Category: ಚಿಕ್ಕಮಗಳೂರು ನಗರ

  • ಅಂತರ್ ಜಿಲ್ಲಾ ಕಳವು-ದರೋಡೆ ಪ್ರಕರಣದ ಆರೋಪಿಗಳ ಬಂಧನ

    ಅಂತರ್ ಜಿಲ್ಲಾ ಕಳವು-ದರೋಡೆ ಪ್ರಕರಣದ ಆರೋಪಿಗಳ ಬಂಧನ

    ಚಿಕ್ಕಮಗಳೂರು:  ಅಂತರ್ ಜಿಲ್ಲಾ ಕಳವು- ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಬಂಗಾರದ ಗಟ್ಟಿ ಸೇರಿದಂತೆ ೨೫ ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅನೇಕ ಕಳ್ಳತನ ಪ್ರಕರಣ ನಡೆದಿದ್ದು ಪ್ರಭಾರ ವೃತ್ತ ನಿರೀಕ್ಷಕ ಗವಿರಾಜ್ ಪಿ.ಐ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

    ಬೆಂಗಳೂರಿನ ಆರ್ ಟಿ ನಗರದಲ್ಲಿ ನೆಲೆಸಿದ್ದ ಚಿಕ್ಕಮಗಳೂರು ಉಪ್ಪಳ್ಳಿ ನಿವಾಸಿ ಮೊಹಮದ್ ಕಬೀರ್, ಡಿಜೆ ಹಳ್ಳಿವಾಸಿ ಯೂಸುಫ ಪಾಷಾ ನನ್ನು ಬಂಧಿಸಿ ಒಟ್ಟು ೩೩೪ ಗ್ರಾಂ ಬಂಗಾರದ ಗಟ್ಟಿ, ಮತ್ತು ಕೃತ್ಯಕ್ಕೆಬಳಸಿದ್ದ ಬಜಾಜ್ ಪಲ್ಸರ್ ಬೈಕ್ ( ತುಮಕೂರಿನಲ್ಲಿ ಕಳವು ಮಾಡಿದ್ದು) ಒಟ್ಟು ಬೆಲೆ ೨೫,೦೦,೦೦೦ ವಶಪಡಿಸಿಕೊಳ್ಳಲಾಗಿದೆ.

    ಅಹಮದ್ ಕಬೀರ್ ನನ್ನು ೨೦೨೩ ನೇ ಸಾಲಿನಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದು, ೧೨ ಮನೆಕಳವು ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಯಿಂದ ೨೯೫ ಗ್ರಾಂ ಚಿನ್ನ & ೩೫೦ ಗ್ರಾಂ ಬೆಳ್ಳಿಯ ಭರಣ ಹಾಗೂ ೧ ಪಿಸ್ತೂಲ್ & ಗುಂಡುಗಳು ದೊರೆತಿದ್ದವು.

    ಪಿಸ್ತೂಲ್ ಅನ್ನುವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದಾಗ ೨೦೨೦ ರಂದು ಚಿಕ್ಕಮಗಳೂರು ನಗರದ ಕೇಸರಿ ಜ್ಯೂಯೆಲರಿ ಚಿನ್ನದ ಅಂಗಡಿಯಲ್ಲಿ ಗುಂಡು ಹಾರಿಸಿ ದರೋಡೆಗೆ ಪ್ರಯತ್ನಿಸಿದ್ದಾಗ ಸ್ಥಳದಲ್ಲಿ ದೊರೆತ ಗುಂಡಿಗೆ ಹೋಲಿಕೆಯಾಗಿರುವುದಾಗಿ ಎಫ್.ಎಸ್.ಎಲ್ ವರದಿಯಿಂದ ದೃಢಪಟ್ಟಿದೆ.

    ಆರೋಪಿ ಕಬೀರ್ ಮತ್ತು ಆತನ ಸಹಚರರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದೂ ಬೆಳಕಿಗೆ ಬಂದಿದೆ. ಈತನ ವಿರುದ್ಧ ಮಂಗಳೂರು ನಗರ, ಶಿವಮೊಗ್ಗ , ತುಮಕೂರು , ದಾವಣಗೆರೆ , ಚಾಮರಾಜನಗರ ಜಿಲ್ಲೆ ಗಳಲ್ಲಿ ೫೦ ಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿದ್ದು, ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಈತನ ವಿರುದ್ಧ ವಾರೆಂಟ್ ಹೊರಡಿಸಲಾಗಿತ್ತು,

    ಈ ಆರೋಪಿಗಳನ್ನು ಪತ್ತೆ ಮಾಡುವ ತಂಡದಲ್ಲಿ ಅಬ್ದುಲ್ ಖಾದರ್‌ಸಿ,ಇ,ಎನ್ ಪಿ,ಎಸ್,ಐ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಹೆಚ್,ಎಸ್, ನಂಜಪ್ಪ, ಪೊಲೀಸ್ ಠಾಣೆ, ಪ್ರದೀಪ ,ಲೋಹಿತ್ ಸಿ,ಎಂ, ಗ್ರಾಮಾಂತರ ಪೊಲೀಸ್ ಠಾಣೆ, ಹೆಚ್ ಸಿ ರವೀಂದ್ರ ,ಮಧುಸೂಧನ್, ಲಿಂಗಮೂರ್ತಿ, ಡಿ.ಸಿ.ಆರ್.ಬಿ ವಿಭಾಗದ ಗಿರೀಶ್, ಹೆಚ್ ಸಿ, ಅನ್ವರ್ ಪಾಷ, ಹರಿಪ್ರಸಾದ್ ಹಾಗೂ ತಾಂತ್ರಿಕ ವಿಭಾಗದ ಅಬ್ದುಲ್ ರಬ್ಬಾನಿ, ಹಾಗು ಮಹಿಳಾ ಸಿಬ್ಬಂದಿ ಕು. ಪುಷಾ ಭಾಗವಸಿದ್ದರು. ಕಾರ್ಯಾಚರಣೆ ತಂಡಕ್ಕೆ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.

    Accused arrested in inter-district theft-robbery case

  • ಮಂಗನ ಕಾಯಿಲೆ ಪ್ರಕರಣ ಸಾರ್ವಜನಿಕರು ಆತಂಕಕ್ಕೊಳಗಾಗದೆ ಮುನ್ನೆಚರಿಕೆ ವಹಿಸಬೇಕು

    ಮಂಗನ ಕಾಯಿಲೆ ಪ್ರಕರಣ ಸಾರ್ವಜನಿಕರು ಆತಂಕಕ್ಕೊಳಗಾಗದೆ ಮುನ್ನೆಚರಿಕೆ ವಹಿಸಬೇಕು

    ಚಿಕ್ಕಮಗಳೂರು:  ಜಿಲ್ಲೆಯ ಕೊಪ್ಪ ತಾಲ್ಲೂಕು ಜೇನುಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಪ್ತಿಯಲ್ಲಿ ಮಂಗನ ಕಾಯಿಲೆ ಪ್ರಕರಣ ಕಂಡು ಬಂದಿದ್ದು ಸುತ್ತಮುತ್ತಲಿನ ಸಾರ್ವಜನಿಕರು ಆತಂಕಕ್ಕೊಳಗಾಗದೆ ಮುನ್ನೆಚರಿಕೆ ವಹಿಸಬೇಕು ಎಂದು ಚಿಕ್ಕಮಗಳೂರು ತಾಲ್ಲೂಕು ತಹಸೀಲ್ದಾರ್ ಸುಮಂತ್ ಹೇಳಿದರು.

    ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಚಿಕ್ಕಮಗಳೂರು ಇವರ ವತಿಯಿಂದ ನಗರದ ತಾಲ್ಲೂಕು ಕಛೇರಿಯಲ್ಲಿಂದು ಆಯೋಜಿಸಿದ್ದ ಮಂಗನ ಕಾಯಿಲೆ ಕುರಿತು ಮಾಹಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸಾಮಾನ್ಯವಾಗಿ ಮಂಗಗಳು ಸಾಯುವುದರಿಂದ ಕಾಯಿಲೆ ಬರುವಿಕೆಯ ಮುನ್ಸೂಚನೆ ದೊರಕುತ್ತದೆ. ಕೆಲವು ಸಲ ಸತ್ತ ಮಂಗಗಳು ಕಣ್ಣಿಗೆ ಕಾಣದೆಯೂ ಈ ಕಾಯಿಲೆ ಕಾಣಿಸಿಕೊಳ್ಳಬಹುದು. ಮಂಗಗಳು ಸಾಯುವ ಅಥವಾ ಮಂಗಗಳು ಸತ್ತ ಕಾಡಿಗೆ ಹೋಗಿ ಬರುವುದರಿಂದ ಜನರಿಗೆ ಕಾಯಿಲೆ ಹರಡಬಹುದು. ಪ್ರತಿಯೊಬ್ಬರು ಪೂರ್ತಿ ತೋಳಿನ ಬಟ್ಟೆಯನ್ನು ಧರಿಸಿ ಸುರಕ್ಷತೆಯ ಕುರಿತು ಎಚ್ಚರ ವಹಿಸಬೇಕು ಎಂದರು.

    ಜಿಲ್ಲೆಯ ಶಿರವಾಸೆ, ಮಲ್ಲಂದೂರು, ಎನ್. ಆರ್ ಪುರ ಗಡಿ ಭಾಗದಲ್ಲಿ ಸಾಮಾನ್ಯವಾಗಿ ಪ್ರಕರಣಗಳು ಕಂಡು ಬರುತ್ತವೆ ಪ್ರಸ್ತುತ ಕೊಪ್ಪ ತಾಲ್ಲೂಕು ಜೇನುಗದ್ದೆಯಲ್ಲಿ ವರ್ಷದ ಪ್ರಥಮ ಮಂಗನ ಕಾಯಿಲೆ ಪ್ರಕರಣ ಕಂಡು ಬಂದಿದ್ದು ಇದನ್ನು ಹಾಟ್ ಸ್ಪಾಟ್ ಎಂದು ಗುರುತಿಸಿ ಕಾಯಿಲೆ ತಡೆಗಟ್ಟಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಮಂಗನ ಸಾವು ಕಂಡು ಬಂದಲ್ಲಿ ಅದರ ಪರೀಕ್ಷೆಗೆ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಪರೀಕ್ಷಿಸಿ ಕ್ರಮ ವಹಿಸಲು ಸೂಚಿಸಲಾಗಿದೆ ಎಂದ ಅವರು ಸಾರ್ವಜನಿಕರು ಯಾವುದೇ ರೀತಿಯ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಸುರಕ್ಷಿತವಾಗಿರಬೇಕು ಎಂದು ತಿಳಿಸಿದರು.

    ತಾಲ್ಲೂಕು ವೈಧ್ಯಾಧಿಕಾರಿ ಡಾ. ಸೀಮಾ ಮಾತನಾಡಿ ವಿಪರೀತ ಜ್ವರ, ತಲೆನೋವು, ಕೈಕಾಲು ನೋವು ಮತ್ತು ಸೊಂಡನೋವು, ನಿಶ್ಯಕ್ತಿ , ಕಣ್ಣು ಕೆಂಪಾಗುವುದು ರೋಗದ ಪ್ರಮುಖ ಲಕ್ಷಣಗಳಾಗಿದೆ. ಈ ರೀತಿಯ ರೋಗದ ಲಕ್ಷಣ ಕಂಡು ಬಂದಲ್ಲಿ ವೈಧ್ಯರನ್ನು ಸಂಪರ್ಕಿಸಬೇಕು. ಕೊಪ್ಪ ತಾಲ್ಲೂಕು ಜೇನುಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಪ್ತಿಯಲ್ಲಿ ಮಂಗನ ಕಾಯಿಲೆಗೆ ಒಳಗಾದ ವ್ಯಕ್ತಿಯು ಸದ್ಯ ಸಂಪೂರ್ಣ ಆರೋಗ್ಯ ಚೇತರಿಸಿಕೊಂಡಿದ್ದಾರೆ.

    ಜಾಗ್ರತವಾಗಿ ವ್ಯಕ್ತಿಯ ಗ್ರಾಮದ ಪ್ರತಿಯೊಂದು ಮನೆಗೂ ಔಷಧಿ ವಿತರಿಸಿದ್ದು ಪ್ರತಿಯೊಬ್ಬರಿಗೂ ಕಾಯಿಲೆ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದ ಅವರು ತೋಟ ಅಥವಾ ಕಾಡುಗಳಿಗೆ ಹೋಗುವಾಗ ಔಷದಿಯನ್ನು ದೇಹಕ್ಕೆ ಹಚ್ಚಿಕೊಂಡು ಬಂದ ನಂತರದಲ್ಲಿ ಬಿಸಿ ನೀರಿನಿಂದ ಬಟ್ಟೆ ತೊಳೆದು ಸ್ನಾನ ಮಾಡುವುದರಿಂದ ಕಾಯಿಲೆ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು

    ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುಟ್ಟನಾಯಕ್, ತಾ.ಪಂ ಸಹಾಯಕ ನಿರ್ದೇಶಕ ಜಯಸಿಂಹ, ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಬಡಿಗೇರ್, ಕಾಂಇಕ ಇಲಾಕೆ ಪ್ರವೀಣ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

    Information meeting on monkey disease

  • ಆಶಾಕಿರಣ ಅಂಧ ಮಕ್ಕಳ ಪಾಠ ಶಾಲೆಯು ವಿಶೇಷ ಚೇತನರ ಏಳಿಗೆಗೆ ಶ್ರಮಿಸುತ್ತಿದೆ

    ಆಶಾಕಿರಣ ಅಂಧ ಮಕ್ಕಳ ಪಾಠ ಶಾಲೆಯು ವಿಶೇಷ ಚೇತನರ ಏಳಿಗೆಗೆ ಶ್ರಮಿಸುತ್ತಿದೆ

    ಚಿಕ್ಕಮಗಳೂರು:  ವಿಶೇಷ ಚೇತನ ಮಕ್ಕಳು ನಡೆದಾಡುವ ದೇವರು. ಆಶಾಕಿರಣ ಅಂಧ ಮಕ್ಕಳ ಪಾಠ ಶಾಲೆಯು ವಿಶೇಷ ಚೇತನರ ಏಳಿಗೆಗೆ ಶ್ರಮಿಸುತ್ತಿದೆ. ಪೋಷಕರು ತಮ್ಮ ವಿಕಲ ಚೇತನ ಮಕ್ಕಳನ್ನು ಈ ಶಾಲೆಗೆ ದಾಖಲಿಸಿ ಅವರ ಉತ್ತಮ ಭವಿಷ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ ಹೇಳಿದರು.

    ನಗರದ ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠ ಶಾಲೆಯಲ್ಲಿ ಆಯೋಜಿಸಿದ್ದ ೩೫ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ಮಕ್ಕಳು ದೇವರ ಸಮಾನರು ಅವರ ಸೇವೆ ನಿರ್ವಹಿಸುವುದು ಪ್ರತಿಯೊಬ್ಬರ ಕರ್ತವ್ಯ, ಅಂಧರು ಸೇರಿದಂತೆ ವಿಶೇಷ ಚೇತನ ಮಕ್ಕಳ ಆರೈಕೆ, ಶಿಕ್ಷಣ, ಸದೃಡ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯೊಂದಿಗೆ ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಬೆಳೆಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾದುದು ಎಂದರು.

    ಶಾಲೆಯ ಅಧ್ಯಕ್ಷರಾದ ಜೆ.ಪಿ ಕೃಷ್ಣೇಗೌಡರು ಸೇರಿದಂತೆ ಅವರ ಕುಟುಂಬವು ಸಂಸ್ಥೆಯ ಹಾಗೂ ಮಕ್ಕಳ ಅಭಿವೃದ್ಧಿಗೆ ಸಧಾ ದುಡಿಯುತ್ತಿದ್ದಾರೆ. ಇವರೊಂದಿಗೆ ಇಲಾಖೆಯು ಸಕಲ ಸೌಕರ್ಯಗಳನ್ನು ಒದಗಿಸಿ ಇಲಾಖೆ ಹಾಗೂ ಸರ್ಕಾರದಿಂದ ದೊರಕುವ ಎಲ್ಲಾ ಸೌಲಭ್ಯಗಳನ್ನು ತಲುಪಿಸುವುದರ ಮೂಲಕ ಬೆನ್ನೆಲುಬಾಗಿ ನಿಂತಿದೆ.

    ಜಿಲ್ಲೆಯ ಪ್ರತಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ವಿಕಲ ಚೇತನ ಮಕ್ಕಳನ್ನು ಗುರುತಿಸಿ ಪೋಷಕರಲ್ಲಿ ಅರಿವು ಮೂಡಿಸಿ ಮಾಹಿತಿ ನೀಡಿ ಮಕ್ಕಳ ದಾಖಲಾತಿ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದ ಅವರು ಮಕ್ಕಳ ರಕ್ಷಣೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಇಲಾಖೆ ಸದಾ ಸಿದ್ದವಾಗಿದೆ ಎಂದರು.

    ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠ ಶಾಲೆ ಅಧ್ಯಕ್ಷರಾದ ಜೆ.ಪಿ ಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ. ಶಾಲೆಯು ಪ್ರಾರಂಭವಾಗಿ ೩೫ ವರ್ಷ ಪೂರ್ಣಗೊಂಡಿರುವುದು ಆಶ್ಚರ್ಯವೆ ಸರಿ, ಸಂಸ್ಥೆಯ ಏಳಿಗೆಗಾಗಿ ಅನೇಕರು ಕೊಡುಗೈದಾನಿಗಳಾಗಿ ಶ್ರಮಿಸಿದ್ದಾರೆ ಹಾಗೂ ಆಡಳಿತ ಮಂಡಳಿ ಧಕ್ಷತೆಯ ಕಾರ್ಯವು ಈ ಸಾಧನೆಗೆ ಸಹಕಾರಿಯಾಗಿದೆ ಎಂದ ಅವರು ನೇತ್ರ ದಾನವು ಉಳಿದೆಲ್ಲ ದಾನಗಳಿಗಿಂತ ಶ್ರೇಷ್ಠವಾದುದು. ಅಂಧ ಮಕ್ಕಳಿಗೆ ಪ್ರಪಂಚದ ಜ್ಞಾನ ಉಣಬಡಿಸಿ ಅವರ ಭವಿಷ್ಯ ರೂಪಿಸಿಕೊಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

    ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠ ಶಾಲೆ ಕಾರ್ಯದರ್ಶಿ ಹೆಚ್.ಸಿ ಮಹೇಶ್ ಪ್ರಾಸ್ಥಾವಿಕವಾಗಿ ಮಾತನಾಡಿ ತಂದೆ, ತಾಯಿ ಹಾಗೂ ಗುರು ಹಿರಿಯರನ್ನು ಪ್ರತಿಯೊಬ್ಬರು ಗೌರವಿಸಬೇಕು. ಶಾಲೆಯು ೧೯೯೦ ರಲ್ಲಿ ಕೇವಲ ಬೆರಳೆಣಿಕೆ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆಯು ಇಂದು ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಟ್ಟಿದೆ.

    ಮಕ್ಕಳು ಉತ್ತಮ ಫಲಿತಾಂಶಗಳೊಂದಿಗೆ ಉತ್ತೀರ್ಣರಾಗಿ ತೇರ್ಗಡೆಯಾಗಿದ್ದಾರೆ ಜೊತೆಗೆ ಸಂಗೀತ ಹಾಗೂ ಕ್ರೀಡೆಯಲ್ಲೂ ಉತ್ತಮ ಸಾಧನೆ ಮಾಡಿದ ಮಕ್ಕಳು ಸಂಸ್ಥೆಯಲ್ಲಿದ್ದಾರೆ ಎಂದ ಅವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ ಎಂದರು.

    ಕಾರ್ಯಕ್ರಮದಲ್ಲಿ ನಗರ ಸಭೆ ಮಾಜಿ ಅಧ್ಯಕ್ಷೇ ಉಮಾ ದೇವಿ ಕೃಷ್ಣಪ್ಪ, ಆಶಾಕಿರಣ ಚಾರಿಟಬಲ್ ಟ್ರಸ್ಟ್ ಟ್ರಸ್ಟಿ ಡಾ. ವರ್ಷ ಅಭಿಷೇಕ್, ಡಾ. ಜ್ಯೋತಿಕೃಷ್ಣ, ಉಪಾಧ್ಯಕ್ಷರz ನಸ್ರುಲ್ಲಾ ಶರೀಫ್, ಹೆಚ್.ಸಿ ಶಶಿ ಪ್ರಸಾದ್, ವಾಣಿ ನಾಯ್ಡು, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಕುಮಾರ್, ಉಪ ಪ್ರಾಂಶಯಪಾಲರಾದ ಎನ್.ಎಸ್ ಶ್ವೇತರಾಣಿ, ಅಂತರಾಷ್ಟ್ರೀಯ ಕ್ರೀಡಾಪಟು ಎಂ.ಎಸ್ ಶರತ್ ವೀರ ಭದ್ರಯ್ಯ ಮಾಜಿ ಗೌಡ ಶಾಲಾ ಮುಖ್ಯ ಶಿಕ್ಷಕ ಹೆಚ್.ಎಸ್ ಲಕ್ಷ್ಮೇ ಗೌಡ ಉಪಸ್ಥಿತರಿದ್ದರು.

    Asha Kiran Residential School for Blind Children School Anniversary

  • ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ನೂತನ ಕಚೇರಿ ಉದ್ಘಾಟನೆ

    ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ನೂತನ ಕಚೇರಿ ಉದ್ಘಾಟನೆ

    ಚಿಕ್ಕಮಗಳೂರು:  ರಾಜ್ಯದಲ್ಲಿ ಉಗಮಗೊಂಡ ಪಂಚಗ್ಯಾರAಟಿ ಯೋಜನೆಗಳು ನಿರೀಕ್ಷೆ ಗೂ ಮೀರಿ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಪ್ರಣಾಳಿಕೆಯಾಗಿ ಬಳಸಿಕೊಂಡು ಮುನ್ನೆಡೆಯಲು ಕಾರಣವಾಗುತ್ತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ನೂತನ ಕಚೇರಿ ಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿ ಗ್ಯಾರಂಟಿ ಯೋಜನೆಗಳು ತಾಲ್ಲೂಕಿನ ಜನತೆಗೆ ಆರ್ಥಿಕ ಬದುಕನ್ನು ಹಂತ ಹಂತವಾಗಿ ಸುಧಾರಿಸಲು ಮೂಲವಾಗಿದೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ದೈನಂದಿನ ಖರ್ಚುವೆಚ್ಚಗಳನ್ನು ಸರಿದೂಗಿಸ ಲು ಆಧಾರವಾಗುವ ಜೊತೆಗೆ ಸ್ವಾಲವಂಬಿ ಬದುಕಿಗೆ ಪೂರಕವಾಗಿದೆ ಎಂದರು.

    ಬಾಲ್ಯದಿAದಲೇ ಸಂಕಷ್ಟ ದಿನಗಳನ್ನು ಅರಿತಿದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೊಟ್ಟಮೊದಲು ಅನ್ನಭಾಗ್ಯ ಜಾರಿಗೆ ತಂದು ಹಸಿವಿನಿಂದ ಬಳಲದಂತೆ ಆದ್ಯತೆ ಕೊಟ್ಟರು. ಇದರಿಂದ ರಾಜ್ಯದ ಕೋಟ್ಯಾಂತರ ಜನರು ಇಂದಿಗೂ ಮುಖ್ಯಮಂತ್ರಿಗಳು ಸ್ಮರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

    ನಾಡಿನ ಹಲವಾರು ಮಹಿಳೆಯರು ಹಣಕಾಸಿನ ಒತ್ತಡದಿಂದ ತೀರ್ಥಕ್ಷೇತ್ರಗಳಿಗೆ ತೆರಳಲು ಅಡ್ಡಿಯಾ ಗುತ್ತಿತ್ತು. ಇದೀಗ ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿ ಅನೇಕ ಪುಣ್ಯಸ್ಥಳಗಳಿಗೆ ಭೇಟಿ ನೀಡಿ ದ್ದಾರೆ. ಇದರಿಂದ ಸಾರಿಗೆ ಇಲಾಖೆಗೆ ನಷ್ಟವೇನಿಲ್ಲ. ದೇಗುಲದ ಕಾಣಿಕೆ ಹುಂಡಿಯಿAದ ಮುಜರಾಯಿ ಇಲಾ ಖೆಗೆ ದ್ವಿಗುಣ ಲಾಭವಾಗಿದೆ ಎಂದರು.

    ಗ್ಯಾರAಟಿ ಯೋಜನೆಗಳು ಅನುಷ್ಟಾನಗೊಳಿಸಿ ಯಶಸ್ವಿಗೊಂಡ ಬಳಿಕ ದೇಶದಲ್ಲಿ ನಡೆದಂಥ ಹಲವಾ ರು ಚುನಾವಣೆಗಳಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ಸೂತ್ರವನ್ನು ಬಳಸುತ್ತಿದೆ. ಈ ಯೋಜನೆಗಳು ಜನಸಾಮಾನ್ಯ ರಿಗೆ ಒಳಿತಿಗೂ ಪೂರಕವಾದ ಕಾರಣ ಬಹುತೇಕ ರಾಜಕೀಯ ಪಕ್ಷಗಳು ಕಾಂಗ್ರೆಸ್ ನಡೆಯನ್ನೇ ಪಾಲಿಸು ತ್ತಿದೆ ಎಂದರು.

    ರಾಜ್ಯಸರ್ಕಾರ ವೈಯಕ್ತಿಕವಾಗಿ ಹಣ ವ್ಯಯಿಸಿಲ್ಲ. ಬದಲಾಗಿ ಜನರಿಂದ ಸಂಗ್ರಹಗೊAಡ ತೆರಿಗೆ ಹಣ ವನ್ನು ಜನರಿಗಾಗಿಯೇ ವ್ಯಯಿಸುವ ಮೂಲಕ ಯಾವುದೇ ಏಜೆಂಟರಿಲ್ಲದೇ ನೇರವಾಗಿ ಖಾತೆಗೆ ಜಮಾವಣೆ ಮಾಡುತ್ತಿದೆ. ಜೊತೆಗೆ ಅಭಿವೃದ್ದಿ ವಿಚಾರದಲ್ಲೂ ಸರ್ಕಾರ ಹಿಂದೇಟು ಹಾಕದೇ ಕ್ಷೇತ್ರಕ್ಕೆ ೨೫ ಕೋಟಿ ಆಡಳಿ ತಾತ್ಮಕ ಅನುಮೋದನೆ ಸಿಕ್ಕಿದ್ದು ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

    ಭದ್ರಾಕಾಡ ಅಧ್ಯಕ್ಷ ಡಾ|| ಕೆ.ಪಿ.ಅಂಶುಮAತ್ ಮಾತನಾಡಿ ಗ್ಯಾರಂಟಿ ಬಗ್ಗೆ ಕೆಲವು ವಿರೋಧ ಪಕ್ಷದ ಮುಖಂಡರು ಬಿಟ್ಟಿ ಭಾಗ್ಯವೆಂದು ಅಪಹಾಸ್ಯದಲ್ಲಿ ತೊಡಗಿವೆೆ. ಬಡವರಿಗಾಗಿ ಮುಡಿಪಿಟ್ಟ ಯೋಜನೆಗಳು ವಿರೋಧಿಸುವವರು ಸೌಲಭ್ಯವನ್ನು ಸರ್ಕಾರಕ್ಕೆ ವಾಪಸ್ ಮಾಡಲಿ. ಈ ಹೊರತಾಗಿ ಪುಕ್ಕಟ್ಟೆ ಪ್ರಚಾರಕ್ಕೆ ಟೀಕಿ ಸುವುದು ಸರಿಯಲ್ಲ ಎಂದರು.

    ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ ಮಾತನಾಡಿ ಗ್ಯಾರಂಟಿ ಸೌಲಭ್ಯಗಳು ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಗೊಳ್ಳಲು ಜನಪ್ರತಿನಿಧಿಗಳು, ಅಧಿಕಾರಿಗಳೇ ನೇರಕಾರಣ. ಹಾಗಾಗಿ ರಾಜ್ಯ ದಲ್ಲೇ ಗ್ಯಾರಂಟಿ ತಲುಪಿಸುವಲ್ಲಿ ಜಿಲ್ಲೆ ಮೊದಲ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

    ರಾಜ್ಯ ಪರಿಸರ ತಜ್ಞರ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ ರಾಜ್ಯದ ಜನತೆಗೆ ತಾರತಮ್ಯ ಎಸಗದೇ ಎಲ್ಲರೂ ಒಂದೇ ಎಂಬ ಮನೋಭಾವದಿಂದ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಕರ‍್ಯ ಮಾಡಲಾಗಿದೆ. ಈ ತಂತ್ರಗಾರಿಕೆಯನ್ನು ಹಲವಾರು ರಾಜ್ಯಗಳಲ್ಲಿ ಬಳಸಿಕೊಳ್ಳಲು ರಾಜ್ಯದಲ್ಲಿನ ಹಿರಿಯ ಕಾಂಗ್ರೆಸ್ಸಿಗರ ನೇರಕಾರಣ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ. ಮಲ್ಲೇಶ್ ಅತ್ಯಂತ ದೊಡ್ಡ ಜವಾಬ್ದಾರಿಯನ್ನು ಸರ್ಕಾರ ಹೊರೆಸಿರುವ ಕಾರಣ ತಾಲ್ಲೂಕಿನ ಹೋಬಳಿ, ಗ್ರಾಮಗಳಲ್ಲಿ ತೆರಳಿ ಸೌಲಭ್ಯದಿಂದ ವಂಚಿತರಾಗಿ ಫಲಾನುಭವಿಗಳಿಗೆ ಸೇರ್ಪಡಿಸುವ ಕಾರ್ಯಕ್ಕೆ ಮುಂದಾ ಗುತ್ತೇನೆ ಎಂದರು.

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್‌ಕುಮಾರ್, ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಅನ್ಸರ್ ಆಲಿ, ಸದಸ್ಯರುಗಳಾದ ವಿಂದ್ಯಾ, ಜಯಂತಿ, ಗೌಸ್‌ಮೊಹಿಯುದ್ದೀನ್, ನಾಗೇಶ್‌ರಾಜ್ ಅರಸ್, ಧ ರ್ಮಯ್ಯ, ಕೃಷ್ಣ ಉಪಸ್ಥಿತರಿದ್ದರು.

    Inauguration of the new office of the Taluk Guarantee Authority

  • ಅಪ್ಪ ಸತ್ತಿದ್ದು ಗೊತ್ತೇ ಇಲ್ಲ-ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಗಳು

    ಅಪ್ಪ ಸತ್ತಿದ್ದು ಗೊತ್ತೇ ಇಲ್ಲ-ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಗಳು

    ಚಿಕ್ಕಮಗಳೂರು: ಆಪ್ತಮಿತ್ರನಿಗೆ ಮಗಳ ಮದುವೆಯ ಲಗ್ನಪತ್ರಿಕೆ ಕೊಡಲು ಹೋದ ತಂದೆ ಮಾರ್ಗ ಮಧ್ಯೆ ಅಪಘಾತದಿಂದ ಸಾವನ್ನಪ್ಪಿದ ವಿಷಯವೇ ಗೊತ್ತಿಲ್ಲದ ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೃದಯವಿದ್ರಾವಕ ಘಟನೆ ಚಿಕ್ಕಮಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.

    ನಿನ್ನೆ ಹಾಗೂ ಇವತ್ತು ತರೀಕೆರೆ ಪಟ್ಟಣದ ನಾಗಪ್ಪ ಕಾಲೋನಿ ನಿವಾಸಿ ಚಂದ್ರು ಎಂಬುವರ ಮಗಳ ಮದುವೆ ನಿಶ್ಚಯವಾಗಿತ್ತು. ಕೊನೆ ಮಗಳ ಮದುವೆ ಎಂದು ಚಂದ್ರು ಅದ್ಧೂರಿಯಾಗಿ ಮದುವೆಗೆ ತಯಾರಿ ಮಾಡಿದ್ದರು. ಆದರೆ, ಮಗಳ ಆರತಕ್ಷತೆಯ ದಿನ ಆತ್ಮೀಯ ಸ್ನೇಹಿತರೊಬ್ಬರಿಗೆ ಲಗ್ನಪತ್ರಿಕೆ ಕೊಟ್ಟಿಲ್ಲ ಎಂದು ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಹೋಗಿ ಕಾರ್ಡ್ ಕೊಟ್ಟು ಬರುವ ವೇಳೆ ಮಾರ್ಗ ಮಧ್ಯೆ ಬೈಕ್ ಅಪಘಾತವಾಗಿತ್ತು.

    ತೀವ್ರ ಗಂಭೀರ ಗಾಯವಾಗಿದ್ದ ಚಂದ್ರುರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದ ಚಂದ್ರು ಭಾನುವಾರ ಮಧ್ಯಾಹ್ನನವೇ ಮರಣ ಹೊಂದಿದ್ದರು.

    ವಿಷಯ ಮನೆಯವರಿಗೆ ತಿಳಿದರೆ ಮದುವೆ ನಿಲ್ಲುತ್ತೆ ಎಂದು ಕುಟುಂಬಸ್ಥರು ವಿಷಯವನ್ನ ಮೃತ ಚಂದ್ರು ಪತ್ನಿ ಹಾಗೂ ಮಗಳು ದೀಕ್ಷಾಗೆ ಹೇಳಲೇ ಇಲ್ಲ. ಅಪಘಾತವಾಗಿದೆ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿ ಭಾನುವಾರ ಸಂಜೆ ಆರತಕ್ಷತೆ ಮುಗಿಸಿ, ಇಂದು ಬೆಳಗ್ಗೆ ಮುಹೂರ್ತವನ್ನೂ ಮುಗಿಸಿದ್ದಾರೆ. ಮುಹೂರ್ತ ಮುಗಿದ ಬಳಿಕ ವಿಷಯವನ್ನ ಮನೆಯವರಿಗೆ ತಿಳಿಸಲಾಗಿದೆ.

    ವಿಷಯ ಕೇಳಿ ಮೃತನ ಪತ್ನಿ ಹಾಗೂ ಮಗಳಿಗೆ ಬರಸಿಡಿಲು ಬಡಿದಂತಾಗಿ ಕುಟುಂಬಸ್ಥರ ನೋವಿನ ಆಕ್ರಂದನ ಮುಗಿಲುಮುಟ್ಟಿದೆ. ಕಡೂರು ಪಟ್ಟಣದ ಬೀರೂರಿನ ತರಳಬಾಳು ಕಲ್ಯಾಣ ಮಂಟಪದಲ್ಲಿ ಮದುವೆಯಾಗಿದ್ದು ಗಂಡು-ಹೆಣ್ಣು ಮನೆಗೆ ಬರುವ ವೇಳೆ ಮನೆಗೆ ತಂದೆಯ ಮೃತದೇಹ ಕೂಡ ಬಂದಿತ್ತು. ಮನೆಯವರು ಮಗಳ ಮದುವೆಯಾಯ್ತು ಅಂತ ಸಂತೋಷ ಪಡಬೇಕೋ ಅಥವ ಮನೆಯ ಯಜಮಾನ ಸಾವನ್ನಪ್ಪಿದ್ದಾನೆ ಎಂದು ಕಣ್ಣೀರಡಬೇಕೋ ತಿಳಿಯದಂತೆ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.

    ಮೃತ ಚಂದ್ರುಗೆ ಮೂರು ಜನ ಹೆಣ್ಣು ಮಕ್ಕಳು. ಮೊದಲ ಮಗಳ ಮದುವೆಯಲ್ಲಿ ಕೊರೋನಾ ಅಡ್ಡಿ ಬಂತು ಅಂತ ಕುಟುಂಬಸ್ಥರು, ಸಂಬಂಧಿಕರಷ್ಟೆ ಪಾಲ್ಗೊಂಡು ಮದುವೆ ಮಾಡಿದ್ದರು. ಹಾಗಾಗಿ, ಕೊನೆ ಮಗಳ ಮದುವೆ. ಅದ್ಧೂರಿಯಾಗಿ ಮಾಡಬೇಕು ಅಂತ ಶಕ್ತಿ ಮೀರಿ ಮಗಳ ಮದುವೆಯನ್ನ ಅದ್ಧೂರಿಯಾಗಿ ಅರೆಂಜ್ ಮಾಡಿದ್ದರು.

    ಆದರೆ, ಮದುವೆಗೆ ಅಪ್ಪನೇ ಇರಲಿಲ್ಲ. ಮಗಳು ಹಾಗೂ ಪತ್ನಿ ಕೇಳಿದರು ಕುಟುಂಬಸ್ಥರು ಕೊನೆ ಮದುವೆ ಇಷ್ಟಪಟ್ಟು ಕಷ್ಟಪಟ್ಟು ಮದುವೆ ಮಾಡಿದ್ದಾನೆ. ಮದುವೆ ನಿಲ್ಲಬಾರದು ಅಂತ ಆಸ್ಪತ್ರೆಯಲ್ಲಿ ಇದ್ದಾನೆ. ಚೆನ್ನಾಗಿದ್ದಾನೆ ಎಂದು ಹೇಳಿ ಮದುವೆ ಮುಗಿದ ಮೇಲೆ ವಿಷಯವನ್ನ ತಿಳಿಸಿದ್ದಾರೆ. ವಿಷಯ ತಿಳಿದ ತರೀಕೆರೆ ಚಂದ್ರು ಸ್ನೇಹಿತರು ಹಲವರು ಮದುವೆಗೆ ಹೋಗಿಲ್ಲ.

    ಈ ಕುರುಳು ಹಿಂಡುವ ಕಥೆ ಕೇಳಿದ ಜನ ಕೂಡ ದೇವರು ಅತ್ಯಂತ ಕ್ರೂರಿ. ಯಾರಿಗೂ ಇಂತಹಾ ಪರಿಸ್ಥಿತಿ ಬರಬಾರದು ಎಂದು ದೇವರಿಗೆ ಹಿಡಿಶಾಪ ಹಾಕಿದ್ದಾರೆ.

    Daughter enters married life without knowing father died

  • ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ – ಇಲಾಖಾವಾರು ಆಂತರಿಕ ದೂರು ಸಮಿತಿ

    ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ – ಇಲಾಖಾವಾರು ಆಂತರಿಕ ದೂರು ಸಮಿತಿ

    ಚಿಕ್ಕಮಗಳೂರು: ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ-೨೦೧೩ನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳಲ್ಲಿ ಆಂತರಿಕ ದೂರು ಸಮಿತಿಯನ್ನು ಕಡ್ಡಾಯವಾಗಿ ಸ್ಥಾಪಿಸುವಂತೆ ಜಿಲ್ಲಾಧಿಕಾರಿ ಮೀನಾನಾಗರಾಜ್ ಸೂಚಿಸಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಕಾಯ್ದೆ ೨೦೧೩ ನ್ನು ಕುರಿತು ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಸುಪ್ರೀಂ ಕೋರ್ಟ್ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸುವಂತೆ ನಿರ್ದೇಶನ ನೀಡಿದೆ. ಅದರಂತೆ ಕೆಲಸದ ಸ್ಥಳಗಳಲ್ಲಿ ಮಹಿಳೆ ನೆಮ್ಮದಿಯಿಂದ ಕಾರ್ಯನಿರ್ವಹಿಸುವಂತಾಗಲು ೧೦ ಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿ ಬಂದು ಕೆಲಸದ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ.
    ಅಲ್ಲಿ ಆಂತರಿಕ ದೂರು ನಿವಾರಣಾ ಸಮಿತಿ ರಚಿಸಲು ಈಗಾಗಲೇ ಎಲ್ಲಾ ಇಲಾಖೆಗಳಿಗೂ ನಿರ್ದೇಶನ ನೀಡಲಾಗಿದೆ. ಆಂತರಿಕ ದೂರು ಸಮಿತಿ ರಚಿಸದೇ ಇರುವ ಇಲಾಖೆಗಳು ಕೂಡಲೇ ಸಮಿತಿ ರಚಿಸಲು ಕ್ರಮವಹಿಸುವಂತೆ ತಿಳಿಸಿದ ಅವರು ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ವಿವರಗಳನ್ನು She ಃoxನಲ್ಲಿ ಅಪ್ ಡೇಟ್ ಮಾಡುವಂತೆ ಹೇಳಿದರಲ್ಲದೆ, ದೂರು ಸಮಿತಿ ರಚಿಸದ ಇಲಾಖೆಗಳ ಅಧಿಕಾರಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
    ಇಂದು ಸ್ತ್ರೀ ಮತ್ತು ಪುರುಷರು ಇಬ್ಬರೂ ಸಮಾನರು ಆದ್ದರಿಂದ ಪುರುಷರಿಗೆ ಇರುವಷ್ಟು ಎಲ್ಲಾ ಸೌಕರ್ಯ ಸೌಲಭ್ಯಗಳು ಮಹಿಳೆಯರಿಗೂ ದೊರಕಬೇಕು. ಒಂದು ವೇಳೆ ಯಾವುದೇ ರೀತಿಯ ದೌರ್ಜನ್ಯ ಅನ್ಯಾಯಗಳು ಆಗುತ್ತಿದ್ದರೆ. ಆಂತರಿಕ ದೂರು ಸಮಿತಿಗೆ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ನೀಡಿ ನ್ಯಾಯ ದೊರಕಿಸಿ ಕೊಳ್ಳಬೇಕು ಎಂದರು.
    ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ ಮಾತನಾಡಿ ೧೦ ಕ್ಕಿಂತ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳಲ್ಲಿ ಕಡ್ಡಾಯವಾಗಿ ಆಂತರಿಕ ದೂರು ಸಮಿತಿಯನ್ನು ರಚಿಸುವಂತೆ ತಿಳಿಸಿದರು.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ. ಹನುಮಂತಪ್ಪ ಮಾತನಾಡಿದರು. ವಕೀಲರಾದ ಡಿ.ಎಸ್. ಮಮತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ-೨೦೧೩ರ ಕುರಿತು ಉಪನ್ಯಾಸ ನೀಡಿದರು.
    ಕಾರ್ಯಕ್ರಮದಲ್ಲಿ ಜಿ.ಪಂ.ನ ಡಿ.ವೈ.ಎಸ್.ಪಿ ಶೈಲೇಂದ್ರ, ಜಿಲ್ಲಾ ಮಟ್ಟದ ಸ್ಥಳೀಯ ಸಮಿತಿ (PಔSಊ) ಅಧ್ಯಕ್ಷರಾದ ಯಮುನಾ ಚೆನ್ನಬಸಪ್ಪ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ ಮುಂತಾದವರಿದ್ದರು.
    Sexual harassment of women at workplace – Departmental Internal Complaints Committee
  • ಕಳಸ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು

    ಕಳಸ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಅಮಾನತು

    ಚಿಕ್ಕಮಗಳೂರು: ಪತ್ನಿಗೆ ಮಾನಸಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಕಳಸ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ನಿತ್ಯಾನಂದಗೌಡ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

    ನಿತ್ಯಾನಂದ ಅವರ ಪತ್ನಿ ಉಡುಪಿ ಮೂಲದ ಅಮಿತಾ ಅವರು ಶನಿವಾರ ಕಳಸ ಠಾಣೆಗೆ ದೂರು ನೀಡಿದ್ದರು. ‘ನನ್ನ ಮೇಲೆ ನನ್ನ ಪತಿ ಹಲ್ಲೆ ನಡೆಸಿ, ದೌರ್ಜನ್ಯ ಎಸಗಿದ್ದಾರೆ’ ಎಂದು ದೂರಿದ್ದರು. ಪತ್ನಿ ವಿರುದ್ಧ ಅವರು ಕೂಡ ಪ್ರತಿ ದೂರು ದಾಖಲಿಸಿದ್ದರು.

    ಮರು ದಿನವೇ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಆದೇಶ ಹೊರಡಿಸಿದ್ದಾರೆ. ‘ಪತ್ನಿ ನೀಡಿರುವ ದೂರು ಮಾತ್ರ ಅಮಾನತಿಗೆ ಕಾರಣವಲ್ಲ. ಅಶಿಸ್ತಿನ ಬೇರೆ ಪ್ರಕರಣಗಳೂ ಇವೆ’ ಎಂದು ಎಸ್ಪಿ ಸ್ಪಷ್ಟಪಡಿಸಿದರು.

    Kalasa Police Station Sub-Inspector suspended

  • ಕಡವೆ ಶಿಕಾರಿ ಮಾಡಿದ್ದ ವ್ಯಕ್ತಿ ಸೆರೆ-ಎರಡು ಕೋವಿ ವಶ

    ಕಡವೆ ಶಿಕಾರಿ ಮಾಡಿದ್ದ ವ್ಯಕ್ತಿ ಸೆರೆ-ಎರಡು ಕೋವಿ ವಶ

    ಚಿಕ್ಕಮಗಳೂರು: ಕಡವೆ ಶಿಕಾರಿ ಮಾಡಿದ್ದ ವ್ಯಕ್ತಿ ಓರ್ವನನ್ನು ಬಂಧಿಸಿರುವ ಅರಣ್ಯ ಸಂಚಾರಿ ದಳ ವಾಹನ ಸಹಿತ ಎರಡು ಕೋವಿ ವಶಪಡಿಸಿಕೊಂಡಿದೆ.

    ಚಿಕ್ಕಮಗಳೂರು ವಲಯದ ಅತ್ತಿಗಿರಿ ಸೆಕ್ಷನ್, ತೋಗರಿಹಂಕಲ್ ಗ್ರಾಮದ ಸರ್ವೇ ಸಂಖ್ಯೆ ೩೭ ರಲ್ಲಿ ಕೂತನ್ಕುಲ್ ಎಸ್ಟೇಟ್ ನಲ್ಲಿ ಇಂದು ನಸುಕಿನಲ್ಲಿ ತೋಟದ ರೈಟರ್ ದೇವಯ್ಯ ಕಡವೆ ಶಿಖಾರಿ ಮಾಡಿದ್ದ.

    ಶಿಕಾರಿ ಬಳಿಕ ಮಾಂಸವನ್ನು ತುಂಡು ಮಾಡುತ್ತಿದ್ದಾಗ ಅರಣ್ಯ ಸಂಚಾರಿ ದಳದವರು ದಾಳಿ ಮಾಡಿ ದೇವಯ್ಯ ರನ್ನು ಬಂಧಿಸಿ ವನ್ಯಜೀವಿ ಸಾಂಬಾರ್ ಜಿಂಕೆಯ ಅಂದಾಜು ೪೦ ಞg ಮಾಂಸ ಮತ್ತು ಚರ್ಮ, ಚೂರಿ ಹಾಗೂ ಬೇಟೆಗೆ ಬಳಸುತ್ತಿದ್ದ ೨ ಡಿiಜಿಟe ಗಳನ್ನು ವಶಕ್ಕೆ ಪಡೆದಿದ್ದಾರೆ. ಒಂಟಿ ನಳಿಕೆ ರೈಫಲ್ ಹಾಗೂ ಐವತ್ತಕ್ಕೂ ಹೆಚ್ಚು ಜೀವಂತ ಬಳಸಿದ ಗುಂಡು ಪತ್ತೆಯಾಗಿದೆ.

    ವನ್ಯಜೀವಿ ಹಾಗೂ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್, ವಲಯ ಅರಣ್ಯಾಧಿಕಾರಿ ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿ ಪ್ರಹಾರ್ಶ್, ಪೂರಪ್ಪ ಮತ್ತು ಇತರರು ಪಾಲ್ಗೊಂಡಿದ್ದರು

    Man arrested for hunting a hawk two guns seized

  • ಆವತಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಹೆಚ್.ಬಿ.ಮಹೇಂದ್ರ ಅಧಿಕಾರ ಸ್ವೀಕಾರ

    ಆವತಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಹೆಚ್.ಬಿ.ಮಹೇಂದ್ರ ಅಧಿಕಾರ ಸ್ವೀಕಾರ

    ಚಿಕ್ಕಮಗಳೂರು: ರೋಟರಿ ಎಂದರೆ ಕಲಿಕೆ, ಕೌಶಲಾಭಿವೃದ್ಧಿಗೆ ಉತ್ತಮ ವೇದಿಕೆ. ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಅವಕಾಶ. ಇಲ್ಲಿ ಕ್ರೀಡೆ, ಸಂಸ್ಕೃತಿ, ಸೇವೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದು ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ಡಿ.ಎಸ್.ರವಿ ತಿಳಿಸಿದರು.

    ಅವರು ಭಾನುವಾರ ಆವತಿ ಪ್ಲಾಂಟರ್‍ಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಆವತಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾದ ಮಹೇಂದ್ರ ಮತ್ತು ಕಾರ್ಯದರ್ಶಿಯಾದ ಪ್ರಥಮ್ ರವರಿಗೆ ಅಧಿಕಾರ ನೀಡಿ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.

    ರೋಟರಿ ಸಂಸ್ಥೆ ೧೨೦ ವರ್ಷದ ಹಿಂದೆ ಕೇವಲ ೪ ಜನರಿಂದ ಆರಂಭವಾಗಿ ಇಂದು ೧೨ ಲಕ್ಷ ಸದಸ್ಯರನ್ನು ಹೊಂದಿಗೆ ಪ್ರಪಂಚದ ಸುಮಾರು ೨೦೦ ದೇಶಗಳಲ್ಲಿ ಸಂಸ್ಥೆ ಅಸ್ಥಿತ್ವದಲ್ಲಿದೆ. ೧೯೧೨ ರಲ್ಲಿ ರೊಟರಿ ಸಂಸ್ಥೆ ಅಂತರಾಷ್ಟ್ರೀಯ ಮಟ್ಟಕ್ಕೆ ಕಾಲಿಟ್ಟಿತು. ಕೆನಡಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಆರಂಭವಾಗಿ ನಮ್ಮ ದೇಶದಲ್ಲಿ ೧೯೨೦ ರಲ್ಲಿ ಕಲ್ಕತ್ತಾದಲ್ಲಿ ಆರಂಭವಾದರೂ ದುರಾದೃಷ್ಟ ನಮ್ಮ ದೇಶದವರು ಯಾರೂ ಸದಸ್ಯರಾಗಿರಲಿಲ್ಲ. ಎಲ್ಲರೂ ಬ್ರಿಟೀಷರಿದ್ದರು. ಆದರೆ ಸದಸ್ಯ ಕಾರ್ಯದರ್ಶಿಯಾಗಿದ್ದ ಕಲ್ಕತ್ತದ ಲಹೋರಿ ಅವರು ಅಂತರಾಷ್ಟ್ರೀಯ ಮಟ್ಟಕ್ಕೆ ಅಧ್ಯಕ್ಷರಾಗಿದ್ದರು. ೧೯೩೪ ಕ್ಕೆ ಬೆಂಗಳೂರು, ೧೯೫೪ ಕ್ಕೆ ಚಿಕ್ಕಮಗಳೂರು ಒಳಗೊಂಡ ಹಾಸನ ಕ್ಲಬ್ ಆರಂಭವಾಯಿತು. ಚಿಕ್ಕಮಗಳೂರು ಕ್ಲಬ್ ೧೯೫೯ರಲ್ಲಿ ಚಿಕ್ಕಮಗಳೂರು ಕ್ಲಬ್ ಆರಂಭವಾಯಿತು ಎಂದರು.

    ರೋಟರಿಯ ಮುಖ್ಯ ಧ್ಯೇಯ ಸತ್ಸಂಗ, ಸ್ನೆಹವಾಗಿದ್ದರೂ ಅದು ಸೇವೆಗೆ ಮಾರ್ಪಾಡಾಗಿದೆ. ಇದರಲ್ಲಿ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮ ಪ್ರಮುಖವಾದದ್ದು, ಸತತವಾದ ಪ್ರಯತ್ನದಿಂದ ೧೯೮೫ ರಿಂದ ಅಭಿಯಾನ ನಡೆಸಿದ ಪರಿಣಾಮ ೨೦೧೪ ರಲ್ಲಿ ನಮ್ಮ ದೇಶ ಪೋಲಿಯೋ ಮುಕ್ತ ರಾಷ್ಟ್ರ ನಮ್ಮದಾಗಿದೆ. ಇದರೊಂದಿಗೆ ಆಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ನೈಜೀರಿಯಾ ದೇಶಗಳಲ್ಲಿ ಇನ್ನೂ ಪೊಲೀಯೋ ನಿರ್ಮೂಲನಾ ಕಾರ್ಯಕ್ರಮವನ್ನು ರೋಟರಿ ಕೈಗೆತ್ತಿಕೊಳ್ಳುತ್ತಿದೆ ಎಂದರು.

    ರೋಟರಿ ಸದಸ್ಯತ್ವ ಅಭಿವೃದ್ಧಿಯ ಅಧ್ಯಕ್ಷ ಸಿ.ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೋಣಿಬೀಡು ಕ್ಲಬ್ ೮೬ನೆಯದ್ದಾಗಿ ಉದಯವಾಗಿದೆ. ಇನ್ನೂ ಮೂರು ಕ್ಲಬ್‌ಗಳು ಈ ವರ್ಷ ಅಸ್ಥಿತ್ವಕ್ಕೆ ಬರಲಿವೆ. ಒಟ್ಟು ೩೬೬೬ಸದಸ್ಯರು ಇದ್ದಾರೆ. ಕಳೆದ ಒಂದು ವರ್ಷದಲ್ಲಿ ೧೧೨ ಮಂದಿ ಹೊಸದಾಗಿ ಸದಸ್ಯರಾಗಿದ್ದಾರೆ ಎಂದರು.

    ರೋಟರಿ ಎಂದಾಕ್ಷಣ ಬಾಂಧವ್ಯವನ್ನ ಹೆಚ್ಚುಗೊಳಿಸುವುದು. ತನ್ಮೂಲಕ ಬೇರೆ ಬೇರೆ ಚಟುವಟಿಕೆಗಳನ್ನು ಆರಂಭಿಸಲು ಆಧ್ಯತೆ ಕೊಡುತ್ತಿದೆ. ಬಾಂಧವ್ಯದ ಕೊರತೆ ಕಾರಣಕ್ಕೆ ವೃದ್ಧಾಶ್ರಮಗಳು ಹುಟ್ಟಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಸಣ್ಣ ಸಣ್ಣ ವಿಚಾರಕ್ಕೆ ಇಂದು ದುಡುಕಿನ ನಿರ್ಧಾರ ತೆಗೆದುಕೊಳ್ಳು ಒಂಟಿತನ ಕಾರಣವಾಗುತ್ತಿದೆ. ಇದನ್ನು ನಿವಾರಿಸುವ ದೃಷ್ಠಿಯಿಂದ ರೋಟರಿ ಸಂಸ್ಥೆಯನ್ನು ಆರಂಭಿಸಲಾಗಿದೆ ಎಂದರು.

    ಮನೆಯಲ್ಲಿ ಮದುವೆ ಕಾರ್ಯಕ್ರಮ ಇದ್ದರೂ ಮನೆ ಮಕ್ಕಳೇ ಇಂದು ಬುರುವುದಿಲ್ಲ. ಅವರ ಆಲೋಚನಾ ದೃಷ್ಠಿಯೇ ಇಂದು ಬೇರೆ ಆಗಿದೆ. ತರಾತುರಿಯಲ್ಲಿ ಮದುವೆಯಾದವರು ಅಷ್ಟೇ ತರಾತುರಿಯಲ್ಲಿ ವಿಚ್ಛೇಧನಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುವ ಅವಶ್ಯಕತೆ ಹೆಚ್ಚಿರುವುದರಿಂದ ಯುವಕರನ್ನು ಹೆಚ್ಚಾಗಿ ರೋಟರಿಗೆ ಕರೆತರಬೇಕಿದೆ ಎಂದು ಕರೆ ನೀಡಿದರು.

    ಆವತಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಹೆಚ್.ಬಿ.ಮಹೇಂದ್ರ ಮಾತನಾಡಿ ಈ ಬಾಗದಲ್ಲಿ ಸ್ನೇಹಿತರೆಲ್ಲ ಸೇರಿ ಸಮಾಜಸೇವೆ ಕೆಲಸಗಳನ್ನು ಮಾಡುತ್ತಿದ್ದೇವೆ, ಇದರ ಜೊತೆಯಲ್ಲಿ ರೋಟರಿ ಕ್ಲಬ್ ಸದಸ್ಯರಾಗಿ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ಅನುಕೂಲವಾಗುತ್ತದೆ, ಎಲ್ಲಾ ಸದಸ್ಯರು ಸಭೆಗಳಿಗೆ ಆಗಮಿಸಿ ತಮ್ಮ ಸಲಹೆ ಸಹಕಾರ ನೀಡಬೇಕೆಂದು ತಿಳಿಸಿದರು.

    ಈ ಸಂದರ್ಭದಲ್ಲಿ ರೋಟರಿ ಸಹಾಯಕ ಗೌರ್‍ನರ್ ಅರುಣ್ ರಕ್ಷಿದಿ, ಕ್ಲಬ್‌ನ ಸಲಹೆಗಾರ ಸಿ.ಸಿ.ಸವಿನ್, ಗೋಣಿಬೀಡು ಕ್ಲಬ್‌ನ ಅಧ್ಯಕ್ಷ ಪ್ರಸನ್ನ, ಕಾರ್ಯದರ್ಶಿ ರತನ್, ಝೋನಲ್ ಲೆಫ್ಟಿನೆಂಟ್ ವೈ.ಡಿ.ಲೋಕೇಶ್, ಆವತಿ ಕ್ಲಬ್ ಕಾರ್ಯಧರ್ಶಿ ಪ್ರಥಮ್, ಮತ್ತಿತರರು ಹಾಜರಿದ್ದರು.

    Avati Rotary Club

  • ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ

    ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ

    ಚಿಕ್ಕಮಗಳೂರು:  ನಮ್ಮ ಹೋರಾಟ ಭಾರತದ ವಿರುದ್ಧ ಎನ್ನುವ ರಾಷ್ಟ್ರ ವಿರೋಧಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

    ತಾಲ್ಲೂಕು ಕಛೇರಿಯಿಂದ ಹನುಮಂತಪ್ಪ ಸರ್ಕಲ್ ವರೆಗೆ ಬಿಜೆಪಿ ಮುಖಂಡರುಗಳೊಂದಿಗೆ ಮೆರವಣಿಗೆ ಹೊರಟ ಕಾರ್ಯಕರ್ತರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ನಂತರ ಹನುಮಂತಪ್ಪ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.

    ಈ ವೇಳೆ ಮಾತನಾಡಿದ ಮುಖಂಡರು ಇದೇ ಜನವರಿ ೧೫ ರಂದು ನವದೆಹಲಿಯಲ್ಲಿ ನೂತನ ಎಐಸಿಸಿ ಕಚೇರಿಯ ಉದ್ಘಾಟನೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಾತನಾಡುತ್ತಾ ನಮ್ಮ ಹೋರಾಟ ಭಾರತದ ವಿರುದ್ಧ ಎನ್ನುವ ರಾಷ್ಟ್ರ ವಿರೋಧಿ ಹೇಳಿಕೆ ನೀಡಿದ್ದಾರೆ. ಇದು ಪ್ರಚೋದನಾ ಕಾರಿ ಹೇಳಿಕೆಯಾಗಿದ್ದು, ದೇಶದ ಸಮಗ್ರತೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸುವ ದುರುದ್ದೇಶದಿಂದ ಕೂಡಿದೆ. ತಮ್ಮ ಕಾರ್ಯಕರ್ತರಿಗೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕುಮ್ಮಕ್ಕು ನೀಡಿದಂತಾಗಿದೆ ಎಂದು ಆರೋಪಿಸಿದರು.

    ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲಿ ಹರಿದಾಡುತ್ತಿದೆ. ಇದನ್ನು ಆಧರಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಮಾತನಾಡಿ ಪ್ರಜಾಪ್ರಭುತ್ವ ವಿರೋಧಿ ನಿಲುವು ಹೊಂದಿರುವ ಹಾಗೂ ಈ ದೇಶದ ಕಾನೂನು, ಸಂವಿಧಾನಕ್ಕೆ ಗೌರವ ನೀಡದಿರುವ ಓರ್ವ ವಿರೋಧ ಪಕ್ಷದ ನಾಯಕನನ್ನು ಹೊಂದಿರುವ ನಮ್ಮ ದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು.

    ದೇಶದ ೧೪೫ ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆ ದೇಶದ ಒಳಗೂ, ದೇಶದ ಹೊರಗೂ ತಲೆ ತಗ್ಗಿಸುವಂತಹ ಕೆಲಸವನ್ನು ನಾನು ಮಾಡುವುದಿಲ್ಲ. ದೇಶ ತಲೆ ಎತ್ತಿ ನಡೆಯುವಂತೆ ಕೆಲಸ ಮಾಡುತ್ತೇನೆ ಎಂದು ಹೇಳುತ್ತಾ, ದೇಶವನ್ನು ವಿಶ್ವಗುರು ಮಾಡುವತ್ತ ಹೊರಟಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂದೆಡೆಯಾದರೆ, ಸಂವಿಧಾನಾತ್ಮಕವಾಗಿ ವಿರೋಧ ಪಕ್ಷದ ಜವಾಬ್ದಾರಿ ಹೊತ್ತಿರುವ ರಾಹುಲ್ ಗಾಂಧಿ ಬೇಜವಾಬ್ದಾರಿಯುತವಾಗಿ ದೇಶವನ್ನು ಒಡೆಯುವ, ರಾಷ್ಟ್ರ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

    ಈ ದೇಶದ ವಿರುದ್ಧ ಹೋರಾಟ ನಡೆಸಬೇಕಾದ ಕಾಲಘಟ್ಟದಲ್ಲಿ ನಾನಿದ್ದೇನೆ ಎಂದು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಈ ದೇಶ ತೊರೆದು ಇಟಲಿಯಲ್ಲಿ ನೆಲೆಸುವುದು ಸೂಕ್ತ ಎಂದರು.

    ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ರಾಹುಲ್ ಗಾಂಧಿ ಅವರು ನಮ್ಮ ಹೋರಾಟ ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಎಂದು ಹೇಳಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಅದಕ್ಕಾಗಿಯೇ ಅವರು ಇರುವುದು. ಆದರೆ ನಮ್ಮ ಹೋರಾಟ ಭಾರತದ ವಿರುದ್ಧ ಎಂದು ಹೇಳಿಕೆಯನ್ನೂ ನೀಡಿರುವ ರಾಹುಲ್ ಗಾಂಧಿ ದೇಶದ ವಿರೋಧ ಪಕ್ಷದ ನಾಯಕನಾಗಿ ಮುಂದುವರಿಯಲು ನಾಲಾಯಕ್ ಎಂದರು.

    ರಾಹುಲ್ ಗಾಂಧಿ ತಕ್ಷಣ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ದೇಶವನ್ನು ತುಂಡರಿಸುವ ಕೆಲಸದಲ್ಲಿ ಎಂದಿಗೂ ಮುಂದಿರುವ ಇತಿಹಾಸ ಹೊಂದಿರುವ ಕಾಂಗ್ರೆಸ್‌ನ ಸಂಬಂಧ ದೇಶ ದ್ರೋಹಿಗಳೊಂದಿಗೆ ಮಾತ್ರ ಎಂದು ಆರೋಪಿಸಿದರು.

    ಪ್ರತಿಭಟನೆ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

    ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಒಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಜಿಲ್ಲಾ ವಕ್ತಾರ ಸಿ.ಎಚ್.ಲೋಕೇಶ್, ಡಾ.ನರೇಂದ್ರ, ಜಸಿಂತ ಅನಿಲ್ ಕುಮಾರ್, ಹಿರೇಮಗಳೂರು ಪುಟ್ಟಸ್ವಾಮಿ, ಜಯವರ್ಧನ್, ಅಂಕಿತ, ಶಶಿ ಆಲ್ದೂರು, ನೆಟ್ಟೆಕರೆಹಳ್ಳಿ ಜಯಣ್ಣ, ಮಂಜು ಬ್ಯಾಟರಿ, ಜೀವನ್ ಕೋಟೆ, ಬಸವರಾಜು, ಪ್ರದೀಪ್, ಕಬೀರ್ ಇತರರು ಭಾಗವಹಿಸಿದ್ದರು.

    BJP Yuva Morcha workers protest against Rahul Gandhi