Category: ಜಿಲ್ಲಾ ಸುದ್ದಿ

  • ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ

    ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ

    ಚಿಕ್ಕಮಗಳೂರು:  ನಮ್ಮ ಹೋರಾಟ ಭಾರತದ ವಿರುದ್ಧ ಎನ್ನುವ ರಾಷ್ಟ್ರ ವಿರೋಧಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ತಾಲ್ಲೂಕು ಕಛೇರಿಯಿಂದ ಹನುಮಂತಪ್ಪ ಸರ್ಕಲ್ ವರೆಗೆ ಬಿಜೆಪಿ ಮುಖಂಡರುಗಳೊಂದಿಗೆ ಮೆರವಣಿಗೆ ಹೊರಟ ಕಾರ್ಯಕರ್ತರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ನಂತರ ಹನುಮಂತಪ್ಪ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.

    ಈ ವೇಳೆ ಮಾತನಾಡಿದ ಮುಖಂಡರು ಇದೇ ಜನವರಿ ೧೫ ರಂದು ನವದೆಹಲಿಯಲ್ಲಿ ನೂತನ ಎಐಸಿಸಿ ಕಚೇರಿಯ ಉದ್ಘಾಟನೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾತನಾಡುತ್ತಾ ನಮ್ಮ ಹೋರಾಟ ಭಾರತದ ವಿರುದ್ಧ ಎನ್ನುವ ರಾಷ್ಟ್ರ ವಿರೋಧಿ ಹೇಳಿಕೆ ನೀಡಿದ್ದಾರೆ. ಇದು ಪ್ರಚೋದನಾ ಕಾರಿ ಹೇಳಿಕೆಯಾಗಿದ್ದು, ದೇಶದ ಸಮಗ್ರತೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶದಿಂದ ಕೂಡಿದೆ. ತಮ್ಮ ಕಾರ್ಯಕರ್ತರಿಗೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕುಮ್ಮಕ್ಕು ನೀಡಿದಂತಾಗಿದೆ ಎಂದು ಆರೋಪಿಸಿದರು.

    ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲಿ ಹರಿದಾಡುತ್ತಿದೆ. ಇದನ್ನು ಆಧರಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಮಾತನಾಡಿ ಪ್ರಜಾಪ್ರಭುತ್ವ ವಿರೋಧಿ ನಿಲುವು ಹೊಂದಿರುವ ಹಾಗೂ ಈ ದೇಶದ ಕಾನೂನು, ಸಂವಿಧಾನಕ್ಕೆ ಗೌರವ ನೀಡದಿರುವ ಓರ್ವ ವಿರೋಧ ಪಕ್ಷದ ನಾಯಕನನ್ನು ಹೊಂದಿರುವ ನಮ್ಮ ದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು.

    ದೇಶದ ೧೪೫ ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆ ದೇಶದ ಒಳಗೂ, ದೇಶದ ಹೊರಗೂ ತಲೆ ತಗ್ಗಿಸುವಂತಹ ಕೆಲಸವನ್ನು ನಾನು ಮಾಡುವುದಿಲ್ಲ. ದೇಶ ತಲೆ ಎತ್ತಿ ನಡೆಯುವಂತೆ ಕೆಲಸ ಮಾಡುತ್ತೇನೆ ಎಂದು ಹೇಳುತ್ತಾ, ದೇಶವನ್ನು ವಿಶ್ವಗುರು ಮಾಡುವತ್ತ ಹೊರಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂದೆಡೆಯಾದರೆ, ಸಂವಿಧಾನಾತ್ಮಕವಾಗಿ ವಿರೋಧ ಪಕ್ಷದ ಜವಾಬ್ದಾರಿ ಹೊತ್ತಿರುವ ರಾಹುಲ್ ಗಾಂಧಿ ಬೇಜವಾಬ್ದಾರಿಯುತವಾಗಿ ದೇಶವನ್ನು ಒಡೆಯುವ, ರಾಷ್ಟ್ರ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

    ಈ ದೇಶದ ವಿರುದ್ಧ ಹೋರಾಟ ನಡೆಸಬೇಕಾದ ಕಾಲಘಟ್ಟದಲ್ಲಿ ನಾನಿದ್ದೇನೆ ಎಂದು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಈ ದೇಶ ತೊರೆದು ಇಟಲಿಯಲ್ಲಿ ನೆಲೆಸುವುದು ಸೂಕ್ತ ಎಂದರು.

    ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ರಾಹುಲ್ ಗಾಂಧಿ ಅವರು ನಮ್ಮ ಹೋರಾಟ ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಎಂದು ಹೇಳಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅದಕ್ಕಾಗಿಯೇ ಅವರು ಇರುವುದು. ಆದರೆ ನಮ್ಮ ಹೋರಾಟ ಭಾರತದ ವಿರುದ್ಧ ಎಂದು ಹೇಳಿಕೆಯನ್ನೂ ನೀಡಿರುವ ರಾಹುಲ್ ಗಾಂಧಿ ದೇಶದ ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯಲು ನಾಲಾಯಕ್ ಎಂದರು.

    ರಾಹುಲ್ ಗಾಂಧಿ ತಕ್ಷಣ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ದೇಶವನ್ನು ತುಂಡರಿಸುವ ಕೆಲಸದಲ್ಲಿ ಎಂದಿಗೂ ಮುಂದಿರುವ ಇತಿಹಾಸ ಹೊಂದಿರುವ ಕಾಂಗ್ರೆಸ್‌ನ ಸಂಬಂಧ ದೇಶ ದ್ರೋಹಿಗಳೊಂದಿಗೆ ಮಾತ್ರ ಎಂದು ಆರೋಪಿಸಿದರು.

    ಪ್ರತಿಭಟನೆ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

    ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಒಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್, ಡಾ.ನರೇಂದ್ರ, ಜಸಿಂತ ಅನಿಲ್ ಕುಮಾರ್, ಹಿರೇಮಗಳೂರು ಪುಟ್ಟಸ್ವಾಮಿ, ಜಯವರ್ಧನ್, ಅಂಕಿತ, ಶಶಿ ಆಲ್ದೂರು, ನೆಟ್ಟೆಕರೆಹಳ್ಳಿ ಜಯಣ್ಣ, ಮಂಜು ಬ್ಯಾಟರಿ, ಜೀವನ್ ಕೋಟೆ, ಬಸವರಾಜು, ಪ್ರದೀಪ್, ಕಬೀರ್ ಇತರರು ಭಾಗವಹಿಸಿದ್ದರು.

    BJP Yuva Morcha workers protest against Rahul Gandhi

  • ಚಿಕ್ಕಮಗಳೂರಿಗೆ ನ್ಯೂರೋ ಸರ್ಜಿಕಲ್ ಕೇಂದ್ರದ ಅಗತ್ಯತೆ ಸಾಕಷ್ಟಿತ್ತು

    ಚಿಕ್ಕಮಗಳೂರಿಗೆ ನ್ಯೂರೋ ಸರ್ಜಿಕಲ್ ಕೇಂದ್ರದ ಅಗತ್ಯತೆ ಸಾಕಷ್ಟಿತ್ತು

    ಚಿಕ್ಕಮಗಳೂರು: ಅಪಘಾತ, ಸ್ಟ್ರೋಕ್ ಮತ್ತಿತರೆ ತುರ್ತು ಸಂದರ್ಭವನ್ನು ಗೋಲ್ಡನ್ ಅವರ್ ಎನ್ನಲಾಗುತ್ತದೆ. ಈ ವೇಳೆ ಗಾಯಾಳುವನ್ನು ಶೀಘ್ರ ಆಸ್ಪತ್ರೆಗೆ ದಾಖಲಿಸದಿದ್ದಲ್ಲಿ ಜೀವಕ್ಕೆ ಅಪಾಯವಿದೆ. ಈ ನಿಟ್ಟಿನಲ್ಲಿ ನಗರದ ಕೆಆರ್‌ಎಸ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾಗಿರುವ ನ್ಯೂರೋ ಸರ್ಜಿಕಲ್ ಕೇಂದ್ರ ಜನತೆಗೆ ಸಾಕಷ್ಟು ಅನುಕೂಲ ಕಲ್ಪಿಸಲಿದೆ ಎಂದು ಮ್ಯಾಕ್ಸ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ನಾರಾಯಣ ಪಣಜಿ ಹೇಳಿದರು.

    ನಗರದ ಕೆಆರ್‌ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾದ ನ್ಯೂರೋ ಸರ್ಜಿಕಲ್ ಸೆಂಟರ್‌ನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು. ಚಿಕ್ಕಮಗಳೂರಿಗೆ ನ್ಯೂರೋ ಸರ್ಜಿಕಲ್ ಕೇಂದ್ರದ ಅಗತ್ಯತೆ ಸಾಕಷ್ಟಿತ್ತು. ದಕ್ಷಿಣ ಕರ್ನಾಟಕದ ಶಿವಮೊಗ್ಗದಲ್ಲಿ ಮೊದಲ ನ್ಯೂರೋ ಸರ್ಜಿಕಲ್ ಕೇಂದ್ರ ಆರಂಭವಾದಾಗ ಅತ್ಯಾಧುನಿಕ ಉಪಕರಣಗಳಿರಲಿಲ್ಲ ಎಂದರು.

    ಇಲ್ಲಿ ಉತ್ತಮ ಐಸಿಯು, ಎಂಆರ್‌ಐ, ಸಿಟಿ ಸ್ಕ್ಯಾನ್ ಮತ್ತಿತರೆ ಅನೇಕ ಆಧುನಿಕ ಸೌಲಭ್ಯಗಳಿವೆ. ಡಾ.ಅವಿನಾಶ್ ಎಸ್.ಕೆ. ಮುಂದಾಳ್ವದಲ್ಲಿ ಇಲ್ಲಿನ ನ್ಯೂರೋ ಸರ್ಜಿಕಲ್ ಸೆಂಟರ್ ಉತ್ತಮ ಕೇಂದ್ರವಾಗಿ ಹೊರಹೊಮ್ಮಲಿದೆ. ಚಿಕಿತ್ಸೆಯ ಯಾವುದೇ ಫಲಿತಾಂಶ ಉತ್ತಮವಾಗಿ ಬರಬೇಕಾದರೆ ಗೋಲ್ಡನ್ ಅವರ್‌ನಲ್ಲಿ ಆಸ್ಪತ್ರೆಗೆ ಬರಬೇಕು. ಇಲ್ಲಿ ಉತ್ತಮವಾದ ಟ್ರಾಮಾ ಟೀಮ್ ಇದೆ. ಇದರ ಸದುಪಯೋಗವನ್ನು ಜಿಲ್ಲೆಯ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

    ನ್ಯೂರೋ ತಜ್ಞ ಡಾ.ಅವಿನಾಶ್ ಎಸ್.ಕೆ. ಮಾತನಾಡಿ, ಬ್ರೈನ್ ಹ್ಯಾಮರೇಸ್, ಸ್ಪೈನಲ್ ಡಿಸ್ಕ್‌ಗೆ ಹಾನಿ, ಪಿಡಿಯಾಟ್ರಿಕ್ ನ್ಯೂರೋ ಸರ್ಜರಿ, ಮೆದುಳಿನ ರಕ್ತನಾಳದ ಕಾಯಿಲೆಗಳಿಗೆ ಈ ಕೇಂದ್ರದಲ್ಲಿ ಉತ್ತಮ ಚಿಕಿತ್ಸೆ ದೊರೆಯಲಿದೆ. ಉತ್ತಮ ಐಸಿಯು ಇದೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

    ಕೆಆರ್‌ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಯೋಗೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಚಿಕ್ಕಮಗಳೂರಿನಲ್ಲಿ ನ್ಯೂರೋ ಸರ್ಜಿಕಲ್ ಕೇಂದ್ರದ ಅಗತ್ಯತೆ ಮನಗಂಡು ಈ ಕೇಂದ್ರ ತೆರೆದಿದ್ದು, ಡಾ.ಅವಿನಾಶ್ ಅವರು ದೊಡ್ಡ ಮನಸ್ಸು ಮಾಡಿ ಇಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

    ಈ ಹಿಂದೆ ಹೆಡ್ ಇಂಜುರಿ, ಬ್ರೈನ್ ಡ್ಯಾಮೇಜ್ ಆದಲ್ಲಿ ಹಾಸನ ಅಥವಾ ಶಿವಮೊಗ್ಗಕ್ಕೆ ಕೆರೆದುಕೊಂಡು ಹೋಗಬೇಕಿತ್ತು. ಆ ವೇಳೆ ಎಷ್ಟೋ ಮಂದಿ ಮಾರ್ಗಮಧ್ಯೆ ಅಸುನೀಗಿರುವ ನಿದರ್ಶನವಿದೆ. ಹೀಗಾಗಿ ನಗರದಲ್ಲಿ ನ್ಯೂರೋ ಸರ್ಜಿಕಲ್ ಕೇಂದ್ರ ತೆರೆದಿದ್ದು, ಇಲ್ಲಿ ಎಲ್ಲ ತರಹದ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ತಪಾಸಣೆ, ಥೆರಫಿಗಳು ದೊರೆಯುತ್ತವೆ ಎಂದು ತಿಳಿಸಿದರು.

    ಒಂದೂವರೆ ಕೋಟಿ ರೂ ವೆಚ್ಚದ ಮೈಕ್ರೋಸ್ಕೋಪ್, ಅತ್ಯಾಧುನಿಕ ಐಸಿಯು, ಯಂತ್ರೋಪಕರಣಗಳು ಇಲ್ಲಿವೆ. ಸ್ಟ್ರೋಕ್ ಆಗಿ ೩-೪ ಗಂಟೆ ಒಳಗೆ ಕರೆತಂದರೆ ಪ್ರಾಣಾಪಾಯದಿಂದ ಪಾರು ಮಾಡಬಹುದು. ಹೆಡ್ ಇಂಜುರಿ ಆದಲ್ಲಿ ಗಾಯಾಳು ಶೀಘ್ರ ಕರೆತಂದಲ್ಲಿ ಗುಣಮುಖರನ್ನಾಗಿ ಮಾಡಬಹುದು. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಮನವಿ ಮಾಡಿದರು.

    ಡಾ.ಮಲ್ಲಿಕಾರ್ಜುನ, ಡಾ.ವಿನಯ್ ಮಾತನಾಡಿದರು. ಶೃತಿಯೋಗೀಶ್ ಸ್ವಾಗತಿಸಿದರು. ಪಲ್ಲವಿ ನಿರೂಪಿಸಿ, ಜೆಸ್ಸಿ ವಂದಿಸಿದg

    The newly opened Neurosurgical Center at KRS Multi-Specialty Hospital was inaugurated today.

  • ಲಕ್ಯಾ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಎಂ.ಕೃಷ್ಣೇಗೌಡ ಆಯ್ಕೆ

    ಲಕ್ಯಾ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಎಂ.ಕೃಷ್ಣೇಗೌಡ ಆಯ್ಕೆ

    ಚಿಕ್ಕಮಗಳೂರು: ತಾಲ್ಲೂಕು ಲಕ್ಯಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಎಂ ಕೃಷ್ಣೇಗೌಡ, ಉಪಾಧ್ಯಕ್ಷರಾಗಿ ಜಯಣ್ಣ ಅವಿರೋಧ ಆಯ್ಕೆಯಾದರು.

    ಇಂದು ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ ಚುನಾವಣಾಧಿಕಾರಿ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿ ನಂತರ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಮಾತನಾಡಿ ಸಹಕಾರ ಸಂಘದಲ್ಲಿ ರಾಜಕೀಯ ಬೆರಸದೆ ಎಲ್ಲರು ಒಗ್ಗಟ್ಟಿನಿಂದ ರೈತರ ಸೇವೆ ಮಾಡಲು ಶ್ರಮಿಸಬೇಕೆಂದು ಹೇಳಿದ ಅವರು ಸರ್ಕಾರದಿಂದ ದೊರೆಯುವ ಅನುದಾನವನ್ನು ಪಡೆದು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸೌಲಭ್ಯ ನೀಡಲು ಮುಂದಾಗಬೇಕೆಂದು ತಿಳಿಸಿದರು.

    ಸಹಕಾರ ಸಂಘದಲ್ಲಿ ಸರ್ವರನ್ನು ವಿಶ್ವಾಸಕ್ಕೆ ಪಡೆದು ಜನಪರ ಆಡಳಿತ ಕೊಡುವಲ್ಲಿ ಮುಂದಾಗಬೇಕು, ಕೆಲವರು ವೈಯಕ್ತಿಕ ವಿಚಾರದಲ್ಲಿ ರಾಜಕೀಯ ದ್ವೇಷ ನೆಡೆಸುವುದರಿಂದ ಸಹಕಾರ ಸಂಘಗಳು ನಾಶವಾಗುತ್ತದೆ ಇದನ್ನು ಅವರು ಅರಿಯದೆ ಮಾಡುತ್ತಿರುವ ಮೂರ್ಖತನ ಎಂದು ಆರೋಪಿಸಿದರು.

    ಲಕ್ಯಾ ಜಿಲ್ಲಾ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡಿ.ಹೆಚ್ ಮರೀಗೌಡರು ಈ ಭಾಗದಲ್ಲಿ ಜನಪರ ಕೆಲಸ ಮಾಡುವ ಮೂಲಕ ಜನ ಮಾನಸದಲ್ಲಿ ಉಳಿದಿದ್ದಾರೆ, ಇಂದು ಅವರ ಪುತ್ರ ಡಿ.ಎಂ ಕೃಷ್ಣೇಗೌಡ ಅಧ್ಯಕ್ಷರಾಗಿದ್ದು ತಂದೆಯವರಷ್ಟೇ ಹೆಸರು ಸಂಪಾದಿಸುವ ನಿಟ್ಟಿನಲ್ಲಿ ಜನಪರ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

    ರಾಜ್ಯ ಸರ್ಕಾರದಲ್ಲಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್, ಸಹಕಾರ ಸಚಿವ ರಾಜಣ್ಣ ಇವರುಗಳು ನೇರವಾಗಿ ರೈತರಿಗೆ ನೆರವಾಗಲು ಸಾಲ ಸೌಲಭ್ಯ ನೀಡಲು ಮುಂದಾಗಿದ್ದಾರೆ, ಶಾಸಕ ಹೆಚ್.ಡಿ ತಮ್ಮಯ್ಯನವರ ಮಾರ್ಗದರ್ಶನದಲ್ಲಿ ಉತ್ತಮ ಕೆಲಸ ಮಾಡುವಂತೆ ನೂತನ ಪದಾಧಿಕಾರಿಗಳಿಗೆ ಶುಭಕೋರಿದರು.

    ಅಧಿಕಾರ ಶಾಶ್ವತವಲ್ಲ ಸಿಕ್ಕಿರುವ ಅವಧಿಯಲ್ಲಿ ಜನಪರ ಕಾರ್ಯ ಕೈಗೊಳ್ಳಿ ಎಂದು ಸಲಹೆ ನೀಡಿದ ಅವರು ಮುಂದಿನ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಕಿವಿಮಾತು ಹೇಳಿದರು.

    ನೂತನ ಅಧ್ಯಕ್ಷ ಡಿ.ಎಂ ಕೃಷ್ಣೇಗೌಡ ಮಾತನಾಡಿ ನಮ್ಮನ್ನು ಆಯ್ಕೆಮಾಡಿರುವ ಎಲ್ಲಾ ಸದಸ್ಯರುಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿದ ಅವರು ಪ್ರಾಮಾಣಿಕವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಬಸವರಾಜು, ಕೃಷ್ಣಶೆಟ್ಟಿ, ಜಗದೀಶ್, ಮರಿಗೌಡ, ಈಶ್ವರಯ್ಯ, ಗೋಪಾಲಸ್ವಾಮಿ, ಲೋಲಾಕ್ಷಿ, ನಾಗರತ್ನಮ್ಮ, ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡರುಗಳಾದ ಭರತೇಶ್, ಸಿದ್ದೇಶ್, ಶಶಿಕುಮಾರ್, ಮೊಹಮ್ಮದ್ ಹನೀಫ್, ನಾಗಣ್ಣ, ಪ್ರಕಾಶ್ ರೈ, ಕಾಂತರಾಜ್, ರಾಮೇಗೌಡ, ಲಕ್ಕೇಗೌಡ, ಮಲ್ಲೇಗೌಡ, ಮಲ್ಲಿಕಾರ್ಜುನ, ನಾಗೇಶ್, ಲಕ್ಯಾ ಜಗದೀಶ್, ಮತ್ತಿತರರು ಉಪಸ್ಥಿತರಿದ್ದರು.

    D.M. Krishnagowda elected as new president of Lakya Agricultural Cooperative Society

  • ಎರಡನೇ ಬಾರಿಗೆ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಟಿ.ರಾಜಶೇಖರ್ ಆಯ್ಕೆ

    ಎರಡನೇ ಬಾರಿಗೆ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಟಿ.ರಾಜಶೇಖರ್ ಆಯ್ಕೆ

    ಚಿಕ್ಕಮಗಳೂರು:  ಇಲ್ಲಿನ ಜಿಲ್ಲಾ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಟಿ.ರಾಜಶೇಕರ್, ಉಪಾಧ್ಯಕ್ಷರಾಗಿ ಟಿ.ಡಿ.ಮಲ್ಲೇಶ್ ಗೌರವ ಕಾರ್ಯದರ್ಶಿಯಾಗಿ ಎಂ.ಎಸ್ ಪ್ರದೀಪ್‌ಕುಮಾರ್ ಆಯ್ಕೆಯಾಗಿದ್ದಾರೆ.

    ಇಂದು ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಮೇಲ್ಕಂಡವರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ಘೋಷಿಸಿದರು. ನಂತರ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಟಿ.ರಾಜಶೇಖರ್ ಸಮಾಜದ ಹಿರಿಯರು ಸ್ಥಾಪಿಸಿದ ಒಕ್ಕಲಿಗರ ಸಂಘದ ಅಭಿವೃದ್ಧಿಗೆ ಇಂದು ಆಯ್ಕೆಯಾದ ನಿರ್ದೇಶಕರು, ಪದಾಧಿಕಾರಿಗಳು ಶ್ರಮಿಸಬೇಕೆಂದು ಕರೆ ನೀಡಿದರು.

    ಕಳೆದ ಮೂರು ವರ್ಷದ ಅವಧಿಯಲ್ಲಿ ಸಾಧಿಸಿರುವ ಅಭಿವೃದ್ಧಿ ಕಾರ್ಯಗಳನ್ನು ಮೌಲ್ಯಮಾಪನ ಮಾಡಿ ನಿರ್ದೇಶಕರುಗಳು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ, ಜನಾಂಗದ ಮತ್ತು ಹಿರಿಯರ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದಾಗಿ ಭರವಸೆ ನೀಡಿದರು.

    ಮುಂದಿನ ಮೂರು ವರ್ಷಗಳ ಅವಧಿಗೆ ಮತ್ತೋಮ್ಮೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಈ ಅವಧಿಯಲ್ಲಿ ಸಮಾಜದ ಮತ್ತು ಸಂಘಟನೆಗೆ ಒತ್ತುನೀಡಿ ಕೆಲಸ ಮಾಡಲು ಬದ್ಧವಾಗಿದ್ದೇವೆ, ಆಯ್ಕೆ ಮಾಡಿರುವ ನಿರ್ದೇಶಕರು ಹಾಗೂ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

    ಉಪಾಧ್ಯಕ್ಷ ಟಿ.ಡಿ ಮಲ್ಲೇಶ್ ಮಾತನಾಡಿ ನೂತನ ಪದಾಧಿಕಾರಿಗಳ ಮೇಲೆ ವಿಶ್ವಾಸವಿಟ್ಟು ಸಹಕಾರದಿಂದ ಆಯ್ಕೆ ಮಾಡಿರುವ ೨೫ ನಿರ್ದೇಶಕರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

    ಗೌರವ ಕಾರ್ಯದರ್ಶಿ ಎಂ.ಎಸ್ ಪ್ರದೀಪ್ ಕುಮಾರ್ ಮಾತನಾಡಿ ಸಂಘದ ಈ ಸ್ಥಾನಕ್ಕೆ ಅಗೌರವ ತರದೆ ನಿಮ್ಮೆಲ್ಲರ ಸಲಹೆ ಸಹಕಾರ ಪಡೆದು ಸಮುದಾಯದ ಅಭಿವೃದ್ಧಿಗೆ ಅಧ್ಯಕ್ಷರೊಂದಿಗೆ ಸೇರಿ ಶ್ರಮಿಸುವುದಾಗಿ ಭರವಸೆ ನೀಡಿದರು.

    ಮಾಜಿ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್ ಮಾತನಾಡಿ ಒಕ್ಕಲಿಗರ ಸಂಘ ಹಿಂದಿನವರು ಹಾಕಿದ ಬುನಾದಿಯಾಗಿದ್ದು ಜಿಲ್ಲೆ, ರಾಜ್ಯದಲ್ಲಿಯೇ ಪ್ರತಿಷ್ಠಿತ ಸಂಘಟನೆಯಾಗಿದೆ, ಸಂಘದಲ್ಲಿ ಇದುವರೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಸಂಘದಲ್ಲಿದ್ದ ಸದಸ್ಯರು ಹೊರಗಡೆ ಸಂಘದ ಕುರಿತು ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿದರು.

    ಜಿಲ್ಲಾ ಒಕ್ಕಲಿಗರ ಸಂಘ ಇತರೆ ಸಮಾಜದ ಸಂಘಟನೆಗಳಿಗೆ ಮಾದರಿಯಾಗಬೇಕು, ಸಂಘದಲ್ಲಿ ಪಾರದರ್ಶಕತೆ ಇರುತ್ತದೆ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಇದರಲ್ಲಿ ಸಂಶಯ ಅನಗತ್ಯ ಎಂದರು.

    ಸೇವಾ ಮನೋಭಾವವನ್ನು ಹೊಂದಿರುವ ಉದ್ದೇಶದಿಂದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ರಾಜಕೀಯ ಮಾಡಲು ಬಂದಿಲ್ಲ, ಸ್ವಾರ್ಥಕ್ಕೆ ಅವಕಾಶವಿಲ್ಲ, ಒಕ್ಕಲಿಗ ಸಮಾಜದಲ್ಲಿ ಪ್ರಜ್ಞಾವಂತ ಮತದಾರರಿದ್ದು ಸೇವಾ ಮನೋಭಾವ ಹೊಂದಿರುವವರನ್ನು ಆಯ್ಕೆ ಮಾಡುತ್ತಾರೆ ಎಂದು ಎಚ್ಚರಿಸಿದರು.

    ಈ ಸಂದರ್ಭದಲ್ಲಿ ಪಿ.ರಾಜು, ಎಂ.ಅಶೋಕ್, ಎಂ.ಬಿ.ಸತೀಶ್, ಬಿ.ಸಿ.ಲೋಕಪ್ಪಗೌಡ, ಐ.ಸಿ.ಶ್ರೀನಾಥ್, ಮನುಕುಮಾರ್.ಯು.ಪಿ, ಕೆ.ಪಿ.ರಾಜೇಂದ್ರ, ಹೆಚ್.ಎಸ್.ಮೋಹನ್, ವಿ.ಕೆ.ಹರಿಣಾಕ್ಷಿ ನಾಗರಾಜ್, ಕೆ.ಬಿ.ಅನಂತೇಗೌಡ, ಕೆ.ಬಿ.ಸಜಿತ್, ಜೆ.ಪಿ.ಹೊಯ್ಸಳಗೌಡ, ಐ.ವಿ.ಮಂಜುಚೇತನ್, ಕೆ.ಯು ರತೀಶ್‌ಕುಮಾರ್, ಭವ್ಯನಟೇಶ್, ಪವಿತ್ರ, ಸಂತೋಷ್.ಎಂ.ಬಿ, ಕೆ.ಪಿ.ಪೃಥ್ವಿರಾಜ್, ಹೆಚ್.ಕೆ.ನವೀನ್, ಸಿ.ಟಿ.ರೇವತಿ, ಪ್ರಮೋದ್, ಟಿ.ಎಂ.ಉಮಾಶಂಕರ್, ಮಾಜಿ ಅಧ್ಯಕ್ಷರುಗಳಾದ ಸಂದೀಪ್, ಹಲಸೆ ಶಿವಣ್ಣ, ರಾಜೇಗೌಡ.ಕೆ, ಮಾಜಿ ಕಾರ್ಯದರ್ಶಿ ಉಮೇಶ್‌ಚಂದ್ರ, ಲಕ್ಷ್ಮಣ್‌ಗೌಡ ಉಪಸ್ಥಿತರಿದ್ದರು.

    T. Rajashekhar elected as the President of the District Vokkaligara Sangha for the second time

  • drama:ನೋಡುಗರ ಗಮನ ಸೆಳೆದ ಶ್ರೀ ದೇವಿ ಮಹಾತ್ಮೆ ನಾಟಕ

    drama:ನೋಡುಗರ ಗಮನ ಸೆಳೆದ ಶ್ರೀ ದೇವಿ ಮಹಾತ್ಮೆ ನಾಟಕ

    ಚಿಕ್ಕಮಗಳೂರು:  ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕದ ಆಶ್ರಯದಲ್ಲಿ ಕಡೂರು ತಾಲೂಕಿನ ಗರ್ಜೆಯಲ್ಲಿ ಶ್ರೀ ಬನಶಂಕರಿ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರಿಂದ ನಡೆದ ಶ್ರೀ ದೇವಿ ಮಹಾತ್ಮೆ ನಾಟಕ ನೋಡುಗರ ಗಮನ ಸೆಳೆಯಿತು.

    ಬನದ ಹುಣ್ಣಿಮೆ ಪ್ರಯುಕ್ತ ನಡೆದ ನಾಟಕದಲ್ಲಿ ಗ್ರಾಮದ ರೈತರು ಮತ್ತು ಜಾನಪದ ಕಲಾವಿದರು ಪೌರಾಣಿಕ ವೇಷಭೂಷಣಗಳನ್ನು ತೊಟ್ಟು ತಮ್ಮ ನವಿರು ಹಾಸ್ಯ. ಚುರುಕು ಸಂಭಾಷಣೆ. ಮಿಂಚಿನ ನೃತ್ಯ. ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರನ್ನು ೫ ಗಂಟೆಗೂ ಅಧಿಕ ಕಾಲ ಹಿಡಿದಿಟ್ಟರು.

    ವೇದಿಕೆಯಲ್ಲಿ ರಾರಾಜಿಸಿದ ಪೌರಾಣಿಕ ವೇಷಭೂಷಣಗಳು. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದವರಂತೆ ಅಭಿನಯಿಸಿದ ಕಲಾವಿದರು ಪೌರಾಣಿಕ ಲೋಕವನ್ನು ಅನಾವರಣಗೊಳಿಸಿ ನೋಡುಗರನ್ನು ಮಂತ್ರಮುಗ್ಧಗೊಳಿಸಿದರು.

    ಕರ್ನಾಟಕ ಜಾನಪದ ಪರಿಷತ್ತಿನ ಕಡೂರು ತಾಲೂಕು ಅಧ್ಯಕ್ಷ ಜಗದೀಶ್ವರಾಚಾರ್ ನಿರ್ದೇಶನದಲ್ಲಿ ಮೂಡಿ ಬಂದ ನಾಟಕದಲ್ಲಿ ಪರಿಷತ್ತಿನ ಬಹಳಷ್ಟು ಕಲಾವಿದರು ಅಭಿನಯಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.

    ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್ ಒಂದು ಕಾಲದಲ್ಲಿ ಹಳ್ಳಿ ಜನರ ಜೀವನಾಡಿಯಾಗಿದ್ದು. ಅವರ ಮನರಂಜನೆಯ ಏಕೈಕ ಮಾಧ್ಯಮವಾಗಿದ್ದ ಬಯಲು ನಾಟಕಗಳು ಆಧುನಿಕತೆಯ ಭರದಲ್ಲಿ ಕಣ್ಮರೆಯಾಗುತ್ತಿರುವುದು ದುರಂತ ಎಂದರು.

    ಹಿಂದಿನ ಬಯಲು ನಾಟಕಗಳು ಗ್ರಾಮದ ಜನರನ್ನು ಒಗ್ಗೂಡಿಸುವುದರ ಜೊತೆಗೆ ಅವರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸುತ್ತಿದ್ದವು. ಮನರಂಜನೆ ನೀಡುವುದರ ಜೊತೆಗೆ ನೈತಿಕ ಮೌಲ್ಯಗಳನ್ನೂ ಕಲಿಸುತ್ತಿದ್ದವು ಎಂದು ಹೇಳಿದರು.

    ಆರೋಗ್ಯವಂತ ಸಮಾಜ ಪುನ: ನಿರ್ಮಾಣವಾಗಬೇಕಾದರೆ ನಮ್ಮ ಯುವಜನತೆ. ವಿಶೇಷವಾಗಿ ಗ್ರಾಮೀಣ ಜನತೆ ಆಧುನಿಕತೆಯ ವ್ಯಾಮೋಹದಿಂದ ಹೊರಬರಬೇಕು ಬಯಲು ನಾಟಕಗಳು. ಜಾನಪದ ಕಲೆ. ಸಾಹಿತ್ಯ ಮತ್ತು ಸಂಸ್ಕೃತಿಯತ್ತ ಮುಖ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

    ಶರಣ ಸಾಹಿತ್ಯ ಪರಿಷತ್ತಿನ ಮುಖಂಡ ದೇವಾನಂದ್ ಮಾತನಾಡಿ ನಾಟಕ ಪ್ರದರ್ಶನ ಮಾಡುವ ಮೂಲಕ ಗರ್ಜೆ ಗ್ರಾಮಸ್ಥರು ಉಳಿದ ಹಳ್ಳಿಗಳಿಗೆ ಮಾದರಿಯಾಗಿದ್ದಾರೆ ಎಂದರು.

    ದೇವಾಂಗ ಸಮಾಜದ ಅಧ್ಯಕ್ಷ ಸುರೇಶ್ ಮಾತನಾಡಿ ಭಾರತೀಯ ರಂಗಭೂಮಿಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ನಾಟಕಗಳು ಹಿಂದೆ ಹಲವು ಜನರಿಗೆ ಜೀವನಾಧಾರವಾಗಿದ್ದವು. ಈಗ ನಾಟಕಗಳು ಅಳಿವಿನಂಚಿಗೆ ಬಂದಿರುವುದರಿಂದ ಕಲಾವಿದರ ಬದುಕು ಬೀದಿ ಪಾಲಾಗುತ್ತಿದೆ ಎಂದು ವಿಷಾದಿಸಿದರು.

    ಬನಶಂಕರಿ ಕೃಪಾಪೋಷಿತ ನಾಟಕ ಮಂಡಳಿ ಅಧ್ಯಕ್ಷ ದಯಾನಂದ್. ಗ್ರಾಮ ಪಂಚಾಯತಿ ಅಧ್ಯಕ್ಷ ಮಲ್ಲಿಕಾರ್ಜುನ. ಚೇತನ್. ಗ್ರಾಮದ ಮುಖಂಡರಾದ ಮರುಳಸಿದ್ದಪ್ಪ. ಗಿರೀಶ್. ಶಿವಣ್ಣ. ಜಯಣ್ಣ. ಸಾಹಿತಿ ಬಿಳಿಗಿರಿ ವಿಜಯಕುಮಾರ್. ಚಿಕ್ಕನಲ್ಲೂರು ಜಯಣ್ಣ ಉಪಸ್ಥಿತರಿದ್ದರು.

    Shri Devi Mahatme drama

     

  • ೧ ಕೋಟಿ ವೆಚ್ಚದಲ್ಲಿ ಲಕ್ಷ್ಮಿದೇವಿ ದೇವಾಲಯ ನಿರ್ಮಾಣ

    ೧ ಕೋಟಿ ವೆಚ್ಚದಲ್ಲಿ ಲಕ್ಷ್ಮಿದೇವಿ ದೇವಾಲಯ ನಿರ್ಮಾಣ

    ಚಿಕ್ಕಮಗಳೂರು: ವಾರ್ಷಿಕವಾಗಿ ಅದ್ದೂರಿ ವೆಚ್ಚದಲ್ಲಿ ಆಚರಿಸುವ ಹಬ್ಬಗಳನ್ನು ತಾತ್ಕಾಲಿಕವಾಗಿ ಮುಂದೂಡುವ ಮೂಲಕ ಗ್ರಾಮಕ್ಕೊಂದು ಸುಂದರ ದೇವಾಲಯ ನಿರ್ಮಾಣ ಮಾಡಿದರೆ ಗ್ರಾಮಸ್ಥರಲ್ಲಿ ಧಾರ್ಮಿಕ ಭಾವನೆ ಬೆಳೆಯನ್ನು ಸಹಕಾರಿಯಾಗುತ್ತದೆ ಎಂದು ಮಾಜಿ ವಿಧಾನ ಪರಿ?ತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಅಭಿಪ್ರಾಯಿಸಿದರು.

    ಅವರು ಇಂದು ತಾಲೂಕಿನ ಸಿರಬಡಿಗೆ ಗ್ರಾಮದಲ್ಲಿ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಲಕ್ಷ್ಮಿದೇವಿ ದೇವಸ್ಥಾನಕ್ಕೆ ಬಾಗಿಲು ಪೂಜೆ ನೆರವೇರಿಸಿ ಮಾತನಾಡಿದರು.

    ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಭಾವನೆಗಳಿಂದ ಯುವ ಜನಾಂಗ ದೂರು ಇರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಗ್ರಾಮದ ಹಿರಿಯರು ದೇವಾಲಯ ನಿರ್ಮಾಣ ಮಾಡಲು ಭದ್ರ ಬುನಾದಿ ಹಾಕಿದಾಗ ಧಾರ್ಮಿಕತೆ, ಸಂಸ್ಕೃತಿ, ಪರಂಪರೆ ಬೆಳೆಯುತ್ತದೆ ಎಂದು ಹೇಳಿದರು.

    ಶಾಸಕ ಹೆಚ್.ಡಿ. ತಮ್ಮಯ್ಯನವರ ಅನುದಾನದಲ್ಲಿ ೧೦ ಲಕ್ಷ ರೂ ಹಾಗೂ ವಿಧಾನ ಪರಿ?ತ್ ಸದಸ್ಯರ ಅನುದಾನದಲ್ಲಿ ೫ ಲಕ್ಷ ರೂ ಮಂಜೂರು ಮಾಡಿಸುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

    ಅನಗತ್ಯ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಿ ಅದೇ ಹಣವನ್ನು ಸುಂದರ ದೇವಾಲಯಗಳ ನಿರ್ಮಾಣಕ್ಕೆ ಬಳಸಲು ಮುಂದಾಗಬೇಕೆಂದು ಕರೆ ನೀಡಿದರು.
    ಸಿರಬಡಿಗೆ ಗ್ರಾಮದಲ್ಲಿ ಭೇಟಿನೀಡಿದ ಇವರನ್ನು ಗ್ರಾಮದ ಜನತೆ ಆತ್ಮೀಯವಾಗಿ ಸ್ವಾಗತಿಸಿ ಗೌರವ ಸಮರ್ಪಣೆ ಮಾಡಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ಬ್ಲಾಕ್ ಅಧ್ಯಕ್ಷ ಸಿ.ಸಿ.ಮಧು, ಗ್ರಾ.ಪಂ ಸದಸ್ಯ ಹೆಚ್.ಎಸ್. ಚಂದ್ರಶೇಖರ್, ಗ್ರಾಮಸ್ಥರುಗಳಾದ ಎಸ್.ಕೆ.ನಾಗಪ್ಪ, ತಿಮ್ಮೇಗೌಡ, ಲೋಕೇಶ್, ಜಯಣ್ಣ, ಯುವರಾಜ, ತೇಜಮೂರ್ತಿ ಸೇರಿದಂತೆ ಮಹಿಳೆಯರು ಉಪಸ್ಥಿತರಿದ್ದರು.

    Construction of Lakshmi Devi Temple at a cost of Rs. 1 crore

  • ಮುಗುಳುವಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಂ.ಎಸ್. ನಿರಂಜನ್ ಅವಿರೋಧ ಆಯ್ಕೆ

    ಮುಗುಳುವಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಂ.ಎಸ್. ನಿರಂಜನ್ ಅವಿರೋಧ ಆಯ್ಕೆ

    ಚಿಕ್ಕಮಗಳೂರು: ತಾಲ್ಲೂಕು ಮುಗುಳುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಲ್ಕನೇ ಬಾರಿಗೆ ಎಂ.ಎಸ್.ನಿರಂಜನ್, ಉಪಾಧ್ಯಕ್ಷರಾಗಿ ಬಲರಾಮ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಇಂದು ನಡೆದ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿಯ ಒಮ್ಮತದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೇಲ್ಕಂಡ ಈ ಇಬ್ಬರನ್ನು ಚುನಾವಣಾಧಿಕಾರಿ ಸುಮ.ಜಿ.ಪಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

    ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಕಲ್ಮರುಡಪ್ಪ ಸಹಕಾರಿ ಕ್ಷೇತ್ರದಲ್ಲಿ ಸರ್ವರನ್ನೂ ಒಗ್ಗೂಡಿಸುವ ಕೆಲಸ ಅದು ಕೃಷಿಪತ್ತಿನಲ್ಲಿದೆ. ಇದನ್ನು ಕೇಂದ್ರಸ್ಥಾನದಲ್ಲಿದ್ದುಕೊಂಡು ಶ್ರಮಿಸುತ್ತಿರುವ ಎಂ.ಎಸ್. ನಿರಂಜನ್‌ರವರು ನಾಲ್ಕನೇ ಬಾರಿಗೆ ಆಯ್ಕೆಯಾಗಿ ಶ್ರಮ ವಹಿಸುತ್ತಿರುವ ಅವರ ತಂಡ ರೈತರಿಗೆ ಅನುಕೂಲ ಮಾಡುವ ಉದ್ದೇಶ ಹೊಂದಿದ್ದಾರೆ ಎಂದರು.
    ಪತ್ತಿನ ಸಹಕಾರ ಸಂಘದಲ್ಲಿ ನಂಬಿಕೆ ಬಹಳ ಮುಖ್ಯವಾಗಿದ್ದು, ಇದರ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳ ನಂಬಿಕೆಯನ್ನು ಈ ತಂಡ ಉಳಿಸಿಕೊಂಡಿದೆ, ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

    ಮುಗುಳುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅತೀ ಹೆಚ್ಚು ರೈತರು ತರಕಾರಿ ಬೆಳೆಯುತ್ತಿದ್ದು, ಅವರ ಮನವೊಲಿಸಿ ನಿಶ್ಚಿತ ಠೇವಣಿ ಸಂಗ್ರಹಿಸುವ ಮೂಲಕ ಈ ಪತ್ತಿನ ಸಹಕಾರ ಸಂಘವನ್ನು ಆರ್ಥಿಕ ಸದೃಢಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಸಾಧಿಸಿ ಎಂದು ಕಿವಿಮಾತು ಹೇಳಿದರು.

    ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸೋಮಣ್ಣ ಮಾತನಾಡಿ, ಎಂ.ಎಸ್. ನಿರಂಜನ್‌ರವರು ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಸಾಕಷ್ಟು ರೈತರಿಗೆ ಸಾಲಸೌಲಭ್ಯ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಮುಗುಳುವಳ್ಳಿ ಪತ್ತಿನ ಸಹಕಾರ ಸಂಘದಲ್ಲಿಯೂ ಅತೀ ಹೆಚ್ಚು ರೈತರು ಸಾಲಸೌಲಭ್ಯ ಪಡೆಯಲು ಕಾರಣೀಭೂತರಾಗಿದ್ದಾರೆ ಎಂದು ಶ್ಲಾಘಿಸಿದರು.

    ಜನಪರ, ರೈತರ ಬಡವರ ಪರವಾಗಿ ಕೆಲಸ ಮಾಡಲು ನೂತನ ಪದಾಧಿಕಾರಿಗಳು ಶ್ರಮಿಸಲಿ ಎಂದು ಶುಭ ಹಾರೈಸಿದರು. ನೂತನ ಅಧ್ಯಕ್ಷ ಎಂ.ಎಸ್. ನಿರಂಜನ್ ಮಾತನಾಡಿ, ಗುಡಿಯಲ್ಲಿ ಒಂದು ಮೂರ್ತಿ ಸಿದ್ದವಾಗಬೇಕಾದರೆ ಸಾವಿರಾರು ಉಳಿಪೆಟ್ಟು ತಿಂದಾಗ ಮಾತ್ರ ಸುಂದರ ಮೂರ್ತಿಯಾಗಿ ಪೂಜೆಗೆ ಪಾತ್ರರಾಗುವಂತೆ ನನ್ನನ್ನು ಇಂದು ನಾಲ್ಕನೇ ಬಾರಿಗೆ ಅವಿರೋಧ ಆಯ್ಕೆ ಮಾಡಿರುವ ಎಲ್ಲಾ ಸಹಕಾರಿ ಬಂಧುಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.

    ಹಿರಿಯರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದು, ಸದಾ ನನ್ನೊಂದಿಗೆ ಇದ್ದು, ಹಗಲಿರುಳು ನನ್ನ ತಂಡ ಶ್ರಮಿಸುತ್ತಿದೆ. ಅಧಿಕಾರ ಶಾಶ್ವತವಲ್ಲ, ಸಿಕ್ಕಿರುವ ಅಧಿಕಾರವಧಿಯಲ್ಲಿ ಮಾಡಿದ ಕೆಲಸ ಜನಮಾನಸದಲ್ಲಿ ಉಳಿಯಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಬಸವರಾಜು, ಪರಮೇಶ್ವರಪ್ಪ, ಉಪಾಧ್ಯಕ್ಷರಾದ ಬಲರಾಮ ಬಿಜೆಪಿ ಮುಖಂಡರುಗಳಾದ ದಿನೇಶ್, ರಘುನಂದನ, ಶಿವಣ್ಣ, ಉಮೇಶ್, ಸಿಇಓ ಶಿವಕುಮಾರ್, ನಿರ್ದೇಶಕರುಗಳಾದ ನಳಿನಾಕ್ಷಿ ಧರ್ಮರಾಜು, ರವಿ, ಧರ್ಮಯ್ಯ, ಪ್ರದೀಪ್ ಕುಮಾರ ಎಂ.ಕೆ,ನವೀನ ಎಂ.ಜೆ, ತಮ್ಮೆಗೌಡ, ರಮೇಶ್ ಎಂ.ಸಿ, ಸಿದ್ಧಮ್ಮ, ಗಂಗಣ್ಣ ಉಪಸ್ಥಿತರಿದ್ದರು.

    M.S. Niranjan elected unopposed as President of Muguluvalli Agricultural Cooperative Society

  • ವಿಶ್ವಾದ್ಯಂತ ಸುಮಾರು ೫೨ ದೇಶಗಳಲ್ಲಿ ಆರ್‌ಎಸ್‌ಎಸ್ ಸಂಘಟನೆ ಕಾರ್ಯಪ್ರವೃತ್ತ

    ವಿಶ್ವಾದ್ಯಂತ ಸುಮಾರು ೫೨ ದೇಶಗಳಲ್ಲಿ ಆರ್‌ಎಸ್‌ಎಸ್ ಸಂಘಟನೆ ಕಾರ್ಯಪ್ರವೃತ್ತ

    ಚಿಕ್ಕಮಗಳೂರು: ಸ್ವಾತಂತ್ರö್ಯ ಪೂರ್ವದ ಮುನ್ನ ಸ್ಥಾಪಿತವಾದ ರಾಷ್ಟಿçÃಯ ಸ್ವಯಂ ಸಂಘವು ಎರಡು ದಶಕಗಳ ಮೊದಲೇ ಉಗಮವಾಗಿದ್ದರೆ ಭಾರತ ರಾಷ್ಟçವು ವಿಭಜನೆಗೊಳ್ಳದೇ ಅಖಂಡ ರಾಷ್ಟç ವಾಗಿ ಬೆಳಗುತ್ತಿತ್ತು ಎಂದು ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಮನೋಹರ್ ಹೇಳಿದರು.

    ನಗರದ ಗಾಯತ್ರಿ ಸಮುದಾಯ ಭವನದಲ್ಲಿ ರಾಷ್ಟಿçÃಯ ಸ್ವಯಂ ಸಂಘವು ಏರ್ಪಡಿಸಿದ್ಧ ಸಂಕ್ರಾAತಿ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ  ವಿಶ್ವದ ಮುಂಚೂಣಿ ರಾಷ್ಟçವಾದ ಭಾರತದ ಮೇಲೆ ಮೊಘಲರು ಸೇರಿದಂತೆ ಅನೇಕ ಮತಾಂಧ ಶಕ್ತಿಗ ಳು ಯುದ್ಧೋಪಾದಿಯಲ್ಲಿ ಆಕ್ರಮಣ ನಡೆಸಿದರೂ ಸೋತಿರಲಿಲ್ಲ. ಆದರೆ ಬ್ರಿಟಿಷರು ದೇಶದ ಅಧ್ಯಯನ ನಡೆಸಿ ಮೊದಲು ಗುರುಕುಲ ಪದ್ಧತಿ ನಾಶಕ್ಕೆ ಮುಂದಾಗಿದ ಕಾರಣ ಭಾರತೀಯ ಸಂಸ್ಕೃತಿಗೆ ಕೊಡಲಿಪೆಟ್ಟು ಬಿತ್ತು ಎಂದರು.

    ಗುರುಕುಲ ಪದ್ಧತಿ ನಾಶಗೊಳಿಸಿ, ಮಕ್ಕಳಿಗೆ ಕಾನ್ವೆಂಟ್ ಪದ್ಧತಿ ಜಾರಿಗೆ ತಂದರು. ಕಾನ್ವೆಂಟ್ ಎಂದರೆ ಇಂಗ್ಲೇಡ್ ದೇಶದಲ್ಲಿ ಅಪ್ಪ, ಅಮ್ಮವಿಲ್ಲದ ಶಾಲೆಗಳು ಎಂದರ್ಥ. ಅಲ್ಲಿಂದ ಭಾರತ ಅಧಪಥನಕ್ಕೆ ಮುಂದಾ ಗಿದ್ದನ್ನು ಕಂಡ ಸಂಘಟನೆ, ದೇಶಕ್ಕೆ ಔಷಧಿ ನೀಡುವ ಸಲುವಾಗಿ ರಾಷ್ಟಾçದ್ಯಂತ ಶಾಖೆಗಳನ್ನು ಸ್ಥಾಪಿಸಿ ಹಿಂ ದೂ ಸಮಾಜದ ಏಳಿಗೆಗೆ ಶ್ರಮಿಸುತ್ತಿದೆ ಎಂದರು.

    ಅಮೇರಿಕಾ ಸೇರಿದಂತೆ ಇಡೀ ವಿಶ್ವಾದ್ಯಂತ ಸುಮಾರು ೫೨ ದೇಶಗಳಲ್ಲಿ ಆರ್‌ಎಸ್‌ಎಸ್ ಸಂಘಟನೆ ಕಾರ್ಯಪ್ರವೃತ್ತವಾಗಿದೆ. ಇದನ್ನು ಗಮನಿಸಿದರೆ ಪ್ರಪಂಚದ ದೊಡ್ಡಣ್ಣ ಅಮೇರಿಕಾವಲ್ಲ, ಭಾರತವೆಂದು ಪರಿ ಗಣಿಸಬೇಕು. ಹಾಗಾಗಿ ಹಿಂದೂ ಸಮಾಜವು ಪ್ರತಿ ಮನೆಗಳಲ್ಲಿ ರಾಷ್ಟçಭಕ್ತಿ ಮೂಡಿಸಿ, ಸಂಘಟನೆಗೆ ಕೈಜೋ ಡಿಸಬೇಕಿದೆ ಎಂದು ತಿಳಿಸಿದರು.

    ೧೯೨೫ರಲ್ಲಿ ಜನನಗೊಂಡ ಆರ್‌ಎಸ್‌ಎಸ್ ಸಂಘಟನೆ, ಕೇವಲ ಎರಡು ದಶಕಗಳ ಹಿಂದೆ ಜನಿಸಿದ್ದರೆ ಅಖಂಡ ಭಾರತದಲ್ಲಿ ಪಾಕಿಸ್ತಾನ ದೇಶ ಪ್ರತ್ಯೇಕವಾಗುತ್ತಿರಲಿಲ್ಲ. ಸ್ವಾತಂತ್ರö್ಯದ ಬಳಿಕ ಅಂದಿನ ಆಡಳಿತವು ಸಂಘಟನೆಯನ್ನು ಬೇರುಸಮೇತ ಕಿತ್ತೊಗೆಯಲು ಅನೇಕ ಸಂಚು ನಡೆಸಿ ವಿಫಲಗೊಂಡವು. ಆದರೀಗ ಸದೃ ಢವಾಗಿ ನಿಂತಿರುವ ಕಾರಣ ಜಗತ್ತಿನ ಅತಿದೊಡ್ಡ ಸಂಘಟನೆಯಾಗಿ ಹೊರಹೊಮ್ಮಿದೆ ಎಂದರು.

    ಹಿAದುತ್ವ ಬೇರಿನಿಂದ ಗಟ್ಟಿಗೊಳಿಸುವ ಹಾಗೂ ಒಗ್ಗೂಡಿಸುವ ನಿಟ್ಟಿನಲ್ಲಿ ದೇಶಾದ್ಯಂತ ಸುಮಾರು ೭೩ ಸಾವಿರ ಶಾಖೆಗಳನ್ನು ಸಂಘಟನೆ ಹೊಂದಿದೆ. ಈ ಬಲವನ್ನು ಗಮನಿಸಿದ ಪ್ರಸ್ತುತ ಇಂಗ್ಲೇಡ್ ದೇಶ, ಸಂಘ ಟನೆ ಎಂದರೆ ಆರ್‌ಎಸ್‌ಎಸ್‌ನಂತೆ ಇರಬೇಕೆಂದಿದ್ದರು ಎಂದ ಅವರು ತಪಸ್ಸಿನಿಂದ ಸಂಘಟನೆ ಬೆಳೆದು ಕತ್ತ ಲೆಯಿಂದ ಬೆಳಕು ಚೆಲ್ಲುತ್ತಿದೆ ಎಂದು ಹೇಳಿದರು.

    ಸದ್ಯದಲ್ಲೇ ಆರ್‌ಎಸ್‌ಎಸ್ ಸಂಘಟನೆ ಶತದಿನೋತ್ಸವಕ್ಕೆ ಕಾಲಿಡುತ್ತಿದೆ. ಸಂಘಟನಾ ಬಲವು ಮೇ ಲ್ನೋಟಕ್ಕೆ ಬಂಡೆಯAತೆ ಕಾಣುತ್ತಿದೆ. ಕೆಳಹೊಕ್ಕಿ ವೀಕ್ಷಿಸಿದರೆ ಬೃಹದಾಕಾರವಾಗಿ ಬೆಳೆದಿದೆ. ಪ್ರಚಾರ ಬಯ ಸದೇ ರಾಷ್ಟç ಚಿಂತನೆಗೆ ಬೇರೂರಿರುವ ಏಕೈಕ ಸಂಘಟನೆ ಆರ್‌ಎಸ್‌ಎಸ್ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಮಂ ಡಲಗಳನ್ನು ರಚಿಸಿಕೊಂಡು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಇಂದಿನ ಯುವಸಮೂಹಗಳಿಗೆ ಪಾಲಕರು ದೇಶದ ಆಚಾರ-ವಿಚಾರಗಳನ್ನು ಮನದಟ್ಟಾಗಿ ತುಂಬಬೇ ಕು. ರಾಷ್ಟç ಮೊದಲು ಎಂಬ ವಿವೇಕವಾಣಿಯನ್ನು ಅನುಸರಿಸಬೇಕು. ಸಂಘಟನೆ ಬೆಳೆದ ಹಾದಿಯನ್ನು ಪರಿ ಚಯಿಸಿ ಸ್ವಯಂ ಪ್ರೇರಿತರಾಗಿ ಮಕ್ಕಳು ಸೇರಿದಂತೆ ಗಂಡನನ್ನು ಸೇರ್ಪಡೆಗೊಳಿಸಿದರೆ ಭವ್ಯಭಾರತ ನಿರ್ಮಾ ಣವಾಗುಲ್ಲಿ ಸಂದೇಹವಿಲ್ಲ ಎಂದರು.

    ಕಾರ್ಯಕ್ರಮಕ್ಕೂ ಮುನ್ನ ಸಂಘಟನೆ ಕಾರ್ಯಕರ್ತರಿಂದ ಶಾರೀರಿಕ ಮತ್ತು ದಂಡ ವ್ಯಾಯಾಮ ನಡೆ ಸಲಾಯಿತು. ಬಳಿಕ ಶ್ಲೋಕ ಹಾಗೂ ಹಿಂದುತ್ವದ ಗೀತೆ ಹಾಡಲಾಯಿತು. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಗನಶ್ಯಾಮ್ ಆಳ್ವ, ನಗರ ಸಂಚಾಲಕ ರಾಜರಾಮ್ ಕೋಟೆ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.

    The RSS organization is active in about 52 countries around the world.

  • ಕೆ.ಆರ್.ಎಸ್ ಆಸ್ಪತ್ರೆಯಲ್ಲಿ ನ್ಯೂರೋ ಸರ್ಜಿಕಲ್ ಸೆಂಟರ್ ಆರಂಭ

    ಕೆ.ಆರ್.ಎಸ್ ಆಸ್ಪತ್ರೆಯಲ್ಲಿ ನ್ಯೂರೋ ಸರ್ಜಿಕಲ್ ಸೆಂಟರ್ ಆರಂಭ

    ಚಿಕ್ಕಮಗಳೂರು: : ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಅತ್ಯುತ್ತಮ ನರಶಸ್ತ್ರ ಚಿಕಿತ್ಸೆ, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಚಿಕ್ಕಮಗಳೂರು ನ್ಯೂರೋ ಸರ್ಜಿಕಲ್ ಸೆಂಟರ್‌ನ್ನು ಜ.೧೭ ರಂದು ಶುಕ್ರವಾರ ನಗರದ ಕೆಎಸ್‌ಆರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಭಾರಂಭವಾಗಲಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿದ ಕೆ.ಆರ್.ಎಸ್ ಆಸ್ಪತ್ರೆ ವೈದ್ಯ ಡಾ.ಯೋಗೀಶ್ ಅವರು ಇದರ ಉದ್ಘಾಟನೆಯನ್ನು ಹಿರಿಯ ನರರೋಗ ತಜ್ಞ ಮತ್ತು ಬೆನ್ನುಮೂಳೆ ತಜ್ಞ ವೈದ್ಯ ಡಾ.ನಾರಾಯಣ ಪಣಜಿ ನೆರವೇರಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್‌ಬಾಬು ನರರೋಗ ತಜ್ಞ ಡಾ.ಅವಿನಾಶ್.ಎಸ್.ಕೆ ಭಾಗವಹಿಸಲಿದ್ದಾರೆ ಎಂದು ಹೇಳಿದರು.

    ಚಿಕ್ಕಮಗಳೂರು ನಗರದ ಕೆಆರ್‌ಎಸ್ ಮಲ್ಟಿ ಸ್ಪೆ?ಲಿಟಿ ಆಸ್ಪತ್ರೆಯು ಹೈಟೆಕ್ ನ್ಯೂರೋ ಐಸಿಯು ಮತ್ತು ಸಂಪೂರ್ಣ ಸುಸಜ್ಜಿತ ಅತ್ಯಾಧುನಿಕ ಆಪರೇಟಿಂಗ್ ಥಿಯೇಟರ್ ಅನ್ನು ಒಳಗೊಂಡಿದ್ದು, ವೈದ್ಯಕೀಯ ಶ್ರೇಷ್ಠತೆ ಮತ್ತು ಸಹಾನುಭೂತಿಯ ಆರೈಕೆಯನ್ನು ನೀಡಲು ಹೆಸರುವಾಸಿಯಾಗಿದೆ ಎಂದು ಮಾಹಿತಿ ನೀಡಿದರು.

    ನೂತನವಾಗಿ ಪ್ರಾರಂಭವಾಗುತ್ತಿರುವ ಚಿಕ್ಕಮಗಳೂರು ನ್ಯೂರೋ ಸರ್ಜಿಕಲ್ ಸೆಂಟರ್ ಬೆನ್ನುಮೂಳೆಯ ಶಸ್ತ್ರ ಚಿಕಿತ್ಸೆಗಳು, ಮೆದುಳಿನ ಗೆಡ್ಡೆಯ ಶಸ್ತ್ರ ಚಿಕಿತ್ಸೆಗಳು ಮತ್ತು ಸಂಕೀರ್ಣವಾದ ಮೆದುಳು ಮತ್ತು ಬೆನ್ನುಮೂಳೆಯ ಅಪಘಾತದ ಆರೈಕೆ, ಅಪಸ್ಮಾರ ಮತ್ತು ನರಶಸ್ತ್ರ ಚಿಕಿತ್ಸೆ, ಸ್ಟ್ರೋಕ್ ಚಿಕಿತ್ಸಾ ಘಟಕ, ಮೆದುಳಿನ ರಕ್ತನಾಳ ಶಸ್ತ್ರಚಿಕಿತ್ಸೆ ಮತ್ತು ಎಂಡೋವಾಸ್ಕುಲರ್ ನರಶಸ್ತ್ರ ಚಿಕಿತ್ಸೆ ಸೇರಿದಂತೆ ಹಲವಾರು ಸೇವೆಗಳನ್ನು ಒದಗಿಸಲಿದೆ ಎಂದು ತಿಳಿಸಿದರು.

    ಡಾ.ಅಭಿಲಾಶ್ ಎಸ್.ಕೆ ಅವರು ಬೆಂಗಳೂರಿನ ಚಿನ್ಮಯ್ ಮಿ?ನ್ ಆಸ್ಪತ್ರೆಯಲ್ಲಿ ಹಲವು ವ?ಗಳ ಅನುಭವವನ್ನು ಹೊಂದಿದ್ದು, ಬೆನ್ನುಮೂಳೆಯ ಶಸ್ತ್ರಚಿಕಿತ್ಸೆ ಮತ್ತು ನರಶಸ್ತ್ರ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ, ಜೊತೆಗೆ ಪ್ರತಿಷ್ಠಿತ ಪದವೀಧರರಾಗಿದ್ದು, ಅವರು ತಮ್ಮ ಎಂಬಿಬಿಎಸ್, ಎಂಎಸ್ (ಜನರಲ್ ಸರ್ಜರಿ) ಮತ್ತು ಎಮ್‌ಸಿಹೆಚ್ ಅನ್ನು ನ್ಯೂರೋ ಸರ್ಜರಿಯಲ್ಲಿ ಪೂರ್ಣಗೊಳಿಸಿದ್ದಾರೆ ಎಂದರು.

    ಕೆಆರ್‌ಎಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ೨೪x೭ ತುರ್ತು ಚಿಕಿತ್ಸೆ ಮತ್ತು ನರ ಮತ್ತು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗಾಗಿ ಈಗ ಡಾ.ಅವಿನಾಶ್ ಎಸ್.ಕೆ ಲಭ್ಯವಿರುತ್ತಾರೆ ಎಂದು ಹೇಳಿದ ಅವರು ಜಿಲ್ಲೆ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

    Neurosurgical Center inaugurated at KRS Hospital

  • Rambhapuri Peetha:ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯುವವರು ದೊಡ್ಡವರಾಗುವುದಿಲ್ಲ

    Rambhapuri Peetha:ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯುವವರು ದೊಡ್ಡವರಾಗುವುದಿಲ್ಲ

    ಬಾಳೆಹೊನ್ನೂರು: ಗೆದ್ದ ವ್ಯಕ್ತಿಗೆ ಚಪ್ಪಾಳೆ ಹೊಡೆಯು ವವರು ದೊಡ್ಡವರಾಗುವುದಿಲ್ಲ. ಬಿದ್ದ ವ್ಯಕ್ತಿಗಳನ್ನು ಕೈ ಹಿಡಿದು ಮೇಲೆತ್ತುವವರು ದೊಡ್ಡವರಾಗುತ್ತಾರೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

    ರಂಭಾಪುರಿ ಪೀಠದಲ್ಲಿ ನಡೆದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಹಾಲಿನ ಜೊತೆ ಸೇರಿದ ನೀರು ಸಹ ಹಾಲು ಆಗುತ್ತದೆ. ಅದೇ ರೀತಿ ಗುಣವಂತರ ಜೊತೆ ಆಶ್ರಯ ಪಡೆದ ಗುಣಹೀನನು ಸಹ ಗುಣವಂತನಾಗುತ್ತಾನೆ. ಮಾನವ ಜೀವನಕ್ಕೆ ಗುರಿ ಮತ್ತು ಗುರು ಬಹಳ ಮುಖ್ಯ. ಜೀವನದಲ್ಲಿ ಹಣದ ಕೊರತೆಯಿದ್ದರೂ, ಗುಣದ ಕೊರತೆಯಾಗಬಾರದು. ನಿರಂತರ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.

    ಜೀವನದಲ್ಲಿ ಹೊಂದಾಣಿಕೆ ಎಷ್ಟು ಮುಖ್ಯವೋ ಅರ್ಥ ಮಾಡಿಕೊಳ್ಳುವ ಮನಸ್ಸು ಅಷ್ಟೇ ಮುಖ್ಯ. ನಡೆಯುವ ದಾರಿಯಲ್ಲಿ ನಿಯತ್ತು ಇದ್ದರೆ ತಡೆಯುವ ತಾಕತ್ತು ಯಾರಿಗೂ ಇರವುದಿಲ್ಲ. ಬೇಡ ಅಂದವರಿಗೆ ಭಾರ ಆಗುವುದರ ಬದಲು ಬೇಕು ಅನ್ನುವವರಿಗೆ ಬೆಳಕಾಗು ಸಾಕು ಎಂದು ಅನುಭಾವಿಗಳು ಹೇಳಿದ್ದುಂಟು ಎಂದು ಹೇಳಿದರು.

    ಆಂಧ್ರಪ್ರದೇಶ ನಂದ್ಯಾಲದ ವಿದ್ವಾನ್ ಎಸ್.ಎಂ.ರೇವಣಸಿದ್ಧಾಂತಿ ರಚಿಸಿದ ಚಂದ್ರ ಜ್ಞಾನಾಗಮದ ವ್ಯಾಖ್ಯಾನದ ತೆಲುಗು ಕೃತಿಯನ್ನು ರಂಭಾಪುರಿ ಶ್ರೀ ಬಿಡುಗಡೆ ಮಾಡಿದರು.

    ಮಳಲಿ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮಿ, ರಟ್ಟೀಹಳ್ಳಿ ವಿಶ್ವೇಶ್ವರ ದೇವರು ಮತ್ತು ರೇಣುಕಾ ಚಾರ್ಯ ಗುರುಕುಲದ ಸಿದ್ಧಲಿಂಗಯ್ಯ ಸ್ವಾಮಿ ಹಿರೇಮಠ, ರಿಪ್ಪನ್ ಪೇಟೆ ಶಿವಮಂದಿರದ ಜಿ.ಎಂ. ದುಂಡರಾಜಪ್ಪ ಗೌಡ್ರು, ಪೀಠದ ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ, ಲೆಕ್ಕಾಧಿಕಾರಿ ಸಂಕಪ್ಪನವರ, ಕನ್ನೂರು ನಾನಾಗೌಡ, ಹಳೇಬೀಡು ಚಂದ್ರಶೇಖರ ಇದ್ದರು.

    The full moon religious ceremony held at Rambhapuri Peetha