Category: ಚಿಕ್ಕಮಗಳೂರು

  • ಯುವಜನತೆ ರಾಷ್ಟ್ರಕವಿ ಕುವೆಂಪು ಆಶಯದಂತೆ ವಿಶ್ವಮಾನವರಾಗಬೇಕು

    ಯುವಜನತೆ ರಾಷ್ಟ್ರಕವಿ ಕುವೆಂಪು ಆಶಯದಂತೆ ವಿಶ್ವಮಾನವರಾಗಬೇಕು

    ಚಿಕ್ಕಮಗಳೂರು:  ಇಂದಿನ ಯುವ ಜನತೆ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಬೇಕು ಎಂದು ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೆಗೌಡ ಸಲಹೆ ಮಾಡಿದರು.

    ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಥಮ ವ?ದ ವಿದ್ಯಾರ್ಥಿಗಳು ಅಂತಿಮ ವ?ದ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಜಗತ್ತಿನಲ್ಲಿಂದು ಮಾನವೀಯ ಮೌಲ್ಯಗಳ ಕೊರತೆಯಿದೆ, ಅದರಿಂದಾಗಿ ದೌರ್ಜನ್ಯ, ಶೋ?ಣೆ, ಅತ್ಯಾಚಾರ, ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ, ಎಲ್ಲೆಡೆ ಅಭದ್ರತೆ, ಅಶಾಂತಿ ಕಾಡುತ್ತಿದೆ ಎಂದು ವಿ?ದಿಸಿದ ಅವರು ಈ ಪರಿಸ್ಥಿತಿ ಸರಿ ಹೋಗಬೇಕಾದರೆ ಯುವಜನತೆ ಭಕ್ತಿ ಭಂಡಾರಿ ಬಸವಣ್ಣನವರ ಸಪ್ತ ಸೂತ್ರಗಳನ್ನು ಮೈಗೂಡಿಸಿಕೊಳ್ಳಬೇಕು, ರಾ?ಕವಿ ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಲು ಪ್ರಯತ್ನಿಸಬೇಕು ಎಂದು ಕಿವಿ ಮಾತು ಹೇಳಿದರು.

    ಯುವಜನತೆ ಪ್ರತಿದಿನ ಪತ್ರಿಕೆಗಳನ್ನು ಓದಬೇಕು,, ಆ ಮೂಲಕ ಜಗತ್ತಿನ ಆಗು ಹೋಗುಗಳನ್ನು ತಿಳಿಯಬೇಕು, ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು, ಆರೋಗ್ಯ ಮತ್ತು ವಿದ್ಯೆ ಒಂದೇ ನಾಣ್ಯದ ಎರಡು ಮುಖಗಳಾಗಿವೆ, ಹಾಗಾಗಿ ವಿದ್ಯಾರ್ಥಿಗಳು ಆರೋಗ್ಯವಂತರು ಮತ್ತು ವಿದ್ಯಾವಂತರೂ ಆಗಬೇಕು ಎಂದರು.

    ನಾವು ಸಮಾಜಮುಖಿಗಳಾದರೆ, ಸಮಾಜದ ಸೇವೆ ಮಾಡಿದರೆ, ಜನಮಾನಸದಲ್ಲಿ ಚಿರಸ್ಥಾಯಿಗಳಾಗಬಹುದು, ಸಮಾಜ ಸೇವೆಯಿಂದ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ, ಹಾಗಾಗಿ ಯುವಜನತೆ ಸಮಾಜಮುಖಿಗಳಾಗಬೇಕು ಎಂದು ಹೇಳಿದರು.

    ಡಾ.ವ? ಅಭಿ?ಕ್ ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರದ ಜೀವನ, ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು, ಉನ್ನತವಾದ ಕನಸುಗಳನ್ನು ಕಾಣಬೇಕು, ಅವುಗಳ ನನಸಿಗಾಗಿ ಶ್ರಮಿಸಬೇಕು, ಶಿಕ್ಷಣವಂತರು ದೇಶಕ್ಕಾಗಿ, ಸಮಾಜಕ್ಕಾಗಿ ದುಡಿಯಬೇಕು ಎಂದು ತಿಳಿಸಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ.ಎನ್. ಲಕ್ಷ್ಮಿಕಾಂತ್ ೨೦೦೮ರಲ್ಲಿ ಕಾಲೇಜಿನಲ್ಲಿ ಆರಂಭಗೊಂಡ ಸ್ನಾತಕೋತ್ತರ ಕೇಂದ್ರ ಇದುವರೆಗೆ ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ ಎಂದು ತಿಳಿಸಿದರು.

    ನಾವು ಗಳಿಸಿದ ಪದವಿಗಳು, ನಾವು ಪಡೆದ ವಿದ್ಯೆ ಸಾರ್ಥಕವಾಗಬೇಕಾದರೆ ನಾವು ಸಮಾಜಮುಖಿಗಳಾಗಬೇಕು, ವಿದ್ಯಾರ್ಥಿಗಳು ತಾವು ಕಲಿತ ವಿದ್ಯೆಯನ್ನು ಇತರರಿಗೆ ಹಂಚಬೇಕು, ಉತ್ತಮ ನಾಗರೀಕರಾಗಬೇಕು ಎಂದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯೆ ಡಾ. ಆರ್.ಎ. ಪು? ಭಾರತಿ ವಿದ್ಯಾರ್ಥಿಗಳು ದುರಭ್ಯಾಸಗಳಿಂದ ದೂರವಿರಬೇಕು, ಹೆತ್ತವರು, ಗುರುಗಳು ಮತ್ತು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಬೇಕು, ಪಡೆದ ಪದವಿಯನ್ನು, ವಿದ್ಯೆಯನ್ನು ಸಮಾಜಕ್ಕಾಗಿ ಬಳಸಬೇಕು ಎಂದು ಕಿವಿ ಮಾತು ಹೇಳಿದರು.

    ಅಂತಿಮ ವ?ದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ನೆನಪಿನ ಕಾಣಿಕೆ ನೀಡಲಾಯಿತು, ಅಂತಿಮ ವ?ದ ವಿದ್ಯಾರ್ಥಿಗಳು ತಮ್ಮ ಕಲಿಕೆ ಅವಧಿಯ ಅನುಭವಗಳನ್ನು ವಿವರಿಸಿದರು, ಆಶಾಕಿರಣ ಅಂದ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ. ಕೃ?ಗೌಡ ಮತ್ತು ಅವರ ಪುತ್ರಿ ಡಾ. ವ? ಅಭಿ?ಕ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

    ಸಹ ಪ್ರಾಧ್ಯಾಪಕರಾದ ಪ್ರೊ. ಎಂ. ತ್ರಿಪುರ ಮಹೇಶ್ವರ, ಡಾ. ಎಸ್. ಮಹೇಶ್, ಉಪನ್ಯಾಸಕರಾದ ಕೆ.ಸಿ. ಆಶಾ, ದೇವಾನಂದ್, ದಿನೇಶ್, ಬಸವರಾಜ್, ಲೋಕೇಶ್, ರಾಘವೇಂದ್ರ, ವಿದ್ಯಾರ್ಥಿಗಳಾದ ಎಂ.ಕೆ. ಭವಾನಿ, ಅಸ್ಮಬಾನು ಉಪಸ್ಥಿತರಿದ್ದರು.

    The youth should become universal human beings as the national poet Kuvempu wished.

  • ಯುವ ಜನಾಂಗ ಮಾದಕ ವಸ್ತುಗಳ ಚಟಕ್ಕೆ ದಾಸರಾಗಿ ಬಾರದು

    ಯುವ ಜನಾಂಗ ಮಾದಕ ವಸ್ತುಗಳ ಚಟಕ್ಕೆ ದಾಸರಾಗಿ ಬಾರದು

    ಚಿಕ್ಕಮಗಳೂರು: ಯುವ ಜನಾಂಗ ಮಾದಕ ವಸ್ತುಗಳ ಚಟಕ್ಕೆ ದಾಸರಾಗಿ ಆರೋಗ್ಯ, ಗೌರವ ಹಾಳು ಮಾಡಿಕೊಳ್ಳುವುದರಿಂದ ನಿಜವಾಗಿ ನೋವು, ಹಿಂಸೆ ಅನುಭವಿಸುವುದು ಪೋಷಕರು ಮಾತ್ರ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ಜೆ.ಎಸ್.ತಿಪ್ಪೇಸ್ವಾಮಿ ತಿಳಿಸಿದರು.

    ಅವರು ಮಂಗಳವಾರ ನಗರದ ಆದಿಚುಂಚನಗಿರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರೇರಣಾ ಕಾರ್ಯಕ್ರಮದಲ್ಲಿ ಸೈಬರ್ ಅಪರಾಧಗಳು ಮತ್ತು ಮಾದಕ ವಸ್ತುಗಳಿಂದುಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಮಾತಾಡಿ ಧೂಮಪಾನ, ಮದ್ಯಪಾನದ ಜೊತೆಗೆ ವೈಟ್ನರ್, ಥಿನ್ನರ್, ಸಲೂಷನ್, ಅಯೋಡಿಕ್ಸ್ ಇವುಗಳೆಲ್ಲವೂ ಮಾರುಕಟ್ಟೆಯಲ್ಲಿ ಸುಲಭಕ್ಕೆ ಸಿಗುವ ಮಾದಕ ಪದಾರ್ಥಗಳು. ನಂತರದ್ದು ಗಾಂಜಾ, ಜೊತೆಗೆ ಸಿಂಥಟಿಕ್ ಡ್ರಗ್‌ಗಳಾದ ಅಫೀಮು, ಹೆರಾಯಿನ್, ಕೊಕೇನ್ ಹಾಗೆಯೇ ಎಂಡಿಎಂಎ ಎನ್ನುವ ಮಾತ್ರೆ ರೂಪದ ವಸ್ತು, ಹಾಗೂ ಚಾಕೊಲೇಟ್ ಮಾದರಿಯಲ್ಲೂ ಸಿಗುತ್ತಿದೆ ಎಂದು ವಿವರಿಸಿದರು.

    ಈ ಪೈಕಿ ಸುಲಭವಾಗಿ ಸಿಗುವ ಥಿನ್ನರ್ ಮತ್ತು ಸಲೂಷನ್ ಚಟಕ್ಕೆ ಹಲವಾರು ಯುವಕರು ಬಲಿಯಾಗುತ್ತಿದ್ದಾರೆ. ಅದನ್ನು ಮಾರಾಟ ಮಾಡುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲದಿರುವುದು ಹಾಗೂ ಅದನ್ನು ಸೇವಿಸಿದವರನ್ನು ಪರೀಕ್ಷೆಗೊಳಪಡಿಸಿದರೆ ನೆಗಟೀವ್ ಫಲಿತಾಂಶ ಬರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲು ತಾಂತ್ರಿಕ ಅಂಶಗಳು ಅಡ್ಡಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವುಗಳಿಂದಾಗುವ ಅಪಾಯವನ್ನು ಅರಿತು ಯುವಕರು ಮತ್ತು ಪೋಷಕರೇ ನಿಯಂತ್ರಿಸುವ ಕಡೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.

    ನಮ್ಮ ದೇಶದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಸುಮಾರು ೭.೫೦ ಕೋಟಿಯಷ್ಟಿದೆ ಇದು ನಮ್ಮ ರಾಜ್ಯದ ಒಟ್ಟು ಜನಸಂಖ್ಯೆಯಷ್ಟಾಗುತ್ತದೆ. ಸಂಶೋಧನಾ ವರದಿಗಳು ಈ ಮಾಹಿತಿಯನ್ನು ಬಹಿರಂಗಪಡಿಸಿವೆ. ಮಾದಕ ವಸ್ತು ಸೇವನೆಯಿಂದ ಬಹು ಅಂಗಾಂಗ ವೈಫಲ್ಯಗೊಂಡು ಪ್ರಾಣ ಕಳೆದುಕೊಳ್ಳುವವರು ಸಾಕಷ್ಟಿದ್ದಾರೆ. ಆದರೆ ಪ್ರತಿದಿನ ಹತ್ತುಮಂದಿ ಮಾದಕ ವ್ಯಸನಿಗಳು ನಮ್ಮ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆ ಹತ್ತು ಜನರ ಪೈಕಿ ೧೮ ವರ್ಷದೊಳಗಿನ ಇಬ್ಬರು ಇರುತ್ತಾರೆ. ಇದು ಆತಂಕಕಾರಿ ಎಂದು ಹೇಳಿದರು.

    ಇದಲ್ಲದೆ ನಮ್ಮ ದೇಶದ ೨೭೨ ಜಿಲ್ಲೆಗಳನ್ನು ಅತೀ ಹೆಚ್ಚು ಮಾದಕ ವ್ಯಸನಿಗಳನ್ನೊಳಗೊಂಡ ಜಿಲ್ಲೆ ಎಂದು ಘೋಷಣೆ ಆಗಿದೆ. ಕರ್ನಾಟಕದಲ್ಲೂ ಇಂತಹ ೭ ಜಿಲ್ಲೆಗಳನ್ನು ಗುರುತಿಸಲಾಗಿದೆ. ಇದರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಅಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರೀಕರು ಯುದ್ಧೋಪಾದಿಯಲ್ಲಿ ಹೋರಾಡಬೇಕಿದೆ ಎಂದು ಕರೆ ನೀಡಿದರು.

    ಇನ್ನು ಅಂತರ್ಜಾಲವನ್ನು ಬಳಸಿಕೊಂಡು ಮೋಸ, ವಂಚನೆ ಮಾಡುವ ಸೈಬರ್ ಅಪರಾಧಗಳು ಈಗ ಹೆಚ್ಚುತ್ತಿವೆ. ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುವುದು, ಎಟಿಎಂಗಳಲ್ಲಿ ವಂಚಿಸುವುದು ಇನ್ನಿತರೆ ಆರ್ಥಿಕ ಅಪರಾಧಗಳು ಒಂದೆಡೆಯಾದರೆ ಇನ್ಸ್ಟ್ರಾಗ್ರಾಂ, ಫೇಸ್ ಬುಕ್ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ-ಮಾಹಿತಿಗಳನ್ನು ಕದ್ದು ಅದನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಹಣ ದೋಚುವ ಪ್ರಸಂಗಗಳು ಹೆಚ್ಚುತ್ತಿವೆ. ಸಾಕಷ್ಟು ಯುವತಿಯರು ಮತ್ತು ಮಹಿಳೆಯರು ಇದರಿಂದ ಮಾನ, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಲವರು ಭಯದಿಂದ ದೊಡ್ಡ ಮಟ್ಟದಲ್ಲಿ ಹಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಪರಿಚಿತರೊಂದಿಗೆ ಫೋಟೋ, ವೀಡಿಯೋಗಳನ್ನು ಹಂಚಿಕೊಳ್ಳುವಾಗ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ಮಾಡಿದರು.

    ಮಾದಕ ವಸ್ತು ಸೇವನೆ, ಮಾರಾಟ ಪ್ರಕರಣಗಳು ಕಂಡುಬಂದಲ್ಲಿ ಹಾಗೂ ಸೈಬರ್ ಅಪರಾಧಕ್ಕೆ ತುತ್ತಾದಲ್ಲಿ ಕೂಡಲೇ ನಾರ್ಕೊಟಿಕ್ ಕಂಟ್ರೋಲ್ ಬ್ಯುರೋದ ದೂರವಾಣಿ ಟೋಲ್ ಫ್ರೀ ಸಂಖ್ಯೆ ೧೯೦೮ ಹಾಗೂ ಡ್ರಗ್ ಫ್ರೀ ಕರ್ನಾಟಕ ಮೊಬೈಲ್ ಆಪ್‌ನಲ್ಲಿ ಯಾರೇ ಮಾಹಿತಿ ನೀಡಿದರೂ ಕೂಡಲೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಈ ವೇಳೆ ಎಐಟಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಸಚಿನ್ ಕೆ.ಎಂ., ಉಪ ಪ್ರಾಂಶುಪಾಲರಾದ ಸಿದ್ದಣ್ಣ, ಹಿರಿಯ ಉಪನ್ಯಾಸಕಿ ಮಧುರ ವಿ.ಕೆ. ಉಪಸ್ಥಿತರಿದ್ದರು ಸಹಾಯಕ ಬೋಧಕ ಎನ್. ಸಾಯಿ ನಂದನ್ ಅವರು ಸ್ವಾಗತಿಸಿ ನಿರೂಪಿಸಿದರು.

    The youth should not become slaves to drug addiction.

  • ನಗರದ ನಾಗರೀಕರಿಗೆ ಮೂಲಭೂತ ಸೌಕರ್ಯ ಆದ್ಯತೆ ಮೇಲೆ ಒದಗಿಸಬೇಕು

    ನಗರದ ನಾಗರೀಕರಿಗೆ ಮೂಲಭೂತ ಸೌಕರ್ಯ ಆದ್ಯತೆ ಮೇಲೆ ಒದಗಿಸಬೇಕು

    ಚಿಕ್ಕಮಗಳೂರು: ನಗರಸಭೆ ಕುಡಿಯುವ ನೀರು, ಸ್ವಚ್ಚತೆ, ರಸ್ತೆ, ಚರಂಡಿ, ಬೀದಿದೀಪ ಮುಂತಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಮುಖ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ತಿಳಿಸಿದರು.

    ಅವರು ಇಂದು ಜಿಲ್ಲಾ ಆಟದ ಮೈದಾನದ ಸುತ್ತ ಹಾಗೂ ನ್ಯಾಯಾಲಯ, ಎಲ್‌ಐಸಿ ರಸ್ತೆಯಲ್ಲಿ ನಗರಸಭೆಯಿಂದ ಏರ್ಪಡಿಸಲಾಗಿದ್ದ ಸ್ವಚ್ಚತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅನುದಾನದ ಕೊರತೆ ಮುಂದಿಟ್ಟುಕೊಂಡು ಜನರ ಅನಿಸಿಕೆಗಳಿಗೆ ತೊಂದರೆಯಾಗಬಾರದು, ನಗರಸಭೆ ಸಿಬ್ಬಂದಿಗಳನ್ನು ಬಳಸಿಕೊಂಡು ಈ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದು ಸಲಹೆ ನೀಡಿದರು.

    ಸ್ವಚ್ಚತೆ ಮುಕ್ತ ನಗರ, ಸ್ವಚ್ಚತೆಗೆ ಆದ್ಯತೆ ಈ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸಿ ನಗರದಲ್ಲಿ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವು ಮಾಡದಿದ್ದರೆ ೫ ಸಾವಿರ ರೂ ದಂಡ ವಿಧಿಸುವುದಾಗಿ ಸಂಬಂಧಪಟ್ಟ ಮಾಲಿಕರಿಗೆ ಸೂಚನಾ ಪತ್ರ ನೀಡಿ ಎಂದು ಸಲಹೆ ನೀಡಿದರು.

    ನಗರದಲ್ಲಿ ಜನಸಂಖ್ಯೆ ಹೆಚ್ಚಳದ ಜೊತೆಗೆ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಇದರಿಂದ ಪಾರ್ಕಿಂಗ್ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಿ ಜೊತೆಗೆ ಅಂಗಡಿ ಮಾಲಿಕರು ಫುಟ್‌ಪಾತ್ ಮೇಲೆ ವಸ್ತುಗಳನ್ನು ಇಟ್ಟು ಜನರ ಓಡಾಟಕ್ಕೆ ತೊಂದರೆಯಾಗಿದ್ದು, ಈ ಕುರಿತು ಕ್ರಮ ಜರುಗಿಸಬೇಕೆಂದು ಅಧ್ಯಕ್ಷರಿಗೆ ಸೂಚಿಸಿದರು.

    ಸಂತೆ ಮಾರ್ಕೆಟ್‌ನಲ್ಲಿ ಜನರ ಓಡಾಟಕ್ಕೆ ತೊಂದರೆಯಾಗುವಂತೆ ಕಟ್ಟೆಯ ಮುಂಭಾಗದಲ್ಲಿ ತರಕಾರಿ ಇಡುತ್ತಿದ್ದಾರೆ. ಇದಕ್ಕೆ ನಗರಸಭೆ ಕಡಿವಾಣ ಹಾಕಬೇಕು, ಸ್ವಚ್ಚತೆಗೆ ಆದ್ಯತೆ ನೀಡಬೇಕು. ಈ ಎಲ್ಲಾ ಕಾರ್ಯಗಳು ಮುಂದಿನ ೯ ತಿಂಗಳ ಅಧಿಕಾರವಧಿಯಲ್ಲಿ ನಿರಂತರವಾಗಿ ಸಾಗಬೇಕು ಎಂದು ಎಚ್ಚರಿಸಿದರು.

    ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ತಾವೂ ಸೇರಿದಂತೆ ಶಾಸಕ ಹೆಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹಾಗೂ ನಗರಸಭೆ ಸಿಬ್ಬಂದಿಯೊಂದಿಗೆ ನಗರ ಪ್ರದಕ್ಷಣೆ ಕೈಗೊಳ್ಳುತ್ತೇವೆ. ಇದನ್ನು ಸಾರ್ವಜನಿಕವಾಗಿ ತೋರಿಸುವ ಮೂಲಕ ಲಂಚಮುಕ್ತ ನಗರಸಭೆಯನ್ನಾಗಿಸಲು ಸಂಕಲ್ಪ ಮಾಡಬೇಕೆಂದು ಹೇಳಿದರು.

    ಪೌರಕಾರ್ಮಿಕರ ಹಲವು ಬೇಡಿಕೆಗಳ ಬಗ್ಗೆ ಶಾಸಕರ ನೇತೃತ್ವದಲ್ಲಿ ನಿಯೋಗ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಗೆಹರಿಸುವ ಜೊತೆಗೆ ನಗರಸಭೆಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

    ನಗರಸಭೆ ನೂತನ ಅಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದ ಅವರು, ಈ ನಮ್ಮ ಕಾರ್ಯಕ್ಕೆ ಪೌರಕಾರ್ಮಿಕರು ಸಾತ್ ನೀಡಿದ್ದು, ನಾಯಕರಾದ ಎಸ್.ಎಲ್ ಭೋಜೇಗೌಡರು ಚಾಲನೆ ನೀಡಿದ್ದಾರೆಂದರು.

    ಸದಸ್ಯ ಕುಮಾರ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಯೋಜನೆ ರೂಪಿಸಲಾಗಿದ್ದು ಜೊತೆಗೆ ಇಂದಿನಿಂದ ಕಸಮುಕ್ತ ನಗರ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

    ಕಸಮುಕ್ತ ನಗರ ಯೋಜನೆಗೆ ಎಲ್ಲಾ ಪೌರ ಕಾರ್ಮಿಕರು ಕೈಜೋಡಿಸಿದ್ದಾರೆ. ಶಾಸಕರು, ಎಂಎಲ್‌ಸಿ ನಮ್ಮೊಂದಿಗಿದ್ದಾರೆ. ಮುಂದಿನ ದಿನಗಳಲ್ಲಿ ಆರೋಗ್ಯಕರ ಪರಿಸರವನ್ನು ಕಾಪಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪೌರಾಯುಕ್ತ ಬಿ.ಸಿ. ಬಸವರಾಜ್, ಆರೋಗ್ಯ ನಿರೀಕ್ಷರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

    Basic infrastructure should be provided to the citizens of the city on a priority basis.

  • ಅಹಿಂದ ವರ್ಗದ ಜನಪರವಾದ ಗಟ್ಟಿ ಧ್ವನಿ ಹೋರಾಟ ಮಾಡಿದವರು ಸಿದ್ದರಾಮಯ್ಯ

    ಅಹಿಂದ ವರ್ಗದ ಜನಪರವಾದ ಗಟ್ಟಿ ಧ್ವನಿ ಹೋರಾಟ ಮಾಡಿದವರು ಸಿದ್ದರಾಮಯ್ಯ

    ಚಿಕ್ಕಮಗಳೂರು: ಅಹಿಂದ ವರ್ಗದ ಜನರ ಪರವಾಗಿ ಗಟ್ಟಿ ಧ್ವನಿಯಿಂದ ಹೋರಾಟ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಎಲ್ಲಾ ವರ್ಗದ ಬಡ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಅಹಿಂದ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ತ್ರಿಭುವನ್ ಎತ್ತಿನಮನೆ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ ಅಹಿಂದ ನಾಯಕರಾದ ಸಿದ್ದರಾಮಯ್ಯನವರು ರಾಜ್ಯದಲ್ಲಿ ಎರಡು ಬಾರಿ ದಾಖಲೆಯ ಮುಖ್ಯಮಂತ್ರಿಗಳಾಗಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ತತ್ವದಡಿ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಎಲ್ಲಾ ವರ್ಗದ ಬಡವರ ಬದುಕನ್ನು ಹಸನುಗೊಳಿಸಿದ್ದಾರೆಂದು ಶ್ಲಾಘಿಸಿದರು.

    ಎಐಸಿಸಿ ಯಿಂದ ಸಿದ್ದರಾಮಯ್ಯನವರನ್ನು ಹಿಂದುಳಿದ ನಾಯಕರನ್ನಾಗಿ ಆಯ್ಕೆಮಾಡಿದ್ದಾರೆ ಜೊತೆಗೆ ಶೋಷಿತ ವರ್ಗದ ಜನರ ಪರವಾಗಿ ಅಹಿಂದ ಜನಾಂಗದ ಏಳಿಗೆಗೆ ಶ್ರಮಿಸಲಿ ಎಂದು ಶುಭ ಹಾರೈಸಿದರು.

    ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ಜಿಲ್ಲಾ ಅಹಿಂದ ಅಧ್ಯಕ್ಷರಾಗಿ ತ್ರಿಭುವನ್ ಆಯ್ಕೆಯಾಗಿರುವುದು ಎಲ್ಲರಿಗೂ ಸಂತೋಷವಾಗಿದೆ, ದೇಶದಲ್ಲಿ ಧ್ವನಿ ಇಲ್ಲದ ಜನರ ಪರವಾಗಿ ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ, ದಾಸಶ್ರೇಷ್ಟ ಕನಕದಾಸರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರು ಶೋಷಿತರ ಪರವಾಗಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹನೀಯರಾಗಿದ್ದಾರೆಂದು ಹೇಳಿದರು.

    ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ನಂತರ ಎಲ್ಲಾ ಶೋಷಿತ ಸಮುದಾಯಗಳ ನಾಯಕರಾಗಿ ಸಿದ್ದರಾಮಯ್ಯನವರು ಕೆಲಸ ಮಾಡುತ್ತಿದ್ದಾರೆ. ಇವರ ಅಧಿಕಾರವಧಿಯಲ್ಲಿ ಯಾವುದೇ ಸಮುದಾಯಕ್ಕೆ ಅವಮಾನ ಮಾಡಿಲ್ಲ, ಉದಾಸೀನತೆ ತೋರಿಲ್ಲ ಎಂದರು. ಅಹಿಂದ ರಾಷ್ಟ್ರೀಯ ನಾಯಕರಾಗಿ ಸಿದ್ದರಾಮಯ್ಯನವರನ್ನು ಆಯ್ಕೆಮಾಡಿರುವುದನ್ನು ಬಿಜೆಪಿ ಮುಖಂಡರು ಸಹಿಸಿಕೊಳ್ಳದೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದನ್ನು ಖಂಡಿಸುತ್ತೇನೆ ಎಂದ ಅವರು, ಸಿದ್ದರಾಮಯ್ಯನವರ ದಾರಿಯಲ್ಲಿ ತ್ರಿಭುವನ್ ಸಾಗಬೇಕು, ನಾವೆಲ್ಲಾ ನಿಮ್ಮೊಂದಿಗೆ ಇರುತ್ತೇವೆಂದು ಭರವಸೆ ನೀಡಿದರು.

    ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್ ಮಾತನಾಡಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿಯಲ್ಲಿ ಹಿಂದುಳಿದ ವರ್ಗ ಇಂದು ಜನಪರವಾದ ಕೆಲಸ ಮಾಡುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜವಾದಿ ನೆಲೆಯಿಂದ ಬಂದವರು. ಅಹಿಂದ ಸಂಘಟನೆ ಸ್ಥಾಪನೆ ಮಾಡಿ ಈ ರಾಜ್ಯಕ್ಕೆ ಹೊಸ ನಾಂದಿ ಹಾಡಿದರು ಎಂದು ಹೇಳಿದರು. ಸಿದ್ದರಾಮಯ್ಯನವರು ರಾಜ್ಯ ಮತ್ತು ರಾಷ್ಟ್ರಕಂಡ ಅಪ್ರತಿಮ ನಾಯಕ, ರೈತ ಕಾರ್ಮಿಕ, ದಲಿತ, ಅಲ್ಪಸಂಖ್ಯಾತರ ನಾಯಕರಾಗಿದ್ದು, ಅದೇ ರೀತಿ ಜೊತೆ ಎಲ್ಲಾ ವರ್ಗದ ಜನರ ವಿಶ್ವಾಸವನ್ನು ಗಳಿಸಬೇಕು, ಚಿಕ್ಕ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ಲಭಿಸಿದೆ. ಅಹಿಂದ ರಾಷ್ಟ್ರೀಯ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ ಆಯ್ಕೆಯಾಗಿ ಹೊರಹೊಮ್ಮಿರುವ ಬೆನ್ನಲ್ಲೇ ನಿಮಗೆ ಈ ಅವಕಾಶ ಸಿಕ್ಕಿದೆ ಎಂದು ಬಣ್ಣಿಸಿದರು.

    ಸೈದ್ಧಾಂತಿಕ ಹಿನ್ನೆಲೆಯಲ್ಲಿ ಸಂಘಟನೆ ಮಾಡಬೇಕು. ಅದಕ್ಕೆ ಪೂರಕವಾದ ಎಲ್ಲಾ ರೀತಿಯ ಬೆಂಬಲ ಕೊಡುತ್ತೇವೆ, ಅಹಿಂದ ಅಂದರೆ ಒಂದು ಜಾತಿಗೆ ಸೀಮಿತವಾಗದೆ ತುಳಿತಕ್ಕೊಳಗಾದ ಎಲ್ಲಾ ವರ್ಗದ ಜನರನ್ನು ಸಂಘಟನೆ ಮಾಡಿ, ಎಲ್ಲೂ ಅತೀರೇಖಕ್ಕೆ ಹೋಗದೆ ಶಾಂತಿಯಿಂದ ವರ್ತಿಸಬೇಕೆಂದು ಕಿವಿಮಾತು ಹೇಳಿದರು.

    ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳ ಒಕ್ಕೂಟಗಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದೇ ಸಂದರ್ಭದಲ್ಲಿ ಅಹಿಂದ ಜಿಲ್ಲಾಧ್ಯಕ್ಷರಾಗಿ ತ್ರಿಭುವನ್ ಆಯ್ಕೆಯಾಗಿರುವುದು ಸಂತೋಷದ ವಿಚಾರ ಎಂದರು. ಈ ಸಂಘಟನೆಯನ್ನು ಗಟ್ಟಿಗೊಳಿಸುವ ಜೊತೆಗೆ ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ರೂಪಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.

    ಸರ್ವ ಜನರ ಪ್ರೀತಿಗೆ ಪಾತ್ರರಾಗಿರುವ ಸಿದ್ದರಾಮಯ್ಯ ಅವರನ್ನು ಬಿಜೆಪಿ ಮುಖಂಡರು ಅವಹೇಳನ ಮಾಡಿರುವುದು ಖಂಡನೀಯ, ಸಿದ್ದರಾಮಯ್ಯನವರ ಆಚಾರ-ವಿಚಾರಗಳನ್ನು ಎಲ್ಲಾ ರಾಜಕಾರಣಿಗಳು ಮೈಗೂಡಿಸಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು.

    ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಹಿಂದ ಸಂಘಟನೆಗಳನ್ನು ಸ್ಥಾಪನೆ ಮಾಡಿ, ಹಿರಿಯರ ಮಾರ್ಗದರ್ಶನ ಪಡೆದು ಮುಂದುವರೆಯಿರಿ ಎಂದು ತಿಳಿಸಿದರು.
    ನೂತನ ಅಧ್ಯಕ್ಷ ತ್ರಿಭುವನ್ ಮಾತನಾಡಿ, ಅಹಿಂದ ಸಂಘಟನೆ ರಥವನ್ನು ಎಳೆಯಲು ಅವಕಾಶ ಮಾಡಿಕೊಟ್ಟ ಎಲ್ಲಾ ನನ್ನ ಹಿರಿಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಿಲ್ಲೆಯಲ್ಲಿ ಅಹಿಂದ ಸಂಘಟನೆಯನ್ನು ಗಟ್ಟಿಗೊಳಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.

    ಇದೇ ಸಂದರ್ಭದಲ್ಲಿ ಮುಖಂಡರಾದ ಎ.ಎನ್. ಮಹೇಶ್, ರೇಖಾ ಹುಲಿಯಪ್ಪಗೌಡ, ನಯಾಜ್ ಅಹಮದ್ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದರು.

    Siddaramaiah was the one who fought loudly for the people of the non-Hind community.

  • ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಲು ಮನವಿ

    ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಲು ಮನವಿ

    ಚಿಕ್ಕಮಗಳೂರು: ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಕಡ್ಡಾಯಗೊಳಿಸಬೇಕು ಹಾಗೂ ತೃತೀಯ ಭಾಷೆ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

    ಈ ಕುರಿತು ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ತೃತೀಯ ಭಾಷೆಯಾದ ಹಿಂದಿ ಯು ರಾಜ್ಯದ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಹೇರಲಾಗುತ್ತಿದೆ. ಕಳೆದ ೨೦೨೪ನೇ ಸಾಲಿನ ಎಸ್ ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೯೦,೭೯೪ ವಿದ್ಯಾರ್ಥಿಗಳು ಹಿಂದಿ ವಿ?ಯದಲ್ಲಿ ಅನುತ್ತೀರ್ಣರಾಗಿದ್ದು, ಈ ವ? ವು ಸಂಖ್ಯೆ ಲಕ್ಷಕ್ಕಿಂತ ಅಧಿಕವಾಗಿದ್ದು ಹಿಂದಿಯ ಕಡ್ಡಾಯ ಶಿಕ್ಷಣದಿಂದ ಮಕ್ಕಳಿಗೆ ಉಂಟಾಗುತ್ತಿರುವ ಒತ್ತಡವನ್ನು ತೋರಿಸುತ್ತದೆ ಎಂದರು.

    ತಮಿಳುನಾಡಿನಲ್ಲಿ ೧೯೬೮ ರಿಂದಲೇ ತ್ರಿಬಾಷಾ ನೀತಿಯನ್ನು ತಿರಸ್ಕರಿಸಿದೆ. ತಮಿಳು ಮತ್ತು ಇಂಗ್ಲೀಷ್ ಭಾಷೆಗಳನ್ನು ಒಳಗೊಂಡ ದ್ವಿಭಾಷಾ ನೀತಿಯನ್ನು ಅಳವಡಿಸಿಕೊಂಡಿದೆ. ಮಹಾರಾಷ್ಟ್ರ ಕೂಡಾ ತ್ರಿಭಾಷಾ ನೀತಿಯನ್ನು ರದ್ದುಗೊಳಿಸಿ ನಿರ್ಧಾರವನ್ನು ಕೈಗೊಂಡಿದೆ. ಹೀಗಾಗಿ ರಾಜ್ಯದಲ್ಲಿಯೂ ತ್ರಿಭಾಷಾ ನೀತಿಯಿಂದ ಯಾವುದೇ ಲಾಭವಿಲ್ಲ. ಜೊತೆಗೆ ಕನ್ನಡಿಗರಿಗೆ ಉದ್ಯೋಗವು ಲಭಿಸುವುದಿಲ್ಲ ಎಂದರು.

    ತೃತೀಯ ಭಾಷೆ ಹಿಂದಿ ತೆಗೆದುಹಾಕುವುದರಿಂದ ವಿದ್ಯಾರ್ಥಿಗಳು ಕನ್ನಡ, ಇಂಗ್ಲೀಷ್ ಭಾಷೆಗಳ ಜೊತೆ ಗೆ ಇತರ ವಿಷಯಗಳ ಮೇಲೆ ಹೆಚ್ಚಿನ ಗಮನಹರಿಸುತ್ತಾರೆ. ಕನ್ನಡ ಭಾಷೆಗೆ ಆದ್ಯತೆ ನೀಡುವುದರಿಂದ ರಾಜ್ಯ ದ ಭಾಷಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿದಂತಾಗುತ್ತದೆ ಎಂದು ತಿಳಿಸಿ ದರು.

    ದ್ವಿಭಾಷಾ ನೀತಿಯು ಶಿಕ್ಷಣ ಸಂಪನ್ಮೂಲಗಳನ್ನು ಕನ್ನಡ ಮತ್ತು ಇಂಗ್ಲೀಷ್ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆ. ಉತ್ತರ ಭಾರತದ ಅನೇಕ ರಾಜ್ಯಗಳು ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿದ್ದು ರಾಜ್ಯಕ್ಕೂ ಈ ರೀತಿಯ ಸಮಾನತೆಯನ್ನು ಒದಗಿಸಬೇಕು ಎಂದು ಹೇಳಿದರು.

    ರಾಜ್ಯದ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳಲ್ಲಿಯೂ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಡ್ಡಾ ಯಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ, ಉತ್ತಮ ಗುಣಮಟ್ಟದ ಇಂಗ್ಲೀಷ್ ಶಿಕ್ಷಣ ವನ್ನು ನೀಡಬೇಕು. ತ್ರಿಭಾಷಾ ನೀತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಅನಗತ್ಯ ಒತ್ತಡ ವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್.ಶೆಟ್ಟಿ, ಉಪಾಧ್ಯಕ್ಷ ದಶರಥ ರಾಜ್‌ಅರಸ್, ಸಂಘಟನಾ ಕಾರ್ಯದರ್ಶಿ ರುದ್ರೇಶ್, ತಾಲ್ಲೂಕಲು ಅಧ್ಯಕ್ಷೆ ಪೂರ್ಣಿಮಾ, ಕಡೂರು ಅಧ್ಯಕ್ಷ ಅಶೋಕ್‌ಶೆಟ್ಟಿ, ಮುಖಂಡರುಗಳಾದ ಯುವರಾಜ್, ಮಹಮ್ಮದ್ ಹನೀಫ್, ಪಂಚಾಕ್ಷರಿ ಇದ್ದರು.

    Appeal to implement bilingual policy in the state’s education system

  • ಶ್ಯಾಮಪ್ರಸಾದ್ ಮುಖರ್ಜಿ ಜನ್ಮದಿನ – ಸಸಿನೆಟ್ಟು ಆಚರಣೆ

    ಶ್ಯಾಮಪ್ರಸಾದ್ ಮುಖರ್ಜಿ ಜನ್ಮದಿನ – ಸಸಿನೆಟ್ಟು ಆಚರಣೆ

    ಚಿಕ್ಕಮಗಳೂರು: ರಾಷ್ಟ್ರದಲ್ಲಿ ಭಾಜಪ ತನ್ನ ಬೇರುಗಳನ್ನು ಭದ್ರವಾಗಿ ನೆಲೆಯೂರಿಸಲು ಸಾಧ್ಯವಾಗಿದ್ದರೆ ಅದು ಡಾ|| ಶ್ಯಾಮಪ್ರಸಾದ್ ಮುಖರ್ಜಿಯವರ ತ್ಯಾಗ ಮತ್ತು ಬದ್ಧತೆಯಿಂದ ಎಂದು ಬಿಜೆ ಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಹೇಳಿದರು.

    ನಗರದ ಕೆಂಪನಹಳ್ಳಿ ಸಮೀಪದಲ್ಲಿ ಬಿಜೆಪಿ ನಗರ ಮಂಡಲದಿಂದ ನಡೆದ ಡಾ|| ಶ್ಯಾಮ ಪ್ರಸಾದ್ ಮುಖರ್ಜಿ ಜನ್ಮದಿನ ಅಂಗವಾಗಿ ಭಾನುವಾರ ಸಸಿ ನೆಟ್ಟು ಅವರು ಮಾತನಾಡಿ ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶವನ್ನು ಪುನರ್ ನಿರ್ಮಾಣ ಮಾಡುವ ಹಾಗೂ ಜಗ ತ್ತಿನಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿಸುವ ಗುರಿ ಇಟ್ಟುಕೊಂಡು, ಆ ಮಹಾನ್ ಕಾರ್ಯಕ್ಕೆ ತಮ್ಮ ಬದು ಕನ್ನು ಸವೆಸಿದ ಮುಖರ್ಜಿ ಅವರು ಶ್ರೇಷ್ಟ ವಿದ್ವಾಂಸರು, ರಾಜನೀತಿ ತಜ್ಞರಾಗಿದ್ದರು ಎಂದರು.

    ನೆರೆದೇಶದ ಹಿಂದುಗಳ ಮೇಲೆ ನಡೆದ ದೌರ್ಜನ್ಯಕ್ಕೆ ಕಿಡಿಕಾಡಿದ ಅವರು ಮಂತ್ರಿ ಮಂಡಲಕ್ಕೆ ರಾಜೀ ನಾಮೆ ನೀಡಿದ್ದರು. ನೀತಿ, ತತ್ವದ ಆಧಾರದ ಮೇಲೆ ಮಂತ್ರಿ ಪದವಿ ತ್ಯಾಗ ಮಾಡಿದ ಸ್ವಾತಂತ್ರ್ಯ ಭಾರತದ ಪ್ರಮುಖ ನಾಯಕರು ಎಂದ ಅವರು ಭಾರತೀಯ ರಾಜಕೀಯ ಕ್ಷೇತ್ರಕ್ಕೆ ಮುಖರ್ಜಿಯವರು ನೀಡಿದ ಕೊ ಡುಗೆ ಅಪಾರವಾಗಿದೆ ಎಂದರು.

    ದೇಶದ ಪರಿಸ್ಥಿತಿ ಅಧೋಗತಿಗೆ ಇಳಿದಾಗ, ರಾಜಕೀಯ ಅಸ್ಥಿರತೆ, ಆಡಳಿತ ದೋಷ ಕಂಡಾಗ ಅವಿರ ತವಾಗಿ ಶ್ರಮಿಸಿ ರಾಷ್ಟ್ರದಲ್ಲಿ ಜನಸಂಘ ಎಂಬ ಹೊಸ ಪಕ್ಷಕ್ಕೆ ನಾಂದಿ ಹಾಡಿದವರು ಮುಖರ್ಜಿ. ೧೯೫೩ ರಲ್ಲಿ ಕಾಶ್ಮೀರವನ್ನು ಭಾರತದಲ್ಲಿ ಉಳಿಸಲು ನಡೆಸಿದ ಹೋರಾಟದಲ್ಲಿ ಮುಖರ್ಜಿಯವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು ಎಂದರು.

    ನಗರಸಭೆ ಸದಸ್ಯೆ ಲಲಿತಾ ರವಿನಾಯ್ಕ್ ಮಾತನಾಡಿ ಮುಖರ್ಜಿಯವರ ಆದರ್ಶ, ತ್ಯಾಗ, ಬಲಿದಾನ ವ್ಯರ್ಥವಾಗದಂತೆ ದೇಶದ ಅಖಂಡತೆಯನ್ನು ಉಳಿಸಿ, ದೇಶವನ್ನು ಕಟ್ಟಿಬೆಳೆಸುವ ಪ್ರಯತ್ನ ಪ್ರತಿಯೊಬ್ಬರು ಮಾಡಿದಾಗ ಮುಖರ್ಜಿಯವರ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ ಎಂದರು.

    ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ರವಿನಾಯ್ಕ್, ಇಂದಿರಾ, ಜಯಪ್ರಕಾಶ್, ವಿಶಾಲ, ಚೇತನ್, ವಿನಯ್, ರಂಗಸ್ವಾಮಿ, ನವೀನ್, ಮರಿಯಪ್ಪ ಮತ್ತಿತರರಿದ್ದರು.

    Shyama Prasad Mukherjee’s Birthday – Planting a sapling and celebrating

  • ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅಪ್ಪು ಉದ್ಯಾನವ ಉದ್ಘಾಟನೆ

    ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅಪ್ಪು ಉದ್ಯಾನವ ಉದ್ಘಾಟನೆ

    ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್‌ನ ೫ ನೇ ಹಂತದಲ್ಲಿ ಗೃಹಮಂಡಳಿ ಅಭಿವೃದ್ಧಿ ವೇದಿಕೆ ವತಿಯಿಂದ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅಭಿವೃದ್ಧಿಪಡಿಸಲಾಗಿರುವ ಅಪ್ಪು ಉದ್ಯಾನವನವನ್ನು ಶಾಸಕ ಎಚ್.ಡಿ.ತಮ್ಮಯ್ಯ ಭಾನುವಾರ ಉದ್ಘಾಟಿಸಿದರು.

    ಈ ವೇಳೆ ಮಾತನಾಡಿದ ಶಾಸಕರು, ನಗರದ ಹೌಸಿಂಗ್ ಬೋರ್ಡ್ ಮತ್ತು ಕಲ್ಯಾಣ ನಗರ ಬಡಾವಣೆಗಳು ಅತೀ ವೇಗವಾಗಿ ಬೆಳೆಯುತ್ತಿವೆ.,  ಸ್ತೀರ್ಣದಲ್ಲೂ ವಿಶಾಲವಾಗಿರುವುದರಿಂದ ವಾರ್ಡ್ ಸದಸ್ಯರು ಹಾಗೂ ಶಾಸಕರುಗಳಿಗೆ ಅಭಿವೃದ್ಧಿ ಪಡಿಸುವುದು ಸವಾಲಿನ ಕೆಲಸವಾಗಿರುತ್ತದೆ. ಕಳೆದ ೨೦ ವರ್ಷ ಶಾಸಕರಾಗಿದ್ದಾಗ ಸಿ.ಟಿ.ರವಿ ಅವರು ಕೈಗೊಂಡಿದ್ದ ಅಭಿವೃದ್ಧಿ ಕೆಲಸಗಳನ್ನು ಯಾವುದೇ ಪಕ್ಷ ಬೇಧವಿಲ್ಲದೆ, ಮತ್ಸರವಿಲ್ಲದೆ ಅಭಿನಂದಿಸುತ್ತೇವೆ ಎಂದರು.

    ನಾವು ಆಯ್ಕೆಯಾಗಿ ಎರಡು ವರ್ಷಗಳಾಗಿದೆ. ಈಗಾಗಲೇ ಆಧ್ಯತೆ ಮೇರೆಗೆ ಕಲ್ಯಾಣ ನಗರ ಮತ್ತು ಗೃಹ ಮಂಡಳಿ ಬಡಾವಣೆಯನ್ನು ಅಭಿವೃದ್ಧಿಗೆ ಕೈಗೆತ್ತಿಕೊಂಡಿದ್ದೇವೆ. ಅದರ ಫಲಿತಾಂಶ ಬರಲು ಇನ್ನೆರಡು ವರ್ಷ ಕಾಯಬೇಕಾಗುತ್ತದೆ. ಆ ಸಂದರ್ಭದಲ್ಲಿ ನಾವು ಮಾಡಿದ ಕೆಲಸವನ್ನು ನೆನಪಿಸಿಕೊಳ್ಳಬೇಕು ಎಂದು ಕೋರಿದರು.

    ಉದ್ಯಾನವನಗಳನ್ನು ಸಾರ್ವಜನಿಕ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸುವುದು ಹೆಮ್ಮೆಯ ವಿಚಾರ. ಈಗಾಗಲೆ ಎರಡೂ ಬಡಾವಣೆಯಲ್ಲಿ ಅಭಿವೃದ್ಧಿಗಾಗಿ ನಾಗರೀಕ ಸಮಿತಿಗಳನ್ನು ಮಾಡಿಕೊಂಡಿವೆ. ಇವೆರಡೂ ಸ್ವಚ್ಛತೆ ವಿಚಾರದಲ್ಲೂ ನಗರಸಭೆಗೆ ಸಾಕಷ್ಟು ಸಹಕಾರ ನೀಡುತ್ತಿವೆ. ಇದು ನಗರದ ೩೫ ವಾರ್ಡ್‌ಗಳಿಗೂ ಮಾದರಿ ಎಂದರು.

    ಕಣಿವೆ ಯಿಂದ ಕತ್ರಿಮಾರಮ್ಮ ದೇವಸ್ಥಾನದ ವರೆಗೆ ಬೀದಿ ದೀಪ ಅಳವಡಿಸುವ ಕಾಮಗಾರಿ ತಾಂತ್ರಿಕ ಕಾರಣದಿಂದಾಗಿ ಮುಂದಕ್ಕೆ ಹೋಗಿದೆ. ಸಧ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಣ್ಣ ಕೆಲಸಕ್ಕೂ ನಗರಸಭೆ ಸದಸ್ಯರು, ಆಯುಕ್ತರು, ಶಾಸಕರು, ಸರ್ಕಾರವನ್ನು ಹುಡುಕಿಕೊಂಡು ಹೋಗುವ ಸಂದರ್ಭದಲ್ಲಿ ಇಲ್ಲಿನ ನಾಗರೀಕ ಸಮಿತಿ ತಾವೇ ಆಸಕ್ತಿ ವಹಿಸಿ ಅಪ್ಪು ಉದ್ಯಾನವನವನ್ನು ಅಭಿವೃದ್ಧಿ ಪಡಿಸಿ ನಂತರ ನಮ್ಮನ್ನು ಕರೆಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

    ನಗರಸಭೆ ನಿಧಿಯಲ್ಲಿ ಬೇಲಿ ಮತ್ತು ಇಂಟರ್ ಲಾಕಿಂಗ್ ಬ್ರಿಕ್ಸ್‌ಗಳನ್ನು ಹಾಕಿಸಿಕೊಡಲು ಸೂಚಿಸಿದ್ದೇವೆ. ನಂತರದ ನಿರ್ವಹಣೆಯನ್ನು ಸಮಿತಿ ಮಾಡಲಿದೆ. ಜನರ ಸಹಭಾಗಿತ್ವ ಕೊಡುತ್ತಿರುವುದರಿಂದ ಈಗ ನಗರಸಭೆ ಸಹಕಾರಿಯಾಗಿ ನಿಲ್ಲಬೇಕಿದೆ ಎಂದರು. ಸರ್ಕಾರ ನೀತಿ ರೂಪಿಸಿ, ನೆರವನ್ನೂ ಕೊಡಬಹುದು ಆದರೆ ಎಲ್ಲವನ್ನೂ ಮಾಡಲಿಕ್ಕೆ ಆಗದು. ಜನರ ಸಹಭಾಗಿತ್ವವೂ ಇದ್ದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದು ಹೇಳಿದರು.

    ನಮ್ಮ ದೇಶಕ್ಕೆ ಹತ್ತಾರು ವರ್ಷಗಳ ವೈಭವದ ಇತಿಹಾಸವೂ ಇದೆ. ಹಾಗೇ ಭವಿಷ್ಯವೂ ಇದೆ. ರಾಷ್ಟ್ರವಾಗಿ, ಸಮಾಜವಾಗಿ ನಾವು ಒಂದಾಗಿ ನಿಲ್ಲದಿದ್ದರೆ ನಾವು ಸುಲಭದ ತುತ್ತಾಗುತ್ತೇವೆ ಎನ್ನುವುದಕ್ಕೆ ಇತಿಹಾಸದ ಪಾಠವೂ ಇದೆ ಎಂದರು.

    ನಗರಸಭಾ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ಬಡಾವಣೆಯ ಸ್ಮಶಾನದ ಅಭಿವೃದ್ಧಿಗೆ ಜಾಗ ಮೀಸಲಿಡಲಾಗಿದೆ. ಅದಕ್ಕೆ ಸೂಕ್ತ ಅನುದಾನವನ್ನು ಕೊಟ್ಟು ಪೂರ್ಣಗೊಳಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

    ಗೃಹಮಂಡಳಿ ಅಭಿವೃದ್ಧಿ ವೇದಿಕೆ ಮುಖಂಡ ನಿವೃತ್ತ ಪ್ರಾಧ್ಯಾಪಕ ಶೇಖರ್ ಮಾತನಾಡಿ, ವೇದಿಕೆಯಿಂದ ಬಡಾವಣೆಯಲ್ಲಿ ಹತ್ತಾರು ಅಭಿವೃದ್ಧಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಅಪ್ಪು ಉದ್ಯಾನವನವನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ ಹತ್ತಾರು ಸಮಾಜ ಸೇವೆಯಲ್ಲಿ ವೇದಿಕೆ ತೊಡಗಿಸಿಕೊಳ್ಳಲಿದೆ ಎಂದರು.

    ವೇದಿಕೆಯ ಮತ್ತೋರ್ವ ಪ್ರಮುಖರಾದ ಪ್ರಾಧ್ಯಾಪಕ ಡಾ.ಕೆ.ಎನ್.ಲಕ್ಷ್ಮೀಕಾಂತ್ ಸ್ವಾಗತಿಸಿದರು. ನಗರಸಭೆ ನಾಮನಿರ್ದೇಶಿತ ಸದಸ್ಯ ಕೀರ್ತಿಶೇಟ್, ಆಯುಕ್ತ ಬಿ.ಸಿ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಎಐಟಿ ಕಾಲೇಜಿನ ಸುಬ್ಬರಾವ್, ಸಮಿತಿ ಸದಸ್ಯರಾದ ಗೋಪಾಲಗೌಡ, ದಿನೇಶ್, ನಂಜುಡಪ್ಪ, ಸಂತೋಷ್, ನಿಶಾಂತ್, ರವಿ, ರವಿಕುಮಾರ್, ಗಂಗಾಧರ್, ವಿಜಯ್‌ಕುಮಾರ್, ಲೋಕೇಶ್, ನಂಧೀಶ್, ಲೋಕೇಶ್, ರಂಗಣ್ಣ ಉಪಸ್ಥಿತರಿದ್ದರು ದೊಡ್ಡಮಲ್ಲಪ್ಪ ನಿರೂಪಿಸಿ, ನಂಜುಂಡಪ್ಪ ವಂದಿಸಿದರು.

    Inauguration of Appu Park in memory of Puneeth Rajkumar

  • ಕೆಪಿಟಿಸಿಎಲ್‌ನಿಂದ ಒದಗಿಸಲಾದ ನೂತನ ಬಸ್‌ಗೆ  ಚಾಲನೆ

    ಕೆಪಿಟಿಸಿಎಲ್‌ನಿಂದ ಒದಗಿಸಲಾದ ನೂತನ ಬಸ್‌ಗೆ ಚಾಲನೆ

    ಚಿಕ್ಕಮಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಕೆಪಿಟಿಸಿಎಲ್‌ನಿಂದ ಒದಗಿಸಲಾದ ನೂತನ ಬಸ್‌ಗೆ ಇಂದು ಮಧ್ಯಾಹ್ನ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದರು.

    ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಸಿಇಒ ಎಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ ಹಾಜರಿದ್ದರು.

    New bus provided by KPTCL launched

  • ನಗರಸಭೆ ನೂತನ ಅಧ್ಯಕ್ಷರಾಗಿ ಬಿ.ಶೀಲಾ ದಿನೇಶ್ ಅವಿರೋಧವಾಗಿ ಆಯ್ಕೆ

    ನಗರಸಭೆ ನೂತನ ಅಧ್ಯಕ್ಷರಾಗಿ ಬಿ.ಶೀಲಾ ದಿನೇಶ್ ಅವಿರೋಧವಾಗಿ ಆಯ್ಕೆ

    ಚಿಕ್ಕಮಗಳೂರುಎ:  ನಗರಸಭೆ ನೂತನ ಅಧ್ಯಕ್ಷರಾಗಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ೧೫ ನೇ ವಾರ್ಡ್‌ನ ಬಿ.ಶೀಲಾ ದಿನೇಶ್ ಅವಿರೋಧವಾಗಿ ಆಯ್ಕೆಯಾದರು. ಬಿಜೆಪಿ ಆಂತರಿಕ ಒಪ್ಪಂದದ ಪ್ರಕಾರ ೧೦ ತಿಂಗಳ ಅಧಿಕಾರದ ನಂತರ ಸುಜಾತ ಶಿವಕುಮಾರ್ ಅವರು ರಾಜೀನಾಮೆ ನಿಡಿದ್ದ ಹಿನ್ನೆಲೆಯಲ್ಲಿ ಶನಿವಾರ ನೂತನ ಅಧ್ಯಕ್ಷರ ಆಯ್ಕೆಗೆ ನಗರಸಭೆ ಸಭಾಂಗಣದಲ್ಲಿ ಚುನಾವಣೆ ನಡೆಯಿತು.

    ಜೆಡಿಎಸ್ ಬೆಂಬಲದೊಂದಿಗೆ ೧೫ ನೇ ವಾರ್ಡ್‌ನಿಂದ ಪಕ್ಷೇತರ ಸದಸ್ಯೆಯಾಗಿ ಆಯ್ಕೆಯಾಗಿ ಬಂದಿರುವ ಶೀಲಾ ದಿನೇಶ್ ಅವರು ಬಿಜೆಪಿ-ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಅವರನ್ನು ಹೊರತುಪಡಿಸಿ ಇನ್ನಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ಬಿ.ಕೆ.ಸುದರ್ಶನ್ ಅವರು ಶಿಲಾ ದಿನೇಶ್ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

    ನೂತನ ಅಧ್ಯಕ್ಷರ ಆಯ್ಕೆ ನಂತರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಶೀಲಾ ದಿನೇಶ್ ಆಯ್ಕೆಗೆ ಸಂಪೂರ್ಣ ಸಹಕಾರ ನೀಡಿದ ಸಿ.ಟಿ.ರವಿ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ. ಅವರ ಬೆಂಬಲದಿಂದ ಮೈತ್ರಿ ಅಭ್ಯರ್ಥಿ ಆಯ್ಕೆಗೆ ಸಹಕಾರವಾಗಿದೆ. ಹಾಗೆಯೇ ಕಾಂಗ್ರೆಸ್ ಶಾಸಕ ಎಚ್.ಡಿ.ತಮ್ಮಯ್ಯ ಅವರು ಸಹ ತಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಹಾಕದೆ ಇದ್ದುದ್ದು ಅವಿರೋಧ ಆಯ್ಕೆಗೆ ಕಾರಣವಾಗಿದೆ. ಅವಿರೋಧ ಆಯ್ಕೆ ಎನ್ನುವುದು ಮುಳ್ಳಿನ ಹಾಸಿಗೆ ಇದ್ದಂತೆ ಎಲ್ಲರನ್ನೂ ಒಮ್ಮತದಲ್ಲಿ ಕೊಂಡೊಯ್ದು ನಗರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹಾರೈಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಕಳೆದ ಹತ್ತು ತಿಂಗಳ ಹಿಂದೆ ಬೋಜೇಗೌಡ ಅವರ ಕೋರಿಕೆ ಮೇರೆಗೆ ಶೀಲಾ ದಿನೇಶ್ ಅವರಿಗೆ ೧೦ ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಮಾತು ಕೊಟ್ಟಿದ್ದೆವು. ಅದೇ ರೀತಿ ಎನ್‌ಡಿಎ ಅಭ್ಯರ್ಥಿಯಾಗಿ ಶೀಲಾ ದಿನೇಶ್ ಆಯ್ಕೆಯಾಗಿದ್ದಾರೆ. ಅದಕ್ಕೆ ಕಾಂಗ್ರೆಸ್ ಪಕ್ಷ ಸಹ ಅಭ್ಯರ್ಥಿಯನ್ನು ಹಾಕದೆ ಆಯ್ಕೆಗೆ ಸಹಕರಿಸಿದೆ. ಅದಕ್ಕಾಗಿ ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ಹಾಗೂ ಎಲ್ಲಾ ಪಕ್ಷದ ನಗರಸಭೆ ಸದಸ್ಯರಿಗೆ ಧನ್ಯವಾದ ತಿಳಿಸುತ್ತೇವೆ. ಶೀಲಾ ದಿನೇಶ್ ಅವರು ಒಳ್ಳೆಯ ಕೆಲಸ ಮಾಡಿ, ಜನಾನುರಾಗಿಯಾಗಿ ತಮ್ಮದೇ ಹೆಜ್ಜೆ ಗುರುತನ್ನು ಮೂಡಿಸಲಿ ಎಂದು ಹಾರೈಸಿದರು.

    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಯಾವುದೇ ಪಕ್ಷ ಎನ್ನುವುದಕ್ಕಿಂತ ನಗರದ ಅಭಿವೃದ್ಧಿ ಮುಖ್ಯ ಎನ್ನುವ ಉದ್ದೇಶದಿಂದ ಹಾಗೂ ಎನ್‌ಡಿಎ ಅಭ್ಯರ್ಥಿ ಶೀಲಾ ದಿನೇಶ್ ಅವರು ಪಕ್ಷೇತರ ಸದಸ್ಯರಾಗಿರುವುದರಿಂದ ಅವರ ಅವಿರೋಧ ಆಯ್ಕೆಗೆ ಸಹಕಾರ ಮಾಡಿದ್ದೇವೆ. ಶೀಲಾ ದಿನೇಶ್ ಮತ್ತು ಅವರ ಪತ್ನಿ ಹಾಗೂ ಸಹೋದರಿಸಹ ನಗರಸಭೆ ಸದಸ್ಯರಾಗಿ ಸುಮಾರು ೨೫ ವರ್ಷಗಳ ಅನುಭವ ಇರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಒತ್ತುಕೊಟ್ಟು ಕೆಲಸ ಮಾಡಲಿ ಎಂದು ಹೇಳಿದರು.

    ಚುನಾವಣೆ ನಂತರ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಸದಸ್ಯರು ಸೇರಿದಂತೆ ಮುಖಂಡರುಗಳು, ಮಾಜಿ ಅಧ್ಯಕ್ಷರು ಇತರರು ಹಾಗೂ ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

    B. Sheela Dinesh was elected unopposed as the new president of the Municipal Council

  • ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾರಂಗ ಸಮಾಜಕ್ಕೆ ಅಪಾರ ಕೊಡುಗೆ

    ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾರಂಗ ಸಮಾಜಕ್ಕೆ ಅಪಾರ ಕೊಡುಗೆ

    ಚಿಕ್ಕಮಗಳೂರು:  ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾ ರಂಗ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

    ಶನಿವಾರ ನಗರದ ಸ್ಕೌಟ್ ಭವನದಲ್ಲಿ ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಪತ್ರಿಕಾ ರಂಗವೂ ಒಂದಾಗಿದ್ದು, ರಚನಾತ್ಮಕ ಟೀಕೆ, ಟಿಪ್ಪಣಿಗಳ ಮೂಲಕ ರಾಜಕೀಯ ರಂಗ, ಆಡಳಿತ ವರ್ಗವನ್ನು ಎಚ್ಚರಿಸಿ ಸರಿದಾರಿಗೆ ತರುವ ಕೆಲಸವನ್ನು ಪತ್ರಿಕಾ ರಂಗ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.

    ಪತ್ರಿಕಾ ವಲಯದಿಂದ ರಚನಾತ್ಮಕ ಟೀಕೆ, ಟಿಪ್ಪಣಿಗಳು ಆ ಕ್ಷಣಕ್ಕೆ ನೋವುಂಟು ಮಾಡಿದರು. ಅವುಗಳನ್ನು ಸಕರಾತ್ಮಕ ವಾಗಿ ತಗೆದುಕೊಳ್ಳುವುದರಿಂದ ಸಮಾಜಕ್ಕೆ ಒಳ್ಳೇಯದಾಗುತ್ತದೆ. ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಸಾಧ್ಯವಾಗು ತ್ತದೆ ಎಂದು ಅಭಿಪ್ರಾಯಿಸಿದ ಅವರು, ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಪತ್ರಕರ್ತರು ತಮಗೆ ಮಾರ್ಗದರ್ಶನ ನೀಡಿದ್ದನ್ನು ಸ್ಮರಿಸಿಕೊಂಡ ಸಚಿವರು, ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಹಿರಿಯರು ತಮಗೆ ರಾಜಕೀಯವಾಗಿ ಮಾರ್ಗದರ್ಶನ ಮಾಡಿದ್ದಾರೆ.

    ಯುವಶಕ್ತಿ ಈ ದೇಶದ ಸಂಪತ್ತು, ಯುವ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿದೆ. ಇಂದು ಸಾಕಷ್ಟು ವಿದ್ಯಾವಂತರು ಉದ್ಯೋಗ ದೊರೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯಾವಂತರಿಗೆ ಉದ್ಯೋಗ ಸೃಷ್ಠಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಬ್ದಾರಿಯಾಗಿದೆ. ರಾಜ್ಯ ಸರ್ಕಾರ ಉದ್ಯೋಗ ಸೃಷ್ಠಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

    ರಾಜ್ಯದಲ್ಲಿ ವಿದ್ಯುತ್‌ಗೆ ಬಾರೀ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಇಂಧನ ಇಲಾಖೆ ಕುಸುಮ ಯೋಜನೆ ಸೇರಿದಂತೆ ಇತರೆ ಯೋಜನೆಯಡಿಯಲ್ಲಿ ೧೧೦ ಕೋಟಿ ರೂ. ವೆಚ್ಚದಲ್ಲಿ ೨೫೦೦ ಮೆಗಾ ವ್ಯಾಟ್ ಉತ್ಪಾದನೆಗೆ ಚಾಲನೆ ನೀಡಲಾಗಿದೆ. ಇದರಿಂದ ರಾಜ್ಯದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಪತ್ರಿಕಾರಂಗ ಸಮಾಜದ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟ ದಲ್ಲಿ ಅನೇಕ ಪತ್ರಿಕೆಗಳು ಶಕ್ತಿಮೀರಿ ಶ್ರಮಿಸಿವೆ. ಬ್ರಿಟಿಷರಿಗೆ ಭಯಪಡದೆ ನಿರ್ಭೀತಿಯಾಗಿ ಜನತೆಗೆ ವಿಷಯಗಳನ್ನು ಮುಟ್ಟಿಸುವ ಕೆಲಸವನ್ನು ಪತ್ರಿಕೆಗಳು ಮಾಡಿವೆ ಎಂದ ಅವರು, ಸಮಾಜದ ಅಂಕುಡೊಂಕುಗಳನ್ನು ತಿದ್ದಿತೀಡುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗ ನಿರ್ಭೀತಿ ಯಿಂದ ಕೆಲಸ ಮಾಡಬೇಕು ಒಂದು ವೇಳೆ ಭೀತಿಯಿಂದ ಕೆಲಸ ಮಾಡಿದರೇ ಪ್ರಜಾಪ್ರಭುತ್ವವೇ ಅಪಾಯಕ್ಕೆ ತಲುಪುತ್ತದೆ. ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣದಿಂದ ದೂರ ಇದ್ದವರನ್ನು ಹತ್ತಿರ ಮಾಡುತ್ತಿದೆ, ಹತ್ತಿರ ಇದ್ದವರನ್ನು ದೂರ ಮಾಡುತ್ತಿದೆ. ಆಧುನಿಕ ತಂತ್ರಜ್ಞಾನದ ಪ್ರಭಾವ ಪತ್ರಿಕಾ ರಂಗದ ಮೇಲೂ ಬಿದ್ದಿದೆ. ಎಲ್ಲಾ ಸವಾಲುಗಳ ನಡುವೆ ನಿರ್ಭೀತೀಯ, ವಸ್ತುನಿಷ್ಠ, ಸತ್ಯದ ಸುದ್ದಿಗೆ ಆದ್ಯತೆ ಸಿಗಬೇಕು. ಆ ನಿಟ್ಟಿನಲ್ಲಿ ಚಿಂತನೆ ನಡೆಯಬೇಕು ಎಂದರು.

    ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಇಂದು ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾ ಗಿದೆ. ಪ್ರತಿಯೊಬ್ಬರು ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಪತ್ರಿಕೆಗಳು ಸಮಾಜದ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದು, ವಸ್ತುನಿಷ್ಟ ವರದಿ ಮೂಲಕ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದರ.

    ಜಿಲ್ಲಾಧಿಕಾರಿ ಸಿ.ಎನ್.ಮೀನಾನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿನ ಕುಗ್ರಾಮಗಳು ಇಂದಿಗೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿದ್ದು, ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿವೆ. ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಮೂಲಕ ನೆರವಾಗುತ್ತಿವೆ ಎಂದರು.

    ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಮಾತನಾಡಿ, ಪತ್ರಕರ್ತರು ಪತ್ರಿಕಾ ಮೌಲ್ಯ, ಸಿದ್ಧಾಂತಗಳ ನಡುವೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜೇಗೌಡ ವಿವಿಧ ಸಂಘಸಂಸ್ಥೆಗಳ ಮುಖಂಡರು ಮತ್ತು ಪದಾಧಿಕಾರಿಗಳು ಇದ್ದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಅಧ್ಯಕ್ಷತೆವಹಿಸಿದ್ದರು. ಪ್ರೆಸ್‌ಕ್ಲಬ್ ಉಪಾಧ್ಯಕ್ಷ ಸಿ.ಡಿ.ಚಂದ್ರೇಗೌಡ ಸ್ವಾಗತಿಸಿದರು. ಎ.ಎನ್.ಮೂರ್ತಿ ಪ್ರಾರ್ಥಿಸಿದರು. ಎನ್.ಕೆ.ಗೋಪಿ ನಿರೂಪಿಸಿದರು.

    The fourth arm of democracy is the great contribution of the press to the society