Category: ತರೀಕೆರೆ

  • ತರೀಕೆರೆ ತಾಲೂಕಿನ ರಹಮತ್‌ ಗೆ ರಾಜ್ಯೋತ್ಸವ ಪ್ರಶಸ್ತಿ

    ತರೀಕೆರೆ ತಾಲೂಕಿನ ರಹಮತ್‌ ಗೆ ರಾಜ್ಯೋತ್ಸವ ಪ್ರಶಸ್ತಿ

    ಚಿಕ್ಕಮಗಳೂರು: ೨೦೨೫ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ರಹಮತ್‌ ತರೀಕೆರೆ ಅವರನ್ನು ಆಯ್ಕೆ ಮಾಡಲಾಗಿದೆ. ರಹಮತ್‌ ತರೀಕೆರೆ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಮತಳದವರಾಗಿದ್ದು, ದಸ್ತಗಿರಿಸಾಬ್‌ ಮತ್ತು ಜ್ಯೂಲೇಕ ಬಿ. ದಂಪತಿಗಳ ಪುತ್ರರಾಗಿ ಜನಿಸಿದರು.

    ಕಡುಬಡತನ, ತುಂಬು ಕುಟುಂಬದಲ್ಲಿ ಜನಿಸಿದ ಅವರು, ಕಷ್ಟಕಾಪಣ್ಯಗಳನ್ನು ಬಾಲ್ಯದಲ್ಲಿಯೆ ಅನುಭವಿಸಿದವರು. ಸಮತಳದಿಂದ ತರೀಕೆರೆಗೆ ಅಪ್ಪ ಅಣ್ಣರೊಂದಿಗೆ ಬಂದು ನೆಲೆಸಿದರು. ರೈತರ ಉಪಕರಣಗಳಾದ ಗಾಡಿ ಅಚ್ಚು, ಕತ್ತು, ಕುಡ್ಲು ತಯಾರಿಕಾ ವೃತ್ತಿ (ಕುಲುಮೆ) ಕುಟುಂಬದಲ್ಲಿ ಜನಿಸಿದ ಇವರು ಬಡತನದಲ್ಲಿ ಶಿಕ್ಷಣ ಪಡೆದುಕೊಂಡರು.

    ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ವಿಷಯವನ್ನು ಆಯ್ಕೆ ಮಾಡಿಕೊಂಡು ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ೧೯೮೩ರಲ್ಲಿ ಏಳು ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಪ್ರೋ.ಎಚ್‌.ಎಂ.ಚನ್ನಯ್ಯ ಅವರ ಮರ‍್ಗರ‍್ಶನದಲ್ಲಿ ೧೯೮೮ರಲ್ಲಿ ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ ಪ್ರಬಂಧಕ್ಕೆ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡರು.

    ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ರಹಮತ್‌ ತರೀಕೆರೆ ಅವರು, ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಭಾಷಾಕಾಯದ ಡೀನ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ನೆಲೆಸಿದ್ದಾರೆ.

    ಇವರ ಸಾಹಿತ್ಯ ಕೃಷಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿದ್ದು, ಕತ್ತಿಯಂಚಿನ ದಾರಿ ಕೃತಿಗೆ ೨೦೧೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ದೇಶದಲ್ಲಿ ಅಸಹಿಷ್ಟುತೆಯನ್ನು ವಿರೋಧಿಸಿ ಪ್ರಶಸ್ತಿಯನ್ನು ಮರಳಿಸಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು. ಪ್ರತಿ ಸಂಸ್ಕೃತಿಗೆ ಕೃತಿಗೆ ರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೯೩), ರ‍್ನಾಟಕ ಸೂಫಿಗಳು ಕೃತಿಗೆ ರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೯೮), ಅಂಡಮಾನ್‌ ಕನಸು ಕೃತಿಗೆ ರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೨೦೦೦), ಸಾಹಿತ್ಯ ವಿರ‍್ಶಾ ಕ್ಷೇತ್ರದ ಒಟ್ಟು ಕೊಡುಗೆಗಾಗಿ ೨೦೦೮ರಲ್ಲಿ ಜಿಎಸ್‌ಎಸ್‌ ಪ್ರಶಸ್ತಿ, ಶಿವಮೊಗ್ಗ ರ‍್ನಾಟಕ ಸಂಘದಿಂದ ಲಂಕೇಶ್‌ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಾ.ಮಾ.ನಾಯಕ್‌ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದಾರೆ.

    ಪ್ರತಿಸಂಸ್ಕೃತಿ, ರ‍್ನಾಟಕ ಸೂಫಿಗಳು, ಅಂಡಮಾನ್‌ ಕನಸು, ರ‍್ನಾಟಕ ನಾಥಪಂಥ, ರ‍್ಮಪರೀಕ್ಷೆ ಇವರ ಪ್ರಮುಖ ಕೃತಿಗಳಾಗಿದ್ದು, ಜತೆಗೆ ಮರದೊಳಗಿನ ಕಿಚ್ಚು, ಸಾಂಸ್ಕೃತಿಕ ಅಧ್ಯಯನ, ಲೋಕ ವಿರೋಧಿಗಳ ಜೊತೆಯಲ್ಲಿ, ಕತ್ತಿಯಂಚಿನ ದಾರಿ,ಹೊಸ ತಲೆಮಾರಿನ ತಲ್ಲಣ, ಚಿಂತನೆಯ ಪಾಡು, ನೇತುಬಿದ್ದ ನವಿಲು, ರ‍್ನಾಟಕ ಗುರುಪಂಥ ಸೇರಿದಂತೆ ಜನಪದ, ಸಂಶೋಧನೆ, ವಿರ‍್ಶೆ, ಚಿಂತನೆ, ಸಂಕಲನ, ಪ್ರವಾಸ ಕಥನಗಳು, ಜೀವನ ಚರಿತ್ರೆ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

    ರ‍್ದು ಮಾತೃಭಾಷೆಯಾಗಿದ್ದರು ಕನ್ನಡದ ಮೇಲೆ ಒಲವು ಬೆಳೆಸಿಕೊಂಡಿದ್ದ ರಹಮತ್‌ ತರೀಕೆರೆ ಅವರು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಪ್ರಗತಿಪರ ಹೋರಾಟಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ೭೦ನೇ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ನ.೧ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಕರ‍್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

    Rajyotsava Award to Rahmat of Tarikere Taluk

  • ರಾಜ್ಯ ಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ ಸ್ಥಾನ

    ರಾಜ್ಯ ಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ ಸ್ಥಾನ

    ತರೀಕೆರೆ: ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ವಿವಿಧ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 14 ಹಾಗೂ 17 ವರ್ಷ ವಯೋಮಿತಿಯೊಳಗಿನ ಬಾಲಕರ ಮತ್ತು ಬಾಲಕಿಯರ ಹೊನಲು ಬೆಳಕಿನ ರಾಜ್ಯ ಮಟ್ಟದ ವಾಲಿಬಾಲ್ ಟೂರ್ನಿಯ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ ಸ್ಥಾನ ಗೆದ್ದುಕೊಂಡಿದೆ.

    ಬೆಳಗಾವಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ, ಬೆಂಗಳೂರು ತಂಡ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದವು.

    14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೈಸೂರು ತಂಡ ಪ್ರಥಮ, ಕಲಬುರಗಿ ತಂಡ ದ್ವಿತೀಯ, 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರು ಪ್ರಥಮ, ಮೈಸೂರು ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದವು.

    ಶಾಸಕ ಜಿ.ಎಚ್.ಶ್ರೀನಿವಾಸ್ ಬಹುಮಾನ ವಿತರಿಸಿದರು. ಡಿಡಿಪಿಐ ತಿಮ್ಮರಾಜು, ಎ ಸಿ ಎನ್.ವಿ.ನಟೇಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಫಾಲಾಕ್ಷಮೂರ್ತಿ, ಬಿಇಒ ಪರಶುರಾಮಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ತರೀಕೆರೆ ತಾಲ್ಲೂಕು ಘಟಕದ ಅಧ್ಯಕ್ಷ ಅನಂತಪ್ಪ, ಪ್ರಧಾನ ಕಾರ್ಯದರ್ಶಿ ದೇವರಾಜ್, ಅಜ್ಜಂಪುರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವೇದಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಭಾಗವಹಿಸಿದ್ದರು.

    Mysore team wins first place in girls’ category at state-level volleyball tournament

  • ಬುಕ್ಕಾಂಬುಧಿ ಬೆಟ್ಟದಲ್ಲಿ ಅಮವಾಸ್ಯೆ ಪೂಜೆ

    ಬುಕ್ಕಾಂಬುಧಿ ಬೆಟ್ಟದಲ್ಲಿ ಅಮವಾಸ್ಯೆ ಪೂಜೆ

    ಅಜ್ಜಂಪುರ:  ಪರಮ ತಪಸ್ವಿ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಪಗೈದ ಬುಕ್ಕಾಂಬುಧಿ ಬೆಟ್ಟದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ರುದ್ರಾಭಿಷೇಕ ಅಷ್ಟೋತ್ತರ ಮಹಾಮಂಗಲ ಕಾರ್ಯಕ್ರಮಗಳು ಜರುಗುತ್ತವೆ ಎಂದು ಟ್ರಸ್ಟಿನ ಅಧ್ಯಕ್ಷರಾದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಪಡಿಸಿದರು.

    ಅವರು ಗುರುವಾರ ತಾಲೂಕಿನ ಬುಕ್ಕಾಂಬುಧಿ ಬೆಟ್ಟದಲ್ಲಿ ಅಮವಾಸ್ಯೆ ಪೂಜೆ ನೆರವೇರಿಸಿ ಶ್ರಾವಣ ಪೂಜಾ ಕಾರ್ಯಕ್ಕೆ ಚಾಲನೆಯಿತ್ತು ಆಶೀರ್ವಚನ ನೀಡಿ
    ವೀರಶೈವ ಧರ್ಮ ಸಂಸ್ಕೃತಿ-ಗುರು ಪರಂಪರೆಯ ಆದರ್ಶ ಮೌಲ್ಯಗಳನ್ನು ಬೆಳೆಸಿದ ಕೀರ್ತಿ ಲಿಂ.ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳಿಗೆ ಸಲ್ಲುತ್ತದೆ. ಮೂರು ತಿಂಗಳ ಕಾಲ ಬುಕ್ಕಾಂಬುಧಿ ಬೆಟ್ಟದ ಮೇಲಿದ್ದು ಉಗ್ರ ತಪಸ್ಸನ್ನಾಚರಿಸಿದರು.

    ಯುಗ ಪುರುಷರಾಗಿ ಸರ್ವ ಭಕ್ತರ ಬಾಳಿಗೆ ಆಧ್ಯಾತ್ಮದ ಚಿಂತನೆಗಳನ್ನು ಬೋಧಿಸಿ ಸನ್ಮಾರ್ಗಕ್ಕೆ ಕರೆತಂದ ಕೀರ್ತಿ ಅವರದಾಗಿದೆ. ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಟ್ರಸ್ಟ ಒಂದು ತಿಂಗಳ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ ರೂಪಿಸಿದೆ. ದಿನ ನಿತ್ಯ ಭಕ್ತರ ಸೇವೆಯಲ್ಲಿ ಪೂಜೆ ನೆರವೇರುತ್ತದೆ. ಆಸಕ್ತಿವುಳ್ಳ ಧರ್ಮಾಭಿಮಾನಿಗಳು ತನು ಮನ ಧನ ಪೂರ್ವಕ ಸೇವೆ ಸಲ್ಲಿಸಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರ ಕೃಪೆಗೆ ಪಾತ್ರರಾಗಬೇಕೆಂದು ಅವರು ತಿಳಿಸಿದರು.

    ಈ ಸಂದರ್ಭದಲ್ಲಿ ಟ್ರಸ್ಟಿನ ಉಪಾಧ್ಯಕ್ಷ ಶೀಲವಂತರ ವೀರಭದ್ರಪ್ಪ, ಕಾರ್ಯದರ್ಶಿ ಹೆಚ್.ಪಿ..ಸುರೇಶ್ ಮೊದಲ್ಗೊಂಡು ಟ್ರಸ್ಟಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

    Amavasya Puja at Bukkambudhi hill

  • ಆಗಸ್ಟ್ 23 ಕ್ಕೆ ಜಿಲ್ಲಾ ಪ್ರಪ್ರಥಮ ದಲಿತ ಸಾಹಿತ್ಯ ಸಮ್ಮೇಳನ

    ಆಗಸ್ಟ್ 23 ಕ್ಕೆ ಜಿಲ್ಲಾ ಪ್ರಪ್ರಥಮ ದಲಿತ ಸಾಹಿತ್ಯ ಸಮ್ಮೇಳನ

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಪ್ರಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಆಗಸ್ಟ್ ೨೩ ರಂದು ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ತು ಮತ್ತು ದಲಿತ ಸಾಹಿತ್ಯ ಪರಿ?ತ್ತು ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮತ್ತು ಜಿಲ್ಲಾ ದಲಿತ ಸಾಹಿತ್ಯ ಪರಿ?ತ್ತಿನ ಅಧ್ಯಕ್ಷರಾದ ಕುಪ್ಪಾಳು ಶಾಂತಮೂರ್ತಿ ಅವರ ನೇತೃತ್ವದಲ್ಲಿ ಜಿಲ್ಲಾ ದಲಿತ ಸಾಹಿ ತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ.ಪ್ರಕಾಶ್ ತಿಳಿಸಿದರು.

    ಅಂದು ಸಮ್ಮೇಳನದ ದಿನ ಧ್ವಜಾರೋಹಣ ನಂತರ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ಉದ್ಘಾಟನೆ. ಕಾರ್ಯಕ್ರಮ ನಂತರ ದಲಿತ ಸಾಹಿತ್ಯ ಕುರಿತ ಗೋಷ್ಠಿ ಮತ್ತು ಕವಿಗೋಷ್ಟಿಗಳು ನಡೆಯಲಿದ್ದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಸಮ್ಮೇಳನದಲ್ಲಿ ನಾಡಿನ ಹಲವಾರು ಸಾಹಿತಿಗಳು ಮತ್ತು ಸಾಹಿತ್ಯ ಆಸಕ್ತರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ಮೂವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಮತ್ತು ಜಿಲ್ಲೆ ಯ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.

    District’s first Dalit literary conference on August 23

  • ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶಸ್ತ್ರ – ಶಾಸ್ತ್ರದ ಭಯ ಅಗತ್ಯ

    ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶಸ್ತ್ರ – ಶಾಸ್ತ್ರದ ಭಯ ಅಗತ್ಯ

    ಚಿಕ್ಕಮಗಳೂರು: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶಸ್ತ್ರ ಮತ್ತು ಶಾಸ್ತ್ರದ ಭಯ ಅಗತ್ಯ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದರು.

    ಅಜ್ಜಂಪುರ ಸಮೀಪದ ಬಗ್ಗವಳ್ಳಿ ಗ್ರಾಮದ ಮಠದಮನೆಯಲ್ಲಿ ಲೋಕಕಲ್ಯಾರ್ಥವಾಗಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಾನುವಾರ ಅವರು ಶುಭಸಂದೇಶ ನೀಡಿದರು.

    ವೀರಶೈವ ಸಂಸ್ಕೃತಿಯಲ್ಲಿ ಇಷ್ಟಲಿಂಗಪೂಜೆಗೆ ಮಹತ್ವ ನೀಡಲಾಗಿದೆ. ಭಕ್ತಿಭಾವದ ಸದುದ್ದೇಶದ ಸಂಕಲ್ಪ ಸಾಕಾರಗೊಳ್ಳುತ್ತದೆ. ಏಕಾಂತವಾಗಿದ್ದ ಇಷ್ಟಲಿಂಗಪೂಜೆಯನ್ನು ಲೋಕಾಂತಗೊಳಿಸಲಾಗಿದೆ. ಆಸ್ತಿಕ ಮಹಾಶಯರೆಲ್ಲರೂ ಪೂಜೆಯಲ್ಲಿ ಪಾಲ್ಗೊಂಡು ಸಂತೋಷಪಡುವ ಅವಕಾಶ ಕಲ್ಪಿಸಿರುವುದು ಹರ್ಷದ ಸಂಗತಿ ಎಂದರು.
    ದೇವರಲ್ಲಿ ಶ್ರದ್ಧೆ ನಂಬಿಕೆ ಅತ್ಯಗತ್ಯ. ಆದಿ ಜಗದ್ಗುರು ರೇಣುಕಾಚಾರ್ಯರರು ಮನುಕುಲದ ಉದ್ಧಾರಕ್ಕಾಗಿ ದಶಧರ್ಮಸೂತ್ರಗಳನ್ನು ಬೋಧಿಸಿದ್ದಾರೆ. ಅವುಗಳನ್ನು ನಿಜವಾಗಿ ಪಾಲಿಸಿದ್ದೆ ಆದರೆ ಶಾಂತಿ-ನೆಮ್ಮದಿ ಬದುಕು ನಮ್ಮೆಲ್ಲರದ್ದಾಗುತ್ತದೆ ಎಂದ ಜಗದ್ಗುರುಗಳು, ಶಾಸ್ತ್ರ ಭಯದ ಮರ್ಯಾದೆ ಮೀರಿ ನಡೆದಾಗ ಶಸ್ತ್ರದ ಭಯ ಇರುತ್ತದೆ ಎಂದರು.

    ಜೀವನ ಜಂಜಾಟದಲ್ಲಿ ಸಿಲುಕಿದ ಮನುಷ್ಯನಿಗೆ ಪೂಜಾದಿ ಧಾರ್ಮಿಕ ಕಾರ್ಯಗಳಲ್ಲಿ ಸ್ಫೂರ್ತಿ ನೆಮ್ಮದಿ ಇದೆ. ಸಂಮೃದ್ಧ ಮತ್ತು ಶಾಂತಿಯ ನಾಡನ್ನು ಕಟ್ಟುವುದೇ ಧರ್ಮದ ಧ್ಯೇಯ. ವ್ಯಕ್ತಿತ್ವ ವಿಕಾಸವೇ ಗುರಿ. ಹೆತ್ತತಾಯಿ, ಹೊತ್ತಭೂಮಿ ಎಷ್ಟು ಮುಖ್ಯವೋ ಧರ್ಮವೂ ಅಷ್ಟೇ ಮುಖ್ಯ. ವಿವೇಕದ ತುತ್ತ ತುದಿಯೆ ದೈವಸಾಕ್ಷಾತ್ಕಾರ. ಧರ್ಮದಲ್ಲಿ ಮಾರ್ಗವಿದೆ, ಆದರೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಆದರೆ ಮಾರ್ಗವಿಲ್ಲ. ಧರ್ಮ ಮತ್ತು ವಿಜ್ಞಾನ ಸಮನ್ವಯತೆಯಿಂದ ಸಾಗಿದರೆ ಮಾನವನ ಬದುಕಿಗೆ ಶ್ರೇಯಸ್ಸು ಇದೆ ಎಂದು ಶ್ರೀಮದ್ರಾಂಭಾಪುರಿ ಜಗದ್ಗುರುಗಳು ಅಭಿಪಾಯಿಸಿದರು.
    ಸಮಾರಂಭದ ಆಯೋಜಕರಾದ ವಿಶ್ರಾಂತಶಿಕ್ಷಕ ಬಿ.ಪಿ.ಲಿಂಗಮೂರ್ತಿ ಪ್ರಾಚೀನ ಇತಿಹಾಸ ಹೊಂದಿರುವ ಬಗ್ಗವಳ್ಳಿ ಗ್ರಾಮಕ್ಕೆ ರಂಭಾಪುರಿ ಪ್ರಸ್ತುತ ಜಗದ್ಗುರುಗಳು ಎರಡನೆಬಾರಿ ಆಗಮಿಸಿರುವುದು ಸಂತೋಷದ ಸಂಗತಿ. ಗ್ರಾಮಸ್ಥರಿಗೆ ದರ್ಶನಾಶೀರ್ವಾದದ ಜೊತೆಗೆ ಇಷ್ಟಲಿಂಗಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶವಾಗಿದ್ದು ಸಂತಸದ ಸಂಗತಿ ಎಂದರು.

    ಜಂಗಮಸಮಾಜದ ಮುಖ್ಯಸ್ಥ ಬಿ.ಪಿ.ಶಿವಮೂರ್ತಿ ಮಾತನಾಡಿ ಪಂಚಪೀಠಗಳಲ್ಲಿ ಪ್ರಥಮ ಪೀಠವಾಗಿ ಶ್ರೀಮದ್ರಂಭಾಪುರಿ ವೀರಸಿಂಹಾಸನ ಮಹಾಪೀಠವು ಜನರ ಬಳಿಗೆ ಬಂದು ನಿಜಧರ್ಮದ ಬೋಧೆ ಮಾಡುತ್ತಿದೆ. ಆದಿಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹಾಮುನಿಗಳನ್ನು ನಿಮಿತ್ತಮಾಡಿಕೊಂಡು ಮಾನವಸಂಕುಲಕ್ಕೆ ಉಪಯುಕ್ತವಾದ ಸತ್ಯ, ಜಪ, ತಪ, ಪೂಜೆ, ಧ್ಯಾನ, ಕ್ಷಮೆ, ದಯೆ, ದಾನ, ಅಸ್ತೇಯ, ಬ್ರಹ್ಮಚರ್ಯದಂತಹ ಹತ್ತು ವಿಧದ ಸಂಹಿತೆಯನ್ನು ನೀಡಿ ಉಪಕರಿಸಿದ್ದಾರೆಂದರು.

    ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳ ಅನುಸಂಧಾನದ ಮೂಲಕ ಮಾಡುವ ಗುರು-ಜಂಗಮಗಳ ಅರ್ಚನೆಯೆ ಪೂಜೆ ಎನಿಸುತ್ತದೆ. ಚಂಚಲವಾದ ಮನಸ್ಸನ್ನು ಏಕಾಗ್ರಗೊಳಿಸುವ ಸಲುವಾಗಿ ನಾನಾ ಬಗೆಯ ಉಪಚಾರಗಳಿಂದ ಮಾಡುವ ಇಷ್ಟಲಿಂಗಪೂಜೆಯು ಆಸ್ತಿಕರಲ್ಲಿ ಸಂತೋಷವನ್ನುಂಟು ಮಾಡುತ್ತದೆ ಎಂದರು.
    ಪ್ರತಿ ಧರ್ಮವೂ ನೈತಿಕವಿಚಾರ, ಸಾಂಪ್ರದಾಯಕವಿಚಾರ ಮತ್ತು ದಾರ್ಶನಿಕವಿಚಾರಗಳನ್ನು ಒಳಗೊಂಡಿರುತ್ತವೆ. ಎಲ್ಲ ಧರ್ಮದಲ್ಲೂ ನೈತಿಕ ವಿಚಾರಗಳು ಒಂದೇ ಆಗಿರುತ್ತದೆ. ದಾರ್ಶನಿಕ ವಿಚಾರದಲ್ಲಿ ವಿಭಿನ್ನತೆ ಇದ್ದು, ಸಾಂಪ್ರದಾಯಕ ವಿಚಾರಗಳು ಬೇರೆ ಬೇರೆ ಆಗಿರುತ್ತವೆ ಎಂದ ಶಿವಮೂರ್ತಿ, ಅಷ್ಟಾವರಣ -ಪಂಚಾಚಾರ ಮತ್ತು ಷಟ್‌ಸ್ಥಲಗಳು ವೀರಶೈವ ಧರ್ಮಕ್ಕೆ ಮೂಲಾಧಾರ. ಇವುಗಳ ಕನಿಷ್ಟಜ್ಞಾನ ವೀರಶೈವರಿಗೆ ಅತ್ಯಗತ್ಯ ಎಂದರು.

    ಅಖಿಲಭಾರತ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷ ಶ್ರೀರೇಣುಕ ಶಿವಾಚಾರ್ಯರು, ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು ಹಾಗೂ ತಾವರೆಕೆರೆ ಶಿಲಾಮಠದ ಡಾ.ಅಭಿನವಸಿದ್ದಲಿಂಗಶಿವಾಚಾರ್ಯರು ಪೂಜಾಕಾರ್‍ಯದಲ್ಲಿ ಪಾಲ್ಗೊಂಡಿದ್ದರು.

    ಶನಿವಾರ ಸಂಜೆ ಬಗ್ಗವಳ್ಳಿಗೆ ಆಗಮಿಸಿದ ಶ್ರೀಮದ್ರಂಭಾಪುರಿ ಜಗದ್ಗುರುಗಳನ್ನು ತಳಿರುತೋರಣ, ಜಯಘೋಷ, ಪಟಾಕಿಸಿಡಿಸುವುದರ ಮೂಲಕ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಕುಂಭಹೊತ್ತ ಮಹಿಳೆಯರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಸಮುದಾಯಭವನದಲ್ಲಿ ಸ್ವಾಗತ ಧರ್ಮ ಸಮಾರಂಭ ನಡೆಯಿತು.

    ತರೀಕೆರೆ ಶಾಸಕ ಎಸ್.ಜಿ.ಶ್ರೀನಿವಾಸ, ಅಜ್ಜಂಪುರ ತಾಲ್ಲೂಕು ಜಂಗಮಸಮಾಜದ ಅಧ್ಯಕ್ಷ ಗಂಗಾಧರಯ್ಯ ಮತ್ತು ಬಗ್ಗವಳ್ಳಿಯ ಬಡಗನಾಡು ಹೇಮರಡ್ಡ್ಡಿ ಮಲ್ಲಮ್ಮ ವೀರಶೈವ ಜನಾಂಗ ಸಂಘದ ಅಧ್ಯಕ್ಷ ಹೇಮಂತಕುಮಾರ್, ಜಂಗಮಬಳಗ ಸಂಚಾಲಕ ಪ್ರಭುಲಿಂಗಶಾಸ್ತ್ರಿ , ಗ್ರಾ.ಪಂ.ಸದಸ್ಯ ಗುರುಪಾದಪ್ಪ, ಗ್ರಾಮದ ಮುಖಂಡ ಮರುಳಸಿದ್ದಪ್ಪ, ಮರುಳಪ್ಪ, ಗೊಂಡೇದಹಳ್ಳಿ ಗಿರೀಶ್, ಕಾಟೆಗನೆರೆ ಉಮಾಪತಿ ಆರಾಧ್ಯ, ಅಮೃತಾಪುರದ ಪ್ರಭು, ಬಿ.ಎಸ್.ಚಂದ್ರಶೇಖರಪ್ಪ, ಉಪನ್ಯಾಸಕರುಗಳಾದ ಯಶವಂತಕುಮಾರ ಮತ್ತು ಕಿರಣಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಮಠದಮನೆ ವತಿಯಿಂದ ನೂರಕ್ಕೂ ಹೆಚ್ಚು ಪ್ರಮುಖರಿಗೆ ಗುರುರಕ್ಷೆ ನೀಡಿ ಜಗದ್ಗುರುಗಳಿಂದ ಆಶೀರ್ವದ ಕೊಡಿಸಲಾಯಿತ.

    ಮಠದಮನೆಯ ಲಿಂಗರಾಧ್ಯ ಸ್ವಾಗತಿಸಿ, ಡಾ.ಮೋಹನ್‌ಕಮಾರ್ ವಂದಿಸಿದರು. ಶಿವಮೂರ್ತಯ್ಯ ಪ್ರಾಸ್ತಾವಿಸಿದ್ದು, ಸೌಮ್ಯಶ್ರೀಯಶವಂತ್ ಪ್ರಾರ್ಥಿಸಿ ಜ್ಯೋತಿಕಿರಣ ನಿರೂಪಿಸಿದರು.

    Fear of surgery is necessary to build a healthy society

  • ಅರಿವಿಗಿಂತ ಆಚಾರ ದೊಡ್ಡದ್ದು

    ಅರಿವಿಗಿಂತ ಆಚಾರ ದೊಡ್ಡದ್ದು

    ಚಿಕ್ಕಮಗಳೂರು: ಅರಿವಿಗಿಂತ ಆಚಾರ ದೊಡ್ಡದ್ದು. ತಾಳಿದವರು ಬಾಳುತ್ತಾರೆ ಎಂಬುದಕ್ಕೆ ಹೇಮರಡ್ಡಿಮಲ್ಲಮ್ಮ ಸ್ಪಷ್ಟ ನಿದರ್ಶನ ಎಂದು ಉಜ್ಜಯಿನಿ ಶ್ರೀಮದ್‌ಗಿರಿರಾಜಸೂರ್‍ಯಸಿಂಹಾಸನ ಪೀಠದ ಶ್ರೀಶ್ರೀಶ್ರೀ ೧೦೦೮ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಿಸಿದರು.

    ಬಡಗನಾಡು ಶ್ರೀಹೇಮರಡ್ಡಿ ವೀರಶೈವ ಜನಾಂಗ ಸಂಘದ ಬಾಸೂರು ಘಟಕ ಎರಡುದಿನಗಳ ಕಾಲ ಆಯೋಜಿಸಿದ್ದ ಸಮಾರಂಭದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರವನ್ನು ಅನಾವರಣಗೊಳಿಸಿ ಅವರು ಆಶೀರ್ವಚನ ನೀಡಿದರು.

    ಸಂಸಾರದಲ್ಲಿದ್ದುಕೊಂಡು ಹಿಂಸೆ ಅನುಭವಿಸಿ ಜೊತೆಯಲ್ಲಿರುವವರನ್ನೆಲ್ಲ ಸಾತ್ವಿಕರನ್ನಾಗಿಸಿದ ವಿಶಿಷ್ಟ ದಾಖಲೆಯ ಶ್ರೇಷ್ಠ ಸದ್‌ಗೃಹಿಣಿ ಹೇಮರಡ್ಡಿಮಲ್ಲಮ್ಮ. ಲೋಕದಲ್ಲಿ ಹುಟ್ಟಿದ ಬಳಿಕ ಸಮಾಧಾನಿಯಾಗಿರಬೇಕು ಎಂಬ ಅಕ್ಕನ ಅನುಭಾವದ ನುಡಿಗೆ ತಕ್ಕಂತೆ ಬದುಕಿದಾಕೆ. ಮಲ್ಲಮ್ಮನ ಬದುಕು ಕಣ್ಣೀರಿನ ಕಥೆಯಾಗಿದ್ದರೂ ಆ ಬದುಕಿನಿಂದ ಸಂಸಾರಿಗಳೆಲ್ಲ ಕಲಿಯಬೇಕಾದ ಒಂದು ಉದಾತ್ತ ಗುಣವೆಂದರೆ ಸಹನೆ. ಸುಗಮಸಂಸಾರಕ್ಕೆ ಸಿದ್ಧೌಷಧ. ಸಂಸಾರಜೀವನ ಮಾತ್ರವಲ್ಲ, ಮಾನವರ ಸಮಸ್ತ ವ್ಯವಹಾರದಲ್ಲೂ ಸಹನೆಯ ಪಾತ್ರ ಅಗಾಧ ಮತ್ತು ಅನನ್ಯ ಎಂದರು.

    ಹೇಮರಡ್ಡಿಮಲ್ಲಮ್ಮ ಮೂಲ ನೆಲೆಯಾದ ಶ್ರೀಶೈಲ ಪ್ರದೇಶದಿಂದ ವಲಸೆಬಂದ ಭಕ್ತರು ಕರ್ನಾಟಕ ನಾನಾ ಪ್ರದೇಶಗಳಂತೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಶತಮಾನಗಳ ಹಿಂದಿನಿಂದ ನೆಲೆಸಿದ್ದಾರೆ. ಸಂಘಟಿತರಾಗಿ ಪ್ರತಿವರ್ಷ ಮಲ್ಲಮ್ಮನ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸುತ್ತಾ ವೀರಶೈವ ಪಂಚಪೀಠದ ಆಚಾರ್ಯರನ್ನೂ ಆಹ್ವಾನಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಾರೆಂದು ಶ್ರೀಮದ್ ಉಜ್ಜಯಿನಿ ಜಗದ್ಗುರುಗಳು ಹರ್ಷ ವ್ಯಕ್ತಪಡಿಸಿದರು.

    ಬಾಸೂರು ಘಟಕದ ಅಧ್ಯಕ್ಷ ಬಿ.ಕೆ.ವಸಂತಕುಮಾರ, ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್‍ಯದರ್ಶಿ ಬಿ.ಎಸ್.ಪ್ರಭು, ಗಿರಿಯಾಪುರದ ಕೇಂದ್ರಸಂಘದ ಅಧ್ಯಕ್ಷ ರೇವಣ್ಣಸಿದ್ದಪ್ಪ, ಗೌರವಾಧ್ಯಕ್ಷ ಮುರಿಗೇಶ್, ಬಾಸೂರು ಗ್ರಾ.ಪಂ.ಸದಸ್ಯ ನಾಗಭೂಷಣ, ಚಿಕ್ಕಮಗಳೂರು ಜಂಗಮಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರಿ ಮತ್ತಿತರರು ಉಜ್ಜಯಿನಿ ಜಗದ್ಗುರುಗಳನ್ನು ಗೌರವಿಸಿದರು.

    ಕಡೂರು ತಾಲ್ಲೂಕು ವೀರಶೈವ ಲಿಂಗಾಯತ ನೌಕರರ ಸಂಘದ ವತಿಯಿಂದ ಸಂಪತ್‌ಕುಮಾರ್ ನೇತೃತ್ವದಲ್ಲಿ ಉಚಿತ ಮಜ್ಜಿಗೆ ದಿನವಿಡಿ ವಿತರಿಸಲಾಯಿತು. ವಸಂತಕುಮಾರ್ ದಂಪತಿಗಳು ಜಗದ್ಗುರುಗಳು ಪಾದಪೂಜೆ ನೆರವೇರಿಸಿದ್ದು, ಇದಕ್ಕೆ ಮುನ್ನ ಬಾಸೂರಿನ ಈಶ್ವರದೇವಸ್ಥಾನ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಿಗೆ ಉಜ್ಜಯಿನಿ ಜಗದ್ಗುರುಗಳು ಭೇಟಿ ನೀಡಿದ್ದು, ದೇವಸ್ಥಾನ ಸಮಿತಿ ವತಿಯಿಂದ ಗೌರವ ಸಮರ್ಪಿಸಲಾಯಿತು.

    Practice is greater than knowledge.

  • ಚೀಟಿ ವ್ಯವಹಾರಕ್ಕೆ ಅಮೃತಾಪುರ ಗ್ರಾಮದಲ್ಲಿ ಯುವಕ ಕೊಲೆ

    ಚೀಟಿ ವ್ಯವಹಾರಕ್ಕೆ ಅಮೃತಾಪುರ ಗ್ರಾಮದಲ್ಲಿ ಯುವಕ ಕೊಲೆ

    ತರೀಕೆರೆ: ಚೀಟಿ ಹಣದ ವಿಚಾರವಾಗಿ ಯುವಕನನ್ನು ಹತ್ಯೆ ಮಾಡಿರುವ ಘಟನೆ ಅಮೃತಾಪುರ ಗ್ರಾಮದಲ್ಲಿ ನಡೆದಿದೆ. ಸಂಜುನಾಯ್ಕ (೨೬) ಎಂಬ ಯುವಕನನ್ನು ರುದ್ರೇಶ್ ನಾಯ್ಕ ಎಂಬಾತ ಹತ್ಯೆ ಮಾಡಿದ್ದಾನೆ.

    ಕೊಲೆ ತಪ್ಪಿಸಲು ಬಂದ ಅವಿನಾಶ್ ಎಂಬಾತನಿಗೂ ರುದ್ರೇಶ್ ಕಚ್ಚಿ ಗಾಯಗೊಳಿಸಿದ್ದಾನೆ. ಅಮೃತಾಪುರ ಸೇವಾಲಾಲ್ ಸಂಘದಲ್ಲಿ ಚೀಟಿ ವ್ಯವಹಾರ ನಡೆಸಲಾಗುತ್ತಿತ್ತು, ಸಂಜುನಾಯ್ಕ ಚೀಟಿ ಸರಿಯಾಗಿ ಕಟ್ಟದೇ ಗಲಾಟೆ ಮಾಡುತ್ತಿದ್ದ. ಹೀಗಾಗಿ ಚೀಟಿ ಸದಸ್ಯರು ನೀನು ಈ ಚೀಟಿಗೆ ಬೇಡ ಎಂದು ವಾಪಸ್ ಕಳುಹಿಸಿದ್ದಾರೆ.

    ಮನೆಗೆ ಬಂದ ಸಂಜುನಾಯ್ಕ ಚೀಟಿ ಸದಸ್ಯರೊಂದಿಗೆ ಫೋನಿನಲ್ಲಿ ವಾಗ್ವಾದ ನಡೆಸಿದ್ದ, ಈ ವಾಗ್ವಾದ ಜಗಳಕ್ಕೆ ತಿರುಗಿದೆ. ಈ ವೇಳೆ ರುದ್ರೇಶ್‌ನಾಯ್ಕ ಎಂಬಾತ ಸಂಜುನಾಯ್ಕಗೆ ದೊಣ್ಣೆಯಲ್ಲಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವದಿಂದ ಸಂಜು ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೊಲೆ ಮಾಡಿದ ಆರೋಪಿ ರುದ್ರೇಶ್ ನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ತರೀಕೆರೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೊಲೆಮಾಡಿದ್ದ ವ್ಯಕ್ತಿಯನ್ನು ೨ ಗಂಟೆಯೊಳಗೆ ಬಂಧಿಸಿದ್ದಾರೆ. ಅಮೃತಾಪುರದಲ್ಲಿ ಭಾನುವಾರ ರಾತ್ರಿ ೧೦ ಗಂಟೆಗೆ ರುದ್ರೇಶನಾಯ್ಕ ದೊಣ್ಣೆಯಿಂದ ಥಳಿಸಿ ಸಂಜುನಾಯ್ಕನನ್ನು ಕೊಲೆಮಾಡಿದ್ದು, ಈ ಕುರಿತು ಯಶವಂತ್‌ನಾಯ್ಕ ತರೀಕೆರೆ ಪೊಲೀಸರಿಗೆ ದೂರು ನೀಡಿದ್ದು, ಕೊಲೆ ಆರೋಪಿ ಬಂಧನಕ್ಕೆ ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್ ಅಮಟೆ, ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಸಿ.ಟಿ.ಜಯಕುಮಾರ್, ಡಿವೈಎಸ್ಪಿ ಹಾಲಮೂರ್ತಿರಾವ್ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ರಾಮಚಂದ್ರನಾಯಕ್ ನೇತೃತ್ವವದಲ್ಲಿ ೨ ತಂಡಗಳನ್ನು ರಚಿಸಲಾಗಿತ್ತು. ಕೊಲೆ ಪ್ರಕರಣ ದಾಖಲಾದ ೨ ಗಂಟೆಯೊಳಗೆ ಪರಾರಿಯಾಗುತ್ತಿದ್ದ ರುದ್ರೇಶನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ.

    Youth murdered in Amritapura village over lottery ticket deal

  • ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಚಾಲನೆ

    ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಚಾಲನೆ

    ತರೀಕೆರೆ: ಸಾಹಿತ್ಯ ಸಮ್ಮೇಳನಗಳು ಅಬ್ಬರ, ಆಡಂಬರಗಳಿಗೆ ಆದ್ಯತೆ ನೀಡದೆ ಅರ್ಥಪೂರ್ಣವಾಗಿ ಭಾಷೆ ಕಟ್ಟಲು, ನಾಡಿನ ಉಳಿವಿನ ಕುರಿತು ಜಾಗೃತಿ ಮೂಡಿಸಲು, ನಮ್ಮ ಇತಿಹಾಸ, ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಲು ನಡೆಯುವಂತಾಗಬೇಕು ಎಂದು ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ. ಎಚ್.ಎಂ.ಮರುಳಸಿದ್ದಯ್ಯ ಪಟೇಲ್ ಹೇಳಿದರು.

    ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ೨೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುತ್ತಿರುವುದು ಕನ್ನಡಿಗರೆಲ್ಲರೂ ಅಂತರ ತೊರೆದು ಒಂದಾಗಿ ಆನಂದಿಸಲು ಸಹಕಾರಿಯಾಗಿದೆ.

    ೧೫೦೦ ವರ್ಷಗಳ ಶಾಸನಬದ್ಧ ಪರಂಪರೆ ಇರುವ ಕನ್ನಡ ಭಾಷೆಗೆ ಭವ್ಯ, ಚಿಂತನಶೀಲ, ಆಲೋಚನೆಯ ಸುದೀರ್ಘ ಇತಿಹಾಸವಿದೆ. ಅತಿ ಪ್ರಾಚೀನ, ಅಷ್ಟೇ ಶ್ರೀಮಂತಿಕೆಯುಳ್ಳ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಜಗತ್ತಿನ ೫೦ ಭಾಷೆಗಳ ಪೈಕಿ ಕನ್ನಡವೂ ಒಂದು ಎಂಬುದು ನಮ್ಮೆಲ್ಲರ ಹಿರಿಮೆ ಎಂದು ಸಂತಸ ವ್ಯಕ್ತಪಡಿಸಿದರು.

    ಡಾ. ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಕನ್ನಡದ ಗಾಳಿ, ನೀರು, ಊಟ ಶ್ರೇಷ್ಠ. ಮಕ್ಕಳು ತಂದೆ, ತಾಯಿ ಹಾಕಿದ ಹೆಜ್ಜೆಯಲ್ಲಿ ಸಾಗಬೇಕು. ಮಾತೃಭಾಷೆಯನ್ನು ಪ್ರೀತಿಸಿ ಆಧರಿಸಬೇಕು. ಬೆವರು ಹರಿಸಿ ಸಹಸ್ರಾರು ಜನರ ಹೊಟ್ಟೆ ತುಂಬಿಸುವ ಅನ್ನದಾತನಿಗೆ ಗೌರವ ನೀಡುವುದು ಕಡ್ಡಾಯವಾಗಬೇಕು ಎಂದು ಹೇಳಿದರು.

    ಡಾ. ಸಿ.ಕೆ.ಸುಬ್ಬರಾಯ ಮಾತನಾಡಿ, ಕರ್ನಾಟಕ ಪರ ಭಾಷಾ ಸಹಿಷ್ಣುತೆ ಹೊಂದಿದ್ದು, ಇಲ್ಲಿರುವ ಪ್ರತಿಯೊಬ್ಬರೂ ನಾಡು ನುಡಿಯನ್ನು ಗೌರವಿಸಬೇಕು. ಕಸಾಪ ಉದಯೋನ್ಮುಖ ಲೇಖಕಕರನ್ನು ಉತ್ತೇಜಿಸುತ್ತಿದ್ದು, ಇಂದಿನ ಯುವ ಸಮೂಹ ಸಾಹಿತ್ಯಾಭಿರುಚಿ ಮೈಗೂಡಿಸಿಕೊಳ್ಳಬೇಕು ಎಂದರು.

    ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಇತರೆಡೆ ಮಾತ್ರವಲ್ಲ, ತರೀಕೆರೆ ತಾಲೂಕಿನಲ್ಲೂ ಎಲ್ಲ ಧರ್ಮ, ಪಂಥಗಳು ಸಾತ್ವಿಕ ಮನಸ್ಸಿನಿಂದ ನೆಲೆಗೊಂಡಿವೆ. ಕಸಾಪ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುವರಿಗೆ ಬೆನ್ನುತಟ್ಟುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

    ಎಸಿ ಡಾ. ಕೆ.ಜೆ.ಕಾಂತರಾಜ್, ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಮಾಜಿ ಉಪಾಧ್ಯಕ್ಷೆ ಎಂ.ಗಿರಿಜಾ, ಸದಸ್ಯೆ ಪಾರ್ವತಮ್ಮ, ತಹಸೀಲ್ದಾರ್ ವಿಶ್ವಜೀತ ಮೆಹತಾ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಎಸ್.ಎಸ್.ವೆಂಕಟೇಶ್, ಜಿ.ಬಿ.ಪವನ್, ಸಾಹಿತಿ ಹಳೆಕೋಟೆ ರಮೇಶ್, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ ಇತರರಿದ್ದರು.

    20th District Kannada Literary Conference inaugurated

  • ಅಪ್ಪ ಸತ್ತಿದ್ದು ಗೊತ್ತೇ ಇಲ್ಲ-ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಗಳು

    ಅಪ್ಪ ಸತ್ತಿದ್ದು ಗೊತ್ತೇ ಇಲ್ಲ-ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಗಳು

    ಚಿಕ್ಕಮಗಳೂರು: ಆಪ್ತಮಿತ್ರನಿಗೆ ಮಗಳ ಮದುವೆಯ ಲಗ್ನಪತ್ರಿಕೆ ಕೊಡಲು ಹೋದ ತಂದೆ ಮಾರ್ಗ ಮಧ್ಯೆ ಅಪಘಾತದಿಂದ ಸಾವನ್ನಪ್ಪಿದ ವಿಷಯವೇ ಗೊತ್ತಿಲ್ಲದ ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೃದಯವಿದ್ರಾವಕ ಘಟನೆ ಚಿಕ್ಕಮಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.

    ನಿನ್ನೆ ಹಾಗೂ ಇವತ್ತು ತರೀಕೆರೆ ಪಟ್ಟಣದ ನಾಗಪ್ಪ ಕಾಲೋನಿ ನಿವಾಸಿ ಚಂದ್ರು ಎಂಬುವರ ಮಗಳ ಮದುವೆ ನಿಶ್ಚಯವಾಗಿತ್ತು. ಕೊನೆ ಮಗಳ ಮದುವೆ ಎಂದು ಚಂದ್ರು ಅದ್ಧೂರಿಯಾಗಿ ಮದುವೆಗೆ ತಯಾರಿ ಮಾಡಿದ್ದರು. ಆದರೆ, ಮಗಳ ಆರತಕ್ಷತೆಯ ದಿನ ಆತ್ಮೀಯ ಸ್ನೇಹಿತರೊಬ್ಬರಿಗೆ ಲಗ್ನಪತ್ರಿಕೆ ಕೊಟ್ಟಿಲ್ಲ ಎಂದು ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಹೋಗಿ ಕಾರ್ಡ್ ಕೊಟ್ಟು ಬರುವ ವೇಳೆ ಮಾರ್ಗ ಮಧ್ಯೆ ಬೈಕ್ ಅಪಘಾತವಾಗಿತ್ತು.

    ತೀವ್ರ ಗಂಭೀರ ಗಾಯವಾಗಿದ್ದ ಚಂದ್ರುರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದ ಚಂದ್ರು ಭಾನುವಾರ ಮಧ್ಯಾಹ್ನನವೇ ಮರಣ ಹೊಂದಿದ್ದರು.

    ವಿಷಯ ಮನೆಯವರಿಗೆ ತಿಳಿದರೆ ಮದುವೆ ನಿಲ್ಲುತ್ತೆ ಎಂದು ಕುಟುಂಬಸ್ಥರು ವಿಷಯವನ್ನ ಮೃತ ಚಂದ್ರು ಪತ್ನಿ ಹಾಗೂ ಮಗಳು ದೀಕ್ಷಾಗೆ ಹೇಳಲೇ ಇಲ್ಲ. ಅಪಘಾತವಾಗಿದೆ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿ ಭಾನುವಾರ ಸಂಜೆ ಆರತಕ್ಷತೆ ಮುಗಿಸಿ, ಇಂದು ಬೆಳಗ್ಗೆ ಮುಹೂರ್ತವನ್ನೂ ಮುಗಿಸಿದ್ದಾರೆ. ಮುಹೂರ್ತ ಮುಗಿದ ಬಳಿಕ ವಿಷಯವನ್ನ ಮನೆಯವರಿಗೆ ತಿಳಿಸಲಾಗಿದೆ.

    ವಿಷಯ ಕೇಳಿ ಮೃತನ ಪತ್ನಿ ಹಾಗೂ ಮಗಳಿಗೆ ಬರಸಿಡಿಲು ಬಡಿದಂತಾಗಿ ಕುಟುಂಬಸ್ಥರ ನೋವಿನ ಆಕ್ರಂದನ ಮುಗಿಲುಮುಟ್ಟಿದೆ. ಕಡೂರು ಪಟ್ಟಣದ ಬೀರೂರಿನ ತರಳಬಾಳು ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು ಗಂಡು-ಹೆಣ್ಣು ಮನೆಗೆ ಬರುವ ವೇಳೆ ಮನೆಗೆ ತಂದೆಯ ಮೃತದೇಹ ಕೂಡ ಬಂದಿತ್ತು. ಮನೆಯವರು ಮಗಳ ಮದುವೆಯಾಯ್ತು ಅಂತ ಸಂತೋಷ ಪಡಬೇಕೋ ಅಥವ ಮನೆಯ ಯಜಮಾನ ಸಾವನ್ನಪ್ಪಿದ್ದಾನೆ ಎಂದು ಕಣ್ಣೀರಡಬೇಕೋ ತಿಳಿಯದಂತೆ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.

    ಮೃತ ಚಂದ್ರುಗೆ ಮೂರು ಜನ ಹೆಣ್ಣು ಮಕ್ಕಳು. ಮೊದಲ ಮಗಳ ಮದುವೆಯಲ್ಲಿ ಕೊರೋನಾ ಅಡ್ಡಿ ಬಂತು ಅಂತ ಕುಟುಂಬಸ್ಥರು, ಸಂಬಂಧಿಕರಷ್ಟೆ ಪಾಲ್ಗೊಂಡು ಮದುವೆ ಮಾಡಿದ್ದರು. ಹಾಗಾಗಿ, ಕೊನೆ ಮಗಳ ಮದುವೆ. ಅದ್ಧೂರಿಯಾಗಿ ಮಾಡಬೇಕು ಅಂತ ಶಕ್ತಿ ಮೀರಿ ಮಗಳ ಮದುವೆಯನ್ನ ಅದ್ಧೂರಿಯಾಗಿ ಅರೆಂಜ್ ಮಾಡಿದ್ದರು.

    ಆದರೆ, ಮದುವೆಗೆ ಅಪ್ಪನೇ ಇರಲಿಲ್ಲ. ಮಗಳು ಹಾಗೂ ಪತ್ನಿ ಕೇಳಿದರು ಕುಟುಂಬಸ್ಥರು ಕೊನೆ ಮದುವೆ ಇಷ್ಟಪಟ್ಟು ಕಷ್ಟಪಟ್ಟು ಮದುವೆ ಮಾಡಿದ್ದಾನೆ. ಮದುವೆ ನಿಲ್ಲಬಾರದು ಅಂತ ಆಸ್ಪತ್ರೆಯಲ್ಲಿ ಇದ್ದಾನೆ. ಚೆನ್ನಾಗಿದ್ದಾನೆ ಎಂದು ಹೇಳಿ ಮದುವೆ ಮುಗಿದ ಮೇಲೆ ವಿಷಯವನ್ನ ತಿಳಿಸಿದ್ದಾರೆ. ವಿಷಯ ತಿಳಿದ ತರೀಕೆರೆ ಚಂದ್ರು ಸ್ನೇಹಿತರು ಹಲವರು ಮದುವೆಗೆ ಹೋಗಿಲ್ಲ.

    ಈ ಕುರುಳು ಹಿಂಡುವ ಕಥೆ ಕೇಳಿದ ಜನ ಕೂಡ ದೇವರು ಅತ್ಯಂತ ಕ್ರೂರಿ. ಯಾರಿಗೂ ಇಂತಹಾ ಪರಿಸ್ಥಿತಿ ಬರಬಾರದು ಎಂದು ದೇವರಿಗೆ ಹಿಡಿಶಾಪ ಹಾಕಿದ್ದಾರೆ.

    Daughter enters married life without knowing father died