Category: ಚಿಕ್ಕಮಗಳೂರು

  • ಜಾತಿಗಣತಿ ಸಮೀಕ್ಷೆಯಲ್ಲಿ ವೀರಶೈವ-ಲಿಂಗಾಯಿತವೆಂದು ನಮೂದಿಸಿ

    ಜಾತಿಗಣತಿ ಸಮೀಕ್ಷೆಯಲ್ಲಿ ವೀರಶೈವ-ಲಿಂಗಾಯಿತವೆಂದು ನಮೂದಿಸಿ

    ಚಿಕ್ಕಮಗಳೂರು: ರಾಜ್ಯಸರ್ಕಾರ ಕೈಗೊಂಡಿರುವ ಜಾತಿಗಣತಿ ಸಮೀಕ್ಷೆಯಲ್ಲಿ ಉಪ ಪಂಗ ಡಗಳ ಸಮಾಜ ಬಾಂಧವರು ವೀರಶೈವ ಲಿಂಗಾಯಿತ ಎಂದು ನಮೂದಿಸಿ ಜನಾಂಗದ ಶಕ್ತಿಯನ್ನು ಬಲಿಷ್ಟ ಗೊಳಿಸಬೇಕು ಎಂದು ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಮಂಗಳವಾರ ಸಂಜೆ ನಡೆದ ಸರ್ವ ಶರಣರ ಜಾಥಾ ಮತ್ತು ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿ ಅಧಿಕಾರದ ದಾಹ ಅಥವಾ ರಾಜಕಾರಣದ ದೃಷ್ಟಿಯಿಂದ ಸಮಾಜ ಬಾಂಧವರು ಬಲಿಯಾಗಬಾರದು ಹೀಗಾಗಿ ಮುಂಬರುವ ಜಾತಿ ಗಣತಿಯಲ್ಲಿ ವೀರಶೈವರು ಧರ್ಮಗಳ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಕಡ್ಡಾಯವಾಗಿ ನಮೂದಿಸುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು.

    ವೀರಶೈವ ಲಿಂಗಾಯತ ಪರಂಪರೆಯಲ್ಲಿರುವವರು ತಮ್ಮ ದಾಖಲಾತಿಗಳಲ್ಲಿ ಉಪಪಂಗಡಗಳನ್ನು ನಮೂದಿಸಿವೆ. ಕೆಲವರು ವೀರಶೈವ ಲಿಂಗಾಯತ ಹೆಸರಿಗೆ ಜೊತೆಗೆ ತಮ್ಮ ಮೂಲಜಾತಿಯನ್ನೂ ನಮೂ ದಿಸಿದ್ದಾರೆ. ವೀರಶೈವ ಲಿಂಗಾಯತ ಉಪಜಾತಿಯವರಿಗೆ ಮೂಲ ಜಾತಿಗೆ ಸಮಸ್ಯೆಯಾಗದಿರಲು ಈ ನಿರ್ಣ ಯ ಕೈಗೊಳ್ಳಲಾಗಿದೆ ಎಂದರು.

    ಬಸವತತ್ವ ಪೀಠದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ತಾತ್ವಿಕ, ಧಾರ್ಮಿಕವಾಗಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಗೆಹರಿದಿಲ್ಲ. ರಾಜಕೀಯ, ಸಾಮಾಜಿಕವಾಗಿ ನಾವುಗಳು ಒಗ್ಗಟ್ಟಾಗದಿದ್ದರೆ ಸಮಾಜಕ್ಕೆ ಭವಿಷ್ಯವಿಲ್ಲ. ಹೀಗಾಗಿ ಸಮಾಜದಲ್ಲಾಗುತ್ತಿರುವ ಗೊಂದಲವನ್ನು ಪರಿಹರಿಸಲು ಸ್ವಾಮೀಜಿಗಳ ವರ್ಗ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಬೇಕಿದೆ ಎಂದು ಹೇಳಿದರು.

    ಜಿಲ್ಲೆಯಲ್ಲಿನ ಪ್ರಪ್ರಥಮ ಸಭೆ ಸಣ್ಣಮಟ್ಟಿನ ಬೀಜದ ಸ್ವರೂಪಿಯಲ್ಲಿ ಉದಯಿಸಿದೆ. ಜಾತಿಗಣತಿಯಲ್ಲಿ ಗೊಂದಲಗಳು ಸಮಾಜವನ್ನು ಕಾಡುತ್ತಿದೆ. ಬಗೆಹರಿಸಲು ಎಲ್ಲಾ ಉಪಪಂಗಡಗಳು ಒಟ್ಟಾಗಬೇಕು. ಪ್ರಸ್ತುತ ಒಗ್ಗಟ್ಟಿನ ಕೊರತೆಯಿಂದ ಶೇ.೪೦ ರಷ್ಟು ಜನಸಂಖ್ಯೆ ಕ್ಷೀಣಿಸುತ್ತಿದೆ ಎಂದು ತಿಳಿಸಿದರು.

    ಇತ್ತೀಚೆಗೆ ಸಮಾಜವನ್ನು ಒಳಗೆ ಹಾಗೂ ಹೊರಗಿನಿಂದ ದಾರಿ ತಪ್ಪಿಸುವ ಶಕ್ತಿಗಳು ಜಾಗೃತವಾಗುತ್ತಿ ವೆ. ಅಲ್ಲದೇ ನಮ್ಮಗಳ ನಡುವೆ ವಿಷಬೀಜ ಭಿತ್ತುವ ಕೆಲಸವಾಗುತ್ತಿದೆ. ನಾವೆಲ್ಲರೂ ಒಂದಾಗಲು ಸಮಾಜದ ಇತಿಹಾಸ, ಧಾರ್ಮಿಕ ಮೌಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ದುರಾಚಾರಗಳು ಕಡೆಗಣಿಸಿ ವೀರಶೈವರು ಲಿಂಗಾಯಿತರು ಒಂದೇ ಎಂಬ ಮನೋಭಾವನೆ ಮೂಡಿಸಬೇಕು ಎಂದರು.

    ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಮಾಜವು ಎಷ್ಟೇ ಒತ್ತಡ ಕೊಟ್ಟರು, ಕೊನೆಯದಾಗಿ ನಿರ್ಧಾರ ಕೈಗೊಳ್ಳುವುದು ವಿಧಾನಸೌಧದಲ್ಲಿ ಎಂದ ಅವರು ಆ ನಿರ್ಣ ಯನ್ನು ಬದಲಾಯಿಸಲು ಸಮಾಜದ ಶಾಸಕರು ಕೈಜೋಡಿಸಬೇಕು. ಪ್ರಪ್ರಥಮವಾಗಿ ಜಿಲ್ಲೆಯ ಶಾಸಕರಿಂದ ಲೇ ಈ ನಿರ್ಣಯಕ್ಕೆ ಮುಂದಾಗಬೇಕು ಎಂದು ಹೇಳಿದರು.

    ಸಮುದಾಯದ ಅಜ್ಞಾನದ ಕೊರತೆಯಿಂದ ಇಂದು ವೀರಶೈವ-ಲಿಂಗಾಯಿತರು ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಈ ಜಾತಿಗಣತಿ ಎಂಬುದು ಬ್ರಿಟೀಷರ್ ಕಾಲದ ಆಳ್ವಿಕೆಯಲ್ಲಿತ್ತು. ಅಂದು ಭಾರತೀ ಯರನ್ನು ಛಿದ್ರಗೊಳಿಸಲು ಜಾತಿ ಬೀಜ ಬಿತ್ತಿದ ಪರಿಣಾಮ ಇಂದು ಜಾತಿಯಿಂದಲೇ ಅಧಿಕಾರ ಗಿಟ್ಟಿಸಿಕೊಳ್ಳ ಲು ಪಕ್ಷಗಳು ಮುಂದಾಗುತ್ತಿವೆ ಎಂದು ತಿಳಿಸಿದರು.

    ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ವೀರಶೈವ-ಲಿಂಗಾಯಿತ ಒಗ್ಗಟ್ಟಾಗಲು ಜಿಲ್ಲೆಯಿಂದ ಅಡಿಪಾ ಯ ಹಾಕಿರುವುದು ಉತ್ತಮ ಬೆಳವಣಿಗೆ. ಈ ಜಾಥಾ ರಾಜ್ಯಾದ್ಯಂತ ಪಸರಿಸುವಂತಾಗಬೇಕು. ಈ ನಿರ್ಣ ಯದ ಎತ್ತಿಹಿಡಿಯಲು ಸಮಾಜದ ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು, ನಾಯಕರು ಸದಾಕಾಲ ಒಗ್ಗಟ್ಟಿನಿಂದ ಕೈಜೋಡಿಸಬೇಕಿದೆ ಎಂದರು.

    ಈ ಸಂದರ್ಭದಲ್ಲಿ ಕರಿಸಿದ್ದೇಶ್ವರ ಮಠದ ಶ್ರೀ ಶಿವಶಂಕರ ಶಿವಯೋಗಿ ಮಹಾಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷ ರುದ್ರಮುನಿ, ತಾಲ್ಲೂಕು ಅಧ್ಯಕ್ಷ ಕೆ.ಸಿ.ನಿಶಾಂತ್, ಸರ್ವ ಶರ ಣರ ಸಮಿತಿ ಮುಖ್ಯಸ್ಥ ನಂಜೇಶ್ ಬೆಣ್ಣೂರು, ಸಮಾಜ ಬಾಂಧವರಾದ ಧನಂಜಯ್, ದರ್ಶನ್, ಕೀರ್ತ ನ್, ಕೃತಿಕ್ ಮತ್ತಿತರರು ಉಪಸ್ಥಿತರಿದ್ದರು.

    Enter Veerashaiva-Lingayat in the caste census survey

  • ಅಡ್ಡಪಲ್ಲಕ್ಕಿ-ಸಾರೋಟ ಮೆರವಣಿಗೆ ಇಲ್ಲ

    ಅಡ್ಡಪಲ್ಲಕ್ಕಿ-ಸಾರೋಟ ಮೆರವಣಿಗೆ ಇಲ್ಲ

    ಚಿಕ್ಕಮಗಳೂರು: ಯುದ್ಧ ತಣ್ಣಗಾಗಿ ಭಾರತೀಯಸೇನೆ ಶಾಂತಿ ಸುರಕ್ಷೆ ಅನುಭವಿಸುವವರೆಗೆ ಅಡ್ಡಪಲ್ಲಕ್ಕಿ-ಸಾರೋಟ ಮೆರವಣಿಗೆಯನ್ನು ಸ್ಥಗಿತಗೊಳಿಸುವುದಾಗಿ ಶ್ರೀ ಶೈಲದ ಗಿರಿರಾಜಸೂರ್‍ಯ ಸಿಂಹಾಸನ ಮಹಾಪೀಠದ ಜಗದ್ಗುರು ಶ್ರೀಶ್ರೀಶ್ರೀ ೧೦೦೮ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಪ್ರಕಟಿಸಿದರು.

    ಬಡಗನಾಡು ಹೇಮರಡ್ಡಿ ವೀರಶೈವ ಜನಾಂಗ ಸಂಘದ ಬಾಸೂರು ಘಟಕದ ನೇತೃತ್ವದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಶಿವಶರಣೆ ಶ್ರೀ ಹೇಮರಡ್ಡಿಮಲ್ಲಮ್ಮ ಅವರ ಜಯಂತ್ಯುತ್ಸವದ ದಿವ್ಯ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿ ಪೆಹಲ್ಗಾವ್ ಧಾಳಿಯ ಮೂಲಕ ಪಾಕಿಸ್ತಾನ ಕೆಟ್ಟ ಕೃತ್ಯ ಮಾಡಿದೆ. ಏರ್‌ಸ್ಟ್ರೈಕ್ ಮೂಲಕ ಭಾರತ ದಿಟ್ಟ ಉತ್ತರ ಕೊಟ್ಟಿದೆ. ಉಗ್ರವಾದಿಗಳಿಗೆ ಪ್ರತ್ಯುತ್ತರ ಕೊಡುವ ಕೆಲಸವನ್ನು ಭಾರತೀಯ ಸೇನೆ ಮಾಡುತ್ತಿದ್ದು ಪಾಕ್ ನಮ್ಮ ಮೇಲೆ ಧಾಳಿ ನಡೆಯುತ್ತಿರುವುದು ದುರಾದೃಷ್ಟಕರ. ಯುದ್ಧದ ಸ್ವರೂಪವನ್ನು ಪಡೆದು ವ್ಯಾಪಕವಾಗುತ್ತಿರುವ ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ ಎಂದ ಜಗದ್ಗುರುಗಳು, ಯುವಕರು ಸೈನ್ಯ ಸೇರಿ ದೇಶ ಸೇವೆ ಮಾಡಬೇಕೆಂದು ಕರೆ ನೀಡಿದರು.

    ಯುದ್ಧದ ಸಂಕ್ರಮಣ ಕಾಲದಲ್ಲಿ ಸಂಭ್ರಮಾಚರಣೆಯ ಪ್ರತೀಕವಾದ ಅಡ್ಡಪಲ್ಲಕ್ಕಿ ಉತ್ಸವ. ಸಾರೋಟ ಸೇರಿದಂತೆ ಭವ್ಯ ಮೆರವಣಿಗೆಗಳು ಬೇಡ.

    ಲಿಂಗಪೂಜೆಯ ಮೂಲಕ ಮಲ್ಲಮ್ಮ ಶ್ರೀಶೈಲಮಲ್ಲಿಕಾರ್ಜುನನ ಕೃಪೆಗೆ ಪಾತ್ರಳಾದವಳು. ಆದರೆ ಇಂದು ಲಿಂಗಸಂಸ್ಕೃತಿಯಿಂದ ಭಕ್ತರನ್ನು ದೂರಮಾಡುವ ವ್ಯರ್ಥ ಪ್ರಯತ್ನ ಕೆಲವರಿಂದಾಗುತ್ತಿದೆ ಎಂದು ವಿಷಾದಿಸಿದ ಜಗದ್ಗುರುಗಳು, ತಾಳ್ಮೆ-ಸಹನೆಗೆ ಮತ್ತೊಂದು ಹೆಸರು ಸಾಧ್ವಿಮಲ್ಲಮ್ಮ ಎಂದರು.

    ಸಮಾರಂಭ ಉದ್ಘಾಟಿಸಿದ ಭಾರತ ಭೂಸೇನೆಯ ನಿಕಟಪೂರ್ವ ಉಪದಂಡನಾಯಕ ಲೆ.ಜ.ಬಗ್ಗವಳ್ಳಿ ಎಸ್.ರಾಜು ಸಮಾರಂಭ ಉದ್ಘಾಟಿಸಿ ಮಾತನಾಡಿ ದರು. ಕಾಶೀ ಮತ್ತು ಉಜ್ಜಯಿನಿ ಜಗದ್ಗುರುಗಳು ಹೇಮರಡ್ಡಿಮಲ್ಲಮ್ಮ ಹಾಗೂ ವಾಮನನ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಕಡೂರು ಶಾಸಕ ಕೆ.ಎಸ್.ಆನಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿದರು. ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಬೆಂಗಳೂರು ಕೇಂದ್ರ ಸಂಘದ ಅಧ್ಯಕ್ಷ ಶೇಖರೇಗೌಡ ಮಾಲಿಪಾಟೀಲ ಮತ್ತು ಡಾ.ಶಂಭುಬಳಗಾರ್ ಮಾತನಾಡಿದರು.

    ಬಡಗನಾಡು ಶ್ರೀ ಹೇಮರಡ್ಡಿ ವೀರಶೈವ ಜನಾಂಗ ಸಂಘದ ಬಾಸೂರು ಘಟಕದ ಅಧ್ಯಕ್ಷ ಬಿ.ಕೆ.ವಸಂತಕುಮಾರ ಸಮಾರಂಭದ ಅಧ್ಯಕ್ಷತವಹಿಸಿದ್ದರು. ಗಿರಿಯಾಪುರ ಕೇಂದ್ರಸಂಘದ ಅಧ್ಯಕ್ಷ ಎಚ್.ಸಿ.ರೇವಣಸಿದ್ದಪ್ಪ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ವಿನಯಕುಮಾರ್ ಸ್ವಾಗತಿಸಿ, ಲಿಂಗರಾಜು ನಿರೂಪಿಸಿದರು.

    No palanquin-charoen procession

  • ಮೀಸಲು ಅರಣ್ಯದಿಂದ ಮುಕ್ತ ಮಾಡುವಂತೆ ಮನವಿ

    ಮೀಸಲು ಅರಣ್ಯದಿಂದ ಮುಕ್ತ ಮಾಡುವಂತೆ ಮನವಿ

    ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಕೂವೆ ಕಲ್ಮನೆ ಗ್ರಾಮದ ಸರ್ವೆ ನಂಬರ್ ೪೯, ೫೦ ರ ಪ್ರದೇಶ ಜನವಸತಿಯಾಗಿದ್ದು ಅದನ್ನು ಮೀಸಲು ಅರಣ್ಯದಿಂದ ಮುಕ್ತ ಮಾಡುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ಆಗ್ರಹಿಸಿದೆ.

    ಒಕ್ಕೂಟದ ಅಧ್ಯಕ್ಷ ಎಚ್.ಬಿ.ಶಿವಣ್ಣ ಮತ್ತಿತರೆ ಪದಾಧಿಕಾರಿಗಳು ಮಂಗಳವಾರ ಅರಣ್ಯ ಸಂರಕ್ಷಣಾಧಿಕಾರಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

    ಸರ್ವೆ ನಂಬರ್ ೪೯ ಮತ್ತು ೬೧ ರ ಜಾಗ ಜನವಸತಿ ಪ್ರದೇಶವಾಗಿರುವುದರಿಂದ ಇದನ್ನು ಮೀಸಲು ಅರಣ್ಯ ಮಾಡಲು ಸ್ಥಳೀಯ ಜನರ ವಿರೋಧವಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ನಡಾವಳಿ ಮಾಡಲಾಗಿದೆ. ಈ ಜಮೀನಿನ ಸ್ಥಳ ತನಿಖೆ ಮಾಡುವಂತೆ ಆಗ್ರಹಿಸಿ ಕಂದಾಯ ಇಲಾಖೆಗೆ ಮನವಿ ಮಾಡಿದ ಪರಿಣಾಮ ಉಪತಹಸೀಲ್ದಾರ್, ರೆವಿನ್ಯೂ ಇನ್ಸ್‌ಫೆಕ್ಟರ್, ವಿಎ ಅವರು ಸ್ಥಳ ತನಿಖೆ ಮಾಡಿ ಶಿವಮೊಗ್ಗ ಅರಣ್ಯ ವ್ಯವಸ್ಥಾಪಕರಿಗೆ ವರದಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ವರದಿಯಲ್ಲಿ ಈ ಪ್ರದೇಶ ಜನವಸತಿಯಿಂದ ಕೂಡಿದ್ದಾಗಿದೆ ಎಂದು ತಿಳಿಸಿದ್ದಾರೆ. ಆದರೂ ಇನ್ನೂ ಅದನ್ನು ಮೀಸಲು ಅರಣ್ಯದಿಂದ ಕೈಬಿಟ್ಟು ಜನವಸತಿ ಪ್ರದೇಶ ಎಂದು ಘೋಷಿಸುವ ಮಾರ್ಪಾಡು ಮಾಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ವೆ ನಂಬರ್ ೪೯ ಮತ್ತು ೫೧ ನ್ನು ಬಿಟ್ಟು ಸರ್ವೆ ನಂಬರ್ ೪೬ ನ್ನು ಮೀಸಲು ಅರಣ್ಯ ಮಾಡಲು ಸ್ಥಳೀಯರು ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ಮನವಿ ಪರಿಗಣಿಸಿ ಜನವಸತಿ ಪ್ರದೇಶವನ್ನು ಅರಣ್ಯದಿಂದ ತೆರವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಂದ್ರ, ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮತ್ತಿತರರಿದ್ದರು.

    Request to free the reserve from the forest

  • ಪದವೀಧರರು ಸ್ವತಂತ್ರ್ಯವಾಗಿ ಬದುಕುವುದನ್ನು ಕಲಿಯಿರಿ

    ಪದವೀಧರರು ಸ್ವತಂತ್ರ್ಯವಾಗಿ ಬದುಕುವುದನ್ನು ಕಲಿಯಿರಿ

    ಚಿಕ್ಕಮಗಳೂರು: ಪದವೀಧರರು ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು. ಪಾಲಕರು ಹಾಗೂ ಸಮಾಜದ ಒಳಿತನ್ನು ಬಯಸುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಶ್ರೀ ಆದಿಚು ಂಚನಗಿರಿ ಮಹಾಸಂಸ್ಥಾನದ ಮಠದ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹೇಳಿದರು.

    ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಡೆದ ಬಿ.ಇ., ಎಂ.ಟೆಕ್., ಎಂಬಿಎ ಅಂ ತಿಮ ವ?ದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಆದಿಚುಂಚನಗಿರಿ ವಿಶ್ವ ವಿದ್ಯಾಲಯದಿಂದ ಪದವಿ ಪಡೆದು ಹೊಸ ಪ್ರಪಂಚ ಪ್ರವೇಶಿಸುತ್ತಿರುವ ಪದ ವೀಧರರ ನಿಜವಾದ ಜೀವನ ಈಗ? ಆರಂಭವಾಗಲಿದೆ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳು ವುದನ್ನು ಕಲಿತುಕೊಳ್ಳಬೇಕು. ನಿಮ್ಮ ಮೇಲೆ ಪೋ?ಕರು ಸಾಕ? ನಿರೀಕ್ಷೆಯಿದೆ ಎಂದರು.

    ಪದವಿ ಅಭ್ಯಾಸಿಸುವ ವೇಳೆಯಲ್ಲಿ ವಿದ್ಯಾರ್ಥಿಗಳು ಅನೇಕ ತುಂಟಾಟಗಳ ನಡುವೆಯು ಅಂತಿಮ ವಾ ಗಿ ಸಮಾಜದ ಮುಖ್ಯವಾಹಿನಿಗೆ ಧಾವಿಸಿದ್ದೀರಿ. ಇದೀಗ ಬದುಕು ಕಟ್ಟಿಕೊಳ್ಳುವ ಸಮಯವಾಗಿದೆ. ಕಳೆದ ಸಮಯ ಹಿಂತಿರುಗಿಬಾರದು. ಹಾಗಾಗಿ ಮುಂದಿನ ಭವಿಷ್ಯ ರೂಪಿಸುವ ಉದ್ಯೋಗದತ್ತ ದಾಪು ಹಾಕಬೇಕಿ ದೆ ಎಂದು ತಿಳಿಸಿದರು.

    ಶಿಕ್ಷಕರು ಹಾಗೂ ಪಾಲಕರ ಕನಸನ್ನು ಈಡೇರಿಸುವ ಮುಖ್ಯ ಜವಾಬ್ದಾರಿ ವಿದ್ಯಾರ್ಥಿಗಳ ಕೈಯಲ್ಲಿದೆ. ಹಲವಾರು ಕಂಪನಿಗಳಲ್ಲಿ ದೈಹಿಕ ಸಾಮರ್ಥ್ಯ, ಆವಭಾವ ನೋಡಿ ಉದ್ಯೋಗ ನೀಡುವುದಿಲ್ಲ, ಪ್ರತಿಭೆ ಎನ್ನು ವುದು ಮನದಟ್ಟಾಗಿದ್ದರೆ ಕಂಪನಿಗಳು ತಾನಾಗಿಯೇ ಅವಕಾಶವನ್ನು ಕಲ್ಪಿಸಿಕೊಡಲಿದೆ ಎಂದರು.

    ಇದೀಗ ರಾಷ್ಟ್ರವು ಯುದ್ಧದ ಕರಿಮೋಡದಿಂದ ನಿರಾಳವಾಗಿದೆ. ಗಡಿಯಲ್ಲಿ ಸೈನಿಕರ ನಿರಂತರ ಪರಿಶ್ರ ಮದಿಂದ ದೇಶ ಸುರಕ್ಷತವಾಗಿದೆ. ಅಲ್ಲದೇ ದೇಶಕ್ಕಾಗಿ ಪ್ರಾಣತೆತ್ತ ಯೋಧರು ದೇಶದ ಅಸ್ಮತೆ, ಸಾವಭೌ ಮತ್ವದ ಪ್ರತೀಕವಾಗಿರುವ ಕಾರಣ ದೊಡ್ಡದೊಂದು ನಮನ ಎಲ್ಲರೂ ಸಲ್ಲಿಸಬೇಕು ಎಂದು ಹೇಳಿದರು.

    ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಸತತ ನಾಲ್ಕುವರ್ಷಗಳಿಂದ ಕಾಲೇಜಿನಲ್ಲಿ ತಾಂತ್ರಿಕ ವ್ಯಾಸಂಗ ವನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸಿದ ಅವರು ಉದ್ಯೋಗಕ್ಕೆ ತೆರಳಿದರೂ ಜೀವಭಾಷೆ ಕನ್ನಡವಾಗಿರಬೇಕು. ಆಂಗ್ಲಭಾಷೆ ಬದುಕಿನ ಒಂದು ಭಾಗವಾಗಿ ರಬೇಕು ಎಂದು ತಿಳಿಸಿದರು.

    ದೇಶ-ವಿದೇಶಗಳಲ್ಲಿ ಹಲವಾರು ಕಾಲೇಜುಗಳನ್ನು ಸ್ಥಾಪಿಸಿ ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನಕ್ಕೆ ಪೂರ ಕವಾದ ಆದಿಚುಂಚನಗಿರಿ ಮಠವು ನಾಡುಕಂಡ ಅದ್ಬುತ ಮಠಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಮಠದ ಬಾಲಗಂಗಾಧರನಾಥ ಶ್ರೀಗಳ ಆರ್ಶೀವಾದ, ನಿರ್ಮಲನಾಥನಂದ ಸ್ವಾಮೀಜಿ ನೇತೃತ್ವದಲ್ಲಿ ಇನ್ನ ಷ್ಟು ಹೆಚ್ಚು ಪ್ರಗತಿ ಸಾಧಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

    ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ ಪದವಿ ಪೂರೈಸಿ ಮುಖ್ಯವಾಹಿನಿಗೆ ಬರುತ್ತಿರುವ ಹಾದಿ ಸುಲಭದ್ದಲ್ಲ. ಕಲ್ಲು-ಮುಳ್ಳಿನಿಂದ ಕೂಡಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಪ್ರತಿಭೆ ಎಂಬುದು ಜನನದಲ್ಲೇ ಇರಲಿದೆ. ಅನಾವರಣಗೊಳಿಸುವ ಕಾರ್ಯಕ್ಕೆ ಪಾಲಕರು ನೀರೆರೆದು ಪೋಷಿ ಸಬೇಕು ಎಂದು ಕಿವಿಮಾತು ಹೇಳಿದರು.

    ಮೈಸೂರು ವಿಶ್ವವಿದ್ಯಾಲಯ ಕುಲಪತಿ ಎನ್.ಕೆ.ಲೋಕನಾಥ್ ಮಾತನಾಡಿ ವಿದ್ಯಾಭ್ಯಾಸದ ಕಲಿಕೆಯ ಕ್ಷಣಗಳು ಅತ್ಯುತ್ತಮವಾಗಿದ್ದು ಹಲವಾರು ಅವಕಾಶ ಸಿಗಲಿರುವ ಕಾರಣ ಸೂಕ್ಷ್ಮವಾಗಿ ಆಯ್ಕೆ ಮಾಡಿಕೊಳ್ಳ ಬೇಕು. ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಸೀಮಿತರಾಗದೇ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೂ ಪೂರಕವಾಗಿ ರಬೇಕು ಎಂದು ಸಲಹೆ ಮಾಡಿದರು.

    ಈ ಸಂದರ್ಭದಲ್ಲಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥಸ್ವಾಮೀಜಿ, ಮಂಗಳೂರು ಶಾಖೆಯ ಧರ್ಮಪಾಲನಾಥ ಸ್ವಾಮೀಜಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್, ಎಐಟಿ ಕಾಲೇಜು ಪ್ರಾಂಶು ಪಾಲ ಡಾ|| ಸಿ.ಟಿ.ಜಯದೇವ, ರಿಜಿಸ್ಟರ್ ಡಾ|| ಸಿ.ಕೆ.ಸುಬ್ಬರಾಯ, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಹಿರಿಯ ವೈದ್ಯ ಡಾ|| ಜೆ.ಪಿ.ಕೃಷ್ಣೇಗೌಡ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ|| ಜಿ.ಎಂ. ಸತ್ಯನಾರಾಯಣ್, ವಿವಿಧ ವಿಭಾಗದ ಮುಖ್ಯಸ್ಥರಾದ ಡಾ|| ವೀರೇಂದ್ರ, ಡಾ|| ಸಂಪತ್ ಮತ್ತಿತರರಿದ್ದರು.

    Graduates learn to live independently

  • ಕಾಮಗಾರಿಗಳನ್ನು ಕೈಗೊಳ್ಳುವಾಗ ಗುಣ ಮಟ್ಟವನ್ನು ಕಾಯ್ದುಕೊಳ್ಳಿ

    ಕಾಮಗಾರಿಗಳನ್ನು ಕೈಗೊಳ್ಳುವಾಗ ಗುಣ ಮಟ್ಟವನ್ನು ಕಾಯ್ದುಕೊಳ್ಳಿ

    ಚಿಕ್ಕಮಗಳೂರು: ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವಾಗ ಗುಣ ಮಟ್ಟವನ್ನು ಕಾಯ್ದುಕೊಳ್ಳುವಂತೆ ಹಾಗೂ ಕಾಮಗಾರಿಗಳು ಕಳಪೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ, ಅಧಿಕಾರಿಗಳಿಗೆ ತಾಕೀತು ಮಾಡಿದರು.

    ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸೋಮವಾರ ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿಯ ೨೦೨೫-೨೬ನೇ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (೨೦ ಅಂಶಗಳನ್ನೊಳಗೊಂಡಂತೆ) ಮೊದಲನೇ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕತ್ರಿಮಾರಮ್ಮ ದೇವಸ್ಥಾನದ ಕಾಮಗಾರಿಯನ್ನು ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿ, ಗುಣಮಟ್ಟದ ಕಾಮಗಾರಿ ನಿರ್ವಹಿಸಿ ಎಂದು ಹೇಳಿದ ಅವರು ಬೀಳೆಕಲ್ಲಹಳ್ಳಿ-ಉದ್ದೇಬೋರನಹಳ್ಳಿ-ಅಯ್ಯನಕೆರೆ ಮಾರ್ಗದ ಕುಸಿದ ಏರಿ ದುರಸ್ತಿಗೆ ಕೈಗೊಂಡ ಕ್ರಮದ ಬಗ್ಗೆ ಪ್ರಸ್ತಾಪವಾದಾಗ ವಿವರಣೆ ನೀಡಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಬೀಳೆಕಲ್ಲಹಳ್ಳಿ-ಉದ್ದೆಬೋರನಹಳ್ಳಿ ಅಯ್ಯನಕೆರೆಗೆ ಹೋಗುವ ರಸ್ತೆಗೆ ರೂ ೪೦೦.೦೦ ಲಕ್ಷಗಳ ಅನುದಾನ ದೊರೆತಿದ್ದು, ಸರಪಳಿ ೦.೪೫ ರಲ್ಲಿ ಮೋರಿಯ ಭಾರಿ ಮಳೆಯಿಂದ ಕುಸಿದ ಪರಿಣಾಮ ರಸ್ತೆ ಏರಿ ಪುನಃ ನಿರ್ಮಿಸಿದ್ದು, ಹಾಳಾದ ಭಾಗಕ್ಕೆ ಡಾಂಬರ್ ರಸ್ತೆ ಮಾಡಿ ಪೂರ್ಣಗೊಳಿಸಲು ಗುತ್ತಿಗರದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

    ಅಕ್ಷರ ದಾಸೋಹದ ಬಗ್ಗೆ ಪ್ರಸ್ತಾಪಿಸಿದಾಗ ಶಾಲೆಯಲ್ಲಿ ಮಕ್ಕಳಿ ವಿತರಿಸು ಆಹಾರದ ಗುಣಮಟ್ಟದ ಪರೀಶಿಲನೆ ಮಾಡಿ ನಂತರ ಅದನ್ನು ಮಕ್ಕಳಿಗೆ ವಿತರಣೆ ಮಾಡುವಂತೆ ತಿಳಿಸಿದರು.

    ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಸಭೆಯಲ್ಲಿ ಭಾಗವಹಿಸಿ ಸಭೆಗೆ ಗೈರು ಆಗಿರುವ ಅಧಿಕಾರಿಗಳಿಗೆ ಕಾನೂನಿನಡಿ ಪತ್ರ ಬರೆದು ಕ್ರಮತೆಗೆದುಕೊಳ್ಳುವಂತೆ ಸೂಚಿಸಿದರು. ಕೆಲವರಿಗೆ ಇ-ಖಾತೆ ಸಮ್ಯೆಯಿದೆ,ಅದರಲ್ಲೂ ಆದಿಶಕ್ತಿನಗರದ ನಿವಾಸಿಗಳು ಸ್ವಂತ ಮನೆ ನಿರ್ಮಿಸಿಕೊಂಡಿದ್ದರು ಸಹ ಅವರಿಗೆ ಇ-ಖಾತೆ ದೊರೆತ್ತಿಲ್ಲ ಅಲ್ಲಿನ ಜನರು ಬಡರವರಿದ್ದು, ಅವರಿಗೆ ತೊಂದರೆಯಾಗದಂತೆ ಇನ್ನು ಒಂದು ತಿಂಗಳಲ್ಲಿ ಜಂಟಿ ಸರ್ವೆ ಮಾಡಿ ಆ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಹೇಳಿದರು.

    ತಾಲ್ಲೂಕಿನಲ್ಲಿ ವೈದ್ಯರ ಕೊರತೆಯಿಂದ ಜನರಿಗೆ ತೊಂದರೆಯಾಗುತ್ತಿದ್ದು, ವೈದ್ಯರು ತಮ್ಮ ಕರ್ತವ್ಯವನ್ನು ನಿರ್ವಹಿಸುವಂತೆ ತಿಳಿಸಿದರು

    ಆಲ್ದೂರು ಮುಂತಾದ ಕಡೆಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಪದೇ ಪದೇ ಈ ಸಮಸ್ಯೆ ಎದುರಾಗಲು ಕಾರಣ ಹಾಗೂ ಅದಕ್ಕೆ ಶೀಘ್ರವಾಗಿ ಪರಿಹಾರ ನೀಡಿ ಜನರಿಗೆ ತೊಂದರೆಯಾಗುವುದನ್ನು ತಪ್ಪಸಿ ಅದರ ಜೊತೆಗೆ ಆನೆಗಳ ಹಾವಳಿಯಿಂದ ಬೆಳೆ ನಷ್ಟಗೊಂಡ ರೈತರಿಗೆ ಪರಿಹಾರ ಒದಗಿಸಿ ಎಂದು ಹೇಳಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿ ಎಸ್.ಎಸ್.ಎಲ್,ಸಿ ಪರೀಕ್ಷೆಯಲ್ಲಿ ರಾಜ್ಯದ ಫಲಿತಾಂಶ ಶೇಕಡಾ ೬೬.೧೪, ಚಿಕ್ಕಮಗಳೂರು ಜಿಲ್ಲೆಯ ಫಲಿತಾಂಶ ೭೫.೩೬, ಚಿಕ್ಕಮಗಳೂರು ತಾಲ್ಲೂಕು ಫಲಿತಾಂಶ ಶೇಕಡಾ ೭೭.೩೯, ಸರ್ಕಾರಿ ಶಾಲೆಯ ಒಟ್ಟು ಫಲಿತಾಂಶ ೭೨.೪೨, ಅನುದಾನಿತ ಫಲಿತಾಂಶ ಶೇಕಡಾ ೬೮.೧೮, ಅನುದಾನ ರಹಿತಾ ಫಲಿತಾಂಶ ಶೇಕಡಾ ೯೨.೬೩ ಯಾಗಿದ್ದು, ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ ಎಂದು ಹೇಳಿದರು. ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಎಸ್.ಎಲ್ ಬೋಜೇಗೌಡ, ತಹಶಿಲ್ದಾರ್ ರೇಷ್ಮಾ ಶೆಟ್ಟಿ, ಕಡೂರು ತಾಲ್ಲೂಕು ತಹಶಿಲ್ದಾರ್ ಪೂರ್ಣಿಮಾ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    Maintain quality while carrying out works.

  • ದೇಶ-ಧರ್ಮವಿದ್ದರೆ ನೆಮ್ಮದಿ ಬದುಕಿಗೆ ನಾಂದಿ

    ದೇಶ-ಧರ್ಮವಿದ್ದರೆ ನೆಮ್ಮದಿ ಬದುಕಿಗೆ ನಾಂದಿ

    ಚಿಕ್ಕಮಗಳೂರು: ಪ್ರಪಂಚದಲ್ಲಿಯೇ ಧರ್ಮದ ಆಧಾರದಲ್ಲಿ ಭಾರತ ಧಾರ್ಮಿಕವಾಗಿ ನೆಲೆ ಹೊಂದಿದ್ದು, ದೇಶ ಮತ್ತು ಧರ್ಮ ಇದ್ದರೆ ಮಾತ್ರ ನೆಮ್ಮದಿ ಬದುಕಿಗೆ ನಾಂದಿ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಸಮೀಪದ ಬೀಕನಹಳ್ಳಿಯಲ್ಲಿ ಶ್ರೀ ಕಾಳಮ್ಮ ಮತ್ತು ಶ್ರೀ ಚಿಕ್ಕಮ್ಮ ದೇವಿಯವರ ನೂತನ ದೇವಾಲಯ ಪ್ರವೇಶೋತ್ಸವ ನೂತನ ವಿಗ್ರಹ ಪ್ರತಿಷ್ಠಾಪನೆ, ಕುಂಭಾಭಿಷೇಕ, ಕಳಸಾರೋಹಣ ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸರ್ಕಾರ ನೀಡುವ ಅನುದಾನದ ಜೊತೆಗೆ ಗ್ರಾಮಸ್ಥರು ಒಟ್ಟಾಗಿ ಸೇರಿ ಹಣ ಸಂಗ್ರಹಿಸಿ ದೇವಾಲಯ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಚಾರ ಎಂದ ಅವರು, ಹಿಂದೆ ಬ್ರಿಟೀಷರು ಘಜ್ನಿ ಮಹಮದ್ ದಾಳಿ ಮಾಡಿದ್ದರೂ ಭಾರತದಲ್ಲಿ ಧರ್ಮ ಮತ್ತು ಸಂಸ್ಕಾರ ಉಳಿದಿದೆ ಎಂದು ಹೇಳಿದರು.

    ದೇಶದಲ್ಲಿ ಧರ್ಮ, ಸಂಸ್ಕೃತಿ ನಾಶವಾಗದೇ ಇರುವುದಕ್ಕೆ ಕಾರಣ ಮುಕ್ಕೋಟಿ ದೇವರುಗಳ ಆಶೀರ್ವಾದದ ಫಲ. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಸುಮಾರು ೨೬ ಜನ ಪ್ರವಾಸಿಗರು ಹತ್ಯೆಯಾಗಿರುವುದನ್ನು ಖಂಡಿಸಿದ ಅವರು, ತಿರಂಗ ಯಾತ್ರೆ ನಡೆಸುವ ಮೂಲಕ ಸೇನೆಗೆ ಬಲ-ಬೆಂಬಲ ತುಂಬುವ ಕೆಲಸವನ್ನು ರಾಜ್ಯಸರ್ಕಾರ ಮಾಡಿದೆ ಎಂದು ಶ್ಲಾಘಿಸಿದರು.

    ದೇವಾಲಯಗಳನ್ನು ನಿರ್ಮಿಸುವ ಜೊತೆಗೆ ಧಾರ್ಮಿಕ ಭಾವನೆ, ಸಂಸ್ಕಾರ ಕಲಿಯುತ್ತೇವೆ. ಹಾಗೆಯೇ ಹಣ್ಣು, ಕಾಯಿ, ನೀರು ಗರ್ಭಗುಡಿಗೆ ಹೋದಾಗ ಪ್ರಸಾದ, ತೀರ್ಥವಾಗುತ್ತದೆ. ದೇವಾಲಯಗಳಿಗೆ ಹೋದ ನಾವು ಸಂಸ್ಕಾರವಂತ ಪ್ರಜೆಗಳಾದರೆ ದೇಶ ಸುಭದ್ರವಾಗುತ್ತದೆ ಎಂದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಈ ದೇವತೆಗಳ ಕೃಪೆಯಿಂದ ಸರ್ವ ಗ್ರಾಮಸ್ಥರ ಬದುಕು ಸಕಾರಾತ್ಮಕವಾಗಲಿ, ಜಾತಿ, ಬೇಧಭಾವ ಇಲ್ಲದೆ ನಮ್ಮನ್ನೆಲ್ಲ ದೇವರು ಸೃಷ್ಟಿಮಾಡಿದ್ದಾರೆ ಎಂಬ ಭಾವನೆ ಬೆಳೆಯಲಿ ಎಂದು ಹೇಳಿದರು.

    ಮೇಲು-ಕೀಳು ದೇವರು ಮಾಡಿಲ್ಲ, ದೇವರ ಹೆಸರಿನಲ್ಲಿ ಇವುಗಳನ್ನು ಮಾಡಬಾರದು. ಸ್ವಾಮಿ ವಿವೇಕಾನಂದರು ವೇದಗಳಿಗೆ ಹಿಂದುರುಗಿ ಎಂದು ಹೇಳಿದಂತೆ ವೇದಗಳಲ್ಲಿ ಜಾತಿ, ಮತ, ಅಸ್ಪೃಷ್ಯತೆ ಇರುವುದಿಲ್ಲ. ಬದಲಾಗಿ ಎಲ್ಲರನ್ನೂ ಭಗವತ್ ಸ್ವರೂಪಿಯಾಗಿ ನೋಡುವ ದೃಷ್ಟಿ ಇದೆ ಎಂದು ತಿಳಿಸಿದರು.

    ಸನಾತನ ಪ್ರತೀಕವಾದ ದೇವಾಲಯಗಳು ದೇವನೊಬ್ಬ ನಾಮ ಹಲವು, ವಿವಿಧ ರೂಪದಲ್ಲಿ ವ್ಯಕ್ತವಾಗುತ್ತಿದ್ದಾನೆ, ನಾವು ನಮ್ಮ ಪರಿಕಲ್ಪನೆಯಂತೆ ಗುಡಿ ಕಟ್ಟಿ ಪೂಜಿಸುತ್ತಿದ್ದೇವೆ ಎಂಬ ಸತ್ಯವನ್ನು ಮರೆಯಬಾರದು ಎಂದರು.

    ದೇವರ ಉತ್ಸವಗಳು ಸರ್ವರ ಉತ್ಸವಗಳಾಗಿ ಎಲ್ಲರೂ ಸೇರಿ ಮಾಡುವ ಉತ್ಸವದ ಜೊತೆಗೆ ಆನಂದ ಕೊಡುವಂತಾಗಲಿ. ಸಂತೋಷವಾಗಿರಲು ಹಬ್ಬಗಳನ್ನು ಆಚರಿಸುತ್ತೇವೆ. ಜಗಳ ದ್ವೇಷಕ್ಕೆ ಅಲ್ಲ, ಪ್ರೀತಿಸೆಲೆಯನ್ನು ದೇವಾಲಯಗಳು ಹುಟ್ಟಿಸುವಂತಾಗಲಿ ಎಂದು ಹಾರೈಸಿದರು.

    ದೇವಸ್ಥಾನಕ್ಕೆ ಬಂದ ತಕ್ಷಣ ಆತ್ಮಸಾಕ್ಷಿ ಎಚ್ಚರಿಸಬೇಕು, ಒಳ್ಳೆಯದು, ಕೆಟ್ಟದು, ತಪ್ಪು-ಸರಿ ಎಂಬುದರ ಬಗ್ಗೆ ಎಚ್ಚರಿಕೆ ಮೂಡಿಸುವ ಗಂಟೆಯಾಗಬೇಕು ಎಂದು ತಿಳಿಸಿದರು.

    ಪ್ರಾಸ್ತಾವಿಕವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಮಾತನಾಡಿ, ಈ ದೇವಾಲಯಗಳಿಗೆ ಶಾಸಕರ ಅನುದಾನದಲ್ಲಿ ೧೦ ಲಕ್ಷ ರೂ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ೬ ಲಕ್ಷ ರೂ ಅನುದಾನವನ್ನು ಶಾಸಕರು ನೀಡಿದ್ದಾರೆ. ಬಡವರ ದೀನ-ದಲಿತರ ಕಷ್ಟಕಾರ್ಪಣ್ಯಗಳಿಗೆ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಸ್ಪಂದಿಸಿ ಕೆಲಸಮಾಡುತ್ತಿದ್ದಾರೆಂದು ತಿಳಿಸಿದರು.

    ದೇವಾಲಯಗಳ ಪ್ರಾರಂಭೋತ್ಸವದ ಅಂಗವಾಗಿ ಮೇ.೯ ರಿಂದ ೧೧ ರವರೆಗೆ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಉಪಾಧ್ಯಕ್ಷ ಬಿ.ಜಿ. ಸೋಮಶೇಖರ್, ಮರುಳ ಸಿದ್ದೇಶ್ವರ ಹಾರ್ಡ್‌ವೇರ್‌ನ ಬಿ.ಎನ್. ರಾಜಶೇಖರ್, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವೆಂಕಟೇಶ್, ತಾ.ಪಂ ಮಾಜಿ ಅಧ್ಯಕ್ಷ ಪುಟ್ಟೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಪಿ. ರಾಜು, ಗ್ರಾ.ಪಂ ಅಧ್ಯಕ್ಷೆ ಮಂಜುಳ ಶಿವಣ್ಣ, ಸದಸ್ಯರುಗಳಾದ ಬಿ.ಎಂ. ಯೋಗೀಶ್, ಬಿ.ವಿ. ವಿಜಯಕುಮಾರ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ಮತ್ತಿತರರು ಉಪಸ್ಥಿತರಿದ್ದರು.

    Having a country and religion is the beginning of a peaceful life.

  • ಜಗತ್ತಿನ ಹೃದಯ ಗೆದ್ದ ವಿಶ್ವ ಶಾಂತಿಯ ಪ್ರತಿಪಾದಕ ಬುದ್ಧ

    ಜಗತ್ತಿನ ಹೃದಯ ಗೆದ್ದ ವಿಶ್ವ ಶಾಂತಿಯ ಪ್ರತಿಪಾದಕ ಬುದ್ಧ

    ಚಿಕ್ಕಮಗಳೂರು: ಶಾಂತಿ ಮತ್ತು ಜ್ಞಾನದ ಜ್ಯೋತಿಯನ್ನು ಬೆಳಗಿಸಿ ಜಗತ್ತಿನ ಕೋಟಿ ಕೋಟಿ ಜನರ ಹೃದಯವನ್ನು ಗೆದ್ದಂತಹ ವಿಶ್ವ ಶಾಂತಿಯ ಪ್ರತಿಪಾದಕ ಭಗವಾನ್ ಬುದ್ಧ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ಪ್ರತಿಪಾದಿಸಿದರು.

    ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ನಡೆದ ಭಗವಾನ್ ಬುದ್ಧರ ಜಯಂತಿ ಆಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕ್ರಿ.ಪೂ. ಆರನೇ ಶತಮಾನದಲ್ಲಿ ಕಪಿಲವಸ್ತು ರಾಜ್ಯದ ದೊರೆಯಾಗಿದ್ದ ಶುದ್ಧೋದನ ಹಾಗೂ ಮಾಯಾದೇವಿಯ ಪುತ್ರನಾಗಿ ಜನಿಸಿದವರು ಸಿದ್ಧಾರ್ಥ. ಮುಂದೆ ಒಬ್ಬ ಮಹಾ ಯೋಗಪುರುಷನಾಗುತ್ತಾನೆ, ಸನ್ಯಾಸಿಯಾಗುತ್ತಾನೆ ಎನ್ನುವ ಭವಿಷ್ಯ ನುಡಿ ಕೇಳಿದ ಮಹಾರಾಜ ಏನಾದರೂ ಮಾಡಿ ಮಗನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಬೇಕು. ಆತ ಸನ್ಯಾಸಿಯಾಗಬಾರದು ಎಂದು ಬಯಸಿ ಆತನಿಗೆ ವಿವಾಹವನ್ನು ಮಾಡುತ್ತಾನೆ. ಮಗುವೂ ಜನಿಸುತ್ತದೆ. ಆದರೂ ಆತ ಯೋಗ ಪುರುಷನಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

    ಅಂದಿನ ಪ್ರಾಪಂಚಿಕ ವ್ಯವಸ್ಥೆಯಲ್ಲಿ ವೃದ್ಧಾಪ್ಯ, ರೋಗಿಷ್ಟ ಮತ್ತು ಶವವನ್ನು ಹೊತ್ತೊಯ್ಯುತ್ತಿದ್ದ ದೃಶ್ಯವನ್ನು ಗಮನಿಸಿ ಆತನಲ್ಲಿ ಜ್ಞಾನೋದಯವಾಗಿ ಈ ಮೂರು ಎಲ್ಲರ ಜೀವನದಲ್ಲೂ ಬರುವಂತಹವು ಎಂದು ಪ್ರಭಾವಿತನಾಗಿ ಆಸೆಯೇ ದುಃಖಕ್ಕೆ ಮೂಲ ಎಂದರಿತು ತನಗೇಕೆ ಈ ರಾಜ ವೈಭವ ಎಂದು ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಬೋಧಿವೃಕ್ಷದ ಕೆಳಗೆ ಸುದೀರ್ಘಕಾಲ ತಪಸ್ಸನ್ನಾಚರಿಸಿ ಯೋಗ, ಯೋಗ್ಯತೆಯನ್ನು ಸಾಧಿಸಿದ ಸಿದ್ಧಾರ್ಥ ಭಗವಾನ್ ಬುದ್ಧನಾಗುತ್ತಾರೆ ಎಂದರು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಬುದ್ಧ ಎಂದರೆ ಅಲಂಕಾರದ ವಸ್ತುವಲ್ಲ, ಬುದ್ಧನನ್ನು ತತ್ತ್ವದೊಡನೆ ಪ್ರತಿಷ್ಠಾಪನೆ ಮಾಡಿಕೊಂಡರೆ ಮಾತ್ರ ಆ ಬುದ್ಧತ್ವಕ್ಕೆ ಬೆಲೆ ಬರುತ್ತದೆ. ಆ ಬುದ್ಧನಿಗೆ ನಾವು ಶರಣಾಗಬೇಕಾಗುತ್ತದೆ. ಬುದ್ಧನ ತತ್ತ್ವಗಳೆಂದರೆ ಕನ್ನಡಿಯೊಳಗಿನ ಗಂಟಿನಂತಲ್ಲ, ಇತರರಿಗೆ ಹಾನಿ ಮಾಡಬೇಡಿ, ಜೀವನದ ಉದ್ದೇಶವನ್ನು ಸರಿಯಾಗಿಟ್ಟುಕೊಳ್ಳಿ. ಪ್ರೀತಿಯ ಮಾರ್ಗವನ್ನು ಅನುಸರಿಸಿ. ಇತರರನ್ನು ತನ್ನಂತೆ ಭಾವಿಸಿ, ನಿಮ್ಮನ್ನು ನೀವೇ ಜಯಿಸಿ ಎಂದವರು ಬೋಧಿಸಿದ್ದಾರೆ.

    ನಮ್ಮ ಆಲೋಚನೆಗಳ ಮೇಲೆ ನಿಯಂತ್ರಣ ಇರಿಸಿಕೊಳ್ಳುವುದಾದರೆ ನಮ್ಮನ್ನು ನಾವು ಗೆದ್ದಂತೆ. ಇದು ಅತ್ಯಂತ ಕಠಿಣಾತಿಕಠಿಣ. ಆ ಕಾರ್ಯವನ್ನು ಸಾಧಿಸಿರುವವರು ಬುದ್ಧ. ಹಾಗಾಗಿ ಜಗತ್ತಿಗೆ ಒಬ್ಬರು ಮಾತ್ರ ಬುದ್ಧನಾಗಿದ್ದಾರೆ. ಅವರ ಬದುಕಿನಲ್ಲಿ ನಾವು ಒಂದು ಹೆಜ್ಜೆ ಸಾಗಿದರೂ ಬುದ್ಧತ್ವಕ್ಕೆ, ಈ ಜಯಂತಿ ಆಚರಣೆಗೆ ಸಾರ್ಥಕತೆ ಬರುತ್ತದೆ ಎಂದರು.

    ನಮ್ಮೆಲ್ಲರಿಗೂ ವೈರಾಗ್ಯ ಬರುತ್ತದೆ. ಅದು ಸಾವಿನ ಕಾರಣಕ್ಕಾಗಿ ಸ್ಮಶಾನಕ್ಕೆ ಹೋದಾಗ. ಆಗ ನಮ್ಮಲ್ಲಿ ಉಂಟಾಗುವುದು ಸ್ಮಶಾನ ವೈರಾಗ್ಯ. ಆ ಕ್ಷಣಕ್ಕೆ ಬದುಕು ಇಷ್ಟೇ ಅಲ್ಲವೇ ಎನಿಸುವುದುಂಟು. ಆದರೆ ಇತ್ತ ಬಂದೊಡನೆ ಆ ವೈರಾಗ್ಯ ಮರೆಯಾಗಿ ಮತ್ತದೇ ಜಂಜಾಟ, ಮೋಹ ಆವರಿಸಿಕೊಳ್ಳುತ್ತದೆ. ಆ ಮೋಹದಿಂದ ಬಿಡಿಸಿಕೊಳ್ಳುವುದು ಸುಲಭವಲ್ಲ. ಅದು ಬುದ್ಧನಂಥವರಿಗೆ ಮಾತ್ರ ಸಾಧ್ಯ ಎಂದು ಹೇಳಿದರು. ನಗರ ಪ್ರದಕ್ಷಿಣೆಗೆ ತೆರಳಿದ ಬುದ್ಧನಿಗೆ ಕಂಡು ಬಂದ ಮುಪ್ಪಿನಿಂದ ಕೂಡಿದ ವ್ಯಕ್ತಿ, ಕುಷ್ಠರೋಗಿ ಹಾಗೂ ಶವವನ್ನು ಸಾಗಿಸುತ್ತಿದ್ದ ದೃಶ್ಯ ವಿಚಲಿತಗೊಳಿಸಿದವು. ಈ ಕಾರಣದಿಂದಾಗಿಯೇ ಅವರು ಮಧ್ಯರಾತ್ರಿಯೇ ಮನೆ ತೊರೆದರು ಎಂದು ಹೇಳಿದರು.

    ನಿನ್ನೆ, ಮೊನ್ನೆ ಯುದ್ಧದ ಭೀತಿ ನಮ್ಮನ್ನು ಕಾಡುತ್ತಿತ್ತು. ಯುದ್ಧದ ಕಥೆ ಕೇಳಲು ರಮಣೀಯವೂ, ರೋಚಕವೂ ಆಗಿರುತ್ತದೆ. ಅದರೆ ಅದರ ಪರಿಣಾಮ ಭೀಕರವಾಗಿರುತ್ತದೆ. ಬುದ್ಧ ಯುದ್ಧದ ಸಂದೇಶವನ್ನು ಜಗತ್ತಿಗೆ ನೀಡಲಿಲ್ಲ. ಬುದ್ಧನಾಗಲಿ, ಅವರ ಅನುಯಾಯಿಗಳಾಗಲಿ ಕತ್ತಿ ಹಿಡಿದು ಜಗತ್ತನ್ನು ಜಯಿಸಲಿಲ್ಲ. ಸಂದೇಶದ ಮೂಲಕ ಜಗತ್ತನ್ನು ಜಯಿಸಿದರು ಎಂದು ಅವರು ತಿಳಿಸಿದರು.

    ಭಗವಾನ್ ಬುದ್ಧರ ಬಗ್ಗೆ ಬಾಣಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ದೊರೇಶ್ ಬಿಳಿಕೆರೆ ಅವರು ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ, ಉಪ ವಿಭಾಗಾಧಿಕಾರಿ ದೇವರಾಜ್, ತಹಸೀಲ್ದಾರ್ ರೇಷ್ಮ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಭಾಗವಹಿಸಿದ್ದರು.

    Buddha the proponent of world peace who won the hearts of the world

  • ಭಗವಂತನ ಆರಾಧನೆಯಿಂದ ಮಾನಸಿಕ ನೆಮ್ಮದಿ

    ಭಗವಂತನ ಆರಾಧನೆಯಿಂದ ಮಾನಸಿಕ ನೆಮ್ಮದಿ

    ಚಿಕ್ಕಮಗಳೂರು: ಸಂಸಾರದ ಜಂಜಾಟ ಹಾಗೂ ಖಿನ್ನತೆಯಿಂದ ಹೊರಬರಲು ಮನುಷ್ಯ ದೇವಾಲಯ ಹಾಗೂ ಗುರುಗಳ ಸನ್ನಿಧಿಯಲ್ಲಿ ಪ್ರಾರ್ಥಿಸಿದರೆ ಚಿಂತೆಗಳು ಕಣ್ಮರೆಯಾಗಿ ಮನಸ್ಸಿಗೆ ಶಾಂತಿ ಲಭಿಸಲಿದೆ ಎಂದು ಮಾಚನಗೊಂಡನಹಳ್ಳಿ ಬೃಹ್ನಮಠದ ಶ್ರೀ ರೇಣುಕಾ ಮಹಂತ ಶಿವಾಚಾರ್ಯ ಸ್ವಾಮಿ ಜಿ ಹೇಳಿದರು.

    ತಾಲ್ಲೂಕಿನ ತೊಂಡವಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಶ್ರೀ ಶನೇಶ್ವರ ದೇವಾಲಯ ಪ್ರವೇಶೋತ್ಸವ ಹಾಗೂ ನೂತನ ವಿಗ್ರಹ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿ ಮಾನವರು ಕೆಲಸ ಕಾರ್ಯಗಳಲ್ಲಿ ಕೇವಲ ಆರ್ಥಿಕ ಸದೃಢರಾಗಬಹುದು. ಮನಸ್ಸಿಗೆ ಶಾಂತಿ ಲಭಿಸಲು ದೇವಾಲಯದ ಶ್ರದ್ದಾಕೇಂದ್ರಗಳು ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ದೃಢ ಸಂಕಲ್ಪದೊಂದಿಗೆ ಮನುಷ್ಯನು ಮು ನ್ನೆಡೆದರೆ ಭಗವಂತನ ಪ್ರಭಾವದಿಂದ ವೈಯಕ್ತಿಕ ಬದುಕು ಹಸನಾಗಲಿದೆ ಎಂದು ಹೇಳಿದರು

    ಕೌಟುಂಬಿಕ ಚಿಂತೆ, ಮಕ್ಕಳ ಪಾಲನೆ, ಕೆಲಸದೊತ್ತಡದಿಂದ ಮಾನವರಿಗೆ ಹಲವಾರು ಸಂಕಷ್ಟಗಳು ಎ ದುರಾಗಲಿದ್ದು ಮಾನಸಿಕವಾಗಿ ಕುಗ್ಗುವ ಜೊತೆಗೆ ಶಾಂತಿ, ನೆಮ್ಮದಿ ಕಳೆದುಕೊಂಡು ಬದುಕೆಂಬ ಬಂಡಿಯ ನ್ನು ನಡೆಸಲಾಗದು, ಹೀಗಾಗಿ ಶ್ರದ್ದಾಕೇಂದ್ರ ಹಾಗೂ ಗುರುಗಳ ಆರ್ಶೀವಾದದಿಂದ ಕಳೆದುಕೊಂಡ ನೆಮ್ಮದಿ ಹಿಂಪಡೆಯಲು ಸಾಧ್ಯ ಎಂದರು.

    ಮನುಷ್ಯನ ಹುಟ್ಟಿನಿಂದ ಸಾಯುವವರೆಗೂ ಜೀವನದಲ್ಲಿ ಜಂಜಾಟ ಕೊನೆಗೊಳ್ಳದು. ಒಂದಿಲ್ಲೊಂದು ಚಿಂತೆಯಲ್ಲಿ ಸಿಲುಕಿಕೊಳ್ಳುತ್ತಾನೆ. ಸುಡುವ ಚಿಂತೆಯಿಂದ ಮಣ್ಣಾಗದೇ, ಸದೃಢ ಆತ್ಮಶಕ್ತಿ ಬೆಳೆಸಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ದೇವರ ಕಾರ್ಯಗಳಲ್ಲಿ ಸಾಗಿದರೆ ಹೊಸಜೀವನ ದೊರೆಯಲಿದೆ ಎಂದು ತಿಳಿಸಿದರು.

    ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ಭಗವಂತನು ಸುಖಸುಮ್ಮನೆ ಒಲಿಯುವುದಿಲ್ಲ. ದೇವಾಲಯಗಳಲ್ಲಿ ಶ್ರದ್ದೆ, ವಿನಯತೆ ಹಾಗೂ ಆರಾಧಿಸುವ ಗುಣ ಮೈಗೂಡಿಕೊಂಡರೆ ತಾನಾಗಿಯೇ ಆ ರ್ಶೀವದಿಸುವನು ಎಂದ ಅವರು ಸಮಾಜದ ಎಲ್ಲಾ ಕಡೆ ತಲೆಎತ್ತುವ ಮನುಷ್ಯನಿಗೆ ದೇವಾಲಯದಲ್ಲಿ ಮಾ ತ್ರ ತಲೆತಗ್ಗಿಸುವ ಪವಿತ್ರ ಸ್ಥಳ ಎಂದು ಹೇಳಿದರು.

    ಮನುಷ್ಯ ಪ್ರಕೃತಿಯ ಪಂಚಭೂತಗಳನ್ನು ದೇವರ ರೂಪದಲ್ಲಿ ಕಾಣಬೇಕು. ಮಲೀನಗೊಳಿಸುವ ಹಕ್ಕು ಯಾರಿಗೂ ಇರುವುದಿಲ್ಲ. ಹಾಗೆಯೇ ಮಂದಿರಗಳನ್ನು ನಿರ್ಮಿಸಿ ಸುಮ್ಮನಾಗದೇ ದೈನಂದಿನವು ಆರಾಧಿಸು ತ್ತಿರಬೇಕು. ಬಹಳ ವರ್ಷಗಳ ನಂತರ ದೇಗುಲದ ಕನಸು ಈಡೇರುವ ಜೊತೆಗೆ ಗ್ರಾಮಸ್ಥರ ಜವಾಬ್ದಾರಿಯು ಹೆಚ್ಚಾಗಿದೆ ಎಂದರು.

    ದೇವಾಲಯ ಸಮಿತಿ ಅಧ್ಯಕ್ಷ ಹಾಲಪ್ಪ ಮಾತನಾಡಿ ಅನೇಕ ವರ್ಷಗಳಿಂದ ನೆನೆಗುದಿಗೆಯಲ್ಲಿದ್ದ ಶ್ರೀ ಶನೇಶ್ವರ ದೇವಾಲಯ ಗ್ರಾಮಸ್ಥರು, ದಾನಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಸಂಪನ್ನಗೊಂ ಡಿದ್ದು ಮುಂಜಾನೆಯಿಂದ ಹೋಮ-ಹವನ ನಡೆಯಿತು. ಬೃಹ್ನಮಠದ ಶ್ರೀಗಳಿಂದ ಪ್ರಾಣ ಪ್ರತಿಷ್ಟಾಪನೆಯು ಪೂರ್ಣಗೊಳ್ಳುವ ಜೊತೆಗೆ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿಸಲಾಗಿದೆ ಎಂದರು.

    ಈ ಸಂದರ್ಭದಲ್ಲಿ ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ದೇವಾ ಲಯ ಸಮಿತಿ ಅಧ್ಯಕ್ಷ ಟಿ.ಎಸ್.ರಾಜು, ಪಿಸಿಎಲ್‌ಡಿ ಬ್ಯಾಂಕ್ ನಿರ್ದೇಶಕ ದಿನೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ರಾದ ಆನಂದ್, ರುದ್ರಮ್ಮ, ವಿಎಸ್‌ಎಸ್ ಎನ್ ಸದಸ್ಯ ಪ್ರಶಾಂತ್, ವಿಗ್ರಹ ದಾನಿ ಟಿ.ಹೆಚ್.ಸೋಮ ಯ್ಯ, ದಾನಿ ಟಿ.ಎಸ್.ಚಂದ್ರಯ್ಯ, ಗ್ರಾಮಸ್ಥರಾದ ಟಿ.ಆರ್.ಶಿವಯ್ಯ, ಈರಯ್ಯ, ಮಂಜುನಾಥ್, ಪರಮೇಶ್, ಸತೀಶ್, ಮಲ್ಲೇಶ್, ಕಂಡಪ್ಪ, ಪುರುಷೋತ್ತಮ್, ಈರೇಶ್, ಗಂಗಾಧರ್ ಅರ್ಚಕ ಧರ್ಮೇಶ್ ಮತ್ತಿತರರು ಉಪಸ್ಥಿತರಿದ್ದರು.

    Mental peace through worship of the Lord

  • ಕುಶಲಕರ್ಮಿಗಳ ಸಬಲೀಕರಣಕ್ಕಾಗಿ ವಿಶ್ವಕರ್ಮ ಯೋಜನೆ ಸಹಕಾರಿ

    ಕುಶಲಕರ್ಮಿಗಳ ಸಬಲೀಕರಣಕ್ಕಾಗಿ ವಿಶ್ವಕರ್ಮ ಯೋಜನೆ ಸಹಕಾರಿ

    ಚಿಕ್ಕಮಗಳೂರು: ಸಾಂಪ್ರದಾಯಿಕ ಕರಕುಶಲ ವಸ್ತುಗಳಲ್ಲಿ ತೊಡಗಿರುವ ಜನರನ್ನು ಬೆಂಬ ಲಿಸುವುದು ವಿಶ್ವಕರ್ಮ ಯೋಜನೆಯ ಉದ್ದೇಶವಾಗಿದ್ದು ಸ್ಥಳೀಯ ಉತ್ಪನ್ನಗಳು ಮತ್ತು ಕರಕುಶಲ ವಸ್ತು ಗಳ ಮೂಲಕ ಪ್ರಾಚೀನ ಸಂಪ್ರದಾಯಗಳನ್ನು ಜೀವಂತವಾಗಿಸುತ್ತದೆ ಎಂದು ಪಿಎಂ ವಿಶ್ವಕರ್ಮ ಯೋಜ ನಾ ಸಮಿತಿ ಜಿಲ್ಲಾ ಸದಸ್ಯ ಸಂತೋಷ್ ಕೋಟ್ಯಾನ್ ಹೇಳಿದರು.

    ನಗರದ ಕೆ.ಎಂ.ರಸ್ತೆ ಸಮೀಪದ ಪಿಎಂ ವಿಶ್ವಕರ್ಮ ಯೋಜನಾ ತರಬೇತಿ ಕೇಂದ್ರದಲ್ಲಿ ಶುಕ್ರವಾರ ನಡೆ ದ ವಿಶ್ವಕರ್ಮ ಯೋಜನೆ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯು ಭಾರತದ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಮರು ರೂಪಿಸುವ ಮತ್ತು ಅದರ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಒಂ ದು ಪ್ರಮುಖ ಉಪಕ್ರಮವಾಗಿದೆ. ಇದು ಕರಕುಶಲ ಉದ್ಯಮವನ್ನು ಮರುರೂಪಿಸಲು ಕೌಶಲ್ಯ ವರ್ಧನೆ ಮ ತ್ತು ಆಧುನಿಕ ತಂತ್ರಜ್ಞಾನವನ್ನು ನೀಡುತ್ತದೆ ಎಂದರು.

    ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ನಿರ್ವಹಿಸುತ್ತಿರುವ ವಿಶ್ವಕರ್ಮ ಯೋ ಜನೆಯು ಕಾರ್ಮಿಕರ ಕೌಶಲ್ಯಗಳನ್ನು ಹೆಚ್ಚಿಸುವ ಮೂಲಕ ಹಾಗೂ ಅವರ ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸಿ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತದೆ ಎಂದು ಹೇಳಿದರು.

    ಬಡಗಿ, ಕಮ್ಮಾರ, ಶಿಲ್ಪಿಗಳು, ಕುಶಲಕರ್ಮಿಗಳು ಸೇರಿದಂತೆ ೧೮ ಬಗೆಯ ಸಾಂಪ್ರದಾಯಿಕ ವೃತ್ತಿಯನ್ನು ವಿಶ್ವಕರ್ಮ ಯೋಜನೆಯಲ್ಲಿ ಒಳಗೊಂಡಿರುವವರಿಗೆ ಯೋಜನೆಯಡಿ ವಿವಿಧ ಪ್ರಯೋಜನೆಗಳು ಲಭ್ಯವಿ ದ್ದು ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಆರ್ಥಿಕ ಬೆಂಬಲವನ್ನು ನೀಡುವ ಉದ್ದೇಶದಿಂದ ರೂಪಿಸಲಾದ ಮಹತ್ವದ ಯೋಜನೆ ಇದಾಗಿದೆ ಎಂದರು.

    ದೇಶಾದ್ಯಂತ ಪಿಎಂ ವಿಶ್ವಕರ್ಮ ಫಲಾನುಭವಿಗಳಿಗೆ ಮಾರುಕಟ್ಟೆ, ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಇತ್ಯಾ ದಿಗಳಿಗೆ ಬೆಂಬಲವನ್ನು ನೀಡಲಾಗುತ್ತಿದೆ. ಪಿಎಂ ವಿಶ್ವಕರ್ಮ ಫಲಾನುಭವಿಗಳು ವಿವಿಧ ವ್ಯಾಪಾರ ಮೇಳ ಗಳು, ರಾಜ್ಯ ಮಟ್ಟದ ಪ್ರದರ್ಶನಗಳು ಇತ್ಯಾದಿಗಳ ಮೂಲಕ ತಮ್ಮ ಕರಕುಶಲ ವಸ್ತುಗಳು, ಉತ್ಪನ್ನಗಳ ನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಎಂದರು.

    ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳ ಮಾರಾಟವನ್ನು ಉತ್ತೇ ಜಿಸಲು ವಿವಿಧ ಇ-ಕಾಮರ್ಸ್ ವೇದಿಕೆಗಳ ಮೂಲಕ ಪಿಎಂ ವಿಶ್ವಕರ್ಮ ಫಲಾನುಭವಿಗಳಿಗೆ ಆನ್ ಲೈನ್ ಮಾರ್ಕೆಟಿಂಗ್ ಬೆಂಬಲವನ್ನು ಒದಗಿಸಲಾಗಿದ್ದು ಕ್ಷೇತ್ರದ ಸಂಸದರ ಸಹಕಾರದಿಂದ ಜಿಲ್ಲೆಯಲ್ಲಿ ಇದು ಮೊ ದಲನೇ ಹಂತದಲ್ಲಿ ೪,೨೧೭ ಫಲಾನುಭವಿಗಳು ಆಯ್ಕೆಯಾಗಿದ್ದು ಈ ಪೈಕಿ ೧೮೧೦ ಫಲಾನುಭವಿಗಳಿಗೆ ಸಾಲ ವಿತರಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಜಿಲ್ಲಾ ಸಂಚಾ ಲಕ ರಾಕೇಶ್, ತರಬೇತಿ ಕೇಂದ್ರದ ಸಂಯೋಜಕಿ ಸಂಧ್ಯಾ ಆಚಾರ್ಯ ಉಪಸ್ಥಿತರಿದ್ದರು.

    Vishwakarma Yojana Cooperative for Empowerment of Artisans

  • ಉಗ್ರರ ಸದೆಬಡಿಯಲು ನಿರ್ಧಾರ ಶ್ಲಾಘನೀಯ

    ಉಗ್ರರ ಸದೆಬಡಿಯಲು ನಿರ್ಧಾರ ಶ್ಲಾಘನೀಯ

    ಚಿಕ್ಕಮಗಳೂರು: ಭಾರತ ದೇಶದಲ್ಲಿ ಜನಿಸಿದ ನಾವು ಮೊದಲು ದೇಶ ಬಳಿಕ ಧರ್ಮ, ನಂತರ ಗ್ರಾಮ, ಮನೆ. ದೇಶಕ್ಕೆ ಉಗ್ರಗಾಮಿಗಳಿಂದ ಭಯೋತ್ಪಾದಕರ ಉಪಟಳದಿಂದ ತೊಂದರೆಯಾಗುತ್ತಿದ್ದು, ಈ ಸಂದರ್ಭದಲ್ಲಿ ದೇಶದ ಯಾವುದೇ ಧರ್ಮದ ಪ್ರಜೆಗಳ ಮೇಲೆ ದಾಳಿ ಮಾಡಿದರೆ ಸಹಿಸಲಾಗದು. ಕೇಂದ್ರ ಸರ್ಕಾರ ಉಗ್ರರನ್ನು ಸದೆಬಡಿಯಲು ತೆಗೆದುಕೊಂಡ ನಿರ್ಧಾರ ಶ್ಲಾಘನೀಯ ಶಾಸಕ ಹೆಚ್.ಡಿ. ತಮ್ಮಯ್ಯ ಎಂದರು.

    ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಈಗಾಗಲೇ ರಾಜ್ಯಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸೇನೆಗೆ ನೈತಿಕ ಬೆಂಬಲ ತುಂಬುವ ದೃಷ್ಟಿಯಿಂದ ಉಗ್ರವಾದಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಾಶಮಾಡಲು ಮುಂದಾಗಿರುವ ಕೇಂದ್ರಸರ್ಕಾರಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

    ಬೆಂಗಳೂರಿನಲ್ಲಿ ನೆನ್ನೆ ನಡೆದ ತಿರಂಗಾ ಯಾತ್ರೆ ಇತಿಹಾಸದ ಪುಟದಲ್ಲಿ ಸೇರುತ್ತಿದೆ. ಇದರಲ್ಲಿ ಸರ್ವರೂ ಒಗ್ಗಟ್ಟಿನಿಂದ ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಉಗ್ರಗಾಮಿಗಳನ್ನು ಸದೆಬಡಿಯುವ ಶಕ್ತಿಯನ್ನು ಸೇನೆಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

    ಭಾರತ ಅತೀ ಶೀಘ್ರ ಉಗ್ರಗಾಮಿಗಳ, ಭಯೋತ್ಪಾದಕರ ಮುಕ್ತ ದೇಶವಾಗಬೇಕು. ಯಾವುದೇ ರಾಜ್ಯದ ಪ್ರವಾಸಿ ತಾಣಗಳಿಗೆ ಹೋದವರಿಗೆ ಭಯಮುಕ್ತವಾಗುವ ಜೊತೆಗೆ ಕ್ಷೇಮವಾಗಿ ವಾಪಸ್ ಆಗುವ ಭಾವನೆ ಬೆಳೆಯುವಂತಾಗಲಿ ಎಂದು ಹಾರೈಸಿದರು.

    ಸೈನಿಕರಿಗೆ ಆರ್ಥಿಕ ಸಹಾಯದ ಜೊತೆಗೆ ನೈತಿಕ ಬೆಂಬಲ ನೀಡಲು ಮೇ.೧೭ ರಂದು ನಡೆಯಲಿರುವ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಜಿಲ್ಲೆಯ ಜನರು ನೀಡುವ ದೇಣಿಗೆಯನ್ನು ಸಂಗ್ರಹಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

    The decision to crack down on terrorists is commendable.