Category: ಚಿಕ್ಕಮಗಳೂರು

  • ಒಕ್ಕಲಿಗ ಸಮಾಜದ ಅಭಿವೃದ್ಧಿಗೆ ಶ್ರಮಿಸಲು ನಿರ್ಧಾರ

    ಒಕ್ಕಲಿಗ ಸಮಾಜದ ಅಭಿವೃದ್ಧಿಗೆ ಶ್ರಮಿಸಲು ನಿರ್ಧಾರ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದ್ದಾರೆ.

    ಅವರು ಒಕ್ಕಲಿಗರ ಸಮುದಾಯ ಭವನದಲ್ಲಿ ೨೦೨೫-೨೬ನೇ ಸಾಲಿನ ಜಿಲ್ಲಾ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಯ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ಜನಾಂಗದ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಜೆವಿಎಸ್ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂಘದ ಆಯ-ವ್ಯತದ ಬಗ್ಗೆ ಚರ್ಚಿಸಿ ಸರ್ವ ಸದಸ್ಯರ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.

    ಸಂಘದ ನೂತನ ಕಟ್ಟಡ ಸಾರ್ವಜನಿಕ ಸಮರ್ಪಣೆಯಾಗಿ ಯಶಸ್ವಿಯಾದ ಬೆನ್ನಲ್ಲೇ ಸುಮಾರು ೬ ಕೋಟಿ ರೂ ವೆಚ್ಚದಲ್ಲಿ ಜ್ಯೋತಿನಗರದಲ್ಲಿರುವ ನಿವೇಶನದಲ್ಲಿ ಬೆಳ್ಳಿಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದರಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಮುಂದಾಗಿರುವುದು ಸಂತಸ ತಂದಿದೆ ಎಂದರು.

    ಮುಂದಿನ ದಿನಗಳಲ್ಲಿ ಯುವ ಒಕ್ಕಲಿಗರ ಸಂಘ ಸ್ಥಾಪನೆ ಮಾಡಬೇಕೆಂಬ ಬಗ್ಗೆ ಈಗಾಗಲೇ ಬೇಡಿಕೆ ಬಂದಿದ್ದು, ಸಂಘದ ಎಲ್ಲರೊಂದಿಗೆ ಚರ್ಚಿಸಿ ನೂತನ ಯುವಸಂಘವನ್ನು ಸ್ಥಾಪನೆ ಮಾಡಲು ನಿರ್ಧರಿಸುವುದಾಗಿ ಭರವಸೆ ನೀಡಿದರು. ಜನಾಂಗ ಕಾಫಿ ಬೆಳೆಯನ್ನು ಅವಲಂಬಿಸಿದ್ದು, ಜನಾಂಗದ ಯುವ-ಯುವತಿಯರಿಗೆ ಪ್ರಯೋಜನವಾಗುವಂತೆ ಕಾಫಿಯನ್ನು ತಾವೇ ಮಾರುಕಟ್ಟೆ ಮಾಡುವ ಮೂಲಕ ಉದ್ಯಮಿಗಳಾಗಿ ಬೆಳೆಯಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು.

    ಕಳೆದ ೬ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಕಟ್ಟಡಕ್ಕೆ ಆರ್‌ಸಿಸಿಯನ್ನು ಹಾಕಲಾಗಿದ್ದು, ಸಧ್ಯದಲ್ಲೇ ಸಾರ್ವಜನಿಕವಾಗಿ ಸಮರ್ಪಣೆಯಾಗಲಿದೆ. ಈ ಕಾರ್ಯಕ್ಕೆ ಸಮಾಜ ಬಾಂಧವರು ಧನಸಹಾಯ, ವಂತಿಕೆ ನೀಡಬೇಕೆಂದು ಮನವಿ ಮಾಡಿ ಸರ್ವಜನಾಂಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಜೆವಿಎಸ್ ಶಾಲೆಯಲ್ಲಿ ಕೃಷಿಕ್ ಸರ್ವೋದಯ ಫೌಂಡೇಶನ್ ಸ್ಥಾಪಿಸಲಾಗಿದ್ದು, ಬ್ಯಾಂಕಿಂಗ್, ಐಎಎಸ್, ಐಪಿಎಸ್, ಐಎಫ್‌ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಎಂ.ಎನ್ ಪ್ರದೀಪ್, ನಿಕಟ ಪೂರ್ವ ಕಾರ್ಯದರ್ಶಿ ಎಂ.ಸಿ ಪ್ರಕಾಶ್, ನಿಕಟ ಪೂರ್ವ ಅಧ್ಯಕ್ಷ ಕೆ.ರಾಜೇಗೌಡ, ನಿರ್ದೇಶಕ ಬಿ.ಸಿ ಲೋಕಪ್ಪಗೌಡ, ಮುಖಂಡರಾದ ಕೆ.ಬಿ ಅನಂತೇಗೌಡ, ಕೆ.ಪಿ ರಾಜೇಂದ್ರ, ಕೆ.ಯು ರತೀಶ್‌ಕುಮಾರ್, ಹರಿಣಾಕ್ಷಿ ನಾಗರಾಜ್, ಎಂ.ಬಿ ಸತೀಶ್, ಕೆ.ಯು ಮನುಕುಮಾರ್, ಎಂ.ಅಶೋಕ್, ಕೆ.ಪಿ ಪೃಥ್ವಿರಾಜ್, ಹೆಚ್.ಕೆ. ನವೀನ್, ಉಮಾಶಂಕರ್, ಐ.ಕೆ ಶ್ರೀನಿವಾಸ್, ಬಿ.ರಾಜು, ಸಂಜಿತ್, ಹೆಚ್.ಎಸ್. ಮೋಹನ್, ಸಂತೋಷ್, ಸಿ.ಟಿ.ರೇವತಿ, ಭವ್ಯ ನಟೇಶ್, ಸವಿತರಮೇಶ್, ಪವಿತ್ರ, ವೈಯ್ಸಳ, ಮಂಜುಚೇತನ್, ಪೂರ್ಣೇಶ್, ರೀನಾಸುಜೇಂದ್ರ, ಹಳಸೆ ಶಿವಣ್ಣ, ಬಿ.ಎಲ್ ಸಂದೀಪ್, ಡಾ. ಡಿ.ಎಲ್ ವಿಜಯ್‌ಕುಮಾರ್, ಎಂ.ಡಿ. ಆನಂದ್, ಹೆಚ್.ಡಿ. ಕೃಷ್ಣೇಗೌಡ, ಮೋಹಿನಿಸಿದ್ದೇಗೌಡ ಉಪಸ್ಥಿತರಿದ್ದರು.ಮೊದಲಿಗೆ ಸಂಘದ ಉಪಾಧ್ಯಕ್ಷ ಟಿ.ಡಿ ಮಲ್ಲೇಶ್ ಸ್ವಾಗತಿಸಿದರು.

    Vokkaliga decides to work for the development of the society

  • ಸೇವಾ ಪಾಕ್ಷಿಕ ಅಭಿಯಾನ : ಯುವಮೋರ್ಚಾದಿಂದ ಸಸಿನೆಟ್ಟು ಆಚರಣೆ

    ಸೇವಾ ಪಾಕ್ಷಿಕ ಅಭಿಯಾನ : ಯುವಮೋರ್ಚಾದಿಂದ ಸಸಿನೆಟ್ಟು ಆಚರಣೆ

    ಚಿಕ್ಕಮಗಳೂರು:  ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನಾಚರಣೆಯ ಸೇವಾ ಪಾಕ್ಷಿಕ ಅಂಗವಾಗಿ ‘ತಾಯಿ ಹೆಸರಿನಲ್ಲಿ ಒಂದು ಸಸಿ’ ನೆಡುವ ಅಭಿಯಾನದ ಪ್ರಯುಕ್ತ ಭಾನುವಾರ ವಿಜಯಪುರ ಬಡಾವಣೆಯಲ್ಲಿ ಯುವಮೋರ್ಚಾದ ಮುಖಂಡರುಗಳು ಸಸಿನೆಟ್ಟು ಅಭಿಯಾನ ಆಚರಿಸಿ ದರು.

    ಈ ವೇಳೆ ಮಾತನಾಡಿದ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ತಾಯಿ ಹೆಸರಿನಲ್ಲಿ ಒಂದು ಮರ ಅಭಿಯಾನ’ ಎಂಬುದು ಪರಿಸರ ಸಂರಕ್ಷಣೆ ಮತ್ತು ಗಿಡ ನೆಡುವುದರ ಬಗ್ಗೆ ಜಾಗೃತಿ ಮೂಡಿಸುವ ಒಂದು ವಿಶಿ? ರಾ?ವ್ಯಾಪಿ ಅಭಿಯಾನವಾಗಿದೆ ಎಂದರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ಪ್ರಕೃತಿ ಮಾತೆ ಮತ್ತು ನಮ್ಮ ತಾಯಂದಿರು ಮಾನವ ಜೀವನವನ್ನು ಪೋಷಿಸುವಲ್ಲಿ ಸಾಮ್ಯತೆಯನ್ನು ಹೊಂದಿರುವುದನ್ನು ತಿಳಿಸಿ, ತಾಯಿಯ ಮೇಲಿನ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಒಂದು ಮರವನ್ನು ನೆಡಲು ಪ್ರಪಂಚದಾ ದ್ಯಂತದ ಜನರಿಗೆ ಕರೆ ನೀಡಿದ್ದಾರೆ ಎಂದರು.

    ಪ್ರತಿಯೊಬ್ಬರೂ ತಮ್ಮ ತಾಯಿಯ ನೆನಪಿನಲ್ಲಿ ಒಂದು ಸಸಿ ನೆಟ್ಟು ಅದನ್ನು ಪೋಷಿಸುವುದರ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕೆಂಬ ಸಂದೇಶವನ್ನು ಈ ಅಭಿಯಾನ ಉದ್ದೇಶವಾಗಿದ್ದು ಕಾಂಕ್ರೀಟ್ ಕಾಡು ಹೆಚ್ಚುತ್ತಿರುವ ದಿನಮಾನದಲ್ಲಿ ಪರಿಸರವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಕಾಪಾಡಿಕೊಂಡು ಹೋಗುವ ಮಹತ್ವವನ್ನು ನಮ್ಮದಾಗಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತರಾಮಭರಣ್ಯ, ಮುಖಂಡರು ಗಳಾದ ಪುನೀತ್, ಗೌತಮ್, ಶ್ಯಾಮ್ ವಿ.ಗೌಡ, ಕಿಶೋರ್, ಪ್ರಶಾಂತ್, ಗೌತಮ್, ನೂತನ್ ಇದ್ದರು.

    Service Fortnightly Campaign: Yuva Morcha celebrates Sasinettu

  • ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಮನ್ ಕೀ ಬಾತ್ ವೀಕ್ಷಿಸಿ ಮುಖಂಡರು

    ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಮನ್ ಕೀ ಬಾತ್ ವೀಕ್ಷಿಸಿ ಮುಖಂಡರು

    ಚಿಕ್ಕಮಗಳೂರು:  ತಾಲ್ಲೂಕಿನ ಬಾಳೆಹಳ್ಳಿ ಗ್ರಾಮದ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ನಾಗರಾಜ್ ಸ್ವಗೃಹದಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ ೧೨೬ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಕಾರ್ಯಕರ್ತರು ಆಲಿಸಿದರು.

    ಮನ್ ಕೀ ಭಾತ್‌ನಲ್ಲಿ ಪ್ರಧಾನಿಗಳು ನಾಡಿನ ಶ್ರೇಷ್ಟ ಸಾಹಿತಿ ಎಸ್.ಎಲ್.ಭೈರಪ್ಪನವರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿ ಕನ್ನಡದಲ್ಲಿ ಪ್ರಖ್ಯಾತ ಕಾದಂಬರಿ, ಪುಸ್ತಕಗಳನ್ನು ರಚಿಸಿದ್ದಾರೆ. ಯುವಕರಿಗೆ ಸ್ಪೂರ್ತಿ ನೀಡುವಂಥ ಪುಸ್ತಕಗಳನ್ನು ಯುವಸಮೂಹ ಓದುವ ಹವ್ಯಾಸವನ್ನು ಬೆಳೆಸಿಕೊಂಡು ಜೀವನದ ದಾರಿ ರೂ ಪಿಸಿಕೊಳ್ಳಬೇಕು ಎಂದರು.

    ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಸ್ವದೇಶಿ ವಸ್ತುಗಳ ತಯಾರಿಕೆಯಲ್ಲಿ ಹಲವಾರು ಮುಂದಾಗಿದ್ದಾರೆ. ಕೆಲ ವರು ಸ್ವದೇಶಿ ಉತ್ಪನ್ನಗಳ ಹೆಚ್ಚು ಪಸರಿಸಲು ಸ್ವಂತ ಕಂಪನಿಗಳನ್ನು ನಿರ್ಮಿಸಿಕೊಂಡು ನೂರಾರು ಮಹಿಳೆ ಯರಿಗೆ ಉದ್ಯೋಗ ಕಲ್ಪಿಸಿಕೊಟ್ಟಿರುವುದು ನಮ್ಮ ಮುಂದಿದೆ ಎಂದು ತಿಳಿಸಿದರು.

    ರಾಷ್ಟ್ರೀಯ ಸ್ವಯಂ ಸೇವಕ ಸ್ಥಾಪನೆಗೊಂಡು ಈ ಸಾಲಿಗೆ ಶತಬ್ದಿ ಪೂರೈಸುತ್ತಿದೆ. ಅಂದು ಕೇಶವಜೀ ಯವರು ಬ್ರಿಟಿಷರ ಕಪಿಮುಷ್ಠಿಯಿಂದ ಸಮಸ್ತ ಜನಾಂಗವನ್ನು ಭಾರತೀಯರೆನ್ನಲು ಸಂಘ ಸ್ಥಾಪಿಸಿ ಮುಂ ಂಚೂಣಿಗೆ ತಂದವರು. ಅನೇಕ ಏರುಪೇರು ನಡುವೆ ಬೃಹದಾಕಾರವಾಗಿ ಬೆಳೆದು ಶತಬ್ದಿ ಆಚರಿಸುತ್ತಿರುವು ದು ಹೆಮ್ಮೆಯ ಸಂಗತಿ ಎಂದರು.

    ರಾಷ್ಟ್ರ ಆತ್ಮನಿರ್ಬಾರವಾಗಲು ದೇಶದ ಜನತೆಗೆ ಒಟ್ಟಾಗಿ ಸ್ವದೇಶಿ ಉತ್ಪನ್ನಗಳ ಬಳಸಲು ಮುಂದಾಗಬೇ ಕು, ಆ ನಿಟ್ಟಿನಲ್ಲಿ ದೈನಂದಿನ ದಿನಚರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾಗಬೇಕು. ಇತ್ತೀಚೆಗೆ ವಿದೇಶಿಯಗರಿಗೂ ಭಾರತೀಯ ವಸ್ತ್ರಗಳು ಗಮನ ಸೆಳೆಯುತ್ತಿರುವುದು ದೇಶಕ್ಕೆ ಖುಷಿಯ ವಿಚಾ ರವಾಗಿದೆ ಎಂದು ಹೇಳಿದರು.

    ಮುಂಬರುವ ದೀಪಾವಳಿ ಹಬ್ಬವು ಉತ್ಸವ ಸಂಕೇತವಾಗಿದೆ. ಶ್ರೀ ದುರ್ಗಾದೇವಿಯ ಆಚರಣೆಗಳು ಇ ಡೀ ರಾಷ್ಟ್ರಾದ್ಯಂತ ದೊಡ್ಡ ಹಬ್ಬವಾಗಿದೆ ಹಾಗೂ ಗಾಂಧಿ ಜಯಂತಿಯಂದು ಸರ್ವರು ಖಾದಿ ವಸ್ತ್ರ, ಹ್ಯಾಂಡಿ ಕ್ರಾಫ್ ವಸ್ತಗಳನ್ನು ಅಂದು ಖರೀದಿಸುವ ಮೂಲಕ ಸ್ವದೇಶಿಗಳ ವಸ್ತುಗಳ ಖರೀದಿಗೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತರಾಮಭರಣ್ಯ , ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ನಾಗರಾಜ್, ಮುಖಂಡರುಗಳಾದ ಹೆಚ್.ಕೆ.ಕೇಶವ ಮೂರ್ತಿ, ಪ್ರದೀಪ್, ನವೀನ್, ಬ್ಯಾಟರಿ ಮಂಜುನಾಥ್, ಅವಿನಾಶ್ ಮತ್ತಿತರರು ಉಪಸ್ಥಿತರಿದ್ದರು.

    Leaders watch Mann Ki Baat at BJP worker’s house

     

  • ಹೃದಯಘಾತ ತಡೆಗೆ ಜನಜಾಗೃತಿ – ವಿಶ್ವ ಹೃದಯ ದಿನಾಚರಣೆ ಉದ್ದೇಶ

    ಹೃದಯಘಾತ ತಡೆಗೆ ಜನಜಾಗೃತಿ – ವಿಶ್ವ ಹೃದಯ ದಿನಾಚರಣೆ ಉದ್ದೇಶ

    ಚಿಕ್ಕಮಗಳೂರು: ಹೃದಯಾಘಾತ ತಡೆಯುವ ಜೊತೆಗೆ ಪ್ರತಿ ನಾಡಿ ಮಿಡಿತವು ಕೆಲಸ ಮಾಡಬೇಕೆಂಬುದು ಹಾಗೂ ಜನಜಾಗೃತಿ ಮೂಡಿಸುವುದೇ ವಿಶ್ವ ಹೃದಯ ದಿನಾಚಾರಣೆಯ ಉದ್ದೇಶ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

    ಅವರು ಇಂದು ನಗರದ ಕೆ.ಆರ್.ಎಸ್ ಆಸ್ಪತ್ರೆಯಲ್ಲಿ ಐಸಿರಿ ಫೌಂಡೇಶನ್, ಕೆ.ಆರ್.ಎಸ್ ಆಸ್ಪತ್ರೆ, ಪ್ರಜಾಪಿತಾ ಬ್ರಹ್ಮಕುಮಾರಿಸ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಹೃದಯ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವೈದ್ಯ ಯೋಗೀಶ್ ರವರು ಒಂದು ಸಾವಿರಕ್ಕೂ ಹೆಚ್ಚು ಕೆ.ಆರ್.ಎಸ್ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆ ನೀಡಿದ್ದಾರೆ, ಹೃದಯಘಾತ ತಡೆಗೆ ಪೂರಕವಾದ ವೈದ್ಯರ ಸಲಹೆಯನ್ನು ಪ್ರತಿಯೊಬ್ಬರು ಚಾಚು ತಪ್ಪದೆ ಪಾಲಿಸಬೇಕೆಂದು ಮನವಿ ಮಾಡಿದರು.

    ದಿನ ನಿತ್ಯ ವಿಶ್ರಾಂತಿ ಇಲ್ಲದೆ ದುಡಿಯುವ ಮಿಡಿಯುವ ಹೃದಯಕ್ಕೆ ನಾವು ಏನು ಕೊಡಬೇಕಾಗಿಲ್ಲ, ಪ್ರತಿ ದಿನ ೧ ಗಂಟೆ ನಡೆಯುವುದು, ಯೋಗ, ಪ್ರಾಣಾಯಾಮ ಮಾಡುವ ಮೂಲಕ ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳ ತಡೆಗೆ ಸಹಕಾರಿಯಾಗಲಿದೆ ಎಂದರು.

    ಮಾದಕ ವ್ಯಸನಿಗಳು ಇದರಿಂದ ಮುಕ್ತವಾಗಬೇಕು ಜೊತೆಗೆ ವೈದ್ಯರ ಸಲಹೆಯನ್ನು ಪಡೆದು ಉತ್ತಮ ಆರೋಗ್ಯಕ್ಕೆ ಪೂರಕವಾದ ನೈಸರ್ಗಿಕ ಆಹಾರ ಮುಖ್ಯವಾಗಿ ಪಡೆಯಬೇಕು, ಈಗ ಕಲುಷಿತ ಪದಾರ್ಥಗಳ ಆಹಾರ ಸೇವನೆಯಿಂದಾಗಿ ರೋಗರುಜಿನಗಳಿಗೆ ಕಾರಣವಾಗುತ್ತಿದೆ ಎಂದು ವಿಷಾಧಿಸಿದರು.

    ಹೃದಯದ ಆರೋಗ್ಯದ ಜೊತೆಗೆ ದೇಹದ ಎಲ್ಲಾ ಅಂಗಾಂಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾದರೆ ವೈದ್ಯರ ಸಲಹೆಯನ್ನು ಪಡೆಯಬೇಕು, ಇದಕ್ಕೆ ಪೂರಕವಾಗಿ ವ್ಯಾಯಾಮ ಮಾಡಿದಾಗ, ಬೊಜ್ಜು, ಮದುಮೇಹ ಕಡಿಮೆಯಾಗಿ ಜೀವನ ಶೈಲಯ ಜಡತ್ವ ಹೋಗುತ್ತದೆ ಎಂದರು.

    ಆರೋಗ್ಯ ಪೂರ್ಣ ಸದೃಢ ದೇಹ ಹೊಂದಿದಾಗ ಮಾತ್ರ ಉತ್ತಮವಾಗಿ ಜೀವನ ನಡೆಸಲು ಸಾದ್ಯ ಹಣ ತಿನ್ನಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಉತ್ತಮವಾದ ಆಹಾರ ಪದ್ಧತಿ ಬಹಳ ಮುಖ್ಯ ಎಂದು ಹೇಳಿದರು.

    ಪ್ರಾಸ್ತಾವಿಕವಾಗಿ ಹೃದಯ ತಜ್ಞ ಡಾ. ಶ್ರೀಧರ್ ಮಾತನಾಡಿ ಹೃದಯ ಸಂಬಂದಿ ಕಾಯಿಲೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಹೃದಯಘಾತ ತಡೆಯುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಹೃದಯ ದಿನದ ಉದ್ದೇಶ ಎಂದರು.

    ಚಿಕ್ಕ ವಯಸ್ಸಿನಲ್ಲಿಯೇ ಇಂದು ಹೃದಯಘಾತದಿಂದ ಸಾವುಗಳಾಗುತ್ತಿದೆ ಇದರಿಂದಾಗಿ ಆ ಕುಟುಂಬದ ಇಡೀ ಜೀವನಪರ್ಯಂತ ತೊಂದರೆಗೊಳಗಾಗುತ್ತಿದೆ ಆದ್ದರಿಂದ ದೇಹ ದಂಡಿಸುವ ಯೋಗ, ನಡಿಗೆಯಲ್ಲಿ ತೊಡಗಬೇಕು, ಮದ್ಯ, ಬೀಡಿ-ಸಿಗರೇಟ್ ಮುಂತಾದವುಗಳಿಂದ ವ್ಯಸನ ಮುಕ್ತವಾದಾಗ ಆರೋಗ್ಯಪೂರ್ಣ ಸಮಾಜಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

    ಮುಂದಿನ ೧೦ ವರ್ಷಗಳಲ್ಲಿ ಈ ರೀತಿಯ ಎಲ್ಲಾ ವ್ಯಸನಗಳಿಂದ ಮುಕ್ತ ಹಾಗೂ ಒತ್ತಡ ಕೊನೆಯಾದಾಗ ಮಾತ್ರ ರೋಗರಹಿತ ದೇಹ ಹೊಂದಲು ಸಾದ್ಯ ಎಂದ ಅವರು ರೋಗಗಳ ನಿಯಂತ್ರಣಕ್ಕೆ ಕನಿಷ್ಠ ಅರ್ಧ ಗಂಟೆಯಾದರು ವ್ಯಾಯಾಮ, ನಡಿಗೆ ಬಹಳ ಮುಖ್ಯ ಎಂದು ತಿಳಿಸಿದರು.

    ರೋಗಗಳು ಕಡಿಮೆಯಾಗಬೇಕಾದರೆ ಪ್ರತಿಯೊಬ್ಬರು ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಾಗ ಹೃದಯಘಾತದ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಹುದು ಎಂದು ಸಲಹೆ ನೀಡಿದರು.

    ವೇದಿಕೆಯಲ್ಲಿ ಐಸಿರಿ ಫೌಂಡೇಶನ್ ಅಧ್ಯಕ್ಷ ರೋಹನ್ ಭಾರ್ಗವಪುರಿ, ಡಿ.ಹೆಚ್.ಓ ಡಾ. ಅಶ್ವಥ್ ಬಾಬು, ಜಿಲ್ಲಾ ಸರ್ಜನ್ ಚಂದ್ರಶೇಖರ್, ಡಾ. ಪ್ಯಾಟ್ರಿಕ್, ಡಾ. ವಿನಯ್, ಡಾ. ಮಲ್ಲಿಕಾರ್ಜುನ್, ಹಾಗೂ ಪ್ರಜಾಪಿತಾ ಬ್ರಹ್ಮಕುಮಾರಿಸ್‌ನ ಸಂಚಾಲಕಿ ಭಾಗ್ಯಕ್ಕ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಡಾ. ಯೋಗೀಶ್ ಸ್ವಾಗತಿಸಿದರು.

    Awareness to prevent heart attacks – the purpose of World Heart Day

  • ನಗರ ರಸ್ತೆಗಳ ಪರಿಶೀಲನೆಗೆ ಮುಖ್ಯಮಂತ್ರಿಗಳ ಸಿಟಿರೌಂಡ್ಸ್

    ನಗರ ರಸ್ತೆಗಳ ಪರಿಶೀಲನೆಗೆ ಮುಖ್ಯಮಂತ್ರಿಗಳ ಸಿಟಿರೌಂಡ್ಸ್

    ಬೆಂಗಳೂರು:  ಮಳೆಗಾಲದಲ್ಲಿ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು, ಇವುಗಳನ್ನು ದುರಸ್ತಿಗೊಳಿಸಿ, ರಸ್ತೆಗಳನ್ನು ಸಂಚಾರ ಯೋಗ್ಯವಾಗಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ಬೆಂಗಳೂರು ನಗರ ರಸ್ತೆಗಳ ಪರಿಸ್ಥಿತಿ ಅರಿಯಲು ಸಿಟಿರೌಂಡ್ಸ್ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

    ನಗರದ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಲಾಗಿದ್ದು, ಈ ಕಾರ್ಯ ಗುಣಮಟ್ಟದಿಂದ ಕೂಡಿರಬೇಕು. ರಸ್ತೆ ದುರಸ್ತಿ ಕಾರ್ಯ ಸರಿಯಿಲ್ಲದ ಕಾರಣ, ಸಂಬಂಧಪಟ್ಟ ಎಕ್ಸಿಕ್ಯೂಟಿವ್ ಇಂಜಿನಿಯರ್ ನ್ನು ಅಮಾನತ್ತುಗೊಳಿಸಲಾಗಿದೆ. ಗುಂಡಿ ಮುಚ್ಚಲು ಕೇವಲ ಜಲ್ಲಿ ಹಾಕಿ ಟಾರ್ ಹಾಕದೇ ಹಾಗೇ ಬಿಟ್ಟಿದ್ದ ಕಾರಣ, ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಹೆಣ್ಣೂರು ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ನಿರ್ವಹಣೆಯನ್ನು ಸಂಬಂಧಪಟ್ಟ ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ. 5 ಕಿ.ಮೀ. ರಸ್ತೆ ಕಾಮಗಾರಿಯನ್ನು ಕಿ.ಮೀ. ಒಂದಕ್ಕೆ 13 ಕೋಟಿಗಳನ್ನು ಸರ್ಕಾರ ವ್ಯಯಿಸುತ್ತಿದೆ. ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಒಂದು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ. ರಸ್ತೆಗಳಲ್ಲಿ ಯಾವುದೇ ಗುಂಡಿಗಳಿಲ್ಲದಂತೆ ಮುಚ್ಚಬೇಕೆಂದು ಸೂಚನೆ ನೀಡಲಾಗಿದೆ ಎಂದರು.

    ಬಿಜೆಪಿ ಅವಧಿಯಲ್ಲಿ ರಸ್ತೆ ದುರಸ್ತಿ ನಡೆಯಲಿಲ್ಲ
    ರಸ್ತೆ ಪರಿಶೀಲನೆ ನಡೆಯಲಿದೆಯೆಂಬ ಕಾರಣಕ್ಕೆ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಗುಂಡಿಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ರಸ್ತೆ ಗುಂಡಿಗಳಿರುವುದು ನಿಜ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರಸ್ತೆ ಗುಂಡಿಗಳ ದುರಸ್ತಿ ನಡೆದಿದ್ದರೆ, ರಸ್ತೆಗಳು ಇಂತಹ ಪರಿಸ್ಥಿತಿಗೆ ತಲುಪುತ್ತಿರಲಿಲ್ಲ. ಮಳೆಗಾಲ ಮುಗಿಯುವುದರೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ನ್ಯಾಯಾಲಯದ ನಿರ್ದೇಶನದಂತೆ ಸಮೀಕ್ಷೆ
    ಸಮೀಕ್ಷೆಯಲ್ಲಿ ಯಾರೂ ಭಾಗವಹಿಸಬಾರದೆಂದು ಸಂಸದ ತೇಜಸ್ವಿ ಸೂರ್ಯ ಅವರು ಕರೆನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಮೀಕ್ಷೆಯನ್ನು ತಡೆಯಬೇಕೆಂದು ನ್ಯಾಯಾಲಯಕ್ಕೆ ಹೋಗಲಾಗಿತ್ತು. ನ್ಯಾಯಾಲಯ ನೀಡಿರುವ ನಿರ್ದೇಶನಗಳಂತೆ ಸಮೀಕ್ಷೆಯನ್ನು ನಡೆಸಲಾಗುವುದು. ಈಗಾಗಲೇ ಸುಮಾರು 10 ಲಕ್ಷ ಜನರ ಸಮೀಕ್ಷೆ ಪೂರ್ಣಗೊಂಡಿದೆ ಎಂದರು.

    ತ್ಯಾಜದ ಸಮರ್ಪಕ ನಿರ್ವಹಣೆಗೆ ಸೂಚನೆ
    ತ್ಯಾಜ್ಯ ನಿರ್ವಹಣೆ ಸಮಸ್ಯೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ರಸ್ತೆಗಳ ಕೆಲೆವೆಡೆಗಳಲ್ಲಿ ತ್ಯಾಜ್ಯವನ್ನು ನಿರ್ವಹಿಸದೇ ಹಾಗೇ ಬಿಟ್ಟಿದ್ದು, ತ್ಯಾಜ್ಯವನ್ನು ತ್ವರಿತವಾಗಿ ತೆಗೆಯಬೇಕೆಂದು ಸೂಚನೆ ನೀಡಲಾಗಿದ್ದು,, ಇಲ್ಲವಾದಲ್ಲಿ ಸಂಬಂಧಪಟ್ಟ ಕಮೀಷನರ್ ಹಾಗೂ ಇಂಜಿನಿಯರ್ ಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

    Chief Minister’s City Rounds to inspect city roads

  • ಕರೂರು ಕಾಲ್ತುಳಿತ ದುರಂತ: 36 ಮಂದಿ ಸಾವು

    ಕರೂರು ಕಾಲ್ತುಳಿತ ದುರಂತ: 36 ಮಂದಿ ಸಾವು

    ಕರೂರು: ತಮಿಳುನಾಡಿನ ಕರೂರಿನಲ್ಲಿ ನಟ ಮತ್ತು ಟಿವಿಕೆ (ತಮಿಳಗ ವೆಟ್ರಿ ಕಳಗಂ) ಮುಖ್ಯಸ್ಥ ವಿಜಯ್ ಅವರ ರ‍್ಯಾಲಿಯಲ್ಲಿ ಶನಿವಾರ ಸಂಜೆ ಸಂಭವಿಸಿದ ಕಾಲ್ತುಳಿತದಲ್ಲಿ ಎಂಟು ಮಕ್ಕಳು, 16 ಮಹಿಳೆಯರು ಸೇರಿದಂತೆ ಮೂವತ್ತಾರು ಜನರು ಸಾವನ್ನಪ್ಪಿದ್ದಾರೆ.

    40ಕ್ಕೂ ಹೆಚ್ಚು ಮಂದಿ ಸ್ಥಿತಿ ಚಿಂತಾಜನಕವಾಗಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ದುರಂತ ಕುರಿತು ಕೇಂದ್ರ ಸರ್ಕಾರ ತಮಿಳುನಾಡಿನಿಂದ ವರದಿ ಕೇಳಿದೆ.

    ಈ ಮಧ್ಯೆ ದುರಂತ ಕುರಿತು ಟಿವಿಕೆ ಮುಖ್ಯಸ್ಥ ವಿಜಯ್ ಮೌನ ಮುರಿದಿದ್ದಾರೆ. ಈ ದುರಂತದಿಂದ ಹೃದಯ ಚೂರಾಗಿದೆ. “ಅಸಹನೀಯ, ವಿವರಿಸಲಾಗದ ನೋವು ಮತ್ತು ದುಃಖದಲ್ಲಿರುವುದಾಗಿ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ವಿಜಯ್, ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

    ಕರೂರಿನಲ್ಲಿ ಕಾಲ್ತುಳಿತದ ನಂತರ ಪರಿಸ್ಥಿತಿಯ ಕುರಿತು ಮಾಹಿತಿ ಪಡೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರೊಂದಿಗೆ ಮಾತನಾಡಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲಾ ಸಹಾಯದ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕೇಂದ್ರ ಗೃಹ ಸಚಿವಾಲಯವು ಘಟನೆಯ ಬಗ್ಗೆ ತಮಿಳುನಾಡು ಸರ್ಕಾರದಿಂದ ವರದಿಯನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡು ಸರ್ಕಾರಕ್ಕೆ ಕಳುಹಿಸಿರುವ ಪತ್ರದಲ್ಲಿ, ಕಾಲ್ತುಳಿತಕ್ಕೆ ಕಾರಣವಾದ ಪರಿಸ್ಥಿತಿ ಮತ್ತು ಬಲಿಪಶುಗಳ ರಕ್ಷಣೆ ಮತ್ತು ಚಿಕಿತ್ಸೆಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಕುರಿತು ವಿವರಗಳನ್ನು ನೀಡುವಂತೆ ಗೃಹ ಸಚಿವಾಲಯ ಕೇಳಿದೆ ಎಂದು ಮೂಲಗಳು ತಿಳಿಸಿವೆ.

    Karur stampede tragedy: 36 dead;

  • ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರ ಬಂಧನ : ಬಿಡುಗಡೆಗೆ ಆಗ್ರಹಿಸಿ ಧರಣಿ

    ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರ ಬಂಧನ : ಬಿಡುಗಡೆಗೆ ಆಗ್ರಹಿಸಿ ಧರಣಿ

    ಚಿಕ್ಕಮಗಳೂರು:  ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ಖಂಡಿಸಿ ಹಾಗೂ ಬೆಂ ಗಳೂರಿನಲ್ಲಿ ಬಂಧಿಸಿರುವ ಕರವೇ ಕಾರ್ಯಕರ್ತರು ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿ ಲ್ಲಾ ಘಟಕದ ಕಾರ್ಯಕರ್ತರು ಶನಿವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

    ಈ ಕುರಿತು ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ನಾಡು, ನುಡಿ, ನೆಲ, ಭಾಷೆ, ವಿದ್ಯಾರ್ಥಿ ಹಾಗೂ ರೈತರ ಸಮಸ್ಯೆಗಳ ವಿರುದ್ಧ ನಾಡಿನಾದ್ಯಂತ ಕಾನೂನಾತ್ಮಕವಾಗಿ ಚಳುವಳಿ ನಡೆಸುತ್ತಿ ರುವ ಕರವೇ ಕಾರ್ಯಕರ್ತರು ಬಂಧಿಸಿರುವುದು ಸರಿಯಲ್ಲ ಎಂದರು.

    ಬೆಂಗಳೂರಿನ ತಾಜ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಹಿಂದಿ ಭಾಷಾ ಸಮಿತಿ ಕಾರ್ಯಕ್ರಮವನ್ನು ವಿ ರೋಧಿಸಿ ಕರವೇ ಕಾರ್ಯಕರ್ತರು ಚಳುವಳಿ ನಡೆಸಿದ್ದಾರೆ. ಆದರೆ ರಾಜ್ಯಸರ್ಕಾರ ಹಿಂದಿ ಭಾಷಿಗರನ್ನು ಬೆಂಬಲಿಸಿ ಅನ್ಯಾಯವಾಗಿ ಕರವೇ ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ. ಕೂಡಲೇ ಅವ ರನ್ನು ಬಿಡುಗಡೆಗೊಳಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

    ದೇಶದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಭಾಷೆ ಹೊರತಾಗಿ ದ್ವಿಭಾಷಾ ನೀತಿ ಜಾರಿಗೊಳಿಸಲಾಗಿದೆ. ಆ ದರೆ ರಾಜ್ಯ ಸರ್ಕಾರ ಕನ್ನಡಕ್ಕಿಂತ, ಹಿಂದಿ ಮೇಲೆ ಪ್ರೇಮಕ್ಕೆ ಹೆಚ್ಚಾಗಿ ಪ್ರಚಾರಕ್ಕೆ ಮುಂದಾಗಿರುವುದು ವಿಪ ರ್ಯಾಸ. ಇದರಿಂದ ಭಾಷಾಭಿಮಾನ ಅಳವಡಿಸಿಕೊಂಡಿರುವ ಕೋಟ್ಯಾಂತರ ಕನ್ನಡಿಗರಿಗೆ ನೋ ವುಂಟಾ ಗಿದೆ ಎಂದು ತಿಳಿಸಿದರು.

    ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡವು ಎಲ್ಲಾ ಭಾಷೆಗಳಿಗಿಂತ ಹಿರಿತನ ಹೊಂ ದಿದೆ. ನಾಡಿನಲ್ಲಿ ಕವಿಸಂತರು, ದಾರ್ಶನಿಕರು, ವಚನಕಾರರು, ಕೀರ್ತನಾಕಾರರು ಜನಿಸಿದ ಪುಣ್ಯಭೂಮಿ. ಈ ಕನ್ನಡ ಭೂಮಿಯಲ್ಲಿ ಹಿಂದಿ ಭಾಷೆ ಏರಿಕೆಗೊಳಿಸುವ ಮೂಲಕ ಕನ್ನಡ ಭಾಷೆಯನ್ನು ನಶಿಸುವಂಥ ಕೆಲ ಸವಾಗುತ್ತಿದೆ ಎಂದು ಹೇಳಿದರು.

    ಕೂಡಲೇ ರಾಜ್ಯಸರ್ಕಾರ ಹಿಂದಿ ಭಾಷೆಯನ್ನು ಸಂಪೂರ್ಣವಾಗಿ ನಿಷೇಧಗೊಳಿಸಿ ದ್ವಿಭಾಷಾ ನೀತಿಯ ನ್ನು ಜಾರಿಗೊಳಿಸಬೇಕು. ಕನ್ನಡದ ಪರವಾಗಿ ಚಳುವಳಿ ನಡೆಸಿರುವ ಪ್ರಾಮಾಣಿಕ ಕರವೇ ಕಾರ್ಯಕರ್ತರ ನ್ನು ಬಿಡುಗಡೆಗೊಳಿಸಬೇಕು. ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ರಾಜ್ಯವ್ಯಾಪ್ತಿ ಪ್ರತಿಭಟನೆ ನಡೆಸಬೇಕಾಗು ತ್ತದೆ ಎಂದು ಎಚ್ಚರಿಸಿದರು.

    ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷರಾದ ಕೋಟೆ ಮಲ್ಲೇಶ್, ದಶರತ್ ರಾಜ್, ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರುದ್ರೇಶ್ ಹಲ್ಮಿಡಿ, ತಾಲೂಕು ಅಧ್ಯಕ್ಷ ಮನೋಜ್, ಸಂಘಟನಾ ಕಾರ್ಯದರ್ಶಿ ಶಶಿ, ಸಹಕಾರ್ಯದರ್ಶಿ ಮಧು, ಸಂಚಾಲಕರದ ಯುವರಾಜ್, ತಾಲೂಕು ಮಹಿಳಾಧ್ಯಕ್ಷೆ ಪೂರ್ಣಿಮಾ, ಮುಖಂಡರುಗಳಾದ ಅಶೋಕ್ ಶೆಟ್ಟಿ, ಮಂಜುಳಾಬಾಯಿ, ಇರ್ಷಾ ದ್ ಅಹ್ಮದ್, ಸಾದಿಕ್, ಪ್ರಸನ್ನ ಮತ್ತಿತರರಿದ್ದರು.

    Karave activists arrested in Bengaluru: Protest demanding their release

  • ಪೂರ್ವಿಕರು ಉಳಿಸಿದ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

    ಪೂರ್ವಿಕರು ಉಳಿಸಿದ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

    ಚಿಕ್ಕಮಗಳೂರು: ನಮ್ಮ ಪೂರ್ವಿಕರು ಉಳಿಸಿ ಹೋಗಿರುವ ಈ ಸುಂದರವಾದ ಪ್ರಕೃತಿ-ಪರಿಸರವನ್ನು ಹಾಳು ಮಾಡಲು ಬಿಡದೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶಾಸಕರಾದ ಹೆಚ್.ಡಿ.ತಮ್ಮಯ್ಯ ಹೇಳಿದರು.

    ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ರೌಂಡ್ ಟೇಬಲ್, ಜಿಲ್ಲಾ ಹೋಂ ಸ್ಟೇ ಮಾಲೀಕರ ಸಂಘ, ಜಿಲ್ಲಾ ರೆಸಾರ್ಟ್ ಮಾಲೀಕರ ಸಂಘ, ಜೀಪ್ ಅಸೋಸಿಯೇಶನ್, ಅಡ್ವೆಂಚರ್ ಕ್ಲಬ್ ಆಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ನಗರದಿಂದ ಮುತ್ತೋಡಿವರೆಗೆ ಆಯೋಜಿಸಲಾಗಿದ್ದ ಬೈಕ್ ರ್‍ಯಾಲಿಗೆ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರೊಂದಿಗೆ ಚಾಲನೆ ನೀಡಿ ಅವರು ಮಾತನಾಡಿದರು.

    ವಿಶ್ವದಲ್ಲ್ಲೇ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಇಂದು ಎಲ್ಲೆಡೆಯ ಪ್ರದೇಶಗಳು ಕಾಂಕ್ರೀಟ್ ನಗರವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಜನರು ಪರಿಸರ ಪ್ರೇಮಿಗಳಾಗಿದ್ದು, ಪಶ್ಚಿಮಘಟ್ಟದಲ್ಲಿರುವ ಈ ಜಿಲ್ಲೆಯ ರಮಣೀಯ ಸ್ಥಳಗಳನ್ನು ವೀಕ್ಷಣೆ ಮಾಡಲು ಆಗಮಿಸುತ್ತಿದ್ದಾರೆ. ಪ್ರವಾಸಿಗರಿಗೆ ಪರಿಸರ ಉಳಿಸುವ ಕಾಳಜಿಯ ಬಗ್ಗೆ ತಿಳಿ ಹೇಳಬೇಕು ತಿಳಿಹೇಳಬೇಕು ಎಂದರು.

    ಈಗಾಗಲೇ ಚಂದ್ರದ್ರೋಣ ಪರ್ವತ ಶ್ರೇಣಿಯ ಕೆಲವು ಭಾಗಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲಾಗಿದೆ. ಮುಂದೆ ನಗರವನ್ನು ಸಹ ಪ್ಲಾಸ್ಟಿಕ್ ಮುಕ್ತ ಮಾಡಲು ತೀರ್ಮಾನಿಸಲಾಗಿದೆ. ಈ ಜಿಲ್ಲೆ ಪಂಚ ನದಿಗಳ ಉಗಮಸ್ಥಾನವಾಗಿದ್ದು, ಪ್ಲಾಸ್ಟಿಕ್ ಹಾವಳಿಯಿಂದ ಈ ನದಿಗಳ ಅಸ್ತಿತ್ವಕ್ಕೆ ಮುಂದೆ ಸಂಚಕಾರ ಬರಬಹುದು. ಹೀಗಾಗಿ ಅವುಗಳನ್ನು ಕಾಪಾಡಿಕೊಳ್ಳುವುದು ಸಹ ನಮ್ಮೆಲ್ಲರ ಜವಾಬ್ದಾರಿ ಎಂದರು.

    ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ ಮಾತನಾಡಿ, ಪ್ರಪಂಚದ ಭೂಪಠದಲ್ಲಿ ಚಿಕ್ಕಮಗಳೂರನ್ನು ಹುಡುಕುವ ಅಗತ್ಯವಿಲ್ಲ. ಈ ಜಿಲ್ಲೆ ಪ್ರವಾಸೋದ್ಯಮದಲ್ಲಿ ಅಷ್ಟೊಂದು ವಿಶೇಷವಾಗಿ ಗುರುತಿಸಿಕೊಂಡಿದೆ. ಚಿಕ್ಕಮಗಳೂರು ಪರಿಸರವನ್ನು ಉಳಿಸಬೇಕು, ಬೆಳೆಸಬೇಕು. ಪರಿಸರದ ಜೊತೆಗೆ ಪೀಳಿಗೆಯಲ್ಲಿ ಧಾರ್ಮಿಕತೆ, ಸಾಂಸ್ಕೃತಿಕತೆ ಬಗ್ಗೆ ಆಸಕ್ತಿ ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದು ಆಶಿಸಿದರು.

    ಪ್ರವಾಸಿಗರು ಬಂದಾಗ ನಿರ್ಬಂಧ ಇರಬೇಕು. ಆದರೆ ನಿರ್ಬಂಧದ ಹೆಸರಿನಲ್ಲಿ ಸಂಪೂರ್ಣವಾಗಿ ನಿಯಂತ್ರಿಸಿದರೆ ಪ್ರವಾಸಿಗರಿಗೆ ತೊಂದರೆಯಾಗುತ್ತದೆ. ಅವರಿಗೆ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ಗೆ ಅವಕಾಶ ಸಿಗದಿದ್ದರೆ ಸಮಸ್ಯೆಯಾಗಿ ಪ್ರವಾಸೋದ್ಯಮ ಹಾಳಾಗುತ್ತದೆ. ಊರಿನ ಹೆಸರೂ ಹಾಳಾಗುತ್ತದೆ ಎಂದರು.

    ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್.ಲೋಹಿತ್ ಸ್ವಾಗತಿಸಿ, ಮಾತನಾಡಿ, ಪ್ರತೀ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚು ಪ್ರಚಲಿತವಿಲ್ಲದ ಪ್ರವಾಸಿ ತಾಣಗಳನ್ನು ಪ್ರಚುರಪಡಿಸುವ ಸಲುವಾಗಿ ಪ್ರತೀ ವರ್ಷವೂ ಬೈಕ್ ರ್‍ಯಾಲಿ, ಜೀಪ್ ರ್‍ಯಾಲಿ, ಸೈಕಲ್ ರ್‍ಯಾಲಿಯನ್ನು ಆಯೋಜಿಸುತ್ತಾ ಬರಲಾಗಿದೆ ಎಂದು ತಿಳಿಸಿದರು.

    ವಿಶ್ವ ಪ್ರವಾಸೋದ್ಯಮದ ಪ್ರಯುಕ್ತ ದತ್ತಪೀಠ, ಕವಿಕಲ್‌ಗಂಡಿ, ಕೊಳಗಾಮೆ ಮಾರ್ಗವಾಗಿ ಮುತ್ತೋಡಿ ಅರಣ್ಯ, ಮಲ್ಲಂದೂರು ಶೂಟಿಂಗ್ ಪಾಯಿಂಟ್, ಉಕ್ಕುಡ ಫಾಲ್ಸ್, ರಂಗನಬೆಟ್ಟ, ಬಂಡಕಲ್ಲು ಬೆಟ್ಟ, ತೋಟ್ಲಪ್ಪನ ಗುಡ್ಡ ಹೀಗೆ ಪರ್ಯಾಯ ತಾಣಗಳತ್ತ ಪ್ರವಾಸಿಗರ ಗಮನ ಸೆಳೆಯುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಕೆ.ಡಿ.ಪಿ. ಸಭೆಯಲ್ಲಿ ಟೂರಿಸಂ ವೆಬ್‌ಸೈಟ್ ಕೂಡ ಲಾಂಚ್ ಆಗಿದೆ. ಅಲ್ಲದೆ, ರೀಲ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ದೇಶಕ್ಕೆ ಮಾತ್ರವಲ್ಲ, ಪ್ರಪಂಚಕ್ಕೆ ಪ್ರಚುರಪಡಿಸುವ ಸಲುವಾಗಿ ಬೈಕ್ ರ್‍ಯಾಲಿಯನ್ನು ಆಯೋಜಿಸಲಾಗಿದೆ ಎಂದರು.

    `ಪ್ರವಾಸೋದ್ಯಮ ಮತ್ತು ಸುಸ್ಥಿರ ಪರಿವರ್ತನೆ’ ಎಂಬುದು ಈ ವರ್ಷದ ಧ್ಯೇಯ ವಾಕ್ಯ. ಈ ಶೀರ್ಷಿಕೆಯಡಿ ಇಂದು ಬೈಕ್ ರ್‍ಯಾಲಿ ಮತ್ತು ಸೆಪ್ಟಂಬರ್ ೨೯ಕ್ಕೆ ಕ್ಲೀನಿಂಗ್ ಡ್ರೈವ್ ಅನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

    ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಸಿ.ಶಿವಾನಂದಸ್ವಾಮಿ, ವಕೀಲರಾದ ತೇಜಸ್, ರೌಂಡ್ ಟೇಬಲ್ ಅಧ್ಯಕ್ಷರಾದ ಅನಿಲ್, ಜೀಪ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಇನಾಯತ್, ರೆಸಾರ್ಟ್ ಅಸೋಸಿಯೇಶನ್‌ನ ಪದಾಧಿಕಾರಿಗಳು ಮತ್ತಿತರರಿದ್ದರು. ಸುಮಾರು ೩೫ ಮಂದಿ ಬೈಕ್ ಸವಾರರುಗಳು ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

    Preserving the environment saved by our ancestors is everyone’s responsibility.

  • 5 ವರ್ಷಗಳಿಂದ ತೆರೆಯದ ದೂರು ಪೆಟ್ಟಿಗೆ

    5 ವರ್ಷಗಳಿಂದ ತೆರೆಯದ ದೂರು ಪೆಟ್ಟಿಗೆ

    ಚಿಕ್ಕಮಗಳೂರು: ನಗರಸಭೆ ಆಯುಕ್ತರ ಕಚೇರಿಗೆ ಹೊಂದಿಕೊಂಡಂತೆ ಗೋಡೆಗೆ ದೂರು ಪೆಟ್ಟಿಗೆಯೊಂದನ್ನು ಇಡಲಾಗಿದ್ದು, ಅದನ್ನು ಉಪಲೋಕಾಯುಕ್ತರು ಪರಿಶೀಲಿಸಿದರು.

    ಅದಕ್ಕೆ ಹಾಕಿರುವ ಬೀಗ ತೆರೆಯುವಂತೆ ಕಚೇರಿ ವ್ಯವಸ್ಥಾಪಕ ರವಿ ಅವರಿಗೆ ಸೂಚನೆ ನೀಡಿದರು. ದೂರು ಪೆಟ್ಟಗೆ ಕೀಲಿ ಕಳೆದುಹೋಗಿದೆ ಎಂದು ಅವರು ಉತ್ತರ ನೀಡಿದರು. ರಿಪೇರಿ ಮಾಡುವ ಕೆಲಸಗಾರನ್ನು ಕರೆಸಿ ಲಾಕರ್‌ ಒಡೆದು ಪರಿಶೀಲಿಸಲಾಯಿತು. 2020ರಿಂದ ಈವರೆಗೆ ಸಾರ್ವಜನಿಕರು ಹಾಕಿರುವ ದೂರುಗಳು ಅದರಲ್ಲೇ ಇರುವುದನ್ನು ಕಂಡು ಉಪಲೋಕಾಯುಕ್ತರು ಸಿಡಿಮಿಡಿಗೊಂಡರು.

    ‘ಉದ್ಘಾಟನೆಯಾದ ದಿನದಿಂದ ಈ ಪೆಟ್ಟಿಗೆಯನ್ನು ತೆಗೆದಂತೆ ಕಾಣಿಸುತ್ತಿಲ್ಲ. ಅದರಲ್ಲಿರುವ ಪತ್ರಗಳು ದೂಳು ಹಿಡಿದಿವೆ. ಈ ರೀತಿಯ ಬೇಜವಾಬ್ದಾರಿ ಅಧಿಕಾರಿಗಳನ್ನು ನಾನೆಲ್ಲೂ ನೋಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಬೀಗವನ್ನೇ ತೆರೆಯದ ದೂರು ಪೆಟ್ಟಿಗೆಯನ್ನು ಇರಿಸಿರುವುದಾದರೂ ಏಕೆ, ಈಗಲೇ ಈ ಪೆಟ್ಟಿಗೆ ತೆಗೆದು ಹೊಸ ಪೆಟ್ಟಿಗೆ ಇರಿಸಿ. ಇಲ್ಲಿರುವ ಪತ್ರಗಳನ್ನು ಪರಿಶೀಲಿಸಿ ಕ್ರಮ ಕೈಗೊಂಡ ಬಗ್ಗೆ ವರದಿ ನೀಡಬೇಕು’ ಎಂದು ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ತಿಳಿಸಿದರು.

    ‘ನಗರಸಭೆ ಕಚೇರಿಯಲ್ಲಿ ಕಾರ್ಯವಿಧಾನದ ಹಲವು ಲೋಪಗಳಿವೆ. ಪ್ರಾಥಮಿಕವಾಗಿ ಕಂಡಿರುವ ಲೋಪಗಳನ್ನು ಆಧರಿಸಿ ಸಮಗ್ರವಾಗಿ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡಿ’ ಎಂದು ಲೋಕಾಯುಕ್ತ ಎಸ್‌ಪಿ ಸ್ನೇಹಾ ಅವರಿಗೆ ಸೂಚನೆ ನೀಡಿದರು.

    ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದಾಖಲಾಗಿದ್ದ 85 ಪ್ರಕರಣಗಳ ಪೈಕಿ 65 ಪ್ರಕರಣಗಳನ್ನು ಗುರುವಾರ ಜಿಪಂ ಸಭಾಂಗಣದಲ್ಲಿ ನಡೆದ ಕಲಾಪದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ತಿಳಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಬಂದಿರುವ ಪ್ರಕರಣಗಳ ಬಗ್ಗೆ ಮೊದಲೇ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೆವು. ಎಲ್ಲಿಯಾದರೂ ಅಧಿಕಾರಿಗಳ ತಪ್ಪು ಕಂಡು ಬಂದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಲಾಗಿತ್ತು. ಇದೇ ಕಾರಣದಿಂದಲೇ ಸ್ಥಳದಲ್ಲೇ 65 ಪ್ರಕರಣಗಳ ಇತ್ಯರ್ಥ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

    Complaint box that hasn’t been opened for 5 years

  • ರಸ್ತೆ ಗುಂಡಿ ಸೇರಿ 6 ಸ್ವಯಂ ಪ್ರೇರಿತ ಪ್ರಕರಣ

    ರಸ್ತೆ ಗುಂಡಿ ಸೇರಿ 6 ಸ್ವಯಂ ಪ್ರೇರಿತ ಪ್ರಕರಣ

    ಚಿಕ್ಕಮಗಳೂರು: ರಸ್ತೆ ಗುಂಡಿ, ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ಸೇರಿ ಆರು ಸ್ವಯಂ ಪ್ರೇರಿತ ಪ್ರಕರಣಗಳನ್ನು ಉಪಲೋಕಾಯುಕ್ತರು ದಾಖಲಿಸಿಕೊಂಡಿದ್ದಾರೆ.

    ‘ಮೊದಲ ದಿನ ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಪ್ರಯಾಣ ಮಾಡಿದೆವು. ಹಾಸನದಿಂದ ಚಿಕ್ಕಮಗಳೂರಿಗೆ ತಲುಪುವುದೇ ಕಷ್ಟವಾಗಿದೆ. ರಸ್ತೆ ತುಂಬೆಲ್ಲಾ ಹೊಂಡಗಳೇ ಇವೆ. ಈ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ  ಶುಕ್ರವಾರ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ತಿಳಿಸಿದರು.

    ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ಸಮಸ್ಯೆಗಳ ಆಗರವಾಗಿದೆ. ಗ್ರಾಮೀಣ ಸಾರಿಗೆ ಬಸ್‌ಗಳು ನಿಲ್ಲುವ ಜಾಗದಲ್ಲಂತೂ ಪ್ರಯಾಣಿಕರಿಗೆ ಯಾವುದೇ ಸೌಕರ್ಯ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆ ಇದೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ವರದಿ ನೀಡಿದ ಬಳಿಕ ಪ್ರಕರಣ ಇತ್ಯರ್ಥಪಡಿಸಲಾಗುವುದು ಎಂದರು. ‘ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದಾಗ ಅಲ್ಲೊಂದು ಕಸದ ಗುಡ್ಡವೇ ಇರುವುದನ್ನು ನೋಡಿದ್ದೇನೆ.

    ಸಂಸ್ಕರಿಸಲು ಹಲವು ತಂತ್ರಜ್ಞಾನಗಳಿವೆ. ಕಸದಿಂದ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ವೈಜ್ಞಾನಿಕ ಕ್ರಮ ಕೈಗೊ ಳ್ಳುವ ಆಲೋಚನೆಯನ್ನು ಅಧಿಕಾರಿಗಳು ಮಾಡಿಯೇ ಇಲ್ಲ. ಸ್ಥಳೀಯರಿಗೆ ಆಗುತ್ತಿರುವ ತೊಂದರೆಯನ್ನೂ ಸುತ್ತಮುತ್ತಲ ಜನ ತಿಳಿಸಿದರು. ಆದ್ದರಿಂದ ಈ ವಿಷಯದ ಸಂಬಂಧವೂ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು.

    ಕಸ ವಿಲೇವಾರಿ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಗರಸಭೆ ಆಯುಕ್ತರು ಮತ್ತು ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದು. ಈ ಸಮಿತಿ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡಲು ತಿಳಿಸಲಾಗಿದೆ ಎಂದು ವಿವರಿಸಿದರು.

    ‘ಮೊದಲ ದಿನವೇ ಎರಡು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ್ದೆವು. ಅಲ್ಲಿಯೂ ಕೆಲವು ಲೋಪಗಳನ್ನು ಗುರುತಿಸಿ ಪ್ರಕರಣ ದಾಖಲಿಸಲಾಗಿದೆ. ಸಮಸ್ಯೆ ಸರಿಪಡಿಸಿದ ಬಳಿಕ ಪ್ರಕರಣ ಇತ್ಯರ್ಥವಾಗಲಿದೆ’ ಎಂದರು.

    6 self-inflicted cases including road potholes