Category: ಚಿಕ್ಕಮಗಳೂರು

  • ಸಂಸತ್ ಅಧಿವೇಶನದಲ್ಲಿ ಸರ್ಫೇಸಿ ಕಾಯ್ದೆ ಬಗ್ಗೆ ಚರ್ಚೆ

    ಸಂಸತ್ ಅಧಿವೇಶನದಲ್ಲಿ ಸರ್ಫೇಸಿ ಕಾಯ್ದೆ ಬಗ್ಗೆ ಚರ್ಚೆ

    ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ ಬೆಳೆಯಿಂದ ಹೊರಗಿಡುವ ಬಗ್ಗೆ ಚರ್ಚಿಸಲು ಸಭೆ ಕರೆದು ಆರ್ಥಿಕ ಸಚಿವಾಲಯಕ್ಕೆ ವಾಣಿಜ್ಯ ಸಚಿವಾಲಯ ಬೆಂಬಲಿಸಲು ಕೋರಬೇಕಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

    ಅವರು ಇಂದು ನಗರಕ್ಕಾಗಮಿಸಿ ಎಐಟಿ ಸಭಾಂಗಣದಲ್ಲಿ ಕೆಜಿಎಫ್ ಮತ್ತು ಕಾಫಿ ಮಂಡಳಿಯಿಂದ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ
    ಕಾಫಿ ಬೆಳೆಗಾರರಿಗೆ ಕೇವಲ ಸರ್ಫೇಸಿ ಕಾಯ್ದೆ ಜೊತೆಗೆ ವಾಣಿಜ್ಯ ತೆರಿಗೆಯಿಂದಲೂ ಸಮಸ್ಯೆಯಾಗಿದೆ. ಕೃಷಿ ವ್ಯಾಪ್ತಿಗೆ ಕಾಫಿಬೆಳೆ ಬರುವುದಿಲ್ಲ, ಕಾಫಿ ಭೂ ಕೃಷಿ ಆದರೂ ಈ ಬೆಳೆಯನ್ನು ಉದ್ಯಮವಾಗಿ ಘೋಷಣೆ ಮಾಡಿಕೊಂಡಿರುವುದೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

    ಕಾಫಿ, ರಬ್ಬರ್, ಮೆಣಸು ಈ ಬೆಳೆಗಳ ವ್ಯಾಪ್ತಿಗೂ ಸರ್ಫೇಸಿ ಕಾಯ್ದೆ ಅನ್ವಯವಾಗಲಿದ್ದು, ಇದಕ್ಕೆ ಪರಿಹಾರ ಸಿಗಬೇಕಾದರೆ ಸಮಗ್ರ ಕಾನೂನು ತಿದ್ದುಪಡಿ ಮಾಡುವುದೊಂದೇ ಮಾರ್ಗ ಎಂದು ಸ್ಪಷ್ಟಪಡಿಸಿದರು. ಈ ಎರಡೂ ಸಚಿವಾಲಯಗಳ ಗಮನ ಸೆಳೆದು ಪ್ರಸ್ತುತ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಸರ್ಫೇಸಿ ಕಾಯ್ದೆಗೆ ತಿದ್ದುಪಡಿ ತಂದು ಕಾಫಿ, ರಬ್ಬರ್ ಸೇರಿದಂತೆ ಎಲ್ಲಾ ವಾಣಿಜ್ಯ ಬೆಳೆಗಳನ್ನು ಇದರಿಂದ ಹೊರತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ವಾಣಿಜ್ಯ ಸಚಿವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಸರ್ಫೇಸಿ ಕಾಯ್ದೆ ದೇಶದ ಕೆಲವು ಭಾಗದಲ್ಲಿ ಮಾತ್ರ ಜಾರಿಯಲ್ಲಿದ್ದು, ಉಳಿದಂತೆ ಎಲ್ಲೂ ಇಲ್ಲ. ಈ ಬಗ್ಗೆ ಚರ್ಚಿಸಲು ಕಾಫಿ ಮಂಡಳಿಯಲ್ಲಿ ಸಭೆ ಕರೆದರೆ ಸಂಬಂಧಪಟ್ಟ ಸಚಿವರು ಸಿಗುವುದಿಲ್ಲ ಎಂದು ಹೇಳಿದರು.

    ಸರ್ಫೇಸಿ ಕಾಯ್ದೆ ಕಾಫಿ, ರಬ್ಬರ್, ಮೆಣಸು ಬೆಳೆಗಳ ವ್ಯಾಪ್ತಿಗೆ ಅನ್ವಯವಾಗುವುದಿಲ್ಲ ಎಂದು ಆದೇಶಿಸಿ ಸುತ್ತೋಲೆ ಹೊರಡಿಸಬೇಕೆಂದು ವಾಣಿಜ್ಯ ಸಚಿವರನ್ನು ಒತ್ತಾಯಿಸಲು ಸಂಸದರು ಒಗ್ಗಟ್ಟಿನಿಂದ ನಿರ್ಧರಿಸುವ ಅಗತ್ಯ ಇದೆ ಎಂದರು. ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಅವರೊಂದಿಗೆ ಬ್ಯಾಂಕರ್‍ಸ್‌ಗಳನ್ನು ಸೇರಿಸಿಕೊಂಡು ಸಭೆ ನಡೆಸಿ ಒನ್ ಟೈಮ್ ಸೆಟ್ಲ್‌ಮೆಂಟ್‌ನ್ನು ಮುಂದುವರೆಸಲು ಸಾಧ್ಯವಾಗುತ್ತಾ ಎಂಬ ಬಗ್ಗೆ ಹಾಗೂ ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕು ಮತ್ತು ಈಗಾಗಲೇ ಆನ್‌ಲೈನ್ ಮೂಲಕ ಹರಾಜು ಆಗಿರುವ ತೋಟಗಳನ್ನು ಬೆಳೆಗಾರರಿಗೆ ವಾಪಾಸ್ ಮಾಡಲು ಈ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳೋಣ ಎಂದು ಸಲಹೆ ನೀಡಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಕಳೆದ ಮೂರು ತಿಂಗಳಲ್ಲಿ ಹರಾಜು ಮಾಡಿರುವ ತೋಟಗಳ ಬಗ್ಗೆ ಮರು ಪರಿಶೀಲಿಸಿ ಮುಂದೆ ಈ ರೀತಿ ಹರಾಜು ಆಗದಂತೆ ತಡೆಯುವ ಮಾನದಂಡಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ನಿರ್ಣಯ ಕೈಗೊಳ್ಳಬೇಕೆಂದು ಹೇಳಿದರು.
    ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿ, ಕಾಫಿ ಬೆಳೆ ವಾಣಿಜ್ಯ ಬೆಳೆಯಾಗಿರುವುದನ್ನು ಬಿಟ್ಟರೆ ಕೃಷಿಯಾಗಿ ಕೆಲಸ ನಡೆಯುತ್ತಿದೆ. ಆದ್ದರಿಂದ ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕೆಂದು ಆಗ್ರಹಿಸಿದರು.

    ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕೆಜಿಎಫ್ ಪದಾಧಿಕಾರಿಗಳು ಮತ್ತು ಬೆಳೆಗಾರರ ನಿಯೋಗ ಬರುತ್ತೇವೆ, ಅ ಸಂದರ್ಭದಲ್ಲಿ ನಮ್ಮೊಂದಿಗೆ ಸಂಸದರುಗಳಿದ್ದು, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬೆಳೆಗಾರರ ಮರಣ ಶಾಸನವಾಗಿರುವ ಸರ್ಫೇಸಿ ಕಾಯ್ದೆ ಸಮಸ್ಯೆಗೆ ತಿಲಾಂಜಲಿ ನೀಡಬೇಕೆಂದು ಮನವಿ ಮಾಡಿದರು.

    ಕೆಜಿಎಫ್ ಸದಸ್ಯ ರಘು ಮಾತನಾಡಿ, ಸಂಸದರು ಹಾಗೂ ಹಣಕಾಸು ಸಚಿವರು ಮಧ್ಯೆ ಪ್ರವೇಶಿಸಿ ಬ್ಯಾಂಕ್‌ಗಳಿಗೆ ಕಾಫಿ ಸಾಲಗಳನ್ನು ಸರ್ಫೇಸಿ ಕಾಯ್ದೆಯಿಂದ ವಿನಾಯ್ತಿ ನೀಡುವಂತೆ ಮನ ಒಲಿಸಬೇಕೆಂದು ವಿನಂತಿಸಿದರು.

    ಬ್ಯಾಂಕರ್‍ಸ್‌ಗಳು ಕಾಫಿ ಬೆಳೆಗಾರರ ಬಗ್ಗೆ ಮೃದು ಧೋರಣೆ ತಾಳಬೇಕು, ಕೃಷಿ ಭೂಮಿಯಾಗಿರುವ ಕಾಫಿತೋಟಗಳನ್ನು ಸರ್ಫೇಸಿ ಕಾಯ್ದೆಯನ್ನು ಮುಂದಿಟ್ಟುಕೊಂಡು ಹರಾಜು ಹಾಕುತ್ತಿರುವುದನ್ನು ಸಂಸದರಾದ ತಾವು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಜಯರಾಂ, ಟಿ.ರಾಜಶೇಖರ್, ರತೀಶ್, ಕೆ.ಡಿ ಮನೋಹರ್, ಐ.ಎಂ. ಮಹೇಶ್, ಲಿಂಗಪ್ಪ ಗೌಡ, ನಾಗೇಶ್, ರೇವಣ್ಣ ಗೌಡ, ಯತೀಶ್, ಶ್ರೇಯಸ್, ಮಹೇಶ್, ಎಐಟಿ ರಿಜಿಸ್ಟ್ರಾರ್ ಸಿ.ಕೆ. ಸುಬ್ರಾಯ, ಪ್ರಾಂಶುಪಾಲರಾದ ಜಯದೇವ, ಕೆ.ಕೆ. ರಘು, ವಿಜಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    Discussion on SARFAESI Act in Parliament session

  • ಕೇಂದ್ರ ಸರ್ಕಾರದ ಮೇಲೆ ಹೊಸ ನಂಬಿಕೆ-ವಿಶ್ವಾಸ ಬಂದಿದೆ

    ಕೇಂದ್ರ ಸರ್ಕಾರದ ಮೇಲೆ ಹೊಸ ನಂಬಿಕೆ-ವಿಶ್ವಾಸ ಬಂದಿದೆ

    ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ ಆಡಳಿತವನ್ನು ಕಂಡಿದೆ. ಕೆಟ್ಟ ಆಡಳಿತ ಎಂದರೆ ಏನು ಎನ್ನುವುದನ್ನು ನೋಡದೇ ಇರುವ ಅವಧಿ ಇದು ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದರು.

    ಯೂಥ್ ಫಾರ್ ನೇಷನ್ ಸಂಘಟನೆ ವತಿಯಿಂದ ನಗರದ ಎಐಟಿ ಕಾಲೇಜಿನ ಬಿಜಿಎಸ್ ಸೆಮಿನಾರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನರೇಂದ್ರ ಮೋದಿ ಅವರ ೧೧ ವರ್ಷದ ಸರ್ಕಾರದ ಸಂಕಲ್ಪ-ಸಾಧನೆಗಳ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ೧೧ ವರ್ಷಗಳ ಹಿಂದೆ ಯುಪಿಎ ಸರ್ಕಾರದಲ್ಲಿ ಹಗರಣಗಳ ಸುದ್ದಿಗಳನ್ನೇ ಪತ್ರಿಕೆಗಳಲ್ಲಿ ಓದಿ ದಿನವನ್ನು ಆರಂಭಿಸಬೇಕಿತ್ತು. ಕಲ್ಲಿದ್ದಲು, ಅಗಸ್ತಾ ವೆಸ್ಟ್‌ಲ್ಯಾಂಡ್, ಕಾಮನ್ವೆಲ್ತ್ ಹೀಗೆ ಹಗರಣಗಳ ಸರಮಾಲೆಯೇ ನಡೆದಿತ್ತು. ಆದರೆ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಕೇಂರ ಸರ್ಕಾರದ ಮೇಲೆ ಹೊಸ ನಂಬಿಕೆ, ವಿಶ್ವಾಸ ಬಂದಿದೆ. ಅಭಿವೃದ್ಧಿಗೆ ನಂಬರ್ ಹಾಕಬಹುದು ಆದರೆ ನಂಬಿಕೆ ಬರಬೇಕೆಂರೆ ಒಳ್ಳೆಯ ಆಡಳಿತ ಮಾತ್ರ ಬರಬೇಕಾಗುತ್ತದೆ ಎಂದರು.

    ೧೧ ವರ್ಷದಲ್ಲಿ ದೇಶದಲ್ಲಾಗಿರುವ ಬದಲಾವಣೆಗಳನ್ನು ಪಿಪಿಟಿ ಮೂಲಕ ಹೇಳುವ ಅಗತ್ಯವಿಲ್ಲ. ಪರಿಜ್ಞಾನ ಇರುವವರು, ಕಾಂಗ್ರೆಸ್ ಸೇರದಿರುವ ಪ್ರತಿಯೊಬ್ಬರೂ ಉತ್ತಮ ಬದಲಾವಣೆ ಆಗಿದೆ ಎನ್ನುತ್ತಿದ್ದಾರೆ. ದಿನ ನಿತ್ಯದ ಜೀವನದಲ್ಲಿ ನಮಗೆ ಗೊತ್ತಿಲ್ಲದೆ ಬದಲಾವಣೆ ಅನುಭವಕ್ಕೆ ಬರುತ್ತಿದೆ ಎಂದು ತಿಳಿಸಿದರು.

    ಅಭಿವೃದ್ಧಿಯ ವೇಗ ಹೇಗಿದೆ ಎಂದರೆ ಕರ್ನಾಟಕ ಅಷ್ಟೇ ಅಲ್ಲದೆ ಇಡೀ ದೇಶದಲ್ಲಿ ಒಂರಿಂದ ಎರಡುಗಂಟೆ ಪ್ರಯಾಣ ಮಾಡುವಷ್ಟರಲ್ಲಿ ಒಂದು ಏರ್‌ಪೋರ್ಟ್ ಸಿಗುವಂತಾಗಿದೆ. ವೈಮಾನಿಕ ಕ್ರಾಂತಿಯೇ ನಡೆದಿದೆ. ನಾಲ್ಕೈದು ಸಾವಿರ ರೂ.ನಲ್ಲಿ ವಿಮಾನ ಯಾನ ಮಾಡಬಹುದಾಗಿದೆ. ಈ ರೀತಿಯ ಬದಲಾವಣೆಯನ್ನು ಜೀವಿಸುತ್ತಿದ್ದರೆ ಅದು ಮೋದಿ ಸರ್ಕಾರದ ಸಾಧನೆ ಎಂದು ಹೇಳಿದರು.

    ಮನಿ ಆರ್ಡರ್ ಕಾಲದಿಂದ ಸಿಂಗಪುರ, ಅಮೇರಿಕಾದಂತಹ ದೇಶಗಳಿಗೆ ನಮ್ಮ ದೇಶದ ಮಕ್ಕಳು ಎಸ್‌ಎಂಎಸ್, ವಾಟ್ಸ್ ಆಪ್ ಮಾಡುವ ರೀತಿ ಹಣವನ್ನು ಕಳಿಸುವ ಮಟ್ಟಕ್ಕೆ ಬಂದಿದ್ದಾರೆ ಇದು ಡಿಜಿಟಲ್ ಇಂಡಿಯಾದ ಕ್ರಾಂತಿ, ಫಾರಿನ್ ಎಂದರೆ ಬಹಳ ವೇಗವಾಗಿ ಬೆಳೆದ ದೇಶಗಳು ಎಂಬ ಭಾವನೆ ಇದೆ. ಆದರೆ ಅಮೇರಿಕಾ ಸೇರಿದಂತೆ ಹಲವು ದೇಶಗಳಿಗೆ ನಾವು ನಿಯೋಗ ಹೋಗಿದ್ದಾಗ ಡಿಜಿಟಲ್ ಇಂಡಿಯಾ ಬಗ್ಗೆ ನಮಗೂ ಮಾಹಿತಿ ಕೊಡಿ ಎಂದು ಅಲ್ಲಿನ ಮುಖಂಡರು ಕೇಳುವ ಮಟ್ಟಕ್ಕೆ ನಾವು ಬೆಳೆದಿದ್ದೇವೆ. ೨ ಲಕ್ಷ ಕೋಟಿ ರೂ.ಗಳನ್ನು ಭಾರತ ದೇಶ ಕೇವಲ ನೇರ ನಗದು ವಹಿವಾಟಿನಲ್ಲಿ ಉಳಿತಾಯ ಮಾಡಿದೆ. ಇದು ಒಂದು ದೇಶದ ವಾರ್ಷಿಕ ಬಜೆಟ್‌ನಷ್ಟು ಗಾತ್ರದ್ದಾಗಿದೆ ಎಂದರು.

    ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದ ಉತ್ತೇಜನಕ್ಕೆ ೧೧ ವರ್ಷಗಳಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಕ್ಷೇತ್ರಗಳಲ್ಲಿ ಸಂಶೋಧನೆಗೆಂದು ಹತ್ತಾರು ಖಾಸಗಿ ಕಂಪನಿಗಳಿಗೆ ಅನುದಾನ ಮತ್ತು ಸೌಲತ್ತುಗಳನ್ನು ನೀಡಿ ಈ ಕ್ಷೇತ್ರದಲ್ಲಿ ಭಾರತವನ್ನು ಜಗತ್ತಿನ ನಾಯಕನನ್ನಾಗಿಸಲು ಮುಂದಡಿ ಇಡಲಾಗಿದೆ ಎಂದು ತಿಳಿಸಿದರು.

    ಎಐ ಸೇರಿದಂತೆ ಇನ್ನಿತರೆ ಆಳ ತಂತ್ರಜ್ಞಾನದಲ್ಲಿ ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ೫೦ ಸಾವಿರ ಕೋಟಿ ರೂ. ಅನುದಾನ ನೀಡುತ್ತಿದ್ದರೆ, ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆ ದೃಷ್ಠಿಯಲ್ಲಿಟ್ಟುಕೊಂಡು ಪಿಎಂ ಸ್ವನಿಧಿ ಯೋಜನೆಯಡಿ ೧೦ ಸಾವಿರದಿಂದ ೧ ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡುತ್ತಿದೆ. ಜಾಹಿರಾತು ನೀಡಿದರೆ ಜನರು ಮತ ಹಾಕುತ್ತಾರೆ ಎನ್ನುವ ಸ್ಥಿತಿಯಲ್ಲಿ ಅಭಿವೃದ್ಧಿ, ಒಳ್ಳೆಯ ಆಡಳಿತ ಎನ್ನುವುದು ಅನುಭವಕ್ಕೆ ಬರುವಂತಾಗಿರುವುದು ಕಳೆದ ೧೧ ವರ್ಷದಲ್ಲಿ ಎಂದರು.

    ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಬಾಲಕೋಟ್, ಆಪರೇರಷನ್ ಸಿಂಧೂರ ನಂತಹ ದಿಟ್ಟ ಕ್ರಮಗಳ ಮೂಲಕ ಭಯೋತ್ಪಾದನೆ ಮಟ್ಟ ಹಾಕುವಲ್ಲಿ ದೇಶ ಯಶಸ್ಸುಕಂಡಿದೆ. ಮೇಕ್ ಇನ್ ಇಂಡಿಯಾದಲ್ಲಿ ತಯಾರಾದ ನಮ್ಮ ಆಕಾಶ್ ಕ್ಷಿಪಣಿಯನ್ನು ಖರೀದಿಸಲು ಹಲವು ದೇಶಗಳು ಕಾತುರವಾಗಿವೆ. ಇದಕ್ಕಾಗಿ ನರೇಂದ್ರ ಮೋದಿ ಅವರನ್ನು ನಮ್ಮ ದೇಶಕ್ಕೆ ಕಳಿಸಿಕೊಡಿ ಎಂದು ಕೋರಿಕೆ ಇಡುತ್ತಿವೆ. ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ಮಾತನಾಡುವ ಕಾಂಗ್ರೆಸಿಗರಿಗೆ ಇದು ಅರ್ಥವಾಗಬೇಕು ಎಂದರು.

    ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಮಾಜಿ ಶಾಸಕ ಡಿ.ಎಸ್.ಸುರೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಇತರರು ಭಾಗವಹಿಸಿದ್ದರು. ಯೂಥ್ ಫಾರ್ ನೇಷನ್ ಸಂಚಾಲಕ ಸೋತೋಷ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

    There is new trust and confidence in the central government.

  • ಪೌರಕಾರ್ಮಿಕರ ಮೂಲ ಬೇಡಿಕೆ ಈಡೇರಿಸಲು ಮನವಿ

    ಪೌರಕಾರ್ಮಿಕರ ಮೂಲ ಬೇಡಿಕೆ ಈಡೇರಿಸಲು ಮನವಿ

    ಚಿಕ್ಕಮಗಳೂರು: ಹಲವಾರು ವರ್ಷಗಳಿಂದ ದುಡಿಯುತ್ತಿರುವ ಪೌರಕಾರ್ಮಿಕರ ಮೂಲ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಬೇಕು ಎಂದು ಪೌರಕಾರ್ಮಿಕರ ಜಿಲ್ಲಾ ಮಹಾಸಂಘ ಗುರುವಾ ರ ಸಂಜೆ ನಗರಸಭೆ ಅಧ್ಯಕ್ಷ ಬಿ.ಶೀಲಾ ದಿನೇಶ್ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.

    ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಮುರುಗೇಶ್ ಪೌರಕಾರ್ಮಿಕರಿಗೆ ಅನೇಕ ಸಮಸ್ಯೆಗಳಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ವರ್ಗಕ್ಕೆ ಮನವಿ ಸಲ್ಲಿಸಿ ಬಗೆಹರಿಸಲು ತಿಳಿಸಿದ್ದರೂ ಸಹ ಇದುವರೆಗೂ ಅವಶ್ಯಕವಾಗಿರುವ ಯಾವುದೇ ಸವಲತ್ತನ್ನು ಪೂರೈಸುತ್ತಿಲ್ಲ ಎಂದು ಹೇಳಿದರು.

    ಪೌರಕಾರ್ಮಿಕರಿಗೆ ಮತ್ತು ಆಸ್ಪತ್ರೆ ಸಫಾಯಿ ಕರ್ಮಚಾರಿಗಳಿಗೆ ಪ್ರತಿ ತಿಂಗಳು ವೇತನ ಪಾವತಿಸುವು ದು, ಸಂಕಷ್ಟ ಭತ್ಯೆ, ಟೈಮ್‌ಬಾಂಡ್ ನೀಡುವುದು, ಖಾಯಂ ಕಾರ್ಮಿಕರಿಗೆ ಎಸ್.ಆರ್. ಬುಕ್ ಮಾಡಿಕೊ ಡುವುದು. ನೇರಪಾವತಿ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೆ ಪ್ರತಿ ವರ್ಷ ಏಪ್ರಿಲ್‌ನಲ್ಲಿ ಸಂಬಳ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

    ಪ್ರತಿ ತಿಂಗಳ ಸಂಬಳ ತಡವಾಗಿ ಬರುತ್ತಿರುವ ಕಾರಣ ಕಾರ್ಮಿಕರು ಕೈಸಾಲ ಮಾಡಿಕೊಂಡು ಜೀವನ ನಡೆಸುವಂತಾಗಿದೆ. ಈ ಜೊತೆಗೆ ಬ್ಯಾಂಕ್‌ಗಳಲ್ಲಿ ಸಾಲ ಹಾಗೂ ಇನ್ನಿತರೆ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದರೆ ಸಂಬಳ ಪ್ರಮಾಣಪತ್ರ ಬೇಕಾದಾಗ ನಗರಸಭೆಗೆ ಕೇಳಿದರೆ ಸಕಾಲದಲ್ಲಿ ಕೊಡುತ್ತಿಲ್ಲ. ಇದರಿಂದ ಬಹಳಷ್ಟು ತೊಂದರೆಯಾಗುತ್ತಿದೆ ಎಂದರು.

    ಬಯೋಮೆಟ್ರಿಕ್‌ನ್ನು ಒಂದೆಡೆ ಅಳವಡಿಸಿದ ಕಾರಣ ಪೌರಕಾರ್ಮಿಕರು ಎಲ್ಲಿಯೇ ಕೆಲಸ ನಿರ್ವಹಿಸುತ್ತಿ ದ್ದರೂ ಆ ಸ್ಥಳಕ್ಕೆ ಬರಬೇಕಾದ ಸ್ಥಿತಿಯಿದೆ. ಮಳೆಗಾಲದಲ್ಲಿ ಕೆಲಸ ನಿರ್ವಹಿಸಿ ಒದ್ದಾಡಿಕೊಂಡು ಬಯೋ ಮೆಟ್ರಿಕ್ ಹಾಕಿದರೂ ಕೆಲವೊಮ್ಮೆ ಗೈರೆಂದು ತೋರಿಸುತ್ತಿದ್ದು ಇದರಿಂದ ವೇತನವು ಕಡಿತಗೊಂಡು ಮಾನಸಿ ಕವಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದೇವೆ ಎಂದು ಹೇಳಿದರು.

    ವಾರವೀಡಿ ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಮೊಟ್ಟೆ ವಿತರಿಸಲು ಸರ್ಕಾರದ ಆದೇಶವಿದ್ದ ರೂ ಸಹ ಕಾರಣಗಳನ್ನು ಹೇಳಿ ಮೊಟ್ಟೆ ವಿತರಿಸದೇ ಪೌರಕಾರ್ಮಿಕರಿಗೆ ತೊಂದರೆ ನೀಡುತ್ತಿದೆ. ಅಲ್ಲದೇ ಮೊಟ್ಟೆ ನೀಡಿದರೂ ಸಹ ಆ ಮೊಟ್ಟೆಗಳು ಕಾರ್ಮಿಕರಿಗೆ ತಲುಪುವ ವೇಳೆಗೆ ಹೊಡೆದು ಹೋಗಿ ಅವುಗಳನ್ನು ತಿನ್ನಲು ಸಾಧ್ಯವಾಗದ ಸ್ಥಿತಿಯಿದೆ ಎಂದರು.

    ಪ್ರತಿನಿತ್ಯವು ಕಸ, ಕೊಳಚೆ ಮಧ್ಯೆಯೇ ಜೀವದ ಹಂಗು ತೊರೆದು ಕೆಲಸ ಮಾಡುವ ಪೌರಕಾರ್ಮಿಕರಿಗೆ ಸರಿಯಾದ ಸುರಕ್ಷಾ ಕವಚಗಳು ನೀಡುತ್ತಿಲ್ಲ. ಇದರಿಂದ ರೋಗ ರುಜಿನಗಳು ಹೆಚ್ಚಾಗಿ ಕಡಿಮೆ ವಯಸ್ಸಿನಲ್ಲಿ ಪೌರಕಾರ್ಮಿಕರು ಸಾವಿಗೀಡಾಗಿ ಕುಟುಂಬವು ಅನಾಥವಾಗುತ್ತಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಾಗರಾಜ್, ಗೌ.ಅಧ್ಯಕ್ಷ ಸಿ.ಬಿ.ನಾಗರಾಜ್, ಸದಸ್ಯರಾದ ಕರ ಣ್‌ಕುಮಾರ್, ಬಿ.ಭರತ್, ಶಾಮು, ಮಂಜು, ಗೀತಾ, ಶೈಲಾ, ಸುನೀತಾ, ಆನಂದ್ ಮತ್ತಿತರರಿದ್ದರು.

    Appeal to fulfill the basic demands of the civil servants

  • ಲಕ್ಸಾಗರ ಕೆರೆಯನ್ನು ಪುನಶ್ಚೇತನಗೊಳಿಸುವಂತೆ ಮನವಿ

    ಲಕ್ಸಾಗರ ಕೆರೆಯನ್ನು ಪುನಶ್ಚೇತನಗೊಳಿಸುವಂತೆ ಮನವಿ

    ಚಿಕ್ಕಮಗಳೂರು: ಬಹಳರ್ಷ ವರ್ಷಗಳ ಹಿಂದೆ ಬಯಲು ಸೀಮೆಯ ಜನರ ಜೀವನಾಡಿಯಾಗಿದ್ದು ಇದೀಗ ಜೀರ್ಣಾವಸ್ಥೆಯಲ್ಲಿರುವ ಸಖರಾಯಪಟ್ಟಣ ಸಮೀಪ ಜಾನ್ಸಾಲೆ ಗ್ರಾಮದ ಲಕ್ಸಾಗರ ಕೆರೆಯನ್ನು ಪುನಶ್ಚೇತನಗೊಳಿಸುವಂತೆ ಕ್ಯಾತನ ಬೀಡು ಪ್ರತಿ?ನದ ಕಾರ್ಯದರ್ಶಿ ರವೀಶ್ ಕ್ಯಾತನಬೀಡು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

    ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಜಾನ್ಸಾಲೆ ಗ್ರಾಮದ ಕೃಷಿಕ ರವೀಶ್ ಅವರ ಮನೆಯಂಗಳದಲ್ಲಿ ಕ್ಯಾ ತನಬೀಡು ಪ್ರತಿ?ನ ಗುರುವಾರ ಏರ್ಪಡಿಸಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

    ೫೦ ಎಕರೆಯ? ವಿಶಾಲವಾದ ಲಕ್ಸಾಗರ ಕೆರೆ ಬಹಳ? ವ?ಗಳ ಹಿಂದೆ ನೀರಿನಿಂದ ತುಂಬಿ ತುಳುಕುತ್ತಿತ್ತು, ಜಾನ್ಸಾಲೆ ಸುತ್ತಮುತ್ತಲ ರೈತರ ಜೀವನಾಡಿಯಾಗಿತ್ತು, ಆದರೆ ಇದೀಗ ಆ ಕೆರೆ ನೀಲಗಿರಿ ಮರಗಳ ತೋಪಾಗಿ ಅವಸಾನದ ಅಂಚಿನಲ್ಲಿದ್ದು ಕೃಷಿಕರ ಉಪಯೋಗಕ್ಕೆ ಬಾರದಂತಾಗಿದೆ ಎಂದು ವಿ?ದಿಸಿದರು.

    ಬಯಲು ಸೀಮೆಯಲ್ಲಿ ಯಾವಾಗಲೂ ಮಳೆ ಕೊರತೆ ಎದುರಾಗುವುದರಿಂದಾಗಿ ರಾಜ್ಯ ಸರ್ಕಾರ ಲಕ್ಸಾಗರ ಕೆರೆಯನ್ನು ಅಭಿವೃದ್ಧಿಪಡಿಸಬೇಕು, ಗುಡ್ಡಗಳ ಬೀಳು ನೀರು ಕೆರೆಗೆ ಹರಿಯುವಂತೆ ಮಾಡಬೇಕು, ಸ್ಥಳೀಯ ರೈತರೂ ಸಹ ಕಣ್ಮರೆಯಾಗುತ್ತಿರುವ ಕೆರೆಯನ್ನು ಉಳಿಸಲು, ಸಂರಕ್ಷಿಸಲು ಮುಂದಾಗಬೇಕು ಎಂದು ಕರೆ ನೀಡಿದರು.

    ರೈತ ಸಮುದಾಯ ಮಾತು ಮರೆತು ಮೌನಕ್ಕೆ ಶರಣಾಗಿರುವ ಈ ಹೊತ್ತಿನಲ್ಲಿ ಕೃಷಿಕರ ನೋವು, ನಲಿವು, ಸಂಕಟ, ಬೇಗುದಿಯನ್ನು ಹಂಚಿಕೊಳ್ಳುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ಗುರುಶಾಂತಪ್ಪ ಜಿಲ್ಲೆಯಲ್ಲಿ ಹುಟ್ಟುವ ಎಲ್ಲಾ ನದಿಗಳು ಬೇರೆ ಜಿಲ್ಲೆಗಳಿಗೆ, ಬೇರೆ ರಾಜ್ಯಗಳಿಗೆ ಹರಿದು ಅಲ್ಲಿ ನನ್ನ ನೆಲವನ್ನು ಸಂಪದ್ಬ ರಿತಗೊಳಿಸುತ್ತಿವೆ, ಆದರೆ ನಮಗೆ ಅದರಿಂದ ಯಾವುದೇ ಪ್ರಯೋಜನವೂ ಆಗುತ್ತಿಲ್ಲ, ಜಿಲ್ಲೆಯಲ್ಲಿರುವ ಕೆರೆಕಟ್ಟೆಗಳು ದಿನೇ ದಿನೇ ಕಣ್ಮರೆಯಾಗುತ್ತಿವೆ ಎಂದು ವಿ?ದಿಸಿ ಅವುಗಳನ್ನು ಉಳಿಸಿಕೊಳ್ಳುವತ್ತ ರೈತಾಪಿ ವರ್ಗ ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

    ಆಧುನಿಕತೆಯಿಂದಾಗಿ ರಾಸಾಯನಿಕ ಕೃಷಿಗೆ ರೈತರು ಮುಂದಾದ ಪರಿಣಾಮ ಇಂದು ಭೂಮಿ ಬರಡಾಗುತ್ತಿದೆ, ಕುಡಿಯುವ ನೀರು, ಗಾಳಿ, ತಿನ್ನುವ ಅನ್ನ ಎಲ್ಲವೂ ವಿ?ವಾಗಿದೆ ಎಂದ ಅವರು ರೈತರು ಈಗಲಾದರೂ ಎಚ್ಚೆತ್ತು ಕೊಳ್ಳಬೇಕು, ನೆಲ, ಜಲವನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ಮಾಡಿದರು.

    ಸಿ ಪಿ ಐ ರಾಜ್ಯ ಸಹಕಾರ್ಯದರ್ಶಿ ಬಿ. ಅಮ್ಜದ್ ಮಾತನಾಡಿ ಸಾಲ ಸೋಲಗಳಿಂದ, ಸರ್ಕಾರಗಳ ಕಡೆಗಣನೆಯಿಂದ ಬೇಸತ್ತು ರೈತ ಕುಟುಂಬಗಳಿಂದು ಕೃಷಿಯಿಂದ ವಿಮುಖವಾಗುತ್ತಿವೆ, ದೇಶದಲ್ಲಿ ಶೇ ೮೦ ರಷ್ಟಿದ್ದ ಕೃಷಿ ಭೂಮಿ ಇಂದು ಶೇ ೫೬ ಕ್ಕೆ ಇಳಿದಿದೆ, ಕಾರ್ಪೊರೇಟ್ ಕಂಪನಿಗಳು, ಮಾಫಿಯಾಗಳು, ಕೃಷಿ ಭೂಮಿಯನ್ನು ಕಬಳಿಸುತ್ತಿವೆ ಎಂದು ವಿ?ದಿಸಿದರು.

    ರೈತ ಸಮುದಾಯ ಈಗಲಾದರೂ ಎಚ್ಚೆತ್ತು ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುವುದೂ ಸೇರಿದಂತೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಕುರಿತು ಚಿಂತನೆ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

    ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಕೃಷಿಕ ನಿಂಗಪ್ಪ ರೈತರು ಒಂದಾಗಿ ಹೋರಾಟ ಮಾಡಿದರೆ ಮಾತ್ರ ಕೆರೆ, ಕಟ್ಟೆ, ನೆಲ, ಜಲವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

    ಕೃಷಿಕ ರವೀಶ್, ತಾಪಂ ಮಾಜಿ ಅಧ್ಯಕ್ಷ ಎನ್. ಡಿ. ಚಂದ್ರಪ್ಪ, ಸಾಹಿತಿ ಡಿ. ಎಂ. ಮಂಜುನಾಥ ಸ್ವಾಮಿ ಮಾತನಾಡಿದರು, ಕೃಷಿಕರಾದ ಪಿಳ್ಳೇನಹಳ್ಳಿ ವಿಜಯಕುಮಾರ್, ನಿಂಗಪ್ಪ, ಚಂದ್ರಪ್ಪ, ಗಂಗಾಧರ್ ಶಿವಪುರ ಸಭೆಯಲ್ಲಿ ಪಾಲ್ಗೊಂಡಿದ್ದರು.

    Appeal to revive Laksagar Lake

  • ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಎರಡು ವರ್ಷದಲ್ಲಿ ಆರಂಭ

    ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಎರಡು ವರ್ಷದಲ್ಲಿ ಆರಂಭ

    ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

    ನಗರದ ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರ ಚಿಕ್ಕಮಗಳೂರು-ತಿರುಪತಿ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ನಂತರ ಅವರು ಮಾತನಾಡಿ ಹಾಸನ-ಚಿಕ್ಕಮಗಳೂರು ರೈಲ್ವೆಗೆ ಅಗತ್ಯವಿರುವ ಜಾಗವನ್ನು ಇನ್ನೊಂದು ತಿಂಗಳಲ್ಲಿ ರೈಲ್ವೇ ಇಲಾಖೆಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಹೀಗಾಗಿ ಇನ್ನೆರಡು ವರ್ಷಗಳಲ್ಲಿ ಹಾಸನ-ಬೇಲೂರು-ಚಿಕ್ಕಮಗಳೂರು ಮಾರ್ಗ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

    ಚಿಕ್ಕಮಗಳೂರಿನಿಂದ ತಿರುಪತಿಗೆ ವಾರದಲ್ಲಿ ಮೂರು ದಿನ ರೈಲು ಓಡಿಸುವಂತೆ ಕೋರಿಕೆ ಇಟ್ಟಿದ್ದೀರಿ ಈ ಬಗ್ಗೆ ಪರಿಶೀಲನೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು. ಚಿಕ್ಕ ಬಾಣಾವರ ಹಾಸನ ಮಾರ್ಗದ ವಿದ್ಯುದೀಕರಣ ೧೮೭ ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಚಿಕ್ಕಮಗಳೂರು ಮತ್ತು ಬೀರೂರು ಡಬ್ಬಲ್ ಕ್ರಾಸಿಂಗ್‌ಗೆ ೭೦ ಕೋಟಿ ರೂ. ಕೊಡುತ್ತಿದ್ದೇವೆ. ಚಿಕ್ಕಾನವಂಗಲ ಅಜ್ಜಂಪುರಕ್ಕೆ ಮೇಲು ಸೇತುವೆಗೆ ೫೦ ಕೋಟಿ ರೂ. ಮಂಜೂರು ಮಾಡಿ ಕೆಲಸ ಆರಂಭಿಸಲಾಗಿದೆ. ಬೀರೂರು-ಶಿವಮೊಗ್ಗ ೬೩ ಕಿ.ಮೀ. ಮತ್ತು ಶವಮೊಗ್ಗ-ಶೃಂಗೇರಿ-ಮಂಗಳೂರು ನಡುವಿನ ೩೩೦ ಕಿ.ಮೀ. ಹೊಸ ಮಾರ್ಗದ ಸರ್ವೇ ಕಾರ್ಯ ಆರಂಭಿಸುತ್ತಿದ್ದೇವೆ. ಇದಲ್ಲದೆ ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯಕ್ಕೆ ರೈಲು ಸಂಪರ್ಕ ಕಲ್ಪಿಸಲು ಸರ್ವೇ ಕಾರ್ಯ ಆರಂಭಿಸುವ ಕುರಿತು ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ ಎಂದರು.

    ಇಂದು ಇಲ್ಲಿ ಜನರಲ್ಲಿ ಕಂಡು ಬರುತ್ತಿರುವ ಉತ್ಸಾಹವು ಇಲ್ಲಿನ ದತ್ತಾತ್ರೇಯರು ಮತ್ತೊಂದು ತಿರುಪತಿಯ ಶ್ರೀನಿವಾಸ ಮತ್ತೊಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ದೂರದೃಷ್ಠಿ ಫಲವಾಗಿ ಇಂದು ಈ ನೂತನ ರೈಲಿಗೆ ಚಾಲನೆ ಸಿಕ್ಕಿದೆ. ಇದಕ್ಕಾಗಿ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ರೈಲ್ವೇ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ.೫೦ ರಷ್ಟು ಅನುದಾನ ನೀಡಿ ಪೂರ್ಣಗೊಳಿಸಬೇಕಿತ್ತು. ಈ ಕಾರಣಕ್ಕೆ ಎಲ್ಲೂ ಕೆಸಲ ಆಗುತ್ತಿರಲಿಲ್ಲ. ರಾಜ್ಯ ಸರ್ಕಾರಗಳು ಸರಿಯಾಗಿ ಹಣ ಕೊಡುತ್ತಿರಲಿಲ್ಲ. ಈ ಕಾರಣಕ್ಕೆ ಪ್ರಧಾನ ಮಂತ್ರಿಗಳು ಇಡೀ ರಾಜ್ಯದಲ್ಲಿರುವ ಎಲ್ಲಾ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕೆ ಕೇಂದ್ರದಿಂದಲೇ ಶೇ.೧೦೦ ರಷ್ಟು ಅನುದಾನ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಇದು ಸುಲಭದ ಕೆಲಸವಲ್ಲ ಸಹಸ್ರಾರು ಕೋಟಿ ಖರ್ಚಾಗುತ್ತದೆ ಎಂದರು.

    ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಚಿಕ್ಕಮಗಳೂರು-ಬೇಲೂರು-ಹಾಸನ ಮಾರ್ಗವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಶೃಂಗೇರಿ, ಉಡುಪಿ, ಕೊಲ್ಲೂರು-ದತ್ತಪೀಠ ಮಾರ್ಗವಾಗಿ ವಿಶೇಷ ರೈಲು ಸಂಚಾರಕ್ಕೆ ಸರ್ವೆ ಕಾರ್ಯ ಆರಂಭಿಸಬೇಕು ಹಾಗೂ ವಂದೇ ಭಾರತ್ ಇಂಟರ್‌ಸಿಟಿ ರೈಲು ಬೀರೂರು ಮತ್ತು ಕಡೂರಿನಲ್ಲಿ ನಿಲುಗಡೆ ಮಾಡಬೇಕೆಂದು ವಿನಂತಿಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ದತ್ತಾತ್ರೇಯನ ಕ್ಷೇತ್ರದಿಂದ ಶ್ರೀನಿವಾಸನ ಕ್ಷೇತ್ರಕ್ಕೆ ಇಂದು ನೂತನ ರೈಲು ಸಂಚಾರ ಆರಂಭಿಸಿ ಬೇಡಿಕೆ ಈಡೇರಿಸಿರುವುದಕ್ಕೆ ಸಂಸದರು, ರೈಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ  ಚಿಕ್ಕಮಗಳೂರು-ಬೇಲೂರು-ಹಾಸನ ಮಾರ್ಗವಾಗಿ ರೈಲು ಸಂಚಾರ ಆರಂಭವಾದರೆ ಮೈಸೂರು, ಬೆಂಗಳೂರು, ಧಾರವಾಡ ಸೇರಿದಂತೆ ದೇಶದ ಉದ್ದಗಲಕ್ಕೆ ರೈಲ್ವೆ ಪ್ರಯಾಣ ಆರಂಭಿಸಲು ನಾಗರೀಕರಿಗೆ ಅನುಕೂಲವಾಗಲಿದೆ. ೨೦೨೯ ರ ಒಳಗೆ ಈ ಮಾರ್ಗವಾಗಿ ರೈಲು ಸಂಚಾರ ಆರಂಭ ಮಾಡುವಂತೆ ಸಚಿವ ಸೋಮಣ್ಣನವರಲ್ಲಿ ವಿನಂತಿಸಿದರು.

    ದೇವನೂರಿನಲ್ಲಿ ಕೋವಿಡ್‌ನಿಂದೀಚೆಗೆ ರೈಲ್ವೆ ನಿಲುಗಡೆ ಕಡಿಮೆಯಾಗಿದ್ದು, ಇದರಿಂದಾಗಿ ಬಯಲು ಭಾಗದ ಜನರಿಗೆ ತೊಂದರೆಯಾಗಿದ್ದು, ಮೊದಲು ನಿಲುಗಡೆಯಾಗುತ್ತಿದ್ದ ೧೩ ರೈಲುಗಳನ್ನು ನಿಲುಗಡೆ ಮಾಡಬೇಕು. ಕಣಿವೇಹಳ್ಳಿ ಅಂಡರ್ ಪಾಸ್, ಚಿಕ್ಕದೇವನೂರು ಸಮೀಪ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲು ಮನವಿ ಮಾಡಿದರು.

    ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ, ನೂತನ ಚಿಕ್ಕಮಗಳೂರು-ತಿರುಪತಿ ರೈಲಿಗೆ ಗುರು ದತ್ತಾತ್ರೇಯ ಎಂಬ ಹೆಸರನ್ನು ನಾಮಕರಣ ಮಾಡಲು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ಮಾಜಿ ಶಾಸಕ ಡಿ.ಎಸ್. ಸುರೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ನಗರಸಭಾಧ್ಯಕ್ಷೆ ಶೀಲಾದಿನೇಶ್, ಬಿಜೆಪಿ ಮುಖಂಡರಾದ ಹೆಚ್.ಸಿ. ಕಲ್ಮರುಡಪ್ಪ, ಎಂ.ಆರ್ ದೇವರಾಜ್ ಶೆಟ್ಟಿ, ಪುಷ್ಪರಾಜ್, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಡಾ. ವಿಕ್ರಮ ಅಮಟೆ, ಜಿ.ಪಂ ಸಿಇಓ ಹೆಚ್.ಎಸ್. ಕೀರ್ತನ ಉಪಸ್ಥಿತರಿದ್ದರು.

    Chikkamagaluru-Hassan train service to start in two years

  • ಅಜ್ಞಾನ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿ ಬೆಳಗಿಸುವರೇ ಗುರು

    ಅಜ್ಞಾನ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿ ಬೆಳಗಿಸುವರೇ ಗುರು

    ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ ಟ್ರಸ್ಟ್‌ನ ಅಧ್ಯಕ್ಷರಾದ ಜಯಂತ್ ಪೈ, ಪ್ರಭು ತಿಳಿಸಿದರು.

    ಅವರು ಇಂದು ಶಾರದ ಪೈ ಕಲ್ಯಾಣ ಮಂಟಪದಲ್ಲಿ ಕಾಶಿ ಮಠದ ವಾರಣಾಸಿ ಅಧೀನ ಸಂಸ್ಥೆ ವತಿಯಿಂದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ಗುರುವನ್ನು ಅರಿವಿನ ಸಾಗರ ಎಂದು ಕರೆಯುತ್ತಾರೆ ಸರ್ವರ ಹಿತ ಬಯಸುವ ಗುರುಗಳನ್ನು ಭಕ್ತಿ ಕೃತಜ್ಞತೆಯಿಂದ ಸ್ಮರಿಸಿ ಪೂಜಿಸುವ ಕಾರ್ಯಕ್ರಮವೇ ಗುರುಪೂರ್ಣಿಮೆ ಆಗಿದೆ ಎಂದು ಹೇಳಿದರು.

    ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನ ಗುರುಗಳು ಜೀವನದ ಕತ್ತಲನ್ನು ದೂರಮಾಡಿ ಬೆಳಕಿನೆಡೆಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ ಎಂದರು, ವಿದ್ಯಾರ್ಥಿಗಳು ಗುರುಗಳ ಮತ್ತು ಪೋಷಕರ ಮಾರ್ಗದರ್ಶನದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು, ಉನ್ನತ ವ್ಯಾಸಂಗ ಮಾಡಿ ಸಮಾಜಸೇವೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿ ಸಾರ್ಥಕ ಬದುಕನ ನಿಮ್ಮದಾಗಿಸಿಕೊಳ್ಳಬೇಕು ಎಂದರು.

    ಪ್ರತಿ ವರ್ಷ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡುವುದರ ಜೊತೆಗೆ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುವುದು ಎಂದರು.

    ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಸುರೇಶ್‌ಪೈ, ಬಾಬುಕಾಮತ್, ವ್ಯವಸ್ಥಾಪಕ ಲಕ್ಮಣ್‌ಕಾಮತ್ ಉಪಸ್ಥಿತರಿದ್ದರು. ಗುರುಪೂರ್ಣಿಮೆ ಕಾರ್ಯಕ್ರಮದ ಬಗ್ಗೆ ನಾರಾಯಣ ಮಲ್ಯ ಮಾತನಾಡಿದರು. ಅರ್ಚಕ ಕೃಷ್ಣಭಟ್ ನೇತೃತ್ವದಲ್ಲಿ ಗಣಪತಿ ಹೋಮ, ಪೂರ್ಣಾಹುತಿ, ಸತ್ಯನಾರಾಯಣ ವ್ರತ ಮತ್ತು ಕಥಾಶ್ರವಣ ನಡೆದ ಬಳಿಕ ಗುರು ಪೂಜೆ, ಪಾದುಕ ಪೂಜೆ, ಗುರುಕಾಣಿಕೆಯೊಂದಿಗೆ ಮಹಾ ಮಂಗಳಾರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗಿಸಿದರು.

    The Guru dispels the darkness of ignorance and illuminates the light of wisdom.

  • ಮಹಿಳಾ ಸಬಲೀಕರಣಕ್ಕೆ ಬ್ಯಾಂಕ್‌ಗಳ ಮೂಲಕ ಸಾಲಸೌಲಭ್ಯ

    ಮಹಿಳಾ ಸಬಲೀಕರಣಕ್ಕೆ ಬ್ಯಾಂಕ್‌ಗಳ ಮೂಲಕ ಸಾಲಸೌಲಭ್ಯ

    ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಂಕರ್ ಕೊರವರ್, ಅಭಿಪ್ರಾಯಿಸಿದರು.

    ಅವರು ಇಂದು ಅಂಬೇಡ್ಕರ್ ಭವನದಲ್ಲಿ ಯೂನಿಯನ್ ಬ್ಯಾಂಕ್ ವತಿಯಿಂದ ಏರ್ಪಡಿಸಲಾಗಿದ್ದ ಸ್ವಸಹಾಯ ಸಂಘದ ಮಹಿಳೆಯರಿಗೆ ವಿವಾಹ ನೋಂದಣಿ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಜಿಲ್ಲೆಯ ಎಲ್ಲಾ ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣಕ್ಕಾಗಿ ಸರ್ಕಾರ ಬ್ಯಾಂಕ್‌ಗಳ ಮೂಲಕ ಆರ್ಥಿಕ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಸ್ವ-ಉದ್ಯೋಗ ಸ್ಥಾಪಿಸಿ ಮಹಿಳೆಯರು ಆರ್ಥಿಕ ಸದೃಢರಾಗಬೇಕೆಂದು ಕರೆನೀಡಿದರು.

    ಹೆಣ್ಣುಮಕ್ಕಳು ಆರ್ಥಿಕ ಸುಧಾರಣೆಯಾದರೆ ದೇಶ ಸುಭಿಕ್ಷವಾಗುತ್ತದೆ ಎಂಬುದನ್ನು ಮನಗಂಡ ಸರ್ಕಾರ ಈ ವರ್ಷ ‘ನಾರಿಶಕ್ತಿ’ ಯೋಜನೆಯನ್ನು ಜಾರಿಗೆ ತಂದಿದೆ ಎಂದ ಅವರು ಮಹಿಳೆಯರು ಯಾವುದೇ ಉದ್ಯೋಗ ಕೈಗೊಳ್ಳಬೇಕಾದರೆ ಕೌಶಲ್ಯ ತರಬೇತಿ ಅಗತ್ಯ ಆ ಮೂಲಕ ಮಹಿಳೆಯರನ್ನು ಉದ್ಯೋಗದತ್ತ ಆಸಕ್ತಿ ಮೂಡಿಸಿ ಮುಖ್ಯ ವಾಹಿನಿಗೆ ತರಬೇಕೆಂಬುದು ಯೂನಿಯನ್ ಬ್ಯಾಂಕಿನ ತರಬೇತಿ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳಿದರು.

    ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ಘೋಷಣೆಯೊಂದಿಗೆ ದುಡಿಮೆ ಮಾಡುವುದು ಅತೀ ಮುಖ್ಯ, ‘ಕೂಡಿ ಬಾಳೋಣ ಎಲ್ಲರೂ ಸೇರಿ ದುಡಿಯೋಣ’ ಎಂಬ ಡಾ. ರಾಜ್‌ಕುಮಾರ್ ನಟನೆಯ ಬಂಗಾರದ ಮನುಷ್ಯ ಚಿತ್ರದ ಹಾಡನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಜಿಲ್ಲೆಯಲ್ಲಿ ೧ ಲಕ್ಷ ಕುಟುಂಬಗಳು ಸ್ವ-ಸಹಾಯ ಸಂಘಗಳ ಮೂಲಕ ಕಾರ್ಯಚಟುವಟಿಕೆ ನಡೆಸುತ್ತಿವೆ, ಉಳಿತಾಯ ಮಾಡಿ ತರಬೇತಿ ಪಡೆದು ಹೆಚ್ಚು ಆರ್ಥಿಕ ಸಬಲರಾಗಬೇಕೆಂದು ತಿಳಿಸಿದರು.

    ಪ್ರಸಕ್ತ ವರ್ಷ ೧೦೨೯೬ ಕೋಟಿ ರೂಗಳನ್ನು ಎಲ್ಲಾ ಬ್ಯಾಂಕ್‌ಗಳ ಮೂಲಕ ಸಾಲ ವಿತರಣೆಗೆ ಗುರಿ ಹೊಂದಲಾಗಿದೆ. ಇದರಲ್ಲಿ ಕೃಷಿಗೆ ೭೦ ಕೋಟಿ, ಶಿಕ್ಷಣಕ್ಕೆ ೨೬ ಕೋಟಿ, ಮನೆ ನಿರ್ಮಾಣಕ್ಕೆ ೫೦ ಕೋಟಿ ಸೇರಿದಂತೆ ರೈತರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸಾಲ ನೀಡಲಾಗುವುದೆಂದು ಹೇಳಿದರು.

    ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಬಡವರು ಮತ್ತು ಮಹಿಳೆಯರು ಸ್ವ-ಉದ್ಯೋಗ ಸ್ಥಾಪಿಸಲು ನೆರವಾಗುವಂತೆ ವಾರ್ಷಿಕ ಶೇ.೭ ರ ಬಡ್ಡಿದರದಲ್ಲಿ ಸ್ವ-ಸಹಾಯ ಸಂಘಗಳಿಗೆ ಬ್ಯಾಂಕ್‌ಗಳು ಸಾಲಸೌಲಭ್ಯ ನೀಡುತ್ತಿವೆ ಎಂದು ಮಾಹಿತಿ ನೀಡಿದರು. ಬಡವರ ಆರ್ಥಿಕ ಮಟ್ಟ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಲಾದ್ದು, ಇದರಿಂದ ಬಡತನ ನಿರ್ಮೂಲನೆಯಾಗಬೇಕೆಂದು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

    ಬೀದಿಬದಿ ವ್ಯಾಪಾರಿಗಳು ಯೂನಿಯನ್ ಬ್ಯಾಂಕಿನಿಂದ ಸಾಲ ಪಡೆದು ಆರ್ಥಿಕವಾಗಿ ಪ್ರಗತಿ ಹೊಂದಿದ್ದಾರೆ. ಸಹಾಯಧನದ ಮೂಲಕ ೧೦ ಲಕ್ಷ ರೂಗಳನ್ನು ಸ್ವ-ಸಹಾಯ ಸಂಘಗಳಿಗೆ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ದುಡಿಯುವುದರೊಂದಿಗೆ ಕುಟುಂಬಕ್ಕೆ ನೆರವಾಗಬೇಕೆಂದು ಸಲಹೆ ನೀಡಿದರು. ಬಾಲ್ಯ ವಿವಾಹ ಪದ್ದತಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು, ಸರ್ಕಾರ ನಿಗಧಿಗೊಳಿಸಿರುವ ವಯಸ್ಸನ್ನು ಪರಿಗಣಿಸಿ ವಿವಾಹವಾದರೆ ಮಾತ್ರ ಉತ್ತಮವಾದ ವಿಕಲಚೇತನರಲ್ಲದ ಮಕ್ಕಳನ್ನು ಪಡೆಯಬಹುದಾಗಿದೆ ಎಂದು ಮಹಿಳೆಯರಲ್ಲಿ ಅರಿವು ಮೂಡಿಸಿದರು.

    ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಮಹೇಶ್, ಪ್ರಾಸ್ತಾವಿಕವಾಗಿ ಮಾತನಾಡಿ, ೧೯೭೨ ರಿಂದ ಅಸ್ತಿತ್ವಕ್ಕೆ ಬಂದ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳು ಮಹಿಳೆ ಮತ್ತು ಪುರುಷರ ಗುಂಪು ಸೇರಿ ಚಟುವಟಿಕೆ ಪ್ರಾರಂಭಿಸಿ ಪರಸ್ಪರ ಆರ್ಥಿಕ ನೆರವು ಪಡೆಯಲು ಸಹಕಾರಿಯಾಗಿದೆ ಎಂದು ಹೇಳಿದರು. ಸ್ವ-ಸಹಾಯ ಸಂಘಗಳಲ್ಲಿ ಉಳಿತಾಯ ಮಾಡಿದ ಹಣದಿಂದ ಸಮಾಜದ ನೊಂದವರಿಗೆ ನೆರೆವು ನೀಡಿ ಎಂದ ಅವರು, ಗುಡಿ ಕೈಗಾರಿಕೆಗಳ ಮೂಲಕ ಆರ್ಥಿಕ ಸಹಾಯ ಮಾಡಲು ಸ್ವ-ಸಹಾಯ ಸಂಘಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕ ವಿಶುಕುಮಾರ್, ಯೋಜನಾ ನಿರ್ದೇಶಕರಾದ ನಯನ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಶಾಂತ್, ರಾಜೇಂದ್ರ, ಯೂನಿಯನ್ ಬ್ಯಾಂಕ್ ನಿರ್ದೇಶಕ ಶ್ರೀ ಪ್ರಸಾದ್, ಮಂಜುನಾಥ್, ಲೋಹಿತ್, ಗಿರೀಶ್, ಹರೀಶ್, ಕುಮಾರ್, ಚಂದ್ರಶೇಖರ್, ಕಲಾವತಿ, ಭರತ್ ಮತ್ತಿತರರು ಉಪಸ್ಥಿತರಿದ್ದರು.

    Loan facility through banks for women empowerment

  • ಜನವಿರೋಧಿ ರಾಜ್ಯಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಪ್ರತಿಭಟನೆ

    ಜನವಿರೋಧಿ ರಾಜ್ಯಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ಪ್ರತಿಭಟನೆ

    ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡದೇ ಇರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.

    ಇಂದು ಬೆಳಗ್ಗೆ ಪಂಚಾಯಿತಿ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಉಮೇಶ್ ಶೆಟ್ಟಿ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾದರೂ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಕೆಲವರ ಬಿಪಿಎಲ್ ಪಡಿತರ ಚೀಟಿ ರದ್ದುಮಾಡುವ ಮೂಲಕ ಬಡವರ ಹಕ್ಕುಗಳನ್ನು ಧಮನ ಮಾಡುತ್ತಿದೆ ಎಂದು ಆರೋಪಿಸಿದರು.

    ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರದೇ ಇರುವ ಪರಿಣಾಮ ಬಡಜನರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ನೋಂದಣಿ ಶುಲ್ಕ ಹೆಚ್ಚಳದಿಂದಾಗಿ ಬಡವರು ನಿವೇಶನ, ಮನೆ ಕೊಳ್ಳುವ ಆಸೆಯಿಂದ ವಿಮುಖರಾಗಬೇಕಾಗಿದೆ ಎಂದು ದೂರಿದರು.

    ಗ್ರಾ.ಪಂ ಉಪಾಧ್ಯಕ್ಷೆ ಅಂಬಿಕಾ ಮಾತನಾಡಿ, ಗ್ರಾಮಠಾಣೆ ಜಾಗ ವಿಸ್ತರಣೆ ಮಾಡದ ಪರಿಣಾಮ ನಿವೇಶನಗಳಿಗೆ ಇ-ಸ್ವತ್ತು ಮಾಡಲು ವಿಳಂಭವಾಗುತ್ತಿದ್ದು, ಇದರಿಂದಾಗಿ ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಲು ಕಷ್ಟಸಾಧ್ಯವಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

    ೬೦ ವರ್ಷ ಮೇಲ್ಪಟ್ಟ ವೃದ್ಧರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಹಣವನ್ನು ಅವರ ಖಾತೆಗೆ ನೇರ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ತೊಂದರೆಯಾಗುತ್ತಿದೆ ಎಂದು ದೂರಿದರು.

    ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಪಂಚಾಯಿತಿ ಮಟ್ಟದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಧ್ವನಿ ಎತ್ತಬೇಕೆಂಬ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಶಯದಂತೆ ಇಂದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

    ರಾಜ್ಯಸರ್ಕಾರ ಬಡಜನರ, ದಲಿತರ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಿಂದ, ಬಡಜನರ ಪರ ಎಂದು ಕೇವಲ ಮಾತಿಗೆ ಸೀಮಿತವಾಗಿದ್ದಾರೆಂದು ಆರೋಪಿಸಿದರು.

    ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರರಿಂದ ಇನ್ನೂರು ಜನರ ಸಂಧ್ಯಾ ಸುರಕ್ಷಾ ಯೋಜನೆಯ ಪಟ್ಟಿಯನ್ನು ಪರಿಷ್ಕರಿಸಿ ಎಂಬ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಇಡೀ ರಾಜ್ಯದಲ್ಲಿ ೪೫ ಲಕ್ಷ ವೃದ್ಧರು ಈ ಯೋಜನೆಯಡಿ ಸೌಲಭ್ಯ ಪಡೆಯುತ್ತಿದ್ದು, ಇವರ ಮೇಲೆ ಸರ್ಕಾರ ಕೋಪ ಮಾಡಿಕೊಂಡು ಐದು ಗ್ಯಾರಂಟಿಗಳಿಗೆ ಹಣ ಒದಗಿಸಲು ಈ ನಿರ್ಧಾರ ಕೈಗೊಂಡಿದ್ದಾರೆಂದು ಟೀಕಿಸಿದರು.

    ಅಕ್ರಮ-ಸಕ್ರಮ ಫಾರಂ ನಂ ೫೩, ೫೭ ಅರ್ಜಿಗಳನ್ನು ಶೀಘ್ರ ವಿಲೇವಾರಿಗೊಳಿಸಬೇಕು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಬಡವರ ಆಶ್ರಯ ಮನೆಗಳಿಗೆ ಮಂಜೂರಾತಿ ನೀಡಿ ಅನುದಾನ ಬಿಡುಗಡೆ ಮಾಡಬೇಕು, ಬಡವರ ಬಿಪಿಎಲ್ ಕಾರ್ಡ್‌ಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು, ೭೦ ವರ್ಷ ಮೇಲ್ಪಟ್ಟ ಎಲ್ಲಾ ವರ್ಗದವರಿಗೂ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರುಗಳಾದ ಗಿರೀಶ್, ಮಂಜುನಾಥ್ ಗೌಡ, ಸಂದೀಪ್, ಪದ್ಮ, ಕಮಲಾಕ್ಷಿ, ಸವೀತ, ಗ್ರಾಮಸ್ಥರಾದ ಲಕ್ಷ್ಮಣ್‌ಗೌಡ, ಚಂದ್ರೇಗೌಡ, ಸುರೇಶ್, ಹರೀಶ್, ಲಂಬೋದರ, ಪ್ರಸಾದ್, ಶಿವೇಗೌಡ, ಅಶೋಕ್‌ಕುಮಾರ್, ಪದ್ಮಣ್ ಮುಳ್ಳಯ್ಯ, ಪವನ್, ಹಾಲಪ್ಪ, ರಮೇಶ್, ಎಂ.ವಿ. ಆದೇಶ್, ಪಂಚಾಕ್ಷರಿ, ರಾಜು, ಪ್ರಸಾದ್ ಆಚಾರ್ಯ, ಜಯಪ್ಪ, ರಾಜಶೇಖರ್, ಜಗದೀಶ್, ಧರ್ಮೇಗೌಡ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

    BJP protests against anti-people state government’s actions

  • ವ್ಯಾಪಾರಸ್ಥರು ನಗರಸಭೆ ನಿಬಂಧನೆಗಳ ಪಾಲಿಸಬೇಕು

    ವ್ಯಾಪಾರಸ್ಥರು ನಗರಸಭೆ ನಿಬಂಧನೆಗಳ ಪಾಲಿಸಬೇಕು

    ಚಿಕ್ಕಮಗಳೂರು:  ಜನಸಂಖ್ಯೆಗೆ ಸಂತೆ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ಕಾರ ಮತ್ತು ನಗರಸಭೆ ಮಾಡಬೇಕು, ಇದರಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ತಿಳಿಸಿದರು.

    ಅವರು ಇಂದು ನಗರದ ಸಂತೆ ಮಾರುಕಟ್ಟೆಗೆ ನಗರಸಭಾಧ್ಯಕ್ಷೆ ಶೀಲಾದಿನೇಶ್ ಹಾಗೂ ಸದಸ್ಯರೊಂದಿಗೆ ಭೇಟಿನೀಡಿ ಸ್ವಚ್ಚತೆ ಬಗ್ಗೆ ಮತ್ತು ಸಾರ್ವಜನಿಕರು ಓಡಾಡುವ ದಾರಿಯಲ್ಲಿ ತರಕಾರಿಗಳನ್ನು ಇಡದೇ ಕಟ್ಟೆಮೇಲೆ ಇಟ್ಟು ವ್ಯಾಪಾರ ಮಾಡಬೇಕೆಂದು ಸೂಚನೆ ನೀಡಿದರು.

    ವ್ಯಾಪಾರಸ್ಥರು ಜನ ತಿರುಗಾಡುವ ದಾರಿಯಲ್ಲಿ ತರಕಾರಿ, ಹಣ್ಣು, ವೀಳ್ಯಾದೆಲೆ, ಹೂವು ಸೇರಿದಂತೆ ಎಲ್ಲವುಗಳನ್ನು ಇಡುತ್ತಿರುವುದರಿಂದ ಸ್ವಚ್ಚತೆಗೆ ಧಕ್ಕೆಯಾಗಿದೆ. ಕಟ್ಟೆ ಮೇಲೆ ಈ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವಂತೆ ತಿಳಿಸಿದರು.

    ಸಂತೆಯ ಒಳಭಾಗದಲ್ಲಿ ವಾಹನಗಳ ಪಾರ್ಕಿಂಗ್, ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಮಹಿಳೆಯರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇದರಿಂದಾಗಿ ಜೇಬುಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ನಗರಸಭೆ ಕಡಿವಾಣ ಹಾಕಬೇಕೆಂದು ಕಡಕ್ ಸೂಚನೆ ನೀಡಿದರು.

    ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಸಂತೆಯಲ್ಲಿ ಶುಚಿತ್ವ ಕಾಪಾಡುವ ಜೊತೆಗೆ ನಗರಸಭೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವ್ಯಾಪಾರಸ್ಥರಿಗೆ ಕಡಕ್ ಸೂಚನೆ ನೀಡಿದ್ದು, ಪಾಲಿಸದ ವ್ಯಾಪಾರಸ್ಥರ ವಿರುದ್ಧ ಮುಂದಿನ ವಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ಸದಸ್ಯ ಎ.ಸಿ. ಕುಮಾರ್‌ಗೌಡ ಮಾತನಾಡಿ, ನಗರದಲ್ಲಿ ಪ್ರತೀ ಬುಧವಾರ ಸಂತೆ ನಡೆಯುತ್ತಿದ್ದು, ನಗರಸಭೆಯಿಂದ ವ್ಯಾಪಾರದ ಕಟ್ಟೆ ವ್ಯವಸ್ಥೆ, ಶೌಚಾಲಯ ನಿರ್ಮಾಣ ಮಾಡಿದ್ದು, ದಾರಿಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.

    ಮುಂದಿನ ವಾರವೂ ಇದೇ ರೀತಿ ಆಗಿದ್ದರೆ ವ್ಯಾಪಾರಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ದಂಡ ವಿಧಿಸುವುದಾಗಿ ಎಚ್ಚರಿಸಿದ ಅವರು, ಸಧ್ಯದಲ್ಲೇ ಸಂತೆಯ ಪ್ರಾಂಗಣದಲ್ಲಿ ಶುದ್ಧಗಂಗಾ ನೀರಿನ ಘಟಕವನ್ನು ಸ್ಥಾಪಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್, ಆರೋಗ್ಯ ನಿರೀಕ್ಷರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

    Business owners must follow municipal regulations

  • ಕಾಂಗ್ರೆಸ್ ಸರ್ಕಾರ ಬಡವರ ಜೀವನದ ಜೊತೆ ಚೆಲ್ಲಾಟ

    ಕಾಂಗ್ರೆಸ್ ಸರ್ಕಾರ ಬಡವರ ಜೀವನದ ಜೊತೆ ಚೆಲ್ಲಾಟ

    ಚಿಕ್ಕಮಗಳೂರು: ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಕಳೆದ ಸರ್ಕಾರದ ಅವಧಿಯಲ್ಲಿ ಮಂಜೂರಾದ ಮನೆಗಳ ನಿರ್ಮಾಣ ಕಾಮಗಾರಿಯನ್ನು ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಕಳೆದರೂ ಪೂರ್ಣಗೊಳಿಸದಿರುವ ಬಗ್ಗೆ ಫಲಾನುಭವಿಗಳು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಲ್ಲಿ ಅಳಲು ತೋಡಿಕೊಂಡರು.

    ಬುಧವಾರ ಬೆಳಗ್ಗೆ ನಗರದ ೧೧ ಮತ್ತು ೧೩ ರ ಶಂಕರಪುರ ಹಾಗೂ ಪಂಪಾನಗರಕ್ಕೆ ಭೇಟಿ ನೀಡಿ ಸ್ಲಂಬೋರ್ಡ್‌ನಿಂದ ಮಂಜೂರಾಗಿದ್ದ ಮನೆಗಳ ಕಾಮಗಾರಿ ಪರಿಶೀಸಿದ ವೇಳೆ ಫಲಾನುಭವಿಗಳಾದ ಆರ್‍ಮುಗಂ ಮತ್ತು ಶಾಂತಮ್ಮ ಎಂಬುವವರು ಮಾತನಾಡಿ ಗುಡಿಸಲುಗಳಲ್ಲಿ ವಾಸವಿದ್ದ ನಮಗೆ ಮನೆ ನಿರ್ಮಿಸಿಕೊಡುವುದಾಗಿ ಹೇಳಿ ೧೦ ಸಾವಿರ ರೂ. ಹಣ ಕಟ್ಟಿಸಿಕೊಳ್ಳಲಾಗಿತ್ತು. ಆದರೆ ೨ ವರ್ಷದಿಂದ ಕಾಮಗಾರಿ ಸ್ಥಗಿತಗೊಂಡು ಬೀದಿಗೆ ಬಿದ್ದಿದ್ದೇವೆ ಎಂದು ಕಣ್ಣೀರಿಟ್ಟರು.

    ಈ ವೇಳೆ ಮಾತನಾಡಿದ ಸಿ.ಟಿ.ರವಿ, ಬಿಜೆಪಿ ಸರ್ಕಾರ ಇದ್ದಾಗ ಬಡವರಿಗಾಗಿ ಸ್ಲಂ ಬೋರ್ಡ್‌ನಿಂದ ೨೫ ಮನೆಗಳನ್ನು ಮಂಜೂರು ಮಾಡಿಸಿದ್ದೆವು. ಅಂದು ಫಲಾನುಭವಿಗಳಿಂದ ೧೦ ಸಾವಿರ ರೂ. ಹಣ ಕಟ್ಟಿಸಿಕೊಳ್ಳಲಾಗಿತ್ತು. ಉಳಿದದ್ದನ್ನು ಸರ್ಕಾರ ಭರಿಸಿ ಮನೆ ಕಟ್ಟಿಸಿಕೊಡಲು ಟೆಂಡರ್ ಆಗಿ ಕೆಲವು ಮನೆಗಳನ್ನು ನಿರ್ಮಿಸಲಾಯಿತು. ಉಳಿದವಕ್ಕೆ ಈಗಿನ ಸರ್ಕಾರ ಹಣ ಕೊಡುತ್ತಿಲ್ಲ ಎನ್ನುವ ಕಾರಣಕ್ಕೆ ಪೂರ್ಣಗೊಂಡಿಲ್ಲ ಎಂದರು.

    ಈ ನಡುವೆ ಸಿದ್ದರಾಮಯ್ಯ ಅವರ ಸರ್ಕಾರ ಸುತ್ತೋಲೆ ಹೊರಡಿಸಿ ಫಲಾನುಭವಿಗಳು ೧೦ ಸಾವಿರದ ಬದಲಿಗೆ ೧ ಲಕ್ಷ ರೂ. ಕಟ್ಟಬೇಕು ಎಂದು ಸೂಚನೆ ನೀಡಿದೆ. ಇದರಿಂದ ಮುಂಗಡ ಕಟ್ಟಲಾಗದ ಫಲಾನುಭವಿಗಳು ಬೀದಿಗೆ ಬಂದಿದ್ದಾರೆ. ಕೆಲವರು ಗುಡಿಸಲಿನಲ್ಲಿ, ಮರದಡಿಯಲ್ಲಿ, ಶಾಲೆಯಲ್ಲಿ ಕೆಲವರು ವಾಸಿಸುತ್ತಿದ್ದಾರೆ. ಮನೆ ಕೆಡವಿ ಒಂದೂವರೆ ವರ್ಷವಾದರೂ ಇಂದಿಗೂ ಮನೆ ಪೂರ್ಣಗೊಂಡಿಲ್ಲ. ಜನರು ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ದೂರಿದರು.

    ಹಿಂದೆ ನಾವು ಗುಂಪು ಮನೆ ನಿರ್ಮಾಣಕ್ಕೆ ಉಪ್ಪಳ್ಳಿ ಬಳಿ ಮಂಜೂರಾದ ಯೋಜನೆಯೂ ಅರ್ಧಂಬರ್ಧವಾಗಿದೆ. ಡೋಂಗ್ರಿಗರೇಶಿಯಾ ಜನಾಂಗಕ್ಕೆಂದು ೭೦ ಮನೆಗಳನ್ನು ಅಲೆಮಾರಿ ಕೋಶದಿಂದ ಮಂಜೂರು ಮಾಡಿಸಿದ್ದೆವು. ಅವು ಇಂದಿನ ವರೆಗೆ ಪೂರ್ಣಗೊಳ್ಳದೆ ಅವರೂ ಬೀದಿಗೆ ಬಿದ್ದಿದ್ದಾರೆ ಎಂದರು.

    ಜಿಲ್ಲಾಧಿಕಾರಿಗಳು, ಎಂಡಿ ಗಮನಕ್ಕೂ ತಂದಿದ್ದೇವೆ. ಅನುದಾನ ಇಲ್ಲ ಎನ್ನುತ್ತಾರೆ, ಗುತ್ತಿಗೆದಾರರು ಪರ್ಸೆಂಟೇಜ್ ಜಾಸ್ತಿ ಕೇಳುತ್ತಾರೆ ಎನ್ನುತ್ತಾರೆ. ಜನ ಬೀದಿಗೆ ಬಿದ್ದಿದ್ದಾರೆ. ಅವರ ಗೋಳು ಯಾರಿಗೆ ಹೇಳಬೇಕು. ಈಗ ಜನರನ್ನು ಕಟ್ಟಿಕೊಂಡು ಹೋರಾಟ ಮಾಡುವುದೊಂದೇ ದಾರಿ ಎಂದರು.

    ಬಡವರ ಮನೆ ಕಟ್ಟುವುದರಲ್ಲೂ ಲಂಚ ಕೇಳಿದರೆ ಅವರ ಶಾಪ ತಟ್ಟದೇ ಇರುತ್ತದೆಯಾ, ಎಷ್ಟೆಂದು ಸಹಿಸುತ್ತಾರೆ. ಮನೆ ಕಟ್ಟಿಸಿಕೊಡುವ ಜವಾಬ್ದಾರಿ ಯಾರದ್ದು ಎಂದು ಪ್ರಶ್ನಿಸಿದರು.

    ಸ್ಥಳೀಯ ನಗರಸಭೆ ಸದಸ್ಯ ಗೋಪಿ ಮಾತನಾಡಿ, ೧ ವರ್ಷ ೮ ತಿಂಗಳ ಹಿಂದೆ ಹೊಸ ಮನೆ ಕಟ್ಟಿಸಿಕೊಡುತ್ತೇವೆ ಎಂದು ಹೇಳಿ ಹೆಂಚಿನ ಮನೆ, ಶೀಟಿನ ಮನೆಯಲ್ಲಿದ್ದ ಬಡವರನ್ನು ತೆರವು ಮಾಡಿದ್ದರು. ಆದರೆ ಇಂದಿಗೂ ಅವರೆಲ್ಲರೂ ಬೀದಿಗೆ ಬಂದಿದ್ದಾರೆ. ಗುತ್ತಿಗೆದಾರರನ್ನು ಕೇಳಿದರೆ ನಮಗೆ ಬಿಲ್ ಆಗಿಲ್ಲ ನಾವೆಲ್ಲಿಂದ ಹಣ ತರಬೇಕು. ನಾವು ವಿಷ ಕುಡಿಯಬೇಕಾಗುತ್ತದೆ ಎನ್ನುತ್ತಾರೆ. ಬಡವರಿಗೆ ನಾವು ಏನು ಉತ್ತರ ಹೇಳಬೇಕು ಎಂದು ಪ್ರಶ್ನಿಸಿದರು.

    ಸ್ಥಳೀಯ ನಿವಾಸಿ ರಾಜೇಶ್ ಮಾತನಾಡಿ, ಸಿ.ಟಿ.ರವಿ ಶಾಸಕರಾಗಿದ್ದಾಗ ಎಂಟತ್ತು ತಿಂಗಳಲ್ಲಿ ೫೦ ಮನೆಗಳ ನಿರ್ಮಾಣ ಪೂರ್ಣಗೊಂಡಿತ್ತು. ಪಕ್ಕದ ವಾರ್ಡ್‌ನವರು ಇದೇ ನಿರೀಕ್ಷೆಯಿಂದ ೩೦ ರಿಂದ ೩೫ ಮಂದಿ ಮುಂಗಡ ಕಟ್ಟಿದರು ಆ ವೇಳೆಗೆ ಚುನಾವಣೆ ನಡೆದು ಹೊಸ ಸರ್ಕಾರ ಬಂತು. ನಂತರ ಮನೆಗಳ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಗುತ್ತಿಗೆದಾರರನ್ನು ಕೇಳಿದರೆ ಈಗಿನ ಸರ್ಕಾರ ಪರ್ಸೆಂಟೇಜ್ ಹೆಚ್ಚು ಕೇಳುತ್ತಾರೆ. ಎಲ್ಲಿಂದ ತರುವುದು ಎನ್ನುತ್ತಾರೆ ಎಂದು ದೂರಿದರು.

    ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಎಸ್‌ಡಿಎಂ ಮಂಜುನಾಥ್, ಶಶಿಧರ್, ಜಿ.ಶಂಕರ್, ಜಗಧೀಶ್, ಕುಮಾರ್, ಮುನಿ, ರವಿ ಇತರರು ಇದ್ದರು.

    Congress government is playing with the lives of the poor