ್ ತಂಡಕ್ಕೆ ಗೆಲುವು

    ಅಂಜುಮನ್ ಇ ಇಸ್ಲಾಮಿಯಾ ಸಂಸ್ಥೆಯ ಆಡಳಿತ ಮಂಡಳಿಗೆ ಅಂಜುಮನ್ ವೆಲ್ಫೇರ್ ತಂಡಕ್ಕೆ ಗೆಲುವು

    ಚಿಕ್ಕಮಗಳೂರು: ನಗರದ ಅಂಡೆಛತ್ರ ಮುಸಾಫಿರ್ ಖಾನ್, ಅಂಜುಮನ್ ಇ ಇಸ್ಲಾಮಿಯಾ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಅಂಜುಮನ್ ವೆಲ್ಫೇರ್ ಗ್ರೂಪ್ ಭರ್ಜರಿ ಜಯಸಾದಿಸಿದೆ.

    ನಗರದ ಐ.ಜಿ ರಸ್ತೆಯಲ್ಲಿರುವ ಉರ್ದು ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ಮತದಾನ ನಡೆಯಿತು. ೫೭ ಮಂದಿ ಸ್ಪರ್ಧಾ ಕಣದಲ್ಲಿದ್ದರು. ಅಂಜುಮನ್ ವೆಲ್ಫೇರ್ ಗ್ರೂಪ್‌ನಿಂದ ೧೭ ಮಂದಿ ಕಣದಲ್ಲಿದ್ದು ಅದರಲ್ಲಿ ೧೪ ಮಂದಿ ವಿಜೇತರಾಗಿದ್ದಾರೆ. ಸಿಡಿಎ ಅಧ್ಯಕ್ಷ ನಯಾಜ್ ಅಹ್ಮದ್ ಅವರ ತಂಡದಿಂದ ೧೭ ಮಂದಿ ಚುನಾವಣೆಯಲ್ಲಿ ಸ್ಪರ್ದಿಸಿದ್ದು ಅದರಲ್ಲಿ ೫ ಮಂದಿ ಮಾತ್ರ ಗೆಲುವು ಸಾದಿಸಿದ್ದಾರೆ. ಯಾವುದೇ ಗ್ರೂಪ್‌ಗೆ ಸೇರದೆ ಪಕ್ಷೇತರರಾಗಿ ೨ ಮಂದಿ ವಿಜಯಶಾಲಿಗಳಾಗಿದ್ದು ಒಟ್ಟು ೨೧ ಮಂದಿ ಅಂಜುಮನ್ ಇ ಇಸ್ಲಾಮಿಯಾ ಸಂಸ್ಥೆಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

    ವಿಜಯ ಗಳಿಸಿದವರಲ್ಲಿ ಅಬ್ದುಲ್‌ರಜಾಕ್, ಹಫೀಜ್ ಮೊಹಮದ್‌ರಿಯಾಜ್‌ಖಾನ್, ಮಸೂದ್ ಅಹ್ಮದ್, ನಜೀರ್ ಅಹ್ಮದ್, ನಾಸೀರ್‌ಖಾನ್, ಸಿ.ಪಿ.ಬಾಬರ್, ಸಿ.ಎ.ಮೊಹಮದ್ ಇಸ್ಮಾಯಿಲ್, ಅಬ್ರಾರ್‌ಖಾನ್, ಮೊಸಿನ್‌ಖಾನ್, ಹಸನ್ ಸಲೀಂ, ಮೊಹಮ್ಮದ್‌ಇರ್ಷಾದ್, ಮೊಹಮದ್ ಉಮರ್, ಶಿರಾಜ್‌ಖಾನ್, ಮೊಹಮದ್ ಜಿಯಾ, ಮೊಹಮ್ಮದ್‌ರಾಹಿಲ್‌ಪಾಷಾ, ನೂರ್ ಮೊಹಮದ್, ತಬ್ರೀಜ್ ಅಹ್ಮದ್, ಸಯದ್‌ಜಬೀ, ಮೊಹಮದ್ ಅಜ್ಮಲ್‌ಬಾಗಿ, ಅಜ್ಮಲ್, ಮೊಹಮದ್ ಅಬ್ರಾರ್ ಇವರುಗಳು ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿ ನಿಸಾರ್ ಅಹ್ಮದ್ ತಿಳಿಸಿದ್ದಾರೆ

    Anjuman-e-Islamia Organization.