Category: ಜಿಲ್ಲಾ ಸುದ್ದಿ

  • ಮನುಷ್ಯನ ಹೃದಯಾಳದಿ ಭಗವಂತನ ನೆಲೆ

    ಮನುಷ್ಯನ ಹೃದಯಾಳದಿ ಭಗವಂತನ ನೆಲೆ

    ಚಿಕ್ಕಮಗಳೂರು: ಮನುಷ್ಯನ ಹೃದಯಾಳದಿ ಭಗವಂತನು ನೆಲೆಸಿರುವನು. ಎಲ್ಲೆಲ್ಲೋ ತೆರಳಿ ಶೋಧಿಸುವ ಮೊದಲು, ಆತ್ಮದಲ್ಲಿ ಅಡಗಿರುವ ಪರಮಾತ್ಮನೊಟ್ಟಿಗೆ ಸನ್ಮಾರ್ಗದಲ್ಲಿ ಸಾಗಿದಾಗ ಬದು ಕು ಸಾತ್ವಿಕ ರೂಪು ಪಡೆದುಕೊಳ್ಳಲಿದೆ ಎಂದು ಬಸವತತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

    ತಾಲ್ಲೂಕಿನ ಲಕ್ಯಾ ಹೋಬಳಿ ಸಮೀಪ ಗಾಣದಾಳು ಗ್ರಾಮದಲ್ಲಿ ವಿಶ್ವಬಂಧು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ, ಕುಂಭಾಭಿಷೇಕ, ಕಳಸಾರೋಹಣ ಹಾಗೂ ಧಾರ್ಮಿಕ ಸ ಮಾರಂಭದ ದಿವ್ಯ ಸಾನಿಧ್ಯವಹಿಸಿ ಸೋಮವಾರ ಅವರು ಆರ್ಶೀವಚನ ನೀಡಿದರು.

    ಭಕ್ತಾಧಿಗಳು ಮತ್ತು ಗ್ರಾಮಸ್ಥರು ದೇವಾಲಯ ನಿರ್ಮಾಣ ಅಥವಾ ಜೀರ್ಣೋದ್ದಾರಕ್ಕೆ ಮುಂದಾದರೆ ಸಾಲದು, ದೈನಂದಿನ ಪೂಜಾಕೈಂಕರ್ಯಗಳಲ್ಲಿ ತಲ್ಲೀನರಾಗಬೇಕು. ಪ್ರಾರ್ಥನೆ, ಪೂಜೆಯ ಜೊತೆಗೆ ವೈಮ ನಸ್ಸಿನ ಕೆಡಕನ್ನು ತೊಡೆದು, ಸದ್ಗುಣಗಳನ್ನು ಮೈಗೂಡಿಸಿಕೊಂಡು ಸಾಗಿದರೆ ದೇವಾಲಯ ನಿರ್ಮಾಣಗೊಂ ಡಿದ್ದಕ್ಕೆ ಸಾರ್ಥಕವಾದಂತೆ ಎಂದು ತಿಳಿಸಿದರು.

    ಶ್ರೀ ಮರುಳಸಿದ್ದೇಶ್ವರರು ಹಾಗೂ ಬಸವಣ್ಣನವರ ಒಂದೇ ಕಾಲದಲ್ಲಿ ಜೀವಿಸಿದವರು. ಶೋಷಿತರ ಧ್ವನಿ ಯಾಗಿ ಮತ್ತು ಸಂಸ್ಕೃತಿ, ಸಂಪ್ರದಾಯದ ಅಂಕುಡೊಂಕುಗಳನ್ನು ತಿದ್ದಲು ಇಡೀ ಜೀವನವನ್ನೆ ಸಮಾಜಕ್ಕಾಗಿ ಮುಡಿಪಿಟ್ಟ ಶ್ರೇಷ್ಟ ದಾರ್ಶನಿಕರು. ಯಜ್ಞಾಧಿಗಳನ್ನು ವಿರೋಧಿಸಿ ಉತ್ತಮ ಪರಂಪರೆಯನ್ನು ಸಮಾಜಕ್ಕೆ ಧಾರೆಗೈದವರು ಎಂದು ಬಣ್ಣಿಸಿದರು.

    ಎದೆಗೂಡಿನಲ್ಲಿ ಪರಮಾತ್ಮನನ್ನು ಕಾಣಲು ಮಾನವ ತನ್ನ ದೃಷ್ಟಿಕೋನ ಬದಲಿಸಿ, ಶ್ರದ್ದಾರ್ಪೂಕವಾಗಿ ಒಳಗಣ್ಣಿನಿಂದ ಪ್ರಾರ್ಥಿಸಿದರೆ, ತಾನಾಗಿಯೇ ದರ್ಶನ ಭಾಗ್ಯ ಕರುಣಿಸುವನು. ತನ್ನೊಳಗಿನ ದೇವರನ್ನು ಪೂ ಜಿಸುವ ಪರಿಯನ್ನು ಅರಿತುಕೊಳ್ಳಬೇಕು. ಈ ರೀತಿಯಲ್ಲೂ ಮರುಳಸಿದ್ದರು ತನ್ನ ವ್ಯಾಪ್ತಿಯಲ್ಲಿ ಸಕಲದೈವವು ಒಂದೆಡೆ ನೆಲೆಸಿದ್ದಾನೆ ಎಂಬ ಸಿದ್ಧಾಂತ ಸಾರಿದ್ದರು ಎಂದು ಹೇಳಿದರು.

    ಗ್ರಾಮಸ್ಥರು, ದಾನಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಗಾಣದಾಳು ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯವರ ಭವ್ಯ ಮಂದಿರ ನಿರ್ಮಾಣಗೊಂಡಿರುವುದು ಶ್ಲಾಘನೀಯ. ಆ ನಿಟ್ಟಿನಲ್ಲಿ ಗ್ರಾಮಸ್ಥರು ಮಕ್ಕ ಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವುದಾಗಿ ಬಾಲ್ಯದಿಂದಲೇ ದೇವಾಲಯಕ್ಕೆ ಕಳುಹಿಸುವ ಪದ್ಧತಿ ರೂಢಿಸಬೇಕು ಎಂದು ಕಿವಿಮಾತು ಹೇಳಿದರು.

    ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಶ್ರೀ ಮರುಳಸಿದ್ಧರ ಕಾಲಘಟ್ಟದಲ್ಲಿ ಆರ್ಥಿಕ ಸಮಾನತೆ, ಮಹಿ ಳೆಯರಿಗೆ ಗೌರವಿಸುವುದು, ಕಾಯಕವೇ ಕೈಲಾಸ ಎಂಬುದನ್ನು ವಚನಗಳ ಮುಖಾಂತರ ಸಾರಿ ಸಮಸಮಾ ಜಕ್ಕೆ ಹೆಜ್ಜೆಯಿಟ್ಟ ಶ್ರೇಷ್ಟರ ದೇವಾಲಯವನ್ನು ಪುಟ್ಟ ಗ್ರಾಮದಲ್ಲಿ ಪ್ರತಿಷ್ಟಾಪಿಸಿರುವ ಗ್ರಾಮಸ್ಥರ ಮನಸ್ಸು ಅ ತೀವ ದೊಡ್ಡದು ಎಂದು ಹೇಳಿದರು.

    ಪ್ರಸ್ತುತ ದೇವಾಲಯ ಅಭಿವೃಧ್ದಿಗೆ ಶಾಸಕರ ನಿಧಿಯಿಂದ ೧೦ ಲಕ್ಷ ಅನುದಾನ ಪೂರೈಸುವ ಜೊತೆಗೆ ವಿವಿಧ ದಾನಿಗಳು, ಗ್ರಾಮಸ್ಥರ ಸಹಕಾರದಿಂದ ಇಂದು ವಿಜೃಂಭ್ರಮಣೆಯಿಂದ ಲೋಕಾರ್ಪಣೆಗೊಂಡಿದ್ದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ಒಕ್ಕಲಿನ ಕುಟುಂಬವು ಮುಕ್ತವಾಗಿ ತೆರಳಿ ಪೂಜಾವಿಧಿವಿಧಾನ ಕೈಗೊಳ್ಳಲು ಅನುವು ಮಾಡಲಾಗಿದೆ ಎಂದರು.

    ಬಸವತತ್ವ ಪೀಠವು ಕೇವಲ ಚಿಕ್ಕಮಗಳೂರು ತಾಲ್ಲೂಕಿಗೆ ಸೀಮಿತವಾಗಿತ್ತು. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಗದ್ದುಗೆ ವಹಿಸಿಕೊಂಡ ಬಳಿಕ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗದಲ್ಲೂ ಪ್ರತೀತಿ ಪಡೆ ಯುತ್ತಿದೆ. ಮುಂದೆ ಚಿಕ್ಕಮಗಳೂರಿಗೆ ಆಗಮಿಸುವವರು ಶೃಂಗೇರಿ, ರಂಭಾಪುರೀ ಮಠಗಳಿಗೆ ಭೇಟಿ ನೀ ಡಿದಂತೆ, ಬಸವತತ್ವಪೀಠಕ್ಕೆ ಭೇಟಿ ನೀಡುವಂತೆ ಅಭಿವೃದ್ದಿಪಡಿಸಲು ಮುಂದಾಗುತ್ತೇವೆ ಎಂದರು.

    ಉದ್ಯಮಿ ಹಾಗೂ ದಾನಿ ಬಿ.ಎನ್.ಚಿದಾನಂದ್ ಮಾತನಾಡಿ ದೇವಾಲಯ ಅಭಿವೃಧ್ದಿ ಹಣ ಕೊಡು ವಷ್ಟು ದೊಡ್ಡವರಲ್ಲ, ಕೇವಲ ಸೇವೆಯ ದೃಷ್ಟಿಯಿಂದ ಕೆಲಸ ನಿರ್ವಹಿಸಿದ್ದೇವೆ. ಭಕ್ತಾಧಿಗಳು ಪ್ರಾರ್ಥನೆ ಹಾ ಗೂ ಆಚರಣೆಗಾಗಿ ತಾವು ಸೇರಿದಂತೆ ಅನೇಕರ ದಾನದಿಂದ ಶ್ರೀ ಮರುಳಸಿದ್ದೇಶ್ವರರ ಭವ್ಯ ಮಂದಿರ ನಿ ರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ ಎಂದು ಹೇಳಿದರು.

    ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಚಂಚಲ ಮನಸ್ಸನ್ನು ನಿಗ್ರಹಿಸಲು ದೇ ವಾಲಯ ಅತ್ಯಂತ ಪುಣ್ಯಸ್ಥಳಗಳು. ಪೂರ್ವಿಕರ ಕಾಲದಲ್ಲಿ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಪಾಲಿಸ ಬೇಕು. ಮೊದಲು ಸ್ಥಳೀಯ ದೇವಾಲಯ ಆದ್ಯತೆ ನೀಡಿ, ತದನಂತರ ಪ್ರಸಿದ್ಧ ದೇಗುಲಗಳಿಗೆ ತೆರುವ ಪದ್ಧ ತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಜಿ.ಪಂ. ಮಾಜಿ ಉಪಾ ಧ್ಯಕ್ಷ ಬಿ.ಜಿ.ಸೋಮಶೇಖರ್, ಉದ್ಯಮಿಗಳಾದ ಬಿ.ಎನ್. ರಾಜಶೇಖರ್, ಬಿ.ಎನ್.ಷಡಾಕ್ಷರಿ, ಸಾಹಿತಿ ಚಟ್ನ ಹಳ್ಳಿ ಮಹೇಶ್, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಮಹಡಿಮನೆ ಸತೀಶ್, ಶ್ರೀ ಮರುಳಸಿದ್ದೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಎಂ.ರಮೇಶ್, ಉಪಾಧ್ಯಕ್ಷ ಜಿ.ರಮೇಶ್, ಗ್ರಾಮಸ್ಥರಾದ ಚಂದ್ರಶೇಖರ್, ಮಲ್ಲಿಕಾರ್ಜುನ್, ಗಿರೀಶ್, ಎಲ್.ಆರ್.ಈಶ್ವರಪ್ಪ ಉಪಸ್ಥಿತರಿದ್ದರು.

    Vishwabandhu Sri Marulasiddheshwara Swamy New Temple Entrance Ceremony

  • ಪರೀಕ್ಷಾ ಕೊಠಡಿಗಳಲ್ಲಿ ಏಕಾಗ್ರತೆ-ಆತ್ಮವಿಶ್ವಾಸ ಮುಖ್ಯ

    ಪರೀಕ್ಷಾ ಕೊಠಡಿಗಳಲ್ಲಿ ಏಕಾಗ್ರತೆ-ಆತ್ಮವಿಶ್ವಾಸ ಮುಖ್ಯ

    ಚಿಕ್ಕಮಗಳೂರು: ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಏಕಾಗ್ರತೆ, ಜ್ಞಾಪಕಶಕ್ತಿ ಹಾ ಗೂ ಆತ್ಮವಿಶ್ವಾಸದಿಂದ ಕೂಡಿದ್ದರೆ ಮಾತ್ರ ನಿಗಧಿತ ಅಂಕಗಳಿಸುವ ಮೂಲಕ ತೇರ್ಗಡೆ ಹೊಂದಬಹುದು ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ಹೇಳಿದರು.

    ನಗರದ ಎಐಟಿ ಕಾಲೇಜಿನ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ವಿಜಯಂಗಮ ಕಾರ್ಯಕ್ರಮ ಪ್ರಯುಕ್ತ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಮತ್ತು ಪರೀಕ್ಷಾ ಸಿದ್ಧತೆ ಕಾರ್ಯಾಗಾರದ ಅಧ್ಯ ಕ್ಷತೆ ವಹಿಸಿ ಭಾನವಾರ ಅವರು ಮಾತನಾಡಿದರು.

    ಅಂತಿಮ ಪರೀಕ್ಷೆಗಳಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಆತಂಕ, ಭಯ ಎನ್ನುವುದು ಸಹಜ. ಕಲಿತಂಥ ವಿದ್ಯೆ ಹಾಗೂ ತುಂಬು ಮನಸ್ಸಿನಿಂದ ಪರೀಕ್ಷೆ ಎದುರಿಸಿದರೆ ಪ್ರಶ್ನೆಗಳಿಗೆ ಸಲೀಸಾಗಿ ಉತ್ತರ ಬರೆಯಬಹುದು. ಹೀ ಗಾಗಿ ಪರೀಕ್ಷಾ ಕೊಠಡಿಗಳಲ್ಲಿ ಎಲ್ಲಾ ಭಯವನ್ನು ಬಿಟ್ಟು ಮುಕ್ತವಾಗಿರಬೇಕು ಎಂದು ತಿಳಿಸಿದರು.

    ಅಧಿಕ ಅಂಕ ಗಳಿಸಲು ಕೆಲವರು ದಿನವೀಡಿ ಓದುವ ಹವ್ಯಾಸ ರೂಢಿಸಿಕೊಳ್ಳುತ್ತಾರೆ. ಆದರೆ ಪರೀಕ್ಷೆ ವೇಳೆಯಲ್ಲಿ ಜ್ಞಾಪಕಶಕ್ತಿ ಕುಂದಲಿವೆ. ಹೀಗಾಗಿ ಕನಿಷ್ಟ ಐದಾರು ಗಂಟೆಗಳ ಪಠ್ಯವನ್ನು ಅಭ್ಯಾಸಿಸುವ ಮೂ ಲಕ ಮನದಟ್ಟು ಮಾಡಿಕೊಳ್ಳಬೇಕು. ಇದರಿಂದಾಗಿ ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ತಾನಾಗಿಯೇ ಮುನ್ನೆ ಲೆಗೆ ಬರಲಿದೆ ಎಂದು ಹೇಳಿದರು.

    ಪರೀಕ್ಷಾ ಸಮಯದಲ್ಲಿ ಓದಿನ ಜೊತೆಗೆ ಆರೋಗ್ಯ ಕಡೆ ಹೆಚ್ಚು ಗಮನಹರಿಸಬೇಕು. ಸಮಯಕ್ಕೆ ಸರಿ ಯಾಗಿ ನಿದ್ರೆ, ಊಟ ಸೇವಿಸಬೇಕು. ಮಲಗುವ ಮುನ್ನ ಅಭ್ಯಾಸಿದಂಥ ಪಠ್ಯವನ್ನು ನೆನಪಿಸಿಕೊಳ್ಳಬೇಕು. ಪ್ರಶ್ನೆಗಳು ಪುಸ್ತಕ ಹೊರತಾಗಿ ಇರುವ ಕಾರಣ ಅರ್ಥೈಸಿಕೊಂಡು ಸಕರಾತ್ಮಕ ಮನೋಭಾವದಿಂದ ಎದುರಿ ಸಿದರೆ ಉನ್ನತ ಸ್ಥಾನದಲ್ಲಿ ಹೊರಹೊಮ್ಮಲು ಸಾಧ್ಯ ಎಂದರು.

    ಇಟಾಲಿಕ್ ಕೈಬರಹ ತಜ್ಞ ದುಗ್ಗಪ್ಪಗೌಡ ಮಾತನಾಡಿ ಅಂತಿಮ ಪರೀಕ್ಷೆಗಳಲ್ಲಿ ಮಕ್ಕಳು ಶಕ್ತಿವಂತರಾ ಗಬೇಕು. ಪರೀಕ್ಷೆ ಎರಡ್ಮೂರು ತಿಂಗಳ ಮುನ್ನವೇ ಕಲಿಕೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಶರೀರಿದ ನರ, ನಾಡಿ ಹಾಗೂ ಮಸ್ತಕದಲ್ಲಿ ಪರೀಕ್ಷೆ ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡರೆ ಸುಲಭವಾಗಿ ಮುಂದಿನ ತರ ಗತಿಗೆ ತೇರ್ಗಡೆಯಾಗಲು ಸಾಧ್ಯ ಎಂದು ಹೇಳಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಯೋಗ ಮತ್ತು ಪ್ರಚಾರ ವ್ಯವಸ್ಥಾಪಕಿ ಎಸ್.ಡಿ.ಚಂದ್ರಕು ಮಾರಿ ಪರೀಕ್ಷಾ ಕೊಠಡಿಗಳಲ್ಲಿ ಪ್ರಶ್ನೆಪತ್ರಿಕೆ ಕೈಗೆ ದೊರೆತಾಗ ಶಾಂತಿಯಿಂದ ಆಲಿಸಬೇಕು. ಗಾಬರಿಗೊಳ್ಳದೇ ಪ್ರಶ್ನೆಗಳನ್ನು ಅರ್ಥೈಸಿಕೊಂಡು ಮುನ್ನೆಡೆದರೆ ಉತ್ತರಗಳು ಲಭಿಸಲು ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಹೆಚ್ಚು ಗಾಬರಿಯಾಗದೇ ಸೂಕ್ಷ್ಮವಾಗಿ ಎದುರಿಸಬೇಕು ಎಂದು ತಿಳಿಸಿದರು.

    ಆದಿಚುಂಚನಗಿರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಆರ್.ಚಂದ್ರಶೇಖರ್ ಮಾತನಾಡಿ ಕಡೂರು, ಚಿಕ್ಕಮಗಳೂರು ಹಾಗೂ ಜಾವಳಿ ಭಾಗದ ಸಂಸ್ಥೆಯ ವಿದ್ಯಾರ್ಥಿಗಳನ್ನು ಇಂದು ಒಂದೆಡೆ ಸೇರಿಸಿ ಮಾನಸಿಕ ಆರೋಗ್ಯ ಮತ್ತು ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಹಮ್ಮಿಕೊಂಡು ಆತ್ಮವಿಶ್ವಾಸ ಮೂಡಿಸುತ್ತಿದೆ ಎಂದರು.

    ಈ ಸಂದರ್ಭದಲ್ಲಿ ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಜೆ.ಜಿ.ಸುರೇಂದ್ರ, ಪಾಲಿಟೆಕ್ನಿಕ್ ಪ್ರಾಂ ಶುಪಾಲ ಕೆ.ಎಂ.ಸಚ್ಚಿನ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    SSLC Exam Preparation Workshop for Students

  • ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲ ಗುಣಾತ್ಮಕವಾಗಿ ಆಚರಿಸಿ

    ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲ ಗುಣಾತ್ಮಕವಾಗಿ ಆಚರಿಸಿ

    ಚಿಕ್ಕಮಗಳೂರು: ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿ ಆಯೋಜಿಸುವ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಜನವರಿ ೩೦ರಿಂದ ಫೆಬ್ರವರಿ ೧೩ರ ವರೆಗೆ ಪ್ರತಿ ವಷ?ದಂತೆ ಈ ವ?ವು ಗುಣಾತ್ಮಕವಾಗಿ ಆಚರಿಸಿ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನ ಹೆಚ್.ಎಸ್ ಹೇಳಿದರು.

    ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಇಂದು ಮಾಹಿತಿ ಶಿಕ್ಷಣ ಸಂಪರ್ಕ ಭಿತ್ತಿ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆಂದೋಲನದ ಉದ್ಧೇಶ ಹಾಗೂ ಮಾಹಿತಿಯನ್ನು ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರಿಗೆ ತಲುಪಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ ಬಾಬು ಈ ಸಂದರ್ಭದಲ್ಲಿ ಮಾತನಾಡಿ ಕುಷ್ಠರೋಗವು ಮೈಕೋಬ್ಯಾಕ್ಟಿರಿಯಂ ಲೆಪ್ರೆ ಎಂಬ ಬ್ಯಾಕ್ಟಿರಿಯಾದಿಂದ ಹರಡುವ ಸೋಂಕು ರೋಗವಾಗಿದ್ದು, ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ನೀಡಲಾಗುವ ಬಹು ಔಷದ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಇದು ಚರ್ಮ ಮತ್ತು ನರಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು ಚಿಕಿತ್ಸೆ ಪಡೆಯದೆ ಉದಾಸಿನ ಮಾಡಿದಲ್ಲಿ ಅಂಗವಿಕಲತೆ ಮತ್ತು ವಿರೂಪಕತೆ ಉಂಟಾಗುತ್ತದೆ ಎಂದರು.

    ಆದ್ದರಿಂದ ಯಾವುದೇ ರೀತಿಯ ತಿಳಿ, ಬಿಳಿ, ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಕು?ರೋಗವೇ ಎಂಬುದರ ಬಗ್ಗೆ ಪರೀಕ್ಷಿಸಿಕೊಂಡು, ರೋಗ ಖಚಿತಗೊಂಡಲ್ಲಿ ಆರೋಗ್ಯ ಇಲಾಖೆಯು ಒದಗಿಸುವ ಉಚಿತ ಬಹು ಔ?ದ ಚಿಕಿತ್ಸೆಯನ್ನು ಪಡೆದು ಸಂಪೂರ್ಣ ಗುಣಮುಖರಾಗಬಹುದು ಎಂದು ತಿಳಿಸಿದರು.

    ಜಿಲ್ಲಾ ಕು?ರೋಗ ನಿರ್ಮೂಲನ ಅಧಿಕಾರಿಗಳಾದ ಡಾ.ಬಾಲಕೃ? ಟಿ.ಪಿ, ಮಾಹಿತಿ ನೀಡಿ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು ೧೨ ಕು?ರೋಗಿಗಳಿದ್ದು (ಚಿಕ್ಕಮಗಳೂರು ೦೪, ಕಡೂರು ೦೪, ತರೀಕೆರೆ ೦೩ ಮತ್ತು ಮೂಡಿಗೆರೆಯಲ್ಲಿ ೦೧) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿಕಾರಿಗಳು ಡಾ. ಮಂಜುನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಡಾ. ಶಶಿಕಲಾ ಎಂ ಹಾಗೂ ಜಿಲ್ಲಾ ಕು? ನಿರ್ಮೂಲನ ಘಟಕದ ಸಿಬ್ಬಂದಿಗಳಾದ ಜೀವಿತ, ಶಶಿಧರ್ ಹೆಚ್.ಎನ್, ಹ?, ಗಂಗಯ್ಯ ಸಿ.ಎಂ ಉಪಸ್ಥಿತರಿದ್ದರು.

    Sparsh Leprosy Awareness Campaign organized under the Leprosy Eradication Program

  • ನಕ್ಸಲ್ ಮುಖಂಡ ಶೃಂಗೇರಿಯ ಕೋಟೆಹೊಂಡ ರವೀಂದ್ರ ಜಿಲ್ಲಾಡಳಿತದೆದುರು ಶರಣು

    ನಕ್ಸಲ್ ಮುಖಂಡ ಶೃಂಗೇರಿಯ ಕೋಟೆಹೊಂಡ ರವೀಂದ್ರ ಜಿಲ್ಲಾಡಳಿತದೆದುರು ಶರಣು

    ಚಿಕ್ಕಮಗಳೂರು: ನಕ್ಸಲ್ ಮುಖಂಡ ಶೃಂಗೇರಿಯ ಕೋಟೆಹೊಂಡ ರವೀಂದ್ರ ಶನಿವಾರ ಜಿಲ್ಲಾಡಳಿತದೆದುರು ಶರಣಾಗತನಾಗಿದ್ದಾನೆ.

    ನಕ್ಸಲ್ ಶರಣಾಗತಿ ಪ್ರಕ್ರಿಯೆಯ ನೋಡಲ್ ಅಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ಮತ್ತು ರಾಜ್ಯಮಟ್ಟದ ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯ ಶ್ರೀಪಾಲ್ ಇತರರು ನಕ್ಸಲ್ ರವೀಂದ್ರನನ್ನು ಶೃಂಗೇರಿಯ ನೆಮ್ಮಾರಿನಿಂದ ಶನಿವಾರ ಬೆಳಗ್ಗೆ ಕರೆ ತಂದರು.

    ಮಧ್ಯಾಹ್ನ ೧ ಗಂಟೆ ಸುಮಾರಿಗೆ ನಗರಕ್ಕಾಗಮಿಸಿದ ಅವರನ್ನು ನೇರವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಕರೆತಂದು ಎಸ್ಪಿ ಡಾ.ವಿಕ್ರಮ ಅಮಟೆ ಅವರ ಎದುರು ಹಾಜರುಪಡಿಸಲಾಯಿತು.

    ನಂತರ ಅವರನ್ನು ನಕ್ಸಲ್ ಶರಣಾಗತಿ ಸಮಿತಿ ಜಿಲ್ಲಾ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜು ಅವರ ಎದುರು ಹಾಜರುಪಡಿಸಲಾಯಿತು. ಈ ವೇಳೆ ಶರಣಾಗತಿ ಸಮಿತಿಯ ಸದಸ್ಯರುಗಳಾದ ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ ಮತ್ತು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಇದ್ದರು.

    ನಂತರ ನಕ್ಸಲ್ ರವೀಂದ್ರನನ್ನು ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್‌ಪಿ ಶೈಲೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    ರವೀಂದ್ರನನ್ನು ಶೃಂಗೇರಿ ಜೆಎಂಎಫ್‌ಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗುವುದು ಎಂದು ತಿಳಿಸಿದ ಎಸ್ಪಿ ಡಾ.ವಿಕ್ರಮ ಅಮಟೆ ಅವರು, ನಂತರ ಆತನನ್ನು ವಶಕ್ಕೆ ಪಡೆದು ಆತನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ವಿಚಾರಣೆಗೊಳಪಡಿಸಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.

    ೨೦೦೭ ರಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯನಾಗಿದ್ದ ರವೀಂದ್ರನ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ ೧೩ ಪ್ರಕರಣಗಳು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಒಟ್ಟು ೧೭ ಪ್ರಕರಣಗಳು ಹಾಗೂ ಹೊರ ರಾಜ್ಯಗಳಲ್ಲಿ ೧೦ ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ತಿಳಿಸಿದರು.

    ೭.೫ ಲಕ್ಷ ರೂ. ಹಣ: ಜಿಲ್ಲಾಡಳಿತದ ಎದುರು ಶರಣಾಗಿರುವ ನಕ್ಸಲ್ ರವೀಂದ್ರ ರಾಜ್ಯ ಸರ್ಕಾರದ ಶರಣಾಗತಿ ಪ್ಯಾಕೇಜ್‌ನ ಎ ವರ್ಗಕ್ಕೆ ಸೇರಿದ್ದು, ಆತನಿಗೆ ೭.೫ ಲಕ್ಷ ರೂ. ಹಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ನಕ್ಸಲ್ ಶರಣಾಗತಿ ಸಮಿತಿಯ ಜಿಲ್ಲಾಧ್ಯಕ್ಷರೂ ಆದೆ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.

    ನಕ್ಸಲ್ ರವೀಂದ್ರನ ಶರಣಾಗತಿ ಪ್ರಸ್ತಾವನೆಯನ್ನು ಅಂಗೀಕರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತ್ವರಿತಗತಿಯಲ್ಲಿ ರವೀಂದ್ರ ಶರಣಾಗತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ತಕ್ಷಣ ಪ್ರಸ್ತಾವನೆಯನ್ನು ರಾಜ್ಯ ಸಮಿತಿಗೆ ಕಳಿಸಲಾಗುವುದು ಅಲ್ಲಿಂದ ಅನುಮತಿ ಸಿಕ್ಕ ತಕ್ಷಣಕ್ಕೆ ರವೀಂದ್ರ ಅವರ ಖಾತೆಗೆ ೩ ಲಕ್ಷ ರೂ. ಹಣ ಜಮಾ ಮಾಡಲಾಗುವುದು. ಉಳಿದ ಹಣವನ್ನು ಮುಂದಿನ ಎರಡು ಕಂತುಗಳಗಲ್ಲಿ ನೀಡಲಾಗುವುದು ಎಂದು ಹೇಳಿದರು.

    ಆತ ಕೌಶಲ್ಯ ತರಬೇತಿ ಪಡೆಯಲು ಇಚ್ಛಿಸಿದಲ್ಲಿ ಮಾನ್ಯತೆ ಪಡೆದ ತರಬೇಕತಿ ಸಂಸ್ಥೆಗೆ ದಾಖಲಾದ ನಂತರ ಎರಡು ವರ್ಷಗಳ ವರೆಗೆ ಪ್ರತಿ ತಿಂಗಳಿಗೆ ೫ ಸಾವಿರ ರೂ.ಗಳಂತೆ ಪ್ರೋತ್ಸಾಹ ಧನ ನೀಡಲಾಗುದು ಹಾಗೂ ಔಪಚಾರಿಕ ಶಿಕ್ಷಣ ಪಡೆಯಲು ಎರಡು ವರ್ಷಗಳ ವರೆಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದರು.

    ಇತ್ತೀಚಿಗೆ ಮುಖ್ಯಮಂತ್ರಿಗಳ ಎದುರು ಶರಣಾಗಿರುವ ಆರು ಮಂದಿ ನಕ್ಸಲೀಯರಿಗೂ ಮೊದಲ ಕಂತಿನ ಹಣವನ್ನು ಅವರ ಖಾತೆಗೆ ಈಗಾಗಲೇ ಜಮಾ ಮಾಡಲಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ನಕ್ಸಲೀಯರು ಮುಂದಿಟ್ಟಿರುವ ಮೂಲ ಸೌಕರ್ಯಗಳ ಬೇಡಿಕೆಗಳನ್ನು ಈಡೇರಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಗ್ರ ಅಭಿವೃದ್ಧಿ ಯೋಜನೆ ಸಿದ್ಧಪಡಿಸಿ ಗಿರಿಜನ ಅಭಿವೃದ್ಧಿ ಇಲಾಖೆ ವತಿಯಿಂದ ಅನುಷ್ಠಾನಕ್ಕೆ ತರಲಾಗುವುದು. ಈಗಾಗಲೇ ಹಕ್ಕು ಪತ್ರ, ವಿದ್ಯುತ್, ಕುಡಿಯುವ ನೀರು, ಮನೆಗಳ ನಿರ್ಮಾಣದಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಜಿಲ್ಲಾ ಮಟ್ಟದ ನಕ್ಸಲ್ ಶರಣಾಗತಿ ಸಮಿತಿ ಅಧ್ಯಕ್ಷರೂ, ಜಿಲ್ಲಾಧಿಕಾರಿಗಳೂ ಆದ ಸಿ.ಎನ್.ಮೀನಾ ನಾಗರಾಜು, ಸಮಿತಿಯ ಸದಸ್ಯರುಗಳಾದ ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ, ಸಮಾಜಕಲ್ಯಾಣ ಇಲಾಖೆ ಉಪ ನಿರ್ದೇಶಕರು ಹಾಗೂ ರಾಜ್ಯ ಮಟ್ಟದ ಶರಣಾಗತಿ ಸಮಿತಿ ಸದಸ್ಯರಾದ ಕೆ.ಪಿ.ಶ್ರೀಪಾಲ್, ಶಾಂತಿಗಾಗಿ ನಾಗರೀಕ ಹೋರಾ ಸಮಿತಿ ಸದಸ್ಯರುಗಳಾದ ಕೆ.ಎಲ್.ಅಶೋಕ್ ನಗರಗೆರೆ ರಮೇಶ್, ವಿ.ಎಸ್.ಶ್ರೀಧರ್ ಈ ಸಂದರ್ಭದಲ್ಲಿ ಹಾಜರಿದ್ದರು.

    Naxal leader surrenders to Sringeri Kotehonda Ravindra District Administration

  • ಹರಿಹರದಳ್ಳಿ ಗ್ರಾ.ಪಂ.ನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಅಮಾನತು

    ಹರಿಹರದಳ್ಳಿ ಗ್ರಾ.ಪಂ.ನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಅಮಾನತು

    ಚಿಕ್ಕಮಗಳೂರು: ಗೋಮಾಳ ಜಾಗಗಳನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಸೇರಿದಂತೆ ಹಣ ದುರುಪಯೋಗ, ಇನ್ನಿತರೆ ಅವ್ಯವಹಾರಗಳ ಬಗ್ಗೆ ತಾವು ಹೋರಾಟ ನಡೆಸಿದ ಪರಿಣಾಮವಾಗಿ ಚಿಕ್ಕಮಗಳೂರು ತಾಲ್ಲೂಕು ಹರಿಹರದಳ್ಳಿ ಗ್ರಾ.ಪಂ.ನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಅವರು ಅಮಾನತುಗೊಂಡಿದ್ದಾರೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಸಿ.ಎನ್.ದೇವರಾಜ್ ಅರಸ್ ತಿಳಿಸಿದರು.

    ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಾನತುಗೊಂಡಿರುವ ಪಿ.ಲಕ್ಷ್ಮಣ್ ಅವರು ಈ ಹಿಂದೆ ತೇಗೂರು ಗ್ರಾ.ಪಂ.ನಲ್ಲಿ ಕರ್ತವ್ಯ ನಿರ್ವಹಿಸುವಾಗ ಕಂದಾಯ ಇಲಾಖೆಗೆ ಸೇರಿದ ಗೋಮಾಳದ ಜಾಗಗಳನ್ನು ಖಾಸಗಿಯವರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಟ್ಟಿದ್ದಾರೆ. ಅಲ್ಲದೆ ಕೆಎಟಿ ಆದೇಶದ ಪ್ರಕಾರ ಅವರು ಹರಿಹರದಳ್ಳಿ ಗ್ರಾ.ಪಂ.ನಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದ್ದರೂ ತಮ್ಮ ಅಕ್ರಮವನ್ನು ಮುಂದುವರಿಸುವ ಸಲುವಾಗಿ ಪ್ರಭಾವಿಗಳಿಂದ ಮೇಲಾಧಿಕಾರಿಗಳಿಗೆ ಒತ್ತಡ ತಂದು ತೇಗೂರಿನಲ್ಲೇ ಮುಂದುವರಿದಿದ್ದರು. ಈ ಅಕ್ರಮಗಳ ವಿರುದ್ಧ ನಾವು ಹೋರಾಟ ನಡೆಸಿದ್ದೆವು ಎಂದು ಹೇಳಿದರು.

    ಈ ಬಗ್ಗೆ ಜಿ.ಪಂ. ಸಿಇಓ ಸೇರಿದಂತೆ ರಾಜ್ಯ ಸರ್ಕಾರದ ಪಂಚಾಯಿತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ಮತ್ತು ಹಲವು ಅಧಿಕಾರಿಗಳಿಗೆ ದೂರು ಸಲ್ಲಿಸಿ ಪಿಡಿಓ ಲಕ್ಷ್ಮಣ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೆವು ಎಂದು ತಿಳಿಸಿದರು.

    ಇದರ ಪರಿಣಾಮವಾಗಿ ಜಿ.ಪಂ. ಉಪ ಕಾರ್ಯದರ್ಶಿಯವರು ಲಕ್ಷ್ಮಣ್ ವಿರುದ್ಧದ ದೂರುಗಳ ಬಗ್ಗೆ ತನಿಖೆ ಮಾಡಿ, ವರದಿ ಸಲ್ಲಿಸುವಂತೆ ಚಿಕ್ಕಮಗಳೂರು ತಾ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಆದೇಶ ನೀಡಿದ್ದರು. ತಾ.ಪಂ. ಇಓ ಅವರು ನೀಡಿದ ತನಿಖಾ ವರದಿಯಲ್ಲಿ ಗೋಮಾಳದ ಜಾಗ ಅಕ್ರಮ ಖಾತೆ ಮಾಡಿರುವುದು ಸೇರಿಂದತೆ ಇನ್ನಿತರೆ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮಣ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು ಎಂದು ತಿಳಿಸಿದ್ದರು.

    ಈ ಹಿನ್ನೆಲೆಯಲ್ಲಿ ಜಿ.ಪಂ. ಸಿಇಓ ಕೀರ್ತನಾ ಅವರು ಹರಿಹರದ ಹಳ್ಳಿ ಗ್ರಾ.ಪಂ. ಪಿಡಿಓ ಪಿ.ಲಕ್ಷ್ಮಣ್ ಅವರನ್ನು ಅಮಾನತು ಪಡಿಸಿ ಆದೇಶಿಸಿದ್ದಾರೆ ಎಂದು ತಿಳಿಸಿದರು.

    ಇದೇ ರೀತಿ ಚಿಕ್ಕಮಗಳೂರು ನಗರಸಭೆಯಲ್ಲೂ ಅಕ್ರಮಗಳು ನಡೆದಿದ್ದು, ಅದರ ವಿರುದ್ಧವೂ ಹೋರಾಟ ಮುಂದುವರಿಸುತ್ತೇವೆ. ಭೂ ಕಂದಾಯ ಕಾಯ್ದೆ ಉಲ್ಲಂಘಿಸಿ ಕಳೆದ ೧೦ ವರ್ಷಗಳಿಂದ ಸುಮಾರು ೫೦೦ ಕೋಟಿ ರೂ.ನ ಸರ್ಕಾರಿ ಜಮೀನು ಅಕ್ರಮ ಪರಭಾರೆ ನಡೆದಿದ್ದು, ಈ ಬಗ್ಗೆ ರಾಜ್ಯಪಾಲರಿಗೂ ದೂರು ನೀಡುತ್ತೇವೆ ಎಂದರು.

    ಚಿಕ್ಕಮಗಳೂರು ಕಸಬಾ ಹಾಗೂ ಅಂಬಳೆ ಹೋಬಳಿಗಳಲ್ಲಿ ಕೃಷಿ ಭೂಮಿ, ಭೂ ಪರಿವರ್ತನೆ ಅಕ್ರಮ ನಡೆದಿದೆ. ಇದರಲ್ಲಿ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಭಾಗಿಯಾಗಿದ್ದು, ಇದರ ವಿರುದ್ಧವೂ ಹೋರಾಟ ರೂಪಿಸುತ್ತೇವೆ ಎಂದು ತಿಳಿಸಿದರು.

    ಇಷ್ಟೆಲ್ಲಾ ಆರೋಪಗಳು, ಅಕ್ರಮಗಳನ್ನು ಬಯಲಿಗೆ ತಂದ ಕಾರಣಕ್ಕೆ ನಮ್ಮ ಕುಟುಂಬದ ಮೇಲೆ ಲಕ್ಷ್ಮಣ್ ಅವರು ವಾಮಾಚಾರ ಮಾಡಿ, ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಯದೇವರಾಜ್ ಅರಸ್ ಮತ್ತು ರಂಗನಾಥ್ ಉಪಸ್ಥಿತರಿದ್ದರು.

    Hariharadalli Gram Panchayat Panchayat Development Officer Laxman suspended

  • ಫೆ.21ಕ್ಕೆ ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

    ಫೆ.21ಕ್ಕೆ ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

    ಚಿಕ್ಕಮಗಳೂರು:  ರಾಜ್ಯ ಸರ್ಕಾರದ ಬಜೆಟ್ ಪೂರ್ವ ಸಭೆಯಲ್ಲಿ ಅಕ್ಷರದಾಸೋಹ ಬಿಸಿಯೂಟ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಟ ವೇತನ ೧೫ ಸಾವಿರ ರೂ ನಿಗಧಿಗೊಳಿಸುವಂತೆ ಒತ್ತಾಯಿಸಿ ಫೆ.೨೧ ರಿಂದ ಜಿಲ್ಲೆಯಾದ್ಯಂತ ಬಿಸಿಯೂಟ ಬಂದ್‌ಗೊಳಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಅಕ್ಷರದಾಸೋಹ ಬಿಸಿಯೂಟ ಕಾರ್ಯಕರ್ತೆಯರ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಇಂದಿನ ಬೆಲೆ ಏರಿಕೆಗೆ ತಕ್ಕಂತೆ ಸುಮಾರು ೭ ಗಂಟೆಗಳ ಕಾಲ ದುಡಿಯುತ್ತಿರುವ ಕಾರ್ಯಕರ್ತೆಯರಿಗೆ ಫೆ.೪ ರಂದು ನಡೆಯಲಿರುವ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವೇತನ ನಿಗಧಿಗೊಳಿಸುವಂತೆ ಆಗ್ರಹಿಸಿದರು.

    ಕಳೆದ ೨೩ ವರ್ಷಗಳಿಂದ ರಾಜ್ಯದ ಶಾಲಾ ಮಕ್ಕಳ ಬಿಸಿಯೂಟ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯಿರಿಗೆ ೩೭೦೦ ರೂಗಳನ್ನು ಮಾಸಿಕ ಗೌರವಧನ ನೀಡಲಾಗುತ್ತಿದ್ದು, ಈ ವೇತನದಿಂದ ಜೀವನ ಸಾಗಿಸಲು ಕಷ್ಟಕರವಾಗಿರುತ್ತದೆ. ಜೊತೆಗೆ ಕಳೆದ ೧೦ ವರ್ಷಗಳಿಂದ ಕೇಂದ್ರಸರ್ಕಾರ ತನ್ನ ಪಾಲಿನ ಶೇ.೬೦ ರಷ್ಟು ವೇತನವನ್ನು ನೀಡದೆ ತೊಂದರೆಯಾಗಿದೆ ಎಂದು ಆರೋಪಿಸಿದರು.

    ಸರ್ಕಾರಗಳು ಜಾರಿಗೆ ತರುವ ಹೊಸ ಹೊಸ ಯೋಜನೆಗಳಿಗೆ ತಕ್ಕಂತೆ ಕಾರ್ಯಕರ್ತೆಯರು ಹೆಚ್ಚಿನ ಕೆಲಸದ ಹೊರೆ ಬೀಳುತ್ತಿದ್ದು, ಏಳು ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿಸಿಕೊಂಡು ಕಡಿಮೆ ಸಂಬಳ ನೀಡಿ ಶೋಷಣೆ ಮಾಡಲಾಗುತ್ತಿದೆ. ರಾಜ್ಯಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ಆರನೇ ಗ್ಯಾರಂಟಿಯನ್ನು ಇದೂವರೆಗೆ ಜಾರಿ ಮಾಡಿಲ್ಲ ಎಂದು ದೂರಿದರು.

    ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರಿಗೆ ಅಪಘಾತ, ಅನಾಹುತಗಳಾದರೆ ಯಾವುದೇ ರೀತಿಯ ವೈದ್ಯಕೀಯ ತುರ್ತು ಚಿಕಿತ್ಸೆಗೆ ಸರ್ಕಾರದ ನಿಧಿಯಲ್ಲಿ ಅವಕಾಶವಿಲ್ಲ, ಇದರಿಂದಾಗಿ ರಾಜ್ಯಾದ್ಯಂತ ಹಲವಾರು ಕಾರ್ಯಕರ್ತೆಯರು ಮೃತಪಟ್ಟಿದ್ದು ಕೂಡಲೇ ಪಿಎಫ್ ಹಾಗೂ ಇಎಸ್‌ಐ ನಂತಹ ಸೌಲಭ್ಯಗಳನ್ನು ನೀಡುವ ಜೊತೆಗೆ ನಿವೃತ್ತಿ ವೇತನವನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.

    ಜಿಲ್ಲಾಧ್ಯಕ್ಷ ಜಿ. ರಘು ಮಾತನಾಡಿ, ಕಳೆದ ೧೦ ವರ್ಷಗಳಿಂದ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.೬೦ ರಷ್ಟು ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಒತ್ತಾಯಿಸಿದ ಅವರು, ಜಿಲ್ಲಾಧಿಕಾರಿಗಳ ಕಚೇರಿ ಸುತ್ತಮುತ್ತ ಹಾಗೂ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸದಂತೆ ಜಿಲ್ಲಾಡಳಿತ ನೀಡಿರುವ ಆದೇಶವನ್ನು ಕೂಡಲೇ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷೆ ಇಂದುಮತಿ, ಕಾರ್ಯದರ್ಶಿ ಶಮೀನಾ ಬಾನು, ಉಪಾಧ್ಯಕ್ಷೆ ನಾಗಮಣಿ, ತಾಲ್ಲೂಕು ಕಾರ್ಯದರ್ಶಿ ಸುನಂದ, ಶೋಭ, ಸ್ವಪ್ನ, ಪುಷ್ಪಾವತಿ, ಮರಿಯಮ್ಮ, ಸುಧಾ, ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.

    Protest demanding salary hike for hot meal workers on Feb. 21

  • ಧಾರ್ಮಿಕ ಶ್ರದ್ದಾಭಕ್ತಿ-ಸಂಸ್ಕೃತಿ ಪುನರುತ್ಥಾನಕ್ಕೆ ದೇವಾಲಯಗಳ ನಿರ್ಮಾಣ ಅಗತ್ಯ

    ಧಾರ್ಮಿಕ ಶ್ರದ್ದಾಭಕ್ತಿ-ಸಂಸ್ಕೃತಿ ಪುನರುತ್ಥಾನಕ್ಕೆ ದೇವಾಲಯಗಳ ನಿರ್ಮಾಣ ಅಗತ್ಯ

    ಚಿಕ್ಕಮಗಳೂರು: ದೇವಾಲಯಗಳನ್ನು ನಿರ್ಮಾಣ ಮಾಡುವುದು ಸುಲಬದ ಕಾರ್ಯವಲ್ಲ ನೂತನ ದೇವಾಲಯಗಳ ನಿರ್ಮಾಣದಿಂದ ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು ಸಂಸ್ಕೃತಿಗಳ ಪುನರುತ್ಥಾನವಾಗುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.

    ತಾಲ್ಲೂಕಿನ ಲಕ್ಯಾ ಹೋಬಳಿಯ ಕೆ.ಬಿ.ಹಾಳ್ ಗ್ರಾಮದಲ್ಲಿ ಇಂದು ಶ್ರೀ ದುರ್ಗಾಬದೇವಿ ನೂತನ ದೇವಾಲಯ ಲೋಕಾರ್ಪಣೆ, ವಿಗ್ರಹ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಪೂರ್ವಿಕರು ಆಚರಿಸಿ ಬೆಳಿಸಿಕೊಂಡು ಬಂದಿರುವ ಸಂಸ್ಕಾರಯುತ ಕಾರ್ಯಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಿಕೊಡಬೇಕು ಎಂದರು.

    ಯಾವುದೇ ದೇವಾಲಯಗಳ ನಿರ್ಮಾಣದ ನಂತರ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳೊಂದಿಗೆ ಅದರ ನಿರ್ವಾಹಣೆಯ ಕಾರ್ಯವು ವ್ಯವಸ್ಥಿತವಾಗಿರಬೇಕು. ದೇವಾಲಯಗಳಿಗೆ ತೆರಳಿ ಹೋರ ಬಂದ ಮಾನಸಿಕವಾಗಿ ಶಾಂತಿಯುತವಾಗಿರಲು ಸಾಧ್ಯವಾಗುತ್ತದೆ ಎಂದ ಅವರು ಪ್ರತಿಯೊಬ್ಬರೂ ದೇವರು, ಗುರು ಹಿರಿಯರನ್ನು ಪೂಜಿಸಿ ಗೌರವಿಸುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಿ ಎಂದರು.

    ಸಾಹಿತಿಗಳಾದ ಚಟ್ನಳ್ಳಿ ಮಹೇಶ್ ಧಾರ್ಮಿಕ ಉಪನ್ಯಾಸ ನೀಡಿ ಇತ್ತೀಚಿನ ದಿನಗಳಲ್ಲಿ ಸುಳ್ಳು, ಮೋಸ, ಅನ್ಯಾಯದ ಕೃತ್ಯಗಳು ಹೆಚ್ಚುತ್ತಿದೆ. ಆತ್ಮ ಸಾಕ್ಷಿಯ ಮೂಲಕ ಮಾನವನೆ ಮಹಾ ದೇವನಾಗಬೇಕು, ನರ ಹರನಾಗಬೇಕು ಪ್ರತಿ ಮನೆಯು ಮಹಾ ಮನೆಯಾಗಬೇಕು ಎಂಬ ಸಂಕಲ್ಪದಿಂದ ನಮ್ಮ ಹಿರಿಯರು ದೇವಾಲಯಗಳ ನಿರ್ಮಾಣ ಮಾಡಿದ್ದಾರೆ. ಪ್ರತಿಯೊಬ್ಬರಲ್ಲಿರುವ ನಾನು ಎಂಬ ಅಸೂಹೆ, ಅಹಂಕಾರವನ್ನು ದೇವಾಲಯಗಳು ನಿರ್ಣಾಮ ಮಾಡುತ್ತವೆ ಎಂದ ಅವರು ದೇವಾಲಯಗಳ ನಿರ್ಮಾಣ ಕೇವಲ ಪ್ರದರ್ಶನವಲ್ಲ ಅದು ಆತ್ಮದ ಬೆಳಕು ಎಂದು ತಿಳಿಸಿದರು.

    ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ ದೇವಾಲಯಗಳಲ್ಲಿ ಧನಾತ್ಮಕವಾದ ಶಕ್ತಿ ಅಡಗಿದೆ ಆದ್ಧರಿಂದ ಪ್ರತಿಯೊಬ್ಬರು ಕಷ್ಠದ ಸಮಯದಲ್ಲಿ ದೇವರ ಮೊರೆ ಹೋಗುತ್ತಾರೆ. ನಂಬಿಕೆಗೆ ಶಕ್ತಿಯಿದೆ. ಶ್ರದ್ಧೆ, ಭಕ್ತಿಯಿಂದ ನಿರ್ವಹಿಸಿದ ಪ್ರತಿ ಕಾರ್ಯವು ದೇವರಿಗೆ ಸಲ್ಲುತ್ತದೆ ಎಂದರು.
    ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ ಭೂಮಿ ಮೇಲೆ ಆಚಾರ, ವಿಚಾರ ಧಾರ್ಮಿಕ ಕಾರ್ಯಗಳು ಇನ್ನೂ ಜೀವಂತವಾಗಿರಲು ದೇವಾಲಯಗಳ ಕೊಡುಗೆ ಬಹಳಷ್ಠಿದೆ. ದೇವಾಲಯಗಳು ಮಾನವನಲ್ಲಿ ಒಗ್ಗಟ್ಟನ್ನು ನಿರ್ಮಾಣ ಮಾಡುತ್ತವೆ. ಪ್ರತಿಯೊಬ್ಬರು ಒಂದುಗೂಡಿ ಉತ್ತಮ ಕಾರ್ಯಕ್ಕೆ ಶ್ರಮಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

    ಬಿಜೆಪಿ ಮುಖಂಡರಾದ ಪಲ್ಲವಿ ಸಿ.ಟಿ.ರವಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಶುಭ ಸತ್ಯಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಛಾಯಾದಯಾನಂದ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಶ್ರೀ ದುರ್ಗಾಂಬ ದೇವಿ ಕ್ಷೇಮಾಭಿವೃದ್ಧಿ ಸಂಘಡ ಅಧ್ಯಕ್ಷರಾದ ಕೆ.ಟಿ.ರಂಗಶೆಟ್ಟಿ, ಗೌರಚಾಶ್ಯಕ್ಷ ಕೆ.ಡಿ.ಪುಟ್ಟೇಗೌಡ, ಉಪಾಧ್ಯಕ್ಷರಾದ ಕೆ.ಎಸ್ ಸಿದ್ದೇಗೌಡ, ಖಜಾಂಚಿಗಳಾದ ಕೆ.ಆರ್ ಗುರುಮೂರ್ತಿ, ಕಾರ್ಯದರ್ಶಿಗಳಾದ ಕೆ.ಸಿ ರಾಮೇಗೌಡ, ಶಿಲ್ಪಿ ಮೋಹನ್, ನಿವೃತ್ತ ಡಿ.ಓ.ಎಸ್ಪಿ ಪುರುಷೋತ್ತಮ್, ಸಮಾಜ ಸೇವಕರಾದ ರಾಮಕೃಷ್ಣೇಗೌಡ, ಗ್ರಾಮ ಪಂಚಾಯಿತಿ, ಉಪಾಧ್ಯಕ್ಷ ಕೆ.ಜಿ ಪ್ರವೀಣ್, ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿವಶಂಕರ್ ಶೆಟ್ಟಿ ನೆರೆವೇರಿಸಿದರು.

    Shree Durgabadevi new temple dedication

  • ಸಾರ್ವಜನಿಕರು ಪೊಲೀಸರ ಜನಸ್ನೇಹಿ ಸೇವೆಯನ್ನು ಗೌರವಿಸಿ

    ಸಾರ್ವಜನಿಕರು ಪೊಲೀಸರ ಜನಸ್ನೇಹಿ ಸೇವೆಯನ್ನು ಗೌರವಿಸಿ

    ಚಿಕ್ಕಮಗಳೂರು: ಜಿಲ್ಲಾಧ್ಯಂತ ವಿವಿಧ ಜನ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರನ್ನು ರಕ್ಷಿಸುವುದರ ಜೊತೆಗೆ ಕಾನೂನು ಸುವ್ಯವಸ್ತೆಯನ್ನು ಕಾಪಾಡುತ್ತಿರುವ ಜಿಲ್ಲಾ ಪೊಲೀಸರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಡಾ. ಕೆ ಮಧುಕರ್ ಶೆಟ್ಟಿ ಯುವ ಬಳಗದ ಜಿಲ್ಲಾಧ್ಯಕ್ಷ ಚೌಡಪ್ಪ ಹೇಳಿದರು.

    ಅವರು ಇಂದು ನಗರದ ಪ್ರೆಸ್ ಕ್ಲಬ್‌ನಲ್ಲಿ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ಜಿಲ್ಲೆಯಲ್ಲಿ ಜನ ಸ್ನೇಹಿಯಾಗಿ ಕಾರ್ಯಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜವಬ್ದಾರಿಯುತ ಕೆಲಸಗಳು ನಡೆಯುತ್ತಿರುವುದು ಸಂತೋ?ದ ವಿಚಾರ. ಪ್ರತಿ ಶಾಲೆಗಳಲ್ಲಿ ರಸ್ತೆ ಸುರಕ್ಷತಾ ಮಾಸಾ ಕಾರ್ಯಕ್ರಮಗಳು, ಜನವರಿ ೨೮ ರಂದು ಸುಮಾರು ೧೦ ಕೆ.ಜಿ ಗಾಂಜಾ ವಶಪಡಿಸಿಕೊಂಡಿರುವುದು ಸೇರಿದಂತೆ ವಿವಿಧ ಕಾನೂನು ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸುತ್ತಿರುವ ಪೊಲೀಸರ ಕಾರ್ಯ ಉತ್ತಮವಾದುದು ಎಂದರು.

    ಬಸವನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಂತರಾಷ್ಟ್ರೀಯ ಕಳ್ಳರನ್ನು ಹಿಡಿದು ೨೫ ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವುದು. ಬೇಲೂರು ರಸ್ತೆಯಲ್ಲಿ ಹಾಗೂ ಎಂ.ಜಿ ರಸ್ತೆ ಮತ್ತು ಐ.ಜಿ ರಸ್ತೆಯಲ್ಲಿ ಕರ್ಕಶ ಶಬ್ದದವನ್ನು ಮಾಡುತ್ತಾ ಜನ ಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದ ಕೆಲವು ಪುಡರಿಗಳನ್ನು ಟ್ರಾಫಿಕ್ ಪೋಲಿಸ್ ಧನಂಜಯ್ ಬಿ.ಸಿ ತಂಡವು ನಿಗ್ರಹಿಸಿರುವುದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.

    ಖಾಸಗಿ ಬಸ್ಸುಗಳಲ್ಲಿ ಕರ್ಕಶ ಶಬ್ದದಿಂದ ಜನ ಸಾಮ್ಯಾನರಿಗೆ ತೊಂದರೆ ಮಾಡುತ್ತಿದ ಅಂತಹ ಬಸ್ಸುಗಳನ್ನು ಗುರುತಿಸಿ ಅವರ ಮೇಲೆ ಶಿಸ್ತು ಕ್ರಮ ಕೈಗೊಂಡಿರುವುದು, ಜನ ಸಾಮ್ಯಾನರ ಮೊಬೈಲ್ ಕಳ್ಳತನ ದೂರು ಬಂದಾಗ ಜನ ಸ್ನೇಹಿಯಾಗಿ ಕೆಲಸ ಮಾಡಿ ಅವುಗಳನ್ನು ಹಿಂದಿರುಗಿಸುವಂತ ಕಾರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.

    ಸಾರ್ವಜನಿಕರು ಪೊಲೀಸ್ ಇಲಾಖೆಯ ಜೊತೆ ನಿಂತ್ತು ಯಾವುದೇ ತೊಂದರೆ ಸಂಭವಿಸಿದ ಸಂದರ್ಭದಲ್ಲಿ ೧೧೨ ಕ್ಕೆ ಕರೆಮಾಡಿ ಪೊಲೀಸ್‌ರಿಗೆ ವಿಚಾರಗಳನ್ನು ತಲುಪ್ಪಿಸುವುದರ ಮೂಲಕ ಡ್ರಗ್ಸ್ ವಿಚಾರಗಳ ಬಂದಾಗ ಸಮಾಜಗಾತುಕ ಹಾಗೂ ಕಿಡಿಗೇಡಿಗಳ ವಿಚಾರಗಳನ್ನು ಪೊಲೀಸರಿಗೆ ತಿಳಿಸುವಂತ ಕಾರ್ಯಗಳು ಮಾಡುವುದರಿಂದ ಪೊಲೀಸ್‌ರ ಪರ ಜನ ಸಾಮ್ಯಾನರು ಕೈಜೋಡಿಸಬೇಕು ಇದರಿಂದ ಅಪರಾಧಗಳು ಕಡಿಮೆಯಾಗುತ್ತದೆ ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಡಾ. ಕೆ ಮಧುಕರ್ ಶೆಟ್ಟಿ ಯುವ ಬಳಗದ ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ನಾಯಕ, ಮಂಜುನಾಥ್, ಪೀತೇಶ್, ನವೀನ್ ಎತ್ತಿನಮನೆ ಉಪಸ್ಥಿತರಿದ್ದರು.

    The public should respect the people-friendly service of the police.

  • ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಎಂ.ಆರ್.ದೇವರಾಜ ಶೆಟ್ಟಿ ಮರುಆಯ್ಕೆ

    ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಎಂ.ಆರ್.ದೇವರಾಜ ಶೆಟ್ಟಿ ಮರುಆಯ್ಕೆ

    ಚಿಕ್ಕಮಗಳೂರು: ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಎಂ.ಆರ್.ದೇವರಾಜ ಶೆಟ್ಟಿ ಮರು ಆಯ್ಕೆಯಾಗಿದ್ದು, ನೂತನ ಜಿಲ್ಲಾ ಪ್ರತಿನಿಧಿಯಾಗಿ ಕೆ.ಪಿ.ವೆಂಕಟೇಶ್ ಆಯ್ಕೆಯಾಗಿದ್ದಾರೆ.

    ಬುಧವಾರ ಜಿಲ್ಲಾ ಬಿಪೆಪಿ ಕಚೇರಿ ಪಾಂಚಜನ್ಯದಲ್ಲಿ ನಡೆದ ಚುನಾವಣೆಯಲ್ಲಿ ಸಂಸದರು, ಮಾಜಿ ಶಾಸಕರು, ಕೋರ್ ಕಮಿಟಿ ಸದಸ್ಯರು ಜಿಲ್ಲಾ ಮುಖಂಡರು, ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು.

    ಈ ವೇಳೆ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಮುಂದೆ ದೇವರಾಜ್ ಶೆಟ್ಟಿ ಅವರ ನೇತೃತ್ವದಲ್ಲೇ ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವಂತಾಗಲಿ, ಹಾಗೆಯೇ ಈ ಬಾರಿಯೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಯಲ್ಲೂ ಬಿಜೆಪಿ ಅಧಿಕಾರ ಹಿಡಿಯುವ ಲಕ್ಷಣ ಕಂಡುಬಂದಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಸಹಕಾರ ಸಂಘಗಳ ಗೆಲುವುಗಳನ್ನು ಆಧರಿಸಿ ಹೇಳುವುದಾದರೆ ಡಿಸಿಸಿ ಬ್ಯಾಂಕ್ ಅಧಿಕಾರ ಮರಳಿ ನಮ್ಮ ಕೈಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಕಾರ್ಯಕರ್ತರು ಯಾವುದೇ ಊಹಾಪೋಹಗಳಿಗೆ ಕವಿಗೊಡದೆ ಎಲ್ಲರೂ ಒಟ್ಟಾಗಿ ಶ್ರಮಿಸಿದರೆ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಐದಕ್ಕೆ ಐದೂ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲಬಹುದು. ಇದು ದೇವರಾಜ ಶೆಟ್ಟಿ ಅವರ ನೇತೃತ್ವದಲ್ಲಿ ಆಗಬೇಕು. ಇದೇ ವೇಳೆ ಜಿ.ಪಂ., ತಾ.ಪಂ.ಗಳಲ್ಲಿ ನಮ್ಮ ಅಭ್ಯರ್ಥಿಗಳು ಆಯ್ಕೆಯಾಗಿ ಅಧಿಕಾರ ಹಿಡಿಯುವಂತಾಗಲಿ. ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಎಲ್ಲರ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು.

    ಇನ್ನೋರ್ವ ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ತರೀಕರೆಯ ಡಿ.ಎಸ್.ಸುರೇಶ್ ಮಾತನಾಡಿ, ಸಧ್ಯದಲ್ಲೇ ಜಿ.ಪಂ., ತಾ.ಪಂ. ಚುನಾವಣೆಗಳು ಬರಲಿವೆ. ಇದು ಕಾರ್ಯಕರ್ತರ ಚುನಾವಣೆ ಅದರಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸುವ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ. ಅದನ್ನು ಯಶಸ್ವಿಯಾಗಿ ನಿಭಾಯಿಸಬೇಕು. ಅದಕ್ಕೆ ನಮ್ಮೆಲ್ಲರ ಸಹಕಾರ ಇರುತ್ತದೆ. ಮುಂದೆ ಜಿಲ್ಲೆಯ ಐದೂ ಶಾಸಕರನ್ನು ಗೆಲ್ಲುವಂತಾಗಬೇಕು ಎಂದು ಹೇಳಿದರು.

    ಜಿಲ್ಲಾಧ್ಯಕ್ಷರಾಗಿ ಮರು ಆಯ್ಕೆಯಾದ ಎಂ.ಆರ್.ದೇವರಾಜ ಶೆಟ್ಟಿ ಮಾತನಾಡಿ, ಪಕ್ಷ ನೀಡಿರುವ ಜವಾಬ್ದಾರಿಯನ್ನು ಎಲ್ಲ ಹಿರಿಯರ ಮಾರ್ಗದರ್ಶನ, ಸಲಹೆ ಪಡೆದು ಪಕ್ಷವನ್ನು ಸದೃಢವಾಗಿ ಕಟ್ಟಲಾಗುವುದು. ಜಿಲ್ಲಾ ತಂಡ, ವಿವಿಧ ಮೋರ್ಚಾಗಳ ರಚನೆ, ಪದಾಧಿಕಾರಿಗಳ ಬದಲಾವಣೆ ಇನ್ನಿತರೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

    ನನ್ನ ತಂಡದಲ್ಲಿ ಕೆಲಸ ಮಾಡದೆ ಇರುವರಿಗೆ ಸ್ಥಾನವಿಲ್ಲ. ಕೆಲಸ ಮಾಡದವರು ಇದ್ದಲ್ಲಿ ವಿಸಿಟಿಂಗ್ ಕಾರ್ಡ್‌ಗಾಗಿ, ನಾಯಕರ ಹಿಂದೆ ಓಡಾಡುವ ಸಲುವಾಗಿ ಸ್ಥಾನ ಬೇಕೆಂದರೆ ಅದಕ್ಕೆ ಅವಕಾಶ ಇರುವುದಿಲ್ಲ. ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಗೆಲ್ಲಬೇಕೆಂದರೆ ಬಲಿಷ್ಟ ತಂಡ ಕಟ್ಟಬೇಕಿದೆ. ಪ್ರತಿ ಮಹಾ ಶಕ್ತಿ ಕೇಂದ್ರವನ್ನು ಪ್ರವಾಸ ಮಾಡಿ ಸಂಘಟನೆ ಗಟ್ಟಿಗೊಳಿಸುವ ಯೋಜನೆ ಇದೆ ಎಂದರು.

    ಸಮಾರಂಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಚುನಾವಣಾಧಿಕಾರಿ ಹಾಸನದ ಚೇತನ್ ಕುಮಾರ್, ಸಹ ಚುನಾವಣಾಧಿಕಾರಿ ವೀಣಾ ಶೆಟ್ಟಿ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಕೆ.ಮಹೇಶ್, ಕಾಫಿ ಮಂಡಳಿ ಅಧ್ಯಕ್ಷ ದೇವವೃಂದ ದಿನೇಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಹಿರಿಯ ಮುಖಂಡ ಕೋಟೆ ರಂಗನಾಥ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಿಂತ ಅನಿಲ್ ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾದ್ಯಕ್ಷ ಕೆ.ಪಿ.ವೆಂಕಟೇಶ್ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ೯ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

    M.R. Devaraja Shetty re-elected as District BJP President

     

  • ಉಚಿತ ಬೃಹತ್ ಆರೋಗ್ಯ ತಪಾಸಣೆ ಮತ್ತು ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ

    ಉಚಿತ ಬೃಹತ್ ಆರೋಗ್ಯ ತಪಾಸಣೆ ಮತ್ತು ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ

    ಚಿಕ್ಕಮಗಳೂರು: ಮನುಷ್ಯನ ಜೀವನದಲ್ಲಿ ಆರೋಗ್ಯವು ಬಹುಮುಖ್ಯ ಪಾತ್ರ ವಹಿಸುತ್ತದೆ. ಉತ್ತಮ ಆರೋಗ್ಯ ಒಂದಿದ್ದರೆ ಏನನ್ನಾದರು ಸಾಧಿಸಬಹುದು ಎಂದು ಕಡೂರು ಪುರಸಭೆ ಅಧ್ಯಕ್ಷರಾದ ಬಂಡಾರಿ ಶ್ರೀನಿವಾಸ್ ಹೇಳಿದರು.

    ಸಖರಾಯ ಪಟ್ಟಣ ಹೋಬಳಿ ನಾಗೇನಹಳ್ಳಿ ಗ್ರಾಮದ ಶ್ರೀ ಆಂಜನೇಯ ವಿದ್ಯಾ ಸಂಸ್ಥೆ,ಆವರಣದಲ್ಲಿ ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಹಾಸನ ಇವರ ಸಂಯಕ್ತಾಶ್ರಯದಲ್ಲಿ ಕಡೂರಿನ ಮಾಜಿ ಶಾಸಕ ದಿ. ಎನ್.ಕೆ ಹುಚ್ಚಪ್ಪ, ದಿ. ಶಂಕರಮ್ಮ ಹಾಗೂ ದಿ. ಎನ್.ಎಸ್ ಚಂದ್ರಪ್ಪ ಇವರುಗಳ ಸ್ಮರಣಾರ್ಥವಾಗಿ ಉಚಿತ ಬೃಹತ್ ಆರೋಗ್ಯ ತಪಾಸಣೆ ಮತ್ತು ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಬಹು ಮುಖ್ಯವಾಗಿದೆ. ಅನಾರೋಗ್ಯವು ಸಾಧನೆಗೆ ಅಡ್ಡಿಪಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯಲ್ಲಿನ ಬದಲಾವಣೆಯು ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ. ಪ್ರತಿಯೊಬ್ಬರು ನಮ್ಮ ಸಾಂಸ್ಕೃತಿಕ ಆಹಾರ ಪದ್ಧತಿಯನ್ನು ಅನುಸರಿಸಿ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಿ ಎಂದರು.

    ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳು ವಿವಿಧ ರಾಸಾಯನಿಕಗಳಿಂದ ಕೂಡಿ ವಿಷವಾಗಿ ಹೋಗಿದೆ. ಇವುಳಿಂದ ಹಣ್ಣು, ತರಕಾರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳಲ್ಲಿರಬೇಕಾದ ಉತ್ತಮ ಅಂಶವು ಸಾಯುತ್ತಿದೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಮಾಡಿ ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿದರೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದರು.

    ಇಂದಿನ ಯುವ ಜನತೆಯು ಆಹಾರದಲ್ಲಿನ ಪೌಷ್ಠಿಕಾಂಶದ ಕೊರತೆಯಿಂದ ಸಣ್ಣ ತಲೆ ನೋವಿಗೂ ಆಸ್ಪತ್ರೆಗೆ ಹೋಗುವ ಪ್ರಸಂಗಗಳು ಉಂಟಾಗುತ್ತದೆ. ಮನೆ ಮದ್ದುಗಳಿಂದ ಅನೇಕ ಕಾಯಿಲೆಗಳನ್ನು ಗುಣ ಪಡಿಸಿಕೊಳ್ಳಬಹುದು ಎಂದ ಅವರು ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಯಲ್ಲೂ ಹೆಚ್ಚು ಅಸಕ್ತಿ ವಹಿಸಿ ತಮ್ಮ ದೇಹ ಮತ್ತು ಮನಸ್ಸನ್ನು ಸಧೃಡವಾಗಿಸಿಕೊಳ್ಳಿ ಎಂದು ತಿಳಿಸಿದರು

    ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ನಿತಿನ್ ರಾಜು ಮಾತನಾಡಿ. ಆರೋಗ್ಯದ ವಿಷಯದಲ್ಲಿ ಚಿಕಿತ್ಸೆಗಿಂತ ತಡೆಗಟ್ಟುವಿಕೆಯು ಬಹು ಮುಖ್ಯ ಪಾತ್ರ ವಹಿಸುತ್ತದೆ. ಗ್ರಾಮೀಣ ಭಾಗದಲ್ಲಿ ಪೋಷಕರು ತಮ್ಮ ದಿನನಿತ್ಯದ ಕೆಲಸದ ಒತ್ತಡದಲ್ಲಿ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ ಇದರಿಂದ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗೂ ಯುವಕರು ವೃತ್ತಿ ಅರಸಿ ಹಳ್ಳಿ ತೊರೆದು ಪಟ್ಟಣ ಸೇರುತ್ತಿಸುವುದರಿಂದ ವೃದ್ಧರ ಆರೋಗ್ಯ ಗಮನಿಸುವುದು ಕಡಿಮೆಯಾಗುತ್ತಿದೆ. ಆದ್ಧರಿಂದ ಗ್ರಾಮೀಣ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ಆರೋಗ್ಯ ಸುಧಾರಿಸಿ ಉತ್ತಮ ಜೀವನ ನಿರ್ವಹಣೆಗೆ ಸಹಕರಿಸುವುದು ನಮ್ಮ ಕರ್ತವ್ಯ ಎಂದರು.

    ಶ್ರೀ ಆಂಜನೇಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್.ಹೆಚ್ ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ. ವೃದ್ಧರು ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಸಾರ್ವಜನಿಕರು ತಮ್ಮ ಆರೋಗ್ಯ ತಪಾಸಣೆಗಾಗಿ ದೂರದ ನಗರಕ್ಕೆ ತೆರಳುವುದು ಆಯಾಸಕರ ಹಾಗೂ ಕಷ್ಟಕರ ಸಂಗತಿಯಾಗಿದೆ. ಇಂತವರಿಗಾರಿ ಗ್ರಾಮೀಣ ಭಾಗದಲ್ಲಿಯೇ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸುವುದು ಒಂದು ಉತ್ತಮ ಕಾರ್ಯವಾಗಿದೆ ಇದರಿಂದ ಎಂದ ಅವರು ಪ್ರತಿಯೊಬ್ಬ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.

    ಕಾರ್ಯಕ್ರಮದಲ್ಲಿ ಪಂಚಕರ್ಮ ಚಿಕಿತ್ಸಾ ತಜ್ಞ ಡಾ. ಉದಯ್ ಗಣೇಶ್, ಚರ್ಮರೋಗ ತಜ್ಞೆ ಡಾ.ಶಿಲ್ಪ ಕೆ.ಎನ್., ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ದೀಪಾಶ್ರೀ, ಮೂಳೆ ಮತ್ತು ಕೀಲು ರೋಗ ತಜ್ಞ ಡಾ.ಗೋವರ್ದನ್, ಮದುಮೇಹ ತಜ್ಞ ಡಾ,ವೇಣು ಎಸ್., ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಚಂದ್ರಮ್ಮ, ಹಾಗೂ ವಿವಿಧ ವಿಭಾಗದ ವೈದ್ಯರು, ತಜ್ಞರು ಸೇರಿದಂತೆ ವಿದ್ಯಾರ್ತಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

    Free mass health check-up and bone density testing camp