Category: ಜಿಲ್ಲಾ ಸುದ್ದಿ

  • ನಗರದಲ್ಲಿ ವೀರಶೈವ ಲಿಂಗಾಯುತರ ಬೃಹತ್ ಸಮಾವೇಶ

    ನಗರದಲ್ಲಿ ವೀರಶೈವ ಲಿಂಗಾಯುತರ ಬೃಹತ್ ಸಮಾವೇಶ

    ಚಿಕ್ಕಮಗಳೂರು:  ರಾಜ್ಯದ ವೀರಶೈವ ಲಿಂಗಾಯುತರು ಯಡಿಯೂರಪ್ಪ ಅವರ ಬೆಂಬಲಿಸಲಿದ್ದಾರೆ ಎಂಬುದನ್ನು ಪ್ರದರ್ಶನ ಮಾಡಲು ಮಾ.೮ ರಂದು ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯುತರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್ ಹೇಳಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಲಿಂಗಾಯುತ ಸಮುದಾಯದ ಮುಖಂಡರು ಎಲ್ಲ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು ಜನತೆಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಬಿಜೆಪಿಯಲ್ಲಿ ಗುರುತಿಸಿಕೊಂಡು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ವೀರಶೈವ ಲಿಂಗಾಯುತರ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಏಳಿಗೆಯನ್ನು ಸಹಿಸದ ಕೆಲವು ಪಟ್ಟಭದ್ರ ಶಕ್ತಿಗಳು ಅವರ ಮೇಲೆ ಅನಗತ್ಯವಾದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.

    ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಹೀಯಾಳಿಸುತ್ತಾ ಪಕ್ಷ ಸಂಘಟನೆ ಮತ್ತು ಜನಸೇವೆಗೆ ಅಡ್ಡಿ ಪಡಿಸುತ್ತಿದ್ದಾರೆ. ಸ್ವ ಪಕ್ಷದವರೇ ಆದ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿರೋ ಗುಂಪಿನ ಮುಂಚೂಣಿ ನಾಯಕರಾಗಿದ್ದಾರೆ. ಅವರ ನಡೆಯನ್ನು ಸಮುದಾಯ ಖಂಡಿಸುತ್ತದೆ. ಬಿಜೆಪಿ ಕೇಂದ್ರ ನಾಯಕರು ಮಧ್ಯ ಪ್ರವೇದ್ರಿವರ ರಾಜಕೀಯ ನಡೆಯನ್ನು ತಡೆಯಬೇಕು ಎಂದು ಒತ್ತಾಯಿಸಿದರು.

    ಜಿಲ್ಲೆಯ ವೀರಶೈವ ಲಿಂಗಾಯುತರು ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರನ್ನು ಬೆಂಬಲಿಸುತ್ತಾರೆ ಎಂಬುದನ್ನು ಪ್ರದರ್ಶಿಸಲು ಮಾ.೮ ರಂದು ಬೃಹತ್ ಸಮಾವೇಶ ನಗರದಲ್ಲಿ ನಡೆಯಲಿದೆ. ಈ ಹೋರಾಟ ಎಲ್ಲ ಪ್ರಜ್ಞಾವಂತ ವೀರಶೈವ ಲಿಂಗಾಯುತರದ್ದಾಗಿದೆ ಜತೆಗೆ ಪಕ್ಷಾತೀತವಾಗಿದೆ ಎಂದು ಹೇಳಿದರು.

    ವೀರಶೈವ ಲಿಂಗಾಯುತ ಸಮಾಜದ ಮುಖಂಡರಾದ ಕಲ್ಮರುಡಪ್ಪ, ಸೋಮಶೇಖರ್, ರುದ್ರಮುನಿ, ಈಶ್ವರಪ್ಪ, ಜಗದೀಶ್, ತೇಜಸ್‌ಕುಮಾರ್ ಮತ್ತಿತರರಿದ್ದರು.

    A huge gathering of Veerashaiva Lingayats is taking place in the city today.
  • ರಾಷ್ಟ್ರೀಯ ಹೆದ್ದಾರಿ 173 ರ ಅಭಿವೃದ್ಧಿಗೆ ಅಗತ್ಯವಿರುವ ಭೂ ಸ್ವಾಧೀನ

    ರಾಷ್ಟ್ರೀಯ ಹೆದ್ದಾರಿ 173 ರ ಅಭಿವೃದ್ಧಿಗೆ ಅಗತ್ಯವಿರುವ ಭೂ ಸ್ವಾಧೀನ

    ಚಿಕ್ಕಮಗಳೂರು: ಮೂಗ್ತಿಹಳ್ಳಿಯಿಂದ ಮೂಡಿಗೆರೆ ವರೆಗಿನ ರಾಷ್ಟ್ರೀಯ ಹೆದ್ದಾರಿ ೧೭೩ ರ ಅಭಿವೃದ್ಧಿಗೆ ಅಗತ್ಯವಿರುವ ಭೂ ಸ್ವಾಧೀನ ಸಂಬಂಧ ಈ ತಿಂಗಳ ಅಂತ್ಯದೊಳಗಾಗಿ ರಾಜ್ಯದ ಕಂದಾಯ ಇಲಾಖೆಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

    ಹೆದ್ದಾರಿ ಅಭಿವೃದ್ಧಿ ಸಂಬಂಧ ಗುರುವಾರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರೆಡ್ಡಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ  ಎನ್‌ಎಚ್ ೧೭೩ ರ ಅಗಲೀಕರಣ ಮತ್ತು ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿದ್ದೇವೆ. ಕಂದಾಯ, ಅರಣ್ಯ, ತೋಟಗಾರಿಕೆ, ಸರ್ವೇ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇವೆ.

    ಮೂಗ್ತಿಹಳ್ಳಿಯಿಂದ ಮೂಡಿಗೆರೆ ವರೆಗೆ ೨೬.೩೨ ಕಿ.ಮೀ. ರಸ್ತೆಗೆ ೪೦೦.೬೯ ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿತ್ತು. ಇದಕ್ಕೆ ಒಂದು ಬಾರಿ ಟೆಂಡರ್ ಆಗಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆ ಅಪೂರ್ಣಗೊಂಡಿರುವುದರಿಂದ ಟೆಂಡರನ್ನು ೨೧.೩.೨೦೨೫ ಕ್ಕೆ ಮುಂದೂಡಲಾಗಿತ್ತು. ಅಷ್ಟರೊಳಗಾಗಿ ಭೂ ಸ್ವಾಧೀನ ಪ್ರಕ್ರಿಯೆಗಳು ಮುಗಿದಿ ಅವರಿಗೆ ವರದಿ ಹೋಗಬೇಕೆನ್ನುವುದು ನಿಯಮ ಎಂದು ಹೇಳಿದರು.

    ಈ ಸಂಬಂಧ ಮೂಡಿಗೆರೆ ಭಾಗದ ಸರ್ವೇನಂಬರ್‌ಗಳಿಂದ ಮೂಗ್ತಿಹಳ್ಳಿ ವರೆಗೆ ಜಂಟೀ ಸರ್ವೇಗಳನ್ನು ಮುಗಿಸಿ ವರದಿ ಹಸ್ತಾಂತರಿಸುವುದಾಗಿ ಸರ್ವೇ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ ಮೂಡಿಗೆರೆ ಭಾಗದ ಸರ್ವೇ ಮುಗಿದಿದೆ. ಚಿಕ್ಕಮಗಳೂರು ಭಾಗದ ಸರ್ವೇ ವರದಿಯನ್ನು ಇಂದು ಸಂಜೆ ಒಳಗಾಗಿ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ ಎಂದರು.

    ಒಟ್ಟು ೨೩೧ ಮಂದಿ ರೈತರಿಗೆ ಭೂಸ್ವಾಧೀನದ ಪರಿಹಾರ ಸಿಗಬೇಕಿದೆ. ಇನ್ನುಳಿದ ಸರ್ಕಾರಿ ಭೂಮಿಯೂ ಇದೆ. ಬಹುತೇಕ ರೈತರು ಭೂಮಿ ನೀಡಲು ಸಿದ್ದರಿದ್ದೇವೆ. ಸಕಾಲದಲ್ಲಿ ಪರಿಹಾರ ನೀಡಿ ಎಂದು ಹೇಳುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ೨೬ ಕಿ.ಮೀ.ರಸ್ತೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗುತ್ತಿದೆ ಎಂದರು.

    ಈ ರಸ್ತೆಯಲ್ಲಿ ಕೆಲವುಕಡೆಗಳಲ್ಲಿ ಅತ್ಯಂತ ತಿರುವುಗಳು ಹೆಚ್ಚಿವೆ. ಕೆಲವು ಬೈಪಾಸ್ ರಸ್ತೆಗಳ ಸಮಸ್ಯೆಯೂ ಇದೆ. ಕೆಲವೆಡೆ ಭೂ ಕುಸಿತ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಇದೆಲ್ಲವನ್ನೂ ಪರಿಶೀಲಿಸಲು ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಲಿದ್ದೇವೆ. ಒಟ್ಟಾರೆ ಈ ತಿಂಗಳ ಅಂತ್ಯದೊಳಗೆ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಪೂರ್ಣ ವರದಿ ಬೆಂಗಳೂರಿನ ಆರ್‌ಓ ಕಚೇರಿ ತಲುಪಲಿದೆ ಎಂದು ಹೇಳಿದರು.

    ನಂತರ ದೆಹಲಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮೋದನೆ ಪಡೆದುಕೊಂಡು ಭೂಮಿ ಸಂಬಂಧ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಬಹಳ ವೇಗವಾಗಿ ಈ ಕಾಮಗಾರಿಗೆ ಚಾಲನೆ ಸಿಗಲಿದೆ ಎಂದು ಭರವಸೆ ಇದೆ ಎಂದು ತಿಳಿಸಿದರು.

    ಚಿಕ್ಕಮಗಳೂರು ನಗರದಲ್ಲಿರುವ ಒಂದು ಬೈಪಾಸ್ ರಸ್ತೆಯನ್ನು ಬದಲಿಸಬೇಕು ಎನ್ನುವ ಪ್ರಸ್ತಾವನೆ ಇದೆ. ಅದರ ಬಗ್ಗೆ ಕೆಲವು ತಿದ್ದುಪಡಿ ಸೂಚಿಸಿ ವಾಪಾಸ್ ಕಳಿಸಿದ್ದಾರೆ. ಅದನ್ನೂ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    Land acquisition required for the development of National Highway 173

  • ದೇವಾಲಯಗಳಲ್ಲಿ ಕಳವು ವ್ಯಕ್ತಿ ಸೆರೆ: ೧ ಲಕ್ಷ ರೂ.ವಶ

    ದೇವಾಲಯಗಳಲ್ಲಿ ಕಳವು ವ್ಯಕ್ತಿ ಸೆರೆ: ೧ ಲಕ್ಷ ರೂ.ವಶ

    ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಎಂಟು ಪ್ರಕರಣಗಳಲ್ಲಿಆರೋಪಿಯನ್ನು ಬಂಧಿಸಿರುವ ಪೊಲೀಸರು ಒಂದು ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ

    ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಮ್ ಅಮಟೆ, ಉಪಪೊಲೀಸ್ ಮುಖ್ಯಾಧಿಕಾರಿ ಹೆಚ್.ಎಂ.ಶೈಲೇಂದ್ರ,ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ವಿ.ಎಸ್.ಹಾಲಮೂರ್ತಿರಾವ್ ಇವರುಗಳ ಮಾರ್ಗದರ್ಶನದಲ್ಲಿ ಕಡೂರು ವೃತ್ತನಿರೀಕ್ಷಕ ರಫೀಕ್ ನೇತೃತ್ವದಲ್ಲಿ ಜಿಲ್ಲಾದ್ಯಂತ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವಹಿನ್ನಲೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ತಂಡವನ್ನು ರಚಿಸಲಾಗಿತ್ತು.

    ಕಾರ್ಯಪ್ರವೃತ್ತವಾದ ತಂಡವು ವಿವಿಧ ಆಯಾಮಗಳಿಂದ ಮಾಹಿತಿ ಕಲೆ ಹಾಕಿ ವೈಜ್ಞಾನಿಕ ತನಿಖೆ ನಡೆಸಿ ಆರೋಪಿ ಬಳ್ಳಾರಿ ನಗರ ಈಗ ಚಿಕ್ಕಮಗಳೂರು ನಗರದ ಟಿಪ್ಪುನಗರದಲ್ಲಿ ವಾಸವಾಗಿದ್ದ ಮೊಹಮ್ಮದ್ ಸಾಂ ಸದ್ದಾಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ಈತನ ಮೇಲೆ ಈ ಹಿಂದೆ ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿರುತ್ತದೆ.

    ಈ ವ್ಯಕ್ತಿಯ ತನ್ನ ಸಹಚರನೊಂದಿಗೆ ಕಡೂರು, ಯಗಟಿ, ಬೀರೂರು, ಸಖರಾಯಪಟ್ಟಣ, ಅಜ್ಜಂಪುರ, ಚಿಕ್ಕಮಗಳೂರು ನಗರ, ಬಸವನಹಳ್ಳಿ, ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಲವಾರು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್, ಕಳ್ಳತನ ಮಾಡಿದ್ದ ಕಾಣಿಕೆ ಹುಂಡಿ ಮತ್ತು ವಿವಿಧ ಮುಖಬೆಲೆಯ ಚಿಲ್ಲರೆ ಹಣವನ್ನು ವಶಕ್ಕೆ ಪಡೆಯಲಾಗಿದೆ.

    ಇವುಗಳ ಒಟ್ಟು ಮೌಲ್ಯ ಸುಮಾರು ೧ ಲಕ್ಷ, ರೂ.ಗಳಾಗಿದೆ. ಈತನ ಬಂಧನದಿಂದ ಕಡೂರು ಠಾಣೆಯಲ್ಲಿ ೧ ಕಳ್ಳತನ ಪ್ರಕರಣ. ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿದ ಪೊಲೀಸ್ ಠಾಣೆಗ ಲ್ಲಿ ದಾಖಲಾಗಿದ್ದ ೭ ಪ್ರಕರಣಗಳು ಸೇರಿದಂತೆ ಒಟ್ಟು ೮ ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ.

    ಆರೋಪಿ ಪತ್ತೆಕಾರ್ಯದಲ್ಲಿ ಕಡೂರು ಪೊಲೀಸ್ ಠಾಣೆಯ ಪಿಎಸ್‌ಐ ಸಿ.ಸಿ.ಪವನ್‌ಕುಮಾರ್, ಡಿ.ಹೆಚ್.ಧನಂಜಯ್, ಲೀಲಾವತಿ ಮತ್ತು ಸಿಬ್ಬಂದಿಗಳಾದ, ಕುಚೇಲ, ಮಧುಕುಮಾರ್, ಬಿ.ಸಿ. ಹರೀಶ್, ಧನಪಾಲ್ ನಾಯ್ಕ, ಸ್ವಾಮಿ, ಪರಮೇಶ್, ರಬ್ಬಾನಿ ಮತ್ತು ನಯಾಜ್ ತಾಂತ್ರಿಕ ವಿಭಾಗದ ಡಿ ಪಿ ಓ. ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿರುತ್ತಾರೆ.

    ಪ್ರಕರಣಗಳಲ್ಲಿ ಯಶಸ್ವಿಯಾಗಿ ಆರೋಪಿಯನ್ನು ಪತ್ತೆ ಮಾಡಿ ಕದ್ದ ಮಾಲನ್ನು ವಶಕ್ಕೆ ಪಡೆದು ಜಿಲ್ಲೆಯ ಒಟ್ಟು ೦೮ ಪ್ರಕರಣಗಳನ್ನು ಭೇದಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಶ್ರಮಿಸಿದ ಅಪರಾಧ ಪತ್ತೆ ತಂಡದ ಅಧಿಕಾರಿ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಚಿಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

    Man arrested for stealing from temples: Rs 1 lakh seized

  • ಕಳ್ಳತನದ ಪ್ರಕರಣ ಆರೋಪಿ ಬಂಧನ-೮.೫೦ ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

    ಕಳ್ಳತನದ ಪ್ರಕರಣ ಆರೋಪಿ ಬಂಧನ-೮.೫೦ ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

    ಚಿಕ್ಕಮಗಳೂರು: ಕಳ್ಳತನದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ೮.೫೦ ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

    ನಗರದ ಅಯ್ಯಪ್ಪನಗರದ ೧ನೇ ತಿರುವಿನಲ್ಲಿರುವ ಹಸ್ಟೈನ್ ಅಹಮದ್ ಅವರ ಮನೆಯಲ್ಲಿ ಮಾರ್ಚ್ ೨ರಂದು ಸುಮಾರು ೬೭ ಗ್ರಾಂ ಚಿನ್ನದ ಒಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

    ಆರೋಪಿಯ ಶೀಘ್ರ ಪತ್ತೆಗಾಗಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಡಾ.ವಿಕ್ರಮ್ ಅಮಟೆ, ಉಪಪೊಲೀಸ್ ಮುಖ್ಯಾಧಿಕಾರಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಅಭಯ್ ಪ್ರಕಾಶ್ ಸೋಮನಾಳ್ ನೇತೃತ್ವದಲ್ಲಿ ಉಪನಿರೀಕ್ಷ ಬಾಬುದ್ದೀನ್, ಸಿಬ್ಬಂದಿಗಳಾದ ದಿನೇಶ್, ನಂಜಪ್ಪ,ಪ್ರದೀಪ. ನವೀನ, ಮಂಜುನಾಥ್‌ನಾಯ್ಕ, ಮಹಮ್ಮದ್ ರಫೀಕ್ ಘಾಟಿ, ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

    ಕಳವು ಆರೋಪಿತ ಕಡೂರು ಪಟ್ಟಣದ ತ್ಯಾಗರಾಜನಗವರದ ಕಾರ್ಪೆಂಟರ್ ವಿರುಪಾಕ್ಷನನ್ನು ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ಆಕದ್ದಮಾಲು ಪತ್ತೆ ಮಾಡಿ ಆತನನ್ನು ಬಂಧಿಸಿ ಚಿನ್ನ ಮತ್ತು ವಜ್ರ ಖಚಿತ ೩ ಬಳೆಗಳು,ಒಂದು ಚಿನ್ನದ ಉಂಗುರ,ಒಂದು ಚಿನ್ನದ ಸರ ಮತ್ತು ವಜ್ರದ ಲಾಕೆಟ್ ಒಟ್ಟು ೬೩ ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ ೮.೫೦ ಲಕ್ಷ ರೂ.ಗಳಾಗಿರುತ್ತದೆ. ಕಳವು ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    Accused in theft case arrested – gold ornaments worth Rs 8.50 lakh seized

  • ಹಕ್ಕುಪತ್ರಕ್ಕಾಗಿ 35 ಕಿ.ಮೀ. ಪಾದಯಾತ್ರೆ: ಗ್ರಾಪಂ ಉಪಾಧ್ಯಕ್ಷನ ವಿನೂತನ ಹೋರಾಟ

    ಹಕ್ಕುಪತ್ರಕ್ಕಾಗಿ 35 ಕಿ.ಮೀ. ಪಾದಯಾತ್ರೆ: ಗ್ರಾಪಂ ಉಪಾಧ್ಯಕ್ಷನ ವಿನೂತನ ಹೋರಾಟ

    ಕೊಟ್ಟಿಗೆಹಾರ :  ಕಂದಾಯ ಇಲಾಖೆ ನಿರ್ಲಕ್ಷ್ಯದಿಂದ ಮೂರು ವರ್ಷಗಳಿಂದ 25 ಮನೆಗಳಿಗೆ ಹಕ್ಕುಪತ್ರ ನೀಡದೆ ವಿಳಂಬ ಮಾಡುತ್ತಿರುವುದಕ್ಕೆ ವಿರೋಧಿಸಿ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನವೀನ್ ಪೂರ್ಣ ಪ್ರತಿಭಟನೆ ನಡೆಸಿದ್ದಾರೆ.

    ಹಕ್ಕುಪತ್ರ ನೀಡಲು ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರದ ವಿರುದ್ಧ ಅರೆಬೆತ್ತಲೆ ಪಾದಯಾತ್ರೆ ನಡೆಸಿದ ನವೀನ್, 25 ಮನೆಗಳ ಮಣ್ಣನ್ನು ಪುಟ್ಟಿಯಲ್ಲಿ ತುಂಬಿಕೊಂಡು ತಲೆಯ ಮೇಲೆ ಹೊತ್ತುಕೊಂಡು, ನಿಡುವಾಳೆಯಿಂದ ಮೂಡಿಗೆರೆ ತಹಶೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿದ್ದಾರೆ.

    ನಿದಾನವಾಗಿ ನಡೆಯುತ್ತಿರುವ ಭೂಮಿಯ ಹಕ್ಕುಪತ್ರ ವಿತರಣಾ ಪ್ರಕ್ರಿಯೆಗಾಗಿ ಸ್ಥಳೀಯ ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಕಂದಾಯ ಇಲಾಖೆ ಸ್ಪಂದಿಸಿಲ್ಲ. 50ಕ್ಕೂ ಹೆಚ್ಚು ಮನೆಗಳಿಗೆ ಹಕ್ಕುಪತ್ರ ನೀಡಬೇಕಾಗಿದ್ದರೂ, ಕೇವಲ 25 ಮನೆಗಳಿಗೆ ಮಾತ್ರ ಮಂಜೂರು ಮಾಡಲಾಗಿದೆ. ಉಳಿದ ಮನೆಗಳಿಗೆ ಯಾಕೆ ಹಕ್ಕುಪತ್ರ ನೀಡಿಲ್ಲ? ಎಂಬ ಪ್ರಶ್ನೆ ಉದ್ಭವಿಸಿದೆ.

    “ನಾನು ಹೊತ್ತು ತಂದಿರುವ ಮಣ್ಣಿನಲ್ಲಿ ಏನಾದರೂ ತೊಂದರೆ ಇದೆಯಾ? ಈ ಮಣ್ಣಿಗೆ ಹಕ್ಕುಪತ್ರ ಕೊಡಲು ಸಾಧ್ಯವೇ? ಇಲ್ಲವೇ?” ಎಂದು ನವೀನ್ ತಹಶೀಲ್ದಾರ್ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಲು ನಿರ್ಧರಿಸಿದ್ದಾರೆ.

    ಜಿಲ್ಲಾಡಳಿತ ಹಾಗೂ ಸರ್ಕಾರದ ನಿರ್ಲಕ್ಷ್ಯತೆಯನ್ನು ಈ ಪ್ರತಿಭಟನೆಯ ಮೂಲಕ ಸಮಾಜಕ್ಕೆ ತಲುಪಿಸಲು ನವೀನ್ ಪ್ರಯತ್ನಿಸುತ್ತಿದ್ದಾರೆ. ಹಕ್ಕುಪತ್ರಕ್ಕಾಗಿ ಗ್ರಾಮಸ್ಥರ ಹೋರಾಟ ಮುಂದುವರಿಯಲಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಂಡು ತಕ್ಷಣ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.

    ಗ್ರಾಮಸ್ಥರ ನಿಗಾ ಇದೀಗ ಸರ್ಕಾರದ ನಿರ್ಧಾರಗಳತ್ತ ಹರಿಯುತ್ತಿದ್ದು, ಈ ಪ್ರತಿಭಟನೆಯಿಂದ ಸರ್ಕಾರ ಎಚ್ಚೆತ್ತುಕೊಂಡು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

    35 km walk for land title: Grampanchayat Vice President’s innovative struggle

  • ಎಂ.ಕೆ.ಪ್ರಾಣೇಶ್-ಗಾಯತ್ರಿ ಶಾಂತೇಗೌಡರ ಚುನಾವಣಾ ಅರ್ಜಿ ಮುಂದೂಡಿಕೆ

    ಎಂ.ಕೆ.ಪ್ರಾಣೇಶ್-ಗಾಯತ್ರಿ ಶಾಂತೇಗೌಡರ ಚುನಾವಣಾ ಅರ್ಜಿ ಮುಂದೂಡಿಕೆ

    ಚಿಕ್ಕಮಗಳೂರು  ಪರಿಷತ್‌ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮತ್ತು ಗಾಯತ್ರಿ ಶಾಂತೇಗೌಡರ ನಡುವಿನ ಚುನಾವಣಾ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ, ಹಿಂದಿನ ಆದೇಶದಂತೆ ಕ್ಯಾಮೆರಾ ಕಣ್ಣಾವಲಿನಲ್ಲಿ ನಡೆದ ಮತ ಮರುಎಣಿಕೆಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ನ್ಯಾಯಾಲಯಕ್ಕೆ ಸಲ್ಲಿಸಿದರು.

    ಈ ವೇಳೆ ಸುಪ್ರೀಂಕೋರ್ಟ್, ಪ್ರಕರಣದಲ್ಲಿ ಪುರಸಭೆ, ಪಟ್ಟಣ ಪಂಚಾಯಿತಿಯ 12 ಮಂದಿ ನಾಮನಿರ್ದೇಶನ ಸದಸ್ಯರು ಮತಗಳನ್ನು ಪರಿಗಣಿಸುವ ಬಗ್ಗೆ ಆಯೋಗದಿಂದ ಮಾಹಿತಿ ಕೇಳಿತು. ಬಳಿಕ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, ಮಾರ್ಚ್ 25ರಂದು ವಿಚಾರಣೆ ಮುಂದೂವರಿಸುವುದಾಗಿ ಪೀಠ ಹೇಳಿದೆ.

    2021ರ ಡಿಸೆಂಬರ್ 10ರಂದು ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ನಡೆದಿತ್ತು. ಆರು ಮತಗಳಿಂದ ಬಿಜೆಪಿ. ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಗೆಲುವು ಸಾಧಿಸಿದ್ದರು. ಮತ ಎಣಿಕೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಮರು ಮತ ಎಣಿಕೆಗೆ ಮನವಿ ಸಲ್ಲಿಸಿದ್ದರು. ಆದರೆ, ಮರು ಮತ ಎಣಿಕೆಗೆ ಅವಕಾಶ ನೀಡದೆ ಫಲಿತಾಂಶ ಘೋಷಣೆ ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ಗಾಯತ್ರಿ ಶಾಂತೇಗೌಡ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು.

    ಈ ವೇಳೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಾಮನಿರ್ದೇಶನ ಸದಸ್ಯರ ಮತಗಳನ್ನು ಹೊರತುಪಡಿಸಿ ಮರು ಮತ ಎಣಿಕೆ ನಡೆಸುವಂತೆ ಆದೇಶ ನೀಡಿತ್ತು. ಮಾರ್ಚ್ 4ರ ಒಳಗೆ ಮರು ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅಂತೆಯೇ ಇಂದು ಮತ ಎಣಿಕೆ ನಡೆಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ.

    M.K. Pranesh-Gayatri Shantegowda’s election petition postponed

  • ನೆಲ್ಲೂರು ಮಠದ ವಿವಾದ ಸ್ಥಳದ ಕಟ್ಟಡ ತೆರವು – ಬಿಗುವಿನ ವಾತಾವರಣ

    ನೆಲ್ಲೂರು ಮಠದ ವಿವಾದ ಸ್ಥಳದ ಕಟ್ಟಡ ತೆರವು – ಬಿಗುವಿನ ವಾತಾವರಣ

    ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿರುವ ಜಾಗಕ್ಕೆ ನೆಲ್ಲೂರು ಮಠದ ಮನೆ ಮತ್ತು ಜಾಮಿಯಾ ಮಸೀದಿ ನಡುವೆ ಹಗ್ಗಜಗ್ಗಾಟ ನಡೆದಿದ್ದು, ಇದೀಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಜಾಗದ ವಿಚಾರವಾಗಿ ಜಾಮಿಯಾ ಮಸೀದಿ ಮತ್ತು ನೆಲ್ಲೂ ಮಠದ ನಡುವೆ ಕಳೆದ ಎರಡು ದಶಕಗಳಿಂದ ಕಾನೂನು ಹೋರಾಟ ನಡೆಯುತ್ತಿದೆ.

    ಆದರೆ ಇದರ‌ ನಡುವೆ ಹೈಕೋರ್ಟ್ ನಲ್ಲಿ ತಮ್ಮ ಪರವಾಗಿ ಆದೇಶ ಬಂದಿದೆ ಎಂದು ಹೇಳಿಕೊಂಡು ಬೆಳ್ಳಂಬೆಳಗ್ಗೆ ಜಾಮಿಯಾ ಮಸೀದಿ ಕಮಿಟಿ ಸುಮಾರು 200 ಹೆಚ್ಚು ಯುವಕರೊಂದಿಗೆ ಬಂದು ಏಕಾಏಕಿ ವಿವಾದಿತ ಮಠದ ಮನೆಯ ಜಾಗದಲ್ಲಿದ್ದ ಮನೆ ಮತ್ತು ಅಂಗಡಿಯನ್ನ ನೆಲಸಮ ಮಾಡಿದೆ. ಇದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೊಶಕ್ಕೆ ಕಾರಣವಾಗಿದೆ‌.

    ವಿವಾದಿತ ಜಾಗ ಸೇರಿದಂತೆ‌ ನಗರದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಭದ್ರತೆಯನ್ನ‌ ಕೈಗೊಂಡಿದ್ದು. ಎಸ್ಪಿ ವಿಕ್ರಮ್ ಅಮಟೆ ನೆಲೂರು ಮಠದ ಮನೆಯವರು, ಹಿಂದೂಪರ ಸಂಘಟನೆಗಳ ಮುಖಂಡರು, ಬಿಜೆಪಿ ಮುಖಂಡರು ಹಾಗೂ ಜಾಮಿಯಾ ಮಸೀದಿ‌ ಕಮಿಟಿಯೊಂದಿಗೆ‌ ಸುಧೀರ್ಘ ಸಭೆ ನಡೆಸಿ ಎರಡೂ ಕಡೆಯವರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರ ಅನುಮತಿ, ನಗರಸಭೆಯ ಅನುಮತಿಯನ್ನೂ ಪಡೆದುಕೊಳ್ಳದೆ ತೆರವು ಕಾರ್ಯಾಚರಣೆಗೆ ಮುಂದಗಿದ್ದಕ್ಕೆ ಜಾಮಿಯಾ ಮಸೀದಿ ಕಮಿಟಿಯವರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಜಾಮಿಯಾ‌ ಮಸೀದಿಯ ಆತುರದ ನಿರ್ಧಾರ ಬಿಜೆಪಿ, ಹಿಂದೂಪರ ಸಂಘಟನೆಗಳಷ್ಟೇ ಅಲ್ಲದೆ ಪೊಲೀಸ್ ಇಲಾಖೆಯ ಕೆಂಗಣ್ಣಿಗೂ ಗುರಿಯಾಗಿದೆ‌. ಸದ್ಯ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ 5 KSRP ತುಕಡಿ ನಿಯೋಜನೆ ಮಾಡಲಾಗಿದ್ದು. ಮಠದ ಕುಟುಂಬಸ್ಥರು ,ಹಿಂದೂ ಸಂಘಟನೆ, ಜಾಮಿಯಾ ಕಮಿಟಿ ,ವಕ್ಫ್ ಅಧಿಕಾರಿಗಳ ಜೊತೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಆಮ್ಟೆ ಸಭೆ ಮಾಡಿ ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.

    ಎರಡು ದಶಕಗಳಿಂದ ನೆಲ್ಲೂರು ಮಠ ಹಾಗೂ ಜಾಮಿಯಾ ಮಸೀದಿ ನಡುವೆ ವಿವಾದಕ್ಕೆ ಕಾರಣಾವಾಗಿದ್ದ ಜಾಗ ಇಂದು ಅಕ್ಷರಶಃ ರಣಭೂಮಿಯಾಗಿ ಮಾರ್ಪಟ್ಟಿದೆ. ಪೊಲೀಸರ ಜಾಣ್ಮೆ ಮತ್ತು ಸಮಯ ಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಮಹಾ ದುರಂತವೊಂದು ತಪ್ಪಿದಂತಾಗಿದ್ದು, ನಗರದಾದ್ಯಂತ ಖಾಕಿ ಹದ್ದಿನ ಕಣ್ಣಿಟ್ಟಿದ್ರೂ ಕೂಡಾ ಯಾವ ಸಮಯದಲ್ಲಿ ಏನಾಗುತ್ತೆ ಅನ್ನೋದೆ ಗೊತ್ತಾಗದಂತಾಗಿದೆ. ಕೋಮುಸೂಕ್ಷ್ಮ ಜಿಲ್ಲೆ ಕಾಫಿನಾಡು ಬೂದಿ ಮುಚ್ಚಿದ ಕೆಂಡದಂತಿದೆ.

    Nellore Mutt controversial site building evacuated

  • ಅಕ್ರಮ ಗಾಂಜಾ ಸಾಗಾಟ – ಮೂಡಿಗೆರೆಯಲ್ಲಿ ಯುವಕ ಬಂಧನ

    ಅಕ್ರಮ ಗಾಂಜಾ ಸಾಗಾಟ – ಮೂಡಿಗೆರೆಯಲ್ಲಿ ಯುವಕ ಬಂಧನ

    ಕೊಟ್ಟಿಗೆಹಾರ : ಅಬಕಾರಿ ಇಲಾಖೆಯ ಅಧಿಕಾರಿಗಳ ತ್ವರಿತ ಕಾರ್ಯಾಚರಣೆಯಿಂದ ಮೂಡಿಗೆರೆ ಪಟ್ಟಣದ ಬೇಲೂರು ರಸ್ತೆಯ ಬಿಜುವಳ್ಳಿ ಗ್ರಾಮದ ಹಳಸೆ ತಿರುವಿನಲ್ಲಿ ಗಾಂಜಾ ಅಕ್ರಮ ಸಾಗಾಟ ನಡೆಸುತ್ತಿದ್ದವನನ್ನು ಬಂಧಿಸಲಾಗಿದೆ.
    ಅಬಕಾರಿ ಉಪ ಆಯುಕ್ತರು, ಚಿಕ್ಕಮಗಳೂರು ಜಿಲ್ಲೆ, ಇವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರು, ಮೂಡಿಗೆರೆ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಯಿತು. ವಜೀರ್ ಅಹ್ಮದ್ ಅಲಿಯಾಸ್ ಶೇಕ್ ಅಬ್ದುಲ್ಲ ಬಿನ್ ಲೇಟ್ ಅಲಿಜಾನ್ (27), ಜೆಎಂ ರಸ್ತೆ, ಮೂಡಿಗೆರೆ ಎಂಬುವವನು ತನ್ನ ವ್ಯಾಗನಾರ್ ಕಾರು (ನಂ. ಕೆಎ 19 ಎನ್ 5049) ನಲ್ಲಿ 1.975 ಕೆ.ಜಿ. ಗಾಂಜಾ ಸಾಗಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.
    ಆರೋಪಿಯನ್ನು ಎನ್‌ಡಿಪಿಎಸ್ (NDPS) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
    ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕರಾದ ಶೇಖರ್ ಎಂ.ಆರ್, ಅಬಕಾರಿ ನಿರೀಕ್ಷಕರಾದ ಲೋಕೇಶ್ ಸಿ., ಸಿಬ್ಬಂದಿಗಳಾದ ರಮೇಶ್ ತುಳಜಣ್ಣನವರ್, ಶಂಕರ ಗುರವ ಹಾಗೂ ವಾಹನ ಚಾಲಕರಾದ ಪ್ರವೀಣ್ ಅವರು ಭಾಗವಹಿಸಿದ್ದರು. ಪ್ರಕರಣವನ್ನು ಅಬಕಾರಿ ನಿರೀಕ್ಷಕರಾದ ಲೋಕೇಶ್ ಸಿ., ಮೂಡಿಗೆರೆ ಉಪ ವಿಭಾಗ ಇವರು ದಾಖಲಿಸಿದ್ದಾರೆ.
    Illegal marijuana trafficking – Youth arrested in Mudigere
  • ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪಂಗುನಿ ಉತ್ತಿರ ಜಾತ್ರೆ

    ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪಂಗುನಿ ಉತ್ತಿರ ಜಾತ್ರೆ

    ಚಿಕ್ಕಮಗಳೂರು: ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಕುಮರಗಿರಿಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಏ. 9ರಿಂದ 11ರವರೆಗೆ ಪಂಗುನಿ ಉತ್ತಿರ ಜಾತ್ರೆ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್ ಕುಮಾರ್ ತಿಳಿಸಿದರು‌.

    ನಗರದ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 9ರಂದು ಬೆಳಗ್ಗೆ 6ಗಂಟೆಯಿಂದ 7.30ರವರೆಗೆ ಧ್ವಜಾರೋಹಣ ಹಾಗೂ ಕಂಕಣಧಾರಣೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

    ಏ. 10ರಂದು ಬೆಳಗ್ಗೆ 9ಗಂಟೆಯಿಂದ 10.30ರವರೆಗೆ ಶ್ರೀಅವರಿಗೆ ಅಭಿಷೇಕ, ಅಲಂಕಾರ ಹಾಗೂ ಬೆಳಗ್ಗೆ 10.30ಕ್ಕೆ ಶ್ರೀಸ್ವಾಮಿಯವರ ಉತ್ಸವ ಮೂರ್ತಿಯು ದೇವಾಲಯದಿಂದ ಹೊರಟು ಮಲ್ಲೇನಹಳ್ಳಿ, ಬಾವಿಕಟ್ಟೆ, ಹೆಬ್ಬಳ್ಳಿ, ಮಾವಿನಹಳ್ಳ, ಅರಿಶಿನಗುಪ್ಪೆ, ದಾಸರಹಳ್ಳಿ, ಕೈಮರದಿಂದ ಅತ್ತಿಗಿರಿ ತಲುಪಿ ಪುನಃ ಕಂಬಿಹಳ್ಳ, ಶಾಂತಿಪುರ, ಕಬ್ಬಿಣ ಸೇತುವೆ, ಹೊಸಪೇಟೆ, ಗುಡ್ಡೇನಹಳ್ಳಿ, ಅರವಿಂದ ನಗರ, ನೀರುಗುಂಡಿ, ಎಮ್ಮೇಖಾನ್, ಭಕ್ತರಹಳ್ಳಿಯ ಮೂಲಕ ಸ್ವಾಮಿಯ ಸನ್ನಿಧಿ ತಲುಪಲಿದೆ ಎಂದು ಮಾಹಿತಿ ನೀಡಿದರು.

    ಏ. 11ರಂದು ಉತ್ತಿರಾ ನಕ್ಷತ್ರ ಶುಭಯೋಗ ಕೂಡಿದ ಶುಭದಿನದಲ್ಲಿ ಬೆಳಗ್ಗೆ 6ಗಂಟೆಯಿಂದ ಶ್ರೀಯಎಂದರು ಅಭಿಷೇಕ, ಅಲಂಕಾರದೊಂದಿಗೆ ಮಹಾಮಂಗಳಾರತಿ ನಡೆಯಲಿದೆ. ಬಳಿಕ ಪಂಗುನಿ ಉತ್ತಿರ ಜಾತ್ರೆಯ ಕಾವಡಿ ಸಮರ್ಪಣೆ ನಡೆಯಲಿದೆ. ಇದಾದನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಹಾಗುಇ ವಳ್ಳಿ ದೇವಯಾನೆಯರ ಕಲ್ಯಾಣೋತ್ಸವ ನಡೆಯಲಿದೆ ಎಂದರು.

    ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 12 ಗಂಟೆಗೆ ಸರಳ ಸಾಮೂಹಿಕ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಹತ್ತಕ್ಕೂ ಹೆಚ್ಚು ಜೋಡಿಗಳು ನವ ಜೀವನಕ್ಕೆ ಕಾಲಿಡಲಿದ್ದಾರೆ. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗುವವರು 15 ದಿನಗಳ ಮೊದಲೇ ಹೆಸರು ನೋಂದಣೆ ಮಾಡಿಕೊಳ್ಳಬೇಕು. ವರನಿಗೆ ಕಡ್ಡಾಯವಾಗಿ 21 ವರ್ಷ ಹಾಗೂ ಮಧುವಿಗೆ 18 ವರ್ಷ ತುಂಬಿರಬೇಕು. ಮಧುವಿಗೆ ತಾಳಿ, ಕಾಲುಂಗುರ ಬಟ್ಟೆ ಹಾಗೂ ವರನಿಗೆ ಬಟ್ಟೆಯನ್ನು ಉಚಿತವಾಗಿ ನೀಡಲಾಗುವುದು. ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದರು.

    ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಸಿಪಿಐ ರಾಜ್ಯ ಮಂಡಳಿ ಸದಸ್ಯ ಎಚ್.ಎಂ.ರೇಣುಕಾರಾಧ್ಯ, ಮಲ್ಲೇನಹಳ್ಳಿ ಗ್ರಾಪಂ ಅಧ್ಯಕ್ಷೆ ಲಲಿತಾ ಲೋಕೇಶ್, ಉಪಾಧ್ಯಕ್ಷೆ ಕಾವ್ಯ ಮೋಹನ್ ಕುಮಾರ್ ಉಪಸ್ಥಿತರಿರಲಿದ್ದಾರೆ ಎಂದರು.

    ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ವಿ. ಗುಣಶೇಖರ್, ಉಪಾಧ್ಯಕ್ಷರಾದ ಎ.ಮಹಾಲಿಂಗಂ, ಜಿ.ರಮೇಶ್, ಸಹಕಾರ್ಯದರ್ಶಿ ಅರಿವಳಗನ್, ಖಜಾಂಚಿ ಕೆ.ಕೃಷ್ಣರಾಜ್, ನಿರ್ದೇಶಕರಾದ ಜಿ.ರಘು, ಮುರುಗನ್, ಪುವೆಂದಿರನ್, ಸಿ.ವೆಂಕಟೇಶ್ ಮತ್ತಿತರರಿದ್ದರು.

    Panguni Uthira Jatra at Sri Subrahmanya Swamy Temple

  • ಕಾಳ್ಗಿಚ್ಚಿನಿಂದ ಬೆಲೆಬಾಳುವ ಮರಗಳು ನಾಶ : ಪರಿಹಾರಕ್ಕೆ ಒತ್ತಾಯ

    ಕಾಳ್ಗಿಚ್ಚಿನಿಂದ ಬೆಲೆಬಾಳುವ ಮರಗಳು ನಾಶ : ಪರಿಹಾರಕ್ಕೆ ಒತ್ತಾಯ

    ಚಿಕ್ಕಮಗಳೂರು: ಕಾಳ್ಗಿಚ್ಚು, ನೆರೆ, ಪ್ರವಾಹ ಹಾಗೂ ವನ್ಯಮೃಗಗಳ ಹಾವಳಿಯಿಂದ ರೈತರು ಬೆಳೆದ ಶ್ರೀಗಂಧದ ಸಸಿ, ಮರ ದ್ವಂಸಗೊಂಡರೆ ಪರಿಹಾರ ನೀಡಬೇಕು ಎಂದು ಜಿಲ್ಲಾ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘವು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

    ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದ ಮಾತನಾಡಿದ ಸಂಘದ ಅಧ್ಯಕ್ಷ ಡಾ|| ಕೆ.ಸುಂದರಗೌಡ ತರೀಕೆರೆ ತಾಲ್ಲೂಕಿನ ಶಿವಪುರ ಗ್ರಾಮದ ವಿಶುಕುಮಾರ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬೆಲೆಬಾಳುವ ಶ್ರೀಗಂಧ, ಗಾಳಿಮರ, ಮಾವು, ತೆಂಗು, ನುಗ್ಗೆಯ ತೋಟಕ್ಕೆ ಕಾಳ್ಗಿಚ್ಚು ತಗುಲಿ ಮರ ಗಳು ಹೊತ್ತಿ ಉರಿದು ಲಕ್ಷಾಂತರ ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದರು.

    ಕೆಲವೇ ವರ್ಷಗಳಲ್ಲಿ ಉತ್ತಮ ಫಸಲನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ರೈತನ ಸ್ಥಿತಿ ಕಂಗಾಲಾಗಿದೆ. ಈ ಕುರಿತಾಗಿ ಶೀಘ್ರವೇ ನ್ಯಾಯಯುತವಾದ ಪರಿಹಾರವನ್ನು ನೊಂದ ರೈತನಿಗೆ ನೀಡಬೇಕು. ಜೊತೆಗೆ ಈ ರೀತಿಯ ಘಟನೆಗಳು ರಾಜ್ಯದ ಯಾವ ಮೂಲೆಗಳಲ್ಲಿ ಸಂಭವಿಸಿದರೂ ಸರ್ಕಾರ ಕೂಡಲೇ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹೇಳಿದರು.

    ಹವಾಮಾನ ವೈಪರೀತ್ಯ, ತಾಪಮಾನ ಏರಿಕೆಯಿಂದ ಎಲ್ಲೆಂದರಲ್ಲಿ ಬೆಂಕಿಯ ಅವಘಡಗಳು ಸಂಭ ವಿಸುತ್ತಿದೆ. ಹತ್ತಾರು ವರ್ಷಗಳ ಬೆಳೆಸಿದ ಶ್ರೀಗಂಧ, ತೇಗ, ಮಹಾಘೋನಿ, ಬೀಟೆ, ರಕ್ತಚಂದನ ವೃಕ್ಷಗಳು ಬೆಂಕಿಗೆ ಆಹುತಿಯಾಗಲಿವೆ. ಇದು ಕಷ್ಟಪಟ್ಟು ಬೆಳೆಸಿದ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಿಮಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪ್ರಸ್ತುತ ರೈತ ಸಮುದಾಯ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿವೆ. ಹನಿ ನೀರಿಗೂ ತತ್ಪಾರವಿರು ವ ಈ ವಿಷಮ ಸಮಯದಲ್ಲಿ ರೈತರ ಕಂಬನಿ ಒರೆಸುವ ಕೆಲಸವು ಸರ್ಕಾರ ಮಾಡಬೇಕಿದೆ. ಶ್ರೀಗಂಧ ಅರ ಣ್ಯ ಇಲಾಖೆಯಡಿಯಲ್ಲಿ ಇರುವುದರಿಂದ ನೈಸರ್ಗಿಕ ವಿಕೋಪಗಳಿಂದ ಉಂಟಾದ ಬದಲಾವಣೆಗೂ ಉತ್ತ ರದಾಯಿತ್ವ ಅರಣ್ಯ ಇಲಾಖೆಯಾಗಿದೆ ಎಂದರು.

    ಆದ್ದರಿಂದ ಆಕಸ್ಮಿಕ ಬೆಂಕಿಗಾಹುತಿ ಅಥವಾ ಪ್ರವಾಹ ಪರಿಸ್ಥಿತಿ ಎದುರಾದರೆ ಪರಿಹಾರ ಕುರಿತಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಶ್ರೀಗಂಧ ಬೆಳೆಗಾರರ ಬವಣೆ ಪರಿಹರಿಸಲು ಕೋರಿ ದೆ. ಈ ಅಪರೂಪದ ಪ್ರಕರಣಗಳನ್ನು ಪರಿಹರಿಸಲು ಅವಕಾಶವಿದ್ದರೆ ಪರಿಹಾರ ಘೋಷಣೆ ಮಾಡಲು ಸಹ ಸಂಘವು ಒತ್ತಾಯಿಸುತ್ತದೆ.

    ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಚಾಲಕ ವಿಶುಕುಮಾರ್ ಹಾಗೂ ಕುಟುಂಬಸ್ಥರು, ಪರಿಹಾರ ಕಾಂಕ್ಷಿಗಳು ಹಾಜರಿದ್ದರು.

    Valuable trees destroyed by forest fire: Demand for compensation