Category: ಚಿಕ್ಕಮಗಳೂರು

  • ದೇಶದ ಎಲ್ಲಾ ವರ್ಗದ ಜನ ಸುಶಿಕ್ಷಿತರಾದಾಗ ಸಮಸಮಾಜ ನಿರ್ಮಾಣ

    ದೇಶದ ಎಲ್ಲಾ ವರ್ಗದ ಜನ ಸುಶಿಕ್ಷಿತರಾದಾಗ ಸಮಸಮಾಜ ನಿರ್ಮಾಣ

    ಚಿಕ್ಕಮಗಳೂರು: ದೇಶದ ಎಲ್ಲಾ ವರ್ಗದ ಜನ ಸುಶಿಕ್ಷಿತರಾದಾಗ ಮಾತ್ರ ಸಮ ಸಮಾಜ ನಿರ್ಮಾಣವಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಇಂದು ಕ್ಷೇತ್ರದ ಸಖರಾಯಪಟ್ಟಣದಲ್ಲಿ ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಡಾ. ಅಂಬೇಡ್ಕರ್ ಆಟೋ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿ ೧೨ನೇ ಶತಮಾನದಲ್ಲಿ ಬಸವಣ್ಣ, ೧೯ನೇ ಶತಮಾನದಲ್ಲಿ ಬಿ.ಆರ್ ಅಂಬೇಡ್ಕರ್‌ರ ಪರಿಶ್ರಮದ ಫಲವಾಗಿ ಇಂದು ನಾವೆಲ್ಲಾ ನೆಮ್ಮದಿ ಜೀವನ ನಡೆಸಲು ಕಾರಣವಾಗಿದೆ ಎಂದು ತಿಳಿಸಿದರು.

    ಆಟೋ ಚಾಲಕರು ಮತ್ತು ಮಾಲಿಕರ ಕುಟುಂಬದ ಎಲ್ಲಾ ಮಕ್ಕಳು ಡಾ. ಬಿ.ಆರ್ ಅಂಬೇಡ್ಕರ್ ಆಶಯದಂತೆ ಉತ್ತಮ ಶಿಕ್ಷಣ ಪಡೆಯಬೇಕು. ಇದು ಕಾರ್ಯರೂಪಕ್ಕೆ ಬಂದಾಗ ಸಮೃದ್ಧ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.

    ಆಟೋ, ಟ್ಯಾಕ್ಸಿ ಮಾಲಿಕರು, ಚಾಲಕರು ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟರೆ ರಾಜ್ಯಸರ್ಕಾರ ೫ ಲಕ್ಷ ರೂ ವಿಶೇಷ ಪರಿಹಾರ ಕೊಡಲು ನಿರ್ಧಾರ ಕೈಗೊಂಡಿದೆ. ಅದಕ್ಕಾಗಿ ಕಾರ್ಮಿಕ ಇಲಾಖೆಯಲ್ಲಿ ತಾವುಗಳು ಕೂಡಲೇ ನೊಂದಣಿ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ಆಟೋ ಚಾಲಕರು ನೀಡಿದ ಮನವಿಯಲ್ಲಿರುವ ಕೆಲವು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದ ಅವರು, ಸಖರಾಯಪಟ್ಟಣ ಬಸ್ ನಿಲ್ದಾಣದಿಂದ ಕಲ್ಮರುಡಿ ಮಠದವರೆಗೆ ಸುಸಜ್ಜಿತ ಬೀದಿದೀಪಗಳನ್ನು ಅಳವಡಿಸಲಾಗುವುದು ಹಾಗೂ ಬಸ್ ನಿಲ್ದಾಣದ ಪಕ್ಕದಲ್ಲಿ ನೂತನ ಆಟೋ ನಿಲ್ದಾಣ ನಿರ್ಮಾಣ ಸಧ್ಯದಲ್ಲೇ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ಆಟೋ ನಂಬಿ ಬದುಕುತ್ತಿರುವ ಚಾಲಕರಿಗೆ ಆಟೋ ನಿಲ್ದಾಣ ನಿರ್ಮಾಣ ಮಾಡಿದರೆ ಶಾಶ್ವತವಾಗಿ ಸಮಸ್ಯೆ ಬಗೆಹರಿಯುತ್ತದೆ ಎಂದರು.

    ಆಟೋ ಚಾಲಕರಲ್ಲಿ ಚಾಲನೆ ಪರವಾನಗಿ, ವಿಮೆ, ಸಮವಸ್ತ್ರ, ಇವುಗಳು ಸಮರ್ಪಕವಾಗಿದ್ದಾಗ ಗೌರವ ಸಿಗುತ್ತದೆ. ದಾಖಲಾತಿಗಳು ಇಲ್ಲ ಎಂಬ ಕಾರಣಕ್ಕೆ ಕೇಸು ದಾಖಲಿಸದೆ ಅರಿವು ಮೂಡಿಸಿ ಎಂದು ಪೊಲೀಸ್ ಠಾಣಾಧಿಕಾರಿಗೆ ಸೂಚನೆ ನೀಡಿದ ಅವರು, ಇದರಿಂದ ಶಿಸ್ತು ಮೂಡಿಸಿದಂತಾಗುತ್ತದೆಂದು ಹೇಳಿದರು.

    ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ ವಹಿಸಿದ್ದರು. ಸದಸ್ಯರುಗಳಾದ ಲೋಕೇಶ್, ಗಣೇಶ್, ಬಸವರಾಜ್, ಆನಂದ್ ನಾಯ್ಕ, ಸಮುನ್, ತೇಜಸ್ವಿ, ಠಾಣಾಧಿಕಾರಿ ಪವನ್ ಕುಮಾರ್, ಪಿಡಿಓ ಲತಾಮಣಿ, ಆಟೋ ಸಂಘದ ಅಧ್ಯಕ್ಷ ಪ್ರದೀಪ್ ಉಪಸ್ಥಿತರಿದ್ದರು.

    An equal society is created when people from all walks of life in the country are well-educated.

  • ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದವರ ಮನೆಯನ್ನು ಬುಲ್ಡೋಜರ್ ಬಳಸಿ ದ್ವಂಸ ಮಾಡಬೇಕು

    ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದವರ ಮನೆಯನ್ನು ಬುಲ್ಡೋಜರ್ ಬಳಸಿ ದ್ವಂಸ ಮಾಡಬೇಕು

    ಚಿಕ್ಕಮಗಳೂರು: ಬೇಲೂರಿನಲ್ಲಿ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದವರು ಯಾವುದೇ ಧರ್ಮ ಜಾತಿಯವರಾದರು ಅವರ ಮನೆಯನ್ನು ಬುಲ್ಡೋಜರ್ ಬಳಸಿ ದ್ವಂಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.

    ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೊಲೀಸರು ಸಿಸಿ ಕ್ಯಾಮೆರಾ ಗಳನ್ನು ಆಧರಿಸಿ ಕೂಡಲೇ ತಪ್ಪಿತಸ್ಥರನ್ನು ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಜೊತೆಗೆ ಬುಲ್ಡೋಜರ್ ಬಳಸಿ ಅಂಥವರ ಮನೆ ದ್ವಂಸ ಮಾಡಬೇಕು. ತಪ್ಪಿತಸ್ಥರನ್ನು ರಕ್ಷಿಸಲು ಮುಂದಾದರೆ ಸಮಾಜವೇ ಬುಲ್ಡೋಜರ್ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಹಾರ ಹಾಕಿರುವ ಅನುಮಾನವಿದೆ‌. ಮದ್ದೂರಿನಲ್ಲಿ ಕಲ್ಲುತೂರಾಟ ನಡೆಸಿದರು. ರಾಜ್ಯದಲ್ಲಿ ಪದೇಪದೇ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ. ಈ ಮೂಲಕ ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಜನರಿಗೆ ಸಿಟ್ಟು ಬಂದರೆ ದುರ್ಜನರು ಯಾರು ಉಳಿಯುವುದಿಲ್ಲ ಎಂದು ಕಿರಿಕಾರಿದರು.

    ಸಿಎಂ ಸಿದ್ದರಾಮಯ್ಯ ಅವರಿಗಿಂತಲೂ ಔರಂಗಜೇಬನೇ 100 ಪಟ್ಟು ಹೆಚ್ಚು ಉತ್ತಮ. ಔರಂಗಜೇಬ ಹಿಂದುಗಳಿಗೆ ಮಾತ್ರ ತೆರಿಗೆ ವಿಧಿಸಿದ್ದ. ಆದರೆ ಸಿಎಂ ಸಿದ್ದರಾಮಯ್ಯ ದೇವಾಲಯಗಳ ಪೂಜೆ ವೆಚ್ಚವನ್ನು ಹೆಚ್ಚಿಸಿದ್ದಾರೆ. ಈ ಮೂಲಕ ಜನ ದೇವಸ್ಥಾನಕ್ಕೆ ಬರುವುದನ್ನು ತಡೆದು ಮತಾಂತರಕ್ಕೆ ಷಡ್ಯಂತ್ರ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು  ದೂರಿದರು.

    ದಸರಾ ಜನಸಾಮಾನ್ಯರ ಹಾಗೂ ಹಿಂದುಗಳ ಹಬ್ಬ. ದುಷ್ಟ ಶಕ್ತಿಗಳ ವಿರುದ್ಧ ಸಜ್ಜನ ಶಕ್ತಿಗಳು ವಿಜಯವಾದ ಆಚರಣೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ದಸರಾವನ್ನು ಶ್ರೀಮಂತರ ಹಬ್ಬ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮೈಸೂರು ದಸರಾದ ಒಂದೊಂದು ಆಚರಣೆಗಳನ್ನು ನೋಡಲು ಪ್ರವೇಶಕ್ಕೆ ದುಬಾರಿ ವೆಚ್ಚದ ಟಿಕೆಟ್ ಮಾಡಲಾಗಿದೆ. ಈ ಮೂಲಕ ಬಡವರನ್ನು ದಸರಾದಿಂದ ದೂರ ಇಡುವ ಹುನ್ನಾರ ನಡೆದಿದೆ. ಇದೆಲ್ಲವನ್ನು ನೋಡಿದಾಗ ಸಿದ್ದರಾಮಯ್ಯ ಅವರಿಗಿಂತ ಔರಂಗಜೇಬನೆ ಉತ್ತಮ ಎನಿಸುತ್ತದೆ ಎಂದರು.

    The house of those who garlanded the idol with slippers should be demolished using a bulldozer.

  • ಬಸವ ಅಭಿಯಾನ ಜಾಗೃತಿ ಮೂಡಿಸುವುದು

    ಬಸವ ಅಭಿಯಾನ ಜಾಗೃತಿ ಮೂಡಿಸುವುದು

    ಚಿಕ್ಕಮಗಳೂರು:  ಬಸವ ಜಾಗೃತಿ ಅಭಿಯಾನ ಬಸವ ಜಾಗೃತಿ ಮೂಡಿಸುವುದೇ ಹೊರತು, ಸಮಾಜವನ್ನು ಒಡೆಯುವ ಉದ್ದೇಶ ಅಲ್ಲ ಎಂದು ಸಾಣೇಹಳ್ಳಿ ಮಠದ ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಲಿಂಗಾಯತ ಮಠಾಪತಿಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಚಿಕ್ಕಮಗಳೂರು ನೇತೃತ್ವದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

    ನಾವು ಧರ್ಮ ಪ್ರಚಾರವನ್ನು ಮಾಡಲು ಹೊರಟಿದ್ದೇವೆ. ಇದಕ್ಕೆ ಆರೋಪ, ಪ್ರತಿರೋಧ ಬಂದಿದೆ. ನಮಗೆ ಬಸವಣ್ಣನವರ ಹೆಸರನ್ನು ಕೆಡಿಸುವ, ಸಮಾಜವನ್ನು ಹೊಡೆಯುವ ಉದ್ದೇಶ ಅಲ್ಲ. ಬಸವಣ್ಣನನ್ನು ತತ್ವಾದರ್ಶಗಳನ್ನು ಪಸರಿಸಲು ಟೊಂಕಕಟ್ಟಿ ನಿಂತಿದ್ದೇವೆ. ಇದಕ್ಕೆ ಯಾವುದೇ ಟೀಕೆ ಬಂದರೂ ಸಹ ಪ್ರೀತಿ ಯಿಂದ ಸ್ವಾಗತ ಮಾಡುತ್ತೇವೆ. ದ್ವೇಷಿಸುವುದಿಲ್ಲ ಎಂದ ಅವರು, ಟೀಕಿಸುವವರು ಸಹ ನಾಳೆ ನಮ್ಮ ಜತೆ ಸೇರಿಕೊಳ್ಳುವ ವಿಶ್ವಾಸ ಇದೆ. ಆದ್ದರಿಂದ ಪ್ರಾಮಾಣಿಕವಾಗಿ ಈ ಅಭಿಯಾನ ಮಾಡುತ್ತಿದ್ದು, ಈ ಅಭಿಯಾನ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಇದು ಬಸವಣ್ಣನವರ ಶಕ್ತಿ ಎಂದರು.

    ಬಸವಣ್ಣನ ಭಾವಚಿತ್ರ ಮನೆಯಲ್ಲಿರುವ ಜತೆಗೆ, ಅವರ ತತ್ವಗಳು ಮನಸ್ಸಿನಲ್ಲಿರಬೇಕು. ಕೇವಲ ಭಾ ವಚಿತ್ರ ಇಟ್ಟು ಪೂಜಿಸಿದರೆ ಪ್ರಯೋಜನವಿಲ್ಲ. ಬಸವಣ್ಣನ ವಚನಗಳನ್ನು ಕಲಿತು ಅವರ ತತ್ವಾದರ್ಶಗಳನ್ನು ಎಲ್ಲರೂ ತಲೆಯಲ್ಲಿ ತುಂಬಿಕೊಂಡು ಬದುಕಿನಲ್ಲಿ ಆಚರಣೆಗೆ ಬರಲಿ ಎಂದರು.

    ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಬಸವ ಸಂಸ್ಕೃತಿಯ ಅಭಿಯಾನದಿಂದ ಇಡೀ ವಿಶ್ವವೇ ಬಸವಣ್ಣನ ಹಿಂದೆ ಬರುವ ವಾತಾವರಣ ಮೂಡುತ್ತಿದೆ ಎಂದರು. ಇವತ್ತಿನ ಪಾದಯಾತ್ರೆ ಬಸವಣ್ಣನನ್ನು ಇವರು ಏಕೆ ಇ? ನೆನಪು ಮಾಡಿಕೊಳ್ಳುತ್ತಾರಪ್ಪ ಎಂದು ಒಂದು ಥರಾ ಮುಖ ಮಾಡಿಕೊಳ್ಳುತ್ತಿದ್ದ ಜನರಿಗೆ ತಕ್ಕ ಪಾಠ ನೀಡುವ ಜತೆಗೆ, ಬಸವಣ್ಣನನ್ನು ಬಿಟ್ಟರೆ ಗತಿ ಇಲ್ಲ, ಮತಿ ಇಲ್ಲ ಇನ್ಮುಂದಾದರೂ ಬಸವಣ್ಣನನ್ನು ಒಪ್ಪಿಕೊಂಡು ಇವರ ಜತೆ ಹೋಗಬೇಕು ಎಂಬ ಎಚ್ಚರಿಕೆ ನೀಡಿದೆ ಎಂದರು.

    ಕಾಫಿನಾಡು ಕೇವಲ ಪ್ರವಾಸಿತಾಣವಲ್ಲ. ಶರಣ ಪರಂಪರೆಯ ಪ್ರೇರಕ ಶಕ್ತಿ. ಅಕ್ಕನಾಗಮ್ಮ, ನುಲಿಯ ಚಂದಯ್ಯ, ರುದ್ರಮುನಿಯವರಂತಯ ಘಟಾನುಘಟಿಯ ಶರಣರು ತಪ್ಪಸಗೈದು ಲೀಲಾ ವಿಶ್ರಾಂತಿಗೈದಿ ರುವ ಜಿಲ್ಲೆಯಾಗಿದ್ದು, ಇದು ಶಿವಶರಣರ ಜಿಲ್ಲೆ ಎಂದರು.

    ಇವತ್ತಿನ ಕಾರ್ಯಕ್ರಮ ಸಂಘಟನಾತ್ಮಕವಾಗಿ ನಾವೆಲ್ಲರೂ `ದ್ರವಾಗಿದ್ದೇವೆ ಎಂಬ `ದ್ರತೆಯ `ವ ಮೂಡಿಸಿದೆ. ಆದರೆ, ಶರಣರ ತತ್ವ, ಚಿಂತನೆ, ವಿಚಾರ`ರೆಗಳನ್ನು ಅನುಸರಿಸುವ ಜತೆಗೆ ಮತ್ತ? ಪರಿಣಾಮ ಬೀರಬೇಕು ಎಂದರು.

    ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಸಾಕ? ಗೊಂದಲಮಯವಾಗಿದೆ. ಒಳ ಪಂಗಡಗಳು, ಜಾತಿಗಳ ಕಾಲಂನಲ್ಲಿ ಸಾಕ? ಗೊಂದಲ ಸೃಷ್ಟಿಯಾಗಿದೆ. ಇದರಿಂದ ಒಂದೇ ಆಶಯಗಳನ್ನು ಇಟ್ಟುಕೊಂಡು ಸಾಗು ತ್ತಿರುವ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದರೆ, ಸಮೀಕ್ಷೆಯ ವೇಳೆ ಎಚ್ಚರಿಕೆಯಿಂದ ಧರ್ಮ, ಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಧರ್ಮ, ಜಾತಿಯನ್ನು ನಮೂದು ಮಾಡಿ ಎಂದು ಸಲಹೆ ನೀಡಿದರು.

    ಶಾಸಕ ಹೆಚ್.ಡಿ. ತಮ್ಮಯ್ಯ ಮಾತನಾಡಿ, ಸಮ, ಸಮಾಜ ನಿರ್ಮಾಣದಲ್ಲಿ ಬಸವಣ್ಣನವರ ಕೊಡುಗೆ ಅಪಾರ. ೨೧ನೇ ಶತಮಾನದಲ್ಲಿಯೂ ಸಹ ಬಸವಣ್ಣನವರ ವಚನಗಳು ಇವತ್ತು ಪ್ರಸ್ತುತವಾಗಿವೆ. ಬಸವ ಸಂಸ್ಕೃತಿ ಉಳಿಯಬೇಕಾದರೆ ಪ್ರತಿಯೊಬ್ಬರ ಮನೆಯಲ್ಲಿ ಬಸವಣ್ಣನವರ ಭಾವಚಿತ್ರವನ್ನು ಇಟ್ಟು ಪೂಜಿಸ ಬೇಕು ಎಂದ ಅವರು, ಯುವಪೀಳಿಗೆಗೆ ಬಸವಣ್ಣನ ವಿಚಾರ`ರೆಯನ್ನು ತಿಳಿಸಬೇಕಾಗಿದೆ. ಆ ನಿಟ್ಟಿನಲ್ಲಿ ಇಂತಹ ಜಾಗೃತಿ ಕಾರ್ಯಕ್ರಮ ಅಗತ್ಯ ಎಂದರು.

    ಪ್ರಾಸ್ತವಿಕವಾಗಿ ಬಸವ ಸಂಸ್ಕೃತಿ ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷರಾದ ಬಿ.ಎನ್.ಚಿದಾನಂದ್ ಮಾತನಾಡಿದರು. ನಾ ದೇವನಲ್ಲದೆ ನೀ ದೇವನೇ ವಿ?ಯದ ಕುರಿತಿ ಮಹಾಂತ ಸ್ವಾಮಿಗಳು, ಅರಿದೊಡೆ ಶರಣ, ಮರೆದೊಡೆ ಮಾನವ ವಿ?ಯದ ಕುರಿತು ಗಂಗಾಬಿಕೆ ಬಸವರಾಜ್ ಉಪನ್ಯಾಸ ನೀಡಿದರು.

    ಕಾರ್ಯಕ್ರಮದಲ್ಲಿ ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ, ಹಿರೇಮಠದ ಶ್ರೀ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಯಳನಾಡು ಸಂಸ್ಥಾನ ಮಠದ ಶ್ರೀ ಜ್ಞಾನೊಪ್ರ` ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಪು?ಗಿರಿ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಮುಖಂಡರಾದ ಎಚ್.ಸಿ ಕಲ್ಮರುಡಪ್ಪ, ಮಹಡಿಮನೆ ಸತೀಶ್, ಬಿ.ಜಿ. ಸೋಮಶೇಖರಪ್ಪ ಸೇರಿದಂತೆ ಹಲವರು ಇದ್ದರು.

    Basava Abhiyan Awareness Raising

  • ಲಿಂಗಾಯತ ಮಠಾಧಿಪತಿಗಳ ಒಕ್ಕೂಟಕ್ಕೆ ಸಮಾಜವ ಒಡೆಯುವ ಉದ್ದೇಶವಿಲ್ಲ

    ಲಿಂಗಾಯತ ಮಠಾಧಿಪತಿಗಳ ಒಕ್ಕೂಟಕ್ಕೆ ಸಮಾಜವ ಒಡೆಯುವ ಉದ್ದೇಶವಿಲ್ಲ

    ಚಿಕ್ಕಮಗಳೂರು: ‘ಬಸವ ಸಂಸ್ಕೃತಿ ಅಭಿಯಾನದ ಉದ್ದೇಶ ಲಿಂಗಾಯತ ಧರ್ಮವನ್ನು ಪ್ರಚಾರ ಮಾಡುವುದೇ ಹೊರತು ಸಮಾಜ ಒಡೆಯುವುದಲ್ಲ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ನೇತೃತ್ವದಲ್ಲಿ ಶನಿವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ‘ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಚನೆ ಮಾಡಿಕೊಂಡಿದ್ದೇವೆ. ನಮ್ಮ  ಧರ್ಮ ಪ್ರಚಾರವನ್ನು ಮಾಡಲು ಹೊರಟಿದ್ದೇವೆ. ಇದಕ್ಕೆ ಆರೋಪ, ಪ್ರತಿರೋಧ ಬಂದಿದೆ. ನಮಗೆ ಬಸವಣ್ಣನ ಹೆಸರನ್ನು ಕೆಡಿಸುವ ಅಥವಾ ಸಮಾಜವ ಒಡೆಯುವ ಉದ್ದೇಶವಿಲ್ಲ’ ಎಂದು ತಿಳಿಸಿದರು.

    ‘ಬಸವಣ್ಣನ ತತ್ವ ಆದರ್ಶಗಳನ್ನು ಪಸರಿಸಲು ಟೊಂಕಕಟ್ಟಿ ನಿಂತಿದ್ದೇವೆ. ಇದಕ್ಕೆ ಯಾವುದೇ ಟೀಕೆ ಬಂದರೂ  ಪ್ರೀತಿಯಿಂದ ಸ್ವಾಗತ ಮಾಡುತ್ತೇವೆ. ಯಾರನ್ನೂ ದ್ವೇಷಿಸುವುದಿಲ್ಲ. ಟೀಕಿಸುವವರು ಸಹ ನಾಳೆ ನಮ್ಮ ಜತೆ ಸೇರಿಕೊಳ್ಳುವ ವಿಶ್ವಾಸ ಇದೆ’ ಎಂದರು.

    ‘ಈ ಅಭಿಯಾನವನ್ನು ಪ್ರಮಾಣಿಕವಾಗಿ ಮಾಡುತ್ತಿದ್ದೇವೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋದಾಗ ಹೊಸ ರೂಪ ಪಡೆದುಕೊಳ್ಳುತ್ತಿವೆ. ಇದು ಬಸವಣ್ಣನ ಶಕ್ತಿ ಎಂದು ಅಭಿಪ್ರಾಯಪಟ್ಟರು.

    ಮನೆಯಲ್ಲಿ ಬಸವಣ್ಣನ ಭಾವಚಿತ್ರದ ಜತೆಗೆ ಅವರ ತತ್ವಗಳು ಮನಸ್ಸಿನಲ್ಲಿ ಇಸಿಸಿಕೊಂಡು ಮುನ್ನಡೆಯಬೇಕು. ಕೇವಲ ಭಾವಚಿತ್ರ ಇರಿಸಿ ಪೂಜಿಸಿದರೆ ಪ್ರಯೋಜನವಿಲ್ಲ. ಬಸವಣ್ಣನ ವಚನಗಳನ್ನು ಕಲಿತು ಅವರ ತತ್ವಗಗಳನ್ನು ಬದುಕಿನಲ್ಲಿ ಆಚರಣೆಗೆ ತರಬೇಕು ಎಂದು ಹೇಳಿದರು.

    ಬಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ‘ಬಸವ ಸಂಸ್ಕೃತಿಯ ಅಭಿಯಾನದಿಂದ ಇಡೀ ವಿಶ್ವವೇ ಬಸವಣ್ಣನ ಹಿಂದೆ ಬರುವ ವಾತಾವರಣ ಮೂಡುತ್ತಿದೆ’ ಎಂದರು.

    ‘ಇಂದಿನ ಪಾದಯಾತ್ರೆ ನೋಡಿದರೆ ವಿರೋಧಿಸುವವರಿಗೆ ಪಾಠ ಹೇಳಿದಂತಿತ್ತು. ಬಸವಣ್ಣನನ್ನು ಬಿಟ್ಟರೆ ಗತಿ ಇಲ್ಲ, ಮತಿ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಮುಂದಾದರೂ ಬಸವಣ್ಣನನ್ನು ಒಪ್ಪಿಕೊಂಡು ಮುನ್ನಡೆಯಬೇಕು’ ಎಂದರು.

    ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಸಾಕಷ್ಟು ಗೊಂದಲಮಯವಾಗಿದೆ. ಒಳ ಪಂಗಡಗಳು, ಜಾತಿಗಳ ಕಾಲಂನಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಇದರಿಂದ ಒಂದೇ ಆಶಯ ಇಟ್ಟುಕೊಂಡು ಸಾಗುತ್ತಿರುವ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಮೀಕ್ಷೆಯ ವೇಳೆ ಎಚ್ಚರಿಕೆಯಿಂದ ಧರ್ಮ, ಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಧರ್ಮ, ಜಾತಿ ನಮೂದು ಮಾಡಬೇಕು ಎಂದು ಸಲಹೆ ನೀಡಿದರು.

    ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ‘ಸಮ ಸಮಾಜ ನಿರ್ಮಾಣದಲ್ಲಿ ಬಸವಣ್ಣನ ಕೊಡುಗೆ ಅಪಾರ. ಬಸವ ಸಂಸ್ಕೃತಿ ಉಳಿಯಬೇಕೆಂದರೆ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಬಸವಣ್ಣನ ಭಾವಚಿತ್ರ ಇರಿಸಿಕೊಳ್ಳಬೇಕು. ಯುವ ಪೀಳಿಗೆಗೆ ಬಸವಣ್ಣನ ವಿಚಾರ ತಿಳಿಸಬೇಕು.’ ಎಂದರು.

    ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎನ್.ಚಿದಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ನಾ ದೇವನಲ್ಲದೆ, ನೀ ದೇವನೇ’ ವಿಷಯದ ಕುರಿತು ಮಹಾಂತ ಸ್ವಾಮೀಜಿ, ‘ಅರಿದೊಡೆ ಶರಣ, ಮರೆದೊಡೆ ಮಾನವ’ ವಿಷಯದ ಕುರಿತು ಗಂಗಾಬಿಕೆ ಬಸವರಾಜ್ ಉಪನ್ಯಾಸ ನೀಡಿದರು.

    ತೋಂಟದ ಸಿದ್ಧರಾಮ ಸ್ವಾಮೀಜಿ, ಹಿರೇಮಠದ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಯಳನಾಡು ಸಂಸ್ಥಾನ ಮಠದ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ, ಮುಖಂಡರಾದ ಬೆಳ್ಳಿ ಪ್ರಕಾಶ್, ಡಿ.ಎಸ್. ಸುರೇಶ್, ಎಚ್.ಸಿ. ಕಲ್ಮರುಡಪ್ಪ, ಮಹಡಿಮನೆ ಸತೀಶ್, ಬಿ.ಜಿ. ಸೋಮಶೇಖರಪ್ಪ ಇದ್ದರು.

    The Lingayat Muttah Dipati Association has no intention of dividing the society.

  • ಅವಕಾಶ ವಂಚಿತರಿಗೆ ಸಮಾನ ಅವಕಾಶಗಳನ್ನು ನೀಡಲು ಸಮೀಕ್ಷೆ ಅಗತ್ಯ

    ಅವಕಾಶ ವಂಚಿತರಿಗೆ ಸಮಾನ ಅವಕಾಶಗಳನ್ನು ನೀಡಲು ಸಮೀಕ್ಷೆ ಅಗತ್ಯ

    ಗದಗ:  ರಾಜ್ಯದಲ್ಲಿ ನಡೆಸಲುದ್ದೇಶಿಸಿರುವ ಸಮೀಕ್ಷೆ ಕೇವಲ ಜಾತಿಸಮೀಕ್ಷೆಯಾಗಿರದೇ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ. ಜನರ ಜಾತಿಯ ವಿವರ ಪಡೆಯುವ ಜೊತೆಗೆ ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ವಿವರ ಪಡೆದು, ಅವಕಾಶ ವಂಚಿತರಿಗೆ ಸಮಾನ ಅವಕಾಶಗಳನ್ನು ನೀಡಲು ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ಗದಗ್ ನ ಸರ್ಕ್ಯೂಟ್ ಹೌಸ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಜಾತಿ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ನಡಿ ವಿವಿಧ ಜಾತಿಗಳನ್ನು ಉಲ್ಲೇಖಿಸಲಾಗುವುದೇ ಎಂಬುದಕ್ಕೆ ಉತ್ತರಿಸಿ, ಇದರ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಲಾಗಿದ್ದು, ಅನಗತ್ಯವಿರುವ ಅಂಶಗಳನ್ನು ತೆಗೆದುಹಾಕಲು ಹಿಂದುಳಿದ ವರ್ಗಗಳ ಆಯೋಗವೇ ನಿರ್ಧರಿಸುತ್ತದೆ. ಆಯೋಗವು ಶಾಸನಬದ್ಧ ಸಂಸ್ಥೆಯಾಗಿದ್ದು, ಸಮೀಕ್ಷೆ ನಡೆಸಲು ಮಾರ್ಗಸೂಚಿಗಳನ್ನಷ್ಟೇ ಸರ್ಕಾರ ನೀಡಿದೆ. 1,75,000 ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕರ ನಿಯೋಜಿತರಾಗಿದ್ದಾರೆ. ಒಬ್ಬ ಶಿಕ್ಷಕರು ತಲಾ 150 ಮನೆಗಳಿಂದ ಮಾಹಿತಿ ಸಂಗ್ರಹಿಸಲಿದ್ದು, ಈ ಸಮೀಕ್ಷಾ ಕಾರ್ಯ 15 ದಿನಗಳ ಕಾಲ ನಡೆಯಲಿದೆ. ಸಮೀಕ್ಷೆಯಲ್ಲಿ ಧರ್ಮ, ಜಾತಿ, ಉಪಜಾತಿ, ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಮಾಹಿತಿಗಳನ್ನು ಕಲೆಹಾಕಲಿದ್ದಾರೆ ಎಂದರು.

    ಜಾತಿಗಣತಿಯ ಹಿಂದೆ ಷಡ್ಯಂತ್ರವಿದೆ ಎಂದು ವಚನಾನಂದ ಸ್ವಾಮೀಜಿಗಳು ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರವೂ ಜಾತಿಸಮೀಕ್ಷೆ ನಡೆಸಲಿದ್ದು, ಅದರಲ್ಲಿಯೂ ಷಡ್ಯಂತ್ರವಿರಲಿದೆಯೇ? ಸಮೀಕ್ಷೆಗೆ ಯಾವುದೇ ಸಚಿವರು ವಿರೋಧ ವ್ಯಕ್ತಪಡಿಸಿಲ್ಲ. ಸಮಾಜದಲ್ಲಿ ಸಮಾನತೆ ತರಲು ಬಡವರಿಗೆ ಸರ್ಕಾರಿ ಯೋಜನೆಗಳಲ್ಲಿ ಆದ್ಯತೆ ನೀಡಬೇಕಾಗುತ್ತದೆ ಎಂದರು.

    ಸಮೀಕ್ಷೆಯ ನಿರ್ಧಾರವನನ್ನು ಮರುಪರಿಶೀಲಿಸಲು ಮಾನ್ಯ ರಾಜ್ಯಪಾಲರು ಸೂಚನೆ ನೀಡುವಂತೆ ಬಿಜೆಪಿಯವರು ಮನವಿ ಸಲ್ಲಿಸಿರುವ ಬಗ್ಗೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸಮೀಕ್ಷೆಯ ವಿಚಾರದಲ್ಲಿ ಬಿಜೆಪಿಯು ರಾಜಕೀಯ ಮಾಡುತ್ತಿದೆ. ಸಮೀಕ್ಷೆಯ ವಿಚಾರದಲ್ಲಿ ಜಾತಿ ಒಡೆಯುವ ಪ್ರಶ್ನೆಯೇ ಇಲ್ಲ ಎಂದರು.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತಗಳ್ಳತನದ ಬಗ್ಗೆ ಮಾಡಿರುವ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿ, ರಾಹುಲ್ ಗಾಂಧಿಯವರು ಅಳಂದ ಕ್ಷೇತ್ರದಲ್ಲಿ ಸುಮಾರು 6000 ಮತದಾರರ ಹೆಸರನ್ನು ಕೈಬಿಟ್ಟಿರುವ ಮತಗಳ್ಳತನದ ವಿಚಾರವನ್ನು ಉಲ್ಲೇಖಿಸಿದ್ದು, ಇದು ಸತ್ಯವಾಗಿದೆ. ಆಳಂದದಲ್ಲಿರುವ ಮತಗಳ್ಳತನ ಪ್ರಕರಣದ ಬಗ್ಗೆ ಎಸ್ ಐ ಟಿ ತನಿಖೆ ನಡೆಯಲಿದೆ ಎಂದರು.

    ಕುರುಬ ಸಮಾಜವನ್ನು ಎಸ್ ಟಿ ಗೆ ಸೇರಿಸುವ ಬಗ್ಗೆ ಪ್ರತಿಕ್ರಯಿಸಿ, ಕುರುಬ ಸಮಾಜವನ್ನು ಎಸ್ ಟಿ ಗೆ ಸೇರಿಸುವ ಶಿಫಾರಸ್ಸನ್ನು ಹಿಂದಿನ ಬಿಜೆಪಿ ಸರ್ಕಾರವೇ ಮಾಡಿತ್ತು. ಆದರೆ ಈ ಪ್ರಸ್ತಾವನೆಯನ್ನು ಕೇಂದ್ರಸರ್ಕಾರ ವಾಪಸ್ಸು ಕಳಿಸಿದ್ದು, ಅದಕ್ಕೆ ವಿವರಣೆಯನ್ನು ಸರ್ಕಾರ ನೀಡಲಿದೆ. ಯಾವುದೇ ಸಮುದಾಯವನ್ನು ಎಸ್ ಟಿ ಗೆ ಸೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳುತ್ತದೆ ಎಂದರು.

    ರಾಜ್ಯದಲ್ಲಿ ಭಾರಿ ಮಳೆಯಿಂದ ಬೆಳೆಹಾನಿ ಸಂಭವಿಸಿರುವ ಬಗ್ಗೆ ಉತ್ತರಿಸುತ್ತಾ, ರಾಜ್ಯದಲ್ಲಿ ಸಂಭವಿಸಿರುವ ಬೆಳೆಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಂದ ನಂತರ ಬೆಳೆ ಪರಿಹಾರ ನೀಡಲಾಗುವುದು. ಗದಗ ಜಿಲ್ಲೆಯಲ್ಲಿ ಇನ್ನೆರೆಡು ದಿನಗಳಲ್ಲಿ ಜಂಟಿಸಮೀಕ್ಷೆಯ ಪೂರ್ಣಗೊಳ್ಳಲಿದೆ ಎಂದರು.

    ರಸ್ತೆಗುಂಡಿಗಳ ಬಗ್ಗೆ ಬಿಜೆಪಿಯವರು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಯಿಸಿ, ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗಿರುವ ಕಾರಣ, ರಸ್ತೆಗಳು ಹಾಳಾಗಿರುವುದು ನಿಜ. ಈ ಬಗ್ಗೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಸಭೆ ನಡೆಸಿ , ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗುವುದು. ಬಿಜೆಪಿಯ ಅಧಿಕಾರಾವಧಿಯಲ್ಲಿ ಒಂದೂ ರಸ್ತೆಯನ್ನೂ ನಿರ್ಮಿಸಿಲ್ಲ ಹಾಗೂ ರಸ್ತೆಗುಂಡಿಯನ್ನೂ ಮುಚ್ಚಿರುವುದಿಲ್ಲ ಎಂದರು.

    Survey needed to provide equal opportunities to the disadvantaged

  • ಜಾತಿ ಸಮೀಕ್ಷೆಯಲ್ಲಿ ಕುರುಬ ಎಂದು ನಮೂದಿಸಿ

    ಜಾತಿ ಸಮೀಕ್ಷೆಯಲ್ಲಿ ಕುರುಬ ಎಂದು ನಮೂದಿಸಿ

    ಚಿಕ್ಕಮಗಳೂರು: ಸರ್ಕಾರ ಇದೇ ಸೆ.೨೨ ರಿಂದ ಅ.೭ ರವರೆಗೆ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಜಾತಿ ಸಮೀಕ್ಷೆಯಲ್ಲಿ ಗಣತಿದಾರರು ಮನೆಗೆ ಬಂದಾಗ ಜಾತಿ ಕಾಲಂ ಸಂಖ್ಯೆ ೯ ರಲ್ಲಿ ಂ-೦೮೦೯ ಕುರುಬ ಎಂದು ಬರೆಸುವಂತೆ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್ ಶಾಂತೇಗೌಡ ಸಮಾಜ ಬಾಂಧವರಲ್ಲಿ ಮನವಿ ಮಾಡಿದರು.

    ಅವರು ಇಂದು ಕನಕ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಸಂಘದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಈ ಬಗ್ಗೆ ಒಮ್ಮತದ ತೀರ್ಮಾನ ಕೈಗೊಂಡಿದ್ದು, ಸಮಾಜದ ಮುಖಂಡರು ಸಮುದಾಯದ ಪ್ರತಿ ಮನೆಗೆ ಭೇಟಿನೀಡಿ ಮನವರಿಕೆ ಮಾಡಬೇಕೆಂದು ಸೂಚನೆ ನೀಡಿ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕು ಕುರುಬರ ಸಂಘದ ಪದಾಧಿಕಾರಿಗಳು, ಮುಖಂಡರು ಸಮಾಜ ಬಾಂಧವರಿಗೆ ಈ ಕುರಿತು ಮನವರಿಕೆ ಮಾಡಬೇಕೆಂದು ಕರೆನೀಡಿದ್ದೇವೆ ಎಂದರು.

    ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಪುಟ್ಟೇಗೌಡ ಮಾತನಾಡಿ, ಜಾತಿ ಸಮೀಕ್ಷೆಯಲ್ಲಿ ರಾಜ್ಯ ಕುರುಬರ ಸಂಘದ ಸೂಚನೆ ಮೇರೆಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪ್ರಚಾರ ಮಾಡುತ್ತಿದ್ದು, ಗಣತಿದಾರರಿಗೆ ಹಿಂದೂ, ಕುರುಬ, ಕಸುಬು ಕಾಲಂನಲ್ಲಿ ಕುರಿ ಸಾಕಾಣಿಕೆ ಎಂದು ಬರೆಸಬೇಕು, ಯಾವುದೇ ಗೊಂದಲ ಮಾಡಿಕೊಳ್ಳಬಾರದು ಎಂದು ವಿನಂತಿಸಿದರು.

    ನಿರ್ದೇಶಕ ಕೆಂಪನಹಳ್ಳಿ ಪುಷ್ಟರಾಜ್ ಮಾತನಾಡಿ, ಜಾತಿ ಸಮೀಕ್ಷೆಯ ಸಂದರ್ಭದಲ್ಲಿ ಗಣತಿದಾರರು ಮನೆಗೆ ಬಂದಾಗ ಹಿಂದೂ, ಜಾತಿ ಕಾಲಂನಲ್ಲಿ ಕುರುಬ, ಕಸುಬು ಕಾಲಂನಲ್ಲಿ ಕುರಿ ಸಾಕಾಣಿಕೆ ಎಂದು ಬರೆಸುವಂತೆ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಮನವಿ ಮಾಡುತ್ತಿದ್ದೇವೆ ಎಂದರು.

    ನಿರ್ದೇಶಕಿ ರೇಖಾಪುಲಿಯಪ್ಪಗೌಡ ಮಾತನಾಡಿ, ಸಮಾಜದ ಬಂಧುಗಳಲ್ಲಿ ಜಾತಿ ಸಮೀಕ್ಷೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇಂದು ಸಭೆ ನಡೆಸಲಾಗಿದ್ದು, ಪ್ರತಿ ಗ್ರಾಮ, ಪಂಚಾಯಿತಿಯಿಂದ ಸಮಾಜದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸರಿಯಾದ ಮಾಹಿತಿ ನೀಡುವಂತೆ ಮನೆಗೆ ಭೇಟಿನೀಡಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಇನ್ನೋರ್ವ ಮುಖಂಡ ಹೆಚ್.ಪಿ ಮಂಜೇಗೌಡ ಮಾತನಾಡಿ, ಜಾತಿ ಸಮೀಕ್ಷೆಯಲ್ಲಿ ಗೊಂದಲಕ್ಕೊಳಗಾಗದೆ ಹಿಂದೂ ಕುರುಬ ಎಂದು ತಪ್ಪದೆ ಸರಿಯಾದ ಮಾಹಿತಿ ನೀಡಿ ಬರೆಸಲು ವಿನಂತಿಸಿದ ಅವರು, ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಬಗ್ಗೆ ತಲೆಕೆಡಿಸಿಕೊಳ್ಳದೆ ಹಾಲಿ ಕುರುಬ ಎಂದು ಬರೆಸಿ ಸರ್ಕಾರದಿಂದ ಸಿಗುವ ಮೀಸಲಾತಿ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

    ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಕೆ.ವಿ ಮಂಜುನಾಥ್, ಕೆಂಪನಹಳ್ಳಿ ಪುಷ್ವರಾಜ್, ಖಜಾಂಚಿ ಸಿದ್ದೇಗೌಡ, ನಿರ್ದೇಶಕರುಗಳಾದ ಈಶ್ವರಹಳ್ಳಿ ಮಹೇಶ್, ತ್ರಿಭುವನ್, ಮಣ್ಣೇನಹಳ್ಳಿ ರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ್, ಎನ್.ಟಿ ಚಂದ್ರಪ್ಪ, ಸಚಿನ್, ಎತ್ತಿನಮನೆ ದಾಸೇಗೌಡ, ಕನಕ ಮಹಿಳಾ ಮಂಡಳಿ ಅಧ್ಯಕ್ಷೆ ಶಾರದಮ್ಮ ಮಾಸ್ತಿಗೌಡ ಮತ್ತಿತರರು ಉಪಸ್ಥಿತರಿದ್ದರು.

    Enter as Shepherd in the caste survey

  • ಕ್ರೀಡೆಗಳು ಮಾನಸಿಕ-ದೈಹಿಕ ಸಮತೋಲನಕ್ಕೆ ಸಹಕಾರಿ

    ಕ್ರೀಡೆಗಳು ಮಾನಸಿಕ-ದೈಹಿಕ ಸಮತೋಲನಕ್ಕೆ ಸಹಕಾರಿ

    ಚಿಕ್ಕಮಗಳೂರು: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿ ಸಮತೋಲನ ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ, ತಾ.ಪಂ, ನಗರಸಭೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ವಿದ್ಯಾಭಾರತಿ ವಿದ್ಯಾಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟ ೨೦೨೫-೨೬ ನ್ನು ಉದ್ಘಾಟಿಸಿ ಮಾತನಾಡಿದರು.

    ಕ್ರೀಡೆಗಳಲ್ಲಿ ಸೋಲು-ಗೆಲುವ ಸಹಜ, ಕ್ರೀಡಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮುಖ್ಯ. ಗೆದ್ದವರು ಬೀಗದೆ ಸೋತವರು ಭಾಗದೆ ಕ್ರೀಡಾ ಸಾಧನೆಗಳು ಜನರ ಮೆಚ್ಚುಗೆ ಗಳಿಸಲಿ ಎಂದು ಶುಭ ಹಾರೈಸಿದರು.

    ಗ್ರಾಮೀಣ ಗುಂಪು ಕ್ರೀಡೆಗಳಾದ ಖೋಖೋ, ಕಬ್ಬಡ್ಡಿ, ವಾಲಿಬಾಲ್, ಥ್ರೋಬಾಲ್ ಮುಂತಾದ ಕ್ರೀಡೆಗಳು ಈ ಕ್ರೀಡಾಕೂಟದಲ್ಲಿ ಇದ್ದು, ಒಬ್ಬ ನಾಯಕ ಕ್ರೀಡಾಪುಟುವಿನ ಮೈಮರೆವು ತಂಡದ ಸೋಲಿಗೆ ಕಾರಣವಾಗುತ್ತದೆ ಎಂಬುದನ್ನು ಅರಿತು ಎಚ್ಚರಿಕೆಯಿಂದ ಆಟ ಆಡಬೇಕು ಎಂದು ಸಲಹೆ ನೀಡಿದರು.

    ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಟ ಆಡುವಾಗ ಪೋಷಕರು, ಶಿಕ್ಷಕರು, ಪ್ರೇಕ್ಷಕರು, ತೀರ್ಪುಗಾರರು ಪ್ರತಿ ಕ್ಷಣವನ್ನು ಗಮನಿಸುತ್ತಿದ್ದಾರೆ ಎಂಬುದನ್ನು ಅರಿಯಬೇಕೆಂದರು.

    ಉತ್ತಮ ಕ್ರೀಡಾಪಟುಗಳಾಗಬೇಕಾದರೆ ಪೌಷ್ಠಿಕ ಆಹಾರ, ದಿನನಿತ್ಯ ವ್ಯಾಯಾಮ ಅಭ್ಯಾಸ, ಕ್ರೀಡೆಯ ಬಗ್ಗೆ ಆಸಕ್ತಿ ಇದ್ದಾಗ ಮಾತ್ರ ಎದುರಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಹೇಳಿದರು.

    ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ದೈರ್ಯದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಗಳಿಸಿ ರಾಜ್ಯ, ರಾಷ್ಟ್ರಕ್ಕೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ತೀರ್ಪುಗಾರರಿಗೆ ಗೌರವವನ್ನು ಕೊಡಬೇಕು. ಈ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಡಿಡಿಪಿಐ ತಿಮ್ಮರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ನಗರಸಭೆ ಉಪಾಧ್ಯಕ್ಷೆ ಲಲಿತಾ ಬಾಯಿ ಸೇರಿದಂತೆ ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.ಮೊದಲಿಗೆ ವಿದ್ಯಾಭಾರತಿ ಶಾಲೆಯ ಕಾರ್ಯದರ್ಶಿ ಡಾ. ಅಪ್ಸರ್ ಅಹಮದ್ ಹಿಂದೂಸ್ಥಾನಿ ಸ್ವಾಗತಿಸಿದರು.

    ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲೆ ಶಾಹಿರಾ ಫಾತಿಮಾ, ಡಿಡಿಪಿಐ ತಿಮ್ಮರಾಜು, ಕ್ಷೇತ್ರದ ಶಿಕ್ಷಣಾಧಿಕಾರಿ ರುದ್ರಪ್ಪ, ಜಿ.ಮಹೇಶ್ ಅಕ್ಷರದಾಸೋಹ ನಿರ್ದೆಶಕರು ನೀಲಕಂಠಪ್ಪ, ಪ್ರೌಡಶಾಲ ಸಹಶಿಕ್ಷರು ಅಧ್ಯಕ್ಷರು ಮಂಜುನಾಥ್, ಪ್ರೌಡಶಾಲೆ ಕಾರ್ಯದರ್ಶಿ ಉಮೇಶ್, ಪ್ರಶಾಂತ್, ಟಿ.ಕೆ.ಜಿ ಅರಸು ಶಿಕ್ಷಕರ ಸಂಯೋಜಕರು, ಜಗದೀಶ್ ಶಿಕ್ಷಣ ಸಂಯೋಜನೆ, ವಿರೇಶ್ ಕೌಲಗಿ ಜಾನಕಮ್ಮ, ಭಾಗ್ಯ ಪ್ರವಿಣ್ ಪಿಂಟೊ ಶಂಕರೆಗೌಡ, ಪರಮೇಶ್ ಮುರಬತ್ ಗ್ರೇಡ್‌ವನ್ ಉಪಸ್ಥಿತರಿದ್ದರು.

    Sports contribute to mental-physical balance.

  • ನಗರಕ್ಕೆ ಇಂದು ಬಸವ ಸಂಸ್ಕೃತಿ ಅಭಿಯಾನ ರಥ

    ನಗರಕ್ಕೆ ಇಂದು ಬಸವ ಸಂಸ್ಕೃತಿ ಅಭಿಯಾನ ರಥ

    ಚಿಕ್ಕಮಗಳೂರು:  ಕನ್ನಡ ನಾಡಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಬಸವ ತತ್ವವನ್ನು ಒಪ್ಪುವಂತಹ ಎಲ್ಲಾ ಮಠಾಧೀಶರು ಒಂದು ಧ್ವನಿಯಾಗಿ ಒಂದು ವೇದಿಕೆಯಾಗಿ ನಿಂತು ‘ಬಸವ ಸಂಸ್ಕೃತಿ ಅಭಿಯಾನ’ ಎಂಬ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

    ಅವರು ಪೀಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಈ ಬಸವ ಸಂಸ್ಕೃತಿ ಅಭಿಯಾನ ಬಸವಣ್ಣನವರು ಜನಿಸಿದ ಬಸವನ ಬಾಗೇವಾಡಿಯಲ್ಲಿ ಇದೇ ಸೆ.೧ ರಂದು ಪ್ರಾರಂಭವಾಗಿದ್ದು, ಪ್ರತಿ ದಿನ ಒಂದೊಂದು ಜಿಲ್ಲಾ ಕೇಂದ್ರದಲ್ಲಿ ಸಂಚಾರ ಮಾಡಿ ಇದೇ ಸೆ.೨೦ ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಲಿದೆ ಎಂದರು.

    ಅಂದು ಬೆಳಗ್ಗೆ ೧೧ ಗಂಟೆಗೆ ವಿದ್ಯಾರ್ಥಿಗಳೊಂದಿಗೆ ಸ್ವಾಮೀಜಿಗಳ ವಚನ ಸಂವಾದ ನಡೆಯಲಿದ್ದು, ನಂತರ ಮಧ್ಯಾಹ್ನ ಪ್ರಸಾದ ಮುಗಿದ ಬಳಿಕ ೩.೩೦ ಕ್ಕೆ ತಾಲ್ಲೂಕು ಕಚೇರಿ ಆವರಣದಿಂದ ವಿವಿಧ ಜಾನಪದ ಕಲಾ ತಂಡಗಳ ಮೂಲಕ ಎಂ.ಜಿ ರಸ್ತೆ ಮಾರ್ಗವಾಗಿ ಅಭಿಯಾನದ ರಥೋತ್ಸವ ಮೆರವಣಿಗೆ ಕುವೆಂಪು ಕಲಾಮಂದಿರ ತಲುಪಲಿದೆ ಎಂದು ಹೇಳಿದರು.

    ಈ ಸಮಾರಂಭದಲ್ಲಿ ನಾಡಿನಾದ್ಯಂತ ಮಠಾಧಿಪತಿಗಳು ಭಾಗವಹಿಸಲಿದ್ದಾರೆ. ಸಾಣೇಹಳ್ಳಿ ಶಿವಸಂಚಾರ ಕಲಾವಿದರಿಂದ ಬಹಿರಂಗ ಅಧಿವೇಶನ ಮುಗಿದ ಬಳಿಕ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದೆ. ಈ ನಾಟಕದಲ್ಲಿ ಬಸವಣ್ಣನವರ ಬದುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುವುದನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

    ಸ್ವಾಗತ ಸಮಿತಿ ಪದಾಧಿಕಾರಿಗಳೊಂದಿಗ ಶ್ರೀ ಯಡೆಯೂರು ತೋಂಟದಾರ್ಯ ಡಾ. ಶ್ರೀ ತೋಂಟದ ಸೊದ್ಧರಾಮ ಮಹಾಸ್ವಾಮಿ ಬಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ. ಶ್ರೀ ಬಸವಲಿಂಗ ಪಟ್ಟದ್ದೇವರು, ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರುಗಳಾದ ಡಾ. ಶ್ರೀ ಪಂಡಿತಾರಾಧ್ಯಶಿವಾಚಾರ್ಯ ಮಹಾ ಸ್ವಾಮಿಗಳು, ಕಡೂರಿನ ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾ ಸ್ವಾಮೀಜಿ, ಪುಷ್ವಗಿರಿ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮಿ, ಮಠದ ಶ್ರೀಗಳ ಸಹಿತ ಒಟ್ಟಾಗಿ ಸೇರಿ ಈ ಕಾರ್ಯಕ್ರಮ ರೂಪಿಸುತ್ತಿರುವುದು ವಿಶೇಷವಾಗಿದೆ ಎಂದರು.

    ಇಳಕಲ್‌ನಿಂದ ೧೫೦೦ ಸೀರೆಗಳನ್ನು ತರಿಸಲಾಗಿದ್ದು, ತಾಯಂದಿರು ಖರೀದಿಸಿದ್ದಾರೆ. ಅಂದು ಈ ಸೀರೆಗಳನ್ನು ಧರಿಸಿ ಬಂದು ಮೆರೆವಣಿಗೆಯಲ್ಲಿ ಭಾಗವಹಿಸುತ್ತಿರುವುದು ಅಭಿಯಾನಕ್ಕೆ ಕಳೆ ತರಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಪುರುಷರು ಬಿಳಿ ಬಟ್ಟೆ ಧರಿಸಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಜಿಲ್ಲೆಯ ಇತಿಹಾಸದಲ್ಲೇ ಐತಿಹಾಸಿಕ ಕಾರ್ಯಕ್ರಮದ ಮೈಲಿಗಲ್ಲಾಗಲಿದೆ ಎಂದು ಭಾವಿಸಿದ ಅವರು, ಈ ಎಲ್ಲಾ ಕಾರ್ಯಕ್ರಮಗಳಿಗೆ ಸದ್ಭಕ್ತರು, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.

    ಇದಕ್ಕೂ ಮುನ್ನ ಬಸವತತ್ವ ಪೀಠದ ಪೂಜೆ ಪ್ರಸಾದ ಮಾಡಿದ ಎಲ್ಲಾ ಶ್ರೀಗಳನ್ನು ಬೈಕ್ ರ್‍ಯಾಲಿಯ ಮೂಲಕ ತಾಲ್ಲೂಕು ಕಚೇರಿ ಆವರಣಕ್ಕೆ ಕರೆತರಲಾಗುವುದು ಎಂದು ಹೇಳಿದರು.

    Basava Culture Abhiyan Chariot to reach the city today

  • ಅನುಸೂಚಿತ ಜಾತಿ-ಪಂಗಡಗಳ 108 ದೌರ್ಜನ್ಯ ಪ್ರಕರಣಗಳಿಗೆ 1.44 ಕೋಟಿ ರೂ. ಪರಿಹಾರ

    ಅನುಸೂಚಿತ ಜಾತಿ-ಪಂಗಡಗಳ 108 ದೌರ್ಜನ್ಯ ಪ್ರಕರಣಗಳಿಗೆ 1.44 ಕೋಟಿ ರೂ. ಪರಿಹಾರ

    ಚಿಕ್ಕಮಗಳೂರು: ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ದೌರ್ಜನ್ಯದ ೧೦೮ ಪ್ರಕರಣಗಳಿಗೆ ಸಂಬಂಧಿಸಿದಂತೆ ೨೦೨೨ ರಿಂದ ೨೦೨೫ರ ಸೆಪ್ಟಂಬರ್ ೧೭ ರವರೆಗೆ ೧ ಕೋಟಿ ೪೪ ಲಕ್ಷ ೬೩ ಸಾವಿರ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹೇಳಿದರು.

    ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪರಿಶಿಷ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಿಲ್ಲಾ ಮಟ್ಟದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಜಿಲ್ಲೆಯಲ್ಲಿ ಪರಿಶಿ? ಜಾತಿ ಮತ್ತು ಪರಿಶಿ? ವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದಲ್ಲಿನ ಸಮಸ್ಯೆಗಳನ್ನು ತಾಲ್ಲೂಕು ಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ತಾಲೂಕುಗಳಲ್ಲಿ ಸಭೆ ನಡೆಸುವುದರಿಂದ ಪ್ರಕರಣಗಳ ಮೇಲಿನ ನಿಗಾಕ್ಕೆ ಹಾಗೂ ನಿಯತ್ರಣಕ್ಕೆ ತುಂಬಾ ಅನುಕೂಲವಾಗಲಿದೆ.

    ಪರಿಶಿಷ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ದೌರ್ಜನ್ಯ ಎಸಗಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿರುವ ಪ್ರದೇಶಗಳಿಗೆ ಪೊಲೀಸ್ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಜನರಲ್ಲಿ ಜಾಗೃತಿ ಹಾಗೂ ಕಾನೂನಿನ ಅರಿವು ಮೂಡಿಸಬೇಕು ಎಂದು ಹೇಳಿದರು.

    ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮಾತನಾಡಿ, ದೌರ್ಜನ್ಯ ಪ್ರಕರಣಕ್ಕೆ ಒಳಗದವರು ಬಡವರು, ಕೂಲಿ ಕಾರ್ಮಿಕರೂ ಆಗಿರುತ್ತಾರೆ. ಪ್ರಕರಣ ದಾಖಲಿಸಲು ಬರುವಾಗ ಗುರುತಿನ ಚೀಟಿ, ಆಧಾರ್ ಕಾರ್ಡ್‌ಗಳನ್ನು ತರುವಂತೆ ತಿಳಿಸಿದ ಅವರು, ಬಂದು ಹೋಗುವ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆ ಭರಿಸಲಿದೆ ಎಂದು ತಿಳಿಸಿದರು.

    ಮುಖಂಡರುಗಳು ತಮ್ಮ ವ್ಯಾಪ್ತಿಗೆ ಬರುವ ಸಮುದಾಯದಲ್ಲಿ ಸಭೆಯನ್ನು ಕರೆದು ಅವರಿಗೆ ಕಾನೂನಿನ ಅರಿವು ಮೂಡಿಸುವಂತೆ ಸೂಚಿಸಿದರು.
    ಇತ್ತೀಚಿನ ದಿನದಲ್ಲಿ ಪೋಕ್ಸೊ ಪ್ರಕರಣ ಹೆಚ್ಚಾಗಿದ್ದು, ೧೫, ೧೬, ೧೭, ೧೮ ವರ್ಷದ ಮಕ್ಕಳು ಹೆಚ್ಚಾಗಿ ಈ ಪ್ರಕರಣಕ್ಕೆ ತುತ್ತಾಗುತ್ತಿದ್ದಾರೆ ಎಂದ ಅವರು, ಕೆಲವೊಂದು ಸಮುದಾಯದಲ್ಲಿ ಈ ಪ್ರಕರಣಗಳು ತಲೆಯೆತ್ತುತ್ತಿವೆ. ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನು ಶಾಲೆಗೆ ಹೋಗಲು ಪ್ರೇರೇಪಿಸಬೇಕು. ಸ್ಥಳೀಯ ಮುಖಂಡರು ಇಂತಹ ಮಕ್ಕಳನ್ನು ಗುರುತಿಸಿ ಅಧಿಕಾರಿಗಳ ಗಮನಕ್ಕೆ ತಂದರೆ ಅಂತವರನ್ನು ಪುನಃ ಶಾಲೆಗೆ ಸೇರಿಸಿ ವಿದ್ಯಾಭ್ಯಾಸ ಮುಂದುವರಿಸಲು ಕ್ರಮ ವಹಿಸುವರು ಎಂದು ಹೇಳಿದರು.

    ಸಭೆಯಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಶಂಕರ ಕೊರವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ಮಾಲತಿ, ಸರ್ಕಾರಿ ಅಭಿಯೋಜಕರಾದ ಲೋಹಿತಾಚಾರ್ಯ, ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    ೧೯ಸಿಕೆಎಂ೧: ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಪರಿಶಿಷ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಿಲ್ಲಾ ಮಟ್ಟದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಜಿ.ಪಂ.ಉಪ ಕಾರ್ಯದರ್ಶಿ ಶಂಕರ ಕೊರವರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಬಿ.ಮಾಲತಿ, ಸರ್ಕಾರಿ ಅಭಿಯೋಜಕರಾದ ಲೋಹಿತಾಚಾರ್ಯ, ತಾಲ್ಲೂಕುಗಳ ತಹಸೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    Rs 1.44 crore compensation for 108 cases of atrocities against Scheduled Castes and Scheduled Tribes

  • ಸೆ.20 ಕ್ಕೆ ನಗರಕ್ಕೆ ಬಸವ ಸಂಸ್ಕೃತಿ ಅಭಿಯಾನದ ರಥೋತ್ಸವ

    ಸೆ.20 ಕ್ಕೆ ನಗರಕ್ಕೆ ಬಸವ ಸಂಸ್ಕೃತಿ ಅಭಿಯಾನದ ರಥೋತ್ಸವ

    ಚಿಕ್ಕಮಗಳೂರು: ಭಕ್ತಿ, ಧಾರ್ಮಿಕತೆ, ವೈಚಾರಿಕತೆಯ ಮೌಲ್ಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಸಲುವಾಗಿ ಸೆ.೧ ರಂದು ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಿಂದ ಆರಂಭಗೊಂಡಿರುವ ಬಸವ ಸಂಸ್ಕೃತಿ ಅಭಿಯಾನ ರಥೋತ್ಸವ ಸೆ.೨೦ ರಂದು ಶನಿವಾರ ಬೆಳಗ್ಗೆ ೧೧ ಗಂಟೆಗೆ ಮಂಗಳೂರಿನಿಂದ ಚಿಕ್ಕಮಗಳೂರು ನಗರಕ್ಕೆ ಆಗಮಿಸುತ್ತಿದೆ ಎಂದು ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎನ್ ಚಿದಾನಂದ್ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಪರಸ್ಪರ ಭ್ರಾತೃತ್ವದ ಬೆಸುಗೆ ಹಾಕಿ ಸಾಮರಸ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿದ್ದು, ನಾಗರೀಕ ಸೌಲಭ್ಯಗಳು ಹೆಚ್ಚಾಗಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ವೈಚಾರಿಕತೆ ಮೂಲಕ ಜನಮಾನಸದಲ್ಲಿ ಶರಣರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಬಸವ ಸಂಸ್ಕೃತಿ ಅಭಿಯಾನ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಚರಿಸಿ ಅ.೫ ರಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ. ಇದರ ಅಂಗವಾಗಿ ಅ.೨೦ ರಂದು ಸಂಜೆ ೪ ಗಂಟೆಗೆ ಬಸವಣ್ಣನವರ ಭಾವಚಿತ್ರದ ರಥೋತ್ಸವವು ತಾಲ್ಲೂಕು ಕಚೇರಿಯಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಹೊರಟು ಎಂಜಿ ರಸ್ತೆ ಮೂಲಕ ಕುವೆಂಪು ಕಲಾಮಂದಿರ ತಲುಪಲಿದೆ ಎಂದರು.

    ಅಂದು ಬೆಳಗ್ಗೆ ೧೧ ಗಂಟೆಗೆ ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ, ೬ ಗಂಟೆಗೆ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ, ಸಾರ್ವಜನಿಕ ಸಮಾರಂಭ, ವಚನಗಾಯನ,, ಉಪನ್ಯಾಸ ಮತ್ತು ಆಶೀರ್ವಚನ ಮತ್ತು ರಾತ್ರಿ ೮.೩೦ ಕ್ಕೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಸಾರ್ವಜನಿಕರಲ್ಲಿ ಆಧ್ಯಾತ್ಮದ ಬಗ್ಗೆ ಅರಿವು ಮೂಡಿಸುವುದು, ವ್ಯಸನಮುಕ್ತ ಸಮಾಜ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು, ಸಮ ಸಮಾಜ ನಿರ್ಮಾಣ, ಸದೃಢ ಸಮಾಜ ಕಟ್ಟುವುದು, ಮಹಿಳೆಯರ ಘನತೆ ಕಾಪಾಡುವುದು. ವ್ಯಕ್ತಿತ್ವ ವಿಕಸನ ಮುಂತಾದವು ಬಸವ ಸಂಸ್ಕೃತಿ ಅಭಿಯಾನದ ಆಶಯಗಳಾಗಿದೆ ಎಂದರು.

    ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳು ವಹಿಸಲಿದ್ದು, ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿ, ಯಡಿಯೂರು ತೋಂಟದಾರಿಯ ಮಠ ಗದಗ, ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಸಾಣೇಹಳ್ಳಿ ಶಾಖಾ ಮಠದ ತರಳಬಾಳು ಜಗದ್ಗುರು, ಬಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟಾಧ್ಯಕ್ಷರು, ಯಳನಾಡು ಸ್ವಾಮಿಗಳು, ಸಿಂದಿಗೆರೆ ಕರಡಿಗವಿ ಮಠದ ಶ್ರೀಗಳು ಭಾಗವಹಿಸಲಿದ್ದಾರೆಂದು ಹೇಳಿದರು.

    ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಸ್ತ ಶರಣ ಬಂಧುಗಳು, ನಾಗರಿಕರು, ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಉಪಾಧ್ಯಕ್ಷ ಮಹಡಿ ಮನೆ ಸತೀಶ್, ಸದಸ್ಯರುಗಳಾದ ನಂಜೇಶ್ ಬೆಣ್ಣೂರು, ಬಿ. ತಿಪ್ಪೇರುದ್ರಪ್ಪ, ಬಿ.ಜಿ ಸೋಮಶೇಖರ್, ಸದಾಶಿವಪ್ಪ, ರಮೇಶ್, ಜಗದೀಶ್ ಬಾನು ಉಪಸ್ಥಿತರಿ

    Basava Culture Abhiyan Chariot Festival to be held in the city on September 20