Category: ಚಿಕ್ಕಮಗಳೂರು ನಗರ

  • ಬಿಜೆಪಿಯವರು ಸುಳ್ಳು ಹೇಳಿ ಕೇಂದ್ರದಲ್ಲಿ ಅಧಿಕಾರ ಪಡೆದುಕೊಂಡಿದ್ದಾರೆ

    ಬಿಜೆಪಿಯವರು ಸುಳ್ಳು ಹೇಳಿ ಕೇಂದ್ರದಲ್ಲಿ ಅಧಿಕಾರ ಪಡೆದುಕೊಂಡಿದ್ದಾರೆ

    ಚಿಕ್ಕಮಗಳೂರು: ಕಾಂಗ್ರೆಸ್ ಶಾಸಕರ ಗೆಲುವಿಗೆ ಕಾರಣ ಕಾರ್ಯಕರ್ತರು, ಕಾರ್ಯಕರ್ತರ ಗೆಲುವಿಗೆ ಕಾರಣ ಪಕ್ಷದ ಸಿದ್ಧಾಂತ, ಆದರೆ ಬಿಜೆಪಿಯವರು ಅಧಿಕಾರಕ್ಕಾಗಿ ಕಾರ್ಯಕರ್ತರ ಮೂಲಕ ಸುಳ್ಳು ಹೇಳಿಸುತ್ತಿದ್ದಾರೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

    ಶನಿವಾರ ನಗರದ ಟಿಎಂಎಸ್ ಶಾಲಾ ಆವರಣದಲ್ಲಿನ ರೋಟರಿ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಸರಕಾರದ ನಡೆ ಕಾರ್ಯಕರ್ತರ ಕಡೆ-ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರ ಸಮಾವೇಶವ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಸಂಕಷ್ಟದಲ್ಲಿ ಸಿಲುಕಿದ್ದ ವೇಳೆ ಚಿಕ್ಕಮಗಳೂರು ಜಿಲ್ಲೆಯಿಂದ ಅವರನ್ನು ಲೋಕಸಭೆಗೆ ಕಳಿಸುವ ಮೂಲಕ ಜಿಲ್ಲೆಯ ಜನತೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯನ್ನು ಈ ಹಿಂದೆ ನೀಡಿದ್ದರು. ಹಿಂದಿನಿಂದಲೂ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೆಲ ಬದಲಾವಣೆಯಾಗಿದ್ದರೂ ಮತ್ತೆ ಜಿಲ್ಲೆ ಎಂದೆಂದಿಗೂ ಕಾಂಗ್ರೆಸ್‌ನ ಭದ್ರಕೋಟೆ ಎಂಬುದನ್ನು ಸಾಭೀತು ಮಾಡಿದವರು ಪಕ್ಷದ ಕಾರ್ಯಕರ್ತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಇದೇ ವೇಳೆ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆ.ಜೆ.ಜಾರ್ಜ್, ಬಿಜೆಪಿಯವರು ಸುಳ್ಳು ಹೇಳಿ ಕೇಂದ್ರದಲ್ಲಿ ಅಧಿಕಾರ ಪಡೆದುಕೊಂಡಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣವನ್ನು ತರುವುದಾಗಿ ಹೇಳಿದ್ದರು. ಅದು ಸಾಧ್ಯವಾಗಿಲ್ಲ. ವರ್ಷಕ್ಕೆ ೨ ಕೋಟಿ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಅದು ಸಕಾರಗೊಂಡಿಲ್ಲ. ಕಾಂಗ್ರೆಸ್ ಪಕ್ಷ ದೇಶ ಕಟ್ಟುವಲ್ಲಿ ಶ್ರಮಿಸಿದೆಯೇ ಹೊರತು ದೇಶವನ್ನು ಧರ್ಮದಿಂದ ವಿಭಜಿಸಲು ಎಂದೂ ಮುಂದಾಗಿಲ್ಲ ಎಂದು ಹೇಳಿದರು.

    ಕೇಂದ್ರದಲ್ಲಿ ಬಿಜೆಪಿಯವರು ನೀಡಿದ ಸುಳ್ಳು ಭರವಸೆಯನ್ನು ನಂಬಿ ಜನರು ಬಿಜೆಪಿಯವರನ್ನು ಗೆಲ್ಲಿಸಿದರು. ಆದರೆ, ಬಿಜೆಪಿಯವರು ಜನರ ಭರವಸೆಯನ್ನು ಈಡೇರಿಸಿಲ್ಲ. ಅದರ ಫಲವಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನಕ್ಕೆ ಕುಸಿದ ಬಿಜೆಪಿ ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಗಳ ಮುಂದೆ ಮಂಡಿಯೂರುವಂತಾಗಿತ್ತು, ಆದರೆನಾವೂ ಅಧಿಕಾರ ಕ್ಕಾಗಿ ರಾಜಕೀಯ ಮಾಡುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಜನರ ಬದುಕಿನ ಸುಧಾರಣೆಗಾಗಿ ರಾಜಕೀಯ ಮಾಡುತ್ತಿದ್ದೇವೆ. ಎಂದಿಗೂ ಹಿಂಬಾಗಿಲಿನಿಂದ ಅಧಿಕಾರ ಹಿಡಿದಿಲ್ಲ, ಜನರ ಬದುಕಿನ ವಿಚಾರಗಳನ್ನು ಮುಂದಿಟ್ಟು ಅಧಿಕಾರ ಪಡೆದಿದ್ದೇವೆ, ಸದ್ಯ ಅಧಿಕಾರದಲ್ಲಿರುವ ರಾಜ್ಯ ಸರಕಾರ ಪಂಚಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕಿನ ಸುಧಾರಣೆಗೆ ಮುಂದಾಗಿದೆ ಎಂದರು.

    ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ೨೦೨೯ರ ಲೋಕಸಭೆ ಚುನಾವಣೆ ನಂತರ ರಾಹುಲ್ ಗಾಂಧಿಯವರು ಈ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಯವರು. ಹಾಕಿಕೊಟ್ಟ ಕಾರ್ಯಕ್ರಮಗಳು ಇಂದಿಗೂ ಶಾಶ್ವತವಾಗಿ ಜನಮಾನಸದಲ್ಲಿ ಉಳಿದಿದೆ. ಈ ಸಂಗತಿಯನ್ನು ಕಾರ್ಯಕರ್ತ ರಿಗೆ ತಿಳಿಸುವ ಕೆಲಸವಾಗಬೇಕು ಎಂದರು.

    ಈ ವೇಳೆ ನಗರಸಭೆ ಸದಸ್ಯರಾದ ಮುನೀರ್ ಮತ್ತು ಮಂಜುಳಾ ಅನಿಸಿಕೆ ವ್ಯಕ್ತಪಡಿಸಿದರು. ಸಮಾವೇಶದಲ್ಲಿ ಮಾಜಿ ಸಚಿವ ರಮಾನಾಥ ರೈ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಂ.ಸಂದೀಪ್, ಡಾ.ವಿಜಯಕುಮಾರ್, ಶಿವಮೊಗ್ಗ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ರೇಖಾಹುಲಿಯಪ್ಪಗೌಡ, ಎಚ್.ಎಚ್.ದೇವರಾಜ್, ಮಲ್ಲೇಶ್ ಸ್ವಾಮಿ, ಎಚ್.ಪಿ.ಮಂಜೇಗೌಡ, ಮಹಡಿಮನೆ ಸತೀಶ್ ಮತ್ತಿತರರು ಉಪಸ್ಥಿತರಿದ್ದg

    The BJP has come to power at the Centre by lying.

  • ಡಾ.ಬಾಬು ಜಗಜೀವನ ರಾಮ್ ಶೋಷಿತರ ಹಕ್ಕಿಗಾಗಿ ಹೋರಾಡಿದವರು

    ಡಾ.ಬಾಬು ಜಗಜೀವನ ರಾಮ್ ಶೋಷಿತರ ಹಕ್ಕಿಗಾಗಿ ಹೋರಾಡಿದವರು

    ಚಿಕ್ಕಮಗಳೂರು:  ಮಾಜಿ ಉಪ ಪ್ರಧಾನಿ ಬಾಬು ಜನಜೀವನ ರಾಮ್ ಅವರು ಶೋಷಿತರ ದಮನಿತರ ಪರವಾಗಿ ಹೋರಾಟ ನಡೆಸಿದ ಮಹಾನ್ ಪುರುಷ ಎಂದು ಇಂಧನ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧ್ದಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್‌ರವರ ೧೧೮ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
    ಬಾಬು ಜಗಜೀವನ್ ರಾಮ್ ಅವರು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯತಾವಾದಿ ಚಳುವಳಿಯಲ್ಲಿ ಸಕ್ರಿಯರಾಗಿದ್ದರು. ಅವರ ಕಾರ್ಯ ವ್ಯಾಪ್ತಿ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗಿರಲಿಲ್ಲ. ಅವರು ಶೋಷಿತ ವರ್ಗಗಳ ವಿಮೋಚನೆಗಾಗಿಯೂ ಹೋರಾಟ ಮಾಡಿದವರು. ಅವರು ೧೯೩೪ರಲ್ಲಿ ಬಿಹಾರ ಭೂಕಂಪ ಸಂತಸ್ತರಿಗೆ ಪರಿಹಾರ ಶಿಬಿರಗಳನ್ನು ಸ್ಥಾಪಿಸುವಂತಹ ಸಾಮಾಜಿಕ ಕಾರ್ಯಗಳಲ್ಲಿ ವ್ಯಾಪಕವಾಗಿ ತೊಡಗಿಸಿಕೊಂಡಿದ್ದರು. ನಾಗರಿಕ ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳುವಳಿಯಂತಹ ಮುಖ್ಯ ವಾಹಿನಿಯ ಜನಪ್ರಿಯ ಚಳುವಳಿಗಳಲ್ಲಿ ಭಾಗವಹಿಸಿದ್ದರು. ಈ ಚಳುವಳಿಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅವರು ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿದರು.
    ರಾಮ್ ಭಾರತದ ಅತ್ಯಂತ ಪ್ರತಿಭಾನ್ವಿತ ಸಂಸದರಲ್ಲಿ ಒಬ್ಬರು. ೧೯೩೬ ರಲ್ಲಿ ೨೮ ವ? ವಯಸ್ಸಿನಲ್ಲೇ ಬಿಹಾರ ವಿಧಾನ ಪರಿ?ತ್ತಿಗೆ  ಆಯ್ಕೆಯಾದ ಅವರು,  ಕೇಂದ್ರ ಶಾಸಕಾಂಗದ ಸದಸ್ಯರಾಗಿ ಮತ್ತು ನಂತರ ೪೦ ವ?ಗಳಿಗೂ ಹೆಚ್ಚು ಕಾಲ ಸಂಸತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
    ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ಪ್ರಾಸ್ತ್ತಾವಿಕ ಮಾತನಾಡಿ, ಬಾಬೂಜಿ ಎಂದೇ ಹೆಸರಾಗಿದ್ದ ಬಾಬು ಜಗಜೀವನರಾಮ್ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವದ ಹೋರಾಟದಿಂದ?ಸಮಾಜಕ್ಕೆ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ. ಅವರು ಸೃಷ್ಟಿಸಿದ ಹಸಿರು ಕ್ರಾಂತಿಯಿಂದ?ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು. ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೂ ಆದ್ಯತೆ ಕೊಟ್ಟಿದ್ದರಿಂದ ಇಂದು ಸಮಾಜದಲ್ಲಿ ಆಹಾರ ಪದಾರ್ಥಗಳ ಕೊರತೆಯಿಲ್ಲ.. ಅವರು ಮೂರು ದಶಕಗಳ ಕಾಲ ಕೇಂದ್ರ ಮಂತ್ರಿಮಂಡಲದ ಸದಸ್ಯರಾಗಿ? ಆಡಳಿತದಲ್ಲಿ ಅಪಾರ ಅನುಭವ ಗಳಿಸಿದರು. ಸಾರಿಗೆ, ಆಹಾರ, ರೈಲ್ವೆ, ಕೃಷಿ ಮತ್ತು ಸಮುದಾಯ ಅಭಿವೃದ್ಧಿ, ಕಾರ್ಮಿಕ ಮತ್ತು ಉದ್ಯೋಗ ಪುನರ್ವಸತಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಹಿರಿಮೆ ಅವರದು ಎಂದರು.
    ಬಿಹಾರದ ಬಡ ಕುಟುಂಬದಲ್ಲಿ ಜನಿಸಿದ ಜಗಜೀವನರಾಮ್ ೧೯೩೫ರಲ್ಲಿ ಮೊದಲ ಚುನಾವಣೆ ನಡೆದಾಗ ನಿರ್ಣಾಯಕ ಪಾತ್ರ ವಹಿಸಿದರು. ಕೋಲ್ಕತ್ತಾ ಮತ್ತು ಬನಾರಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿ ದೇಶದ ಹಸಿರು ಕ್ರಾಂತಿಗೆ ಬುನಾದಿ ಹಾಕಿದವರು. ಶಿಕ್ಷಣದಿಂದಲೇ ಸಮಾಜದ ಬದಲಾವಣೆ ಸಾಧ್ಯವೆಂದು ಅವರು ಬಲವಾಗಿ ನಂಬಿದ್ದರು ಎಂದು ಅವರು ಹೇಳಿದರು.
    ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರು ಮಾತನಾಡಿ ಜಗಜೀವನರಾಮ್ ಜೀವನದಲ್ಲಿ ತುಂಬಾ ಕ?ಪಟ್ಟು ಮೇಲೆ ಬಂದವರು. ಬಡತನವಿದ್ದರೂ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸದೆ ಸುಶಿಕ್ಷಿತರಾದರು. ಬಿಹಾರ ಹಿಂದೆ ತೀರಾ ಬಡತನದಿಂದ ಕೂಡಿದ ರಾಜ್ಯವಾಗಿತ್ತು. ಅಲ್ಲಿ ಹುಟ್ಟಿ ಸಾಧನೆ ಮಾಡಿದ ಅವರು ಮಹನೀಯರು, `ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಬೆಂಬಲಿಸಿ, ಶಿಕ್ಷಣದ? ಒಳ್ಳೆಯ ಮದ್ದು ಬೇರೊಂದಿಲ್ಲ, ಶೈಕ್ಷಣಿಕವಾಗಿ ಮುಂದೆ ಬನ್ನಿ’ ಎಂದು ಅವರು ಕರೆ ನೀಡಿದ್ದರು’ ಎಂದು ಹೇಳಿದರು.
    ವಕೀಲ ಆರ್.ರಮೇಶ್ ಅವರು ಉಪನ್ಯಾಸ ನೀಡಿ ಜಗಜೀವನ್ ರಾಮ್ ಬಿಹಾರದ ಚಾಂದ್ವಾದಲ್ಲಿ ದಲಿತ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಬ್ರಿಟಿ? ಸೈನ್ಯದಲ್ಲಿದ್ದರು. ನಂತರ ಅದನ್ನು ತೊರೆದು ತಮ್ಮ ಹುಟ್ಟೂರಿನಲ್ಲಿ ಕೃಷಿ ಭೂಮಿಯನ್ನು ಅವಲಂಬಿಸಿದ್ದರು. ಅವರು ಹತ್ತಿರದ ಅರ್ರ್‍ಆ ಪಟ್ಟಣದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಂದುವರಿಸಿದ ಸಂದರ್ಭ ಮೊದಲ ಬಾರಿಗೆ ತಾರತಮ್ಯವನ್ನು ಎದುರಿಸಿದರು. ಅವರನ್ನು ‘ಅಸ್ಪೃಶ್ಯ’ ಎಂದು ಪರಿಗಣಿಸಿದ ಪರಿಣಾಮವಾಗಿ ಬೇರೆ ಮಡಕೆಯಿಂದ ನೀರು ಕುಡಿಯಬೇಕಾಯಿತು. ಈ ತಾರತಮ್ಯವನ್ನು ವಿರೋಧಿಸಿ ಜಗಜೀವನ್ ರಾಮ್ ಆ ಮಡಕೆಯನ್ನೇ ಒಡೆದು ಹಾಕಿದರು. ಈ ಘಟನೆಯ ಬಳಿಕ ಶಾಲೆಯಲ್ಲಿ ಪ್ರತ್ಯೇಕವಾಗಿ ಇರಿಸಿದ್ದ ಮಡಕೆಯನ್ನು ತೆಗೆದುಹಾಕಲಾಯಿತು ಎಂದು ತಿಳಿಸಿದರು.
    ೧೯೨೫ರಲ್ಲಿ ವಿದ್ವಾಂಸ ಪಂಡಿತ್ ಮದನ್ ಮೋಹನ್ ಮಾಳವೀಯ ಅವರನ್ನು ಭೇಟಿಯಾದ ಬಳಿಕ ಅವರಿಂದ ಜಗಜೀವನ್ ರಾಮ್ ಬಹಳ ಪ್ರಭಾವಿತರಾದರು. ಮಾಳವೀಯ ಅವರ ಆಹ್ವಾನದ ಮೇರೆಗೆ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಸೇರಿದರು. ವಿಶ್ವವಿದ್ಯಾನಿಲಯದಲ್ಲಿಯೂ ಸಹ ಜಗಜೀವನ್ ರಾಮ್ ತಾರತಮ್ಯವನ್ನು ಎದುರಿಸಿದರು. ಇದು ಸಮಾಜದ ಒಂದು ವರ್ಗದ ಸಾಮಾಜಿಕ ಬಹಿ?ರದ ವಿರುದ್ಧ ಪ್ರತಿಭಟಿಸಲು ಅವರಿಗೆ ಸ್ಫೂರ್ತಿ ನೀಡಿತು. ಅನ್ಯಾಯದ ವಿರುದ್ಧ ಪ್ರತಿಭಟಿಸಲು ಅವರು ಪರಿಶಿ? ಜಾತಿಯವರನ್ನು ಸಂಘಟಿಸಿದರು. ಬಿಎಚ್‌ಯುನಲ್ಲಿ ತಮ್ಮ ಕೆಲಸದ ಸಮಯದ ನಂತರ, ಅವರು ಕೊಲ್ಕತ್ತಾ ವಿಶ್ವವಿದ್ಯಾಲಯಕ್ಕೆ ಸೇರಿ ೧೯೩೧ ರಲ್ಲಿ ಬಿ.ಎಸ್ಸಿ ಪದವಿ ಪಡೆದರು. ಅವರ ಸಂಘಟನಾ ಕೌಶಲ್ಯಕ್ಕಾಗಿ ಸುಭಾ? ಚಂದ್ರ ಬೋಸ್ ಅವರಿಂದ ಗುರುತಿಸಲ್ಪಟ್ಟರು. ೧೯೩೫ರಲ್ಲಿ ಅವರು ಆಲ್-ಇಂಡಿಯಾ ಡಿಪ್ರೆಸ್ಡ್ ಕ್ಲಾಸಸ್ ಲೀಗ್ ರಚನೆಗೆ ಸಹಾಯ ಮಾಡಿದರು. ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದರು, ಅಲ್ಲಿ ಅವರು ಡಿಪ್ರೆಸ್ಡ್ ಕ್ಲಾಸಸ್‌ನ ಅದ್ಭುತ ವಕ್ತಾರರಾಗಿ ಮೆಚ್ಚುಗೆ ಪಾತ್ರರಾದರು.
    ೧೯೩೫ ರಲ್ಲಿ, ಅವರು ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಕುಡಿಯುವ ನೀರಿನ ಬಾವಿಗಳು ಮತ್ತು ದೇವಾಲಯಗಳು ಅಸ್ಪೃಶ್ಯರಿಗೆ ಮುಕ್ತವಾಗಿರಬೇಕು ಎಂದು ಪ್ರತಿಪಾದಿಸಿದರು. ಅವರು ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗವಹಿಸಿದ್ದರು ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಜೈಲುವಾಸ ಅನುಭವಿಸಿದ್ದರು .
    ಜವಾಹರಲಾಲ್ ನೆಹರು ತಾತ್ಕಾಲಿಕ ಸರ್ಕಾರವನ್ನು ರಚಿಸಿದಾಗ, ಜಗಜೀವನ್ ರಾಮ್ ಅದರ ಅತ್ಯಂತ ಕಿರಿಯ ಸಚಿವರಾಗಿದ್ದರು. ಸ್ವಾತಂತ್ರ್ಯದ ನಂತರ, ಅವರನ್ನು ದೇಶದ ಮೊದಲ ಕಾರ್ಮಿಕ ಸಚಿವರನ್ನಾಗಿ ನೇಮಿಸಲಾಯಿತು. ಅವರು ರೈಲ್ವೆ, ಆಹಾರ ಮತ್ತು ಕೃಷಿ, ಸಾರಿಗೆ ಮತ್ತು ಸಂವಹನ, ನೀರಾವರಿ ಮತ್ತು ರಕ್ಷಣೆ ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. ಅವರು ರಕ್ಷಣಾ ಸಚಿವರಾಗಿದ್ದಾಗ ೧೯೭೧ರ ಭಾರತ-ಪಾಕಿಸ್ತಾನ ಯುದ್ಧ ನಡೆಯಿತು. ತುರ್ತು ಪರಿಸ್ಥಿತಿಯ ನಂತರ ಮೊರಾರ್ಜಿ ದೇಸಾಯಿ ಪ್ರಧಾನಿಯಾದಾಗ ಅವರು ಭಾರತದ ಉಪ ಪ್ರಧಾನ ಮಂತ್ರಿಯೂ ಆಗಿದ್ದರು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಚಿಕ್ಕಮಗಳೂರು ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್, ಸಮಾಜಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮಾಲತಿ ಸ್ವಾಗತಿಸಿ, ಹೆಚ್.ಡಿ.ರೇವಣ್ಣ ವಂದಿಸಿದರು, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
    118th birth anniversary of former Deputy Prime Minister Dr. Babu Jagjivan Ram
  • ಬೆಲೆ ಏರಿಕೆ ಖಂಡಿಸಿ ಆಮ್‌ಆದ್ಮಿ ಪಕ್ಷ ಜನಜಾಗೃತಿ ಅಭಿಯಾನ

    ಬೆಲೆ ಏರಿಕೆ ಖಂಡಿಸಿ ಆಮ್‌ಆದ್ಮಿ ಪಕ್ಷ ಜನಜಾಗೃತಿ ಅಭಿಯಾನ

    ಚಿಕ್ಕಮಗಳೂರು:  ರಾಜ್ಯಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಹಾಗೂ ಕೇಂದ್ರ ಸರ್ಕಾರ ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸದಿರುವುದನ್ನು ವಿರೋಧಿಸಿ ಏಪ್ರಿಲ್ ಮಾಹೆಯಲ್ಲಿ ಜನಜಾಗೃತಿ ಹಮ್ಮಿಕೊಂಡು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲು ಆಮ್‌ಆದ್ಮಿ ಪಕ್ಷ ನಿರ್ಧರಿಸಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪಕ್ಷದ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೇಮಂತ್ ಕುಮಾರ್ ಎಂ.ಎಸ್ ಅವರು ರಾಜ್ಯಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬೆಲೆ ಏರಿಕೆ ಮಾಡುತ್ತಿರುವುದರಿಂದ ಬಡವರು ಹಾಗೂ ಮಧ್ಯಮ ವರ್ಗಕ್ಕೆ ಹಾಗೂ ಜನಸಾಮಾನ್ಯರಿಗೆ ಜೀವನ ನಡೆಸುವುದು ತುಂಬ ಕಷ್ಟಕರವಾಗಿದೆ ಎಂದು ಹೇಳಿದರು.

    ಸುಮಾರು ೧ ತಿಂಗಳಲ್ಲಿ ಬಸ್ ದರ, ಮೆಟ್ರೋ ದರ, ಹಾಲಿನ ಉತ್ಪನ್ನಗಳ ದರ, ಡೀಸೆಲ್ ದರ ಏರಿಸಿರುವುದರಿಂದ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಿರುವುದರಿಂದ ಸರ್ಕಾರದ ಗಮನ ಸೆಳೆಯಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಆರಂಭಿಸಿದೆ ಎಂದು ತಿಳಿಸಿದರು.

    ಕೇಂದ್ರ ಮತ್ತು ರಾಜ್ಯಸರ್ಕಾರ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಸಾಮಾನ್ಯ ಜನರ ಬಗ್ಗೆ ಈ ಎರಡು ಸರ್ಕಾರಗಳಿಗೆ ಕಾಳಜಿ ಇಲ್ಲ. ಈ ಹಿನ್ನೆಲೆಯಲ್ಲಿ ಸುಗಮ ಜೀವನ ನಡೆಸಲು ಅನುಕೂಲವಾಗುವಂತೆ ಎಲ್ಲಾ ದರಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

    ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಜಿಲ್ಲೆಯ ಐದೂ ಶಾಸಕರು ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿದರು.

    ನಗರದ ಕೆಎಸ್‌ಆರ್‌ಟಿಸಿ ಗ್ರಾಮೀಣ ಬಸ್ ನಿಲ್ದಾಣ ಮಳೆಗಾಲ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಕೆಸರುಗದ್ದೆಯಂತಾಗುತ್ತಿದ್ದು, ತಕ್ಷಣ ಈ ಬಗ್ಗೆ ಸರ್ಕಾರದ ಗಮನ ಸೆಳೆದು ಕಾಂಕ್ರೀಟ್ ನೆಲಹಾಸು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

    ನಗರದ ಹೃದಯ ಭಾಗದಲ್ಲಿರುವ ಬಸವನಹಳ್ಳಿ ಕೆರೆ ಏರಿಮೇಲೆ ರಾತ್ರಿ ಸಮಯದಲ್ಲಿ ತುಂಬಾ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಈ ರಸ್ತೆಗೆ ಬೀದಿದೀಪ ಅಳವಡಿಸುವಂತೆ ಆಗ್ರಹಿಸಿದ ಅವರು, ನಗರದ ಎಲ್ಲಾ ರಸ್ತೆಗಳು ಯುಜಿಡಿ ಅಮೃತ್ ಯೋಜನೆ ಕಾಮಗಾರಿ ಸಂದರ್ಭದಲ್ಲಿ ಹಾನಿಯಾಗಿದ್ದು, ಅವ್ಯವಸ್ಥೆಯ ಆಗರವಾಗಿದೆ ಎಂದು ದೂರಿದರು.

    ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಇನ್ನೊಂದು ತಿಂಗಳಲ್ಲಿ ಸೂಕ್ತ ಕ್ರಮ ಕೈಗೊಂಡು ಅಭಿವೃದ್ಧಿಪಡಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಂಥೋಣಿ, ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ಪ್ರಭು, ಸಂಘಟನಾ ಕಾರ್ಯದರ್ಶಿ ರಂಗನಾಥ್, ಅಲ್ಪಸಂಖ್ಯಾತ ಘಟಕದ ಮುಖಂಡ ವಸೀಂ ಪಾಶ ಉಪಸ್ಥಿತರಿದ್ದರು.

    Aam Aadmi Party launches public awareness campaign against price hike

  • ಶ್ರೀ ಮಳಲೂರಮ್ಮ ದೇವಿ ಜಾತ್ರಾ ಮಹೋತ್ಸವ ಸಂಪನ್ನ

    ಶ್ರೀ ಮಳಲೂರಮ್ಮ ದೇವಿ ಜಾತ್ರಾ ಮಹೋತ್ಸವ ಸಂಪನ್ನ

    ಚಿಕ್ಕಮಗಳೂರು:  ತಾಲ್ಲೂಕಿನ ಮಳಲೂರು ಗ್ರಾಮದ ಶ್ರೀ ಮಳಲೂರಮ್ಮ ದೇವಿಯ ಜಾತ್ರ ಮಹೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗ್ರಾಮೀಣ ಶೈಲಿಯಲ್ಲಿ ಅತ್ಯಂತ ಶ್ರದ್ದಾಭಕ್ತಿಯಿಂದ ಪೂಜಾವಿಧಿವಿಧಾನಗಳು ನೆರವೇರಿಸಿ ಸಂಪನ್ನಗೊಂಡಿತು.

    ಶ್ರೀ ಮಳಲೂರಮ್ಮ ದೇವಾಲಯದ ರಥೋತ್ಸವ ಅಂಗವಾಗಿ ಸುಮಾರು ಆರೇಳು ಹಳ್ಳಿಗಳ ಗ್ರಾಮ ಸ್ಥರು ಶೃಂಗಾರಗೊಂಡ ಜೋಡೆತ್ತಿನ ಬಂಡಿಯಲ್ಲಿ ಆಗಮಿಸಿ ವಿಶೇಷಪೂಜೆಯಲ್ಲಿ ಭಾಗಿಯಾದರು. ತೇರು ಎಳೆಯುವುದಕ್ಕೂ ಮುನ್ನ ಜೋಡೆತ್ತು, ಟ್ರ್ಯಾಕ್ಟರ್‌ಗಳಲ್ಲಿ ಕುಟುಂಬಸ್ಥರು ಕುಳಿತು ದೇವಾಲಯ ಸುತ್ತಮುತ್ತಲು ಮೆರವಣಿಗೆ ಹಾಕಿದರೆ ಬದುಕು ಸುಗಮವಾಗಲಿದೆ ಎಂಬ ಪ್ರತೀತಿಯಿದೆ.

    ಮಳಲೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಕ್ಕೆ ದೊಡ್ಡಹಬ್ಬದಂತಿರುವ ರಥೋತ್ಸವಕ್ಕೆ ಮಹಿ ಳೆಯರು, ಮಕ್ಕಳು ಹಾಗೂ ವೃದ್ದರು ಗ್ರಾಮೀಣ ವೇಷಭೂಷಣದಲ್ಲಿ ಆಗಮಿಸಿದರು. ಕೆಲವೆಡೆ ಮಹಿಳೆಯ ರು ಬಳೆಗಾರರಿಂದ ಬಳೆ ತೊಡಿಸಿಕೊಂಡರು. ವಿಪರೀತ ಬೇಸಿಗೆಯಾದ ಕಾರಣ ಭಕ್ತಾಧಿಗಳು ಹೆಚ್ಚಿನ ಭಾಗ ತಂಪುಪಾನೀಯ, ಕಲ್ಲಂಗಡಿ ಗಾಡಿಗಳಲ್ಲಿ ಬಾಯಾರಿಕೆ ನೀಗಿಸಿಕೊಂಡರು.

    ಜಾತ್ರಾ ಮಹೋತ್ಸವದಲ್ಲಿ ಜಿಲೇಬಿ, ಮೈಸೂರುಪಾಕ್, ಕಾರುಪೂರಿ, ಬೋಂಡಾ, ಲಡ್ಡು, ಕಬ್ಬಿನಹಾಲು ಅಂಗಡಿಮುಂಗಟ್ಟುಗಳು ಹೆಚ್ಚಿತ್ತು. ಯುವಕರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಅಲ್ಲಲ್ಲಿ ಮಹಿಳೆಯರು, ಯುವತಿಯರು ಶೃಂಗಾರ ವಸ್ತುಗಳ ಕಡೆಹೆಚ್ಚು ಆಸಕ್ತಿ ವಹಿಸುವುದು ಸಾಮಾನ್ಯವಾಗಿತ್ತು.
    ಒಟ್ಟಾರೆ ಶ್ರೀ ಮಳಲೂರಮ್ಮ ದೇವಿಯ ಜಾತ್ರ ಮಹೋತ್ಸವ ಸಂಪೂರ್ಣ ಹಳ್ಳಿಸೊಗಡಿನ ಜರುಗಿತು. ಕೆಲವು ಪಟ್ಟಣದಿಂದ ಬಂದ ಭಕ್ತಾಧಿಗಳಿಗೆ ಹಳ್ಳಿಗಳ ಜಾತ್ರಾ ವೈಭವವು ಸ್ಪೂರ್ತಿ ನೀಡಿದರೆ, ಹಿರಿಯರಿಗೆ ಬಾಲ್ಯದಲ್ಲಿ ಸಿಹಿ ನೆನಪುಗಳು ಮರುಕಳಿಸಿದವು.

    Sri Malaluramma Devi Jatra Festival is a success

  • ನಿಂಬಿಯಾ ಬನದ ಮ್ಯಾಗಾ ಚಲನಚಿತ್ರ ತೆರೆಗೆ

    ನಿಂಬಿಯಾ ಬನದ ಮ್ಯಾಗಾ ಚಲನಚಿತ್ರ ತೆರೆಗೆ

    ಚಿಕ್ಕಮಗಳೂರು: ಕನ್ನಡ ಕಠೀರವ ಡಾ|| ರಾಜ್‌ಕುಮಾರ್, ಮೊಮ್ಮಗ ಷಣ್ಮುಖ ಗೋವಿ ಂದರಾಜ್ ನಾಯಕ ನಟನಾಗಿ ನಟಿಸಿರುವ ನಿಂಬಿಯಾ ಬನದ ಮ್ಯಾಗಾ ಚಿತ್ರ ನಾಗಲಕ್ಷ್ಮೀ ಚಿತ್ರಮಂದಿರದಲ್ಲಿ ಶುಕ್ರವಾರ ಬಿಡುಗಡೆ ದಿನದಂದು ಕನ್ನಡಸೇನೆ, ಅಪ್ಪು ಬ್ರಿಗೇಡ್ ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಯಶಸ್ವಿ ಪ್ರದರ್ಶನಕ್ಕಾಗಿ ಕೇಕ್ ಕತ್ತರಿಸಿ ಸಿಹಿಹಂಚುವ ಮೂಲಕ ಶುಭ ಹಾರೈಸಿದರು.

    ಈ ವೇಳೆ ಮಾತನಾಡಿದ ಹಿರಿಯ ವೈದ್ಯ ಡಾ|| ಜೆ.ಪಿ.ಕೃಷ್ಣೇಗೌಡ ಕಲಾದೇವಿಯು ಡಾ|| ರಾಜ್‌ಕುಮಾ ರ್ ಕುಟುಂಬದಲ್ಲಿ ಕರುಳಬಳ್ಳಿಯಂತೆ ವಿಶಾಲವಾಗಿ ಹಬ್ಬಿಕೊಂಡಿದೆ. ಇದಕ್ಕೆ ಷಣ್ಮುಖ ಗೋವಿಂದ್ ಪ್ರಥಮ ಚಿತ್ರದಲ್ಲೇ ಅದ್ಬುತವಾಗಿ ನಟಿಸಿ ಡಾ|| ರಾಜ್‌ಕುಮಾರ್ ಒಮ್ಮೆ ತೆರೆ ಮೇಲೆ ನೋಡುವಂತ ಭಾಗ್ಯ ಮರುಕಳಿಸು ವಂತಾಯಿತು ಎಂದರು.

    ಮಗುವಿನಿಂದ ತಾಯಿ ದೂರವಾದ ಬಳಿಕ, ತಾಯಿ ಪ್ರೀತಿಯನ್ನು ಹುಡುಕಾಡಿ ಬರುವಂಥ ಚಿತ್ರಕಥೆ ಅದ್ಬುತವಾಗಿ ನಿರ್ದೇಶಿಸಲಾಗಿದೆ. ಅಲ್ಲದೇ ಜಿಲ್ಲೆಯ ಕಳಸಾಪುರ, ಹೊಲದಗದ್ದೆ ಸೇರಿದಂತೆ ಮಲೆನಾಡು ಹಾಗೂ ಬಯಲುಸೀಮೆ ಭಾಗಗಳಲ್ಲಿ ಅದ್ಬುತವಾಗಿ ಚಿತ್ರೀಕರಿಸಿರುವ ತಂಡಕ್ಕೆ ಧನ್ಯವಾದಗಳು ತಿಳಿಸಿದರು.

    ಬಹುಶ ಕನ್ನಡಚಿತ್ರಗಳು ದೇಶ-ವಿದೇಶಗಳಲ್ಲಿ ಹೆಚ್ಚು ಮನ್ನಣೆ ಪಡೆಯಲು ಡಾ|| ರಾಜ್‌ಕುಮಾರ್ ಕೊ ಡುಗೆ ಅಪಾರವಿದೆ. ಆ ಸಾಲಿನಲ್ಲಿ ಇತ್ತೀಚಿನ ನಾಯಕರು ಮುಂಚೂಣಿ ವಹಿಸಿರುವುದು ಹೆಮ್ಮೆಯ ಸಂಗತಿ. ಅದರಂತೆ ಷಣ್ಮುಖ ಗೋವಿಂದರಾಜ್ ನಟನೆಯ ಈ ಚಿತ್ರವು ನಾಡಿನಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ವಿ ದೊರಕಿ ತಾತನ ಕೀರ್ತಿ ಲಭಿಸುವಂತಾಗಲೀ ಶುಭ ಕೋರಿದರು.

    ವಿಶೇಷವೆಂದರೆ ಜಿಲ್ಲೆಯ ಎ.ಎನ್.ಮೂರ್ತಿ, ವಿ.ಕೆ.ರಘು ಸೇರಿದಂತೆ ಹಲವಾರು ಮಂದಿ ಚಿತ್ರದಲ್ಲಿ ನಟಿಸಿ ಜೀವತುಂಬುವ ಕೆಲಸ ಮಾಡಿದ್ದಾರೆ. ಜೊತೆಗೆ ಹಿರಿಯ ಛಾಯಾಗ್ರಾಹಕ ಎ.ಎನ್.ಮೂರ್ತಿ ಅಪ್ಪಟ ರಾಜ್‌ಕುಮಾರ್ ಅಭಿಮಾನಿಯಾಗಿದ್ದಾರೆ. ಅಲ್ಲದೇ ಪ್ರತಿವರ್ಷವು ಜನ್ಮದಿನ ಆಚರಿಸುತ್ತಿರುವುದು ಶ್ಲಾಘನೀ ಯ ಎಂದರು.

    ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ಕನ್ನಡಚಿತ್ರಕ್ಕೆ ಡಾ|| ರಾಜ್‌ಕುಮಾ ರ್ ಕುಟುಂಬ ಅಪಾರ ಕೊಡುಗೆ ನೀಡಿವೆ. ಆ ಸಾಲಿನಲ್ಲಿ ಉದಯೋನ್ಮುಖ ನಟನಾಗಿ ಬಂದಿರುವ ಷಣ್ಮುಖ ಗೋವಿಂದರಾಜ್ ಚಿತ್ರವು ಉತ್ತಮ ಪ್ರದರ್ಶನ ಕಾಣಲಿ. ಜೊತೆಗೆ ಎ.ಎನ್.ಮೂರ್ತಿ ಸೇರಿದಂತೆ ಸ್ಥಳೀಯ ಕಲಾವಿದರಿಗೆ ಅವಕಾಶ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಎನ್.ಮೂರ್ತಿ ಮಾತನಾಡಿ ಪದ್ಮಭೂಷಣ ಡಾ|| ರಾಜ್‌ಕುಮಾರ್ ದೊಡ್ಡಮನೆ ಗುಡಿ ಇಂದು ನಿಂಬಿಯಾ ಬನದ ಮ್ಯಾಗಾ ಚಿತ್ರವು ಅಶೋಕ್ ಕಡಬ ಹಾಗೂ ಮಾದೇಶ ಸಾ ರಥ್ಯದಲ್ಲಿ ಬಹುಪಾಲು ಚಿಕ್ಕಮಗಳೂರು ಸುತ್ತಮುತ್ತಲಿನಲ್ಲಿ ಚಿತ್ರೀಕರಿಸಲಾಗಿದೆ. ಅಲ್ಲದೇ ಮಲೆನಾಡಿನ ಸೌಗ ಂಧವನ್ನು ಸವಿಯಲು ಅಭಿಮಾನಿಗಳಿಗೆ ಇದೊಂದು ಸುವರ್ಣವಕಾಶವಾಗಲಿದೆ ಎಂದು ತಿಳಿಸಿದರು.

    ಇದೇ ವೇಳೆ ಚಿತ್ರಮಂದಿರದ ಮುಂಭಾಗದಲ್ಲಿ ದಿ|| ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮ ನ ಸಲ್ಲಿಸಲಾಯಿತು. ಬಳಿಕ ಚಿತ್ರದ ಬ್ಯಾನರ್‌ನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್, ಅಪ್ಪು ಬ್ರಿಗೇಡ್‌ನ ಶಿವು, ಆಯುರ್ವೇದಿಕ್ ವೈದ್ಯ ಡಾ|| ಚಂದ್ರಶೇಖರ್ ಸರ್ಜಾ, ಮುಖಂಡರುಗಳಾದ ಎಸ್.ಎಸ್. ವೆಂಕಟೇಶ್, ಅನ್ವರ್, ನಟ-ವಕೀಲ ವಿ.ಕೆ.ರಘು ಮತ್ತಿತರರು ಹಾಜರಿದ್ದರು.

    Nimbia Banada Maga movie to hit the screens

  • ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ರಾಮನವಮಿ ಉತ್ಸವ

    ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ರಾಮನವಮಿ ಉತ್ಸವ

    ಚಿಕ್ಕಮಗಳೂರು: ನಗರದ ಬಸವನಹಳ್ಳಿ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ೧೩೬ ನೇಯ ವ?ದ ರಾಮನವಮಿ ಉತ್ಸವ ಏಪ್ರಿಲ್ ೬ ರಿಂದ ೧೬ ರವರೆಗೆ ವಿವಿಧ ಸಂಗೀತ, ನೃತ್ಯ ಮತ್ತು ಹರಿಕಥಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶ್ರೀರಾಮೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್ ಪ್ರಭಾಕರ್ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಇಂದು ಈ ವಿ?ಯ ತಿಳಿಸಿದ ಅವರು ದೇಗುಲದಲ್ಲಿ ಪ್ರತಿನಿತ್ಯ ಬೆಳಿಗ್ಗೆ ೭ ರಿಂದ ೯ ರವರೆಗೆ ಸೂರ್ಯ ನಮಸ್ಕಾರ, ನವಗ್ರಹ ಜಪ, ರಾಮಾಯಣ ಮತ್ತು ವೇದ ಪಾರಾಯಣ, ದೇವರಿಗೆ ಅಭಿ?ಕ ಸೇರಿದಂತೆ ಪೂಜಾ ಕಾರ್ಯಕ್ರಮಗಳು ನಡೆಯುವುದು. ನಿತ್ಯ ಸಂಜೆ ೬ ಗಂಟೆಗೆ ಪ್ರಾಕಾರೋತ್ಸವ, ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ವಿವರಿಸಿದರು.

    ದೇವಾಲಯದಲ್ಲಿ ಏಪ್ರಿಲ್ ೬ ರಂದು ಬೆಳಿಗ್ಗೆ ೯ಕ್ಕೆ ರಾಮನವಮಿ ಪ್ರಯುಕ್ತ ವಸಂತ ಸೇವೆ, ಸಂಜೆ ೭:೩೦ ಕ್ಕೆ ವಿದುಷಿ ಡಾ.ಸುಮಿತ್ರಾನಂದ್ ಅವರಿಂದ ಹರಿಕಥೆ, ೭ ರಂದು ಸಂಜೆ ೭ಕ್ಕೆ ಬೆಂಗಳೂರಿನ ವಿದ್ವಾನ್ ಲಕ್ಷ್ಮೀನಾರಾಯಣ ಭಟ್ ವೃಂದದಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ೮ ರಂದು ಬೆಂಗಳೂರಿನ ವಿದುಷಿ ಸಂಸ್ಕೃತಿ ಕೃ? ಮತ್ತು ಸಂಗಡಿಗರಿಂದ ಭರತನಾಟ್ಯ ಪ್ರದರ್ಶನ, ೯ ರಂದು ಬೆಂಗಳೂರಿನ ವಿದುಷಿ ಅಹಿಕಾ ನಾಗದೀಪ್ ತಂಡದವರಿಂದ ವೀಣಾವಾದನ, ೧೦ ರಂದು ಬೆಂಗಳೂರಿನ ವಿದ್ವಾನ್ ಶ್ರೀಕಂಠಭಟ್ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತ, ೧೧ರಂದು ಖ್ಯಾತ ಗಾಯಕ ಡಾ.ವಿದ್ಯಾಭೂ?ಣ ಅವರಿಂದ ಹಾಡುಗಾರಿಕೆ, ೧೨ ರಂದು ಬೆಂಗಳೂರಿನ ವಿದ್ವಾನ್ ಎಂ.ಎಸ್.ದೀಪಕ್ ತಂಡದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದು ಮಾಹಿತಿ ನೀಡಿದರು.

    ದೇವಸ್ಥಾನದಲ್ಲಿ ಏಪ್ರಿಲ್ ೧೩ ರಂದು ಬೆಳಿಗ್ಗೆ ೯ಕ್ಕೆ ಶ್ರೀ ರಾಮತಾರಕ ಹೋಮದೊಂದಿಗೆ ಶ್ರೀರಾಮ ಪಟ್ಟಾಭಿ?ಕ ನಡೆಯಲಿದ್ದು, ಅಂದೇ ಬೆಳಿಗ್ಗೆ ೧೧ ಗಂಟೆಗೆ ಗಮಕ ವಿದ್ವಾಂಸ ರಾಮಸುಬ್ರಾಯ ಶೇಟ್ ಅವರಿಂದ ರಾಮಾಯಣ ಗಮಕ ವಾಚನದ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿದೆ ಎಂದರು.

    ದೇಗುಲದ ಆವರಣದಲ್ಲಿ ಏಪ್ರಿಲ್ ೧೪ ರಂದು ಸಂಜೆ ೭ ಗಂಟೆಗೆ ಮೈಸೂರಿನ ವಿದ್ವಾನ್ ಹನುಮಂತರಾಜು ಸಂಗಡಿಗರಿಂದ ಲಯ, ನಾದ, ತಾಳ, ವಾದ್ಯ ಕಛೇರಿ ಏರ್ಪಡಿಸಲಾಗಿದೆ. ೧೫ ರಂದು ಮೈಸೂರಿನ ವಿದುಷಿ ಆರ್.ನಿತ್ಯಶ್ರೀ ವೃಂದದಿಂದ ಶಾಸ್ತ್ರೀಯ ಸಂಗೀತ, ೧೬ ರಂದು ಚಿಕ್ಕಮಗಳೂರಿನ ಕು.ಅರ್ಪಿತಾ ತಂಡದವರಿಂದ ಶಾಸ್ತ್ರೀಯ ಕಾರ್ಯಕ್ರಮದೊಂದಿಗೆ ಒಟ್ಟು ೧೧ ದಿನಗಳ ರಾಮೋತ್ಸವ ಕಾರ್ಯಕ್ರಮ ಮುಕ್ತಾಯಗೊಳ್ಳುವುದು ಎಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎನ್.ಆರ್.ರಾಮಕೃ?, ಸದಸ್ಯರುಗಳಾದ ಪ್ರಸಾದ್, ಸೋಮಶೇಖರ್, ಹೆಚ್.ಎಸ್ ಗೋಪಿನಾಥ್, ಬಾಲಕೃ? ಎನ್.ಎ ಇದ್ದರು.

    Ram Navami festival at Venugopalaswamy temple

  • ಸುಪ್ರೀಂ ಕೋರ್ಟಿನ ತೀರ್ಪಿನಂತೆ ಯಥಾಸ್ಥಿತಿ ಪಿಂಚಣಿ ಪರಿಷ್ಕರಿಸುವಂತೆ ಆಗ್ರಹಿಸಿ ಪ್ರತಿಭಟನೆ

    ಸುಪ್ರೀಂ ಕೋರ್ಟಿನ ತೀರ್ಪಿನಂತೆ ಯಥಾಸ್ಥಿತಿ ಪಿಂಚಣಿ ಪರಿಷ್ಕರಿಸುವಂತೆ ಆಗ್ರಹಿಸಿ ಪ್ರತಿಭಟನೆ

    ಚಿಕ್ಕಮಗಳೂರು: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಯ ಕಾನೂನು ಜಾರಿಗೆ ತರುತ್ತಿರುವುದನ್ನು ಖಂಡಿಸಿ ಸುಪ್ರೀಂ ಕೋರ್ಟಿನ ತೀರ್ಪಿನಂತೆ ಯಥಾಸ್ಥಿತಿ ಪಿಂಚಣಿ ಪರಿಷ್ಕರಿಸುವಂತೆ ಆಗ್ರಹಿಸಿ ಇಂದು ನಗರದ ಆಜಾದ್ ವೃತ್ತದಲ್ಲಿ ಕೇಂದ್ರ ಸರ್ಕಾರಿ ಪಿಂಚಣಿದಾರರ ಒಕ್ಕೂಟ ಪ್ರತಿಭಟನೆ ನಡೆಸಿತು.

    ಈ ಪ್ರತಿಭಟನೆಯ ನೇತೃತ್ವವನ್ನು ಜಿಲ್ಲೆಯ ಕೇಂದ್ರ ಸರ್ಕಾರಿ ಪಿಂಚಣಿದಾರರ ಒಕ್ಕೂಟ, ಬಿಎಸ್‌ಎನ್‌ಎಲ್, ಕಾಫಿ ಮಂಡಳಿ, ಅಂಚೆ ಇಲಾಖೆ, ಅಬಕಾರಿ ಇಲಾಖೆ ಹಾಗೂ ಸಾಂಬಾರ್ ಮಂಡಳಿಯ ನಿವೃತ್ತ ನೌಕರರು ವಹಿಸಿ ಪ್ರತಿಭಟನೆ ನಡೆಸಿದರು.

    ಕೇಂದ್ರಸರ್ಕಾರ ಮಾ.೨೧ ರಂದು ಕಾರ್ಮಿಕ ವಿರೋಧಿ ಕಾನೂನನ್ನು ಲೋಕಸಭೆಯಲ್ಲಿ ಮಂಡಿಸಿದ ಹಣಕಾಸು ಮಸೂದೆಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಕೇಂದ್ರಸರ್ಕಾರದ ನಿವೃತ್ತ ನೌಕರರಿಗೆ ಪಿಂಚಣಿ ಪರಿಷ್ಕರಣೆ ಇರುವುದಿಲ್ಲ ಎಂಬ ಬಿಲ್ ಪಾಸ್ ಮಾಡಿರುವುದನ್ನು ಖಂಡಿಸಿದರು.

    ೧೯೭೨ ರ ಪಿಂಚಣಿ ಕಾಯ್ದೆಗೆ ತಿದ್ದುಪಡಿ ತಂದು ಈ ಬಿಲ್ ಪಾಸ್ ಮಾಡಲು ಹೊರಟಿದೆ. ೧೯೮೩ ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಸಂವಿಧಾನ ಪೀಠದ ತೀರ್ಪಿನ ಪ್ರಕಾರ ಪಿಂಚಣಿಯನ್ನು ಪರಿಷ್ಕರಿಸಿ ಹಳಬರು ಮತ್ತು ಹೊಸಬರಿಗೆ ಯಾವುದೇ ತಾರತಮ್ಯ ಇಲ್ಲದೆಂತೆ ಮಹತ್ವದ ತೀರ್ಪು ನೀಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

    ಅದರಂತೆ ಎಲ್ಲಾ ವೇತನ ಆಯೋಗದಲ್ಲಿ ಪಿಂಚಣಿ ಪರಿಷ್ಕರಣೆಗೆ ಸರ್ಕಾರ ಆದೇಶ ನೀಡಿತ್ತು. ಇದೀಗ ಕೇಂದ್ರಸರ್ಕಾರ ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ಪರಿಷ್ಕರಣೆ ಇಲ್ಲವೆಂದು ತೀರ್ಮಾನಿಸಿರುವುದನ್ನು ವಿರೋಧಿಸಿದರು.

    ಸರ್ಕಾರದ ಈ ನಿರ್ಧಾರದಿಂದಾಗಿ ಪಿಂಚಣಿದಾರರಿಗೆ ಆಘಾತವಾಗಿದ್ದು, ಸತತ ಬೆಲೆ ಏರಿಕೆ ಹಾಗೂ ನಿವೃತ್ತರಿಗೆ ವಯೋಸಹಜ ಕಾಯಿಲೆಗಳು ಬರುತ್ತಿರುವುದರಿಂದ ಬದುಕು ದುಸ್ಥರವಾಗಿದೆ. ಈ ಎಲ್ಲಾ ಅಂಶಗಳನ್ನು ಕೇಂದ್ರ ಸರ್ಕಾರ ಪರಿಗಣಿಸಿ ಪಿಂಚಣಿ ಪರಿಷ್ಕರಿಸುವುದಿಲ್ಲ ಎಂಬ ಹುನ್ನಾರ ಸಂವಿಧಾನ ಬಾಹಿರ ಎಂದು ದೂರಿದರು.

    ಈ ಸಂಬಂಧ ಸಂವಿಧಾನದಲ್ಲಿ ಪಿಂಚಣಿದಾರರಿಗೆ ರಕ್ಷಣೆ ನೀಡಿದ್ದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ್ ರವರ ನೇತೃತ್ವದ ಸಂವಿಧಾನ ಪೀಠ ಪಿಂಚಣಿಯಲ್ಲಿ ಯಾವುದೇ ತಾರತಮ್ಯ ಮಾಡುವ ಹಾಗಿಲ್ಲ, ಪಿಂಚಣಿ ಪರಿಷ್ಕರಣೆ ನಿರಂತರವಾಗಿರಬೇಕು ಎಂದು ೧೯೮೩ ರಲ್ಲಿ ಮಹತ್ವದ ತೀರ್ಪನ್ನು ಕೊಟ್ಟಿದ್ದು, ಈಗಿನ ಕೇಂದ್ರಸರ್ಕಾರ ಅದನ್ನು ಧಿಕ್ಕರಿಸಿ ಪಿಂಚಣಿ ಪರಿಷ್ಕರಣೆ ಮಾಡದಂತೆ ನಿರ್ಧರಿಸಿರುವುದನ್ನು ಖಂಡಿಸಿದರು.

    ಸರ್ಕಾರದ ಈ ಕಾರ್ಮಿಕ ವಿರೋಧಿ ನೀತಿಯನ್ನು ಪ್ರತಿಭಟಿಸಿ ದೇಶಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಈ ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸುವಂತೆ ವಿನಂತಿಸಿದ್ದಾರೆ.

    ಪ್ರತಿಭಟನೆಯಲ್ಲಿ ಕಾಫಿ ಮಂಡಳಿ ನಿವೃತ್ತ ಸಂಪರ್ಕಾಧಿಕಾರಿ ಅಬೂಬಕರ್ ಸಿದ್ಧಿಕ್, ಬಿಎಸ್‌ಎನ್‌ಎಲ್ ನಿವೃತ್ತ ನೌಕರರಾದ ಹಿರಿಯಣ್ಣ, ರಾಘವೇಂದ್ರ, ಅಧ್ಯಕ್ಷ ಶಿವಣ್ಣ, ಕಾಫಿಬೋರ್ಡ್‌ನ ರಾಜೇಂದ್ರ, ಜಯಚಂದ್ರ ಮತ್ತಿತರರು ಭಾಗವಹಿಸಿದ್ದರು.

    Protest demanding revision of status quo pension as per Supreme Court verdict

  • ದೇವರ ದಾಸಿಮಯ್ಯ ಸರ್ವ ಸಮುದಾಯಗಳಿಗೆ ಮಾದರಿ

    ದೇವರ ದಾಸಿಮಯ್ಯ ಸರ್ವ ಸಮುದಾಯಗಳಿಗೆ ಮಾದರಿ

    ಚಿಕ್ಕಮಗಳೂರು: ಇಡೀ ಮಾನವ ಕುಲಕ್ಕೆ ಸನ್ಮಾರ್ಗವನ್ನು ತಮ್ಮ ವಚನಗಳ ಮೂಲಕ ಸಾರಿದ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ಸರ್ವ ಸಮುದಾಯಗಳಿಗೆ ಮಾದರಿ ಎಂದು ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಹೆಚ್.ಎಂ ನಾರಾಯಣ ತಿಳಿಸಿದರು.

    ಅವರು ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಹೇಮಾಂಗಣ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದೇವಾಂಗ ಸಂಘ, ಕುರುಹಿನಶೆಟ್ಟಿ ಸಂಘ, ನೇಕಾರ ಒಕ್ಕೂಟ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ದೇವರ ದಾಸಿಮಯ್ಯನವರ ೧೦೪೬ನೇ ಜಯಂತಿ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.

    ದೇವರ ದಾಸಿಮಯ್ಯನವರು ತಮ್ಮ ಕಾಲದಲ್ಲಿಯೇ ಮಹಿಳೆ ಮತ್ತು ಪುರುಷರಿಗೆ ಸಮಾನ ಹಕ್ಕು ನೀಡಿದರು. ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ, ದಾಸಿಮಯ್ಯನವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತದೆ. ಜೀವನದ ಅನುಭವ ಅವರ ವಚನಗಳಲ್ಲಿವೆ ಎಂದು ಹೇಳಿದರು.

    ವಚನಗಳ ಮೂಲಕ ಜಾತಿ, ಧರ್ಮಗಳ ವಿರುದ್ಧ ಸಿಡಿದೆದ್ದು ಎಲ್ಲರೂ ಸಮಾನರು ಎಂದು ಸಾರಿದ ದೇವರ ದಾಸಿಮಯ್ಯನವರು, ಸಾಮಾಜಿಕ ಕ್ರಾಂತಿಗೆ ಬುನಾದಿ ಹಾಕಿದದವರು. ವಿಶ್ವದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದವರು. ಅಂಧಕಾರದಿಂದ ಅಜ್ಞಾನದ ಕಡೆಗೆ ಅಂದಿನ ಶತಮಾನದಲ್ಲಿಯೇ ಹೋರಾಡಿದ ಹಿರಿಮೆ ಅವರದಾಗಿತ್ತು ಎಂದು ಶ್ಲಾಘಿಸಿದರು.

    ಅಜ್ಜಂಪುರದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು, ಸರ್ಕಾರದ ಆದೇಶದಂತೆ ಇಂದು ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳ ತೀರ್ಮಾನದಂತೆ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.

    ಈ ಸಂದರ್ಭದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿ ಸಿ.ಟಿ.ಶಿವರಾಂ, ಖಜಾಂಚಿ ಶಿವರುದ್ರಪ್ಪ, ರಾಜ್ಯ ನಿರ್ದೇಶಕ ಹರೀಶ್‌ಕುಮಾರ್, ಜಂಟಿ ಕಾರ್ಯದರ್ಶಿ ಸಿ.ಎಸ್.ರವಿಕುಮಾರ್, ಪತ್ರಿಕಾ ಕಾರ್ಯದರ್ಶಿ ಬಿ.ಎಂ.ಕುಮಾರ್, ಧರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

    Devaradasimayya is a role model for all communities

  • ಮಾತೃಭಾಷೆ ಕನ್ನಡ ಉಳಿಸಿ-ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ

    ಮಾತೃಭಾಷೆ ಕನ್ನಡ ಉಳಿಸಿ-ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ

    ಚಿಕ್ಕಮಗಳೂರು: ಭಾರತ ದೇಶದಲ್ಲಿ ಕೆಲವು ಭಾಷೆಗಳು ಕಾರಣಾಂತರಗಳಿಂದ ನಶಿಸುತ್ತಿರುವ ಈ ಸಂದರ್ಭದಲ್ಲಿ ಮಾತೃಭಾಷೆ ಕನ್ನಡವನ್ನು ನಶಿಸದಂತೆ ಉಳಿಸಿ ಬೆಳೆಸುವ ಜವಾಬ್ದಾರಿ ಉಪನ್ಯಾಸಕರು ಮತ್ತು ಎಲ್ಲರ ಮೇಲಿದೆ ಎಂದು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಡಿ. ತಮ್ಮಯ್ಯ ಕರೆನೀಡಿದರು.

    ಅವರು ಇಂದು ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಏರ್ಪಡಿಸಿದ್ದ ‘ಓ ನನ್ನ ಚೇತನ’ ಕನ್ನಡ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

    ದೇಶ ಸುತ್ತು ಕೋಶ ಓದು ಎಂಬ ಗಾದೆಯ ಕುರಿತು ವಿಶ್ಲೇಷಿಸಿದ ಶಾಸಕರು, ಮಾನವನ ಜೀವನದಲ್ಲಿ ಭಾಷೆ ಬಹಳ ಪ್ರಮುಖ ಸ್ಥಾನ ವಹಿಸುತ್ತದೆ. ಭಾರತದಲ್ಲಿ ಇರುವ ೩೦ ರಾಜ್ಯಗಳಲ್ಲಿ ಅವರದೇ ಆದ ಪ್ರಾದೇಶಿಕ ಭಾಷೆಗಳಿವೆ. ಈ ಎಲ್ಲಾ ಭಾಷೆಗಳಲ್ಲಿ ಶ್ರೇಷ್ಠವಾದದ್ದು ಕನ್ನಡ ಭಾಷೆ ಎಂದು ಶ್ಲಾಘಿಸಿದರು.

    ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಸಂಸ್ಕೃತಿ, ಕಲೆ, ಸಾಹಿತ್ಯ, ಭಾಷೆ, ಸುಭಿಕ್ಷ ಮತ್ತು ಕ್ಷೇಮವಾಗಿ ಸಂಪದ್ಭರಿತ ದೇವಾಲಯಗಳು ಇದ್ದು, ಕನ್ನಡ ನಾಡನ್ನು ಹೊರತುಪಡಿಸಿ ಬೇರೆಲ್ಲೂ ಈ ರೀತಿ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

    ನಾವೆಲ್ಲಾ ಕನ್ನಡ ನಾಡಿನಲ್ಲಿ ಹುಟ್ಟಿ ಮಾತೃಭಾಷೆ ಕನ್ನಡವನ್ನು ಕಲಿತು, ಕನ್ನಡ ಸಂಘಗಳ ಸ್ಥಾಪನೆ ಜೊತೆಗೆ ಕನ್ನಡ ಪರವಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ತಾಯಿ ಭುವನೇಶ್ವರಿಗೆ ವಂದಿಸಿದರು.

    ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಮುಂದೆ ಕನ್ನಡ ಐಚ್ಚಿಕ ವಿಷಯದಲ್ಲಿ ಎಂ.ಎ ಪದವಿ ಪಡೆಯಲು ಅನುಕೂಲವಾಗಲಿದೆ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

    ಓರ್ವ ಮಹಿಳೆ ಮಧ್ಯರಾತ್ರಿಯಲ್ಲಿ ನಿರ್ಭೀತಿಯಿಂದ ಓಡಾಡುವಂತಾದಾಗ ಸ್ವಾತಂತ್ರ್ಯಕ್ಕೆ ನಿಜ ಅರ್ಥ ಬರುತ್ತದೆ. ಈ ಕಾಲೇಜಿಗೆ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಸ್ತಾವನೆ ಸಲ್ಲಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದಿಂದ ಅನುದಾನ ತಂದು ಕಾಲೇಜು ಅಭಿವೃದ್ಧಿಪಡಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

    ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮೂಡಲಗಿರಿಯಪ್ಪ ಮಾತನಾಡಿ, ಕಾಲೇಜಿನ ಹೆಚ್ಚು ಕೊಠಡಿಗಳನ್ನು ನಿರ್ಮಾಣ ಮಾಡಲು ೫ ಕೋಟಿ ರೂ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ದಾಮೋದರ ಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಡಿಎಸ್‌ಜಿ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಸುಧ ಭಾಗವಹಿಸಿ ಅಕ್ಕನ ವಚನಗಳ ಸ್ತ್ರೀವಾದಿ ನೆಲೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

    ಪ್ರಾಧ್ಯಾಪಕರುಗಳಾದ ಶ್ರೀನಿವಾಸ್, ದೀಕ್ಷಿತ್, ಗ್ರಂಥಪಾಲಕ ದೇವರಾಜ್, ನಗರಸಭೆ ಸದಸ್ಯ ಶಾದಬ್ ಆಲಂಖಾನ್, ಧ್ರುವಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಮಾಲ ಸ್ವಾಗತಿಸಿದರು.

    It is everyone’s responsibility to preserve and nurture the mother tongue Kannada.

  • ಬೆಲೆ ಏರಿಕೆ ವಿರೋಧಿಸಿ ಏ.೫ಕ್ಕೆ ಜಿಲೆಯಾದ್ಯಂತ ಬಿಜೆಪಿ ಪ್ರತಿಭಟನೆ

    ಬೆಲೆ ಏರಿಕೆ ವಿರೋಧಿಸಿ ಏ.೫ಕ್ಕೆ ಜಿಲೆಯಾದ್ಯಂತ ಬಿಜೆಪಿ ಪ್ರತಿಭಟನೆ

    ಚಿಕ್ಕಮಗಳೂರು: ಹುಟ್ಟಿನಿಂದ ಸಾವಿನವರೆಗೂ ಬೆಲೆ ಏರಿಕೆ ಮಾಡಿರುವ ಅಪಕೀರ್ತಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ, ಸಲ್ಲುತ್ತಿದ್ದು, ರಾಜ್ಯ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಏ.೫ ರಂದು ಜಿಲೆಯಾದ್ಯಂತ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ತಿಳಿಸಿದರು.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲೇ ಅತ್ಯಂತ ದುಬಾರಿಯಾದ ಜೀವನವನ್ನು ಕರ್ನಾಟಕದ ಜನತೆಯು ನಡೆಸುವಂತಹ ಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ. ಗಾಳಿಯನ್ನು ಹೊರತು ಪಡಿಸಿ, ಮಿಕ್ಕೆಲ್ಲಾ ವಸ್ತುಗಳ ಬೆಲೆಯನ್ನು ಕಾಂಗ್ರೆಸ್ ಸರ್ಕಾರ ಹೆಚ್ಚಿಸಿದೆ. ಜನರ ಕಷ್ಟವನ್ನು ಕಿಂಚಿತ್ತು ಅರ್ಥ ಮಾಡಿಕೊಳ್ಳಲು ಅಸಮರ್ಥವಾದ – ಆಡಳಿತವನ್ನು ಸಿದ್ಧರಾಮಯ್ಯ ನೀಡುತ್ತಿದೆ. ಮತಕೊಟ್ಟು ಅಧಿಕಾರಕ್ಕೆ ತಂದ ಮತದಾರರಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ ಎಂದು ತರಾಟೆಗೆ ತೆಗೆದುಕೊಂಡರು.

    ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ೩ ರೂ ಹೆಚ್ಚಿಸುವ ಮೂಲಕ ಬೆಲೆ ಏರಿಕೆ ಪರ್ವಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ ಸರ್ಕಾರ ಈಗ ಹಾಲಿನ ದರವನ್ನು ರೂ.೪ ಹೆಚ್ಚಳ ಮಾಡುವವರೆಗೂ ಬಂದಿದ್ದು, ಕಿಂಚಿತ್ತು ಸಂವೇದನಾಶೀಲತೆಯಿಲ್ಲದಂತೆ ವರ್ತಿಸಿದೆ ಎಂದು ಆರೋಪಿಸಿದರು.

    ಹಾಲಿನ ದರವನ್ನು ಕಳೆದ ಎರಡು ವರ್ಷದಲ್ಲಿ ಮೂರು ಬಾರಿ ಒಟ್ಟು ೯ ರೂ. ಹೆಚ್ಚಿಸಿ, ಬಡ, ಮಧ್ಯಮದವರ ಮಗ್ಗಲು ಮುರಿಯುವ ಕೆಲಸ ಮಾಡಿದ್ದಾರೆ. ದೌರ್ಭಾಗ್ಯವೆಂದರೆ ಬೆಲೆಏರಿಕೆಯನ್ನು ಸಮರ್ಥಿಸಿಕೊಳ್ಳಲು ರೈತ ಸಮುದಾಯವನ್ನು ಗುರಾಣಿಯ ಹಾಗೆ ಬಳಸಿಕೊಳ್ಳುತ್ತಿರುವುದು ಶೋಚನೀಯ ಎಂದು ಟೀಕಿಸಿದರು.

    ಹೆಚ್ಚಳ ಮಾಡಿರುವ ದರವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂಬ ದಾರಿ ತಪ್ಪಿಸುವ ಮಾತನ್ನು ಸರ್ಕಾರ ಆಡುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಇದನ್ನೇ ಹೇಳಿ ದರ ಹೆಚ್ಚಿಸಿ ರೈತರು, ಗ್ರಾಹಕರಿಗೆ ವಂಚಿಸಿದೆ. ಇಷ್ಟಾದರೂ ಇತರ ರಾಜ್ಯಗಳ ಹಾಲು ದರಕ್ಕೆ ಹೋಲಿಕೆ ಮಾಡಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯದ ಜನ ಮತ ಕೊಟ್ಟಿರುವುದು ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಹೊರತು, ಹೊರ ರಾಜ್ಯದ ಸರ್ಕಾರ ಚುನಾಯಿಸಲು ಅಲ್ಲ ಎಂದು ಲೇವಡಿ ಮಾಡಿದರು.

    ಇವರಿಗೆ ಇತರ ರಾಜ್ಯಗಳ ದರವನ್ನು ಹೋಲಿಕೆ ಮಾಡುವುದಾದರೆ ಬಿಜೆಪಿ ಆಡಳಿತವಿರುವ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿ ನಮ್ಮ ರಾಜ್ಯದ ಇಂಧನ ದರವನ್ನು ಅದರ ಸಮಕ್ಕೆ ತರಬೇಕೆಂದು ಒತ್ತಾಯಿಸುತ್ತೇವೆ ಎಂದರು.

    ಕಾಂಗ್ರೆಸ್ ಸರ್ಕಾರ ಎಷ್ಟು ಬರಗೆಟ್ಟಿದೆಯೆಂದರೆ ಬಡ ರೋಗಿಗಳು ಚಿಕಿತ್ಸೆಗೆ ಬರುವ ಸರ್ಕಾರಿ ಆಸ್ಪತ್ರೆಯನ್ನು ಸುಲಿಗೆ ಕೇಂದ್ರವನ್ನಾಗಿ ಮಾಡಿಕೊಂಡಿದೆ. ಉಚಿತ ಚಿಕಿತ್ಸೆ ನೀಡಬೇಕಾದ ಸರ್ಕಾರ ಬಡವರ ಹಣವನ್ನು ಆದಾಯ ಮೂಲವಾಗಿಸಿರುವುದು ಅತ್ಯಂತ ನೋವಿನ ಸಂಗತಿ ಎಂದರು.

    ವಿದ್ಯುತ್ ದರವನ್ನು ಹೆಚ್ಚಳ ಮಾಡಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮಾರಣಾಂತಿಕ ಪೆಟ್ಟನ್ನು ನೀಡಿದ್ದಾರೆ. ವಿದ್ಯುತ್ ಇಲಾಖೆಯ ನೌಕರರಿಗೆ ಪಿಂಚಣಿ ಕೊಡಲು ಹಣವಿಲ್ಲದೆ ದಿವಾಳಿಯಾಗಿರುವ ಸರ್ಕಾರ ಮತ್ತೆ ಗ್ರಾಹಕರಿಂದ ಸುಲಿಗೆ ಮಾಡಿ ಕೊಡಲು ಮುಂದಾಗಿರುವುದು ನಾಚಿಗೇಡಿನ ಸಂಗತಿ ಎಂದು ದೂರಿದರು.

    ಬೆಂಗಳೂರು ಮೆಟ್ರೋ, ಮತ್ತು ಬಸ್ ದರ ಏರಿಕೆಯು ಕೆಳಗೆ ಬಿದ್ದವರ ಮೇಲೆ ಕಲ್ಲು ಹೇರಿದಂತಾಗಿದೆ. ಬಿತ್ತನೆ ಬೀಜ ದರವನ್ನು ಹೆಚ್ಚಿಸಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದ್ದಾರೆ. ಬೆಲೆಏರಿಕೆ ಬಿಸಿಗೆ ತತ್ತರಿಸಿರುವ ರಾಜ್ಯದ ಜನತೆಯು ಕಾಂಗ್ರೆಸ್ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.
    ಸಂಕಷ್ಟದ ಈ ಸಮಯದಲ್ಲಿ ಬಿಜೆಪಿ ಜನರ ಧ್ವನಿಯಾಗಿ ನಿಲ್ಲುತ್ತಿದೆ. ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ದರಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ. ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಏಪ್ರಿಲ್ ೨ ರಂದು ಅಹೋರಾತ್ರಿ ಧರಣಿ ಬೆಂಗಳೂರಿನಲ್ಲಿ ಆರಂಭಿಸಲಾಗುವುದು. ಈ ಧರಣಿಯಲ್ಲಿ ಬಿಜೆಪಿಯ ಶಾಸಕರು, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ಪದಾಧಿಕಾರಿಗಳು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಇದೇ ವೇಳೆ ಏಪ್ರಿಲ್ ೫ ರಂದು ಜಿಲ್ಲೆಯಾದ್ಯಂತ ಪಕ್ಷ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಗರಮಂಡಲ ಅಧ್ಯಕ್ಷ ಪುಷ್ಪರಾಜ್, ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರುಗಳಾದ ಕನಕರಾಜ್ ಅರಸ್, ಕಾಯಿ ರವಿ, ಎಸ್‌ಡಿಎಂ ಮಂಜು ಉಪಸ್ಥಿತರಿದ್ದರು.

    BJP protests across the district on April 5 against price hike