Category: ಚಿಕ್ಕಮಗಳೂರು ನಗರ

  • ಮಗಳು ಸಹಿತ ಮೂವರ ಭೀಕರಹತ್ಯೆ ಮಾಡಿ ತಂದೆ ಆತ್ಮಹತ್ಯೆ

    ಮಗಳು ಸಹಿತ ಮೂವರ ಭೀಕರಹತ್ಯೆ ಮಾಡಿ ತಂದೆ ಆತ್ಮಹತ್ಯೆ

    ಬಾಳೆಹೊನ್ನೂರು: ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಮನನೊಂದು ಅತ್ತೆ, ನಾದಿನಿ ಹಾಗೂ 7ವರ್ಷದ ಮಗುವನ್ನು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿರುವ ಮನ ಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೌಟುಂಬಿಕ ಕಲಹದ ಕಾರಣಕ್ಕೆ ನಾಡ ಬಂದೂಕಿನಿಂದ ಮೂವರ ಹತ್ಯೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಹೋಬಳಿಯ ಮಾಗಲುನಲ್ಲಿ‌ ನಡೆದಿದೆ. ರತ್ನಾಕರ್ ಎಂಬುವವನಿಂದ ಈ ಕೃತ್ಯ ನಡೆದಿದ್ದು, ಸ್ಥಳೀಯ ಖಾಸಗಿ ಶಾಲೆಯಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರತ್ನಾಕರ್ ನನ್ನು ಆತನ ಹೆಂಡತಿ ಬಿಟ್ಟು ಎರಡು ವರ್ಷಗಳಾಗಿದ್ದು ಪತ್ನಿಯಿಂದ ದೂರವಿದ್ದನು.

    ಆ ಸಿಟ್ಟು ಅತ್ತೆ ಮತ್ತು ನಾದಿನಿ ಮೇಲೆ ತೋರಿಸಿದ್ದು ಇಬ್ಬರನ್ನೂ ಹತ್ಯೆಗೈಯುವ ಜೊತೆಗೆ ತನ್ನ ಮಗಳನ್ನು ಸಹ ಗುಂಡಿಕ್ಕಿ ಕೊಲೆಗೈದಿರುವ ಅಮಾನವೀಯ ಕೃತ್ಯ ನಡೆದಿದೆ

    ಕೃತ್ಯದ ನಂತರ ಆರೋಪಿ ಮನೆಯ ಹಿಂಬಾಗದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೆ ಶರಣಾಗುವ ಮುಂಚೆ ವಿಡಿಯೋ ಮಾಡಿದ್ದ ಆರೋಪಿ: ಮೂವರ ಕೊಲೆ ಮಾಡಿದ ಆರೋಪಿ ರತ್ನಾಕರ್ ತಾನು ಆತ್ಮಹತ್ಯೆಗೆ ಶರಣಾಗುವ ಮುನ್ನ ವಿಡಿಯೋ ಮಾಡಿದ್ದು, ತನ್ನ ಪತ್ನಿ ದೂರವಾದ ಬಳಿಕ ಎಲ್ಲರೂ ಮಗುವಿನ ಬಳಿ ತಾಯಿಯ ಬಗ್ಗೆ ಕೇಳುತ್ತಿದ್ದಾರೆ.

    ಆದ್ರೆ ಆಕೆ ಬಿಟ್ಟು ಹೋಗಿ 2 ವರ್ಷ ಆಗಿದೆ. ನನ್ನ ಕುಟುಂಬದವರಿಗೆ ಯಾರಿಗೂ ತಿಳಿಸದೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು 47 ಸೆಕೆಂಡ್ ಗಳ ವಿಡಿಯೋ ಮಾಡಿದ್ದಾನೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ, ಬಾಳೆಹೊನ್ನೂರು ಪೊಲೀಸ್ ಠಾಣೆಯ PSI ರವೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    The father who did not commit the gruesome murder of three people, including his daughter

  • 9 ಕೋಟಿ ರೂ ವೆಚ್ಚದಲ್ಲಿ ನಗರದ ಎಲ್ಲಾ ರಸ್ತೆಗಳು ಡಾಂಬರೀಕರಣ

    9 ಕೋಟಿ ರೂ ವೆಚ್ಚದಲ್ಲಿ ನಗರದ ಎಲ್ಲಾ ರಸ್ತೆಗಳು ಡಾಂಬರೀಕರಣ

    ಚಿಕ್ಕಮಗಳೂರು:  ನಗರದಲ್ಲಿ ಅಮೃತ್ ಯೋಜನೆ ಹಾಗೂ ಒಳಚರಂಡಿ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಹಾನಿಯಾಗಿರುವ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಎಸ್‌ಎಫ್‌ಸಿ ಅನುದಾನದಡಿ ೧೦ ಕೋಟಿ ರೂಗಳನ್ನು ನೀಡಿದ್ದಾರೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು

    ಅವರು ಇಂದು ನಗರದ ತಲಾ ೪ ಲಕ್ಷ ರೂ ವೆಚ್ಚದಲ್ಲಿ ಆಶೀರ್ವಾದ್ ಆಟೋ ಸರ್ಕಲ್ ಮತ್ತು ಶೃಂಗಾರ್ ಸರ್ಕಲ್ ಆಟೋ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಜೂರು ಮಾಡಿರುವ ಈ ೧೦ ಕೋಟಿ ಅನುದಾನದಲ್ಲಿ ನಗರದ ಪ್ರಮುಖ ರಸ್ತೆಗಳು ಹಾನಿಯಾಗಿದ್ದು, ಹೊಸದಾಗಿ ಡಾಂಬರೀಕರಣ ಮಾಡುವುದರಿಂದ ಹೊಸ ವರ್ಷದಲ್ಲಿ ಆಟೋ ಚಾಲಕರಿಗೆ ಸಂತೋಷವಾಗಲಿದೆ ಎಂದು ಭಾವಿಸುತ್ತೇನೆ ಎಂದರು.

    ಯುಜಿಡಿ ಮತ್ತು ಅಮೃತ್ ಯೋಜನೆಯಡಿ ಕಾಮಗಾರಿ ಕೈಗೊಂಡ ಸಂದರ್ಭದಲ್ಲಿ ಬಹಳಷ್ಟು ರಸ್ತೆಗಳು ಹಾನಿಯಾಗಿದ್ದು, ಆಟೋ ಚಾಲಕರು ಮತ್ತು ನಾಗರೀಕರಿಗೆ ತೊಂದರೆಯಾಗುತ್ತಿತ್ತು. ಈ ಸಂಬಂಧ ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಸಧ್ಯದಲ್ಲೇ ಕಾಮಗಾರಿ ಆರಂಭವಾಗಿ ಇನ್ನೆರಡು ತಿಂಗಳಲ್ಲಿ ನಗರದ ಎಲ್ಲಾ ರಸ್ತೆಗಳು ಸಂಪೂರ್ಣ ಡಾಂಬರೀಕರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಆಟೋ ಚಾಲಕರೆಂದರೆ ಕಾಯಕ ಯೋಗಿಗಳು. ಪ್ರತೀ ದಿನ ಸಾರ್ವಜನಿಕರ ಸೇವೆ ಸಲ್ಲಿಸುವ ಮೂಲಕ ದುಡಿಮೆ ಮಾಡುತ್ತಿದ್ದಾರೆ. ನಾಗರೀಕರ ಆರೋಗ್ಯ ಕಾಪಾಡುವಲ್ಲಿ ಆಟೋ ಚಾಲಕರು ಪ್ರಮುಖ ಪಾತ್ರ ವಹಿಸುತ್ತಿದ್ದು, ಚಾಲಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದನ್ನು ಮನಗಂಡು ಆಟೋ ನಿಲ್ದಾಣ ನಿರ್ಮಾಣ ಮಾಡಲು ಮುಂದಾಗಿದ್ದೇವೆ ಎಂದರು.

    ಇಂದು ನೀಡಿರುವ ಆಟೋ ಚಾಲಕರ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಹಂತಹಂತವಾಗಿ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.
    ರಾಮನಹಳ್ಳಿಯ ಆಟೋ ಚಾಲಕ ವಿಶ್ವನಾಥ ಮಾತನಾಡಿ, ಕಳೆದ ೩೦ ವರ್ಷಗಳಿಂದ ಆಟೋ ಓಡಿಸಿ ಜೀವನ ನಡೆಸುತ್ತಿದ್ದೇವೆ, ಶಾಸಕರಾಗಲೀ, ಸರ್ಕಾರವಾಗಲಿ ಆಟೋ ಚಾಲಕರಿಗೆ ಯಾವುದೇ ರೀತಿಯ ಸೌಲಭ್ಯ ನೀಡಿಲ್ಲ. ಈಗಲಾದರೂ ತಾವು ಆಟೋ ಚಾಲಕರು ಮತ್ತು ಮಾಲಿಕರಿಗೆ ಪ್ರತ್ಯೇಕ ಬಡಾವಣೆ ನಿರ್ಮಿಸಿ ನಿವೇಶನ, ಮನೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯ ಸಿ.ಪಿ. ಲಕ್ಷ್ಮಣ, ಸದಸ್ಯ ವಿಫುಲ್ ಕುಮಾರ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ನಗರಸಭೆ ಮಾಜಿ ಸದಸ್ಯ ಮಧು, ನಗರಸಭೆ ಇಂಜಿನಿಯರ್‌ಗಳಾದ ಲೋಕೇಶ್, ಸೌಜನ್ಯ, ಮಿಥುನ, ಶಿವಾನಂದ, ಅಣ್ಣಯ್ಯ, ಆಟೋ ಸಂಘದ ಅಧ್ಯಕ್ಷ ಕೋಟೆ ಜಗದೀಶ್, ಶಶಿ ಮತ್ತಿತರರು ಉಪಸ್ಥಿತರಿದ್ದರು.

    All the roads in the city will be asphalted at a cost of Rs 9 crore.

  • ವೃತ್ತಿಪರ ಕುಶಲಕರ್ಮಿ ಯೋಜನೆಯಡಿ ವಿವಿಧ ಸವಲತ್ತುಗಳ ವಿತರಣೆ

    ವೃತ್ತಿಪರ ಕುಶಲಕರ್ಮಿ ಯೋಜನೆಯಡಿ ವಿವಿಧ ಸವಲತ್ತುಗಳ ವಿತರಣೆ

    ಚಿಕ್ಕಮಗಳೂರು: ರಾಜ್ಯಸರ್ಕಾರ ಹಿಂದುಳಿದವರ, ಬಡವರ, ಶ್ರಮಿಕರ, ಕಾರ್ಮಿಕರ, ರೈತರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನ ಮಾಡಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ಜಿಲ್ಲಾ ಗ್ರಾಮೀಣ ಕೈಗಾರಿಕಾ ಉಪನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ವೃತ್ತಿಪರ ಕುಶಲಕರ್ಮಿ ಯೋಜನೆಯಡಿ ವಿವಿಧ ಸೌಲತ್ತುಗಳನ್ನು ವಿತರಿಸಿ ಮಾತನಾಡಿದರು.

    ರಾಜ್ಯಸರ್ಕಾರ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರತೀ ಫಲಾನುಭವಿಗೆ ೮ ಸಾವಿರ ರೂ ಮೌಲ್ಯದ ಗಾರೆ ಕೆಲಸ, ಮರಗೆಲಸ, ಮಡಿವಾಳ, ಸವಿತಾ ಸಮಾಜ, ಕಮ್ಮಾರಿಕೆ ಮುಂತಾದ ಕಸುಬಿನ ಉಪಕರಣಗಳನ್ನು ಚಿಕ್ಕಮಗಳೂರು ತಾಲ್ಲೂಕಿನ ೧೬೬ ಮಂದಿ ಫಲಾನುಭವಿಗಳಿಗೆ ೧೩೨೮೦೦೦ ರೂ ಮೌಲ್ಯದ ಉಪಕರಣಗಳನ್ನು ವಿತರಿಸುತ್ತಿರುವುದಾಗಿ ಹೇಳಿದರು.

    ಇಂದು ಈ ಸೌಲತ್ತುಗಳನ್ನು ಪಡೆದ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಎಲ್ಲರೂ ಆರ್ಥಿಕವಾಗಿ ಸದೃಢರಾಗುವ ಜೊತೆಗೆ ವೃತ್ತಿಪರ ಗೌರವವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆನೀಡಿದರು.

    ಮನುಷ್ಯನಿಗೆ ದೇಹದ ಅಂಗಾಂಗಗಳು ಎಷ್ಟು ಮುಖ್ಯವೋ ಅದೇ ರೀತಿ ದೇಶದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿ ಒಂದಲ್ಲಾ ಒಂದು ರೀತಿಯ ವೃತ್ತಿಯನ್ನು ಕೈಗೊಂಡಾಗ ಮಾತ್ರ ಅದೊಂದು ಸಮಗ್ರ ದೇಶ, ರಾಜ್ಯ, ಊರು ಆಗಲಿದೆ ಎಂದು ಹೇಳಿದರು.

    ಪ್ರತಿಯೊಬ್ಬರೂ ಕೈಗೊಳ್ಳುವ ಅವರದೇ ಆದ ವೃತ್ತಿ ಕೌಶಲ್ಯಗಳು ಶ್ರೇಷ್ಟವಾಗಿದ್ದು, ತಮ್ಮ ವೃತ್ತಿಯಲ್ಲಿ ದುಡಿದು ಗಳಿಸಿದ ಹಣವನ್ನು ಅನಾವಶ್ಯಕವಾಗಿ ವ್ಯಯ ಮಾಡದೆ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿದಾಗ ಅತ್ಯಂತ ಶ್ರೇಷ್ಟವಾಗುತ್ತದೆ ಎಂದು ತಿಳಿಸಿದರು.

    ಮದುವೆಯನ್ನು ವಿಜೃಂಭಣೆಯಿಂದ ಅದ್ದೂರಿಯಾಗಿ ಮಾಡದಿದ್ದರೂ ಪರವಾಗಿಲ್ಲ ಇದಕ್ಕೆ ಬಳಸುವ ಹಣವನ್ನು ಮನೆಯನ್ನು ನಿರ್ಮಿಸಿಕೊಳ್ಳಿ ಎಂದು ಸಲಹೆ ನೀಡಿದ ಅವರು, ಬಡ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಸದುಪಯೋಗ ಪಡೆದುಕೊಂಡರೆ ಕಾರ್ಮಿಕರ ಮಕ್ಕಳ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದು ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಂ. ಮಹೇಶ್ ಕುಮಾರ್, ಗ್ರಾಮೀಣ ಕೈಗಾರಿಕೆಗಳ ಉಪನಿರ್ದೇಶಕ ಎನ್. ಚಂದ್ರಶೇಖರ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಇ.ಇ ಅಶೋಕ್ ಹಾಗೂ ಗ್ರಾಮೀಣ ಕೈಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

    Distribution of various benefits under the Professional Craftsman Scheme

  • ವಿಶ್ವದಲ್ಲೇ ಆರ್‌ಎಸ್‌ಎಸ್ ಬೃಹತ್ ಹೆಮ್ಮರವಾಗಿ ಬೆಳೆದಿದೆ

    ವಿಶ್ವದಲ್ಲೇ ಆರ್‌ಎಸ್‌ಎಸ್ ಬೃಹತ್ ಹೆಮ್ಮರವಾಗಿ ಬೆಳೆದಿದೆ

    ಚಿಕ್ಕಮಗಳೂರು:  ಹಿಂದೂ ರಾಷ್ಟ್ರ ಪರಿಕಲ್ಪನೆಯಡಿ ಭಿತ್ತಿದ ಸ್ವಯಂ ಸೇವಕ ಸಂಘದ ಪುಟ್ಟದೊಂದು ಭೀಜ ಇಂದು ಬೃಹತ್ ಹೆಮ್ಮರವಾಗಿ ಬೆಳೆದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ಧರ್ಮ ಪ್ರ ಚಾರಕ ಹಾಗೂ ಸಹಾಯಹಸ್ತ ಚಾಚುವ ಸಂಘವಾಗಿದೆ ಎಂದು ದಕ್ಷಿಣ ಕರ್ನಾಟಕ ಆರ್‌ಎಸ್‌ಎಸ್ ಪ್ರಾಂತ ಬೌದ್ಧಿಕ್ ಪ್ರಮುಖ್ ಕೃಷ್ಣ ಪ್ರಸಾದ್ ಹೇಳಿದರು.

    ನಗರದ ಬಸವನಹಳ್ಳಿ ಶಾಲೆ ಸಮೀಪ ಯುಗಾದಿ ಹಬ್ಬ ಹಾಗೂ ಆರ್‌ಎಸ್‌ಎಸ್ ಸಂಘಟನೆ ನೂರರ ಸಂವತ್ಸರ ಅಂಗವಾಗಿ ಹಮ್ಮಿಕೊಂಡಿದ್ಧ ನವಯುಗದ ನವಗಾನ ಶುಭ ನುಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಭಾನುವಾರ ಸಂಜೆ ಅವರು ಮಾತನಾಡಿದರು.

    ರಾಷ್ಟ್ರದ ಹಿತ ಚಿಂತನೆಗಾಗಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಅನೇಕ ಸ ವಾಲು, ಅಪಹಾಸ್ಯವನ್ನು ಎದುರಿಸಿ ಸಂಘವನ್ನು ಗಟ್ಟಿತನದಿಂದ ಸ್ಥಾಪಿಸಿದ ಕಾರಣ, ಇಂದು ದೇಶದಲ್ಲಿ ಸಾ ವಿರಾರು ಶಾಖೆಗಳು, ಕೋಟ್ಯಾಂತರ ಮಂದಿ ಸ್ವಯಂ ಸೇವಕರು ಭಾರತೆಂಭೆಯ ಸೇವೆಯಲ್ಲಿ ತಮ್ಮನ್ನು ಅ ರ್ಪಿಸಿಕೊಂಡಿದ್ದಾರೆ ಎಂದರು.

    ವಿಶ್ವ ಭೂಪಟದ ಭಾರತೀಯ ನೆಲದಲ್ಲಿ ದೇವಾನುದೇವತೆಗಳು ನೆಲೆಯೂರಲು ಹಾಗೂ ಹಿಂದೂಗ ಳಾಗಿ ಜನಿಸಲು ಸೌಭಾಗ್ಯ ಪಡೆದಿರಬೇಕು. ಇಲ್ಲಿನ ವಿಶೇಷ ಪೂಜಾಪದ್ಧತಿ ಆಚರಿಸುವ ಹಿಂದೂಗಳಿಗೆ ದೊ ರಕಿರುವುದು ಸುಮ್ಮನೆಯಲ್ಲ. ಹಿರಿಯರ ಯೋಗದಿಂದ ನಮಗೆ ಧಕ್ಕಿದೆ. ಈ ಪರಂಪರೆ ಉಳಿಸುವ ಜವಾ ಬ್ದಾರಿ ಪ್ರತಿಯೊಬ್ಬ ಹಿಂದೂಗಳ ಕರ್ತವ್ಯವಾಗಬೇಕು ಎಂದು ಹೇಳಿದರು.

    ಬ್ರಿಟಿಷರ ಆಳ್ವಿಕೆಯಲ್ಲಿ ಹಿಂದೂಗಳನ್ನು ಗುಲಾಮರನ್ನಾಗಿಸಿ ನಾಯಿಗಿಂತ ಕಡೆಗಣಿಸಲಾಗಿತ್ತು. ನಮ್ಮ ಆಳ್ವಿಕೆ ನಮಗೆ ಕೊಡಿ ಎನ್ನಲು, ಭಿಕ್ಷೆ ಬೇಡುವ ಸ್ಥಿತಿಯಿತ್ತು. ಇದನ್ನರಿತ ಹೆಡ್ಗೆವಾರ್ ಆರ್‌ಎಸ್‌ಎಸ್ ಸ್ಥಾಪಿಸಿ, ಬ್ರಿಟಿಷರ ಧ್ವಜ ಕೆಳಗಿಳಿಸುವ ಸಂಕಲ್ಪ ಮಾಡಿದರು. ಈ ಸತ್ಯಾಂಶವನ್ನು ಭಾರತ ಸರ್ಕಾರ ನವ ನಿಮೃತಗಳು ಎಂಬ ಪುಸ್ತಕದಲ್ಲಿ ಅಡಕವಾಗಿಸಿದ್ದು, ಓದಿ ದೇಶದ ಇತಿಹಾಸ ಅರಿಯಬೇಕು ಎಂದರು.

    ಅಯೋಧ್ಯೆಯಲ್ಲಿ ಬಾಲರಾಮನ ಪಟ್ಟಾಭೀಷೇಕ ಹಾಗೂ ೧೪೪ನೇ ಮಹಾಕುಂಭ ಮೇಳದ ಭಾಗ್ಯವು ಕಣ್ತುಂಬಿಕೊಂಡ ಭಾರತೀಯರು ಹಾಗೂ ಈ ವಸಂತದಲ್ಲಿ ಜನಿಸಿದ ಪುಟ್ಟಕಂದಮ್ಮಗಳು ಅದೃಷ್ಟವಂತರು. ಈ ಹೋರಾಟದಲ್ಲಿ ನಿರತರಾದವರಿಗೆ ಭಾಗ್ಯ ಲಭಿಸಿಲ್ಲ, ಪೂರ್ವಜರಿಗೂ ಸಿಕ್ಕಿಲ್ಲ. ಈ ಸೌಭಾಗ್ಯ ಧಕ್ಕಿರುವ ಹಿಂದೂಗಳು ಹೆಮ್ಮೆಪಡಬೇಕು ಎಂದು ತಿಳಿಸಿದರು.

    ಹಿಂದೂ ರಾಷ್ಟ್ರವೆಂದರೆ ಜನ್ಮವಿತ್ತ ತಾಯಿಯಂತೆ ಗೌರವಿಸುವ ಗುಣ ಬೆಳೆಸಿದ್ದು ಆರ್‌ಎಸ್‌ಎಸ್. ಎಂದ ಅವರು ಸರ್ವಸ್ವವನ್ನು ಭಾರತೆಂಭೆಯ ಸೇವೆಗೆ ಸನ್ನದ್ಧವಾಗಲು ಕೋಟ್ಯಾಂತರ ಸ್ವಯಂ ಸೇವಕರು ರಾಷ್ಟ್ರಕ್ಕಾ ಗಿ ಅರ್ಪಣೆ ಮಾಡಿಕೊಂಡಿದ್ದಾರೆ. ನಿರ್ಮಲ ಹೃದಯದಿಂದ ಮಾತ್ರ ದೇಶದ ಪ್ರೀತಿ, ವಿಶ್ವಾಸ ಗಳಿಸಬಹುದು ಎಂದು ಹೇಳಿದರು.

    ಪ್ರಸ್ತುತ ಕಾಲಘಟ್ಟದಲ್ಲಿ ಹಿಂದೂಗಳನ್ನು ಹತ್ತಿಕ್ಕಲು ಕೆಲವು ಪಕ್ಷ ಹಾಗೂ ಸಂಘಟನೆಗಳು ಸವಾಲು ಹಾ ಕುತ್ತಿವೆ. ಸಾಮರಸ್ಯ ಕೊರತೆ, ಜಾತಿ, ಭಾಷೆ ಹೆಸರಿನಲ್ಲಿ ಹೊಡೆದಾಳಿಸುತ್ತಿದೆ. ಅಲ್ಲದೇ ಮಹಿಷಾ ಸಂಸ್ಕೃತಿ ಭಿತ್ತುವ ಕೆಲಸವಾಗುತ್ತಿದೆ. ದೇಶಕ್ಕಾಗಿ ಮಡಿದ ರಾಜಗುರು, ಸುಖದೇವ್ ಪ್ರಾಣಕ್ಕೆ ಬೆಲೆಕೊಡಲು ಹಾಗೂ ಸನಾತನ ಸಂಸ್ಕೃತಿ ಉಳಿಸುವ ಕಾರ್ಯ ಹಿಂದೂಗಳಿಂದ ಆಗಬೇಕಿದೆ ಎಂದು ಹೇಳಿದರು.

    ದೇಶದ ಸ್ವಯಂ ಸೇವಕರು ರಾಷ್ಟ್ರ ಎಂಬ ಜೀವನ ಮಂತ್ರವನ್ನು ಅಳವಡಿಸಿಕೊಂಡು ನಿಸ್ವಾರ್ಥದಿಂದ ಕಾರ್ಯನಿರ್ವಹಿಸುತ್ತಿವೆ. ಮನುಷ್ಯರಾಗಿ ಹುಟ್ಟಿದ ಮೇಲೆ ಪರೋಪಕಾರಿ ಸೇವೆಗೆ ಮುಡಿಪಿಡಲು ಆರ್‌ಎಸ್ ಎಸ್ ಸಂಘಟನೆ ಪ್ರೇರಣೆಯಾಗಿದೆ. ಪ್ರಕೃತಿ ವಿಪತ್ತು ಅಥವಾ ಭೂಕಂಪ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ತೆರಳಿ ಜೀವ ಉಳಿಸುವ ಕಾರ್ಯ ಆರ್‌ಎಸ್‌ಎಸ್ ಮಾಡುತ್ತಿದೆ ಎಂದರು.

    ವೈದ್ಯ ಹಾಗೂ ಸಂಘಟನೆ ಮುಖಂಡ ಡಾ|| ಸಂತೋಷ್ ಮಾತನಾಡಿ ಆರ್‌ಎಸ್‌ಎಸ್ ಎಂದಿಗೂ ಸ್ವಂ ತಕ್ಕಾಗಿ ಆಸ್ತಿ ಗಳಿಸದೇ, ರಾಷ್ಟ್ರದ ಪರೋಪಕಾರಕ್ಕಾಗಿ ದುಡಿಯುತ್ತಿರುವ ಏಕೈಕ ಸಂಘ. ಈ ವಿರುದ್ಧ ಕೆಲವರು ಅಪಪ್ರಚಾರದಲ್ಲಿ ತೊಡಗಿಸುವ ಕಾರ್ಯ ಹೆಚ್ಚಾಗಿದ್ದು ಸಂಘಟನೆ ಬಲ ತಿಳಿಯದವರು ಈ ರೀತಿ ಹೇಳಿಕೆಗೆ ಕಿವಿಗೊಡಬಾರದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಸಂಘ ಚಾಲಕ ಘನಶ್ಯಾಮ್ ಆಳ್ವ, ನಗರ ಚಾಲಕ ರಾಜ ರಾಮಕೋಟೆ, ನೂರಾರು ಸ್ವಯಂ ಸೇವಕರು ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದರು.

    RSS has grown into a huge force in the world.

  • ಸರ್ವರ ಪ್ರಗತಿಗೆ ಶ್ರಮಿಸುವುದು ಜನಪ್ರತಿನಿಧಿಗಳ ಕರ್ತವ್ಯ

    ಸರ್ವರ ಪ್ರಗತಿಗೆ ಶ್ರಮಿಸುವುದು ಜನಪ್ರತಿನಿಧಿಗಳ ಕರ್ತವ್ಯ

    ಚಿಕ್ಕಮಗಳೂರು:  ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜಾತಿ, ಮತ ನೋಡದೆ ಸರ್ವರ ಪ್ರಗತಿಗೆ ಶ್ರಮಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಇಂದು ಬೆಳವಾಡಿ ಗ್ರಾಮದಲ್ಲಿ ಶನೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ೫ ಲಕ್ಷ ರೂ ಚೆಕ್ ವಿತರಣೆ ಮಾಡಿ ಮಾತನಾಡಿ  ಚುನಾವಣೆಯಲ್ಲಿ ಮಾತ್ರ ಪಕ್ಷ ರಾಜಕಾರಣ ಮಾಡುವುದು ಬಿಟ್ಟರೆ ನಂತರ ಎಲ್ಲರನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನೋಡಬೇಕೆಂಬುದನ್ನು ಮನಗಂಡಿದ್ದ ಮಾಜಿ ಸಂಸದ ದಿವಂಗತ ಡಿ.ಸಿ. ಶ್ರೀಕಂಠಪ್ಪ ಮಾದರಿ ಎಂದು ಹೇಳಿದರು.

    ಕ್ಷೇತ್ರದ ಮತದಾರರು ನೀಡಿದ ಶಾಸಕ ಎಂಬ ಅಧಿಕಾರವನ್ನು ನಿಮ್ಮ ಸೇವೆಗೆ ಬಳಸುವ ಮೂಲಕ ಮುಖ್ಯಮಂತ್ರಿಗಳ ವಿಶೇಷ ಅನುದಾನ ೪ ಕೋಟಿ ರೂಗಳಲ್ಲಿ ಈಶ್ವರಹಳ್ಳಿ, ಬೆಳವಾಡಿ, ಶನೇಶ್ವರ ದೇವಸ್ಥಾನಕ್ಕೆ ಕಳಸಾಪುರ ರಂಗನಾಥಸ್ವಾಮಿ ದೇವಸ್ಥಾನಕ್ಕೆ, ದೇವಗೊಂಡನಹಳ್ಳಿ ವೀರಭದ್ರಸ್ವಾಮಿ ದೇವಸ್ಥಾನ, ಗುರುವಾಯನಪುರ ದೇವಾಲಯಕ್ಕೆ ಈ ಎಲ್ಲಾ ಹಿಂದೂ ದೇವಲಯಗಳ ಜೊತೆಗೆ ಕೆಲವು ಮುಸಲ್ಮಾನ ಬಾಂಧವರ ಮಸೀದಿಗಳಿಗೂ ಸರ್ಕಾರ ಅನುದಾನ ನೀಡಿದೆ ಎಂದು ತಿಳಿಸಿದರು.

    ಸುಮಾರು ೪ ಕೋಟಿ ರೂ ಹಿಂದೂ ದೇವಾಲಯಗಳಿಗೆ, ೧ ಕೋಟಿಗೂ ಅಧಿಕ ಹಣವನ್ನು ಮುಸಲ್ಮಾನರ ಮಸೀದಿ ಮತ್ತು ದರ್ಗಾಗಳಿಗೆ ಅನುದಾನ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷವೆಂದು ದೃಢಪಟ್ಟಿದೆ ಎಂದು ತಿಳಿಸಿದರು.

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಮಾಡಬೇಕೆಂಬ ಸಂಕಲ್ಪ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಶ್ವಗುರು ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್, ಕನಕದಾಸ ಇವರುಗಳ ವಿಚಾರಧಾರೆಗಳನ್ನು ತಮ್ಮ ರಾಜಕೀಯ ಜೀವನದಲ್ಲಿ ಅಳವಡಿಸಿಕೊಂಡು ಎಲ್ಲಾ ವರ್ಗದ ಜನರನ್ನು ಪ್ರಗತಿಪಥದತ್ತ ಸಾಗುವಂತೆ ಸೇವೆ ಸಲ್ಲಿಸುತ್ತಿದ್ದಾರೆಂದು ಶ್ಲಾಘಿಸಿದರು.

    ವಿಧಾನಸಭಾ ಕ್ಷೇತ್ರದ ಜನತೆ ನನ್ನನ್ನು ನೋಡದೆ ಮತನೀಡಿ ಆಶೀರ್ವದಿಸಿದ್ದೀರಿ ಅದಕ್ಕೆ ಪೂರಕವಾಗಿ ನಿಮ್ಮ ಬಳಿಗೆ ಬಂದು ಸರ್ಕಾರದ ಅನುದಾನವನ್ನು ವಿತರಣೆ ಮಾಡುತ್ತಿದ್ದೇನೆ, ಈ ನಿಟ್ಟಿನಲ್ಲಿ ಮುಂಬರುವ ಜಿ.ಪಂ, ತಾ.ಪಂ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಆಶೀರ್ವದಿಸಿದಾಗ ನಾಯಕರಾಗಿ ಬೆಳೆದು ಸುಲಭವಾಗಿ ನಿಮ್ಮ ಕೆಲಸಕಾರ್ಯಗಳನ್ನು ಮಾಡುತ್ತಾರೆ ಎಂದು ಭರವಸೆ ನೀಡಿದರು.

    ಇದೇ ಸಂದರ್ಭದಲ್ಲಿ ೨೦ ಲಕ್ಷ ರೂ ವೆಚ್ಚದಲ್ಲಿ ವಡೆಯರಹಳ್ಳಿಯಿಂದ ಸಿಸಿ ರಸ್ತೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

    ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಗೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷ ರಂಗನಾಥ್, ನಾಗರಾಜ್, ಅಚ್ಯುತರಾವ್, ಕೃಷ್ಣಮೂರ್ತಿ, ಶೋಭ ಯೋಗಿಶ್, ಹರೀಶ್, ಮಧು, ಹರ್ಷಿತ್, ಅಮೀರ್, ಚಂದ್ರಶೇಖರ್, ಮಲ್ಲೇಶ್, ರತ್ನಾಕರ್, ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.

    It is the duty of people’s representatives to strive for the progress of all.

  • ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ

    ಜಿಲ್ಲಾದ್ಯಂತ ಶ್ರದ್ಧಾಭಕ್ತಿಯಿಂದ ಪವಿತ್ರ ರಂಜಾನ್ ಹಬ್ಬ ಆಚರಣೆ

    ಚಿಕ್ಕಮಗಳೂರು: ಪವಿತ್ರ ರಂಜಾನ್ ಹಬ್ಬವನ್ನು ಜಿಲ್ಲಾದ್ಯಂತ ಮುಸಲ್ಮಾನ್ ಸಮುದಾಯದವರು ಬಹಳ ಶ್ರದ್ಧಾಭಕ್ತಿಯಿಂದ ಆಚರಿಸಿದರು.

    ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆಂಪನಹಳ್ಳಿಯಲ್ಲಿರುವ ಈದ್ಗಾ ಮೈದಾನಕ್ಕೆ ಹೊಸ ಉಡುಗೆ ತೊಡುಗೆಗಳನ್ನು ಧರಿಸಿ ತಂಡೋಪ ತಂಡವಾಗಿ ಆಗಮಿಸಿದ ಮುಸ್ಲಿಂ ಸಮುದಾಯದ ಜನ ಅಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

    ಪ್ರಾರ್ಥನೆ ಸಲ್ಲಿಸಿದ ಬಳಿಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಶಾಸಕ ಎಚ್.ಡಿ.ತಮ್ಮಯ್ಯ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡಿ ಮುಸ್ಲಿಂ ಸಮುದಾಯದವರಿಗೆ ರಂಜಾನ್ ಶುಭಾಶಯ ಕೋರಿದರು. ಈ ವೇಳೆ ಮಾತನಾಡಿ, ೬ನೇ ಶತಮಾನದಲ್ಲಿ ಜನಿಸಿದ ಪ್ರವಾದಿ ಪೈಗಂಬರರು ಇಸ್ಲಾಂ ಧರ್ಮದ ಗುರುಗಳಾಗಿ ಬಡವರ ಪರವಾದ ಕಾಳಜಿ ಹೊಂದಿ ಅವರ ಪರ ದನಿ ಎತ್ತಿದ್ದಾರೆ.

    ಮೆಕ್ಕಾದಿಂದ ಮದೀನಕ್ಕೆ ಹೋಗುವ ಮಧ್ಯೆ ಅವರು ಅನೇಕ ತೊಂದರೆಗಳನ್ನು ಅನುಭವಿಸುತ್ತಾರೆ. ಬಡ ಕುಟುಂಬದಲ್ಲಿ ಜನಿಸಿದ ಪೈಗಂಬರರು ದೊಡ್ಡ ಕುಟುಂಬದಲ್ಲಿ ಬೆಳೆದವರು. ಮೆಕ್ಕಾದಿಂದ ಮದೀನಕ್ಕೆ ಹೋಗುವಾಗ ಪೈಗಂಬರರು ತುಂಬಾ ಕಷ್ಟ ಅನುಭವಿಸುತ್ತಾರೆ. ಅವರಿಗೆ ಗೌರವದ ಸಲ್ಲಿಸುವ ಸಲುವಾಗಿ ಸಮುದಾಯದ ಜನ ಒಂದು ತಿಂಗಳು ಉಪವಾಸ ಅಚರಿಸುತ್ತಾರೆ ಎಂದರು.

    ಆರನೇ ಶತನಾನದಲ್ಲಿ ಜನಿಸಿದ ಮಹಮದ್ ಪೈಗಂಬರರು ಮತ್ತು ೧೨ನೇ ಶತಮಾನದಲ್ಲಿ ಜನಿಸಿದ ಬಸವಣ್ಣ ಅವರಿಬ್ಬರ ದ್ಯೇಯವು ಒಂದೇ ಆಗಿದೆ. ಇಬ್ಬರೂ ಮಹಾಪುರುಷರು ಕೂಡ ಬಡವರ ಮತ್ತು ಶೋಷಿತರ ಪರವಾದ ಕಾಳಜಿ ಉಳ್ಳವರಾಗಿದ್ದಾರೆ. ಅವರ ಮಾರ್ಗದರ್ಶನದಂತೆಯೇ ರಂಜಾನ್ ದಿನ ಉಳ್ಳವರು ಬಡವರಿಗೆ ಏನಾದರೂ ದಾನ ನೀಡುವ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

    ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹ್ಮದ್, ಸಮುದಾಯದ ಜನರಿಗೆ ಶುಭಾಶಯ ಕೋರಿ ದೇವರು ಎಲ್ಲರಿಗೂ ಒಳಿತು ಮಾಡಲಿ ಎಂದು ಹಾರೈಸಿದರು.

    ನಗರದ ಜಾಮೀಯಾ ಮಸೀದಿ ಸೇರಿದಂತೆ ನಗರದ ಎಲ್ಲ ಮಸೀದಿಗಳ ಧರ್ಮಗುರುಗಳು ಈದ್ಗಾ ಮೈದಾನದಲ್ಲಿ ಮುಂಚೂಣಿ ಸ್ಥಾನದಲ್ಲಿ ಕುಳಿತು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.ಪ್ರತಿ ವರ್ಷ ಭಾಗವಹಿಸುತ್ತಿದ್ದ. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಕ್ಫ್ ಮಸೂದೆ ತಿದ್ದುಪಡಿಯನ್ನು ಹಿಂದೆ ಪಡೆಯುವಂತೆ ಆಗ್ರಹಿಸಿ, ಪ್ರಾರ್ಥನೆಗೆ ಆಗಮಿಸಿದ್ದ ಎಲ್ಲಾ ಮುಸಲ್ಮಾನ ಬಾಂಧವರು ತಮ್ಮ ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿರೋಧ ವ್ಯಕ್ತಪಡಿಸಿದರು.

    Holy festival of Ramadan celebrated with devotion across the district

  • ಸಾಹಿತ್ಯ ಮನಸ್ಸನ್ನು ಅರಳಿಸುವ ಕೆಲಸ ಮಾಡಬೇಕು

    ಸಾಹಿತ್ಯ ಮನಸ್ಸನ್ನು ಅರಳಿಸುವ ಕೆಲಸ ಮಾಡಬೇಕು

    ಶೃಂಗೇರಿ: ಸಾಹಿತ್ಯ ಮನಸ್ಸನ್ನು ಅರಳಿಸುವ ಕೆಲಸ ಮಾಡಬೇಕು.ಕಾಲಕಾಲಕ್ಕೆ ಹೊಸ ಸಾಹಿತ್ಯದ ಸೃಷ್ಟಿಯೊಂದಿಗೆ ಪ್ರತಿಯೊಬ್ಬರ ಬದುಕಿಗೆ ಒಂದು ಅತ್ಯುತ್ತಮವಾದ ಮೌಲ್ಯವನ್ನು ನೀಡಬೇಕು ಎಂದು ವೈದ್ಯೆ ಡಾ.ಲಕ್ಷ್ಮೀಪ್ರಸಾದ್ ತಿಳಿಸಿದರು.

    ಅವರು ಶುಕ್ರವಾರ ತಾ.ಕಸಾಪ ಹಾಗೂ ಮಹಿಳಾ ಘಟಕದ ಸಹಯೋಗದಲ್ಲಿ ಕನ್ನಡಭವನದಲ್ಲಿ ಆಯೋಜಿಸಿದ ಮಹಿಳಾ ದಿನಾಚರಣೆ ಮತ್ತು ಎಸ್.ವಿ.ರಾಮಚಂದ್ರಭಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ಸಾಹಿತ್ಯದ ಅಧ್ಯಯನದಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ.ನಮ್ಮೊಳಗಿರುವ ಸೃಜನಶೀಲತೆಗೆ ಮೂರ್ತರೂಪ ನೀಡುವ ಸಾಹಿತ್ಯ ಪ್ರಾಕಾರಗಳು ಬೇಕಾದಷ್ಟು ಇದೆ.ಕಥೆ,ಕವನ,ನೀಳ್ಗತೆ,ಕಾದಂಬರಿ ಮುಂತಾದ ಪ್ರಕಾರಗಳ ಪರಿಚಯ ನಮಗೆ ಸಿಗಬೇಕಾದರೆ ನಮಗೆ ಪುಸ್ತಕಗಳನ್ನು ಓದುವ ಅವಶ್ಯಕತೆ ಇದೆ.ಮಹಿಳೆಯರು ಕೂಡಾಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

    ಅಕ್ಕಮಹಾದೇವಿ,ಸಂಚಿಹೊನ್ನಮ್ಮ.ತ್ರಿವೇಣಿ,ವೈದೇಹಿ,ಸಾಯುಸುತೆ ಮುಂತಾದ ಹಿರಿಯ ಸಾಹಿತಿಗಳ ಬರವಣಿಗೆಯ ಮೌಲ್ಯಗಳು ಇಂದಿಗೂ ಕೂಡಾ ಜನಮಾನಸದಲ್ಲಿ ಶಾಶ್ವತವಾದ ಸ್ಥಾನ ಗಳಿಸಿದೆ.ಮಹಿಳೆಯರು ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದು ಸಾಹಿತ್ಯ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡಬೇಕು.ಪ್ರತಿಯೊಂದು ಕಲಿಕೆಗೆ ಆಧಾರ ಸಾಹಿತ್ಯ.ಸಾಹಿತ್ಯದಿಂದ ಬೌದ್ಧಿಕ ಪ್ರಗತಿ ಸಾಧ್ಯ.ನಮ್ಮೊಳಗಿನ ಸುಪ್ತಪ್ರಜ್ಞೆಗೆ ಪೂರಕವಾಗಿರುವ ಉತ್ತಮ ಸಾಹಿತ್ಯ ಗ್ರಂಥಗಳು ಸಂಸ್ಕೃತಿಯ ಮೌಲ್ಯಗಳು ಬೆಳೆಯುತ್ತದೆ ಎಂದರು.

    ತಾ|ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ ಅವರು ಮಾತನಾಡಿ”ಪಾಲಕರು ಮನೆಯಲ್ಲಿ ಹೆಣ್ಣುಮಕ್ಕಳಿಗೆ ಅವರ ಮೌಲ್ಯಗಳನ್ನು ತಿಳಿಸುವ ಅಗತ್ಯವಿದೆ.ತಾರತಮ್ಯ ಮನೋಭಾವ ಬದಿಗಿಟ್ಟು ಹೆಣ್ಣಿನ ಅಂತರ್ಗತದಲ್ಲಿರುವ ಸೃಜನಶೀಲತೆಗೆ ಮಹಿಳೆಯರು ಪ್ರೋತ್ಸಾಹ ನೀಡಬೇಕು.ಅಡುಗೆ ಮನೆಯಿಂದ ಅಂತರಿಕ್ಷದ ತನಕ ಮಹಿಳೆಯರು ಸಾಧನೆ ಮಾಡಿದ್ದು ಒಂದು ಹೆಣ್ಣಿಗೆ ಮತ್ತೊಬ್ಬ ಹೆಣ್ಣು ಸಹಕಾರ ನೀಡುವ ಭಾವ ಹೊರಹೊಮ್ಮಬೇಕು.ಸಾಂಸ್ಕೃತಿಕ,ಸಾಹಿತ್ಯ,ಶೈಕ್ಷಣಿಕ,ಸಾಮಾಜಿಕ ಸೇವೆಯಲ್ಲಿ ಮುನ್ನಡೆ ಸಾಧಿಸಿ ತನ್ನತನವನ್ನು ಉಳಿಸಿಕೊಳ್ಳಬೇಕು ಎಂದರು.

    ಸಮಾರಂಭದಲ್ಲಿ ಗ್ರಾ.ಪಂ ವ್ಯಾಪ್ತಿಯ ಸ್ವಚ್ಛವಾಹಿನಿ ಚಾಲಕಿಯರು,ಹಿರಿಯ ಹೆರಿಗೆ ತಜ್ಞೆ ಸರೋಜಮ್ಮ ಕಿಗ್ಗಾ ಹಾಗೂ ಸುಮಂಗಲಿ ಅನಮದಸ್ವಾಮಿ ಅವರನ್ನು ಗೌರವಿಸಲಾಯಿತು.ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ತಾ|ಕಸಾಪ ಮಾಜಿ ಅಧ್ಯಕ್ಷೆ ಪೂರ್ಣಿಮಾ ಸಿದ್ಧಪ್ಪ ಬಹುಮಾನ ವಿತರಿಸಿದರು.ದತ್ತಿ ದಾನಿ ಗಾಯತ್ರಿ ರಾಮಚಂದ್ರ,ತಾ|ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಮಣ್ಯ,ಜಿಲ್ಲಾ ಕಸಾಪ ಸಂಚಾಲಕಿ ಪುಪ್ಪಲಕ್ಮೀನಾರಾಯಣ್,ಕಸಬಾ ಮತ್ತು ಕಿಗ್ಗ ಹೋಬಳಿ ಘಟಕದ ಅಧ್ಯಕ್ಷರಾದ ಅಂಗುರ್ಡಿ ದಿನೇಶ್,ಮಂಜುನಾಥ್ ನಾಯ್ಕ್,ಮಹಿಳಾಘಟಕದ ಕಾರ್ಯದರ್ಶಿ ನೇತ್ರಾವತಿ,ಕ್ಷೇತ್ರಶಿಕ್ಷಣಾಧಿಕಾರಿ ವರಲಕ್ಷ್ಮೀ ಉಪಸ್ಥಿತರಿದ್ದರು.

    ೨೯ಎಸ್.ಆರ್.ಐ ೨;-ಶುಕ್ರವಾರ ತಾ|ಕಸಾಪ ಹಾಗೂ ಮಹಿಳಾ ಘಟಕದ ಸಹಯೋಗದಲ್ಲಿ ಕನ್ನಡಭವನದಲ್ಲಿ ಆಯೋಜಿಸಿದ ಮಹಿಳಾ ದಿನಾಚರಣೆ ಮತ್ತು ಎಸ್.ವಿ.ರಾಮಚಂದ್ರಭಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗ್ರಾ.ಪಂ ವ್ಯಾಪ್ತಿಯ ಸ್ವಚ್ಛವಾಹಿನಿ ಚಾಲಕಿಯರನ್ನು ಗೌರವಿಸಲಾಯಿತು.ಪಲ್ಲವಿ,ಶಶಿರೇಖಾ,ಇಂಚರ,ಪ್ರಕೃತಿ,ಪ್ರೀತಿ,ಕವಿತ,ಮಾನಸ,ಆನಂದ ಸ್ವಾಮಿ,ಕವಿತಾ ಬಾಪಟ್ ಇದ್ದರು.

    Literature should work to blossom the mind.

  • ಶ್ರೀ ರಂಭಾಪುರಿ ಜಗದ್ಗುರುಗಳವರ ಎಪ್ರೀಲ್ ಮಾಹೆಯ ಪ್ರವಾಸ ವಿವರ

    ಶ್ರೀ ರಂಭಾಪುರಿ ಜಗದ್ಗುರುಗಳವರ ಎಪ್ರೀಲ್ ಮಾಹೆಯ ಪ್ರವಾಸ ವಿವರ

    ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು): ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ೨೦೨೫ನೇ ಸಾಲಿನ ಎಪ್ರೀಲ್ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿರುವುದಾಗಿ ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.
    ದಿನಾಂಕ ೧ರಂದು ಹುಬ್ಬಳ್ಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, ೨ರಂದು ಹುಬ್ಬಳ್ಳಿ ತಾಲೂಕ ಹಳ್ಳಿಯಾಳದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವ ಸಮಾರಂಭ, ೪ರ ಬೆಳಿಗ್ಗೆ ೧೧ ಗಂಟೆಗೆ ಚಿತ್ತಾಪುರ ತಾಲೂಕ ಹದನೂರು ಗ್ರಾಮದಲ್ಲಿ ನೂತನ ಹಿರೇಮಠದ ಉದ್ಘಾಟನಾ ಸಮಾರಂಭ, ಸಂಜೆ ೬ ಗಂಟೆಗೆ ಕಲಬುರ್ಗಿ ತಾಲೂಕ ಸ್ಟೇಷನ್ ಬಬಲಾದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ನಿರ್ಮಿಸಿದ ಸಭಾ ಭವನ ಉದ್ಘಾಟನಾ ಸಮಾರಂಭ,
    ೬ರಂದು ಸೊರಬ ತಾಲೂಕ ದುಗ್ಲಿ ಕ್ಷೇತ್ರದಲ್ಲಿ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ವರ್ಧಂತಿ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ ೭ರಂದು ಮಹಾರಾಷ್ಟ್ರ ರಾಜ್ಯ ಜವಳಿಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಳಸಾರೋಹಣ ಧರ್ಮ ಸಮಾರಂಭ, ೧೧ರಂದು ಚಿಕ್ಕಮಗಳೂರು ಜಿಲ್ಲೆ ಆಲ್ದೂರಿನಲ್ಲಿ ಶ್ರೀ ಮಹಾಗಣಪತಿ ಸ್ಥಾಪನಾ ಮಂಡಲ ಪೂಜಾ ಸಂದರ್ಭದಲ್ಲಿ ಇಷ್ಟಲಿಂಗ ಮಹಾಪೂಜಾ ನಡೆಸುವರು.
    ದಿನಾಂಕ ೧೨ರಂದು ಪೌರ್ಣಿಮೆಯ ನಿಮಿತ್ಯ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ವಾಸ್ತವ್ಯ ಇದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು. ದಿನಾಂಕ ೧೫ರಂದು ಹಾವೇರಿ ಜಿಲ್ಲೆ ಗುತ್ತಲದಲ್ಲಿ ಶ್ರೀಮದ್ರಂಭಾಪುರಿ ಶಾಖಾ ಹೇಮಿಗಿರಿ ಮಠದ ಉದ್ಘಾಟನಾ ಸಮಾರಂಭ, ೧೬ರಂದು ಬೈಲಹೊಂಗಲದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಜಾತ್ರಾ ಅಂಗವಾಗಿ ಪ್ರಶಸ್ತಿ ಪ್ರದಾನ ಧರ್ಮ ಸಮಾರಂಭ, ೧೭ರಂದು ನವಲಗುಂದ ತಾಲೂಕ ಕುಮಾರಕೊಪ್ಪದಲ್ಲಿ ಸಾಮೂಹಿಕ ವಿವಾಹ ಸಮಾರಂಭ,
    ೧೮ರಂದು ನೆಲಮಂಗಲ ತಾಲೂಕ ಆದಿಹೊಸಳ್ಳಿಯಲ್ಲಿ ಶ್ರೀ ಈಶ್ವರ ದೇವಸ್ಥಾನ ಉದ್ಘಾಟನಾ ಸಮಾರಂಭ, ೧೯ರಂದು ಹಾವೇರಿ ಜಿಲ್ಲೆ ರಟ್ಟಿಹಳ್ಳಿಯಲ್ಲಿ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳವರ ಷಷ್ಠ್ಯಬ್ಧಿ ಧರ್ಮ ಸಮಾರಂಭ, ೨೦ರಂದು ದಾವಣಗೆರೆಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಜತ ಮಹೋತ್ಸವ ಧರ್ಮ ಸಮಾರಂಭ,  ೨೧ರಂದು ಮಹಾರಾಷ್ಟ್ರ ರಾಜ್ಯ ಗುಡ್ಡಾಪುರದಲ್ಲಿ ಶ್ರೀಮದ್ರಂಭಾಪುರಿ ಶಾಖಾ ಹಿರೇಮಠದ ಶಿಲಾನ್ಯಾಸ ಸಮಾರಂಭ, ೨೨ರಂದು ಕಮಲಾಪುರ ತಾಲೂಕ ತೆಂಗಟಾದಲ್ಲಿ ಶ್ರೀ ಹನುಮಾನ ದೇವಸ್ಥಾನ ಉದ್ಘಾಟನಾ ಸಮಾರಂಭ, ೨೩ರಂದು ಹುಮನಾಬಾದ ತಾಲೂಕ ಹುಡುಗಿ ಗ್ರಾಮದಲ್ಲಿ ಶ್ರೀಮದ್ರಂಭಾಪುರಿ ಶಾಖಾ ಕಟ್ಟಿಮನಿ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ ಸಮಾರಂಭದಲ್ಲಿ ಪಾಲ್ಗೊಳ್ಳುವರು.
    ದಿನಾಂಕ ೨೪ರಂದು ಬೆಳಿಗ್ಗೆ ಲಕ್ಷ್ಮೇಶ್ವರದಲ್ಲಿ ಬಯಲು ಸಭಾ ಭವನ ಉದ್ಘಾಟನಾ ಸಮಾರಂಭ, ಸಂಜೆ ೫ ಗಂಟೆಗೆ ಹೊನ್ನಾಳಿ ತಾಲೂಕ ದೊಡ್ಡೆತ್ತಿನಹಳ್ಳಿಯಲ್ಲಿ ಪುರ ಪ್ರವೇಶ-ಧರ್ಮ ಸಮಾರಂಭ, ೨೫ರಂದು ದೊಡ್ಡೆತ್ತಿನಹಳ್ಳಿಯಲ್ಲಿ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ಉದ್ಘಾಟನಾ ಧರ್ಮ ಸಮಾರಂಭ, ೨೬ರಂದು ಬೆಂಗಳೂರು ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ,
    ೨೭ ಮತ್ತು ೨೮ರಂದು ಹಾಸನ ತಾಲೂಕ ಮುಟ್ಟನಹಳ್ಳಿಯಲ್ಲಿ ಪುರ ಪ್ರವೇಶ ಧರ್ಮ ಸಮಾರಂಭ ಹಾಗೂ ಮಹಾಪೂಜಾ, ೨೯ರಂದು ಚನ್ನಗಿರಿ ತಾಲ್ಲೂಕ ನಲ್ಲೂರಿನಲ್ಲಿ ಲಿಂ.ಶ್ರೀ ರಂಭಾಪುರಿ ಪಂಚಾಕ್ಷರ ಜಗದ್ಗುರುಗಳ ಗದ್ದುಗೆ ಪ್ರತಿಷ್ಠಾಪನೆ-ಕಳಸಾರೋಹಣ ಧರ್ಮ ಸಮಾರಂಭ, ೩೦ರಂದು ಹೂವಿನಹಡಗಲಿ ತಾಲೂಕ ಕೆಂಚಮ್ಮನಹಳ್ಳಿಯಲ್ಲಿ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸುವರು. ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಸಮಸ್ತ ಜನತೆ ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.
    Details of Shri Rambhapuri Jagadguru’s April tour
  • 13 ಫಲಾನುಭವಿಗಳಿಗೆ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ಉಚಿತ ಬೋರ್‌ವೆಲ್

    13 ಫಲಾನುಭವಿಗಳಿಗೆ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ಉಚಿತ ಬೋರ್‌ವೆಲ್

    ಚಿಕ್ಕಮಗಳೂರು: ಸಣ್ಣ ನೀರಾವರಿ ಇಲಾಖೆ ವತಿಯಿಂದ ಎಸ್ಸಿಪಿ-ಟಿಎಸ್‌ಪಿ ಯೋಜನೆಯಡಿ ಕ್ಷೇತ್ರದ ೧೩ ಫಲಾನುಭವಿಗಳಿಗೆ ಸುಮಾರು ೬೫ ಲಕ್ಷ ರೂ. ವೆಚ್ಚದಲ್ಲಿ ಉಚಿತವಾಗಿ ಬೋರ್‌ವೆಲ್ ಕೊರೆಸಿಕೊಡುವ ಕಾರ್ಯಕ್ಕೆ ತಾಲ್ಲೂಕಿನ ಹಿರೇಗೌಜದಲ್ಲಿ ಗ್ರಾಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಶನಿವಾರ ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೋಷಿತ ವರ್ಗದ ಜನರನ್ನು ಮುನ್ನೆಲೆಗೆ ತರಲು ಶ್ರಮಿಸುತ್ತಿದ್ದಾರೆ. ೧೨ ನೇ ಶತಮಾನದಲ್ಲಿ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲೇ ಮುಖ್ಯಮಂತ್ರಿಗಳು ಸಾಗುತ್ತಿದ್ದಾರೆ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದಾರೆ ಎಂದರು.

    ಸಣ್ಣ ನೀರಾವರಿ ಇಲಾಖೆ ವತಿಯಿಂದ ಶೋಷಿತ ವರ್ಗದವರಿಗೆ ಬೋರ್‌ವೆಲ್ ಕೊರೆಸಿ ಅವರ ಬದುಕನ್ನು ಬಂಗಾರಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಎಲ್ಲಾ ವರ್ಗದಲ್ಲೂ ಬಡವರು, ರೈತರಿದ್ದಾರೆ. ಅವರಾಗಿರೂ ಜಾತಿ, ಪಕ್ಷ ಇರುವುದಿಲ್ಲ. ಶೇ.೭೦ ರಷ್ಟು ರೈತರಿರುವ ನಮ್ಮ ದೇಶ, ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆ ಯಾಗಿ ಸಂವೃದ್ಧವಾಗಿಸಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.

    ಹಾಲಿನ ಬೆಲೆ ೪ ರೂ. ಹೆಚ್ಚಿಸಿರುವುದು ರೈತರಿಗೆ ಕೊಡಲಿಕ್ಕಾಗಿ, ಕಷ್ಟಪಟ್ಟು ಹಾಲು ಉತ್ಪಾದನೆ ಮಾಡುವ ರೈತರಿಗೆ ಅವರ ಖರ್ಚು ಸಹ ಸಿಗದಿದ್ದರೆ ಹೇಗೆ? ಈ ಹಿನ್ನೆಲೆಯಲ್ಲಿ ಹಸು ಸಾಕಿ ಹಾಲು ಉತ್ಪಾದಿಸುವ ರೈತರಿಗೆ ಕೊಡುವ ಸಲುವಾಗಿ ಬೆಲೆ ಏರಿಸಲಾಗಿದೆ. ವಿರೋಧ ಪಕ್ಷದಲ್ಲಿರುವವರು ಆರೋಪ ಮಾಡುವುದು ಸಹಜ ಎಂದರು.

    ನಮ್ಮ ಸರ್ಕಾರ ಬಂದ ಮೇಲೆ ಸಹಸ್ರಾರು ಹೊಸ ಬಸ್‌ಗಳನ್ನು ಬಿಟ್ಟಿದ್ದಾರೆ. ವಿದ್ಯುತ್ ಬೇಡಿಕೆ ಹೆಚ್ಚಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ. ಗಾಣದಾಳಿನಲಿ ಎಂವಿಎಸ್‌ಎಸ್ ಸ್ಟೇಷನ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಅದು ಪೂರ್ಣಗೊಂಡ ಮೇಲೆ ಸಮಸ್ಯೆ ಪರಿಹಾರವಾಗಲಿದೆ ಎಂದರು.

    ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಶಿವಕುಮಾರ್, ಚಂದ್ರಶೇಖರ್, ಲೋಕಯ್ಯ, ಜ್ಞಾನೇಂದ್ರ, ಶಿವಲಿಂಗಯ್ಯ, ತಾ.ಪಂ. ಮಾಜಿ ಸದಸ್ಯ ಮಲ್ಲೇಗೌಡ, ಇಂಜಿನೀಯರ್ ದಕ್ಷಿಣಾ ಮೂರ್ತಿ ಇತರರು ಇದ್ದರು.

    Free borewells for 13 beneficiaries at a cost of about Rs. 65 lakhs

  • ಅಂಧಮಕ್ಕಳ ಪಾಠಶಾಲೆಗೆ ಅನುದಾನ ನೀಡಲು ಶ್ರಮಿಸುತ್ತೇನೆ

    ಅಂಧಮಕ್ಕಳ ಪಾಠಶಾಲೆಗೆ ಅನುದಾನ ನೀಡಲು ಶ್ರಮಿಸುತ್ತೇನೆ

    ಚಿಕ್ಕಮಗಳೂರು: ಅಂಧಮಕ್ಕಳ ಪಾಠಶಾಲೆ ೧೯೯೦ ರಲ್ಲಿ ಆರಂಭಗೊಂಡಿದ್ದು, ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕರು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶೃಂಗೇರಿ ಶಾಸಕ ಹಾಗೂ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ. ರಾಜೇಗೌಡ ತಿಳಿಸಿದರು.

    ಅವರು ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿಯವರಿಗೆ ಗೌರವ ಸಮರ್ಪಣಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಂಧಮಕ್ಕಳ ವಸತಿಯುತ ಪಾಠಶಾಲೆಯಲ್ಲಿ ಉಚಿತ ಊಟ, ವಸತಿ, ಶಿಕ್ಷಣ, ವೈದ್ಯಕೀಯ ಸೇವೆ, ಸಮವಸ್ತ್ರ, ಶಿಕ್ಷಣ ಸಾಮಾಗ್ರಿಗಳನ್ನು ಉಚಿತವಾಗಿ ಪಡೆದು ಹಲವು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಅಧ್ಯಕ್ಷರು ನೀಡಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿ ತಾವು ಮತ್ತು ಶಾಸಕ ಹೆಚ್.ಡಿ ತಮ್ಮಯ್ಯ, ಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಮತ್ತು ಶಿಕ್ಷಣ ಸಚಿವರನ್ನು ಭೇಟಿಮಾಡಿ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ತಾವು ಜಿ.ಪಂ ಅಧ್ಯಕ್ಷರಾಗಿದ್ದಾಗ ಬರುತ್ತಿದ್ದ ಟಿಎ, ಡಿಎಯನ್ನು ಈ ಶಾಲೆಗೆ ನೀಡುತ್ತಿದ್ದೇನೆ, ಮುಂದೆ ವಯಕ್ತಿಕವಾಗಿ ೧ ಲಕ್ಷ ರೂ ದೇಣಿಗೆ ನೀಡುವ ಜೊತೆಗೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ ೧೦ ಲಕ್ಷ ರೂ ನೀಡುವುದಾಗಿ ಭರವಸೆ ನೀಡಿದ ಅವರು, ಈ ರೀತಿ ದೇವರ ಕೆಲಸ ಮಾಡುತ್ತಿರುವ ಡಾ. ಜೆ.ಪಿ ಕೃಷ್ಣೇಗೌಡ ಮತ್ತು ಅವರ ತಂಡಕ್ಕೆ ಶುಭ ಹಾರೈಸಿದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಹೆಚ್.ಡಿ. ತಮ್ಮಯ್ಯ ಮಾತನಾಡಿ, ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷರು ನೀಡಿರುವ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಈ ಶಾಲೆಯನ್ನು ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿಸಿದ್ದ ಪರಿಣಾಮ ಸೌಲಭ್ಯಗಳಿಂದ ವಂಚಿತವಾಗಿದೆ. ಶಾಲಾ ಶಿಕ್ಷಣ ಇಲಾಖೆಗೆ ಸೇರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದರ ಜೊತೆಗೆ ಈ ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಕೊಡಿಸುವಲ್ಲಿ ಶ್ರಮಿಸುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು.

    ಡಾ. ಜೆ.ಪಿ. ಕೃಷ್ಣೇಗೌಡ ಪುತ್ರಿ ವರ್ಷ ತಂದೆಯ ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು.

    ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಹಿಂದೆ ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾಗ ನಡೆದ ನೆನಪುಗಳನ್ನು ಸ್ಮರಿಸಿಕೊಂಡ ಅವರು, ರಾಜ್ಯದಲ್ಲಿ ೧.೭೦ ಲಕ್ಷ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳನ್ನು ರಚನೆ ಮಾಡಿ ೨೦೦ ಕೋಟಿ ರೂ ಅನುದಾನ ಮೀಸಲಿಟ್ಟು ಪ್ರತೀ ಸ್ತ್ರೀಶಕ್ತಿ ಸಂಘಕ್ಕೆ ೫ ಸಾವಿರ ರೂ ಸುತ್ತುನಿಧಿ ಕೊಡುವ ಮೂಲಕ ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿರಿಸುವುದಾಗಿ ತಿಳಿಸಿದರು.

    ಅರ್ಚನೆ, ಅಭಿಷೇಕ ದೇವರಿಗೆ ಮಾಡುತ್ತೇವೆ. ಅದೇ ರೀತಿ ಅನಾಥ, ಅಂಗವಿಕಲ, ವೃದ್ಧರ ಸೇವೆ ಮಾಡುವುದು ಅದಕ್ಕಿಂತ ಹೆಚ್ಚು ಶ್ರೇಷ್ಟ ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷರು ಹಾಗೂ ಖ್ಯಾತ ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಮಾತನಾಡಿ, ಇದೊಂದು ಅಭೂತಪೂರ್ವ ಸಮಾರಂಭ, ಈ ಶಾಲೆಯ ಶಿಕ್ಷಕರಿಗೆ ವಸತಿ ಇರಲಿಲ್ಲ, ಟ್ರಸ್ಟ್‌ನಿಂದ ಕಾವೇರಿ ವಸತಿ ಗೃಹವನ್ನು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಗುಣನಾಥ ಶ್ರೀಗಳು ಉದ್ಘಾಟನೆ ಮಾಡಿದ್ದಾರೆಂದು ಹೇಳಿದರು.

    ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಡಾ. ಹರ್ಷ, ಮಹೇಶ್, ಶಶಿಪ್ರಸಾದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿಶ್ರೀನಿವಾಸ್, ಜಾನಪದ ಸಂಘದ ಅಧ್ಯಕ್ಷ ಸುರೇಶ್, ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ, ಮುಖ್ಯ ಶಿಕ್ಷಕ ಲಕ್ಷ್ಮಣ್‌ಗೌಡ, ಆಶ್ರಯ ಫೌಂಡೇಷನ್ ಅಧ್ಯಕ್ಷ ವಿ.ಪಿ. ಸಾಗರ್ ಮತ್ತಿತರರು ಉಪಸ್ಥಿತರಿದ್ದರು.

    I will work hard to provide grants for a school for blind children.