Category: ಜಿಲ್ಲಾ ಸುದ್ದಿ

  • ರಕ್ತದಾನ ಮಾರಕ ರೋಗ ತಡೆಗಟ್ಟಲು ಪೂರಕ

    ರಕ್ತದಾನ ಮಾರಕ ರೋಗ ತಡೆಗಟ್ಟಲು ಪೂರಕ

    ಚಿಕ್ಕಮಗಳೂರು: ಆಸ್ತಿ ಹಾಗೂ ಅಂತಸ್ತು ಗಳಿಸುವ ಭರದಲ್ಲಿ ಜನಸಾಮಾನ್ಯರು ದೈಹಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಪ್ರತಿಯೊಬ್ಬರು ಆರೋಗ್ಯವನ್ನು ಸ್ನೇಹಿತನಾಗಿಸಿದರೆ, ಸಮಾ ಜದ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂದು ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯ ಹೇಳಿದರು.

    ತಾಲ್ಲೂಕಿನ ಬೆಳವಾಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿ ಕಲ್ ಅಸೋಸಿಯೇಷನ್, ಬೆಳವಾಡಿ ಡಾ.ಜಗದೀಶ್ ಕ್ಲೀನಿಕ್, ಹಳೇ ವಿದ್ಯಾರ್ಥಿಗಳ ಸಂಘ, ಹೋಲಿಕ್ರಾಸ್ ಆಸ್ಪತ್ರೆ, ರೆಡ್‌ಕ್ರಾಸ್, ಬ್ರಹ್ಮಕುಮಾರೀಸ್, ಸಂವೇದ-೨ ಹಾಗೂ ಜೇಸಿಐ ಸಹಯೋಗದಲ್ಲಿ ದೇಶಕ್ಕಾಗಿ ಹುತ್ತಾ ತ್ಮರ ಸ್ಮರಣಾರ್ಥ ಹಮ್ಮಿಕೊಂಡಿದ್ಧ ಉಚಿತ ಬೃಹತ್ ರಕ್ತದಾನ ಹಾಗೂ ನೇತ್ರಾ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಶರೀರದ ಅತ್ಯಮೂಲ್ಯ ನೇತ್ರವು ಇಡೀ ಪ್ರಪಂಚದ ಬೆಳಕನ್ನು ತೋರುವ ಅಂಗ. ಸಣ್ಣಪುಟ್ಟ ದೋಷ ಗಳು ಉಂಟಾದರೆ ತಕ್ಷಣವೇ ತಪಾಸಣೆಗೆ ಒಳಗಾಗುವುದು ಮುಖ್ಯ. ಹೆಚ್ಚಾಗಿ ವೃದ್ದರಲ್ಲಿ ಈ ಸಮಸ್ಯೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ನಿರ್ಲಕ್ಷ್ಯವಹಿಸದೇ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.

    ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರವು ವಿಶ್ವದಲ್ಲಿ ಅಚ್ಚರಿಯದ ಪ್ರಭಾವ ಬೀರಿದರೂ, ಇಂದಿಗೂ ಕೃತಕ ರಕ್ತ ಉತ್ಪಾದಿಸಲು ಸಾಧ್ಯವಾಗಿಲ್ಲ. ಮಾನವನ ರಕ್ತದಿಂದ ಮಾತ್ರ ಇನ್ನೋರ್ವ ಮಾನವನಿಗೆ ರಕ್ತ ಕೊಡಬ ಹುದು. ಹೀಗಾಗಿ ರಕ್ತದಾನ ಕೇವಲ ಇನ್ನೊಂದು ಜೀವಿಸುವ ಜೊತೆಗೆ ಮಾರಕ ರೋಗಗಳನ್ನು ತಡೆಗಟ್ಟಲು ಪೂರಕವಾಗಿದೆ ಎಂದು ತಿಳಿಸಿದರು.

    ಇತ್ತೀಚಿನ ದಿನಗಳಲ್ಲಿ ಮಾನವ ನಕರಾತ್ಮಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಹಾಳಾಗುತ್ತಿದೆ. ಇದ ರೊಂದಿಗೆ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಾಣುತ್ತಿದ್ದೇವೆ. ಹೀಗಾಗಿ ಕೆಲ ಸಮಯವನ್ನು ಆಧ್ಯಾತ್ಮದತ್ತ ಮುಡಿಪಿಡಬೇಕು. ಜ್ಞಾನ ಹಾಗೂ ಪರಮಾತ್ಮನ ಆರಾಧನೆಯಿಂ ದ ಮನಸ್ಸು ಹಗುರವಾಗಲು ಸಾಧ್ಯ ಎಂದರು.

    ಎನ್‌ಐಎಂಎ ರಾಜ್ಯ ಉಪಾಧ್ಯಕ್ಷ ಡಾ|| ಅನೀತ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಓರ್ವ ಮನು ಷ್ಯನ ರಕ್ತಕಣವು ಕನಿಷ್ಟ ನಾಲ್ಕು ಮಂದಿಯ ಪ್ರಾಣ ಉಳಿಸಲಿದೆ. ಹೀಗಾಗಿ ಹೆಚ್ಚೆಚ್ಚು ರಕ್ತದಾನಿಗಳು ಶಿಬಿರದಲ್ಲಿ ಪಾಲ್ಗೊಳ್ಳಬೇಕು. ಪ್ರಸಕ್ತ ಸಾಲಿನಲ್ಲಿ ಸಂವೇದ ಸಂಸ್ಥೆ ೨ ಲಕ್ಷ ರಕ್ತ ಸಂಗ್ರಹಿಸುವ ಗುರಿಯನ್ನು ಹೊಂದಿದ್ದು ಆ ನಿಟ್ಟಿನಲ್ಲಿ ತಂಡವು ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.

    ರಕ್ತದಾನಿಗಳ ಶಿಬಿರದಲ್ಲಿ ಗ್ರಾಮದ ಹಲವಾರು ಯುವಕರು ಸ್ವಯಂಪ್ರೇರಿತರಾಗಿ ಪಾಲ್ಗೊಂಡಿರುವುದು ಖುಷಿಯ ಸಂಗತಿ. ಈ ನಡುವೆ ಸುಮಾರು ೫೦ನೇ ಬಾರಿಗೆ ರಕ್ತದಾನ ಮಾಡಿದ ಪ್ರದೀಪ್‌ಗೌಡ ಅವರಿಗೆ ಇದೇ ವೇಳೆ ಗುರುತಿಸಿ ಅಭಿನಂದನೆ ಸಲ್ಲಿಸಲಾಯಿತು ಎಂದರು.

    ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಪ್ರದೀಪ್‌ಗೌಡ ಮಾತನಾಡಿ ರಾಷ್ಟ್ರಕ್ಕಾಗಿ ಪ್ರಾಣಗೈದ ಭಗತ್‌ಸಿಂಗ್, ಸುಖ ದೇವ್ ಹಾಗೂ ರಾಜಗುರುಗಳ ಕ್ರಾಂತಿಕಾರಿ ಹೋರಾಟದ ಸ್ಮರಣಾರ್ಥ ರಕ್ತದಾನ ಶಿಬಿರ ಹಮ್ಮಿಕೊಂಡಿರು ವುದು ಉತ್ತಮ ಸಂಗತಿ ಎಂದ ಅವರು ದೇಶದ ಹಲವಾರು ರಾಜ್ಯಗಳಲ್ಲಿ ಈ ಶಿಬಿರ ಹಮ್ಮಿಕೊಂಡು ಸಾಗು ತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ಇದೇ ವೇಳೆ ಶಿಬಿರದಲ್ಲಿ ಸುಮಾರು ೮೬ ಮಂದಿ ನೇತ್ರಾ ತಪಾಸಣೆ ನಡೆಸಿ, ೬ ಮಂದಿಗೆ ಉಚಿತ ಲೈನ್ಸ್‌ಗೆ ನೋಂದಣಿಯಾಗಿದೆ. ರಕ್ತದಾನ ಶಿಬಿರದಲ್ಲಿ ೫೦ ಹೆಚ್ಚು ಮಂದಿ ಭಾಗವಹಿಸಿ ಸ್ವಯಂಪ್ರೇರಿತರಾಗಿ ಭಾಗವಹಿ ಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳವಾಡಿ ಗ್ರಾ.ಪಂ ಅಧ್ಯಕ್ಷೆ ಕಾವೇರಮ್ಮ ವಹಿಸಿದ್ದರು.

    ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ಪ್ರದೀಪ್, ಬೆಳವಾಡಿ ಶಾಲಾ ಮುಖ್ಯೋಪಾಧ್ಯಯ ಪಾಂಡುರಂಗ, ಎಸ್‌ಡಿಎಂಸಿ ಅಧ್ಯಕ್ಷ ಬಿ.ಸಿ.ಮಲ್ಲೇಶ್, ಹೋಲಿಕ್ರಾಸ್ ಆಸ್ಪತ್ರೆ ಸಿಬ್ಬಂದಿ ನವ್ಯ, ವೈದ್ಯ ಜಗದೀಶ್, ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಪ್ರತಿನಿಧಿ ಆರ್.ಶ್ರೀನಿವಾಸ್, ಜಿಲ್ಲಾ ನಿರ್ದೇಶಕ ವೀಲಿಯಂ ಪೆರೇರಾ, ಹಳೇ ವಿದ್ಯಾರ್ಥಿ ಪ್ರಕಾ ಶ್ ಮತ್ತಿತರರು ಉಪಸ್ಥಿತರಿದ್ದರು.

    Blood donation helps prevent deadly diseases

  • ಅಕ್ಕಿ ವಿತರಣಾ ಕೇಂದ್ರಗಳಿಗೆ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ಭೇಟಿ

    ಅಕ್ಕಿ ವಿತರಣಾ ಕೇಂದ್ರಗಳಿಗೆ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ಭೇಟಿ

    ಚಿಕ್ಕಮಗಳೂರು:  ಜನತೆಯ ಖಾತೆಗೆ ನೇರ ನಗದು ಸೇರಿದಂತೆ ಪಂಚಗ್ಯಾರಂಟಿಯ ಎಲ್ಲಾ ಯೋಜನೆಗಳಿಂದ ಜಿಲ್ಲೆಗೆ ಪ್ರತಿ ಮಾಸಿಕ ೮೦ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಧ್ಯವರ್ತಿ ಗಳಿಲ್ಲದೆ ಜನತೆಯ ಕಲ್ಯಾಣಕ್ಕಾಗಿ ನೀಡುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾ ನಂದಸ್ವಾಮಿ ಹೇಳಿದರು.

    ನಗರ ಹಾಗೂ ಗ್ರಾಮೀಣ ಪ್ರದೇಶದ ನ್ಯಾಯಬೆಲೆ ಅಂಗಡಿ ಹಾಗೂ ಸಹಕಾರ ಸಂಘಗಳ ಅಕ್ಕಿ ವಿತರ ಣಾ ಕೇಂದ್ರಕ್ಕೆ ತಾಲ್ಲೂಕು ಅಧ್ಯಕ್ಷರಾದ ಮಲ್ಲೇಶ್ ಸ್ವಾಮಿ ಹಾಗೂ ಗ್ಯಾರಂಟಿ ಪ್ರಾಧಿಕಾರದ ಪದಾಧಿಕಾರಿಗಳ ತಂಡದೊಂದಿಗೆ ಶುಕ್ರವಾರ ಭೇಟಿ ನೀಡಿ ಅಕ್ಕಿ ವಿತರಿಸಿ ಅವರು ಮಾತನಾಡಿದರು.

    ಜಿಲ್ಲೆಯಾದಂತ ಇಂದು ಆಯಾ ತಾಲ್ಲೂಕು ಅಧ್ಯಕ್ಷರುಗಳ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಅನು?ನ ಸಮಿತಿಯ ಸದಸ್ಯರು ಅನ್ನಭಾಗ್ಯದ ಅಕ್ಕಿ ವಿತರಣೆ ಅಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆಂದು ತಿಳಿಸಿದರು.

    ಜಿಲ್ಲೆಯ ಹತ್ತು ಲಕ್ಷ ಜನತೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ.ಗಳನ್ನು ರಾಜ್ಯಸರ್ಕಾರ ಭರಿಸಿ ಅನುಕೂಲ ಕಲ್ಪಿಸಿದೆ. ಪಡಿತರ ಚೀಟಿದಾರರ ಪ್ರತಿ ವ್ಯಕ್ತಿಗೆ ತಲಾ ೧೦ ಕೆಜಿ ಅಕ್ಕಿ ವಿತರಿಸುತ್ತಿದೆ ಮತ್ತು ಪಂಚ ಗ್ಯಾರಂಟಿಗಳನ್ನು ಕೊಟ್ಟ ಮಾತಿನಂತೆ ಜಾರಿಗೊಳಿಸುತ್ತಿದ್ದು ಫಲಾನುಭವಿಗಳು ಸರ್ಕಾರಕ್ಕೆ ಕೃತಜ್ಞರಾಗಬೇಕು ಎಂದು ತಿಳಿಸಿದರು.

    ಸರ್ಕಾರವು ಹಣದ ಬದಲಾಗಿ ಅಕ್ಕಿ ವಿತರಿಸುತ್ತಿದ್ದು, ಪಡಿತರದಾರರು ಕಾಳಸಂತೆಯಲ್ಲಿ ಮಾರಾಟ ಮಾಡದೇ, ಜೀವನೋಪಾಯಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಕೆಲವೆಡೆ ತಾಂತ್ರಿಕ ದೋ?ದಿಂದ ಸಣ್ಣಪುಟ್ಟ ಸಮಸ್ಯೆಯಿದೆ ಹೊರತು ಉಳಿದೆಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ಆದೇಶದಂತೆ ಸಂಪೂರ್ಣ ಅಕ್ಕಿ ಯನ್ನು ವಿತರಿಸಿ ಶೇ.೯೯ರ? ಪ್ರಗತಿ ಸಾಧಿಸಿದೆ ಎಂದರು.

    ಇಂದಿಗೂ ಜಿಲ್ಲೆಯಲ್ಲಿ ಬಹುತೇಕ ಮಂದಿ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದುಕೊಂಡಿದ್ದಾರೆ. ಆದರೆ ಒಬ್ಬರಾದರೂ ಯೋಜನೆಗಳ ಸೌಲಭ್ಯ ಬೇಡವೆಂದು ಹೇಳಿಲ್ಲ. ಹೀಗಾಗಿ ಜನತೆ ಯೋಜನೆಗಳನ್ನು ಉಪಯೋಗಿಸಿಕೊಳ್ಳಬೇಕು. ಜೊತೆಗೆ ಮುಸ್ಲೀಂ ಬಾಂಧವರಿಗೆ ರಂಜಾನ್ ಮಾಸಾಚರಣೆ ಹಿನ್ನೆಲೆ ಸರ್ವರಿಗೂ ಒಳಿತಾಗಲೀ ಎಂದು ಶುಭ ಕೋರಿದರು.

    ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ ಗ್ರಾಮೀಣ ಭಾಗದ ಲಕ್ಯಾ, ಮುಗುಳುವಳ್ಳಿ ಮತ್ತು ಮೂಗ್ತಿಹಳ್ಳಿ ಹಾಗೂ ನಗರ ಪ್ರದೇಶದ ನೆಹರುನಗರ, ಉಪ್ಪಳ್ಳಿ ನ್ಯಾಯಬೆಲೆ ಅಂಗಡಿಗಳ ಅಕ್ಕಿ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪಡಿತರ ಚೀಟಿದಾರರಿಗೆ ಸಮಗ್ರ ಮಾಹಿತಿ ಒದಗಿಸಲಾಗಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಸದಸ್ಯರುಗಳಾದ ಅನ್ಸರ್, ಅರಸ್, ಜಯಂತಿ, ನಾಗಣ್ಣ,ಧರ್ಮಯ್ಯ, ನಗರಸಭಾ ಉಪಾಧ್ಯಕ್ಷರಾದ ಅಮೃತೇಶ್, ಸದಸ್ಯರುಗಳಾದ ಮುನೀರ್ ಅಹ್ಮದ್, ಲಕ್ಷ್ಮಣ್, ಖಲಂಧರ್ ಸೇರಿ ದಂತೆ ಮತ್ತಿತರರು ಉಪಸ್ಥಿತರಿದ್ದರು.

    Chairman of Guarantee Schemes visits rice distribution centers

  • ಹೊರಗುತ್ತಿಗೆ ಕೆಲಸ ಮಾಡುವವರಿಗೆ ಅನೂಕುಲವಾಗುವಂತೆ ಸಹಕಾರಿ ಸಂಘ ಸ್ಥಾಪನೆ

    ಹೊರಗುತ್ತಿಗೆ ಕೆಲಸ ಮಾಡುವವರಿಗೆ ಅನೂಕುಲವಾಗುವಂತೆ ಸಹಕಾರಿ ಸಂಘ ಸ್ಥಾಪನೆ

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಇಲಾಖೆ.ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಕೆಲಸ ಮಾಡುವವರಿಗೆ ಅನೂಕುಲವಾಗುವಂತೆ ಸಹಕಾರಿ ಸಂಘದ ಮೂಲಕ ಶಾಸನಾತ್ಮಕವಾಗಿ ಸೌಲಭ್ಯಗಳನ್ನು ಒದಗಿಸಲು ಸಂಘವನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಹೇಳಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕಾರ್ಮಿಕ ಇಲಾಖೆ ವತಿಯಿಂದ ಅಯೋಜಿಸಿದ್ದ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ದೊದ್ದೇಶ ಸಂಘ [ನಿ] ರಚಿಸುವ ಕುರಿತು ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಜಿಲ್ಲಾ ಮತ್ತು ತಾಲ್ಲೂಕು ಮುಂತಾದ ವಿವಿಧ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ,ವಾಹನ ಚಾಲಕ ,ಡಿ ಗ್ರೂಪ್. ಅಡಿಗೆ ಇನ್ನಿತರ ಸೇವೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರ ಸಮಸ್ಯೆಗಳನ್ನು ಅರಿತು, ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಕಾರ್ಮಿಕರ ಇಲಾಖೆ ಸಂಘವನ್ನು ಸ್ಥಾಪಿಸಿ ಯಶಸ್ವಿಯಾಗುತ್ತಿರುವುದನ್ನು ಗಮನಿಸಿ ಅದೇ ಮಾದರಿಯಲ್ಲಿ ನಮ್ಮ ಜಿಲ್ಲೆಯಲ್ಲಿರುವ ಸಂಘ ಸ್ಥಾಪನೆಗೆ ಬೇಡಿಕೆ ಇರುವುದರಿಂದ ಜಿಲ್ಲಾ ಕಾರ್ಮಿಕರ ಸೇವೆಗೆ ವಿವಿದೊದ್ದೇಶ ಸಂಘ [ನಿ] ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು.

    ಈ ಸಂಘದ ಮೂಲಕ ನೌಕರರಿಗೆ ಕನಿಷ್ಠ ವೇತನ ಪಿ.ಎಫ್, ಇ.ಸಿ.ಎಸ್ ಗಳ ಸೌಲಭ್ಯ ಹಾಗೂ ಹೊಗಗೊತ್ತಿಗೆ ಏಜನ್ಸಿಗಳಿಂದ ಆಗುತ್ತಿರುವ ಸಮಸ್ಯೆಗಳ ಶೋಷಣೆಗಳನ್ನು ತಪ್ಪಿಸಲು ಹಾಗೂ ನೌಕರ ವೇತನ ಪಾವತಿ.ಶಾಸನಾತ್ಮಕವಾಗಿ ನೀಡಬೇಕಾದ ಸೌಲಭ್ಯಗಳನ್ನು ಒದಗಿಸಲು ಸಂಘದ ಮೂಲಕ ಕ್ರಮ ಕೈಗೊಳ್ಳಬಹುದು ಎಂದ ಅವರು ಎಲ್ಲಾ ತಾಲ್ಲೂಕುಗಳಿಂದ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಜಿ.ಪಂ.ಸಿ.ಇ.ಒ ಉಪಾಧ್ಯಕ್ಷರಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿಗೆ ಕಾರ್ಮಿಕರ ಅಧಿಕಾರಿ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಈ ರೀತಿಯಾದ ಸಂಘವನ್ನು ಸ್ಥಾಪಿಸಿ ಏಪ್ರೀಲ್ ೪ ಕ್ಕೆ ಮತ್ತೊಂದು ಸಭೆಯಯನ್ನು ನಡೆಸಿ ಅಂತಿಮ ರೂಪು-ರೇಷ ಸಿದ್ದಪಡಿಸಲಾಗುವುದು ಎಂದು ಹೇಳಿದರು.

    ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್ ಕೀರ್ತನಾ ,ಉಪಕಾರ್ಯದರ್ಶಿ ಶಂಕರ್ ಕೊರವರ , ಸಹಕಾರ ಇಲಾಖೆಯ ತೇಜಸ್ವಿನಿ, ಕಾರ್ಮಿಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

    First meeting on forming a multi-purpose association of district labor services

  • ಮಾ.22 ರಂದು ರಾಜ್ಯ ಬಂದ್‌ಗೆ ಕರೆ ಜಿಲ್ಲೆಯ ಜನತೆ ಸಹಕರಿಸಬೇಕು

    ಮಾ.22 ರಂದು ರಾಜ್ಯ ಬಂದ್‌ಗೆ ಕರೆ ಜಿಲ್ಲೆಯ ಜನತೆ ಸಹಕರಿಸಬೇಕು

    ಚಿಕ್ಕಮಗಳೂರು:  ಹೊರರಾಜ್ಯದವರಿಂದ ಕನ್ನಡಿಗರ ಮೇಲೆ ಆಗುತ್ತಿರುವ ದೌರ್ಜನ್ಯ, ದಬ್ಬಾಳಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಮಾ.೨೨ ರಂದು ರಾಜ್ಯ ಬಂದ್‌ಗೆ ಕರೆ ನೀಡಿದ್ದು ಜಿಲ್ಲೆಯಲ್ಲಿನ ವರ್ತಕರು, ವಿವಿಧ ಪಕ್ಷ ಸಂಘಟನೆಗಳ ಕಾರ್ಯಕರ್ತರು ಸಹಕರಿಸಬೇಕು ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮನವಿ ಮಾಡಿದರು.

    ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಾ.೨೨ ರಂದು ಬೆಳಗ್ಗೆ ೬ ರಿಂದ ಸಂಜೆ ೬ ರವರೆಗೆ ಬಂದ್‌ಗೆ ಕರೆ ನೀಡಿದ್ದು, ಎಲ್ಲಾ ಕನ್ನಡಪರ ಸಂಘಟನೆಗಳು, ರೈತ, ದಲಿತ ಸಂಘಟನೆಗಳು,ವಿವಿಧ ರಾಜಕೀಯ ಪಕ್ಷಗಳು, ಆಟೋ ಮಾಲೀಕರ ಮತ್ತು ಚಾಲಕರ ಸಂಘ, ವಿವಿಧ ಮಹಿಳಾ ಸಂಘಟನೆಗಳು, ಹೋಂಸ್ಟೇ ಮತ್ತು ರೆಸಾರ್ಟ್ ಮಾಲೀಕರ ಸಂಘ ಸಮಸ್ತ ಕನ್ನಡ ಮನಸ್ಸುಗಳು ಈ ಬಂದ್‌ಗೆ ಬೆಂಬಲಿಸಿದ್ದಾರೆ ಎಂದರು.

    ಅಂದು ೧೦ನೇ ತರಗತಿ ಪರೀಕ್ಷೆ ಇರುವುದಿಲ್ಲ. ೧ ರಿಂದ ೯ ರವರೆಗೆ ಇರುವ ಕೆಲವು ಪರೀಕ್ಷೆಗಳನ್ನು ಮುಂದೂಡುವಂತೆ ಸರಕಾರಕ್ಕೆ ಮನವಿ ಮಾಡಿದ್ದು, ಸರಕಾರ ಸ್ಪಂದಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಈ ಬಂದ್‌ಗೆ ಪ್ರತಿ ಧರ್ಮದವರು, ಪಕ್ಷಾತೀತವಾಗಿ ಭಾಗವಹಿಸಬೇಕು. ಇಲ್ಲವಾದಲ್ಲಿ ಅವರನ್ನು ಕನ್ನಡ ವಿರೋಧಿಗಳು ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಬೆಳಗಾವಿ ಕೆಎಸ್‌ಆರ್‌ಟಿಸಿ ನೌಕರನ ಮೇಲೆ ಹಲ್ಲೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಶೇ.೭೦ ರಷ್ಟು ಉದ್ಯೋಗ ನೀಡುವುದು, ಎಂಇಎಸ್ ಸಂಘಟನೆಯನ್ನು ಕರ್ನಾಟಕದಲ್ಲಿ ಬಂದ್ ಮಾಡಬೇಕು. ಮೇಕೆದಾಟು ಮತ್ತು ಮಹಾದಾಯಿ ಯೋಜನೆಗೆ ಕೇಂದ್ರ ಸರಕಾರ ಎನ್‌ಓಸಿ ನೀಡಬೇಕು. ಬೆಂಗಳೂರು ಮೆಟ್ರೋ ದರ ಇಳಿಸಬೇಕು.

    ಶಾಲೆ ಕಾಲೇಜುಗಳಲ್ಲಿ ಕನ್ನಡ ಶಿಕ್ಷಣ ಕಡ್ಡಾಯಗೊಳಿಸಬೇಕು. ಕೇಂದ್ರ ಸರಕಾರದ ಕಡ್ಡಾಯ ಹಿಂದಿ ಹೇರಿಕೆ ನೀತಿಯನ್ನು ವಾಪಸ್ಸು ಪಡೆಯಬೇಕು, ಅಕ್ರಮ ಬಾಂಗ್ಲಾ ವಲಸಿಗರನ್ನು ತಡೆಗಟ್ಟಬೇಕು. ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತಾಗಬೇಕು ಎಂದು ಒತ್ತಾಯಿಸಲಾಗುವುದು ಎಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ, ಡಾ.ಸುಂದರಗೌಡ, ಐ.ಕೆ. ಓಂಕಾರೇಗೌಡ, ರಘು, ಅನ್ವರ್, ಶಂಕರೇಗೌಡ, ಸಂತೋಷ್ ಮತ್ತಿತರರಿದ್ದರು.

    The people of the district should cooperate in calling for a state bandh on March 22.

  • ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತರಬೇತಿ

    ಪದವಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತರಬೇತಿ

    ಚಿಕ್ಕಮಗಳೂರು: : ಪದವಿ ಪಡೆದ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಜ್ಞಾನದ ಶಕ್ತಿಯನ್ನು ಹಾನಿಯಾಗಲು ಬಿಡದೆ ಸರ್ಕಾರಿ, ಅರೆಸರ್ಕಾರಿ, ಖಾಸಗಿ ಸ್ವತಂತ್ರವಾಗಿ ಉದ್ಯೋಗ ಸ್ಥಾಪಿಸಲು ಸಾಮಾನ್ಯ ಜ್ಞಾನದ ಅವಶ್ಯಕತೆ ಇದೆ ಎಂದು ನಿವೃತ್ತ ಜನರಲ್ ಮ್ಯಾನೇಜರ್ ಹಾಗೂ ಕೆಎಸ್‌ಎಫ್ ಟ್ರಸ್ಟಿ ಡಾ. ಎಸ್.ಟಿ ರಾಮಚಂದ್ರಪ್ಪ ತಿಳಿಸಿದರು.

    ಅವರು ಇಂದು ನಗರದ ಐಡಿಎಸ್‌ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಲ್ಲಿನ ಕೃಷಿಕ್ ಸರ್ವೋದಯ ಫೌಡೇಷನ್ ವತಿಯಿಂದ ಕೆಎಎಸ್, ಬ್ಯಾಂಕಿಂಗ್ ಮತ್ತು ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗ ಭಾಗವಹಿಸಿ ಮಾತನಾಡಿದರು.

    ಹಿಂದೆ ಶಿಕ್ಷಣ ಪಡೆಯುವುದು ಬಹಳ ಕಷ್ಟ ಇತ್ತು, ಪ್ರಸ್ತುತ ಸುಸಜ್ಜಿತ ಕಟ್ಟಡಗಳ ಜೊತೆಗೆ ಎಲ್ಲಾ ರೀತಿಯ ಉನ್ನತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪದವಿ ಪಡೆದ ಬಳಿಕ ಗ್ರಾಮೀಣ ಭಾಗದಿಂದ ಬಂದ ಅಭ್ಯರ್ಥಿಗಳು ಹಳ್ಳಿಗೆ ವಾಪಸ್ ಹೋಗದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯ್ಕೆಮಾಡಿಕೊಂಡು ಸಮರ್ಥವಾಗಿ ಎದುರಿಸುವ ಮೂಲಕ ಉನ್ನತ ಹುದ್ದೆಗಳಿಗೆ ನೇಮಕರಾಗಿ ಎಂದು ಸಲಹೆ ನೀಡಿದರು.

    ಬ್ಯಾಂಕಿನಲ್ಲಿ ಈಗ ಸೇವೆ ಸಲ್ಲಿಸುತ್ತಿರುವ ಬಹುತೇಕ ಉದ್ಯೋಗಿಗಳು ಹೊರ ರಾಜ್ಯಗಳಾದ ಬಿಹಾರ, ಪಶ್ಚಿಮ ಬಂಗಾಳ, ಆಂದ್ರಪ್ರದೇಶ, ಕೇರಳ, ಒರಿಸ್ಸಾ ಮುಂತಾದೆಡೆಯಿಂದ ಬಂದಿದ್ದಾರೆ. ಬ್ಯಾಂಕಿನಲ್ಲಿ ಕನ್ನಡ ಮಾತನಾಡುವ ಉದ್ಯೋಗಿಗಳ ಸಂಖ್ಯೆ ಬಹಳ ಕಡಿಮೆ ಇದೆ ಎಂದು ವಿಷಾಧಿಸಿದರು.

    ಖಾಸಗಿ ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆಯಬೇಕಾದರೆ ಕನಿಷ್ಟ ಇಂಗ್ಲಿಷ್ ಭಾಷೆಯ ಅನುಭವ ಇರಬೇಕು, ಜೊತೆಗೆ ವ್ಯವಹಾರಕ್ಕಾಗಿ ಗಣಿತದ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

    ಈಗಾಗಲೇ ಕೃಷಿಕ್ ಸರ್ವೋದಯ ಫೌಂಡೇಷನ್ ಸಂಸ್ಥೆ ವತಿಯಿಂದ ೧೯ ಅಭ್ಯರ್ಥಿಗಳು ಸರ್ಕಾರಿ ಬ್ಯಾಂಕ್‌ಗಳ ಸೇವೆಯಲ್ಲಿ ನೇಮಕಗೊಂಡಿದ್ದಾರೆ. ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಉದ್ಯೋಗ ಪಡೆದುಕೊಂಡರೆ ಪ್ರತಿ ಮಾಹೆಗೆ ೮೪ ಸಾವಿರ ರೂ ವೇತನ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ನೀಡುತ್ತಿದ್ದಾರೆಂದು ವಿವರಿಸಿದರು.

    ನಿವೃತ್ತ ಅರಣ್ಯಾಧಿಕಾರಿ ಮತ್ತು ಕೆಎಸ್‌ಎಫ್ ಟ್ರಸ್ಟಿ ಶಿವಣ್ಣ ಮಾತನಾಡಿ, ಸರ್ಕಾರಿ ಉದ್ಯೋಗಕ್ಕೆ ಸೇರುವವರಲ್ಲಿ ಗ್ರಾಮೀಣ ಭಾಗದಿಂದ ಬರುವವರ ಸಂಖ್ಯೆ ಕಡಿಮೆ ಇರುವುದನ್ನು ಮನಗಂಡು ಇದರ ಸೌಲಭ್ಯ ಅವರಿಗೆ ದೊರೆಯಬೇಕೆಂಬ ಉದ್ದೇಶದಿಂದ ೧೯೯೨ ರಲ್ಲಿ ಕೃಷಿಕ್ ಸರ್ವೋದಯ ಫೌಂಡೇಷನ್ ಸ್ಥಾಪಿಸಲಾಯಿತು ಎಂದರು.

    ಕೃಷಿಕ್ ಸರ್ವೋದಯ ಫೌಂಡೇಷನ್ ಸಂಸ್ಥೆ ವತಿಯಿಂದ ತರಬೇತಿ ಪಡೆದ ಸುಮಾರು ೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಐಎಫ್‌ಎಸ್ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆಂದು ಹೇಳಿದರು.

    ಕಳೆದ ವರ್ಷದಿಂದ ಬಡ ಮಕ್ಕಳ ಅನುಕೂಲಕ್ಕಾಗಿ ಸಂಸ್ಥೆ ವತಿಯಿಂದ ಉಚಿತ ಕೋಚಿಂಗ್ ತರಬೇತಿಯನ್ನು ಪ್ರಾರಂಭಿಸಿದ್ದೇವೆ, ಉದ್ಯೋಗ ಪಡೆಯಲು ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಸಾಮಾನ್ಯ ಜ್ಞಾನ ಹೊಂದಿದ ಹಾಗೂ ತರಬೇತಿ ಪಡೆದ ಕೆಲವೇ ಜನರಿಗೆ ಮಾತ್ರ ಉದ್ಯೋಗ ಲಭಿಸುತ್ತಿದೆ ಎಂದು ತಿಳಿಸಿದರು.

    ಚಿಕ್ಕಮಗಳೂರಿನಲ್ಲಿ ಐಎಎಸ್, ಕೆಎಎಸ್, ಐಪಿಎಸ್, ಐಎಫ್‌ಎಸ್ ಹೊರತುಪಡಿಸಿ ಉಳಿದವುಗಳಿಗೆ ಬ್ಯಾಂಕಿಂಗ್ ತರಬೇತಿ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ನಿರುದ್ಯೋಗಿ ಪದವೀಧರರು ಪಡೆದುಕೊಳ್ಳುವಂತೆ ವಿನಂತಿಸಿದರು.

    ಎಐಟಿ ಕಾಲೇಜು ಪ್ರಾಂಶುಪಾಲ ಹಾಗೂ ಕೆಎಸ್‌ಎಫ್ ಕಾರ್ಯದರ್ಶಿ ಡಾ. ಸಿ.ಟಿ. ಜಯದೇವ ಮಾತನಾಡಿ, ಕೃಷಿಕ್ ಸರ್ವೋದಯ ಫೌಂಡೇಷನ್‌ನಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಉದ್ಯೋಗ ಪಡೆಯಬೇಕೆಂದು ಕರೆನೀಡಿದರು.

    ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಸಾಮಾನ್ಯ ಜ್ಞಾನದ ಜೊತೆಗೆ ಸಂಬಂಧಿಸಿದ ವಿಷಯಕ್ಕೆ ತರಬೇತಿ ಪಡೆದಾಗ ಮಾತ್ರ ಉದ್ಯೋಗದ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಪ್ರಭಾರಿ ಪ್ರಾಂಶುಪಾಲ ನಟರಾಜ್, ಮಹೇಶ್, ರಾಧಾಕೃಷ್ಣ, ನಟೇಶ್, ಡಾ. ಕೆ.ಆರ್ ಶ್ರೀನಿವಾಸ್ ಕುಳ್ಳೇಗೌಡ, ಮತ್ತಿತರರು ಭಾಗವಹಿಸಿದ್ದರು.

    Training for graduate students to face competitive exams

  • ಜಿಲ್ಲೆಯಾದ್ಯಂತ 52 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಜ್ಜು

    ಜಿಲ್ಲೆಯಾದ್ಯಂತ 52 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಜ್ಜು

    ಚಿಕ್ಕಮಗಳೂರು: ಶುಕ್ರವಾರದಿಂದ ಆರಂಭವಾಗಲಿರುವ ೨೦೨೪-೨೫ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಜಿಲ್ಲೆಯಾದ್ಯಂತ ೫೨ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದ್ದು, ಪರೀಕ್ಷೆ ಪ್ರಕ್ರಿಯೆಗಳು ಸಸೂತ್ರವಾಗಿ ನಡೆಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಕೆ.ಪುಟ್ಟರಾಜು ತಿಳಿಸಿದ್ದಾರೆ

    ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಒಟ್ಟು ೧೩೩೮೩ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.
    ಬೀರೂರು ಬ್ಲಾಕ್‌ನ ೬ ಕೇಂದ್ರಗಳಲ್ಲಿ ೧೩೦೫ ವಿದ್ಯಾರ್ಥಿಗಳು, ಚಿಕ್ಕಮಗಳೂರು ಬ್ಲಾಕ್‌ನಲ್ಲಿ ೧೧ ಕೇಂದ್ರಗಳಲ್ಲಿ ೩೫೩೪ ಪರೀಕ್ಷಾರ್ಥಿಗಳು, ಕಡೂರು ಬ್ಲಾಕ್‌ನ ೧೦ ಕೇಂದ್ರಗಳಲ್ಲಿ ೨೪೯೨ ವಿದ್ಯಾರ್ಥಿಗಳು, ಕೊಪ್ಪ ಬ್ಲಾಕ್‌ನ ೪ ಕೇಂದ್ರಗಳಲ್ಲಿ ೧೦೮೪ ಮಂದಿ, ಮೂಡಿಗೆರೆ ಬ್ಲಾಕ್‌ನ ೫ ಕೇಂದ್ರಗಳಲ್ಲಿ ೧೩೭೬, ನ.ರಾ.ಪುರ ಬ್ಲಾಕ್‌ನ ೪ ಕೇಂದ್ರಗಳಲ್ಲಿ ೯೬೪ ವಿದ್ಯಾರ್ಥಿಗಳು, ಶೃಂಗೇರಿ ಬ್ಲಾಕ್‌ನ ೨ ಕೇಂದ್ರಗಳಲ್ಲಿ ೫೬೭ ಪರೀಕ್ಷಾರ್ಥಿಗಳು ಹಾಗೂ ತರೀಕೆರೆ ಬ್ಲಾಕ್‌ನ ೧೦ ಕೇಂದ್ರಗಳಲ್ಲಿ ೨೦೬೧ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

    ಎಲ್ಲಾ ೫೨ ಕೇಂದ್ರಗಳಲ್ಲಿ ಕೊಠಡಿಗಳಿಗೆ ಮೂಲ ಸೌಕರ್ಯಗಳಾದ ಪೀಠೋಪಕರಣಗಳು, ಆಸನ ವ್ಯವಸ್ಥೆ, ಕುಡಿಯುವ ನೀರು, ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಇರುವುದನ್ನು ಖಾತ್ರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರು ಮತ್ತು ಪ್ರಶ್ನೆ ಪತ್ರಿಕೆ ಅಭಿರಕ್ಷಕರ ನೇಮಕಾತಿ ಮಾಡಲಾಗಿದೆ. ಸಿಟ್ಟಿಂಗ್ ಸ್ಕ್ವಾಡ್, ಸಂಚಾರಿ ಮೇಲ್ವಿಚಾರಕರು, ಹಾಗೂ ತನಿಖಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಜಿಲ್ಲಾ ಹಂತದ ಜಾಗೃತ ದಳ, ವಿಚಕ್ಷಣಾ ದಳಗಳ ನೇಮಕ ಮಾಡಲಾಗಿದೆ. ಎಲ್ಲಾ ೫೨ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಮೂನೆ-೧ ರಲ್ಲಿ ಕೇಂದ್ರಗಳ ಸಿಸಿಟಿವಿ ಕ್ಯಾಮೆರಾಗಳ ಮಾಹಿತಿ ಪಡೆದು ಕ್ರಮವಹಿಸಿದೆ.

    ಪ್ರತಿ ದಿನದ ಪರೀಕ್ಷೆಯ ನಂತರ ಎಲ್ಲಾ ಕೇಂದ್ರಗಳಿಂದ ಉತ್ತರ ಪತ್ರಿಕೆ ಬಂಡಲುಗಳನ್ನು ಸ್ವೀಕರಿಸಲು ಭದ್ರತಾ ಕೊಠಡಿ ನಿಗದಿ ಮಾಡಲಾಗಿದೆ.
    ಪರೀಕ್ಷಾ ಕೇಂದ್ರಗಳನ್ನು ಒಳಗೊಂಡಂತೆ ವೆಬ್ ಕಾಸ್ಟಿಂಗ್ ಜಿಲ್ಲಾ ಕೇಂದ್ರವನ್ನು ಜಿಲ್ಲಾ ಪಂಚಾಯಿತಿ ಯಲ್ಲಿ ತೆರೆಯಲಾಗಿದೆ. ಇದರೊಂದಿಗೆ ೧೩ ಸದಸ್ಯರನ್ನೊಳಗೊಂಡ ಮೇಲ್ವಿಚಾರಣಾ ತಂಡವನ್ನು ರಚಿಸಲಾಗಿದೆ. ಈ ಎಲ್ಲಾ ಸದಸ್ಯರಿಗೆ ಪರೀಕ್ಷಾ ಮಂಡಳಿಯ ವತಿಯಿಂದ ತರಬೇತಿಯನ್ನು ನೀಡಲಾಗಿದೆ. ಮತ್ತು ಕಾರ್ಯನಿರ್ವಹಣೆಯ ಕುರಿತು ಸೂಚನೆಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

    ವೆಬ್ ಕಾಸ್ಟಿಂಗ್ ಮೂಲಕ ಮೇಲ್ವಿಚಾರಣೆ ಮಾಡಲು ಅವಶ್ಯವಿರುವ ೧೦ ಕಂಪ್ಯೂಟರ್‌ಗಳು, ಇಂಟರ್ನೆಟ್ ಸೌಲಭ್ಯ, ಯುಪಿಎಸ್ ವ್ಯವಸ್ಥೆ ಮಾಡಿ ಕ್ರಮವಸಲಾಗಿದೆ. ಈ ಸಂಬಂಧ ನಮೂನೆ ೨ ರಲ್ಲಿ ಮಾಹತಿ ಪಡೆಯಲಾಗಿದೆ ಎಂದು ತಿಳಿಸಿದರು. ಗುರುವಾರ ಎಲ್ಲಾ ೫೨ ಕೇಂದ್ರಗಳ ಮುಖ್ಯ ಅಧೀಕ್ಷಕರುಗಳಿಂದ ಸಿಸಿಟಿವಿ ಕ್ಯಾಮೆರಾಗಳ ಕಾರ್ಯ ನಿರ್ವಹಣೆ ಕುರಿತು ಜಿಲ್ಲಾ ಹಂತದಲ್ಲಿ ಪರಿಶೀಲನೆ ನಡೆಸಿ ಖಾತ್ರಿಪಡಿಸಿಕೊಳ್ಳಲಾಗಿದೆ. ಮಾರ್ಚ್ ೧೭ ರಂದು ಡ್ರೈ ರನ್ ಮತ್ತು ಟ್ರಯಲ್ ರನ್ ವ್ಯವಸ್ಥೆಯನ್ನು ಮಂಡಳಿ ವತಿಯಿಂದ ಮಾಡಲಾಗಿದೆ ಎಂದಿದ್ದಾರೆ.

    SSLC exam set for 52 centers across the district

  • ಅನ್ನಬಾಗ್ಯ ಯೋಜನೆಯಡಿ ಹಣದ ಬದಲು ೫ ಕೆ.ಜಿ ಹೆಚ್ಚುವರಿ ಅಕ್ಕಿ

    ಅನ್ನಬಾಗ್ಯ ಯೋಜನೆಯಡಿ ಹಣದ ಬದಲು ೫ ಕೆ.ಜಿ ಹೆಚ್ಚುವರಿ ಅಕ್ಕಿ

    ಚಿಕ್ಕಮಗಳೂರು: ರಾಜ್ಯ ಸರ್ಕಾರ ತನ್ನ ಮಾತಿನಂತೆ ಅನ್ನ ಬಾಗ್ಯ ಯೋಜನೆಯಡಿ ಫೆಬ್ರವರಿ ಮತ್ತು ಮಾರ್ಚ್‌ನಿಂದ ಹಣದ ಬದಲಾಗಿ ೫ ಕೆ.ಜಿ ಹೆಚ್ಚುವರಿ ಅಕ್ಕಿಯನ್ನು ನೀಡಲು ಮುಂದಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಶಿವನಾಂದ ಸ್ವಾಮಿ ಹೇಳಿದರು.
    ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಇಂದು ಅವರು ಮಾತನಾಡಿ  ತಾಂತ್ರಿಕ ಕಾರಣದಿಂದ ಒಂದು ವರ್ಷದಿಂದ ೫ ಕೆ.ಜಿ ಅಕ್ಕಿಯ ಬದಲು ಹಣವನ್ನು ನೇರವಾಗಿ  ಫಲಾನುಭವಿಗಳ ಖಾತೆಗೆ ವರ್ಗಾಹಿಸಲಾಗುತ್ತಿತು. ಆದರೆ ಕಳೆದ ೨ ತಿಂಗಳಿಂದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಒಡಂಬಡಿಕೆಯಲ್ಲಿ ಅಕ್ಕಿ ದಾಸ್ತಾನು ಸಿಗುತ್ತಿರುವ ಕಾರಣದಿಂದ ಫೆಬ್ರವರಿ ತಿಂಗಳಿಂದ ಹಣದ ಬದಲು ಅಕ್ಕಿಯನ್ನು ನೀಡಲು ರಾಜ್ಯಾದ್ಯಂತ ಮುಂದಾಗಿದ್ದು ನಮ್ಮ ಜಿಲ್ಲೆಯಲ್ಲಿ ೧೦ ಕೆ.ಜಿ ಅಕ್ಕಿ ನೀಡಲಾಗುತ್ತದೆ ಎಂದು ಹೇಳಿದರು.
    ಜಿಲ್ಲೆಯಲ್ಲಿ ೨ ಲಕ್ಷ ೪೦ ಸಾವಿರ ಬಿ.ಪಿ.ಎಲ್ ಕಾರ್ಡುಗಳಿದ್ದು, ಈ ಕಾರ್ಡ್‌ಗಳಲ್ಲಿನ ಒಟ್ಟು ಫಲಾನುಭವಿಗಳು ೭ ಲಕ್ಷ ೭೪ ಸಾವಿರದ ೪೧೮ ಬಿ.ಪಿ.ಎಲ್ ಕಾರ್ಡ್ ಫಲಾನುಭವಿಗಳು ಹಾಗೂ ಅಂತ್ಯೋದಯ ಅರವತ್ತೆಂಟು ಸಾವಿರದ ಮೂನ್ನೂರ ನಾಲ್ವತೊಂಭತ್ತು ಫಲಾನುಭವಿಗಳಿಗೆ ೫ ಕೆ.ಜಿ ಅಕ್ಕಿಯನ್ನು ನೀಡಲಾಗುತಿದ್ದು,  ಉಳಿದ  ಪಡಿತರರಿಗೆ ರೂ ೧೭೫ ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಫೆಬ್ರವರಿ ಮತ್ತು ಮಾರ್ಚ್  ಮಾಹೆಯ ಹಣದ ಬದಲು ಪ್ರತಿ ಒಬ್ಬರಿಗೆ ೧೫ ಕೆ.ಜಿ ಅಕ್ಕಿಯನ್ನು ಫಲಾನುಭವಿಗಳಿಗೆ ಕೊಡಲಾಗುತ್ತದೆ ಎಂದರು.
    ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಸರಬರಾಜು ಮತ್ತು ದಾಸ್ತಾನು ಕೊರತೆ ಕಂಡುಬರುವುದಿಲ್ಲ ನ್ಯಾಯ ಬೆಲೆ ಅಂಗಡಿಯವರು ಇಂತಹ ಕಾರಣ ನೀಡಿದರೆ ಜನರು ನಂಬಬಾರದು ಎಂದು ಹೇಳಿದರು. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆದ ಫಲಾನುಭವಿಗಳು ಅಕ್ಕಿಯನ್ನು  ಮಾರುಕಟ್ಟೆಯಲ್ಲಿ ಮಾರಾಟ ಮಾಡುವಂತ್ತಿಲ್ಲ ಇಂತಹ ಘಟನೆಗಳು ಕಂಡುಬಂದಲ್ಲಿ ಅಂತವರ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಸಭೆಯಲ್ಲಿ ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿ ರಶ್ಮಿ ಹಾಗೂ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರು ಹಾಜರಿದ್ದರು.
    5 kg additional rice instead of money under Annabagya scheme
  • ದೈಹಿಕ-ಮಾನಸಿಕ ಸದೃಢತೆಗೆ ಕ್ರೀಡಾಕೂಟಗಳು ಸಹಕಾರಿ

    ದೈಹಿಕ-ಮಾನಸಿಕ ಸದೃಢತೆಗೆ ಕ್ರೀಡಾಕೂಟಗಳು ಸಹಕಾರಿ

    ಚಿಕ್ಕಮಗಳೂರು: ದೈಹಿಕ ಶಿಕ್ಷಣ ಶಿಕ್ಷಕರ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡಾಕೂಟಗಳು ಸಹಕಾರಿ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೈರೇಗೌಡ ಕರೆ ನೀಡಿದರು.

    ಅವರು ಇಂದು ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ಗ್ರೇಡ್-೧, ಪ್ರಾಥಮಿಕ ಶಾಲಾ ಗ್ರೇಡ್-೨, ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಇವರುಗಳ ಸಂಯುಕ್ತಾಶ್ರಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ೨೦೨೪-೨೫ನೇ ಸಾಲಿನ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

    ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಹೋರಾಟದ ಫಲವಾಗಿ ಬಹುದಿನಗಳ ಬೇಡಿಕೆಯಾಗದ್ದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ರೀಡಾಕೂಟ ಏರ್ಪಡಿಸಬೇಕೆಂಬ ಉದ್ದೇಶದಿಂದ ಸರ್ಕಾರ ಅನುಮತಿ ನೀಡಿರುವುದರಿಂದ ಇಂದು ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ ಎಂದು ಶ್ಲಾಘಿಸಿದರು.

    ದೈಹಿಕ ಶಿಕ್ಷಕರು ಕ್ರೀಡಾಕೂಟದಲ್ಲಿ ಭಾಗವಹಿಸಬೇಕೆಂಬ ಆಶಾಭಾವನೆ ವ್ಯಕ್ತಪಡಿಸಿದ್ದು, ಕ್ರೀಡೆಯಲ್ಲಿ ಪರಿಣಿತಿ ಪಡೆದು ಕ್ರೀಡಾಕೂಟದಲ್ಲಿ ಬಹಳ ಆಸಕ್ತಿಯಿಂದ ಭಾಗವಹಿಸಿದ್ದೀರಿ, ಅರಣ್ಯ, ದೈಹಿಕ, ಪೊಲೀಸ್ ಈ ಇಲಾಖೆಗಳ ನೌಕರರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅನುಮತಿ ಇರಲಿಲ್ಲ. ಈಗ ಸಾಮಾನ್ಯ ನೌಕರರೊಂದಿಗೆ ಒಡಗೂಡಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವ ಬಗ್ಗೆ ಸರ್ಕಾರವನ್ನು ಅಭಿನಂದಿಸಿದರು.

    ಈ ಬಿಸಿಲಿನ ವಾತಾವರಣದಲ್ಲಿ ಸಕ್ರಿಯವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ದೈಹಿಕ ಶಿಕ್ಷಕರ ದೇಹ ಸದೃಢತೆಗೆ ಸರ್ಕಾರ ಒಳ್ಳೆಯ ನಿರ್ಧಾರ ಮಾಡಿದೆ. ಮಕ್ಕಳನ್ನು ಕ್ರೀಡೆಯಲ್ಲಿ ಪ್ರೋತ್ಸಾಹಿಸುವ ದೈಹಿಕ ಶಿಕ್ಷಕರು, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮುಂತಾದ ರಾಷ್ಟ್ರೀಯ ಹಬ್ಬಗಳಲ್ಲಿ ತಮ್ಮ ಉಪಸ್ಥಿತಿಯಲ್ಲಿ ಕ್ರೀಡೆಗಳನ್ನು ಯಶಸ್ವಿಗೊಳಿಸುತ್ತಿದ್ದೀರಿ ಎಂದು ಹೇಳಿದರು.

    ಜಿಲ್ಲಾ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಪಿ. ಕುಮಾರಸ್ವಾಮಿ ಮಾತನಾಡಿ, ಇಂದು ಉತ್ತಮ ರೀತಿಯಲ್ಲಿ ಈ ಕ್ರೀಡಾಕೂಟ ಆಯೋಜನೆಯಾಗಿದ್ದು, ಎಲ್ಲಾ ಸೌಲಭ್ಯಗಳನ್ನು ನೀಡಿರುವ ಇಲಾಖೆ ಹಾಗೂ ಸಕ್ರಿಯವಾಗಿ ಪಾಲ್ಗೊಂಡಿರುವ ದೈಹಿಕ ಶಿಕ್ಷಕರಿಗೆ ಶುಭಾಶಯ ಕೋರಿದರು.
    ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ದೈಹಿಕ ಶಿಕ್ಷಕರ ಶ್ರಮ ಅವಿಸ್ಮರಣೀಯ, ರಾಜ್ಯ, ರಾಷ್ಟ್ರಮಟ್ಟಕ್ಕೆ ತಂಡವನ್ನು ಆಯ್ಕೆಮಾಡಿ ಕಳುಹಿಸುವಲ್ಲಿ ಪರಿಶ್ರಮ ವಹಿಸುತ್ತಿದ್ದಾರೆ ಎಂದು ತಿಳಿಸಿದರು.

    ಈ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಜಿಲ್ಲೆಯ ತಂಡಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಡಯಟ್ ದೈಹಿಕ ಶಿಕ್ಷಣ ಉಪನ್ಯಾಸಕ ಜ್ಞಾನಮೂರ್ತಿ ದೈಹಿಕ ಶಿಕ್ಷಕರಿಗೆ ಕ್ರೀಡಾಕೂಟದ ಮೂಲಕ ಉಲ್ಲಾಸ ಉತ್ಸಾಹ ಮೂಡಿಸಲು ಸರ್ಕಾರ ಉತ್ತೇಜನ ನೀಡಿದೆ ಎಂದು ಹೇಳಿದರು.

    ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಯು.ವಿ ಪಾಲಾಕ್ಷಮೂರ್ತಿ ಮಾತನಾಡಿ, ಜಿಲ್ಲಾಮಟ್ಟದ ಪ್ರಥಮ ಕ್ರೀಡಾಕೂಟವನ್ನು ಆಯೋಜನೆ ಮಾಡಲು ಸರ್ಕಾರ ಅನುಮತಿ ನೀಡಿರುವ ಬಗ್ಗೆ ಕೃತಜ್ಞತೆ ಸಲ್ಲಿಸಿದ ಅವರು, ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ ಇಲ್ಲಿ ಗೆದ್ದು ಆಯ್ಕೆಯಾದ ತಂಡ ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವಂತಾಗಲಿ ಎಂದು ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ತಾಲ್ಲೂಕು ದೈಹಿಕ ಪರಿವೀಕ್ಷಕರು ಷೇರ್ ಅಲಿ.ಎಂ.ಆರ್, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಜಿ.ಚಂದ್ರನಾಯಕ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ.ಪಿ.ಚಂದ್ರಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕರು , ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರೇಗೌಡ, ಫೈರೋಜ್ ಅಹ್ಮದ್, ಚಂದ್ರಯ್ಯ, ವಿನುತ, ಮಹೇಶ್, ಬಿ.ವಿ.ಗಂಗಾಧರ್, ಕೆ.ಎನ್.ಮಂಜುನಾಥ್, ಬಿ.ಆರ್.ಕಿರಣ್‌ಕುಮಾರ್, ಶ್ರೀನಿವಾಸ್, ಪ್ರವೀಣ್ ಪಿಂಟೋ, ಉಮೇಶ್, ಶಿವಪ್ಪ, ಪರಮೇಶ್, ರವಿಕುಮಾರ್ ಉಪಸ್ಥಿತರಿದ್ದರು. ಪಾಂಡುಕುಮಾರ್ ಸ್ವಾಗತಿಸಿದರು.

    ಮೊದಲಿಗೆ ಪಾಂಡುಕುಮಾರ್ ಸ್ವಾಗತಿಸಿ, ನಾಗರಾಜ್ ನಿರೂಪಿಸಿ ಕೊನೆಯಲ್ಲಿ ಪರಮೇಶ್ವರಪ್ಪ ವಂದಿಸಿದರು.

    Sports events are helpful for physical and mental fitness.

  • ದಶಧರ್ಮ ಸೂತ್ರಗಳು ಜೀವನ ವಿಕಾಸಕ್ಕೆ ಅಡಿಪಾಯ

    ದಶಧರ್ಮ ಸೂತ್ರಗಳು ಜೀವನ ವಿಕಾಸಕ್ಕೆ ಅಡಿಪಾಯ

    ಚಿಕ್ಕಮಗಳೂರು: :  ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳು ಜೀವನದ ವಿಕಾಸಕ್ಕೆ ಭದ್ರ ಬುನಾದಿಯಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಅವರು ಮಂಗಳವಾರ ಅಜ್ಜಂಪುರ ತಾಲೂಕಿನ ಗಡಿಗಿರಿಯಾಪುರ ಶ್ರೀ ಸಿದ್ದೇಶ್ವರಸ್ವಾಮಿ ಬಯಲು ಸಭಾಂಗಣದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

    ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಸಾತ್ವಿಕ ಮತ್ತು ತಾತ್ವಿಕ ಚಿಂತನೆಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುವುದು. ಪರಿಶುದ್ಧವಾದ ಪವಿತ್ರವಾದ ಜೀವನ ರೂಪಿಸಿಕೊಳ್ಳಲು ಧರ್ಮಪ್ರಜ್ಞೆ ಅವಶ್ಯಕ. ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸುವುದೇ ನಿಜವಾದ ಧರ್ಮ. ತಾನು ಎಲ್ಲರಿಗಾಗಿ ಅನ್ನುವುದು ಧರ್ಮ. ಎಲ್ಲರೂ ತನಗಾಗಿ ಅನ್ನುವುದು ಅಧರ್ಮ. ತತ್ವವನ್ನು ಅರಿತವನಿಗೆ ಸತ್ಯದ ಬೆಳಕು ಗೋಚರಿಸುತ್ತದೆ. ಕಾಯಕ ಮತ್ತು ದಾಸೋಹದ ಮೂಲಕ ಅತ್ಯದ್ಭುತ ಯಶಸ್ಸು ಸಾಧಿಸಲು ಸಾಧ್ಯವೆಂಬುದನ್ನು ಬೋಧಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಗಂಡು ಹೆಣ್ಣು, ಉಚ್ಛ ನೀಚ ಬಡವ ಬಲ್ಲಿದ ಎನ್ನದೇ ಸರ್ವರಿಗೂ ಸಮಾನವಾದ ಅವಕಾಶವನ್ನು ಕೊಟ್ಟವರು ಯುಗಪುರುಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯರೆಂಬುದನ್ನು ಮರೆಯಬಾರದು. ಗ್ರಾಮ ಚಿಕ್ಕದಾದರೂ ಬಹು ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿರುವುದು ತಮ್ಮೆಲ್ಲರ ಧರ್ಮ ನಿಷ್ಠೆಗೆ ಗುರು ಪೀಠಾಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

    ಸಮಾರಂಭ ಉದ್ಘಾಟಿಸಿ ಮಾತನಾಡಿದ ಡಿ.ಸಿ.ಸಿ.ಬ್ಯಾಂಕ ಜಿಲ್ಲಾಧ್ಯಕ್ಷರು-ಮಾಜಿ ಶಾಸಕರಾದ ಡಿ.ಎಸ್.ಸುರೇಶ್ ಅವರು ಧರ್ಮ ದರ್ಶನಗಳ ಜ್ಞಾನದ ಅರಿವಿಗಾಗಿ ಸಂಸ್ಕೃತಿ ಜ್ಞಾನ ಅವಶ್ಯಕ. ಸದೃಢ ಸಮೃದ್ಧಿ ನಾಡು ಕಟ್ಟುವುದೇ ಧರ್ಮದ ಪರಮ ಗುರಿ. ಆದರ್ಶ ಗುಣ ಮೌಲ್ಯಗಳ ಧರ್ಮ ವೀರಶೈವ. ವ್ಯಕ್ತಿತ್ವ ವಿಕಾಸಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರವಾದುದೆಂದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶಿವಾಗಮಗಳು ವೀರಶೈವ ಧರ್ಮ ಸಂಸ್ಕೃತಿಯ ಬೇರುಗಳು. ಶಿವಾಗಮಗಳಲ್ಲಿ ವೀರಶೈವ ಧರ್ಮದ ಹಿರಿತನ ಮತ್ತು ಪ್ರಾಚೀನ ಇತಿಹಾಸ ಕಾಣಬಹುದಾಗಿದೆ. ಗುರುವು ಜ್ಯೋತಿಯಂತೆ ಬೆಳಕು ನೀಡಿ ಪ್ರಗತಿ ಪಥದತ್ತ ಮುನ್ನಡೆಸಲು ಸಮರ್ಥನಾಗಿರುವನು. ನೊಂದವರ ಬೆಂದವರ ಬಾಳಿಗೆ ಬೆಳಕು ತೋರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ನಮ್ಮೆಲ್ಲರ ಬಾಳ ಬದುಕಿಗೆ ಶ್ರೇಯಸ್ಸನ್ನು ಉಂಟು ಮಾಡುತ್ತವೆ ಎಂದರು.

    ಪವಿತ್ರ ಸಮಾರಂಭದ ಸಮ್ಮುಖವನ್ನು ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು, ತರೀಕೆರೆ ಜಗದೀಶ್ವರ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ತೆಂಡೇಕೆರೆ ಗಂಗಾಧರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹಾಗೂ ಹಣ್ಣೆ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸಿದ್ದರು. ನಂದೀಪುರ ಹಿರೇಮಠದ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿ ಅಂತರಂಗದ ಅಂಧಕಾರ ನಿವಾರಣೆ ಶ್ರೀ ಗುರುವಿನಿಂದ ಮಾತ್ರ ಸಾಧ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮಾನವೀಯ ಆದರ್ಶ ಮೌಲ್ಯಗಳು ಸಕಲರ ಬಾಳಿನಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತವೆ ಎಂದರು.

    ಅಜ್ಜಂಪುರ ತಾಲ್ಲೂಕು ಜಂಗಮ ಸಮಾಜದ ಅಧ್ಯಕ್ಷ ಎನ್.ವಿ.ಗಂಗಾಧರಯ್ಯ ಪ್ರಾಸ್ತಾವಿಕ ನುಡಿಯಲ್ಲಿ ಸಮರ ಜೀವನವನ್ನು ಅಮರ ಜೀವನದೆಡೆಗೆ ಕರೆದೊಯ್ಯುವುದೇ ಗುರು ಧರ್ಮ. ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಸಂದರ್ಭದಲ್ಲಿ ಆದರ್ಶ ಮೌಲ್ಯಗಳ ಪರಿಪಾಲನೆ ಮತ್ತು ಚಿಂತನೆಗಳು ಅವಶ್ಯಕವಾಗಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗಪುರುಷರಾಗಿ ಸರ್ವರಿಗೂ ಅನ್ವಯಿಸುವ ಧಾರ್ಮಿಕ ಚಿಂತನಗಳನ್ನು ಬೋಧಿಸಿರುವುದು ನಮ್ಮೆಲ್ಲರ ಬಾಳಿಗೆ ಬಲ ಮತ್ತು ಬೆಳಕು ಉಂಟು ಮಾಡುತ್ತವೆ ಎಂದರು. ಶಿವಮೊಗ್ಗದ ನಿವೃತ್ತ ಪ್ರಾಚಾರ್ಯ ಹೆಚ್.ಬಿ.ಪಂಚಾಕ್ಷರಯ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಹಾಗೂ ಸಾಮಾಜಿಕ ಸತ್ಕ್ರಾಂತಿ ಕುರಿತು ಉಪನ್ಯಾಸವನ್ನಿತ್ತರು.

    ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜಿ.ಪಂ.ಮಾಜಿ ಸದಸ್ಯರಾದ ಕೆ.ಆರ್.ಆನಂದಪ್ಪ ಮತ್ತು ಶಂಭೈನೂರು ಆನಂದಪ್ಪ, ಕುಮಾರಿ ರಚನಾ ಶ್ರೀನಿವಾಸ್ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಗುರುರಕ್ಷೆ ಪಡೆದರು. ಗಣ್ಯರು ಹಾಗೂ ದಾನಿಗಳಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಕುಮಾರಿ ಪ್ರೀತಿ ಸ್ವಾಗತಿಸಿದರು. ಶಿಕ್ಷಕ ಜಗದೀಶ ನಿರೂಪಿಸಿದರು.

    Sri Jagadguru Renukacharya Jayanti Yugamanotsava

  • ಹೆಣ್ಣುಮಕ್ಕಳು ಸಾಮಾಜಿಕ ಸಮಸ್ಯೆ ಎದುರಿಸಲು ಶಿಕ್ಷಣ ಸಹಕಾರಿ

    ಹೆಣ್ಣುಮಕ್ಕಳು ಸಾಮಾಜಿಕ ಸಮಸ್ಯೆ ಎದುರಿಸಲು ಶಿಕ್ಷಣ ಸಹಕಾರಿ

    ಚಿಕ್ಕಮಗಳೂರು: ಪ್ರಸ್ತುತ ಸಮಾಜದಲ್ಲಿ ಎದುರಾಗುವ ಸಾಮಾಜಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಹೆಣ್ಣುಮಕ್ಕಳಿಗೆ ಶಿಕ್ಷಣ ಸಹಕಾರಿ ಎಂದು ಸಾಮಾಜಿಕ ವಾಣಿಜ್ಯೋದ್ಯಮಿ ಪಲ್ಲವಿ ಸಿ.ಟಿ. ರವಿ ಹೇಳಿದರು.

    ಅವರು ಇಂದು ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಏರ್ಪಡಿಸಿದ್ದ ವಿಶೇಷ ಸರ್ವ ಸದಸ್ಯರ ಸಭೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

    ಹೆಣ್ಣುಮಕ್ಕಳಿಗೆ ಇಂದು ಹೆಚ್ಚಿನ ಸ್ಥಾನಮಾನ ದೊರೆಯುತ್ತಿದ್ದು, ಇದಕ್ಕೆ ಕಾರಣ ಶಿಕ್ಷಣ. ಈ ನಿಟ್ಟಿನಲ್ಲಿ ಸರ್ವರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ಹೆಣ್ಣುಮಕ್ಕಳಿಗೆ ತಾಯಿಯೇ ಮೊದಲ ಗುರು, ಅವರಿಂದ ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ ಮನೋಭಾವ ಎಲ್ಲವನ್ನೂ ಕಲಿಯುವುದಕ್ಕೆ ತಾಯಿ ಪ್ರೇರಣೆಯಾಗಿದ್ದು, ಆತ್ಮವಿಶ್ವಾಸದಿಂದ ಶುಚಿರುಚಿಯಾದ ಅಡುಗೆ ಮಾಡಿ ಬಡಿಸುತ್ತಿದ್ದೀರಿ ಎಂದು ಶ್ಲಾಘಿಸಿದರು.

    ನಮ್ಮ ಬದುಕಿನ ಆಧಾರದಲ್ಲಿ ಜೀವನ ನಿರ್ಧಾರವಾಗುತ್ತದೆ. ಜಡೆಗಳು ಸೇರುವುದು ತುಂಬಾ ಕಷ್ಟ ಎನ್ನುತ್ತಾರೆ, ಆದರೆ ಇಂದು ಬಹುತೇಕ ಜಡೆಗಳು ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದೀರಿ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಮಹಿಳೆಯರು ಸಂಘಟಿತರಾಗಲು ಸಂಘಟನೆ ಅವಶ್ಯಕ, ಸಂಘದಲ್ಲಿ ಸದಸ್ಯರಾಗಬೇಕಾದರೆ ಮಾತೃಶಕ್ತಿ ಬಹಳ ಪ್ರಬಲವಾಗಿರಬೇಕು ಎಂದರು.

    ಹೆಣ್ಣು ಸಮಾಜದಲ್ಲಿ ಜನಿಸಿದ ಬಳಿಕ ವಯಕ್ತಿಕ ಸಾಧನೆ ಜೊತೆಗೆ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುವವರಿಗೆ ತಾಯಿ ಹೃದಯ ಪ್ರೀತಿ ಅಗತ್ಯ ಎಂದು ಹೇಳಿದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಜಂಟಿ ನಿರ್ದೇಶಕರಾದ ಬಿ.ಎಲ್. ಶ್ವೇತ ಮಾತನಾಡಿ, ೧೯೭೫ ರ ಮಾ.೮ ರಂದು ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರಾರಂಭಿಸಿ ಪುರಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಬಲರು ಎಂಬುದಕ್ಕೆ ನಾಂದಿಯಾಗಿದೆ ಎಂದರು.

    ಪ್ರಪಂಚ ಎಲ್ಲಾ ರಂಗದಲ್ಲಿಯೂ ಮುಂದೆ ಸಾಗುತ್ತಿದ್ದು, ಮಹಿಳೆಯರೂ ಸಹ ಎಲ್ಲಾ ರೀತಿಯಲ್ಲಿಯೂ ಸಬಲರಾಗಿದ್ದಾರೆ. ಈ ಸಾಮರ್ಥ್ಯವನ್ನು ಒಂದು ಕುಟುಂಬದ ಜೊತೆಜೊತೆಗೆ ತೆಗೆದುಕೊಂಡು ಹೋಗಬೇಕೆಂದು ಕರೆನೀಡಿದರು. ಓರ್ವ ಮಹಿಳೆ ಸಮಾಜದಲ್ಲಿ ಯಶಸ್ವಿಯಾಗಿ ತಲೆಎತ್ತಿ ಸಾಧನೆ ಮಾಡಿ ನಿಲ್ಲಬೇಕಾದರೆ ಅದರ ಹಿಂದೆ ಆ ಕುಟುಂಬದ ಪರಿಶ್ರಮ ಇರುತ್ತದೆ. ವಯಕ್ತಿಕವಾಗಿ ನಾನೂಸಹ ಎಂದು ಹೇಳಿದರು.

    ಒಂದು ಸಮುದಾಯದ ಬೆಳವಣಿಗೆಗೆ ಮಹಿಳಾ ಸಂಘದ ಅವಶ್ಯಕತೆ ಇದ್ದು, ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಶಕ್ತಿ, ಸಾಮರ್ಥ್ಯ ರಾಜ್ಯ ಅಂತರಾಜ್ಯ ಮಟ್ಟದಲ್ಲಿ ಹೆಸರು ಮಾಡಿದೆ ಎಂದು ಹೇಳಿದರು.

    ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಮಹಿಳಾ ಒಕ್ಕಲಿಗರ ಸಂಘದಲ್ಲಿ ಹಿಂದೆ ಸೇವೆಸಲ್ಲಿಸಿ ಯಶಸ್ವಿಯಾಗಿ ಆಡಳಿತ ನಡೆಸಿರುವುದು ಮಾದರಿಯಾಗಿ ಇಂದಿನ ಪದಾಧಿಕಾರಿಗಳಿಗೆ ಅಡಿಪಾಯ ಹಾಕಿದ್ದಾರೆ. ಮಹಿಳಾ ಸಂಘ ಸಮಾಜಮುಖಿ ಕಾರ್ಯ ಕೈಗೊಳ್ಳುವಲ್ಲಿ ಮುಂದಿನ ದಿನಗಳಲ್ಲಿ ಸಂಘ ಉನ್ನತ ಶ್ರೇಣಿಗೆ ಬೆಳೆಯಲಿ ಎಂದು ಶುಭ ಹಾರೈಸಿದರು.

    ಒಕ್ಕಲಿಗರ ಸಮಾಜ ಸಂಸ್ಕಾರ, ಸಂಸ್ಕೃತಿ ತಿಳಿಹೇಳುವುದು ಇಂದಿನ ಕಾರ್ಯಕ್ರಮದ ಮುಖ್ಯ ಉದ್ದೇಶ, ಇಂದು ಆಸ್ತಿ-ಅಂತಸ್ತಿನ ಕಡೆ ಪ್ರಪಂಚ ನಾಗಾಲೋಟದಲ್ಲಿ ಓಡುತ್ತಿದೆ ಎಂದು ವಿಷಾಧಿಸಿದರು.

    ಪ್ರಸ್ತುತ ಹಣದ ಆಸೆಗೆ ಬಿದ್ದು, ಭೂಮಿಯನ್ನು ಕಳೆದುಕೊಳ್ಳುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಒಕ್ಕಲಿಗ ಕುಟುಂಬ ವ್ಯವಸ್ಥೆಯಿಂದ ಹೊರಗಡೆ ಇರುವವರಿಗೆ ನಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುತ್ತಿರುವುದರಿಂದ ಒಕ್ಕಲಿಗ ಜನಾಂಗದ ಅಳಿವಿನ ಪ್ರಶ್ನೆಯಾಗಿದೆ ಎಂದು ಎಚ್ಚರಿಸಿದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ ಮಾತನಾಡಿ, ಎಲ್ಲಿ ಸ್ತ್ರೀ ಪೂಜಿಸುತ್ತಾಳೋ ಅಲ್ಲಿ ದೇವರು ನೆಲೆಸಿರುತ್ತಾನೆ, ಮಹಿಳೆ ಅವಮಾನಕ್ಕೊಳಗಾದರೆ ಎಲ್ಲಾ ಕ್ರಿಯೆಗಳು ಪ್ರಬಲವಾಗಿದ್ದರೂ ಫಲಪ್ರದವಾಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ವರೂ ಸ್ತ್ರೀಯರನ್ನು ಗೌರವಿಸಬೇಕೆಂದು ವಿನಂತಿಸಿದರು.

    ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸಮುದಾಯದ ಎಲ್ಲರೂ ತನು, ಮನ, ಧನ ಸಹಾಯ ಮಾಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಲಕ್ಷ್ಮಿಪ್ರಜ್ಞಾ. ಎಸ್, ಮಾನ್ಯ ಕೆಂಚೈನ್. ಡಿ.ಜೆ, ಮಂದಿರ.ಎಂ, ಮನಸ್ಮಿತ, ಪೂರ್ಣಿಮಾ ಸುದಿನ್ ಇವರುಗಳನ್ನು ಸನ್ಮಾನಿಸಲಾಯಿತು.

    ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಉಪಾಧ್ಯಕ್ಷೆ ಕಾವ್ಯಸುಕುಮಾರ್, ಕಾರ್ಯದರ್ಶಿ ಅಮಿತವಿಜೇಂದ್ರ, ಸಹಕಾರ್ಯದರ್ಶಿ ಕೋಮಲರವಿ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್, ಗೌರವ ಕಾರ್ಯದರ್ಶಿ ಎಂ.ಎಸ್.ಪ್ರದೀಪ್‌ಕುಮಾರ್, ನಿರ್ದೇಶಕರುಗಳಾದ ಹರಿಣಾಕ್ಷಿನಾಗರಾಜ್, ಭವ್ಯನಟೇಶ್, ಪವಿತ್ರರತೀಶ್, ಸಿ.ಟಿ.ರೇವತಿಧರ್ಮರಾಜ್, ಮಾಜಿ ಅಧ್ಯಕ್ಷರಾದ ಸವಿತಾರಮೇಶ್, ಜಾಹ್ನವಿ ಜಯರಾಮ್, ನಿರ್ದೇಶಕರುಗಳಾದ ಶಕುಂತಲಾ, ಮಂಜುಳ, ವೇದ, ಚಂಪ, ಅನುಪಮ, ವಿನುತ, ರಾಜೇಶ್ವರಿ, ಕೀರ್ತಿ, ತನುಜ, ಸುನಿತ, ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು,

    Education helps girls face social problems