Category: ಜಿಲ್ಲಾ ಸುದ್ದಿ

  • ನಲ್ಲೂರುಮಠ-ಬಡಮಕಾನ್ ಕಟ್ಟಡ ತೆರವು ವಿವಾದ ಪ್ರಕರಣ-ವಕ್ಫ್ಅಧಿಕಾರಿ ಅಮಾನತು

    ನಲ್ಲೂರುಮಠ-ಬಡಮಕಾನ್ ಕಟ್ಟಡ ತೆರವು ವಿವಾದ ಪ್ರಕರಣ-ವಕ್ಫ್ಅಧಿಕಾರಿ ಅಮಾನತು

    ಚಿಕ್ಕಮಗಳೂರು: ನಲ್ಲೂರು ಮಠ ವರ್ಸಸ್ಸ್ ಬಡಮಕಾನ್ ತೆರವು ವಿವಾದ ಪ್ರಕರಣ ಕೈಗೊಳ್ಳುವ ಪೂರ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೆ, ಸೂಕ್ತ ಪೊಲೀಸ್ ಭದ್ರತೆ ಪಡೆಯದೆ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ವಕ್ಫ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

    ಚಿಕ್ಕಮಗಳೂರು ನಗರದ ಜಾಮೀಯಾ ಮಸೀದಿಗೆ ಸೇರಿದ ಬಡಾ ಮಕಾನ್ ವಕ್ಸ್ ಆಸ್ತಿಯಲ್ಲಿಎನ್. ಎಂ. ಕಮಲಮ್ಮ ಹಾಗೂ ಇತರರು ಮತ್ತು ವಕ್ಫ್ ಮಂಡಳಿ ಹಾಗೂ ಜಾಮೀಯಾ ಮಸೀದಿ ಆಡಳಿತ ಸಮಿತಿ ಮಧ್ಯೆ ನ್ಯಾಯಾಲಯದಲ್ಲಿ ವಿವಾದ ನಡೆಯುತ್ತಿದೆ.

    ಎನ್. ಎಂ. ಕಮಲಮ್ಮ ಹಾಗೂ ಇತರರನ್ನು ವಿವಾದಿತ ಸ್ಥಳದಿಂದ ತೆರವುಗೊಳಿಸದಂತೆ ತಡೆಯಾಜ್ಞೆ ನೀಡಿ ಪ್ರಧಾನ ಜಿಲ್ಲಾ ನ್ಯಾಯಾಲಯ, ಚಿಕ್ಕಮಗಳೂರು ದಿನಾಂಕ.30.10.2017 ರಂದು ಎಂ.ಎ. ಸಂಖ್ಯೆ. 18/2016 ರಲ್ಲಿ ತೀರ್ಪು ನೀಡಿದೆ. ಜಾಮೀಯಾ ಮಸೀದ್, ಚಿಕ್ಕಮಗಳೂರು ಆಡಳಿತ ಮಂಡಳಿ,ಚಿಕ್ಕಮಗಳೂರು ಘನ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ನಂ.55686/2017 (GM-PP) ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅನುಮತಿಸಿ ದಿನಾಂಕ.28.01.2025 ರಂದು ಆದೇಶ ಹೊರಡಿಸಿರುತ್ತದೆ.

    ವಕ್ಫ್ಅಧಿಕಾರಿ ಸೈಯದ್‌ ಸತ್ತಾರ ಹುಸೇನಿ,ಬಸವನಹಳ್ಳಿ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಬಡಾ ಮಕಾನ್ ದರ್ಗಾ ಮತ್ತು ಮಸಿದ್ ಸ್ಥಳದ ಪಕ್ಕದಲ್ಲಿ ಇರುವ ವಿವಾದಿತ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳುವ ಪೂರ್ವದಲ್ಲಿ ಅಧಿಕಾರ ವ್ಯಾಪ್ತಿ ಬಗ್ಗೆ ಸರಿಯಾಗಿ ಮಾಹಿತಿ ಹೊಂದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.

    ತೆರವು ಕಾರ್ಯಚರಣೆ ಹೊರಡಿಸುವ ಮುನ್ನ ಸ್ಥಳೀಯ ನಗರಸಭೆ ಆಯುಕ್ತರಿಗೆ ಮಾಹಿತಿ ನೀಡಿಲ್ಲ, ಸ್ಥಳೀಯ ಪೊಲೀಸ್ ಠಾಣೆಗೆ ಸೂಕ್ತ ಬಂದೋಬಸ್ತ್ ಒದಗಿಸಲು ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ. ದಾಖಲಾತಿ ಪರಿಶೀಲಿಸದೆ ಏಕಾಏಕಿ ನಡೆಸಿದ ತೆರವು ಕಾರ್ಯಚರಣೆ ಹಾಗೂ ಬೇಜವಾಬ್ದಾರಿ ನಡೆಯಿಂದ ವಿವಾದಿತ ಪ್ರದೇಶದ ವ್ಯಾಪ್ತಿಯಲ್ಲಿ ಪಕ್ಷುಬ್ಬ ವಾತಾವಾರಣ ಉಂಟಾಗಿರುಲು ಕಾರಣರಾಗಿರುತ್ತಾರೆ ಎಂದು ಹೇಳಿದ್ದಾರೆ.

    ಏಕಾಏಕಿ ತೆರವು ಕಾರ್ಯಾಚರಣೆಯಿಂದ ಚಿಕ್ಕಮಗಳೂರು ನಗರದಲ್ಲಿ ಉಂಟಾದ ಪಕ್ಷುಬ್ಧ ವಾತಾವರಣ ಉಂಟಾಗಿದ್ದು, ಈ ಬಗ್ಗೆ ಅಧಿಕಾರಿಯನ್ನು ಪ್ರಶ್ನಿಸಿದಾಗ ಸಮರ್ಪಕ ದಾಖಲೆಯನ್ನು ನೀಡದೆ ಉಡಾಫೆ ಉತ್ತರ ನೀಡಿ ಉದ್ಧಟತನ ಪ್ರದರ್ಶಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಮ್ಮ ವರದಿಯಲ್ಲಿ ಆರೋಪಿಸಿದ್ದಾರೆ.

    Nallur Math-Badamkan building clearance dispute case – Waqf officer suspended

  • ಏ.4 ರಂದು ರಾಜ್ಯಾದ್ಯಾಂತ ನಿಂಬಿಯಾ ಬನಾದ ಮ್ಯಾಗ ಕನ್ನಡ ಚಲನಚಿತ್ರ ಬಿಡುಗಡೆ

    ಏ.4 ರಂದು ರಾಜ್ಯಾದ್ಯಾಂತ ನಿಂಬಿಯಾ ಬನಾದ ಮ್ಯಾಗ ಕನ್ನಡ ಚಲನಚಿತ್ರ ಬಿಡುಗಡೆ

    ಚಿಕ್ಕಮಗಳೂರು: ಜನಪದ ಸೊಗಡಿನ ಕನ್ನಡ ಸಂಸ್ಕೃತಿ ಎತ್ತಿ ಹಿಡಿಯುವ ಉದ್ದೇಶದಿಂದ ತಾಯಿ-ಮಗನ ಭಾಂದವ್ಯದ ಕಥಾ ಹಂದರ ಹೊಂದಿರುವ ನಿಂಬಿಯಾ ಬನಾದ ಮ್ಯಾಗ ಕನ್ನಡ ಚಲನಚಿತ್ರ ಏಪ್ರಿಲ್ ೪ ರಂದು ರಾಜ್ಯಾದ್ಯಾಂತ ತೆರ ಕಾಣಲಿದೆ ಎಂದು ವರನಟ ಡಾ.ರಾಜ್‌ಕುಮಾರ್ ಅವರ ಮೊಮ್ಮಗ ಹಾಗೂ ನಟ ಷಣ್ಮುಖಗೋವಿಂದ್‌ರಾಜ್ ತಿಳಿಸಿದರು.

    ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಶೇ.೮೦ ರಷ್ಟು ಚಿತ್ರೀಕರಣ ಮಾಡಲಾಗಿದ್ದು, ಈ ಚಲನಚಿತ್ರ ಸುಮಾರು ೭೦ ಚಿತ್ರ ಮಂದಿರಗಳಲ್ಲಿ ಬಿತ್ತರಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

    ಜಿಲ್ಲೆಯ ಮಲೆನಾಡಿನ ಬೆಂಗಾಡಿ ಗ್ರಾಮದ ಜಮೀನ್ದಾರ್ ಕುಟುಂಬದ ರಾಘವೇಂದ್ರ ಮತ್ತು ವರಲಕ್ಷ್ಮೀ ದಂಪತಿಗೆ ೧೦ ವರ್ಷಗಳ ನಂತರ ಒಂದು ಗಂಡು ಮಗು ಜನಿಸುತ್ತದೆ. ಮಗು ಜನಿಸಿದ ಸ್ವಲ್ಪ ದಿನಗಳಲ್ಲೇ ತಂದೆ ನಿಗೂಢವಾಗಿ ಮೃತಪಡುತ್ತಾರೆ.

    ಈ ಸಂದಂರ್ಭದಲ್ಲಿ ಮಗುವಿನ ಪ್ರಾಣಕ್ಕೆ ಆಪತ್ತು ಆಗಬಹುದೆಂದು ಎಂದು ಭಾವಿಸಿ ತಾಯಿ ದೂರದ ಪಟ್ಟಣದಲ್ಲಿರುವ ಪರಿಚಯಸ್ತರಿಗೆ ಮಗವನ್ನು ಒಪ್ಪಿಸಿ, ಮಗು ಪ್ರಾಣಾಪಾಯದಲ್ಲಿದೆ ಎಂಬ ವಿಷಯ ತಿಳಿಸಿ, ನಾನು ಬರುವವರೆಗೂ ಮಗು ನಿಮ್ಮ ಬಳಿ ಇರಲಿ ಎಂದು ಹೇಳಿ, ಈ ಮಗುವಿನ ರಹಸ್ಯವನ್ನು ಯಾರಿಗೂ ತಿಳಿಸದಂತೆ ಆಣೆ ಮಾಡಿಸಿ, ಊರು ತಲುಪುವ ಕಥಾ ಹಂದರವನ್ನು ಚಿತ್ರದಲ್ಲಿ ಮನೋಜ್ಞವಾಗಿ ಚಿತ್ರೀಕರಿಸಲಾಗಿದ್ದು, ಪ್ರೇಕ್ಷರಿಗೆ ಮನರಂಜನೆ ಖಂಡಿತ ಲಭ್ಯವಾಗಲಿದೆ ಎಂದರು.

    ಇದು ನನ್ನ ಮೊದಲ ಚಿತ್ರವಾಗಿದ್ದು, ಮಲ್ಲಂದೂರು, ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಕಳಸಾಪುರ ಮತ್ತಿತರರೆಡೆ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಅಶೋಕ್ ಕಡಬ ಇವರು ನಿರ್ದೇಶಿಸಿದ್ದು, ನಿರ್ಮಾಪಕರಾಗಿ ಮಾದೇಶ್, ಸಂಗೀತ ನಿರ್ದೇಶಕ ಆರ್.ಎಮ್ ಕಾರ್ತಿಕ್ ಸಂಗೀತ ನೀಡಿದ್ದು, ನಾಯಕಿ ತನುಶ್ರೀ, ಹಿರಿಯ ಕಲಾವಿದರಾದ ಪದ್ಮಾವಾಸಂತಿ, ಸುರೇಶ್, ಸಂದೀಪ್ ಮಲಾನಿ, ಸ್ಥಳೀಯ ಕಲಾವಿದರಾದ ಎ.ಎನ್ ಮೂರ್ತಿ ಸೇರಿದಂತೆ ಹಲವರು ತಾರಗಣದಲ್ಲಿದ್ದಾರೆ ಎಂದು ವಿವರಿಸಿದರು.

    ನಿರ್ದೇಶಕ ಅಶೋಕ್ ಕಡಬ ಮಾತನಾಡಿ, ಜಮೀನ್ದಾರ್ ಕುಟುಂಬದಲ್ಲಿ ಜನಿಸಿದ ಮಗು ನಾಪತ್ತೆಯಾಗಿ, ೨೫ ವರ್ಷಗಳ ಬಳಿಕ ಸ್ವಂತ ಮನೆ ಸೇರುವ ಕಥೆಯನ್ನು ಆಧರಿಸಿ, ಚಿತ್ರ ನಿರ್ಮಾಣ ಗೊಂಡಿದ್ದು, ಇದೊಂದು ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಹುದಾದ ಸಾಂಸಾರಿಕ ಚಿತ್ರವಾಗಿದೆ. ವಜ್ರೇಶ್ವರಿ ಕಂಬೈನ್ಸ್ ರವರ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಮುಕುಂದಯ್ಯ ಪಾತ್ರವನ್ನು ರಘು, ಜಮೀನ್ದಾರ್ ಪಾತ್ರವನ್ನು ಎ.ಎನ್ ಮೂರ್ತಿ ನಿರ್ವಹಿಸಿದ್ದಾರೆ ಎಂದರು.

    ಸುಮಾರು ೭೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಚಲನಚಿತ್ರದಲ್ಲಿ ೪ ಗೀತೆಗಳು ಇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮೇಘಮಾಲೆ ಚಿತ್ರದ ನಾಯಕ ಸುನಾದ್‌ರಾಜ್, ನಿರ್ಮಾಪಕ ಮಾದೇಶ್, ತರೀಕೆರೆ ರಘು, ಎ.ಎನ್ ಮೂರ್ತಿ ಉಪಸ್ಥಿತರಿದ್ದರು.

    Kannada movie Nimbiya Banada Maga to be released across the state on April 4

  • ನಗರದಲ್ಲಿ ಇ-ಖಾತಾ ಅಭಿಯಾನಕ್ಕೆ ಚಾಲನೆ

    ನಗರದಲ್ಲಿ ಇ-ಖಾತಾ ಅಭಿಯಾನಕ್ಕೆ ಚಾಲನೆ

    ಚಿಕ್ಕಮಗಳೂರು: ಕಂದಾಯ ಭೂಮಿಯಲ್ಲಿ ನಿರ್ಮಿಸಿಕೊಂಡಿರುವ ಮನೆ, ಕಟ್ಟಡ, ನಿವೇಶನಗಳನ್ನು ಸಕ್ರಮಗೊಳಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಅದರಂತೆ ನಗರದಲ್ಲಿ ಇಂದು ಇ-ಖಾತಾ ಅಭಿಯಾನ ಆರಂಭಿಸಲಾಗಿದೆ ಎಂದು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.

    ಅವರು ಇಂದು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪೌರಾಡಳಿತ ನಿರ್ದೇಶನಾಲಯ ಮತ್ತು ನಗರಸಭೆ ಇವರುಗಳು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಿ, ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

    ನಗರಸಭೆ ವ್ಯಾಪ್ತಿಯಲ್ಲಿ ಬರುವ ನಾಗರೀಕರು ಆಸ್ತಿ ತೆರಿಗೆಯನ್ನು ಪಾವತಿಸದೇ ಇರುವವರು ಇ-ಖಾತಾ ಅಭಿಯಾನದಲ್ಲಿ ಪಾಲ್ಗೊಂಡು ತೆರಿಗೆ ಪಾವತಿಸಿ, ಸಕ್ರಮ ಮಾಡಿಕೊಳ್ಳಲು ಅಪೂರ್ವ ಅವಕಾಶ ಇದಾಗಿದ್ದು, ಇದರಿಂದ ಸ್ವತ್ತಿನ ಬಿ-ಖಾತೆ ಮಾಡಿಕೊಂಡು ಅನುಕೂಲ ಪಡೆಯಿರಿ ಎಂದು ಹೇಳಿದರು.

    ನಗರದ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಈ ತೆರಿಗೆ ಸಂಗ್ರಹ ಬಹಳ ಮುಖ್ಯವಾಗಿದ್ದು, ಸರ್ಕಾರ ನೀಡಿರುವ ಈ ಮೂರು ತಿಂಗಳ ಕಾಲಾವಕಾಶವನ್ನು ಸದ್ಭಳಕೆ ಮಾಡಿಕೊಂಡು ಆಸ್ತಿಯ ಮೌಲ್ಯವರ್ಧಿತ ಗೊಳಿಸಿಕೊಳ್ಳುವಂತೆ ಎಂದು ಮನವಿ ಮಾಡಿದರು.

    ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜು ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಮನೆ ನಿವೇಶನ ನಿರ್ಮಿಸಿಕೊಂಡಿರುವ ನಾಗರೀಕರು ಕೂಡಲೇ ಸರ್ಕಾರ ನೀಡಿರುವ ಬಿ-ಖಾತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆಸ್ತಿಗಳ ಮೌಲ್ಯ ಹೆಚ್ಚಿಸಿಕೊಳ್ಳುವಂತೆ ತಿಳಿಸಿದರು.

    ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು, ಅನಧಿಕೃತ ಆಸ್ತಿಗಳು ಇವೇ ಎಂಬ ಮಾಹಿತಿ ಇದ್ದು, ೨೦೦೩-೦೪ ನೇ ಸಾಲಿನಲ್ಲಿ ಸರ್ವೇ ಕಾರ್ಯ ಕೈಗೊಂಡಾಗ ೬ ಸಾವಿರ ಅನಧಿಕೃತ ಕಟ್ಟಡಗಳು ಇರುವುದು ಪತ್ತೆಹಚ್ಚಲಾಗಿತ್ತು. ಈಗ ಈವರಗೆ ಇನ್ನೂ ೪ ಸಾವಿರ ಹೆಚ್ಚಾಗಿರಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದರು.

    ಸರ್ಕಾರ ಸೌಲಭ್ಯ ಪಡೆದು, ಯಾವುದೇ ರೀತಿಯ ತೆರಿಗೆ ಪಾವತಿ ಮಾಡದೇ ವಾಸ ಮಾಡುತ್ತಿರುವ ನಿವಾಸಿಗಳಿಗೆ ಅನುಕೂಲವಾಗಬೇಕೆಂಬ ದೃಷ್ಠಿಯಿಂದ ಖಾಲಿ ನಿವೇಶನ ಅಥವಾ ಕಟ್ಟಡ ಮನೆ ಹೊಂದಿರುವ ನಾಗರೀಕರು ೧ ವರ್ಷದ ಆಸ್ತಿ ತೆರಿಗೆಯನ್ನು ಪಾವತಿಸಿ, ಬಿ-ಖಾತಾ ಮಾಡಿಸಿಕೊಳ್ಳಬೇಕೆಂದು ಎಂದು ತಿಳಿಸಿದರು.

    ಬಿ-ಖಾತೆ ಆದ ನಂತರ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಣಿ ಆಸ್ತಿಗಳಿಗೆ ನಗರಸಭೆಯಲ್ಲಿ ಇ-ಖಾತೆ ಮಾಡಿಕೊಡುತ್ತೇವೆ ಈ ದಾಖಲೆಗಳನ್ನು ಪಡೆದುಕೊಂಡು ಬ್ಯಾಂಕಿನಲ್ಲಿ ಸಾಲ ಸೌಲಭ್ಯ ಮತ್ತು ಮಾರಾಟ ಮಾಡಲು ಸಹಾಯವಾಗುತ್ತದೆ ಎಂದರು.

    ೧೦-೦೫-೨೦೨೪ ಹಿಂದೆ ಆಗಿರುವ ಆಸ್ತಿ ನೊಂದಣಿ ಪತ್ರ ಪರಿಗಣಿಸಿ, ೧೦-೦೫-೨೦೨೫ ರವರೆಗೆ ಬಿ-ಖಾತಾ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ನಿಗಧಿತ ಅವಧಿಯಲ್ಲಿ ನಾಗರೀಕರು ಆಸ್ತಿ ನೊಂದಣಿ ಮಾಡಿಕೊಳ್ಳಬೇಕು ಇಲ್ಲವಾದರೆ ಮುಂದೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.

    ಈ ತಿಂಗಳ ಅಂತ್ಯದೊಳಗೆ ಖಡ್ಡಾಯವಾಗಿ ನೀರಿನ ತೆರಿಗೆ ಸೇರಿದಂತೆ ಎಲ್ಲಾ ರೀತಿಯ ತೆರಿಗೆಗಳನ್ನು ಪಾವತಿಸಬೇಕು ವಿಳಂಬ ಮಾಡಿದರೆ ನಗರಸಭೆಯಿಂದ ನೀಡಲಾಗಿರುವ ಒಳಚರಂಡಿ ಸಂಪರ್ಕ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಈ ಸಂಬಂಧ ನಗರ ವ್ಯಾಪ್ತಿಯಲ್ಲಿ ಪತ್ರಿಕೆ, ದೂರದರ್ಶನ ಆಟೋದಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡುತ್ತಿದ್ದೇವೆ ಇಂದಿನಿಂದ ೧೦ ದಿನಗಳ ಕಾಲ ಜಾಥಾ ನಡೆಸಿ, ಜಾಗೃತಿ ಮೂಡಿಸಲಾಗುವುದು. ಬಾಕಿ ಉಳಿಸಿಕೊಂಡಿರುವ ನಗರದ ನಾಗರೀಕರು ಕೂಡಲೇ ತೆರಿಗೆಗಳನ್ನು ಪಾವತಿಸಿ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.ಮೊದಲಿಗೆ ಕಂದಾಯ ಅಧಿಕಾರಿ ಶಿವಾನಂದ ಸ್ವಾಗತಿಸಿದರು.

    E-Khata campaign launched in the city

  • ಹಿರೇಮಗಳೂರಿನಲ್ಲಿ ಪಂಚವಟಿ ಯಾತ್ರಿ ನಿವಾಸ ಉದ್ಘಾಟನೆ

    ಹಿರೇಮಗಳೂರಿನಲ್ಲಿ ಪಂಚವಟಿ ಯಾತ್ರಿ ನಿವಾಸ ಉದ್ಘಾಟನೆ

    ಚಿಕ್ಕಮಗಳೂರು: ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪಂಚವಟಿ ಯಾತ್ರಿ ನಿವಾಸವನ್ನು ಶಾಸಕ ಎಚ್.ಡಿ.ತಮ್ಮಯ್ಯ ಅವರು ಭಾನುವಾರ ಲೋಕಾರ್ಪಣೆಗೊಳಿಸಿದರು.

    ಶ್ರೀಕೋದಂಡರಾಮನ ಸನ್ನಿಧಾನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ಪಂಚವಟಿ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಸುಮಾರು ೧೪೪ ವರ್ಷಗಳಿಗೊಮ್ಮೆ ಬರುವಂತಹ ಅಪರೂಪದ ನಕ್ಷತ್ರದಲ್ಲಿ ಬ್ರಹ್ಮರಥೋತ್ಸವ ಆಚರಿಸುತ್ತಿರುವ ಕಾರಣ ಯಾತ್ರಿ ನಿವಾಸವನ್ನು ಇದೇ ದಿನ ಲೋಕಾರ್ಪಣೆ ಮಾಡಲು ಅರ್ಚಕರಾದ ಕಣ್ಣನ್ ಅವರು ನಿಶ್ಚಯಿಸಿದ್ದರು.

    ಸಿ.ಟಿ.ರವಿ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾಗ ನಾನು ದೇವಾಲಯ ಸಮಿತಿಯಲ್ಲಿ ಅಧ್ಯಕ್ಷನಾಗಿ ಪಂಚವಟಿ ನಿವಾಸಕ್ಕೆ ಹಣ ನೀಡಬೇಕು ಎಂದು ಒತ್ತಾಯಿಸಿದ್ದೆವು. ಆಗ ಸಚಿವರಾಗಿದ್ದ ಸಿ.ಟಿ.ರವಿ ಅವರು ೨ ಕೋಟಿ ರೂ. ಮಂಜೂರು ಮಾಡಿದ್ದಾರೆ. ಆ ಯಾತ್ರಿ ನಿವಾಸವನ್ನು ನಾನು ಉದ್ಘಾಟನೆ ಮಾಡುತ್ತಿರುವುದು ನನ್ನ ಪುಣ್ಯ ಎಂದು ಹೇಳಿದರು.

    ಇದಲ್ಲದೆ ಯಾತ್ರಿ ನಿವಾಸ ಕಾಂಪೌಂಡ್ ನಿರ್ಮಿಸಲು ನಮ್ಮ ಸರಕಾರ ೫೦ ಲಕ್ಷ ರೂ.ಗೆ ಮಂಜೂರಾತಿ ನೀಡಿದ್ದು ಈಗಾಗಲೇ ೨೫ ಲಕ್ಷ ರೂ.ಬಿಡುಗಡೆ ಮಾಡಿದೆ. ಕ್ಷೇತ್ರದ ಮಾಜಿ ಶಾಸಕರು ಪ್ರವಾ ಸೋದ್ಯಮ ಸಚಿವರಾದ ವೇಳೆಯಲ್ಲಿ ೨ ಕೋಟಿ ಅನುದಾನ ಮಂಜೂರಾಗಿತ್ತು. ಇದೀಗ ಯಾತ್ರಿಕರ ನಿವಾಸ ಪೂರ್ಣ ಗೊಂಡು ಭಕ್ತಾಗಳಿಗೆ ಸಮರ್ಪಿಸಲಾಗಿದೆ ಎಂದು ಹೇಳಿದರು.ಈ ಕಟ್ಟಡಕ್ಕೆ ಅಡುಗೆ ಮನೆಯ ಅವಶ್ಯಕವಿರುವ ಹಿನ್ನೆಲೆ ಸದ್ಯದಲ್ಲೇ ಅಡುಗೆ ಕೋಣೆಗೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

    ದೇವಾಲಯ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್ ಮಾತನಾಡಿ, ಭಾರ್ಗರಿಪುರಿ ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಾಲಯಕ್ಕೆ ದೇಶ-ವಿದೇಶಗಳಲ್ಲಿ ಭಕ್ತಗಣವಿದೆ. ವಿಶೇಷವಾಗಿ ಈ ಬ್ರಹ್ಮ ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಗಳು, ದೇವಾಲಯ ಒಕ್ಕಲಿನವರು ಸಂತೋಷದಿಂದ ಪಾಲ್ಗೊಂಡು ಜಾತ್ರಾ ಮಹೋತ್ಸವ ಸಂಭ್ರಮದಿಂದ ಆಚರಿಸುತ್ತಾರೆ ಎಂದರು.

    ನಗರಸಭಾ ಅಧ್ಯಕ್ಷೆ ಸುಜಾತಶಿವಕುಮಾರ್, ಗ್ಯಾರಂಟಿ ಪ್ರಾಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಗುತ್ತಿಗೆದಾರ ಜಯಣ್ಣ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ನಗರಸಭೆ ಸದಸ್ಯೆ ವಿದ್ಯಾ ಬಸವರಾಜ್, ಹಿರೇಮಗಳೂರು, ಪ್ರವಾಸೋದ್ಯಮ ಇಲಾಖೆ ಅಕಾರಿ ಲೋಹಿತ್, ನಿರ್ಮಿತಿ ಕೇಂದ್ರದ ಗಂಗಾಧರ್, ದೇವಾಲಯ ಟ್ರಸ್ಟಿ ಎಂ.ಎನ್.ರಂಗನಾಥ್ ಮತ್ತಿತರರಿದ್ದರು.

    Panchavati Pilgrim Residence inaugurated in Hiremagaluru

  • ಆದ್ಯಾತ್ಮ-ಆರೋಗ್ಯ ಪ್ರತಿಯೊಬ್ಬರಲ್ಲೂ ಅವಶ್ಯಕ

    ಆದ್ಯಾತ್ಮ-ಆರೋಗ್ಯ ಪ್ರತಿಯೊಬ್ಬರಲ್ಲೂ ಅವಶ್ಯಕ

    ಚಿಕ್ಕಮಗಳೂರು:  ಆದ್ಯಾತ್ಮ ಮತ್ತು ಆರೋಗ್ಯ ಪ್ರತಿಯೊಬ್ಬರಲ್ಲೂ ಅವಶ್ಯಕ. ದುರಾದೃಷ್ಟ ಇಂದು ಇವೆರಡೂ ಇಲ್ಲದ ಸಮಾಜವನ್ನು ನಾವು ನೋಡುತ್ತಿದ್ದೇವೆ ಎಂದು ವಿಶ್ವ ಧರ್ಮಪೀಠ ಶ್ರೀ ಜಯಬಸವಾನಂದ ಸ್ವಾಮೀಜಿ ಹೇಳಿದರು.

    ನಗರ ಹೊರವಲಯದ ಉಂಡಾಡಿಹಳ್ಳಿ ಶ್ರೀ ಜಯಬಸವ ತಪೋವನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಶಿವಕುಮಾರ್ ಸ್ವಾಮಿಯವರ ಸ್ಮರಣಾರ್ಥ ೪೧ ನೇ ಮಾಸಿಕ ಶಿವಾನುಭವ, ಆರೋಗ್ಯ ಮತ್ತು ರೈತ ಸಂಗಮ ಕಾರ್ಯಕ್ರಮದ ಸಾನಿದ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಭೂಮಿಗೆ ಬೇಸಾಯ ಮಾಡಿ ಬೆಳೆ ಬಿತ್ತಿದರೆ ಉತ್ತಮ ಬೆಳೆ ತೆಗೆಯಬಹುದು. ಅದೇ ರೀತಿ ಶರೀರಕ್ಕೆ ಉತ್ತಮ ಸಂಸ್ಕಾರ ನೀಡಿದರೆ ಮಾತ್ರ ಉತ್ತಮ ನಾಗರೀಕನಾಗಲು ಸಾದ್ಯ ಆದ್ಯಾತ್ಮಿಕ, ಶಿಕ್ಷಣ, ಆಚಾರ, ವಿಚಾರ, ಹಿರಿಯರ ಬಗ್ಗೆ ಗೌರವ, ವಿನಯತೆ, ದಯೆ, ಕರುಣೆ ಪ್ರೀತಿ ಇಂತಹ ಹತ್ತಾರು ಸಂಸ್ಕಾರಗಳನ್ನು ಮೈಗೂಡಿಸಿ ಕೊಂಡಾಗ ಮಾತ್ರ ನಾವು ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾದ್ಯ ಎಂದು ಹೇಳಿದರು.

    ಧನ್ವಂತರಿ ಲೋಕಸಿರಿ ಇಂಡಿಯಾ ಸಂಸ್ಥೆಯ ಸಂಯೋಜಕ ಡಾ.ವಿಶ್ವರಾಜ್ ಆರೋಗ್ಯರೈತ ಸಂಗಮದ ಬಗ್ಗೆ ಮಾತನಾಡಿ, ಕಳೆದ ೩೦-೩೫ ವರ್ಷದ ಹಿಂದೆ ಇಷ್ಟು ಖಾಯಿಲೆಗಳಿರಲಿಲ್ಲ. ಆಸ್ಪತ್ರೆ, ವೆದ್ಯರೂ ಕೂಡ ಇರಲಿಲ್ಲ. ಅಂದು ಹೊಲಗದ್ದೆಗೆ ಸಾವಯವ ಗೊಬ್ಬರ ಹಾಕಿ ತಾನು ಬೆಳೆದ ಪೌಷ್ಠಿಕ ಆಹಾರವನ್ನೇ ರೈತ ಸೇವಿಸುತ್ತಿದ್ದ. ಆತನ ಆಹಾರದಲ್ಲೇ ಔಷದೀಯ ಗುಣವಿತ್ತು.

    ಆದರೆ, ಯಾವಾಗ ಭೂಮಿಗೆ ರಾಸಾಯನಿಕ, ಕ್ರಿಮಿನಾಶಕ ಹಾಕಲು ಪ್ರಾರಂಭಿಸಿದನೋ ಅಂದಿನಿಂದ ಕಾಯಿಲೆಗಳು ಹೆಚ್ಚಾದವು. ಸಾಂಕ್ರಾಮಿಕ ರೋಗಳನ್ನು ಸಾದ್ಯವಾದಷ್ಟು ಮಟ್ಟಿಗೆ ತಡೆಗಟ್ಟಿಕೊಂಡಿದ್ದೇವೆ. ಆದರೆ, ನಮ್ಮಿಂದ ನಾವೆ ತಂದು ಕೊಂಡಿರುವ ಅನೇಕ ರೋಗಗಳಿಗೆ ಇನ್ನೂ ಮದ್ದುಕಂಡುಕೊಂಡಿಲ್ಲ. ಇದಕ್ಕೆ ನಮ್ಮ ಜೀವನ ಪದ್ದತಿಯೆ ಕಾರಣ ಎಂದರು.

    ಡಿಎಲ್‌ಎಸ್ ಸಂಸ್ಥೆಯ ಸಂಸ್ಥಾಪಕ ಡಾ.ಎಚ್.ಬಿ.ಲೋಕೇಶ್ ಮಾತನಾಡಿ, ರೈತ ಬೆಳೆದ ಬೆಳೆಗಳಿಗೆ ಈ ಸರಕಾರ ಒಂದು ನಿಗದಿತ ಬೆಲೆಯನ್ನು ಏಕೆ ನಿಗದಿಪಡಿಸುವುದಿಲ್ಲ ಎಂದು ಪ್ರಶ್ನಿಸಿ ರೈತರಿಗೆ ನಿಗದಿತ ಬೆಳೆ ನೀಡಿದಲ್ಲಿ ರೈತರ ಸಾಮರ್ಥ್ಯ ಹೆಚ್ಚಾಗಿ ನಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ ಎಂಬ ಭಯದಿಂದ ರಾಜಕಾರಣಿಗಳು ಬೆಲೆ ನಿಗದಿಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

    ಕಾಫಿ ಬೆಳಗಾರ ಕೆ.ಆರ್.ರುದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ತಾಲೂಕು ಅಧ್ಯಕ್ಷ ಸುನಿಲ್‌ಕುಮಾರ್, ಗೌರವಾಧಕ್ಷ ಬಸವರಾಜು, ಉಮೇಶ್ ಹಿರೇಗೌಜ, ಮುಲ್ಲುಂಡಪ್ಪ, ಕೆ.ಬಿ.ಲೋಕೇಶ್, ಬಿ.ಕೆ.ಕಿರಣ್, ಡಾ. ಮಲ್ಲಿಕಾರ್ಜುನ ಸ್ವಾಮಿ, ಎಂ.ಬಿ.ಚಂದ್ರಶೇಖರ, ಸಂಗಮನಾಥ ಸರ್ವಮಂಗಳ ಮತ್ತಿತರರು ಉಪಸ್ಥಿತರಿದ್ದರು.

    Health and Farmers’ Union Program

  • ರೈತ ವಿರೋಧಿ ಬಜೆಟ್‌ ವಿರೋಧಿಸಿ ಎರಡೂ ಸದನಗಳಲ್ಲಿ ಬಿಜೆಪಿ ಪ್ರತಿಭಟನೆ

    ರೈತ ವಿರೋಧಿ ಬಜೆಟ್‌ ವಿರೋಧಿಸಿ ಎರಡೂ ಸದನಗಳಲ್ಲಿ ಬಿಜೆಪಿ ಪ್ರತಿಭಟನೆ

    ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ರೈತ ವಿರೋಧಿ, ಮುಸ್ಲಿಂ ತಷ್ಠೀಕರಣದ ಬಜೆಟ್ ವಿರೋಧಿಸಿ ಸೋಮವಾರ ಎರಡೂ ಸದನಗಳಲ್ಲಿ ಬಿಜೆಪಿ ಪ್ರತಿಭಟಿಸಲಿದೆ ಎಂದು ಪಕ್ಷದ ಮುಖಂಡ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ತಿಳಿಸಿದರು.

    ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಬಹುಸಂಖ್ಯಾತರನ್ನು ಕಡೆಗಣಿಸಿರುವ ಹಲಾಲ್ ಬಜೆಟ್, ರಂಜಾನ್ ಬಜೆಟ್, ಸಾಲದ ಬಜೆಟ್, ರೈತರು ಹಾಗೂ ದಲಿತರ ವಿರೋಧಿ ಬಜೆಟ್ ಆಗಿದ್ದು, ರಾಜ್ಯವನ್ನು ಕಾಂಗ್ರೆಸ್ ಸಕಾರ ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು.

    ರಾಜ್ಯದ ಬಜೆಟ್‌ನ ಒಟ್ಟು ೪.೯೦ ಲಕ್ಷ ಕೋಟಿ ರೂ.ಗಳಾಗಿದ್ದು, ಇದೊಂದು ಐತಿಹಾಸಿಕ ಗಾತ್ರದ ಬಜೆಟ್ ಎಂದು ಕಾಂಗ್ರೆಸಿಗರು ಹೇಳಿಕೊಳ್ಳುತ್ತಿದ್ದಾರೆ. ಇದೇ ವೇಳೆ ೧.೧೬ ಲಕ್ಷ ಕೋಟಿ ರೂ. ಸಾಲದ ಬಜೆಟ್ ಮಂಡಿಸಿರುವ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಎನ್ನುವ ಇತಿಹಾಸ ಸೃಷ್ಠಿಗೂ ಕಾರಣವಾಗಿದೆ ಎಂದು ಲೇವಡಿ ಮಾಡಿದರು.

    ಕಾಂಗ್ರೆಸ್ ಸಕಾರ ಕೇವಲ ೨ ವರ್ಷದಲ್ಲಿ ೨.೨೧ ಲಕ್ಷ ಕೋಟಿ ರೂ. ಸಾಲ ಮಾಡಿದೆ. ಈಗ ರಾಜ್ಯದ ಒಟ್ಟು ಸಾಲ ೭.೪೬ ಲಕ್ಷ ಕೋಟಿಗೆ ತಲುಪಿದೆ ಎಂದು ಹೇಳಿದರು.

    ಬಜೆಟ್‌ನಲ್ಲಿ ಬೃಹತ್ ನೀರಾವರಿ ಯೋಜನೆಗಳಿಗೆ ನಯಾಪೈಸೆ ಹಣ ನೀಡಿಲ್ಲ. ಇದೊಂದು ರೈತ ವಿರೋಧಿ ಬಜೆಟ್ ಆಗಿದೆ. ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಭೂ ಪ್ರದೇಶಕ್ಕೆ ನೀರೊದಗಿಸುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ನೀಡಿಲ್ಲ. ತುಂಗಾ-ಭದ್ರಾ ಡ್ಯಾಂನಲ್ಲಿ ಶೇ.೩೦ ರಷ್ಟು ಹೂಳು ತುಂಬಿದೆ. ಇದೇ ಕಾರಣಕ್ಕೆ ಪರ್‍ಯಾಯವಾಗಿ ಹಿಂದೆ ಬಿಜೆಪಿ ಸರ್ಕಾರ ನವುಲೆ ಡ್ಯಾಂ ನಿರ್ಮಾಣಕ್ಕೆ ೧೦೦೦ ಕೋಟಿ ಮೀಸಲಿಟ್ಟಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಒಂದು ಪೈಸೆ ಹಣ ಇಟ್ಟಿಲ್ಲ. ಭೀಮಾ, ಎತ್ತಿಹ ಹೊಳೆ, ಮಹದಾಯಿ ಯೋಜನೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ದೂರಿದರು.

    ಯಡಿಯೂರಪ್ಪ ಅವರ ಅವಧಿಯಲ್ಲಿ ಕೇಂದ್ರದ ೬ ಸಾವಿರ ರೂ.ಗೆ ರಾಜ್ಯದ ೪ ಸಾವಿರ ರೂ. ಸೇರಿಸಿ ೧೦ ಸಾವಿರ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ೪ ಸಾವಿರ ರೂ. ನಿಲ್ಲಿಸಿದೆ. ರೈತರ ಪ್ರತಿ ಹೆಕ್ಟರ್‌ಗೆ ನೀಡಲಾಗುತ್ತಿದ್ದ ೫ ಸಾವಿರ ರೂ. ಡೀಸೆಲ್ ಸಹಾಯಧನ, ರೈತರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನೂ ನಿಲ್ಲಿಸಿದೆ ಎಂದು ಆರೋಪಿಸಿದರು.

    ಸಿದ್ದರಾಮಯ್ಯ ಎಸ್‌ಸಿ, ಎಸ್ಟಿಗಳನ್ನು ತುಚ್ಛೀಕರಿಸುವ ಬಜೆಟ್ ಮಂಡಿಸಿದ್ದಾರೆ. ಸದಾ ಅಂಬೇಡ್ಕರ್, ಸಂವಿಧಾನ ಆಧಾರದ ಸಮಾನತೆ ಎಂದು ಮಾತನಾಡುವ ಅವರು, ದಲಿತರ ಉದ್ಧಾರಕ್ಕೆ ಮೀಸಲಾದ ಎಸ್ಸಿಪಿ, ಟಿಎಸ್‌ಪಿ ಗ್ಯಾರಂಟಿಗೆ ಬಳಸಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯಕ್ಕೆ ಬಜೆಟ್‌ನಲ್ಲಿ ಮೀಸಲಿಡಲಾಗಿರುವ ೪೧,೦೦೦ ರೂ. ಅನುದಾನದಲ್ಲಿ ಈ ಬಾರಿಯೂ ೧೩,೯೧೩ ಕೋಟಿ ರೂ.ಗಳನ್ನು ಬೇರೆಯದ್ದಕ್ಕೆ ಬಳಸಲಾಗುತ್ತಿದೆ. ೨೦೨೪-೨೫ ನೇ ಸಾಲಿನಲ್ಲಿ ೧೪,೨೮೨ ಕೋಟಿ ರೂ. ಎಸ್ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗೆ ಬಳಸಲಾಗಿದೆ. ೨೦೨೩-೨೪ ನೇ ಸಾಲಿನಲ್ಲಿ ೧೧,೧೪೪ ಕೋಟಿ ರೂ.ಗಳನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಹೀಗೆ ಒಟ್ಟು ೩೯,೩೩೯ ಕೋಟಿ ರೂ.ಗಳನ್ನು ಬೇರೆಯದ್ದಕ್ಕೆ ಬಳಸಿ ಎಸ್ಸಿ, ಎಸ್ಟಿಗಳ ಅಭಿವೃದ್ಧಿಗೆ ಕಲ್ಲು ಹಾಕಿ, ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

    ಬಿಜೆಪಿಯನ್ನು ದಲಿತ ವಿರೋಧಿ ಎಂದು ಡಂಗೂರ ಸಾರುವ ಸಿದ್ದರಾಮಯ್ಯ ಕಾನೂನು ಧಿಕ್ಕರಿಸಿ ದಲಿತರ ಅನುದಾನವನ್ನು ಗ್ಯಾರಂಟಿಗೆ ಬಳಸುತ್ತಿದ್ದಾರೆ. ಇದೇನು ಸರ್ವಾಧಿಕಾರವೇ, ಅವರನ್ನು ಕೇಳುವವರು ಯಾರೂ ಇಲ್ಲ ಎಂದುಕೊಂಡಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇನ್ನು ಅಲ್ಪಸಂಖ್ಯಾತರನ್ನು ತುಷ್ಠೀಕರಿಸುವ, ಹಲಾಲ್, ರಂಜಾಜ್ ಬಜೆಟ್ಟನ್ನು ಸಿದ್ದರಾಮಯ್ಯ ಮಂಡಿಸಿದ್ದಾರೆ. ವಕ್ಫ್ ಆಸ್ತಿ ದುರಸ್ತಿ, ನವೀಕರಣಕ್ಕೆ ೧೫೦ ಕೋಟಿ ರೂ., ಉರ್ದುಶಾಲೆಗಳ ನಿಮರ್ಕಾಣಕ್ಕೆ ೧೦೦ ಕೋಟಿ ರೂ., ಇಮಾಮ್‌ಗಳಿಗೆ ೬ ಸಾವಿರ ರೂ. ಗೌರವಧನವನ್ನು ಹೆಚ್ಚಿಸಿದ್ದಾರೆ. ಹಿಂದೂ ದೇವಸ್ಥಾನದ ಅರ್ಚಕರಿಗೆ ೨ ಸಾವಿರ ರೂ. ಗೌರವಧನ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಸ್ಟಾರ್ಟ್‌ಅಪ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎರಡನೇ ಸ್ಥಾನಕ್ಕೆ ಕುಸಿದಿದೆ. ವೃದ್ಧಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತೆ ನೀಡುವ ಯೋಜನೆಗಳಿಗೆ ಹಣವಿಲ್ಲದೆ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ. ಉದ್ಯೋಗ ಸೃಷ್ಠಿ, ಬಂಡವಾಳ ಹೆಚ್ಚಿಸಲು ಬಜೆಟ್‌ನಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲ. ಇದೆಲ್ಲವನ್ನೂ ಖಂಡಿಸಿ ಎರಡೂ ಸದನದಲ್ಲಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ನಂಜನಗೂಡು ಶಾಸಕ ಹರ್ಷವರ್ಧನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜಶೆಟ್ಟಿ, ಎಸ್‌ಸಿ ಘಟಕದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಮುಖಂಡರುಗಳಾದ ದೀಪಕ್ ದೊಡ್ಡಯ್ಯ, ಹಿರೇಮಗಳೂರು ಪುಟ್ಟಸ್ವಾಮಿ, ನಂದೀಶ್ ಮದಕರಿ ಇದ್ದರು.

    BJP protests in both houses of parliament against anti-farmer budget

  • ರೈತರು ಆರ್ಥಿಕ ಸದೃಢವಾಗಲು ಬೆಂಬಲ ಬೆಲೆ ಮೂಲಕ ರಾಗಿ ಖರೀದಿ

    ರೈತರು ಆರ್ಥಿಕ ಸದೃಢವಾಗಲು ಬೆಂಬಲ ಬೆಲೆ ಮೂಲಕ ರಾಗಿ ಖರೀದಿ

    ಚಿಕ್ಕಮಗಳೂರು: ದೇಶದ ಬೆನ್ನೆಲುಬಾಗಿರುವ ರೈತರ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುವ ಮೂಲಕ ರೈತರ ಜೀವನ ಆರ್ಥಿಕವಾಗಿ, ಸಮರ್ಪಕವಾಗಿ, ಸದೃಢವಾಗಿರಲು ನೆರವಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

    ಅವರು ಇಂದು ಇಲ್ಲಿನ ಎಪಿಎಂಸಿ ಆವರಣದಲ್ಲಿ ಜಿಲ್ಲಾಡಳಿತ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ರಾಜ್ಯ ಸಹಕಾರ ಮಹಾ ಮಂಡಲ ಜಿಲ್ಲಾ ಶಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ೨೦೨೪-೨೫ ನೇ ಸಾಲಿನ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ರಾಗಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

    ಹಣವಿಲ್ಲದೆ ಬದುಕಬಹುದು, ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ದೇಶದ ಜೀವಾಳವಾಗಿರುವ ರೈತರ ಬುದಕನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆ ಮೂಲಕ ಆಹಾರ ಪದಾರ್ಥಗಳನ್ನು ಖರೀದಿಸುತ್ತಿದ್ದು, ಮುಂದಿನ ದಿನಗಳಲ್ಲಿ ತರಕಾರಿ ಸೇರಿದಂತೆ ರೈತರ ಎಲ್ಲಾ ಉತ್ಪನ್ನಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕೆಂದು ಒತ್ತಾಯಿಸಿದರು.

    ಕೃಷಿ ಅವಲಂಬಿತ ಕೃಷಿ ಪ್ರಧಾನ ದೇಶ ಭಾರತದಲ್ಲಿ ಜನಸಂಖ್ಯೆಯ ಶೇ.೭೦ ರಷ್ಟು ರೈತ ಸಮುದಾಯ ಮತ್ತು ರೈತ ಕೃಷಿ ಕಾರ್ಮಿಕರನ್ನು ಹೊಂದಿದೆ ಎಂದು ಹೇಳಿದ ಅವರು, ಈ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ರಾಜ್ಯಾದ್ಯಂತ ೮ ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಅನುಮತಿ ನೀಡಿದೆ ಎಂದು ಹೇಳಿದರು.

    ಪ್ರತೀ ಕ್ವಿಂಟಾಲ್ ರಾಗಿಗೆ ೪೨೯೦ ರೂಗಳನ್ನು ನಿಗಧಿಮಾಡಲಾಗಿದ್ದು, ಎಲ್ಲಾ ರೈತರಿಂದ ಪ್ರತಿ ಎಕರೆಗೆ ೧೦ ಕ್ವಿಂಟಾಲ್‌ನಂತೆ ಗರಿಷ್ಟ ೨೦ ಕ್ವಿಂಟಾಲ್ ರಾಗಿ ಖರೀದಿಸಲು ಅವಕಾಶವಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಇಂದು ಇಲ್ಲಿ ರಾಗಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

    ಜಿಲ್ಲೆಯಾದ್ಯಂತ ೧೮,೦೭೧ ರೈತರಿಂದ ೨,೦೮,೫೦೦ ಕ್ವಿಂಟಾಲ್ ನೊಂದಣಿಯಾಗಿದ್ದು, ಈ ಪೈಕಿ ಚಿಕ್ಕಮಗಳೂರು ರಾಗಿ ಖರೀದಿ ಕೇಂದ್ರದಲ್ಲಿ ೯೪೫ ರೈತರು ನೊಂದಾಯಿಸಿದ್ದು, ಸುಮಾರು ೧೫ ಸಾವಿರ ಕ್ವಿಂಟಾಲ್ ರಾಗಿ ಖರೀದಿಸಲಾಗುವುದು. ಕಳೆದ ಸಾಲಿನಲ್ಲಿ ೧೧೫೦ ರೈತರಿಂದ ೨೫೯೬೯ ಕ್ವಿಂಟಾಲ್ ರಾಗಿ ನೊಂದಣಿಯಾಗಿದ್ದು, ಈ ಪೈಕಿ ೭೪೧ ರೈತರಿಂದ ೧೫೭೧೫.೫೦ ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗಿದೆ ಎಂದು ವಿವರಿಸಿದರು.

    ಪ್ರಸ್ತುತ ಸಾಲಿನಲ್ಲಿ ರೈತರು ನೊಂದಣಿ ಮತ್ತು ರಾಗಿ ಮಾರಾಟ ಮಾಡುವಾಗ ಕಡ್ಡಾಯವಾಗಿ ಎರಡು ಬಾರಿ ಬಯೋಮೆಟ್ರಿಕ್ ನೀಡಬೇಕೆಂದು ವಿನಂತಿಸಿದರು.

    ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಪಿಎಂಸಿ ಸಹಾಯಕ ನಿರ್ದೇಶಕ ವಿಶ್ವನಾಥ ರೆಡ್ಡಿ ಮಾಡನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸರ್ಕಾರದ ಆದೇಶದಂತೆ ಬೆಂಬಲ ಬೆಲೆ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರದ ಎಪಿಎಂಸಿ ಆವರಣದಲ್ಲಿ ಇಂದು ರಾಗಿ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದರು.

    ಸಮರ್ಪಕ, ಪಾರದರ್ಶಕವಾಗಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸುವಂತೆ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸಿದ ಅವರು, ರೈತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿ ಅಭಿನಂದನ್, ಆಹಾರ ಸಂಸ್ಕರಣೆ ಇಲಾಖೆಯ ಜನಾರ್ಧನ್ ಸಿ.ಹೆಚ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಶಾಖಾ ವ್ಯವಸ್ಥಾಪಕರಾದ ಚೇತನ್ ಎಂ.ಎಂ, ಉಪಸ್ಥಿತರಿದ್ದರು. ಮೊದಲಿಗೆ ಮೋಹನ್ ರಾವ್ ಸ್ವಾಗತಿಸಿದರು.

    FAQ Quality Ragi Center Inauguration

  • ಬಾಳೆಹೊನ್ನೂರಿನಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

    ಬಾಳೆಹೊನ್ನೂರಿನಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

    ಬಾಳೆಹೊನ್ನೂರು: ಮಾರ್ಚ್ 10ರಿಂದ 14ರವರೆಗೆ ನಡೆಯಲಿರುವ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರಂಭಾಪುರಿ ಪೀಠದ ವೀರ ಸೋಮೇಶ್ವರ ಸ್ವಾಮೀಜಿ ತಿಳಿಸಿದರು.

    10ರಂದು ವೀರಗಾಸೆ– ಪುರವಂತರ ಸಮ್ಮೇಳನವನ್ನು ಎಡೆಯೂರು ಕ್ಷೇತ್ರದ ರೇಣುಕಶಿವಾಚಾರ್ಯರು ಉದ್ಘಾಟಿ ಸಲಿದ್ದು, ಅತಿಥಿಗಳಾಗಿ ಶಾಸಕ ಎಚ್.ಡಿ. ತಮ್ಮಯ್ಯ, ಜಗದೀಶ ಗುಡಗುಂಟಿಮಠ, ಮುಖಂಡ ಮಂಜುನಾಥ ಕುನ್ನೂರು, ವಾಣಿಜ್ಯ ತೆರಿಗೆ ಅಧಿಕಾರಿ ಭುವನೇಶ್ವರಿ ಪಾಟೀಲ ಭಾಗವಹಿಸಲಿದ್ದು, ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ್ ‘ರಂಭಾಪುರಿ ಬೆಳಗು’ ಮಾಸ ಪತ್ರಿಕೆ ಬಿಡುಗಡೆ ಮಾಡುವರು.

    11ರಂದು ಬೆಳಿಗ್ಗೆ 11 ಗಂಟೆಗೆ ನರಸಿಂಹರಾಜಪುರ ತಾಲ್ಲೂಕು ಪತ್ರಕರ್ತರ ಸಂಘದಿಂದ ಕೃಷಿ ಸಮ್ಮೇಳನ, ಕಾಫಿ-ಅಡಿಕೆ ಬೆಳೆಗಾರರ ಹಿತ ಚಿಂತನ ಮಂಥನ ಸಮಾರಂಭ ನಡೆಯಲಿದ್ದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿ ಸುವರು. ಸಂಜೆ 6.30ಕ್ಕೆ ಕೃಷಿ ಮೇಳದ ಸಮಾರೋಪವನ್ನು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಲಿದ್ದಾರೆ. ರಾಯಚೂರಿನ ಚನ್ನಬಸವಯ್ಯ ಹಿರೇಮಠ ಅವರು ಮಮತಾ ರಾಣಿ ಅವರ ಸಂಶೋಧಿತ ಕೃತಿ ‘ಅವಿಭಜಿತ ಬೆಂಗಳೂರು ಜಿಲ್ಲೆಯ ವೀರಭದ್ರ ಆರಾಧನೆ–ಒಂದು ಅಧ್ಯಯನ’ ಬಿಡುಗಡೆ ಮಾಡುವರು.

    12ರಂದು ಬೆಳಿಗ್ಗೆ 11ಕ್ಕೆ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವ, ಕ್ಷೇತ್ರನಾಥ ವೀರ ಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಶಿವಾದ್ವೈತ ಸಮಾವೇಶ ನಡೆ ಯಲಿದೆ. ಉದ್ಯಮಿ ವಿಜಯ ಸಂಕೇಶ್ವರ ಕಾರ್ಯಕ್ರಮ ಉದ್ಘಾಟಿಸುವರು. ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಯನ್ನು ರಾಯಚೂರು ಜಿಲ್ಲೆ ಕವಿತಾಳ ಗ್ರಾಮದ ಸಾವಯವ ಕೃಷಿ ತಜ್ಞೆ ಕವಿತಾ ಮಿಶ್ರಾ ಅವರಿಗೆ ಪ್ರದಾನ ಮಾಡಲಾಗುವುದು. ಚನ್ನಬಸವಯ್ಯ ಹಿರೇಮಠ ರಾಯಚೂರು ರಚಿತ ‘ವೀರಶೈವ ರೇಣುಕ ರೇವಣಸಿದ್ಧ ಸತ್ಯ ದರ್ಶನ’ ಕೃತಿಯನ್ನು ಸಾಹಿತ್ಯ ಸಂಶೋಧಕ ಎ.ಸಿ. ವಾಲಿ ಬಿಡುಗಡೆ ಮಾಡುವರು. ಅತಿಥಿಗಳಾಗಿ ಸಚಿವ ಎಂ.ಬಿ. ಪಾಟೀಲ, ಅಭಾವೀ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ, ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಡಿ.ಎನ್. ಜೀವರಾಜ್, ಕೊಡ್ಲಿಪೇಟೆ ರಾಜೇಶ್ವರಿ ನಾಗರಾಜ್, ಶಿವಮೊಗ್ಗದ ಎಸ್.ಎಸ್. ಜ್ಯೋತಿಪ್ರಕಾಶ್ ಭಾಗವಹಿಸುವರು.

    ಸಂಜೆ ಸಂಗೀತ ಸೌರಭ, ನಗೆ ಹಬ್ಬವನ್ನು ಮಾಜಿ ಶಾಸಕ ಎಚ್.ಎಸ್. ಶಿವಶಂಕರ ಉದ್ಘಾಟಿಸುವರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿ.ಚಿದಾನಂದಪ್ಪ, ಜುಂಜಪ್ಪ ಹೆಗ್ಗಪ್ಪ ನವರ ಪಾಲ್ಗೊಳ್ಳುವರು. ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಸಂಗೀತ ಸೌರಭ, ಹಾಸ್ಯ ಕಲಾವಿದ ಶರಣು ಹಿರೇಮಠ, ಗದುಗಿನ ಜಾನಪದ ಸಂಜೀವಿನಿಯ ಗವಿಸಿದ್ಧಯ್ಯ ಹಳ್ಳಿಕೇರಿಮಠ ಅವರಿಂದ ನಗೆ ಹಬ್ಬ ನಡೆಯಲಿದೆ. 13ರಂದು ಸಂಜೆ ಜಾನಪದ ಮೇಳ ನಡೆಯಲಿದ್ದು, ಶಾಸಕ ಶರಣಗೌಡ ಕಂದಕೂರು ಉದ್ಘಾಟಿಸು ವರು. ಹಾಸನ ಸಂಸದ ಶ್ರೇಯಸ್ ಎಂ.ಪಟೇಲ್, ಕೊಗಳಿಯ ಎಚ್.ಎಸ್.ಶಂಕರಯ್ಯ, ನಂದಿಬೇವೂರಿನ ವೀರೇಶ, ಸೋಮಲಾಪುರದ ವೀರಣ್ಣ ಅಂಗಡಿ ಭಾಗವಹಿಸುವರು ಎಂದು ಮಾಹಿತಿ ನೀಡಿದರು.

    10ರಂದು ಧ್ವಜಾರೋಹಣ ಮತ್ತು ಹರಿದ್ರಾ ಲೇಪನ, 11ರಂದು ದೀಪೋತ್ಸವ ಕುಂಕುಮೋತ್ಸವ, ವೀರಭದ್ರಸ್ವಾಮಿ ಚಿಕ್ಕರಥೋತ್ಸವ, 12ರಂದು ವೀರಭದ್ರಸ್ವಾಮಿ ಮಹಾರಥೋತ್ಸವ, 13ರಂದು ಶಯನೋತ್ಸವ, ಶಿವಾನಂದ ಎಸ್ಟೇಟಿನಲ್ಲಿ ಪೂಜಾ-ಪ್ರಸಾದ, ಕೆಂಡಾರ್ಚನೆ, 14ರಂದು ವಸಂತೋತ್ಸವ, ಭದ್ರಾ ನದಿ ತೀರದಲ್ಲಿ ನಡೆಯುವ ಸುರಗಿ ಸಮಾರಾಧನೆ ಯೊಂದಿಗೆ ಜಾತ್ರಾ ಮಹೋತ್ಸವ ಪೂರ್ಣಗೊಳ್ಳಲಿದೆ ಅವರು ತಿಳಿಸಿದರು.

    Jagadguru Renukacharya Jayanti celebration in Balehonnur

  • ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಚಾಲನೆ

    ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಚಾಲನೆ

    ತರೀಕೆರೆ: ಸಾಹಿತ್ಯ ಸಮ್ಮೇಳನಗಳು ಅಬ್ಬರ, ಆಡಂಬರಗಳಿಗೆ ಆದ್ಯತೆ ನೀಡದೆ ಅರ್ಥಪೂರ್ಣವಾಗಿ ಭಾಷೆ ಕಟ್ಟಲು, ನಾಡಿನ ಉಳಿವಿನ ಕುರಿತು ಜಾಗೃತಿ ಮೂಡಿಸಲು, ನಮ್ಮ ಇತಿಹಾಸ, ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಲು ನಡೆಯುವಂತಾಗಬೇಕು ಎಂದು ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ. ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಹೇಳಿದರು.

    ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತಿರುವುದು ಕನ್ನಡಿಗರೆಲ್ಲರೂ ಅಂತರ ತೊರೆದು ಒಂದಾಗಿ ಆನಂದಿಸಲು ಸಹಕಾರಿಯಾಗಿದೆ.

    ೧೫೦೦ ವರ್ಷಗಳ ಶಾಸನಬದ್ಧ ಪರಂಪರೆ ಇರುವ ಕನ್ನಡ ಭಾಷೆಗೆ ಭವ್ಯ, ಚಿಂತನಶೀಲ, ಆಲೋಚನೆಯ ಸುದೀರ್ಘ ಇತಿಹಾಸವಿದೆ. ಅತಿ ಪ್ರಾಚೀನ, ಅಷ್ಟೇ ಶ್ರೀಮಂತಿಕೆಯುಳ್ಳ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಜಗತ್ತಿನ ೫೦ ಭಾಷೆಗಳ ಪೈಕಿ ಕನ್ನಡವೂ ಒಂದು ಎಂಬುದು ನಮ್ಮೆಲ್ಲರ ಹಿರಿಮೆ ಎಂದು ಸಂತಸ ವ್ಯಕ್ತಪಡಿಸಿದರು.

    ಡಾ. ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕನ್ನಡದ ಗಾಳಿ, ನೀರು, ಊಟ ಶ್ರೇಷ್ಠ. ಮಕ್ಕಳು ತಂದೆ, ತಾಯಿ ಹಾಕಿದ ಹೆಜ್ಜೆಯಲ್ಲಿ ಸಾಗಬೇಕು. ಮಾತೃಭಾಷೆಯನ್ನು ಪ್ರೀತಿಸಿ ಆಧರಿಸಬೇಕು. ಬೆವರು ಹರಿಸಿ ಸಹಸ್ರಾರು ಜನರ ಹೊಟ್ಟೆ ತುಂಬಿಸುವ ಅನ್ನದಾತನಿಗೆ ಗೌರವ ನೀಡುವುದು ಕಡ್ಡಾಯವಾಗಬೇಕು ಎಂದು ಹೇಳಿದರು.

    ಡಾ. ಸಿ.ಕೆ.ಸುಬ್ಬರಾಯ ಮಾತನಾಡಿ, ಕರ್ನಾಟಕ ಪರ ಭಾಷಾ ಸಹಿಷ್ಣುತೆ ಹೊಂದಿದ್ದು, ಇಲ್ಲಿರುವ ಪ್ರತಿಯೊಬ್ಬರೂ ನಾಡು ನುಡಿಯನ್ನು ಗೌರವಿಸಬೇಕು. ಕಸಾಪ ಉದಯೋನ್ಮುಖ ಲೇಖಕಕರನ್ನು ಉತ್ತೇಜಿಸುತ್ತಿದ್ದು, ಇಂದಿನ ಯುವ ಸಮೂಹ ಸಾಹಿತ್ಯಾಭಿರುಚಿ ಮೈಗೂಡಿಸಿಕೊಳ್ಳಬೇಕು ಎಂದರು.

    ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಇತರೆಡೆ ಮಾತ್ರವಲ್ಲ, ತರೀಕೆರೆ ತಾಲೂಕಿನಲ್ಲೂ ಎಲ್ಲ ಧರ್ಮ, ಪಂಥಗಳು ಸಾತ್ವಿಕ ಮನಸ್ಸಿನಿಂದ ನೆಲೆಗೊಂಡಿವೆ. ಕಸಾಪ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುವರಿಗೆ ಬೆನ್ನುತಟ್ಟುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

    ಎಸಿ ಡಾ. ಕೆ.ಜೆ.ಕಾಂತರಾಜ್, ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಮಾಜಿ ಉಪಾಧ್ಯಕ್ಷೆ ಎಂ.ಗಿರಿಜಾ, ಸದಸ್ಯೆ ಪಾರ್ವತಮ್ಮ, ತಹಸೀಲ್ದಾರ್ ವಿಶ್ವಜೀತ ಮೆಹತಾ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಎಸ್.ಎಸ್.ವೆಂಕಟೇಶ್, ಜಿ.ಬಿ.ಪವನ್, ಸಾಹಿತಿ ಹಳೆಕೋಟೆ ರಮೇಶ್, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಇತರರಿದ್ದರು.

    20th District Kannada Literary Conference inaugurated

  • ಹೆಣ್ಣು ಮತು ಗಂಡು ಎಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು

    ಹೆಣ್ಣು ಮತು ಗಂಡು ಎಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು

    ಚಿಕ್ಕಮಗಳೂರು:  ಹೆಣ್ಣು ಮಕ್ಕಳನ್ನು ಭ್ರೂಣದಲ್ಲಿ ಹತ್ಯೆ ಮಾಡುವುದು ಕಾನೂನಾತ್ಮಕ ಅಪರಾಧವಾಗಿದೆ. ಹೆಣ್ಣು ಮತ್ತು ಗಂಡು ಎಂಬ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ವಿ. ಹನುಮಂತಪ್ಪ ಹೇಳಿದರು.

    ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಘಟಕ ಹಾಗೂ ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್, ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ”ಭ್ರೂಣ ಹತ್ಯೆ ನಿಷೇಧ ಮತ್ತು ನಿಯಂತ್ರಣ  ಕಾಯ್ದೆ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಕಾಯ್ದೆ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

    ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದಾರಿ ತಪ್ಪುತ್ತಿದ್ದು, ಮಕ್ಕಳು ಶಾಲಾ ಅವಧಿಯಲ್ಲಿ ಶಿಕ್ಷಣದ ಕಡೆಗೆ ಗಮನ ನೀಡಬೇಕು.ಜೀವನದಲ್ಲಿ ಮಕ್ಕಳು ಗುರಿಗಳನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು. ಗುರಿ ಸಾಧಿಸುವವರೆಗೆ ಪ್ರಯತ್ನ ಬಿಡಬಾರದು, ಸಂವಿಧಾನದ ಆಶಯದಂತೆ ಸಂವಿಧಾನದ ಅಡಿಯಲ್ಲಿ ಕಾನೂನಾತ್ಮಕವಾಗಿ ಮಕ್ಕಳನ್ನು ರಕ್ಷಣೆ ಮಾಡಬೇಕು. ಸರ್ಕಾರವು ಮಕ್ಕಳ ರಕ್ಷಣೆ ಕುರಿತು ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು, ಮಕ್ಕಳು ಬೆಳೆದು ಸಮುದಾಯ ರಾಜ್ಯ, ದೇಶವನ್ನು ಮುನ್ನಡೆಸಬೇಕು. ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ೧೮ ವ?ದೊಳಗಿನ ಹೆಣ್ಣು ಹಾಗೂ ೨೧ ವ?ದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.

    ಮಕ್ಕಳು ನಮ್ಮ ನಡುವೆ ಓಡಾಡುವ ಚೇತನಗಳು, ಅವರ ರಕ್ಷಣೆ  ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಮಕ್ಕಳನ್ನು ರಕ್ಷಣೆ ಮಾಡುವುದು ತಾಯಿಯ ಗರ್ಭದಲ್ಲಿರುವಾಗಲೇ ಹಲವಾರು ಕಾನೂನಾತ್ಮಕ ರಕ್ಷಣೆ ಹಾಗೂ ಯೋಜನೆಗಳ ಫಲವನ್ನು ಪಡೆದು ಜನಿಸುತ್ತದೆ. ಮಕ್ಕಳು ದೇಶದ ಆಸ್ತಿ, ಮಕ್ಕಳು ನಂಬಿಕೆ, ನೆಮ್ಮದಿ, ಸುಖ-ಸಂತೋ?ದ ಹಾಗೂ ಕಲಿಯುವ ವಾತಾವರಣದಲ್ಲಿ ಬೆಳೆದು ಬಂದರೆ ಅವರಿಗೆ ಅರ್ಥಪೂರ್ಣ ಭವಿ? ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಹುಟ್ಟುವ ಪ್ರತಿ ಮಗುವನ್ನು ಅಕ್ಕರೆಯಿಂದ ಜಾಗರೂಕತೆಯಿಂದ ಬೆಳೆಸಿ ಎಂದು ಹೇಳಿದರು.

    ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಶುಂಪಾಲರಾದ ಶ್ರೀಧರಮೂರ್ತಿ ಟಿ.ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಉಪಯುಕ್ತವಾಗಿದೆ.ನಾವು ಪ್ರತಿದಿನ ಮಕ್ಕಳಿಗೆ ಪಠ್ಯದ ಬಗ್ಗೆ ಮಾಹಿತಿಯನ್ನು ನೀಡುತ್ತಿರುತ್ತೇವೆ ಆದರೆ ಇಂದು ನ್ಯಾಯಾಧೀಶರು ಮಕ್ಕಳಿಗೆ ತಮ್ಮ ಅನುಭವ ಮತ್ತು ಪ್ರಕರಣದ ಉದಾಹರಣೆ ನೀಡಿ ಅರ್ಥ ಗರ್ಭಿತವಾಗಿ ಮಾಹಿತಿ ನೀಡಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

    ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ  ಮಾತನಾಡಿ ಸಂವಿಧಾನದ ಅಡಿಯಲ್ಲಿ ಮಕ್ಕಳಿಗೂ ಕೂಡಾ ಹಕ್ಕುಗಳಿದ್ದು ಅವುಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಮಕ್ಕಳಿಗೆ ಸಮಸ್ಯೆಗಳು ಬಂದ ಸಮಯದಲ್ಲಿ ಮಕ್ಕಳ ಸಹಾಯವಾಣಿ-೧೦೯೮ಗೆ ಕರೆಮಾಡಿದ್ದಲ್ಲಿ ತುರ್ತಾಗಿ ಸ್ಪಂದಿಸಿ ಮಕ್ಕಳ ರಕ್ಷಣೆಯನ್ನು ಮಾಡಲಾಗುತ್ತದೆ. ಮಕ್ಕಳು ಮೊಬೈಲ್ ಬಳಕೆಗಳನ್ನು ಕಡಿಮೆ ಮಾಡಿ ಓದಿನ ಕಡೆ ಗಮನಹರಿಸಬೇಕು ಪ್ರತಿದಿನ ಮಕ್ಕಳು ಯೋಗ, ಧ್ಯಾನ ಮಾಡುವುದರಿಂದ ಹೆಚ್ಚಿನ ಜ್ಞಾನವನ್ನು ಪಡೆಯಬಹುದು. ಮಕ್ಕಳು ವಾಹನಗಳನ್ನು ಚಲಾಯಿಸುವಾಗ ಅಪಘಾತವಾಗಬಹುದು ಆದ್ದರಿಂದ ೧೮ ವ?ದ ನಂತರ ಲೈಸೆನ್ಸ್ ಪಡೆದು ವಾಹನ ಚಲಾಯಿಸಬೇಕು ಎಂದು ತಿಳಿಸಿದರು.

    ಜಿಲ್ಲಾ ನಿರೂಪಣಾಧಿಕಾರಿ ಲೋಕೇಶ್ವರಪ್ಪ ಪಿ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಂತೋ?, ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಯಾಂತ್ರಿಕ ವಿಭಾಗ ವಿಬಾಗಾಧಿಕಾರಿ, ಡಾ| ಸುನೀಲ್‌ಕುಮಾರ್ ಹೆಚ್,ಎಸ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

    Child Sexual Abuse Prevention Program