Category: ಚಿಕ್ಕಮಗಳೂರು

  • ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಬೆಂಬಲ

    ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಬೆಂಬಲ

    ಚಿಕ್ಕಮಗಳೂರು: ಮುಂದಿನ ದಿನಗಳಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಹೋರಾಟ ಮಾಡುವ ಉದ್ದೇಶ ಹೊಂದಿರುವ ಜಾಗತಿಕ ಲಿಂಗಾಯತ ಮಹಾಸಭಾಗಳು ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು, ವೀರಶೈವರು ಲಿಂಗ ಧರಿಸುವುದರಿಂದ ಧರ್ಮದ ಮಾನ್ಯತೆಯ ಹೋರಾಟಕ್ಕೆ ಕೈಜೋಡಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹೆಚ್. ಗಂಗಾಧರಪ್ಪ ಶಿವಪುರ ಮನವಿ ಮಾಡಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಧರ್ಮದ ಜಾತಿ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಮನವಿ ಮಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್‌ರವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿ ಧರ್ಮಗಳ ಬಗ್ಗೆ ಇರುವ ಗೊಂದಲಗಳನ್ನು ಹೋಗಲಾಡಿಸಲು ನಿರ್ಧರಿಸಿರುವುದು ಶ್ಲಾಘನೀಯ ಎಂದರು.

    ಈ ಆಯೋಗವು ವೀರಶೈವ ಮತ್ತು ಲಿಂಗಾಯತರು ಇಬ್ಬರನ್ನೂ ಆಹ್ವಾನಿಸಿ ದಾಖಲೆಗಳನ್ನು ಪರಿಶೀಲಿಸಿ ವೀರಶೈವವು ದಾಖಲೆ ಸರಿಯಿಲ್ಲವೆಂದು ಧರ್ಮ ಲಕ್ಷಣಗಳನ್ನು ಹೊಂದಿಲ್ಲ. ಲಿಂಗಾಯತರು ಆಧಾರ ಸಹಿತಿ ದಾಖಲೆ ಸಲ್ಲಿಸಿದ್ದರಿಂದ ಲಿಂಗಾಯತ ಒಂದು ಸ್ವತಂತ್ರ ಧರ್ಮವೆಂದು ನಿರ್ಧರಿಸಿ ಮಂತ್ರಿಮಂಡಲದಲ್ಲಿ ಅನುಮೋದಿಸಿ ಮಾನ್ಯತೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

    ಹಿಂದೆ ಬಿ.ಎಸ್. ಯಡೀಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವೀರಶೈವ ಧರ್ಮಕ್ಕೆ ಮಾನ್ಯತೆ ಕೊಡಬೇಕೆಂದು ಕೇಂದ್ರಸರ್ಕಾರಕ್ಕೆ ಮನವಿ ಸಲ್ಲಿಸಿದಾಗ ವೀರಶೈವ ಒಂದು ಶಾಖೆಯಾಗಿದ್ದು, ಮಾನ್ಯತೆಗೆ ಯೋಗ್ಯವಾಗಿಲ್ಲ ಎಂದು ತಿರಸ್ಕರಿಸಿದರು ಎಂದು ಮಾಹಿತಿ ನೀಡಿದರು.

    ಪ್ರಾರಂಭದಲ್ಲಿ ವೀರಶೈವ ಮಹಾಸಭಾ ಎಂದಿತ್ತು. ಇತ್ತೀಚೆಗೆ ವೀರಶೈವ ಲಿಂಗಾಯತ ಎಂದು ಲಿಂಗಾಯತರಿಗೆ ಜಂಟಿಯಾಗಿ ಮಾನ್ಯತೆ ಸಿಗಬಾರದೆಂದು ಸಮಾಜದಲ್ಲಿ ಗೊಂದಲ ಉಂಟುಮಾಡುತ್ತಿದ್ದಾರೆಂದು ದೂರಿದರು.

    ಈ ಹಿನ್ನೆಲೆಯಲ್ಲಿ ವೀರಶೈವರ ಸಹವಾಸವೇ ಬೇಡವೆಂದು ಹಿರಿಯ ಐಎಎಸ್ ನಿವೃತ್ತ ಅಧಿಕಾರಿ ಎಂ. ಶಿವಾನಂದ ಜಾಮ್‌ದಾರ್ ರವರು ಜಾಗತಿಕ ಲಿಂಗಾಯತ ಮಹಾಸಭಾವನ್ನು ಸ್ಥಾಪಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಘಟಿಸುತ್ತಿದ್ದಾರೆ ಎಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಾಳೂರು ಚನ್ನಪ್ಪ, ಕಡೂರು ತಾಲ್ಲೂಕು ಅಧ್ಯಕ್ಷ ಗಣೇಶ್, ತರೀಕೆರೆ ಅಧ್ಯಕ್ಷ ಚಂದ್ರಶೇಖರ್, ಮಹಿಳಾ ಘಟಕದ ಎಸ್. ಗಾಯಿತ್ರಮ್ಮ ಉಪಸ್ಥಿತರಿದ್ದರು.

    Support for recognition of Lingayat independent religion

  • ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ

    ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ

    ಚಿಕ್ಕಮಗಳೂರು: ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಮೇ ೧೮ ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

    ಮೇ ೧೮ ರಂದು ಮಧ್ಯಾಹ್ನ ೧೨ ಗಂಟೆಗೆ ಐಡಿಎಸ್‌ಜಿ ಕಾಲೇಜು ಮೈದಾನದ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ಮಧ್ಯಾಹ್ನ ೧೨.೧೫ಕ್ಕೆ ಬ್ಯಾನ್ಯನ್ ಬುಲೋವಾರ್ಡ್‌ನಲ್ಲಿ ನಡೆಯುವ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು,

    ಮಧ್ಯಾಹ್ನ ೧ ಗಂಟೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ/ ಚರ್ಚೆ ನಡೆಸುವರು.

    ಮಧ್ಯಾಹ್ನ ೨.೧೫ ಗಂಟೆಗೆ ಐಡಿಎಸ್‌ಜಿ ಕಾಲೇಜು ಮೈದಾನದ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ತೆರಳುವರು ಎಂದು ಸನ್ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಹಾಗೂ ಪದನಿಮಿತ್ತ ಸರ್ಕಾರದ ವಿಶೇಷ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    District tour of Chief Minister Siddaramaiah

     

  • ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ನಗರದಲ್ಲಿ  ತಿರಂಗಾಯಾತ್ರೆ

    ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ನಗರದಲ್ಲಿ  ತಿರಂಗಾಯಾತ್ರೆ

    ಚಿಕ್ಕಮಗಳೂರು: ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ ಹೋರಾಡಿದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಸಂಘಟನೆಯಿಂದ ನಗರದಲ್ಲಿ ಶುಕ್ರವಾರ ತಿರಂಗಾಯಾತ್ರೆ ನಡೆಸಲಾಯಿತು.

    ಒಂಕಾರೇಶ್ವರ ದೇವಾಲಯದಿಂದ ಆಜಾದ್ ಪಾರ್ಕ್ ವೃತ್ತದ ತನಕ ಸಾವಿರ ಅಡಿ ಉದ್ದದ ರಾಷ್ಟ್ರಧ್ವಜ ಹಿಡಿದು ನೂರಾರು ಜನ ಘೋಷಣೆ ಕೂಗುತ್ತಾ ಸಾಗಿದರು. ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ‘ನಾವೆಲ್ಲರು ಒಂದಾಗಿ ಸೈನಿಕರ ಜತೆಗೆ ನಾವಿದ್ದೇವೆ ಎಂಬ ದೃಷ್ಟಿಯಿಂದ ತಿರಂಗಯಾತ್ರೆ ಆಯೋಜಿಸಲಾಗಿದೆ’ ಎಂದರು.

    ಪಾಕಿಸ್ತಾನ ಭಯೋತ್ಪಾದನೆಯ ಬೀಜ ಬಿತ್ತಿ ಆ ಮೂಲಕ ಭಾರತವನ್ನು ದುರ್ಬಲಗೊಳಿಸುವ ಸಂಚು ಮಾಡುತ್ತಿದೆ. ಭಯೋತ್ಪಾದನೆ ಕೊನೆಯಾಗಬೇಕು. ಭಯೋತ್ಪಾದನೆ ಮಾನವತೆಗೆ ವಿರೋಧವಾಗಿದೆ. ಪ್ರಜಾಪ್ರಭುತ್ವಕ್ಕೆ ಭಯ ಹುಟ್ಟಿಸುತ್ತಿದೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಹೀಗಾಗಿ ಇದು ಕೊನೆಯಾಗಬೇಕು. ಕೇವಲ ಭಯೋತ್ಪಾದಕರನ್ನು ಮಟ್ಟ ಹಾಕುವುದರಿಂದ ಇದು ಕೊನೆಯಾಗಲ್ಲ. ಭಯೋತ್ಪಾದನೆಯ ಡಿಎನ್‌ಎ ನಾಶಪಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

    ‘ದೇಶದ ಒಳಗೂ ಕೆಲವರಿದ್ದಾರೆ. ದೇಶದ ಅನ್ನ ತಿಂದು ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗುವವರಿಗೆ ತಕ್ಕ ಪಾಠ ಕಲಿಸಬೇಕಿದೆ. ಭಾರತದ ಜತೆ ನಾವೆಲ್ಲರೂ ಇದ್ದೇವೆ ಎಂಬ ಸಂದೇಶವನ್ನು ಈ ತಿರಂಗಾಯಾತ್ರೆಯ ಮೂಲಕ ಸಾರಿದ್ದೇವೆ’ ಎಂದರು.

    ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮುಖಂಡ ಡಿ.ಎನ್. ಜೀವರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ್ ಶೆಟ್ಟಿ, ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್, ಬಿಜೆಪಿ ಜಿಲ್ಲಾ ವಕ್ತಾರ ಪುಟ್ಟಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ , ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಿಂತಾ ಅನಿಲ್ ಕುಮಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರೇಮಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ, ಮುಖಂಡ ಕೋಟೆ ರಂಗನಾಥ್ ಇದ್ದರು.

    Tiranga Yatra in the city to boost the morale of the soldiers

  • ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಯಶಸ್ವಿ ಮಾಕ್ ಡ್ರಿಲ್ ಪ್ರಯೋಗ

    ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಯಶಸ್ವಿ ಮಾಕ್ ಡ್ರಿಲ್ ಪ್ರಯೋಗ

    ಚಿಕ್ಕಮಗಳೂರು:  ನಗರ ಹೊರವಲಯದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಶುಕ್ರವಾರ ಸಂಜೆ ನಡೆದ ಮಾಕ್ ಡ್ರಿಲ್ ಕಾರ್ಯಾಚರಣೆಯಲ್ಲಿ ಸಂಸ್ಥೆಯ ಕಟ್ಟಡದ ಮೇಲೆ ಹೊಗೆಯುಗುಳಿದ ಚಿತ್ರಣದೊಂದಿಗೆ ಅಣಕು ಬಾಂಬ್ ಸ್ಫೋಟ ಪ್ರದರ್ಶನದ ಯಶಸ್ವಿ ಪ್ರಯೋಗ ಗಮನ ಸೆಳೆಯಿತು.

    ಕಟ್ಟಡದ ಮೇಲೆ ಬಾಂಬ್ ಸ್ಫೋಟಗೊಂಡಿತೆಂಬ ಹಿನ್ನೆಲೆಯಲ್ಲಿ ಡಮ್ಮಿ ಬುಲೆಟ್‌ಗಳ ಶಬ್ದ ಕೇಳಿದ ತಕ್ಷಣ ಗಾಯಾಳುಗಳಾಗಿದ್ದ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಕಟ್ಟಡದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಗಾಬರಿಗೊಂಡು ಓಡುತ್ತಿರುವುದು ಹಾಗೂ ಆರು ಉಗ್ರಗಾಮಿಗಳು ಸಂಸ್ಥೆಯ ಕಟ್ಟಡ ಪ್ರವೇಶಿಸಿರುವ ಮಾಹಿತಿಯನ್ನು ಪೊಲೀಸ್ ಕಂಟ್ರೋಲ್ ರೂಂಗೆ ರವಾನಿಸಲಾಯಿತು.

    ಕಟ್ಟಡದಲ್ಲಿ ೪೫೦ ವಿದ್ಯಾರ್ಥಿಗಳು ಹಾಗೂ ಸುಮಾರು ೫೦ ಸಿಬ್ಬಂದಿ ಇದ್ದರು. ಇದೇ ಸಂದರ್ಭ ಬಾಂಬ್ ಸ್ಫೋಟದಿಂದ ಹಲವು ವಿದ್ಯಾರ್ಥಿಗಳು ಗಾಯಗೊಂಡು ಪ್ರಜ್ಞಾಹೀನರಾಗಿರುವ ಸನ್ನಿವೇಶ ಉಂಟು ಮಾಡಲಾಯಿತು. ಈ ವೇಳೆ ರಕ್ಷಣಾ ಕಾರ್ಯ ವಿಳಂಬವಿಲ್ಲದೆ ಸಾಗಿತು.

    ಕಾರ್ಯಾಚರಣೆಗೆ ಅಗ್ನಿಶಾಮಕ ದಳ, ಪೊಲೀಸ್, ಗೃಹರಕ್ಷಕ ದಳ, ಎನ್.ಸಿ.ಸಿ. ಕಮಾಂಡ್ ತಂಡ ಧಾವಿಸಿ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲಾಯಿತು. ಸ್ಟ್ರೆಚರ್‌ನಲ್ಲಿ ಗಾಯಾಳುಗಳು ಹಾಗೂ ಇನ್ನಿತರ ಅಸ್ವಸ್ಥರನ್ನು ಅಂಬ್ಯುಲೆನ್ಸ್‌ನತ್ತ ಹೊತ್ತು ತರುತ್ತಿದ್ದ ದೃಶ್ಯವನ್ನು ಸೃಷ್ಟಿಸಿದ್ದು ವಿಶೇಷವಾಗಿತ್ತು. ಆರೈಕೆ ಕೇಂದ್ರದಲ್ಲಿ ಚಿಕಿತ್ಸೆಗೊಳಪಡಿಸಿದ ಸಂದರ್ಭ ವೈದ್ಯಾಧಿಕಾರಿಗಳು ತಪಾಸಣೆ, ಶುಶ್ರೂಷೆ ನಡೆಸುವ ಸನ್ನಿವೇಶವನ್ನು ಕೂಡ ಯಶಸ್ವಿಯಾಗಿ ನಡೆಸಲಾಯಿತು.

    ಇದೇ ಸಂದರ್ಭದಲ್ಲಿ ಕಟ್ಟಡದ ಒಳಗೆ ಮೂರು ಹಾಗೂ ಹೊರಗೆ ಪತ್ತೆಯಾದ ಒಂದು ಬಾಂಬ್‌ಗಳನ್ನು ಬಾಂಬ್ ನಿಷ್ಕ್ರಿಯದಳದ ಅಧಿಕಾರಿ, ಸಿಬ್ಬಂದಿ ನಿಷ್ಕ್ರಿಯಗೊಳಿಸಿದರು. ಕಟ್ಟಡದಿಂದ ದೂರ ಉಳಿದು ಸುರಕ್ಷತೆ ಕಾಯ್ದುಕೊಳ್ಳುವಂತೆ ಪೊಲೀಸ್ ಇಲಾಖೆಯಿಂದ ಮೈಕ್‌ನಲ್ಲಿ ಘೋಷಣೆ ಮಾಡುತ್ತಿದ್ದುದು ಗಮನ ಸೆಳೆಯುತ್ತಿತ್ತು.

    ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಇಂದು ನಡೆದ ಅಣಕು ಪ್ರದರ್ಶನ ಕೇವಲ ಸಾಂಕೇತಿಕವಾಗಿದ್ದು, ಬಾಂಬ್ ಸ್ಫೋಟಗೊಂಡರೆ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ಅರಿವು ಮೂಡಿಸುವುದಕ್ಕೆ ಸೀಮಿತವಾಗಿದೆ. ಘಟನೆಯಲ್ಲಿ ಮೂರು ಲೈವ್ ಬಾಂಬ್‌ಗಳು ಪತ್ತೆಯಾಗಿದ್ದವು. ಈ ದಾಳಿಯಲ್ಲಿ ಒಟ್ಟು ೨೨ ಮಂದಿ ಗಾಯಗೊಂಡಿದ್ದು, ಅವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಂತೆ ಚಿತ್ರಣ ಸೃಷ್ಟಿಸಲಾಗಿತ್ತು.

    ಒಟ್ಟಾರೆ ಘಟನೆಯಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಅಗ್ನಿಶಾಮಕದಳ ಹಾಗೂ ಆರೋಗ್ಯ ಇಲಾಖೆಯ ಮಾನವ ಶಕ್ತಿ ಬಳಸಿ ಕಾರ್ಯಾಚರಣೆ ನಡೆಸಲಾಯಿತು. ಇದೊಂದು ಅಣಕು ಪ್ರದರ್ಶನವಷ್ಟೇ ಆಗಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ತಿಳಿಸಿದ ಅವರು, ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ಎಷ್ಟು ಸನ್ನದ್ಧರಾಗಿದ್ದಾರೆ. ಇದೇ ರೀತಿಯ ಅವಘಡಗಳು ಸಂಭವಿಸಿದರೆ ಎಷ್ಟು ಸದೃಢವಾಗಿ ಪರಿಸ್ಥಿತಿಯನ್ನು ಎದುರಿಸಬಹುದು ಎಂಬ ಬಗ್ಗೆ ಇದೊಂದು ಪ್ರದರ್ಶನ ಎಂದು ಹೇಳಿದರು.  

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ್ ಬಾಬು, ಜಿಲ್ಲಾ ಸರ್ಜನ್ ಮೋಹನ್ ಕುಮಾರ್, ಪೊಲೀಸ್, ಅಗ್ನಿಶಾಮಕ ದಳ, ಗೃಹರಕ್ಷಕ ದಳದ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.

    Successful mock drill experiment at Institute of Medical Sciences

  • ಮೇ 18ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಮಗಳೂರಿಗೆ ಆಗಮನ

    Hi
    ಮೇ 18 ಮಧ್ಯಾಹ್ನ12ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಚಿಕ್ಕಮಗಳೂರಿಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ
  • ಎಐ ತಂತ್ರಜ್ಞಾನಗಳು ರೋಬೋಟ್‌ಗಳಿಗೆ ಬುದ್ದಿವಂತಿಕೆಗೆ ಪೂರಕ

    ಎಐ ತಂತ್ರಜ್ಞಾನಗಳು ರೋಬೋಟ್‌ಗಳಿಗೆ ಬುದ್ದಿವಂತಿಕೆಗೆ ಪೂರಕ

    ಚಿಕ್ಕಮಗಳೂರು: ಮೆಕ್ಯಾನಿಕಲ್ ಇಂಜಿನಿಯರಿಂಗ್ ರೋಬೋಟ್‌ಗಳ ಯಾಂತ್ರಿಕ ಭಾಗಗಳ ನ್ನು ವಿನ್ಯಾಸಿಸಲು ಹಾಗೂ ಎಐ ತಂತ್ರಜ್ಞಾನಗಳು ರೋಬೋಟ್‌ಗಳಿಗೆ ಬುದ್ಧಿವಂತಿಕೆ ನೀಡಲು ಪೂರಕವಾಗಿ ದೆ ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ಹೇಳಿದರು.

    ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ನಡೆದ ಮೆಕ್ಯಾನಿಕಲ್ ಇಂಜಿನಿ ಯರಿಂಗ್ ಹಾಗೂ ರೊಬೊಟಿಕ್ ಮತ್ತು ಎಐ ಇಂಜಿನಿಯರಿಂಗ್ ಯಾಂತ್ರಿಕ-೨೦೨೫ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಕೃತಕ ಬುದ್ದಿಮತ್ತೆ, ಯಂತ್ರಕಲಿಕೆ ಮತ್ತು ಸಂವೇಧಕ ತಂತ್ರಜ್ಞಾನಗಳಲ್ಲಿನ ಪ್ರಗತಿಗಳು ರೋಬೊಟಿಕ್ಸ್ ನೊಳಗಿನ ಸಾಧ್ಯತೆಗಳು ಮತ್ತು ಅನ್ವಯಿಕೆಗಳನ್ನು ನಿರಂತರವಾಗಿ ವಿಸ್ತರಿಸುತ್ತದೆ. ಅಲ್ಲದೇ ಮುಂದುವರಿಸಲು ಒಂದು ರೋಮಾಂಚಕಾರಿ ಹಾಗೂ ಕ್ರಿಯಾತ್ಮಕ ಕ್ಷೇತ್ರವಾಗಿದೆ ಎಂದು ತಿಳಿಸಿದರು.

    ರೋಬೋಟಿಕ್ ವ್ಯವಸ್ಥೆಗಳ ಪರಿಕಲ್ಪನೆ, ಅಭಿವೃದ್ದಿ ಮತ್ತು ಅನುಷ್ಟಾನದಲ್ಲಿ ಪರಿಣತಿ, ವ್ಯಾಪಕ ಕೌಶಲ್ಯ ಹೊಂದಿರುವ ವೃತ್ತಿಪರ, ಸ್ವತಂತ್ರ್ಯವಾಗಿ ಅಥವಾ ಕನಿಷ್ಟ ಮಾನವ ಹಸ್ತಕ್ಷೇಪದೊಂದಿಗೆ ವ್ಯಾಪಕ ಶ್ರೇಣಿಯ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಬುದ್ದಿವಂತ ಯಂತ್ರಗಳನ್ನು ರಚಿಸುವುದು ಪ್ರಾಥಮಿಕ ಉದ್ದೇಶವಾಗಿದೆ ಎಂದರು.

    ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಅತ್ಯಂತ ಹಳೆಯ ಮತ್ತು ಬಹುಮುಖ ವಿಭಾಗಗಳಲ್ಲಿ ಒಂದಾ ಗಿದೆ. ಭವಿ?ದ ವಾಹನಗಳನ್ನು ವಿನ್ಯಾಸಗೊಳಿಸುವುದು, ಇಂಧನ ವ್ಯವಸ್ಥೆಗಳನ್ನು ಸುಧಾರಿಸುವುದು, ರೋಬೋಟಿಕ್ ಯಾಂತ್ರೀಕರಣವನ್ನು ಅಭಿವೃದ್ಧಿಪಡಿಸುವುದು, ಮೆಕ್ಯಾನಿಕಲ್ ಎಂಜಿನಿಯರಿಂಗ್ ವ್ಯಾಪ್ತಿ ಯು ಊಹಿಸಬಹುದಾದ ಉದ್ಯಮವಾಗಿದೆ ಎಂದು ತಿಳಿಸಿದರು.

    ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ|| ಜಿ.ಎಂ.ಸತ್ಯನಾರಾಯಣ್ ಮಾತನಾಡಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ರೊಬೊಟಿಕ್ ಕೋರ್ಸ್ ರೊಬೊಟಿಕ್ಸ್ ವಿನ್ಯಾಸ, ಪ್ರೋಗ್ರಾಮಿಂಗ್ ಮತ್ತು ಅನು?ನದ ಸಮಗ್ರ ತಿಳುವಳಿಕೆಯನ್ನು ನೀಡುತ್ತದೆ. ವೈವಿಧ್ಯಮಯ ತಾಂತ್ರಿಕ ಪಾತ್ರಗಳಿಗೆ ಕೌಶಲ್ಯ ಅಭಿ ವೃದ್ಧಿಯನ್ನು ಬೆಳೆಸುತ್ತದೆ ಎಂದರು.

    ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥ ಡಾ|| ಎಸ್.ಸಂಪತ್ ಮಾತನಾಡಿ ಇಂದಿನ ಆಧುನಿಕತೆ ಯುಗದಲ್ಲಿ ಪ್ರಪಂಚವು ಹೊಸ ಹೊಸ ತಂತ್ರಜ್ಞಾನಗಳಿಂದ ಪ್ರತಿ ಕ್ಷೇತ್ರದಲ್ಲೂ ಪ್ರಗತಿಯನ್ನು ಕಾಣುತ್ತಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನಗಳೆಡೆ ಹೆಚ್ಚು ಆಸಕ್ತಿ ವಹಿಸುವುದನ್ನು ಕಲಿಯಬೇಕಿದೆ ಎಂದು ತಿಳಿಸಿದರು.
    ಇದೇ ವೇಳೆ ವಿವಿಧ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂ ಗ್‌ನಲ್ಲಿ ಅತ್ಯುತ್ತಮವಾಗಿ ತೇರ್ಗಡೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು. ಬಳಿಕ ವಿದ್ಯಾ ರ್ಥಿಗಳಿದ ಸ್ವಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ|| ವೀರೇಂದ್ರ, ಆಟಿಫಿಶಿಯ ಲ್ ಇಂಟಲಿಜೆಂಟ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥೆ ಡಾ|| ಎಂ.ಆರ್.ಸುನೀತಾ, ಸಿವಿಲ್ ಇಂಜಿನಿಯರ್ ಮುಖ್ಯಸ್ಥ ಡಾ|| ಕಿರಣ್, ಡಾಟಾ ಸೈನ್ಸ್ ಮುಖ್ಯಸ್ಥ ಡಾ|| ಎಂ.ಜಿ.ಆದರ್ಶ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೇಷ್ಮಾ ನಿರೂಪಿಸಿದರು. ವಿನುತ ಸಂಗಡಿಗರು ಪ್ರಾರ್ಥಿಸಿದರು. ಡಾ|| ಜಿ.ಎಂ.ಸತ್ಯನಾರಾಯಣ್ ಸ್ವಾಗತಿಸಿದರು.

    AI technologies help robots become more intelligent

  • ಸಾರ್ವಜನಿಕರ ಪ್ರಶಂಸೆ ವ್ಯಕ್ತವಾದಾಗ ರೋಟರಿ ಸಂಸ್ಥೆಯ ಸೇವೆ ಸಾರ್ಥಕ

    ಸಾರ್ವಜನಿಕರ ಪ್ರಶಂಸೆ ವ್ಯಕ್ತವಾದಾಗ ರೋಟರಿ ಸಂಸ್ಥೆಯ ಸೇವೆ ಸಾರ್ಥಕ

    ಚಿಕ್ಕಮಗಳೂರು: ರೋಟರಿ ಸಂಸ್ಥೆಯ ಸೇವೆ ಸಾರ್ವಜನಿಕರ ಮನಮುಟ್ಟಿ ಪ್ರಶಂಸೆ ವ್ಯಕ್ತವಾದಾಗ ಮಾತ್ರ ಸಾರ್ವಜನಿಕ ಸೇವೆಗೆ ಅರ್ಥ ಬರುವುದರ ಜೊತೆಗೆ ಗೌರವದ ಭಾವನೆ ಬೆಳೆಯುತ್ತದೆ ಎಂದು ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ದೇವ್ ಆನಂದ್ ಹೇಳಿದರು.

    ಅವರು ಇಂದು ಇಲ್ಲಿಗೆ ಸಮೀಪದ ಆವತಿಯಲ್ಲಿ ಏರ್ಪಡಿಸಲಾಗಿದ್ದ ರೋಟರಿ ಕ್ಲಬ್ ಡಿ.೩೧೮೨ ಜೋನ್ ೮ ಚಾರ್ಟರ್ ಪ್ರಸೆಂಟೇಷನ್ ಉದ್ಘಾಟಿಸಿ ಮಾತನಾಡಿ ನೂತನ ಅಧ್ಯಕ್ಷರಿಗೆ ಹಿರಿಯರ ಮಾರ್ಗದರ್ಶನದಲ್ಲಿ ಈ ಆವತಿ ರೋಟರಿ ಕ್ಲಬ್ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಹಾರೈಸಿದ ಅವರು, ರೋಟರಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರದ ಉಪಯೋಗವನ್ನು ಈ ಭಾಗದ ಬಡವರು ಪಡೆದುಕೊಂಡಿದ್ದು, ಇಂತಹ ಸಮಾಜ ಮುಖಿ ಕಾರ್ಯಗಳು ವರ್ಷವಿಡೀ ನಡೆಯುತ್ತಿರಲಿ ಎಂದು ಕಿವಿಮಾತು ಹೇಳಿದರು.

    ೩೨ ಸದಸ್ಯರಿಂದ ಆರಂಭಗೊಂಡ ರೋಟರಿ ಸಂಸ್ಥೆ ಇಂದು ಶೇ.೫೦ ರಷ್ಟು ಸದಸ್ಯರನ್ನು ಹೊಂದಿದ್ದು, ಎಲ್ಲಾ ನೂತನ ಸದಸ್ಯರಿಗೆ ಶುಭಾಶಯ ಕೋರಿದರು.
    ಸದಸ್ಯತ್ವ ಹೆಚ್ಚಳ, ನಿಧಿ ಸಂಗ್ರಹ, ಸೇವಾ ಚಟುವಟಿಕೆ ಇವು ರೋಟರಿ ಕ್ಲಬ್‌ನ ಉದ್ದೇಶವಾಗಿದ್ದು, ಈ ಬಾರಿ ಕಾಫಿ, ಅಡಿಕೆ, ಮೆಣಸಿಗೆ ಉತ್ತಮ ಬೆಲೆ ಬಂದಿರುವುದರಿಂದ ದೇಣಿಗೆ ಸಂಗ್ರಹ ಸುಲಭವಾಗಲಿದೆ. ಪ್ರಕೃತಿಯ ಮಡಿಲಲ್ಲಿ, ಪ್ರಕೃತಿಯ ಸೊಬಗಿನ ಮಧ್ಯೆ ಇರುವ ಆವತಿ ಗ್ರಾಮ ಪುಟ್ಟ ಸ್ವರ್ಗ ಎಂದು ಬಣ್ಣಿಸಿದರು.

    ಆವತಿ ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಬಿ.ಮಹೇಂದ್ರ ಮಾತನಾಡಿ, ಕಳೆದ ೫ ತಿಂಗಳ ಅಧಿಕಾರವಧಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಸಾರ್ವಜನಿಕರಿಗೆ ನೆರವಾಗಿರುವುದು ಸಂತಸ ತಂದಿದೆ. ಬಡವರಿಗೆ ಕಣ್ಣಿನ ತಪಾಸಣೆ ನಡೆಸಿ ಚಿಕಿತ್ಸೆ ಕೊಡಿಸಲಾಗಿದೆ. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಚೆನ್ನಾಗಿದ್ದು, ವೈದ್ಯರಿಲ್ಲದೆ ತೊಂದರೆಯಾಗಿದ್ದು, ಇದನ್ನು ಮನಗಂಡು ವೈದ್ಯರ ನೇಮಕ ಮಾಡುವಲ್ಲಿ ಶ್ರಮಿಸಿದ್ದೇನೆ ಎಂದರು.

    ರೋಟರಿ ಸಂಸ್ಥೆಯ ಸಾರ್ವಜನಿಕ ಸೇವೆಯಲ್ಲಿ ನನ್ನೊಂದಿಗೆ ಕೈಜೋಡಿಸಿರುವ ಎಲ್ಲಾ ಸದಸ್ಯರಿಗೆ ಧನ್ಯವಾದ ಅರ್ಪಿಸಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಚಟುವಟಿಕೆ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು. ಗೋಣಿಬೀಡು ರೋಟರಿ ಕ್ಲಬ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಆವತಿ ರೋಟರಿ ಕ್ಲಬ್ ಸ್ಥಾಪಿಸುವ ಕುರಿತು ಹಾಗೂ ನಡೆದುಬಂದ ದಾರಿಯ ಬಗ್ಗೆ ಸ್ಮರಿಸಿದರು.

    ರೋಟರಿಯನ್ ಅರುಣ್ ಮಾತನಾಡಿ, ಆವತಿ ರೋಟರಿ ಕ್ಲಬ್ ಇಂದು ಅಧಿಕೃತವಾಗಿ ಉದ್ಘಾಟನೆಯಾಗಿದ್ದು, ಉತ್ತಮ ಸಮಾಜಮುಖಿ ಸೇವೆ ಮಾಡಲಿ ಎಂದು ಶುಭಹಾರೈಸಿದರು. ಸಮಾಜ ಸೇವೆಗೆ ಪ್ರಥಮ ಹೆಜ್ಜೆ ಈ ರೋಟರಿ ಸಂಸ್ಥೆಯಾಗಿದ್ದು, ನಾಮಫಲಕ ಹಾಕಿದರೆ ಸಾಲದು, ಈ ಭಾಗದಲ್ಲಿರುವ ಕೂಲಿಕಾರ್ಮಿಕರು, ರೈತರು, ಬೆಳೆಗಾರರು, ಬಡವರಿಗೆ ಸ್ನೇಹ ಮತ್ತು ಸೇವೆ ಎಂಬ ದ್ಯೇಯದೊಂದಿಗೆ ಕಾರ್ಯಚಟುವಟಿಕೆ ನಡೆಸುತ್ತಿರುವ ರೋಟರಿ ಸಂಸ್ಥೆ ಪರಿಸರ, ಶಿಕ್ಷಣ, ರಸ್ತೆ ಸುರಕ್ಷತೆ, ಆರೋಗ್ಯ ಮುಂತಾದ ಕಾರ್ಯಕ್ರಮಗಳನ್ನು ಪ್ರತೀ ವರ್ಷ ನಡೆಸುವಂತಾಗಲಿ ಎಂದು ಹೇಳಿದರು.

    ಈ ಸಂದರ್ಭದಲ್ಲಿ ರೋಟರಿ ಸದಸ್ಯತ್ವ ಅಭಿಯಾನಕರಾದ ಅಶೋಕ್‌ಕುಮಾರ್ ಶೆಟ್ಟಿ ಮಾತನಾಡಿ, ಸದಸ್ಯತ್ವವನ್ನು ಪ್ರತಿಯೊಬ್ಬರೂ ಪಡೆಯುವ ಮೂಲಕ ಸಮಾಜಸೇವೆಗೆ ಸಮರ್ಪಿಸಿಕೊಳ್ಳಬೇಕೆಂದು ವಿನಂತಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಪ್ರಥಮ ಮಹಿಳೆ ರೇಖಾ ದೇವಾನಂದ್, ಜಯಕಿಶನ್ ಶೆಟ್ಟಿ, ವೈ.ಡಿ. ಲೋಕೇಶ್, ಪ್ರಥಮ್, ಪ್ರಸನ್ನ, ರತನ್ ಕುಮಾರ್, ಸಿ.ಸಿ. ಸವಿನ್, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕು ಮೊದಲು ಹೊಸಹಳ್ಳಿ ಬಸ್ ನಿಲ್ದಾಣದ ಬಳಿ ರೋಟರಿ ಲಾಂಚನವನ್ನು ಬಿಡುಗಡೆ ಮಾಡಿದರು.

    Rotary’s service is meaningful when it is appreciated by the public.

  • ಇಂದು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಾಕ್‌ಡ್ರಿಲ್‌

    ಇಂದು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಾಕ್‌ಡ್ರಿಲ್‌

    ಚಿಕ್ಕಮಗಳೂರು:  ಕೇಂದ್ರ ಗೃಹ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಮೇ ೧೬ ರಂದು ಸಂಜೆ ೪ ರಿಂದ ೬ ಗಂಟೆಯವರೆಗೆ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಾಕ್‌ಡ್ರಿಲ್ (ಆಪರೇಷನ್ ಅಭ್ಯಾಸ್) ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್.ತಿಳಿಸಿದರು.

    ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಿವಿಲ್ ಡಿಫೆನ್ಸ್ ಮಾಕ್‌ಡ್ರಿಲ್ (ಅಣಕು ಪ್ರದರ್ಶನ) ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಮೇ ೧೬ ರಂದು ಸಿವಿಲ್ ಡಿಫೆನ್ಸ್ ಮಾಕ್‌ಡ್ರಿಲ್ ಅನ್ನು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಮಾಕ್‌ಡ್ರಿಲ್‌ಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಮಾಕ್‌ಡ್ರಿಲ್ ವ್ಯವಸ್ಥಿತವಾಗಿ ಮಾಡಿಕೊಳ್ಳಬೇಕು. ಇದಕ್ಕೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ವ್ಯವಸ್ಥೆ ಮಾಡಬೇಕು. ಅಗತ್ಯ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಿದರು.

    ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಾಕ್‌ಡ್ರಿಲ್ ಮಾಡಲು ಸೂಕ್ತವಾದ ಸ್ಥಳವನ್ನು ಗುರುತಿಸಿಕೊಳ್ಳುವಂತೆ ತಿಳಿಸಿದ ಅವರು, ಎಲ್ಲಾ ರೀತಿಯ ವ್ಯವಸ್ಥೆ, ಕಂಟ್ರೋಲ್ ರೂಂ, ಅಗ್ನಿಶಾಮಕ ವ್ಯವಸ್ಥೆ, ಅಂಬ್ಯುಲೆನ್ಸ್ ವ್ಯವಸ್ಥೆ, ಆಸ್ಪತ್ರೆ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಮಾಕ್‌ಡ್ರಿಲ್ ಅನ್ನು ವ್ಯವಸ್ಥಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಆತ್ಮರಕ್ಷಣೆಯ ಹಿತದೃಷ್ಟಿಯಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಜಿ.ಪಂ.ನ ಉಪ ಕಾರ್ಯದರ್ಶಿ ಶಂಕರ್ ಕೊರವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನ್‌ಕುಮಾರ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶ್ರೀಧರ್, ಡಿವೈಎಸ್‌ಪಿ ಶೈಲೇಂದ್ರ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತಾಧಿಕಾರಿ ಹೆಚ್.ಎಸ್.ಪರಮೇಶ್ ಮುಂತಾದವರು ಉಪಸ್ಥಿತರಿದ್ದರು.

    Mock drill at Chikmagalur Institute of Medical Sciences today

  • ಅಹಿತಕರ ಘಟನೆ ಸಂಭವಿಸದಂತೆ ರಾಜ್ಯಾದ್ಯಂತ ಕಟ್ಟೆಚ್ಚರ

    ಅಹಿತಕರ ಘಟನೆ ಸಂಭವಿಸದಂತೆ ರಾಜ್ಯಾದ್ಯಂತ ಕಟ್ಟೆಚ್ಚರ

    ಚಿಕ್ಕಮಗಳೂರು: ಮುಂದಿನ ೩೦ ದಿನಗಳಲ್ಲಿ ನಾಗರಿಕರ ಮೇಲೆ ಅಥವಾ ಯಾವುದೇ ಪ್ರಮುಖ ನೆಲೆ ಮತ್ತು ರಚನೆಗಳ ಮೇಲೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹೆಚ್ಚಿನ ಮುನ್ನೆಚ್ಚರಿಕೆ ಮತ್ತು ನಿರಂತರ ಕಟ್ಟೆಚ್ಚರ ವಹಿಸಿ ಕಾವಲು ಕಾಯುವಂತೆ ರಾಜ್ಯದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲಾಗಿದೆ.

    ರಾಜ್ಯದ ಮುಖ್ಯಮಂತ್ರಿಗಳು ಮೇ ೧೦ ರಂದು ವಿವಿಧ ಇಲಾಖೆಗಳ ಉನ್ನತಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿದ ಬಳಿಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳಬೇಕೆಂದು ಕಟ್ಟುನಿಟ್ಟಾದ ಸೂಚನೆ ನೀಡಲಾಗಿದೆ. ಭಾರತ-ಪಾಕಿಸ್ತಾನ ಸಂಘರ್ಷದ ಬಳಿಕ ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರು(ಡಿಜಿಎಂಒ)ಗಳು ಭೂಮಿ, ವಾಯು ಮತ್ತು ಸಮುದ್ರದಲ್ಲಿ ಗುಂಡಿನ ದಾಳಿಯನ್ನು ನಿಲ್ಲಿಸುವುದಾಗಿ ಘೋಷಿಸಿದ ನಂತರ, ಮೇ ೧೦ ಮತ್ತು ೧೧ರ ರಾತ್ರಿ ಪಾಕಿಸ್ತಾನ ಗುಂಡಿನ ದಾಳಿ, ಡ್ರೋನ್ ದಾಳಿಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

    ತುರ್ತು ನಿಯಂತ್ರಣಾ ಕೊಠಡಿ ಸ್ಥಾಪನೆಗೆ ಕ್ರಮ:
    ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತುರ್ತು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿ ಕಾರ್ಯ ತತ್ಪರರಾಗಬೇಕು. ಸಾರ್ವಜನಿಕ ಸಮಾರಂಭ ಮತ್ತಿತರ ಸಭೆಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ನಿಯಮ ಪಾಲನೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಜಿಲ್ಲಾಮಟ್ಟದ ನಿಯಂತ್ರಣ ಕೊಠಡಿ ಸಂಖ್ಯೆಗಳು ಮತ್ತು ೧೧೨ – ಪೊಲೀಸ್ ತುರ್ತು ಸಂಖ್ಯೆಗಳನ್ನು ಜನಪ್ರಿಯಗೊಳಿಸಲು ಮಾಹಿತಿ ಅಭಿಯಾನ ಕೈಗೊಳ್ಳುವುದು. ಕಾನೂನು ಮತ್ತು ಸುವ್ಯವಸ್ಥೆಯನ್ನು ಉತ್ತಮವಾಗಿ ನಿರ್ವಹಿಸಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು.ಇತರ ಜಾರಿ ಸಂಸ್ಥೆಗಳ ವಿಸ್ತರಣೆ ಮತ್ತು ಹೆಚ್ಚಿನ ಸೇವೆಗಳಿಗಾಗಿ ಗೃಹರಕ್ಷಕರುಗಳನ್ನು ನಿಯೋಜಿಸಿಕೊಳ್ಳಬೇಕು.

    ಯಾವುದೇ ತುರ್ತು ಪರಿಸ್ಥಿತಿ ಅಥವಾ ಘಟನೆಯನ್ನು ತಕ್ಷಣವೇ ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಇಲಾಖೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಇವರ ಮುಖೇನ ಮುಖ್ಯಮಂತ್ರಿಗಳಿಗೆ ವರದಿ ಮಾಡಬೇಕು. ನಕಲಿ ಅಥವಾ ಸುಳ್ಳು ಸುದ್ದಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾಗುವ ವಿಷಯಗಳನ್ನು ತಕ್ಷಣ ನೈಜ ಸಂಗತಿಯೊಂದಿಗೆ ಪರಿಶೀಲಿಸಿ ಇವುಗಳ ಮೂಲ ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು.

    ರಕ್ಷಣಾ ವ್ಯವಸ್ಥೆ ಪರಿಶೀಲನೆ ಅಗತ್ಯ:
    ಪ್ರಮುಖ ಸಾರ್ವಜನಿಕ ನೆಲೆಗಳು, ಸೂಕ್ಷ್ಮ ಪ್ರದೇಶಗಳು ಮತ್ತು ಸ್ಥಾಪನೆಗಳನ್ನು ಗುರುತಿಸಿ, ಹೆಚ್ಚಿನ ರಕ್ಷಣೆಯನ್ನು ಒದಗಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಮತ್ತು ಇತರ ನಾಗರಿಕರ ಸೇವಾ ಇಲಾಖೆಗಳಲ್ಲಿ ಅಗತ್ಯವಿರುವ ರಕ್ಷಣಾ ಉಪಕರಣಗಳು ಮತ್ತು ವಾಹನಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.

    ಐತಿಹಾಸಿಕ ದತ್ತಾಂಶಗಳ ಅಧಾರದ ಮೇಲೆ ಹಿಂಸಕರು ಗೂಂಡಾಗಳು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವವರನ್ನು ಗುರುತಿಸಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಗಳ (ಬಿಎನ್‌ಎಸ್‌ಎಸ್) ಕಾಯ್ದೆಯಡಿ ಅಗತ್ಯವಿರುವ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದು. ಮುನ್ನೆಚ್ಚರಿಕೆಗಳನ್ನು ನೀಡಲು ಅಗತ್ಯವಿರುವ ಸೈರನ್‌ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಸೂಕ್ಷ್ಮ ಪ್ರದೇಶಗಳು ಮತ್ತು ಪ್ರಮುಖ ನೆಲೆ ಸ್ಥಾಪನೆಗಳ ಆಸುಪಾಸುಗಳಲ್ಲಿ ಡ್ರೋನ್‌ಗಳ ಹಾರಾಟ ನಿಷೇಧಿಸಬೇಕು.

    ಯಾವುದೇ ತುರ್ತು ಪರಿಸ್ಥಿತಿ ಉಂಟಾದ ಸಂದರ್ಭಗಳಲ್ಲಿ, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಪ್ರಸಾರ ಮಾಡಬೇಕು ಹಾಗೂ ಸಮಸ್ಯೆಯನ್ನು ಪರಿಹರಿಸಬೇಕು. ಎಲ್ಲಾ ಜಿಲ್ಲೆಗಳಲ್ಲಿ ಸಂಭವನೀಯ ದಾಳಿಗಳನ್ನು ನಿಯಂತ್ರಿಸಲು ಕಲ್ಪಿಸಲಾದ ಅಣಕು ಪ್ರದರ್ಶನಗಳನ್ನು ಮೇ ೧೭ರೊಳಗೆ ಪೂರ್ಣಗೊಳಿಸಬೇಕು. ನಿರ್ಣಾಯಕ ಮತ್ತು ಪ್ರಮುಖ ಮೂಲ ಸೌಕರ್ಯಗಳ ಉಸ್ತುವಾರಿ ಹೊಂದಿರುವ ಅಧಿಕಾರಿಗಳೊಂದಿಗೆ ಹಾಟ್-ಲೈನ್‌ಗಳನ್ನು ಸ್ಥಾಪಿಸಬೇಕು ಮತ್ತು ಅಣಕು ಪ್ರದರ್ಶನಗಳ ಸಮಯದಲ್ಲಿ ಪರೀಕ್ಷಿಸಬೇಕು.

    ಸಮುದಾಯಗಳ ಮುಖಂಡರು ಮತ್ತು ಇತರ ಪ್ರಮುಖ ನಾಗರಿಕರೊಂದಿಗೆ ವಾಟ್ಸಾಪ್ ಗುಂಪುಗಳು ಸಕ್ರಿಯವಾಗಿರಬೇಕು, ಯಾವುದೇ ಸುಳ್ಳು ವದಂತಿಗಳನ್ನು ಹರಡಿದಲ್ಲಿ ತಕ್ಷಣವೇ ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು.

    ಔಷಧಿ ಲಭ್ಯತೆ-ಆಹಾರ ಸಾಮಗ್ರಿ ಪರಿಶೀಲಿಸಿ:

    ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ವಿಶೇಷವಾಗಿ ನಾಗರಿಕರಿಗೆ ಯಾವುದೇ ತೊಂದರೆ ಮತ್ತು ಅಪಘಾತಗಳನ್ನು ನಿರ್ವಹಿಸಲು ಸನ್ನದ್ಧವಾಗಿರಬೇಕು.

    ಅಗತ್ಯ ಆಹಾರ ಸಾಮಗ್ರಿಗಳ ಕೃತಕ ಕೊರತೆ ಸೃಷ್ಟಿಸುವ ಯಾವುದೇ ಸಂಗ್ರಹಣೆ, ದಾಸ್ತಾನು ಚಟುವಟಿಕೆಗಳು ನಡೆಯದಂತೆ ಕ್ರಮ ವಹಿಸಬೇಕು. ನ್ಯಾಯಬೆಲೆ ಅಂಗಡಿಗಳು ಸುಗಮವಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಆಹಾರ ಧಾನ್ಯಗಳ ಸಾಗಣೆಯನ್ನು ಮೇಲ್ವಿಚಾರಣೆ ಮಾಡಬೇಕು.
    ಸಾರ್ವಜನಿಕರಲ್ಲಿ ವಿಶ್ವಾಸ ಮತ್ತು ಸಾಮರ್ಥ್ಯ ವೃದ್ಧಿ ಹಾಗೂ ಸಿದ್ಧತೆ ಕ್ರಮಗಳನ್ನು ಖಚಿತಪಡಿಸಿಕೊಳ್ಳಬೇಕು. ಸಂಬಂಧಿತ ಎಲ್ಲ ಇಲಾಖೆಗಳೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಮನ್ವಯ ಸಭೆ ನಡೆಸಿ, ಸಿದ್ಧತೆ ಮತ್ತು ಸಿದ್ಧತೆಯ ಉದ್ದೇಶಕ್ಕಾಗಿ ಮೇಲಿನ ಕ್ರಿಯಾ ಅಂಶಗಳು ಹಾಗೂ ಸಂಬಂಧಿತ ಇಲಾಖಾವಾರು ಕ್ರಿಯಾ ಅಂಶಗಳನ್ನು ಗುರುತಿಸಿ ಕಾರ್ಯ ನಿರ್ವಹಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು.

    ಸಂಘರ್ಷ, ದಾಳಿಗಳಿಂದ ಉದ್ಭವಿಸುವ ಪರಿಸ್ಥಿತಿ ಅನ್ವಯ ಮತ್ತು ಪ್ರಸ್ತುತ ಭಾರತ-ಪಾಕಿಸ್ತಾನ ಸಂಘರ್ಷ ಸಂದರ್ಭದಲ್ಲಿ, ಸಿದ್ಧತೆ, ಪ್ರತಿಕ್ರಿಯೆ, ಆಪಾಯಗಳ ಗುರುತಿಸುವಿಕೆ ಮತ್ತು ಅವುಗಳ ನಿರ್ವಹಣೆಗೆ ಅಗತ್ಯವಿರುವ ಕ್ರಮ ಸೇರಿದಂತೆ ಅಗತ್ಯ ಮಾಹಿತಿ ಮತ್ತು ದತ್ತಾಂಶಗಳನ್ನು ಒಳಗೊಂಡ ಅಧ್ಯಾಯವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯಲ್ಲಿ ಸೇರ್ಪಡೆ ಮಾಡಬೇಕು.

    ವಿಪತ್ತು ನಿರ್ವಹಣಾ ಪ್ರಾಧಿಕಾರದ್ದೇ ಜವಾಬ್ದಾರಿ:
    ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ)ಗಳು ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಸೆಕ್ಷನ್ ೩೪ ಮತ್ತು ಇತರ ನಿಬಂಧನೆಗಳ ಅಡಿಯಲ್ಲಿ ಯುದ್ಧದಂತಹ ಪರಿಸ್ಥಿತಿ ಸೇರಿದಂತೆ ಯಾವುದೇ ವಿಪತ್ತುಗಳನ್ನು ನಿರ್ವಹಿಸಲು ಎಲ್ಲಾ ಪೂರ್ವಭಾವಿ ಸಿದ್ಧತೆ, ಪರಿಹಾರ ಮತ್ತು ಪ್ರತಿಕ್ರಿಯೆ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ಮತ್ತು ಜವಾಬ್ದಾರಿಯನ್ನು ಹೊಂದಿದೆ.

    ರಾಜ್ಯದ ಎಲ್ಲಾ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ)ಗಳು ಮೇಲೆ ಪಟ್ಟಿ ಮಾಡಲಾದ ಮತ್ತು ಜಿಲ್ಲಾಮಟ್ಟದಲ್ಲಿ ಅಗತ್ಯವೆಂದು ನಿರ್ಣಯಿಸಿದ ಸಿದ್ಧತೆ ಮತ್ತು ಸಾರ್ವಜನಿಕ ವಿಶ್ವಾಸ ವೃದ್ಧಿ ಕಾರ್ಯಕ್ರಮಗಳನ್ನು ಖಚಿತಪಡಿಸುವುದು. ಈ ಸಂಬಂಧದ ಚಟುವಟಿಕೆ ಆಯೋಜಿಸಲು ಹಣಕಾಸು ಅನುದಾನಗಳಿಗೆ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಅನ್ವಯ ಪ್ರಸ್ತಾವನೆಯನ್ನು ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ)ಗೆ ಕಳುಹಿಸಲು ಕೋರಲಾಗಿದೆ.

    Statewide alert to prevent any untoward incident

  • ಆಲ್ದೂರು ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷರಾಗಿ ಭರತ್ ಆಯ್ಕೆ

    ಆಲ್ದೂರು ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷರಾಗಿ ಭರತ್ ಆಯ್ಕೆ

    ಚಿಕ್ಕಮಗಳೂರು: ತಾಲ್ಲೂಕಿನ ಆಲ್ದೂರು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಎ.ಬಿ. ಭರತ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಎನ್.ಚೇತನ್‌ಕುಮಾ ರ್ ಕಾರ್ಯನಿರ್ವಹಿಸಿದರು.

    ಬಳಿಕ ಅಭಿನಂದನೆ ಸಲ್ಲಿಸಿ ಮಾತನಾಡಿದ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಪಂಚಾಯಿತಿ ಸ್ಥಾನ ಹೊತ್ತಿರುವ ನೂತನ ಉಪಾಧ್ಯಕ್ಷರ ಮೇಲೆ ಮಹತ್ತರ ಜವಾಬ್ದಾರಿಯಿದೆ. ಗ್ರಾಮಸ್ಥರ ನಿರೀಕ್ಷೆಗೂ ಮೀರಿ ಕೆಲ ಸ ಮಾಡಲಾಗದಿದ್ದರೂ ಜನತೆಯ ಮನಸ್ಸನ್ನು ಗೆಲ್ಲುವಂತ ನಿಟ್ಟಿನಲ್ಲಿ ಅವಧಿ ಪೂರೈಸಬೇಕು ಎಂದರು.

    ಸರ್ವ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದಿಂದ ಅನುದಾನವನ್ನು ಇತಿಮಿತಿಯಲ್ಲಿ ಬಳಸಿಕೊ ಂಡು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಪ್ರತಿನಿಧಿಗಳ ಕರ್ತ ವ್ಯ. ಹೀಗಾಗಿ ಹಂತ ಹಂತವಾಗಿ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಿ ಸಾಗಬೇಕಿದೆ ಎಂದು ಹೇಳಿ ದರು.

    ಇಂದು ಪಂಚಾಯಿತಿಯಲ್ಲಿ ಹಿರಿಯರು-ಕಿರಿಯರ ಸಮ್ಮೀಲನವಾಗಿದೆ. ನೂತನ ಉಪಾಧ್ಯಕ್ಷರು ಅಂದಿ ನಿಂದಲೂ ಭಾಜಪದಲ್ಲಿ ಗುರುತಿಸಿಕೊಂಡು ಗ್ರಾ.ಪಂ. ಸದಸ್ಯರಾಗಿ ಇದೀಗ ಉಪಾಧ್ಯಕ್ಷ ಸ್ಥಾನ ಗಳಿಸಲು ಜನ ಸಂಪರ್ಕವೇ ಕಾರಣ. ಬಾಲ್ಯದಲ್ಲಿ ಇದೇ ಗ್ರಾ.ಪಂ.ಗೆ ಪತ್ರಿಕೆ ಹಂಚುವ ಯುವಕ ಇದೀಗ ಉಪಾಧ್ಯಕ್ಷ ಸ್ಥಾನ ಕ್ಕೇರಿರುವ ಹಾದಿ ಸಾಮಾನ್ಯವಲ್ಲ ಎಂದರು.

    ಭಾಜಪ ಆಲ್ದೂರು ಮಂಡಲ ಅಧ್ಯಕ್ಷ ರವಿ ಬಸರವಳ್ಳಿ ಮಾತನಾಡಿ ಸುಮಾರು ೨೬ ಸದಸ್ಯರನ್ನು ಒಳ ಗೊಂಡಿರುವ ಅತಿದೊಡ್ಡ ಗ್ರಾ.ಪಂ. ಆಲ್ದೂರು ಸಂಪೂರ್ಣ ಮಲೆನಾಡು ಭಾಗದಿಂದ ಕೂಡಿದೆ. ಜೊತೆಗೆ ವಸತಿ, ನಿವೇಶನ ರಹಿತರ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಆದ್ಯತೆಯನ್ನು ಉಪಾಧ್ಯಕ್ಷರು ಬಡವರ್ಗ ಕ್ಕೆ ನೀಡಲಿ ಎಂದು ಆಶಿಸಿದರು.

    ನೂತನ ಉಪಾಧ್ಯಕ್ಷ ಎ.ಬಿ.ಭರತ್ ಮಾತನಾಡಿ ಅತ್ಯಧಿಕ ಮತಗಳಿಂದ ಗ್ರಾ.ಪಂ. ಸದಸ್ಯನಾದ ತಮಗೆ ಸರ್ವ ಪಕ್ಷಗಳ ಒಪ್ಪಂದ ಮೇರೆಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ ಭ್ರಷ್ಟಮು ಕ್ತ ಗ್ರಾ.ಪಂ.ವಾಗಿ ನಿರ್ಮಿಸಲು ಸದಾಕಾಲ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ, ಧರ್ಮಗುರುಗಳಾದ ರಾಘವೇಂದ್ರ, ಫಾದರ್ ಸಂತೋಷ್, ಬ್ಯಾರಿ ಮಸೀದಿ ಮೌಲಾನ, ಮುಖಂಡರುಗಳಾದ ಕೆ.ಟಿ.ರಾಧಾಕೃಷ್ಣ, ಕುರುವಂಗಿ ವೆಂಕಟೇಶ್, ಕೆ.ಆರ್.ಅನಿಲ್‌ಕುಮಾರ್, ಸಂತೋಷ್ ಕೋಟ್ಯಾನ್, ಸೀತರಾಮಭರಣ್ಯ, ನವರಾಜ್, ಗ್ರಾ.ಪಂ. ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

    Bharat elected as vice-president of Aldur Gram Panchayat