Category: ಚಿಕ್ಕಮಗಳೂರು

  • ಜಿಲ್ಲೆಯಲ್ಲಿ ರೆಡ್ ಅಲರ್ಟ್ : ಕ್ರಮಕ್ಕೆ ಸಾರ್ವಜನಿಕರಿಗೆ ಸೂಚನೆ

    ಜಿಲ್ಲೆಯಲ್ಲಿ ರೆಡ್ ಅಲರ್ಟ್ : ಕ್ರಮಕ್ಕೆ ಸಾರ್ವಜನಿಕರಿಗೆ ಸೂಚನೆ

    ಚಿಕ್ಕಮಗಳೂರು: ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿದ್ದು, ಮುಂದಿನ ೨ ದಿನಗಳು ಹೆಚ್ಚಿನ ಮಳೆಯಾಗುವ ಸಾದ್ಯತೆ ಇರುವುದರಿಂದ ಜಿಲ್ಲೆಯಲ್ಲಿ ಮೇ ೨೧ ರಂದು ರೆಡ್ ಅಲರ್ಟ್ ಹಾಗೂ ಮೇ ೨೨ ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಹಿಸಬೇಕಿದ್ದು, ಸಾರ್ವಜನಿಕರಿಗೆ ಮುಂದಿನ ಎರಡು ದಿನಗಳು ಅಥವಾ ಮಳೆ ಕಡಿಮೆಯಾಗುವವರೆಗೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ.

    ಸಾರ್ವಜನಿಕರು ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ತೆರಳದಂತೆ ಕಟ್ಟೆಚ್ಚರ ವಹಿಸುವುದು. ಸಾರ್ವಜನಿಕರು ಜಾನುವಾರುಗಳನ್ನು ಶುಚಿಗೊಳಿಸಲು ಅಥವಾ ಬಟ್ಟೆಗಳನ್ನು ತೊಳೆಯಲು ಹಳ್ಳ. ಕೆರೆ ಕಟ್ಟೆಗಳಿಗೆ ತೆರಳಬಾರದು. ಹಾಗೂ ಮಳೆಯಿಂದಾಗಿ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವುದರಿಂದ ಸಾರ್ವಜನಿಕರು ಎಚ್ಚರ ವಹಿಸುವುದು

    ಈ ಸೂಚನೆಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಯಾವುದೇ ಅಪಾಯಕಾರಿ ಘಟನೆಗಳಿಗೆ ಅವಕಾಶ ಕೊಡದೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಕೋರಿದೆ ಹೆಚ್ಚಿನ ಮಾಹಿತಿಗಾಗಿ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ-೦೮೨೬೨-೨೩೮೯೫೦ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ತಿಳಿಸಿದ್ದಾರೆ.

    Red alert in the district: Public advised to take action

  • ನಗರಸಭೆ ಆಸ್ತಿಗಳ ಡ್ರೋನ್ ಸರ್ವೆ ಮೂಲಕ ಗಣಕೀಕರಣ

    ನಗರಸಭೆ ಆಸ್ತಿಗಳ ಡ್ರೋನ್ ಸರ್ವೆ ಮೂಲಕ ಗಣಕೀಕರಣ

    ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಆಸ್ತಿಗಳನ್ನು ಆಧುನೀಕರಣಗೊಳಿಸಬೇಕೆಂಬ ಗುರಿಯೊಂದಿಗೆ ಡ್ರೋನ್ ಸರ್ವೆ ಮೂಲಕ ಗಣಕೀಕರಣಗೊಳಿಸಿ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ದಾಖಲೆ ಸಿದ್ದಪಡಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಕ್ಷಾ ಯೋಜನೆಯನ್ನು ಪರಿಣಾಮಕಾರಿಯಾಗಿ ನಡೆಸಲು ಉದ್ದೇಶಿಸಲಾಗಿದೆ ಎಂದು ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದರು.

    ಅವರು ಇಂದು ನಗರಸಭೆಯ ಸಭಾಂಗಣದಲ್ಲಿ ನಕ್ಷಾ ಯೋಜನೆಯ ಬಗ್ಗೆ ಸರ್ವೆ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ನಗರದ ಅಭಿವೃದ್ಧಿಗೆ ಬೇಕಾಗುವ ಪೂರಕ ದಾಖಲಾತಿಗಳನ್ನು ಗಣಕೀಕರಣಗೊಳಿಸಿ ಪ್ರತೀ ಬಿಲ್ಡಿಂಗ್, ರಸ್ತೆ, ವಿದ್ಯುತ್ ಕಂಬ, ಚರಂಡಿ, ಸ್ಮಶಾನ, ಕೆರೆ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ತಿಗಳ ಜೊತೆಗೆ ಖಾಸಗಿ ಆಸ್ತಿಗಳನ್ನು ಈ ಯೋಜನೆಯಡಿ ಗಣಕೀಕರಣಗೊಳಿಸಿದರೆ ಸಂಪೂರ್ಣ ಮಾಹಿತಿ ಖಾತೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಿದರು.

    ನಗರದ ಅಭಿವೃದ್ಧಿಗೆ ಸಂಪೂರ್ಣ ಮಾಹಿತಿ ದೊರೆಯುವುದರಿಂದ ಈ ಸರ್ವೆಯನ್ನು ನಿಗದಿತ ಸಮಯಕ್ಕೆ ಮುಕ್ತಾಯಗೊಳಿಸಿದರೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗುವ ಭರವಸೆ ಇದೆ ಎಂದು ತಿಳಿಸಿದರು. ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಮನೆಗೆ ಬರುವ ಸರ್ವೆ ಅಧಿಕಾರಿಗಳಿಗೆ ನೀಡುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ ಅವರು, ಈ ಸರ್ವೆ ಕಾರ್ಯವನ್ನು ಡಿಸೆಂಬರ್ ಮಾಹೆಯ ಒಳಗೆ ಪೂರ್ಣಗೊಳಿಸಬೇಕೆಂದು ಸರ್ಕಾರ ಆದೇಶ ನೀಡಿದೆ ಎಂದು ವಿವರಿಸಿದರು.

    ಭೂದಾಖಲೆ ಇಲಾಖೆ ಸಹಾಯಕ ನಿರ್ದೇಶಕ ರುದ್ರೇಶ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಕ್ಷಾ ಯೋಜನೆಯಡಿ ರಾಜ್ಯದ ಹತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಆಯ್ಕೆಮಾಡಲಾಗಿದ್ದು, ಇದರಲ್ಲಿ ಚಿಕ್ಕಮಗಳೂರು ನಗರಸಭೆ ಸೇರ್ಪಡೆಯಾಗಿದೆ ಎಂದು ತಿಳಿಸಿದರು.

    ೩-ಡಿ ಮಾದರಿಯಲ್ಲಿ ಸರ್ವೆ ಮಾಡಿ ನಗರಸಭೆ ವ್ಯಾಪ್ತಿಯ ಆಸ್ತಿಗಳ ವಿವರ ಪಡೆಯಲಿದ್ದು, ಹಾಲಿ ನಗರಸಭೆಯಲ್ಲಿ ೩೫ ಸಾವಿರ ವಿವಿಧ ರೀತಿಯ ಆಸ್ತಿಗಳು ಇವೆ, ಈ ಒಂದು ನಕ್ಷಾ ಯೋಜನೆಯಡಿ ನಗರಸಭೆ ವ್ಯಾಪ್ತಿಯಲ್ಲಿರುವ ಆಸ್ತಿಗಳನ್ನು ಆಧುನಿಕ ತಂತ್ರಜ್ಞಾನದ ಡ್ರೋನ್ ಮೂಲಕ ಚಿತ್ರೀಕರಿಸಲು ೮ ತಂಡಗಳನ್ನು ರಚಿಸಲಾಗಿದೆ ಎಂದರು.

    ನಗರಸಭೆ ಮತ್ತು ಭೂದಾಖಲೆಗಳ ಇಲಾಖೆಯಿಂದ ೮ ತಂಡಗಳನ್ನು ರಚಿಸಲಾಗಿದ್ದು, ಪ್ರತೀ ಆಸ್ತಿಗಳ ಬೌಂಡರಿ ಅಳತೆ ಮಾಡಿ ಕೆರೆ, ಕಾಲುವೆ, ಸರ್ಕಾರಿ ಆಸ್ತಿಗಳ ಜೊತೆಗೆ ಖಾಸಗಿ ಸಾರ್ವಜನಿಕರ ಆಸ್ತಿಗಳನ್ನು ಸಮರ್ಪಕವಾಗಿ ಅಳತೆ ಮಾಡಿ ಈಗಾಗಲೇ ನಗರಸಭೆ ಕಣಜ ಸಾಫ್‌ವೇರ್‌ನಲ್ಲಿ ಐಡಿ ಇದ್ದು, ಲಿಂಕ್ ಮಾಡಿ ಅಳತೆಮಾಡಲಾಗುವುದೆಂದು ಹೇಳಿದರು.

    ಆಸ್ತಿಯ ಎಲ್ಲಾ ವಿವರಗಳು ಡ್ರೋನ್‌ನಲ್ಲಿ ಚಿತ್ರೀಕರಣಗೊಂಡಾಗ ಒಟ್ಟಾರೆ ಇಮೇಜ್ ಬಂದಿರುತ್ತದೆ. ಅದನ್ನು ರೋವರ್ ಸರ್ವೆಯಲ್ಲಿಟ್ಟುಕೊಂಡು ಪ್ರತೀ ಆಸ್ತಿಗೆ ಪಾಲಿಗನ್ ಸಿದ್ದಪಡಿಸುತ್ತೇವೆ ನಂತರ ಪಿಆರ್ ಕಾರ್ಡ್‌ಗೆ ಮಾಹಿತಿಯನ್ನು ಲಿಂಕ್ ಮಾಡುತ್ತೇವೆ ಎಂದರು.

    ಈ ರೀತಿ ಮಾಹಿತಿ ಸಂಗ್ರಹವಾದ ಪಿಆರ್ ಕಾರ್ಡನ್ನು ಆಸ್ತಿ ಹೊಂದಿರುವ ಸಾರ್ವಜನಿಕರಿಗೆ ವಿತರಿಸುತ್ತೇವೆ, ಕಾರ್ಡ್ ಪಡೆದ ಬಳಿಕ ಏನಾದರೂ ಆಕ್ಷೇಪಣೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲಿ ಅವಕಾಶ ನೀಡಲಾಗಿದ್ದು, ಸರಿಯಾದ ಮಾಹಿತಿ ದೊರಕಿದೆ ಎಂದು ದೃಢಪಟ್ಟಾಗ ಅಂತಿಮವಾಗಿ ಖಾತೆದಾರರಿಗೆ ಪಿಆರ್ ಕಾರ್ಡ್ ವಿತರಿಸುತ್ತೇವೆ ಎಂದು ಹೇಳಿದರು.

    ಪಿಆರ್ ಕಾರ್ಡ್‌ನಲ್ಲಿ ದಾಖಲಾಗಿರುವ ಸಮಗ್ರ ಮಾಹಿತಿ ಭೂಮಿಯ ಯಾವ ಭಾಗದಲ್ಲಿ ಯಾವ ಸ್ಥಿತಿಯಲ್ಲಿ ನಮ್ಮ ಆಸ್ತಿಯಿದೆ ಎಂಬ ಸಮಗ್ರ ಮಾಹಿತಿ ಲಭ್ಯವಾಗುತ್ತದೆ. ಇದೂವರೆಗೆ ಆಸ್ತಿಗಳಿಗೆ ಸರ್ವೆ ನಂಬರ್ ಮಾತ್ರ ಇದ್ದು, ಆಸ್ತಿ ಎಲ್ಲಿದೆ ಎಂಬ ಮಾಹಿತಿ ಇರಲಿಲ್ಲ, ಪಿಆರ್ ಕಾರ್ಡ್‌ನಲ್ಲಿ ಆಸ್ತಿಯ ಬಗ್ಗೆ ಖಾತೆದಾರನ ವಿವರ ಮತ್ತಿತರ ಸಮಗ್ರ ಮಾಹಿತಿ ಇರುತ್ತದೆ ಎಂದು ತಿಳಿಸಿದರು.

    Computerization of municipal properties through drone survey

  • ಪರಿಶಿಷ್ಟ ಜಾತಿ ಕುಟುಂಬಗಳ ಒಳ ಮೀಸಲಾತಿ ಸಮೀಕ್ಷೆಯ ದಿನಾಂಕ ವಿಸ್ತರಣೆ

    ಪರಿಶಿಷ್ಟ ಜಾತಿ ಕುಟುಂಬಗಳ ಒಳ ಮೀಸಲಾತಿ ಸಮೀಕ್ಷೆಯ ದಿನಾಂಕ ವಿಸ್ತರಣೆ

    ಚಿಕ್ಕಮಗಳೂರು: ಹೆಚ್ಚು ಮಳೆಯಿಂದ ಹಾಗೂ ಬೇರೆ ಬೇರೆ ಕಾರಣಗಳಿಂದ ಜಿಲ್ಲೆಯಲ್ಲಿ ನಡೆಯಬೇಕಿದ್ದ ಪರಿಶಿಷ್ಟ ಜಾತಿ ಕುಟುಂಬಗಳ ಒಳ ಮೀಸಲಾತಿ ಸಮೀಕ್ಷೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರವಾನ್ವಿತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ ಸಮಿತಿ ಶಿಫಾರಸ್ಸಿನಂತೆ ಈಗಾಗಲೇ ನಿಗದಿಯಾಗಿದ್ದ ಪರಿಶಿ? ಜಾತಿ ಒಳ ಮೀಸಲಾತಿ ಸಮೀಕ್ಷೆಯ ದಿನಾಂಕವನ್ನು ವಿಸ್ತರಿಸಿರುವ ಬಗ್ಗೆ ಮಾಹಿತಿ ನೀಡಿದರು. ಆಯೋಗದ ಶಿಫಾರಸ್ಸಿನಂತೆ ಗಣತಿದಾರರು ಮನೆ-ಮನೆ ಸಮೀಕ್ಷೆಗೆ ಬರುವ ಸಂದರ್ಭದಲ್ಲಿ ಪರಿಶಿ? ಜಾತಿ ಸಮುದಾಯದವರು ಈ ಕೆಳಗೆ ಸೂಚಿಸಿದಂತೆ ಮಾಹಿತಿಯನ್ನು ನೀಡಬೇಕು.

    ಮೊದಲ ಹಂತದ ಸಮೀಕ್ಷೆಯ ದಿನಾಂಕವನ್ನು ಮೇ ೫ ರಿಂದ ೨೫ ರವರೆಗೆ ವಿಸ್ತರಿಸಲಾಗಿದ್ದು. ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯ ನಡೆಸಲು ಜಿಲ್ಲೆಯ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗಿದೆ. ಗಣತಿದಾರರು ಮನೆ-ಮನೆಗೆ ಭೇಟಿ ನೀಡಿದಾಗ, ಕರ್ನಾಟಕದ ಪರಿಶಿ? ಜಾತಿಯ ಪಟ್ಟಿಯಲ್ಲಿರುವ ಜಾತಿಗಳ ಮತ್ತು ಉಪಜಾತಿಗಳ ಮಾಹಿತಿಯನ್ನು ಸಮುದಾಯದವರು ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಿದರು.

    ಆದಿಕರ್ನಾಟಕ, ಆದಿದ್ರಾವಿಡ, ಅದಿಆಂಧ್ರ ಎಂದು ನಮೂದಿಸಿದ್ದರೆ ಅಂಥವರು ಅದರ ಜೊತೆಗೆ ತಮ್ಮ ಉಪಜಾತಿಯನ್ನು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಸಮೀಕ್ಷೆಯಲ್ಲಿ ಪರಿಶಿ? ಜಾತಿ ಜನಾಂಗದವರು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ, ಹೊಂದಿರುವ ಸೌಲಭ್ಯಗಳು ಮುಂತಾದ ಸಾಮಾನ್ಯ ಮಾಹಿತಿಗಳು, ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿಗಳು, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ವೃತ್ತಿ, ಭೂಮಿಯ ಒಡೆತನ, ಮನೆ, ಆದಾಯ, ಮಾನವ ಅಭಿವೃದ್ಧಿ, ಸರ್ಕಾರದಿಂದ ಪಡೆದಿರುವ ಸೌಲಭ್ಯಗಳು, ರಾಜಕೀಯ ಪ್ರಾತಿನಿಧ್ಯತೆ ಇತ್ಯಾದಿ ವಿ?ಯಗಳ ಕುರಿತು ನೀಡಬೇಕಾಗಿರುತ್ತದೆ ಎಂದು ಹೇಳಿದರು.

    ಎರಡನೇ ಹಂತದ ಸಮೀಕ್ಷೆಯನ್ನು ಮೇ ೨೬ ರಿಂದ ೨೮ ರವರೆಗೆ ಮರು ನಿಗದಿಪಡಿಸಲಾಗಿದ್ದು, ಈ ಸಮೀಕ್ಷೆಯಲ್ಲಿ ಗುರುತಿಸಿರುವ ಮತಗಟ್ಟೆ ಪ್ರದೇಶದಲ್ಲಿ ಏರ್ಪಡಿಸಲಾಗುವ ವಿಶೇ? ಶಿಬಿರಗಳಿಗೆ ಈಗಾಗಲೇ ಮೊದಲ ಹಂತದಲ್ಲಿ ಮಾಹಿತಿ ಸಲ್ಲಿಸದೇ ಅಥವಾ ಸಮೀಕ್ಷೆಗೆ ಒಳಪಡದೇ ಇರುವ ಪರಿಶಿ? ಜಾತಿಯವರು ತೆರಳಿ, ಗಣತಿದಾರರಿಗೆ ಜಾತಿ ಕುರಿತು ಸ್ಪ? ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.

    ಮೂರನೇ ಹಂತದ ಸಮೀಕ್ಷೆಯಲ್ಲಿ ಆನ್‌ಲೈನ್ ಮೂಲಕ ವೆಬ್‌ಸೈಟ್‌ನಲ್ಲಿ ಸ್ವಯಂ ಘೋ?ಣೆ ಮಾಡುವ ಸಮೀಕ್ಷೆಯನ್ನು ಮೇ ೧೯ ರಿಂದ ೨೮ ರವರೆಗೆ ವಿಸ್ತರಿಸಲಾಗಿದ್ದು, ಸ್ವಯಂ ಘೋ?ಣೆಗೆ ಆಧಾರ್ ನಂಬರ್ ಹಾಗೂ ಜಾತಿ ಪ್ರಮಾಣ ಪತ್ರದ ಆರ್.ಡಿ. ನಂಬರ್ ಅನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಹೇಳಿದರು.
    ಸಮೀಕ್ಷೆಯನ್ನು ಕೈಗೊಳ್ಳುವುದಕ್ಕಾಗಿ ಒಟ್ಟು ೧೫೩೪ ಶಿಕ್ಷಕರುಗಳನ್ನು ಗಣತಿದಾರರನ್ನಾಗಿ ಹಾಗೂ ೧೫೩ ಮುಖ್ಯ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದ್ದು, ಹೆಚ್ಚುವರಿಯಾಗಿ ೧೮೫ ಗಣತಿದಾರರು ಹಾಗೂ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದರು.

    ೨೦೧೧ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೫೯,೨೯೬ ಪರಿಶಿ? ಜಾತಿಯ ಕುಟುಂಬಗಳು ಇವೆ. ಇಲ್ಲಿಯವರೆಗೆ ಒಟ್ಟು ೫೨,೯೩೪ ಪರಿಶಿ? ಜಾತಿ ಹಾಗೂ ೨,೪೩,೯೮೬ ಇತರೆ ಜಾತಿಯ ಕುಟುಂಬಗಳ ಒಟ್ಟು ೨,೯೬,೯೨೦ ಕುಟುಂಬಗಳ ಸಮೀಕ್ಷೆಯನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ಸಾರ್ವಜನಿಕರು ಕಂಟ್ರೋಲ್ ರೂಂ ಸಹಾಯವಾಣಿ ಸಂಖ್ಯೆ (೯೯೦೨೧೯೮೩೦೦, ೯೪೮೧೩೫೯೦೦೦, ೯೪೮೩೦೦೪೦೦ ಹಾಗೂ ೯೪೮೦೮೪೩೦೨೮)ಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಡಾ.ವಿಕ್ರಮ್ ಅಮಟೆ, ಉಪವಿಭಾಗಧಿಕಾರಿ ದೇವರಾಜ್,ಸಮಾಜ ಕಲ್ಯಾಣಾಧಿಕಾರಿ ಮಾಲತಿ ಉಪಸ್ಥಿತರಿದ್ದರು.

    Extension of date for internal reservation survey for Scheduled Caste families

  • ಮೂಲಭೂತ ಸೌಕರ್ಯಗಳು ಸಮ್ಮಿಲನಗೊಂಡಾಗ ಗ್ರಾ.ಪಂ ಅಭಿವೃದ್ಧಿ

    ಮೂಲಭೂತ ಸೌಕರ್ಯಗಳು ಸಮ್ಮಿಲನಗೊಂಡಾಗ ಗ್ರಾ.ಪಂ ಅಭಿವೃದ್ಧಿ

    ಚಿಕ್ಕಮಗಳೂರು: ಅಧಿಕಾರ ವಿಕೇಂದ್ರೀಕರಣದ ಮೂಲ ಸ್ಥಾನ ಗ್ರಾಮ ಪಂಚಾಯಿತಿ ಅಧಿಕಾರದ ಜೊತೆಗೆ ಮೂಲಭೂತ ಸೌಕರ್ಯಗಳು ಒಟ್ಟಿಗೆ ಸಮ್ಮಿಲನಗೊಂಡಾಗ ಆ ಪಂಚಾಯಿತಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅಭಿಪ್ರಾಯಿಸಿದರು.

    ಅವರು ಇಂದು ಕ್ಷೇತ್ರದ ವ್ಯಾಪ್ತಿಯ ಅಂಬಳೆಯಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸರ್ವರೂ ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದ ಪರಿಣಾಮ ಕಳೆದ ೫ ತಿಂಗಳಲ್ಲಿ ಗ್ರಾಮ ಪಂಚಾಯಿತಿಯ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣವಾಗಿದೆ ಎಂದು ಶ್ಲಾಘಿಸಿದ ಅವರು, ಈಗಾಗಲೇ ಕ್ಷೇತ್ರದ ವ್ಯಾಪ್ತಿಯ ಮೆಲೆನಾಡು ಭಾಗದಲ್ಲಿ ಹಲವಾರು ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಸಾರ್ವಜನಿಕ ಸಮರ್ಪಣೆ ಮಾಡಿದ್ದೇವೆಂದು ಹೇಳಿದರು.

    ಆದರೆ, ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರು, ಸದಸ್ಯರು ಒಗ್ಗಟ್ಟಾಗಿ ಜನಪರ ಕೆಲಸ ಮಾಡುತ್ತಿರುವುದರಿಂದ ಸಮಸ್ಯೆಗಳು ನನ್ನ ಬಳಿ ಬರುವುದು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಜೀವಿನಿ ಕಟ್ಟಡ ನಿರ್ಮಾಣವಾಗಬೇಕು, ಇದಕ್ಕೆ ಬೇಕಾದ ಅನುದಾನ ನೀಡುವುದಾಗಿ ಭರವಸೆ ನೀಡಿದರು.

    ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಜನರು ತೋರಿಸುವ ಪ್ರೀತಿ ಮಲೆನಾಡು ಭಾಗದಲ್ಲಿ ಸಿಗುತ್ತಿಲ್ಲ. ಕೆಲಸದ ಒತ್ತಡದಲ್ಲಿ ಮಾನವೀಯತೆ ಮರೆತಿರುತ್ತೇವೆ, ಪುನಃ ಆ ಪ್ರೀತಿ ಮರುಕಳಿಸುವಂತೆ ತೋರಿದ ಹಿರಿಯರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

    ರಾಜ್ಯ ಪರಿಸರ ಮಾಲಿನ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್. ಮಹೇಶ್ ಮಾತನಾಡಿ, ಇತಿಹಾಸ ಹಾಗೂ ಐತಿಹಾಸಿಕವಾಗಿ ಇರುವ ದೊಡ್ಡ ಗ್ರಾಮ ಪಂಚಾಯಿತಿ ಇದಾಗಿದ್ದು, ೯೪ ವರ್ಷಗಳ ನಂತರ ನೂತನ ಕಟ್ಟಡ ನಿರ್ಮಾಣ ಆಗಿರುವುದು ಯೋಗಾ ಯೋಗಗಳ ಫಲ ಎಂದು ಹೇಳಿದರು.

    ಐತಿಹಾಸಿಕ ಹೊಯ್ಸಳ ಕಾಲದ ಶಿಲ್ಪಕಲೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಎ.ಆರ್ ಕೃಷ್ಣಶಾಸ್ತ್ರಿ ಜನಿಸಿದ ಗ್ರಾಮದಲ್ಲಿ ನೂತನ ಕಟ್ಟಡ ನಿರ್ಮಾಣವಾದ ನಂತರ ಸಾರ್ವಜನಿಕರಿಗೆ ಸಮರ್ಪಣೆಯಾಗಿ ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರವಾಗಬೇಕು. ಜೊತೆಗೆ ಗ್ರಂಥಾಲಯವನ್ನು ಸ್ಥಾಪಿಸಿ ಗ್ರಾಮಸ್ಥರ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸದ್ಭಳಕೆಯಾಗಲಿ ಎಂದು ಹಾರೈಸಿದರು.

    ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ಅಧಿಕಾರ ವಿಕೇಂದ್ರೀಕರಣ ಆಗಬೇಕೆಂಬ ಕನಸು ಈ ಮೂಲಕ ನನಸಾಗಿದ್ದು, ನನ್ನ ರಾಜಕೀಯ ಬೆಳವಣಿಗೆಗೆ ಅಂಬಳೆ ಹೋಬಳಿಯ ಜನರ ಆಶೀರ್ವಾದ ಕಾರಣ ಎಂದು ಸ್ಮರಿಸಿದರು.

    ಮಾಜಿ ಸಚಿವೆ ಮೋಟಮ್ಮನವರ ನೇತೃತ್ವದಲ್ಲಿ ಜಾರಿಗೆ ಬಂದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಮಹಿಳಾ ಆರ್ಥಿಕ ಸಬಲೀಕರಣಗೊಳ್ಳಲು ಪ್ರಮುಖ ಪಾತ್ರ ವಹಿಸಿದವು ಎಂದು ಹೇಳಿದರು.

    ನೂತನ ಕಟ್ಟಡವನ್ನು ಉದ್ಘಾಟಿಸಿದ ಗ್ರಾ.ಪಂ ಅಧ್ಯಕ್ಷ ದೊಡ್ಡೇಗೌಡ ಮಾತನಾಡಿ, ೧೯೩೧ ರಲ್ಲಿ ಬ್ರಿಟೀಷ್ ಕಾಲದಲ್ಲಿ ನಿರ್ಮಾಣವಾಗಿದ್ದ ಗ್ರಾ.ಪಂ ಕಟ್ಟಡ ತುಂಬಾ ಶಿಥಿಲಗೊಂಡಿದ್ದು, ೯೪ ವರ್ಷಗಳ ಬಳಿಕ ನೂತನ ಕಟ್ಟಡ ನಿರ್ಮಿಸಬೇಕೆಂಬ ಕನಸು ಇಂದು ನೆರವೇರಿದೆ ಎಂದರು. ಈ ಕಾರ್ಯಕ್ಕೆ ಸಹಕರಿಸಿದ ಶಾಸಕರು, ಸದಸ್ಯರು, ಗುತ್ತಿಗೆದಾರರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು.

    ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಭಾಗ್ಯ ಲಕ್ಷ್ಮಣಗೌಡ, ಸದಸ್ಯರುಗಳಾದ ಅಶ್ವಿನಿ ಕೆ.ಎನ್ ಮಹೇಶ್, ಗಂಗಾಧರ್ ಬಿ.ಸಿ, ಚಂದ್ರಮ್ಮ, ಮಲಿಯಮ್ಮ, ಲಕ್ಷ್ಮಮ್ಮ, ವಿಜಯಮ್ಮ, ಚಿದಾನಂದ್, ವಿಜಯ್ ಕುಮಾರ್, ಸಾವಿತ್ರಮ್ಮ, ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ಕಾರ್ಯದರ್ಶಿ ಪಾರ್ವತಮ್ಮ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಪಿಡಿಓ ಗಂಗಾಧರ್ ಸ್ವಾಗತಿಸಿದರು.

    Gram Panchayat development when infrastructure is integrated

  • ಬೆಲೆ ಏರಿಕೆಯನ್ನೇ ಸಾಧನೆ ಎಂದು ಪರಿಗಣಿಸಿ ಸಮಾವೇಶ ಮಾಡಲು ಹೊರಟಿದೆ

    ಬೆಲೆ ಏರಿಕೆಯನ್ನೇ ಸಾಧನೆ ಎಂದು ಪರಿಗಣಿಸಿ ಸಮಾವೇಶ ಮಾಡಲು ಹೊರಟಿದೆ

    ಚಿಕ್ಕಮಗಳೂರು:  ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ಬೆಲೆ ಏರಿಕೆಯನ್ನೇ ಸಾಧನೆ ಎಂದು ಪರಿಗಣಿಸಿ ಸಮಾವೇಶ ಮಾಡಲು ಹೊರಟಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.

    ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ೨ ವರ್ಷದಲ್ಲಿ ೬೪ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಿದೆ. ಜನನ-ಮರಣ ಪ್ರಮಾಣ ಪತ್ರಗಳಿಂದ ಹಿಡಿದು ವಿದ್ಯುತ್, ನೀರು, ಹಾಲು, ಆಲ್ಕೋಹಾಲ್, ಸ್ಟ್ಯಾಂಪ್ ಡ್ಯೂಟಿ, ಎಕ್ಸೈಸ್ ಡ್ಯೂಟಿ, ಸ್ಟಾಂಪ್ ಪೇಪರ್, ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಲಾಗಿದೆ. ಇದು ಕಾಂಗ್ರೆಸ್‌ನ ಹೇಳಿಕೊಳ್ಳಲಾಗದ ಸಾಧನೆ ಎಂದು ವ್ಯಂಗ್ಯವಾಡಿದರು.

    ಮತ್ತೊಂದೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮೂಡಾ ಹಗರಣ, ವಾಲ್ಮೀಕಿ ಹಗರಣ, ಸ್ಮಾರ್ಟ್ ಮೀಟರ್ ಹಗರಣ, ಪ್ಲಾನ್ ಅನುಮೋದನೆಗೆ ೧೦೦ ಲಂಚ ವಸೂಲಿ ಹಗರಣ, ಗುತ್ತಿಗೆದಾರರರಿಂದ ಶೇ.೬೦ ರಷ್ಟು ವಸೂಲಿ ಹಗರಣ ಇದೂ ಸಹ ಕಾಂಗ್ರೆಸ್ ಹೇಳಿಕೊಳ್ಳಲಾಗದ ಸಾಧನೆಗಳು ಎಂದು ಕುಟುಕಿದರು.

    ಸಿಎಂ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ ಆದರೆ ಜಾತಿ, ಜಾತಿ ನಡುವೆ ಸಂಘರ್ಷವನ್ನು ಹುಟ್ಟು ಹಾಕಿ ಸಾಮಾಜಿಕ ಕ್ಷೆಭೆಗೆ ನಾಂದಿ ಹಾಡಿದ್ದಾರೆ. ೨೦೧೬ ರಲ್ಲೇ ಕಾಂvರಾಜ ವರದಿ ಸಲ್ಲಿಕೆ ಆಗಿದ್ದರೂ ಇನ್ನೂ ಮಂಡನೆ ಮಾಡಲಾಗಿಲ್ಲ. ನಂತರ ಜಯಪ್ರಕಾಶ ಹೆಗ್ಡೆ ವರದಿ ಎಂದರು ಅದೂ ಸಹ ಸೋರಿಕೆಯಾಗಿದ್ದು ಬಿಟ್ಟರೆ ಟೇಬಲ್ ಆಗಲಿಲ್ಲ ಇದು ಅವರಿಗೆ ಸಾಮಾಜಿಕ ನ್ಯಾಯ ಕೊಡಬೇಕೆನ್ನುವ ಬದ್ಧತೆ ಇಲ್ಲ ಎನ್ನುವುದನ್ನು ತೋರುತ್ತದೆ ಎಂದು ದೂರಿದರು.

    ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹತ್ಯೆಗಳು, ಆತ್ಮಹತ್ಯೆಗಳು ದಾಖಲೆ ಪ್ರಮಾಣದಲ್ಲಿ ನಡೆದಿವೆ. ಸುಮಾರು ೩೦೦೦ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಅತೀ ಹೆಚ್ಚು ಸರ್ಕಾರಿ ನೌಕರರು, ಎಸ್‌ಐಗಳು, ವೈದ್ಯರು, ಸೂಪರಿಂಟೆಂಡೆಂಟ್‌ಗಳು ಆತ್ಮ ಹತ್ಯೆ ಮಾಡಿಕೊಂಡಿರುವುದು ಈ ಸರ್ಕಾರದ ಸಾಧನೆ ಎಂದು ಮೂದಲಿಸಿದರು.

    ಬಾಣಂತಿಯರು, ಹಸುಗೂಸುಗಳ ಸಾವಿನಲ್ಲೂ ಈ ಸರ್ಕಾರ ದಾಖಲೆ ಬರೆದಿದೆ. ೨ ವರ್ಷದಲ್ಲಿ ರಾಜ್ಯದಲ್ಲಿ ೭೩೬ ಕ್ಕೂ ಹೆಚ್ಚು ಬಾಣಂತಿಯರು ಅನುಮಾನಾಸ್ಪದವಾಗಿ ಸಾವಪ್ಪಿದ್ದಾರೆ. ೧೧೦೦ ಕ್ಕೂ ಹೆಚ್ಚು ನವಜಾತ ಶಿಶುಗಳು ಸಾವಿಗೀಡಾಗಿವೆ. ಇದರಲ್ಲಿ ಬೆಳಗಾವಿ ಮತ್ತು ದಾವಣಗೆರೆ ಮೊದಲೆರಡು ಸ್ಥಾನದಲ್ಲಿದೆ ಎಂದರು.

    ಇದೇ ವೇಳೆ ಸಿದ್ದರಾಮಯ್ಯ ಅವರ ಕುಟುಂಬದ ಆಸ್ತಿ ವೃದ್ಧಿ ಆಗಿದ್ದರೆ ರಾಜ್ಯದ ಸಾಲ ಮಾತ್ರ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ೭.೬೪ ಲಕ್ಷ ಕೋಟಿ ಸರ್ಕಾರದ ಈ ವರೆಗಿನ ಸಮಗ್ರ ಸಾಲವಾಗಿದೆ. ಇದರಲ್ಲಿ ಶೇ.೫೦ ಕ್ಕಿಂತ ಹೆಚ್ಚು ಅಂದರೆ ೩.೯೦ ಲಕ್ಷ ಕೋಟಿ ರೂ ಸಿದ್ದರಾಮಯ್ಯ ಸಿಎಂ ಆದ ನಂತರವೇ ಮಾಡಲಾದ ಸಾಲವಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಕ್ರಿಮಿನಲ್ ಮತ್ತು ಕಮ್ಯುನಲ್ ಪಡೆಗಳು ಮೇಲುಗೈ ಸಾಧಿಸಿವೆ ಎಂದು ಆರೋಪಿಸಿದರು.

    ಪಂಚ ಗ್ಯಾರಂಟಿ ಹೆಸರಲ್ಲಿ ಜಾಹಿರಾತು ಕೊಟ್ಟು ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾತ್ರೆ ಮಾಡಲು ಹೊರಟಿದ್ದಾರೆ. ೬೬೨ ಕೋಟಿ ರೂ. ಹಾಲಿನ ಸಬ್ಸಿಡಿ ಬಾಕಿ ಇದೆ. ಕೇರಳದಲ್ಲಿ ೨ ಸಾವಿರ ರೂ. ಇರುವ ವಿದ್ಯುತ್ ಸ್ಮಾರ್ಟ್ ಮೀಟರ್‌ಗೆ ನಮ್ಮ ರಾಜ್ಯದಲ್ಲಿ ೧೫ ಸಾವಿರ ರೂ. ವಸೂಲಿ ಮಾಡಿ ಸ್ಮಾರ್ಟ್‌ಆಗಿ ಜನರನ್ನು ಬೋಳಿಸಲು ಹೊರಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

    ೨೦೨೩ ರಲ್ಲಿ ೬೧೫ ಇದ್ದ ರೈತ ಆತ್ಮಹತ್ಯೆ ಪ್ರಕರಣ ೨೦೨೪ ರಲ್ಲಿ ೭೩೪ಕ್ಕೇರಿದೆ. ೨೦೨೫ ಕ್ಕೆ ೧೦೦೦ದ ಗಡಿ ದಾಟಲಿದೆ. ಕೇವಲ ಒಂದು ವರ್ಷದಲ್ಲಿ ೧೯೨೭ ಕೊಲೆಗಳು, ೧೯೧೦ ಸುಲಿಗೆ, ೫೮೧೦ ಅಪರಹರಣ, ೨೬೩ ದರೋಡೆ ಪ್ರಕರಣಗಳು ದಾಖಲಾಗಿವೆ. ಇದೆಲ್ಲವೂ ಕಾಂಗ್ರೆಸ್ ಸಾಧನೆ ಎಂದರು

    ಸಿಎಂ ಸಿದ್ದರಾಮಯ್ಯ ಮೇಲೆ ಮೂಡಾ ಹಗರಣದ ಆರೋಪವಿದೆ. ನಮ್ಮ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮೇಲೆ ಸ್ಮಾರ್ಟ್ ಮೀಟರ್ ಹಗರಣದ ಆರೋಪವಿದೆ. ಅವರಿಗೆ ಕೋರ್ಟ್ ಸಹ ಛೀಮಾರಿ ಹಾಕಿದೆ. ವಾಲ್ಮೀಕಿ ಹಗರಣದಲ್ಲಿ ೧೮೭ ಕೋಟಿ ಗುಳುಂ ಆಗಿದೆ ಎನ್ನುವುದನ್ನು ಸರ್ಕಾರವೇ ಒಪ್ಪಿದೆ. ಅಬಕಾರಿ ಸಚಿವರ ತಿಮ್ಮಾಪುರ ವಿರುದ್ಧ ವಾರ್ಷಿಕ ೫೦೦ ಕೋಟಿ ರೂ. ಭ್ರಷ್ಟಾಚಾರದ ಆರೋಪದ ಆಡಿಯೋ ವೈರಲ್ ಆಗಿದೆ. ಎಂದು ದೂರಿದರು.

    ಪಂಚ ಗ್ಯಾರಂಟಿ ಪಂಕ್ಚರ್ ಆಗಿದೆ. ಗೃಹ ಲಕ್ಷ್ಮಿ ಪ್ರತಿ ತಿಂಗಳು ಬರುತ್ತಿಲ್ಲ. ಶಕ್ತಿ ಯೋಜನೆ ಬಂದ ಮೇಲೆ ರೂಟ್‌ಗಳಿಗೆ ಬಸ್ಸೇ ಇಲ್ಲ. ಶಾಲಾ ಮಕ್ಕಳು, ಪುರುಷರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಗುತ್ತಿಗೆ, ಸರೆ ಸರ್ಕಾರಿ ನೌಕರರಿಗೆ ೩ ರಿಂದ ೫ ತಿಂಗಳಿನಿಂದ ವೇತನ ಇಲ್ಲ. ಕಿಸಾನ್ ಸಮ್ಮಾನ್ ಸದ್ದಿಲ್ಲದೆ ರದ್ದಾಗಿದೆ. ರೈತ ವಿದ್ಯಾನಿಧಿ, ಎಸ್ಸಿಪಿ, ಟಿಎಸ್‌ಪಿ ೨೮ ಸಾವಿರ ಕೋಟಿ ಹಣ ದುರುಪಯೋಗವಾಗಿದೆ ಎಂದರು.

    ಪಿಎಫ್‌ಐ, ಎಸ್‌ಡಿಪಿಐ ಪ್ರಕರಣ ಹಿಂದಕ್ಕೆ ಪಡೆದ ಪರಿಣಾಮ ಹುಬ್ಬಳ್ಳಿ, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಮತಾಂಧರಿಂದ ದಾಳಿ ನಡೆದಿದೆ. ಗ್ಯಾರಂಟಿಗೆ ಪ್ರತಿ ತಿಂಗಳು ತುಂಗಲು ದುಡ್ಡಿಲ್ಲದೆ ಸಾಲ ಮಾಡಿ ಸರ್ಕಾರ ದಿವಾಳಿ ಆಗಿದೆ. ಬರೇ ಜಾಹಿರಾತು ನೀಡಿ ಸಾಧನೆ ಸರ್ಕಾರ ಎಂದು ಬಿಂಬಿಸಿಕೊಳ್ಳಲು ಹೊರಟಿದೆ ಎಂದು ಟೀಕಿಸಿದರು.

    ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ರೈತ ಮೊರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಡಿ.ಕಲ್ಮರುಡಪ್ಪ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಗ್ರಾಮಾಂತರ ಅಧ್ಯಕ್ಷ ಈಶ್ವರಳ್ಳಿ ಮಹೇಶ್ ಇದ್ದರು.

    Considering the price hike as an achievement the convention is set to be held

  • ಕಾಂಗ್ರಸ್ ಸರ್ಕಾರಕ್ಕೆ ಬೆಲೆಏರಿಕೆ ನಿತ್ಯದ ಕೆಲಸ

    ಕಾಂಗ್ರಸ್ ಸರ್ಕಾರಕ್ಕೆ ಬೆಲೆಏರಿಕೆ ನಿತ್ಯದ ಕೆಲಸ

    ಚಿಕ್ಕಮಗಳೂರು: ಇದೊಂದು ಬೇಜವಬ್ದಾರಿ ಸರ್ಕಾರ, ಬೆಲೆ ಏರಿಕೆಯ ತನ್ನ ಚಾಳಿಯನ್ನು ಬಿಟ್ಟಿಲ್ಲ. ಖಜಾನೆ ಖಾಲಿ, ಆಸ್ಪತ್ರೆಯಲ್ಲಿ ಔಷಧಿ ಇಲ್ಲ, ಮೂರು ಬಾರಿ ಮದ್ಯದ ಬೆಲೆ ಏರಿಕೆ. ಇದು, ನಿಮ್ಮ ಸಾಧನೆ ಎಂದು ವಿಧಾನ ಸಭೆಯ ಪ್ರತಿ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದ ಅವರು, ಬೆಲೆ ಏರಿಕೆ ನಿಮ್ಮ ನಿತ್ಯದ ಕೆಲಸವಾಗಿದೆ. ಎರಡು ವರ್ಷದ ನಿಮ್ಮ ಸಾಧನೆ ಏನು ಎಂದು ಅವರು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿ ನಾಳೆ ಕಾಂಗ್ರೆಸ್ ಪಕ್ಷ ನಡೆಸಲು ಉದ್ದೇಶಿಸಿರುವ ಸಾಧನಾ ರ್‍ಯಾಲಿಯ ಬಗ್ಗೆ ಮಾತನಾಡಿದರು

    ಮದ್ಯದ ಟ್ಯಾಕ್ಸ್ ಶೇ. ೧೦೦ ರಷ್ಟು ಹೆಚ್ಚಳ ಮಾಡಲಾಗಿದೆ. ಲೈಸನ್ಸ್ ಶುಲ್ಕ ೨೭ ರಿಂದ ೫೦ ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಐಎಂಎಲ್ ಲೈಸನ್ಸ್ ೪೫ ರಿಂದ ೯೫ ಸಾವಿರಕ್ಕೆ ಹೆಚ್ಚಿಸಲಾಗಿದೆ. ಮದ್ಯದ ದರ ಹೆಚ್ಚು ಮಾಡುವುದರಿಂದ ಮದ್ಯ ಕುಡಿಯುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಛೇಡಿಸಿದ್ದಾರೆ. ಮದ್ಯದ ದರ ಹೆಚ್ಚಳ ಆಗಿರುವುದರಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಇದೊಂದು ತೊಘಲಕ್ ದರ್ಬಾರ್ ಎಂದು ಆರೋಪಿಸಿದರು.

    ರಾಜ್ಯದ ಜನತೆಗೆ ಐದು ಗ್ಯಾರಂಟಿ ಕೊಡುತ್ತೇವೆ. ಯಾವುದೇ ಟ್ಯಾಕ್ಸ್ ಹಾಕೋದಿಲ್ಲ ಎಂದು ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ಈ ಮಾತನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಹಣದ ಕೊರತೆಯಾಗಿದ್ದರಿಂದ ಎಲ್ಲಾ ವಸ್ತುಗಳ ಮೇಲೆ ಮನಬಂದಂತೆ ತೆರಿಗೆ ವಿಧಿಸುತ್ತಿದ್ದಾರೆ ಎಂದು ಹೇಳಿದ ಅಶೋಕ್, ಕಳೆದ ಎರಡು ವರ್ಷಗಳಲ್ಲಿ ಎಷ್ಟು ಅಣೆಕಟ್ಟನ್ನು ಕಟ್ಟಿದ್ದಿರಾ ?, ಎಷ್ಟು ಅಣೆಕಟ್ಟುಗಳನ್ನು ಎತ್ತರಿಸಿದ್ದೀರಾ ಎಂದು ಪ್ರಶ್ನಿಸಿದರು.

    ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಹಣ ಕೊಡುತ್ತಿಲ್ಲವೆಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಅಭಿವೃದ್ಧಿ ಮರೀಚಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಸಂಭ್ರಮಾಚರಣೆ ಹಾಸ್ಯಸ್ಪದ. ಮೂಡಾ ಅವ್ಯವಹಾರ, ವಾಲ್ಮೀಕಿ ಹಗರಣ, ಪ್ರಾಮಾಣಿಕ ಅಧಿಕಾರಿಗಳು ಬಲಿ, ಸುಮಾರು ೨ ಸಾವಿರ ಮಂದಿ ರೈತರ ಆತ್ಮಹತ್ಯೆ. ರೈತರ ಸಾವಿಗೆ ನೀವೇ ಕಾರಣವೆಂದು ಸಂಭ್ರಮ ಮಾಡ್ತಾ ಇದೀರಾ ಎಂದು ಪ್ರಶ್ಸಿಸಿದ್ದರು.

    ದೇಶದಲ್ಲಿ ಸಿಂಧೂರ ಸಮರ ನಿಂತಿಲ್ಲ. ಗಡಿ ಭಾಗದಲ್ಲಿ ಇಂದಿಗೂ ಕೂಡ ಯುದ್ಧದ ವಾತಾವರಣ ಇದೆ. ಇಂತಹ ಸಂದರ್ಭದಲ್ಲಿ ನಿಮಗೆ ಸಮಾವೇಶ ಬೇಕಾಗಿತ್ತಾ, ಕಾಂಗ್ರೆಸ್‌ನ ಹಿರಿಯ ಮತ್ತು ಮರಿ ಮುಖಂಡರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ೪ ಪ್ಲೇನ್ ಹಾರಿಸಿದ್ದು ಬಿಟ್ರೆ ಉಗ್ರರಿಗೆ ಏನೂ ಮಾಡಿಲ್ಲವೆಂದು ಹೇಳಿರುವವರಿಗೆ ತಲೆ ಕೆಟ್ಟಿದೆ. ಅವರಿಗೆ ತಾಕತ್ತು ಇದ್ರೆ ಯುದ್ಧದ ಗಡಿಯ ನಿಂತು ಬರಲಿ ಸವಾಲು ಹಾಕಿದರು.

    ಕಾಂಗ್ರೆಸ್ ಪಕ್ಷದ ಕಿರಿಯ ಮುಖಂಡರಿಗೆ ದೇಶದ ಬಗ್ಗೆ ಗೌರವ ಇಲ್ಲ, ಸೈನಿಕರ ಮೇಲೆ ವಿಶ್ವಾಸ ಇಲ್ಲ. ಮತೀಯ ವಾದ, ವೋಟ್ ಪಾಲಿಟಿಕ್ಸ್ ಬಿಟ್ಟರೆ ಬೇರೇನೂ ಇವರ ತಲೆಯಲ್ಲಿ ಇಲ್ಲ. ಈ ಸಮಾವೇಶ ಆದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಹೇಳಿ, ಬ್ರಾಂಡ್ ಬೆಂಗಳೂರು ಹೋಗಿದೆ. ಮುಳುಗುತ್ತಿರುವ, ಕಸದ ರಾಶಿ, ಗುಂಡಿ ಬಿದ್ದಿರುವ ರಸ್ತೆಯ ಡಿಕೆಶಿ ಬೆಂಗಳೂರು ಆಗಿದೆ ಎಂದು ಆರೋಪಿಸಿದರು.

    ಬಾಣಾಂತಿಯರ ಸಾವು, ಲವ್ ಜಿಹಾದ್ ಹೆಸರಿನಲ್ಲಿ ಕೊಲೆ, ಗಣೇಶ ವಿಗ್ರಹವನ್ನು ಪೊಲೀಸ್ ವಾಹನದಲ್ಲಿ ತೆಗೆದುಕೊಂಡು ಹೋಗುವುದು ಇದು ನಿಮ್ಮ ಸಾಧನೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಆಗಿಲ್ಲ. ಸಾರಿಗೆ ನೌಕರರಿಗೆ ಸಂಬಳ ಕೊಟ್ಟಿಲ್ಲ, ರೈತರಿಗೆ ಹಾಲಿನ ಬಾಕಿ ಹಣ ಕೊಟ್ಟಿಲ್ಲ, ರಸ್ತೆಗಳಲ್ಲಿ ಬಿದ್ದಿರೋ ಗುಂಡಿ ಮುಚ್ಚಲು ಆಗ್ತಾ ಇಲ್ಲ. ಹಣ ಇಲ್ಲದೆ ಖಜಾನೆ ಖಾಲಿ ಆದ್ರೂ ದೊಂಬರಾಟ ನಿಂತಿಲ್ಲ ಎಂದರು.

    ಜನರು ಕಟ್ಟಿರೋ ತೆರಿಗೆ ಹಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಜನರನ್ನು ಪಾತಾಳಕ್ಕೆ ತಳ್ಳಿ, ಇವರು ಬಿರಿಯಾನಿ ಊಟ ಮಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ರೈತರ, ನಿಷ್ಟಾವಂತ ಅಧಿಕಾರಿಗಳ ಸಮಾಧಿಯ ಮೇಲೆ ಸರ್ಕಾರ ಸಮಾವೇಶ ಮಾಡುತ್ತಿದೆ ಎಂದು ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಮುಖ್ಯ ಸಚೇತಕ ರವಿಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರಡಪ್ಪ, ಮುಖಂಡರಾದ ದೀಪಕ್ ದೊಡ್ಡಯ್ಯ, ಪುಷ್ಪರಾಜ್, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.

    Price hikes are a daily occurrence for the Congress government.

  • ಶಶಿತರೂರ್ ಪ್ರತಿನಿಧಿಸಿರುವುದು ಭಾರತದ ೧೪೦ ಕೋಟಿ ಜನರನ್ನು

    ಶಶಿತರೂರ್ ಪ್ರತಿನಿಧಿಸಿರುವುದು ಭಾರತದ ೧೪೦ ಕೋಟಿ ಜನರನ್ನು

    ಚಿಕ್ಕಮಗಳೂರು: ಶಶಿತರೂರ್ ಭಾರತ ಹಾಗೂ ೧೪೦ ಕೋಟಿ ಜನರನ್ನು ಪ್ರತಿನಿಧಿಸಿರುವುದು. ಬಿಜೆಪಿ ಅಥವಾ ಕಾಂಗ್ರೆಸ್ ಪ್ರತಿನಿಧಿಸಲು ಹೋಗಿರುವುದು ಅಲ್ಲಾ, ಭಾರತದ ಜನರ ಭಾವನೆಯನ್ನು ಪ್ರತಿನಿಧಿಸಿ ಹೋಗುತ್ತಿದ್ದಾರೆ ಎಂದಾಗ ಅದನ್ನ ಗೌರವಿಸ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ತಿಳಿಸಿದರು

    ಅವರು ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿ ರಾಷ್ಟ್ರೀಯ ಪಕ್ಷ ಹಾಗೂ ರಾಷ್ಟ್ರೀಯ ಪ್ರಜ್ಞೆ ಇರುವ ಪಕ್ಷಗಳ ಕರ್ತವ್ಯ ಕಾಂಗ್ರೆಸ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಂತ ಹೆಸರನ್ನ ಇಟ್ಟುಕೊಂಡಿದೆ ನ್ಯಾಷನಲ್ ಅನ್ನೋದನ್ನ ಕಾಂಗ್ರೆಸ್‌ನವರು ಮರೆಯ ಬಾರದು ಸಲಹೆ ನೀಡಿದರು

    ಪಾಕಿಸ್ತಾನದ ಉಗ್ರ ಮುಖವಾಡ ಬಯಲು ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿಯೋಗಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್‌ರನ್ನು ಆಯ್ಕೆ ಮಾಡಿದ ವಿಷಯವು ಇದೀಗ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣದ ಕುರಿತು ಪ್ರತಿಕ್ರಿಯೆ ನೀಡಿದರು.

    ಕೌರವರು ಹಾಗೂ ಪಾಂಡವರ ಕಥೆಯ ಮೂಲಕ ಕಾಂಗ್ರೆಸ್ಸಿಗರನ್ನು ಕುಟುಕಿದ್ದಾರೆ. ಕೌರವರು ಪಾಂಡವರನ್ನ ವನವಾಸಕ್ಕೆ ಕಳುಹಿಸ್ತಾರೇ, ಈ ಸಂದರ್ಭದಲ್ಲಿ ಕೌರವರು ಹಾಗೂ ಗಂಧರ್ವರ ನಡುವೆ ಯುದ್ದ ನಡೆಯುತ್ತೇ ಗಂಧರ್ವರು ಕೌರವರನ್ನು ಸೆರೆ ಹಿಡಿಯುತ್ತಾರೆ. ಆಗ ಭೀಮಾ ಹಲ್ಲು ಕಡಿದು ಹೀಗೆ ಆಗಬೇಕಿತ್ತು ಎನ್ನುತ್ತಾನೆ. ಆಗ ಧರ್ಮರಾಯ ಅರ್ಜುನನಿಗೆ ಹೇಳಿ ಅವರನ್ನು ಬಿಡಿಸಿಕೊಂಡು ಬರಲು ಹೇಳುತ್ತಾನೆ. ಆಗ ಧರ್ಮರಾಯ ವಯಂ ಪಂಚಾದಿಕಂ ಶತಂ ಎಂಬ ಮಾತನ್ನು ಹೇಳುತ್ತಾನೆ ಎಂದರು.

    Shashi Tharoor represents 1.4 billion people of India.

  • ನಟನ ರಂಗಭೂಮಿ ಡಿಪ್ಲೋಮಾಗೆ ಆಹ್ವಾನ

    ನಟನ ರಂಗಭೂಮಿ ಡಿಪ್ಲೋಮಾಗೆ ಆಹ್ವಾನ

    ಚಿಕ್ಕಮಗಳೂರು: ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯ ರಂಗಭೂಮಿ ಡಿಪ್ಲೊಮಾ ೨೦೨೫-೨೬ (ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿ) ನೇ ಸಾಲಿನ ಪ್ರವೇಶ ಪ್ರಕ್ರಿಯೆ ಮತ್ತು ಅಭ್ಯರ್ಥಿಗಳ ಸಂದರ್ಶನ (ಆಡಿಷನ್) ಮೇ ೨೫ರಂದು ಬೆಳಿಗ್ಗೆ ೧೦ ಗಂಟೆಗೆ ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ನಡೆಯಲಿದೆ.

    ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನಶೀಲವಾಗಿದೆ. 

    ತನ್ನ ಚಟುವಟಿಕೆಯ ಭಾಗವಾಗಿ ೧೬ ರಿಂದ ೩೨ ವರ್ಷದ ಒಳಗಿನ ಆಸಕ್ತ ಯುವಕ ಯುವತಿಯರಿಗೆ ಒಂದು ವರ್ಷದ ವಸತಿ ರಹಿತ ರಂಗಭೂಮಿ ಡಿಪ್ಲೊಮಾ ಕೋರ್ಸ್ ಅನ್ನು ನಡೆಸುತ್ತಿದ್ದು, ಕಳೆದ ಅನೇಕ ವರ್ಷಗಳಿಂದ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸಿ ನಟನ ರಂಗಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಟನ ರಂಗಶಾಲೆಯಲ್ಲಿ ತರಬೇತಿ ಪಡೆದ ಸುಮಾರು ೫೦೦ಕ್ಕೂ ಹೆಚ್ಚು ಕಲಾವಿದರು ದೇಶದಾದ್ಯಂತ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

    ಪ್ರತಿದಿನ ಸಂಜೆ ೫.೩೦ರಿಂದ ರಾತ್ರಿ ೯ರವರೆಗೆ ತರಗತಿಗಳು ನಡೆಯಲಿದ್ದು, ಅಭಿನಯ, ರಂಗ ಸಿದ್ಧಾಂತ, ರಂಗ ಸಂಗೀತ, ಆಂಗಿಕ ಚಲನೆ, ಧ್ವನಿ ಬಳಕೆ, ಪ್ರಸಾಧನ, ಬೆಳಕು, ರಂಗ ವಿನ್ಯಾಸ, ಪರಿಕರ ನಿರ್ಮಾಣ, ರಂಗ ಇತಿಹಾಸ, ನಾಟಕ ತಯಾರಿ, ಪ್ರದರ್ಶನ.. ಹೀಗೆ ರಂಗಭೂಮಿಯ ಬೇರೆ ಬೇರೆ ಆಯಾಮಗಳ ಪರಿಚಯಾತ್ಮಕ ಪ್ರಾಯೋಗಿಕ ತರಗತಿಗಳು ನಡೆಯಲಿವೆ. ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಮೇಲ್ಕಂಡ ದಿನಾಂಕದಂದೇ ಸಂದರ್ಶನದಲ್ಲಿ ಭಾಗವಹಿಸಬಹುದು.

    ರಂಗಭೂಮಿಯನ್ನು ಗಂಭೀರವಾಗಿ ಅಭ್ಯಸಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ (ತಿತಿತಿ.ಟಿಚಿಣಚಿಟಿಚಿmಥಿsuಡಿu.oಡಿg) ಅಥವಾ ಕಚೇರಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಪಡೆದು ಅಂಚೆ ಮುಖಾಂತರ ಅಥವಾ ನೇರವಾಗಿ ತಲುಪಿಸಬೇಕು. ಆಡಿಷನ್ ಮತ್ತು ಪ್ರವೇಶಾತಿ ಕುರಿತ ಸೂಚನೆಗಳು ಮತ್ತು ಹೆಚ್ಚಿನ ಮಾಹಿತಿಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ೭೨೫೯೫೩೭೭೭೭, ೯೪೮೦೪೬೮೩೨೭, ೯೮೪೫೫೯೫೫೦೫ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ನಟನ ರಂಗಶಾಲೆಯ ಪ್ರಕಟಣೆ ತಿಳಿಸಿದೆ. 

    Invitation to the actor’s theater diploma

  • ಗೀತ- ಸಾಹಿತ್ಯ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ

    ಗೀತ- ಸಾಹಿತ್ಯ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ

    ಚಿಕ್ಕಮಗಳೂರು: ಸಂಗೀತ, ಸಾಹಿತ್ಯ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು ಅದನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಮನೋರಂಜನೆ ಸಂಗೀತ ಮಹಾವಿದ್ಯಾಲಯ ಟ್ರಸ್ಟ್‌ನ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪಾಶ್ಚ್ಯಾತ್ಯ ಸಂಸ್ಕೃತಿಗೆ ಯುವ ಪೀಳಿಗೆ ಮಾರುಹೋಗುತ್ತಿದ್ದು, ಸಂಗೀತ ಪರಂಪರೆಯನ್ನು ಉಳಿಸುವಲ್ಲಿ ಯುವಜನತೆಯ ಪಾತ್ರ ಮಹತ್ವವಾಗಿದೆ ಎಂದರು.

    ಭಾರತೀಯ ಸಂಸ್ಕೃತಿಯ ಅವಿಚಿನ್ನ ಭಾಗವಾದ ಸಾಂಸ್ಕೃತಿಕ, ಧಾರ್ಮಿಕ,ಸಾಮಾಜಿಕ ಮೌಲ್ಯಗಳಿಗೆ ತರ್ಪಣ ಬಿಡುತ್ತಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ದೇಶೀಯ ಸಂಗೀತ ಕಲೆ ಉಳಿಸುವಲ್ಲಿ ಮತ್ತು ಕರ್ಮ,ಯೋಗ ,ಜ್ಞಾನಮಾರ್ಗದಲ್ಲಿ ತೊಡಗಿಸಿಕೊಂಡಿರುವ ಮನರಂಜನೆ ಸಂಗೀತ ಮಹಾವಿದ್ಯಾಲಯದ ಕಾರ್ಯಶ್ಲಾಘನೀಯ ಎಂದರು.

    ಸಂಗೀತಗಾರರಿಗೆ ಮತ್ತು ಕೇಳುಗರಿಗೆ ಮೆದುಳಿನ ಅಗತ್ಯವಿಲ್ಲ ಹೃದಯವಂತಿಕೆ ಇರಬೇಕು. ಇಂದಿನ ಅಬ್ಬರದ ಕಾರ್ಯಕ್ರಮಗಳ ಅಪಸಂಸ್ಕೃತಿಯ ಹೊರಳು ಹಾದಿಯಲ್ಲಿರುವ ಸಮಾಜದಲ್ಲಿ ಸಂಸ್ಕೃತಿಯನ್ನು ಉಳಿಸಿ,ಬೆಳೆಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.

    ಶಿವಮೊಗ್ಗದ ಸಂಗೀತ ವಿದ್ವಾನ್‌ಗುರುಗುಹಾನಾಗರಾಜ್ ಮಾತನಾಡಿ ಶಾಸ್ತ್ರೀಯ ಸಂಗೀತ ಮನಸ್ಸು,ಬುದ್ಧಿಗಳನ್ನು ಎಚ್ಚರ ಸ್ಥಿತಿಯಲ್ಲಿಡುವ ಮಾಧ್ಯಮ ವಾಗಿದ್ದು,ಭಾರತದಲ್ಲಿ ಎರಡು ಸಂಗೀತ ಪರಂಪರೆಗಳಿದ್ದರೂ ಸಹ ಆ ಸಂಗೀತವನ್ನು ಆಸ್ವಾದಿಸುವ ವಾತಾವರಣ ಸೃಷ್ಟಿಸುವಲ್ಲಿ ಸಂಗೀತಗಾರರು ಎಂದು ವಿಫಲರಾಗಿದ್ದಾರೆ ಎಂದು ವಿಷಾದಿಸಿದರು.

    ೩೦೦೦ ವರ್ಷಕ್ಕೂ ಹೆಚ್ಚಿನ ವರ್ಷಗಳ ಇತಿಹಾಸವಿರುವ ಸಂಗೀತವನ್ನು ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ ಪೋಷಕರು ಮಕ್ಕಳನ್ನು ಸಂಗೀತ ಔಪಾಸಕರನ್ನಾಗಿ ಮಾಡಬೇಕು ಎಂದ ಅವರು ಸಂಗೀತಗಾರರು ಶೋತ್ರುಗಳಿಗಾಗಿ ಹಾಡುವ ಪರಿಪಾಠ ಬೆಳೆಸಿಕೊಳ್ಳುವ ಮೊದಲು ತಮ್ಮ ಆತ್ಮ ಸಂತೋಷಕ್ಕಾಗಿ ಹಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.

    ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ರಿಜಿಸ್ಟರ್ ಸಿ ಕೆ ಸುಬ್ಬರಾಯ ಮಾತನಾಡಿ ಪುರಂದರದಾಸರು,ಕನಕದಾಸರು ಸೇರಿದಂತೆ ದಾಸ ಶ್ರೇಷ್ಠರು ನೀಡಿರುವ ಕೀರ್ತನೆಗಳಲ್ಲಿ ಮಾನವೀಯ ಮೌಲ್ಯಗಳು, ತತ್ವ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡದ್ದೆ ಆದರೆ ಬದುಕನ್ನು ಸರಿದಾರಿಯಲ್ಲಿ ಸಾಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಮನೋರಂಜನಿ ಸಂಗೀತ ಮಹಾವಿದ್ಯಾಲಯದ ಮುಖ್ಯಸ್ಥ ಬಿ.ಸಿ ಜಯರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ ೧೯೯೦ರಲ್ಲಿ ಆರಂಭಗೊಂಡ ಮನರಂಜನೆ ಸಂಗೀತ ವಿದ್ಯಾಲಯ ೨೫ ವರ್ಷಗಳ ಸುಧೀರ್ಘ ಪಯಣದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತಗಾರವನ್ನಾಗಿಸಿ ರೂಪಿಸಿದೆ. ೨೫ ವರ್ಷಗಳಿಂದ ಸಂಸ್ಥೆಯು ಆಯೋಜಿಸಿಕೊಂಡು ಬಂದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

    ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದುಷಿ ಅರ್ಪಣಾ ಜಯರಾಮ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾಕ್ಟರ್‌ರಮೇಶ್, ಬಿ ಎಚ್ ನರೇಂದ್ರ ಪೈ ಉಪಸ್ಥಿತರಿದ್ದರು. ಅರ್ಪಿತ ಪ್ರಾರ್ಥಿಸಿ, ಸುಜೇತಜಯರಾಮ್,ಗೀತಾನಿ ರೂಪಿಸಿದರು.

    Music and literature are an integral part of Indian culture.

  • ಮಲೆನಾಡಿನಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ

    ಮಲೆನಾಡಿನಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಕ್ರಮ

    ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿಯನ್ನೂ ಹೊಂದಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಮಾತ್ರವಲ್ಲದೆ, ನೆರೆಯ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲೂ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಮೂರೂ ಜಿಲ್ಲೆಗಳಿಗೆ ಅನ್ವಯವಾಗುವಂತೆ ಕಾಡಾನೆ ನಿಯಂತ್ರಣಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

    ಅನುಪಾಲನಾ ವರದಿಯ ಆಧಾರದ ಮೇಲೆ ಸಭೆ ನಡೆಸುವಂತೆ ಕೆಲವು ಶಾಸಕರು ಸಲಹೆ ನೀಡಿದರು. ಆದರೆ, ವಿಧಾನಪರಿಷತ್‌ನ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಅವರು ಕಾಡಾನೆಗಳ ಉಪಟಳ ನಿಯಂತ್ರಣ ಕುರಿತಂತೆ ಚರ್ಚೆಗೆ ಮನವಿ ಮಾಡಿದರು. ಅಲ್ಲದೆ, ಪ್ರಮುಖವಾಗಿ ಮೂಡಿಗೆರೆ ತಾಲೂಕಿನಲ್ಲಿ 55 ಕಾಡಾನೆಗಳು ನಾಲ್ಕೈದು ಗುಂಪುಗಳಲ್ಲಿ ಓಡಾಡುತ್ತಿವೆ. ಇವುಗಳಿಂದಾಗಿ ರೈತರು, ಕಾಫಿ ಬೆಳೆಗಾರರಿಗೆ ಅಪಾರ ಹಾನಿಯಾಗಿದೆ. ಜನ ವಸತಿ ಪ್ರದೇಶಕ್ಕೂ ಬಂದು ತೊಂದರೆ ನೀಡುತ್ತಿವೆ ಎಂದು ಪ್ರಾಣೇಶ್ ಹೇಳಿದರು.

    ಕಾಡಾನೆಗಳ ಕುರಿತು ಮಾಹಿತಿ ನೀಡಿದ ಚಿಕ್ಕಮಗಳೂರು ಡಿಎಫ್‌ಓ ರಮೇಶ್‌ ಬಾಬು, ಚಿಕ್ಕಮಗಳೂರು ವಲಯದಲ್ಲಿ 35, ಕೊಪ್ಪ ವಲಯದಲ್ಲಿ 125, ಭದ್ರಾ ವನ್ಯಜೀವಿ ವಿಭಾಗದಲ್ಲಿ 400 ಕಾಡಾನೆಗಳು ಇವೆ. ಕಳೆದ 2-3 ವರ್ಷಗಳಿಂದ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮೂಡಿಗೆರೆ ತಾಲೂಕಿಗೆ ಕಾಡಾನೆಗಳ ಹಿಂಡು ಬರುತ್ತಿವೆ.ಪ್ರಸ್ತುತ ನಾಲ್ಕೈದು ಗುಂಪುಗಳು ಓಡಾಡುತ್ತಿದ್ದು, ಅವುಗಳ ಚಲನವಲನದ ಮೇಲೆ ನಿಗಾ ಇಡಲು ಕೆಲವು ಆನೆಗಳಿಗೆ ಕಾಲರ್‌ ಐಡಿ ಹಾಕಲಾಗಿದೆ ಎಂದು ಹೇಳಿದರು.

    ಮಧ್ಯೆಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಕಾಡಾನೆಗಳಿಗೆ ಕಾಡಿನಲ್ಲಿಯೇ ಬೇಕಾಗುವಷ್ಟು ಆಹಾರ ಸಿಕ್ಕಿದರೆ ಅವುಗಳು ಜನ ವಸತಿ ಪ್ರದೇಶಕ್ಕೆ ಬರುವುದಿಲ್ಲ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ಯೋಜನೆ ರೂಪಿಸಬೇಕು ಎಂದು ಸಲಹೆ ಮಾಡಿದರು.

    ಈ ವೇಳೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಕಾಡಿನಿಂದ ಜನವಸತಿ ಪ್ರದೇಶಗಳು ಮತ್ತು ಕೃಷಿ ಜಮೀನುಗಳಿಗೆ ಬರುವ ಕಾಡಾನೆಗಳನ್ನು ಹಿಮ್ಮೆಟ್ಟುವ ಕೆಲಸ ಇಲಾಖೆಯಿಂದ ಆಗುತ್ತಿದೆ. ಸೆರೆ ಸಿಕ್ಕ ಆನೆಗಳನ್ನು ಬಿಡಾರಕ್ಕೆ ಬಿಡಲು ಭದ್ರಾ ವನ್ಯಜೀವಿ ವಿಭಾಗದಲ್ಲಿ ಆನೆಗಳ ಧಾಮವನ್ನು ನಿರ್ಮಾಣ ಮಾಡು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

    ಈ ವೇಳೆ ಶಾಸಕಿ ನಯನಾ ಮೋಟಮ್ಮ ಮಧ್ಯೆಪ್ರವೇಶಿಸಿ, ಸ್ಥಳೀಯವಾಗಿ ಓಡಾಡುತ್ತಿರುವ ಆನೆಗಳಿಂದ ಜನರಿಗೆ ಯಾವುದೇ ತೊಂದರೆ ಆಗುತ್ತಿಲ್ಲ, ಹಾಸನ ಜಿಲ್ಲೆಯಿಂದ ಹಿಂಡು ಹಿಂಡಾಗಿ ಬರುತ್ತಿರುವ ಆನೆಗಳಿಂದ ತೊಂದರೆಯಾಗುತ್ತಿದೆ ಎಂದಾಗ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ದನಿಗೂಡಿಸಿ, ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾದರೆ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳ ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

    ಆನೆಗಳಿಗೆ ಕಾಡಿನಲ್ಲಿ ಆಹಾರ ಸಿಗುತ್ತಿಲ್ಲ. ಹಣ್ಣಿನ ಮರಗಳು ಹಾಗೂ ಬಿದಿರು ಬೆಳೆಸಬೇಕು ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಹೇಳಿದಾಗ, ಈ ವರ್ಷ 30 ಸಾವಿರ ಬಿದಿರು ಸಸಿಗಳನ್ನು ನಡೆಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಡಿಎಫ್‌ಓ ರಮೇಶ್‌ ಬಾಬು ಹೇಳಿದರು.

    ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ಸಚಿವ ಕೆ.ಜೆ. ಜಾರ್ಜ್‌ ಅವರು, ಆನೆಗಳು ನಾಡಿಗೆ ನುಗ್ಗುವುದನ್ನು ನಿಯಂತ್ರಿಸುವ ಸಂಬಂಧ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯನ್ನು ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

    ಇದಾದ ಬಳಿಕ ಅನುಪಾಲನಾ ವರದಿ ಆಧಾರದ ಮೇಲೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಶಾಸಕರಾದ ಕೆ.ಎಸ್‌.ಆನಂದ್‌, ಶ್ರೀನಿವಾಸ್‌, ಎಚ್‌.ಡಿ.ತಮ್ಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ.ರೇವಣ್ಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹಾಗೂ ಜಿಪಂ ಮುಕ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ಉಪಸ್ಥಿತರಿದ್ದರು.

    Action to control wild elephants in the highlands