Category: ಚಿಕ್ಕಮಗಳೂರು ನಗರ

  • ಮನುಷ್ಯನ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

    ಮನುಷ್ಯನ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

    ಶೃಂಗೇರಿ: ‘ಮನುಷ್ಯನ ಜೀವ ಅತ್ಯಮೂಲ್ಯವಾದದ್ದು, ಮನುಷ್ಯನ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ದುರದೃಷ್ಟವಾಗಿ ಈ ದುರಂತ ಸಂಭವಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

    ತಾಲ್ಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗೆ ಕೆರೆಕಟ್ಟೆ ಗ್ರಾಮದ ಕೆರೆಗದ್ದೆಯಲ್ಲಿ ಆನೆ ತುಳಿತಕ್ಕೊಳಗಾಗಿ ಮೃತಪಟ್ಟ ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡ ಅವರ ಮನೆಗೆ ಭೇಟಿ ನೀಡಿ, ಬಳಿಕ ಅವರು ಮಾತನಾಡಿದರು.

    ‘ಮನುಷ್ಯನ ಜೀವವೂ ಉಳಿಯಬೇಕು, ಪ್ರಾಣಿಯ ಸಂಕುಲವೂ ಉಳಿಯಬೇಕು. ಇಂದು ಆನೆಗಳ ಸಂಖ್ಯೆ, ಹುಲಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ನೈಸರ್ಗಿಕ ಸಂಪತ್ತಿನಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾಗಿದೆ. ನಗರೀಕರಣದಿಂದಾಗಿ ಅರಣ್ಯದ ವಿಸ್ತೀರ್ಣ ಕಡಿಮೆ ಆಗುತ್ತಿದೆ. ಪ್ರಾಣಿಗಳ ದಾಳಿಯಿಂದಾಗಿ ರಾಜ್ಯದಲ್ಲಿ 30 ರಿಂದ 40 ಜನರು ಮೃತಪಟ್ಟ ಘಟನೆಗಳು ಸಂಭವಿಸುತ್ತಿದೆ. ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡ ಅವರ ಕುಟುಂಬದ ನೋವಿನ ಜೊತೆಗೆ ಇಲಾಖೆ ಹಾಗೂ ನಾವು ಸದಾ ಇರುತ್ತೇವೆ. ಅವರ ಕುಟುಂಬದ ಕಷ್ಟ ಸುಖಕ್ಕೆ ಸ್ಪಂದಿಸಲಿದೆ ಎಂದು ಹೇಳಿದರು.

    ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ ₹20 ಲಕ್ಷ ನೀಡಲಾಗಿದೆ. ವೈಯಕ್ತಿಕವಾಗಿ ಎರಡು ಕುಟುಂಬಕ್ಕೆ ತಲಾ ₹5 ಲಕ್ಷ ಮತ್ತು ಶಾಸಕ ಟಿ.ಡಿ ರಾಜೇಗೌಡರು ಎರಡು ಕುಟುಂಬಕ್ಕೆ ತಲಾ ₹1 ಲಕ್ಷವನ್ನು ಶಾಸಕ ಟಿ.ಡಿ.ರಾಜೇಗೌಡರ ಮೂಲಕ ತಲುಪಿಸಲಾಗುತ್ತದೆ. ಕಾಯಂ ಆಗಿ ಉದ್ಯೋಗ ಕಲ್ಪಿಸಲು ಅವಕಾಶವಿಲ್ಲದೇ ಇರುವುದರಿಂದ ಕಟುಂಬದಲ್ಲಿನ ಒಬ್ಬರಿಗೆ ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಉದ್ಯೋಗವನ್ನು ತಕ್ಷಣವೇ ನೀಡಲು ಸೂಚಿಸಲಾಗಿದೆ. ಪರಿಹಾರದ ಧನವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

    ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕಾರ್ಯೋನ್ಮುಖರಾಗಿದ್ದಾರೆ. ಆನೆ ಯಾವ ಸಮಯದಲ್ಲಿ ಬರುತ್ತವೆ. ಹೇಗೆ ಬರುತ್ತವೆ, ಎಂದು ಗೊತ್ತಾಗುವುದಿಲ್ಲ’ ಎಂದರು.

    ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಕಾಡಾ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್‍ಪಿ ವಿಕ್ರಮ್ ಅಮ್ಟೆ, ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ವನ್ಯಜೀವಿ ವಿಭಾಗದ ಡಿಎಫ್‍ಒ ಶಿವರಾಮ್ ಬಾಬು, ಎಸಿಎಫ್ ಮೋಹನ್ ಕುಮಾರ್, ವಲಯಾ ಅರಣ್ಯ ಸಂರಕ್ಷಣಾಧಿಕಾರಿ ಮಧುಕರ್, ವನ್ಯಜೀವಿ ವಲಯಾ ಅರಣ್ಯ ಸಂರಕ್ಷಣಾಧಿಕಾರಿ ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ಪುಟ್ಟಪ್ಪ ಹೆಗ್ಡೆ, ದಿನೇಶ್ ಹೆಗ್ಡೆ, ಎಂ.ಎಚ್ ನಟರಾಜ್, ನೂತನ್ ಕುಮಾರ್, ಭಾಸ್ಕರ್ ನಾಯ್ಕ, ವೆಂಕಟೇಶ್ ಕುರದಾಮನೆ, ರಾಜೇಶ್ ದ್ಯಾವಂಟು, ಜನಪ್ರತಿನಿಧಿಗಳು, ಕೆರೆಕಟ್ಟೆ ಗ್ರಾಮದ ಸ್ಥಳೀಯ ಮುಖಂಡರು, ಸ್ಥಳೀಯ ಕಾಂಗ್ರೆಸ್, ಬಿಜೆಪಿ ಮುಖಂಡರು ಹಾಜರಿದ್ದರು.

    Human life cannot be priced

  • ಕನ್ನಡಿಗರೆಲ್ಲಾ ಒಂದಾಗುವುದರ ಮೂಲಕ ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಬೇಕು

    ಕನ್ನಡಿಗರೆಲ್ಲಾ ಒಂದಾಗುವುದರ ಮೂಲಕ ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಬೇಕು

    ಚಿಕ್ಕಮಗಳೂರು: ಕನ್ನಡತನಕ್ಕೆ ಸವಾಲನ್ನು ಒಡ್ಡುತ್ತಿರುವ ಇಂಗ್ಲಿಷ್ ಭಾಷೆಯ ವಿರುದ್ಧ ಕನ್ನಡಿಗರೆಲ್ಲಾ ಒಂದಾಗುವುದರ ಮೂಲಕ ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಬೇಕು. ಇಂಗ್ಲಿಷ್ ಮುಂತಾದ ಹಲವು ಭಾಷೆಗಳನ್ನು ವ್ಯವಹಾರಕ್ಕಾಗಿ ಕಲಿತು ಬಳಸೋಣ. ಆದರೆ, ಆದರೆ ನಮ್ಮ ಮಾತೃಭಾಷೆ ಕನ್ನಡವನ್ನು ಪ್ರೀತಿಯಿಂದ ಅಪ್ಪಿಕೊಳ್ಳೋಣ, ಉಳಿಸೋಣ, ಬೆಳೆಸೋಣ. ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ನೀಡೋಣ ಎಂದು ರಾಜ್ಯ ಇಂಧನ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಭಿಪ್ರಾಯಿಸಿದರು.

    ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಜನತೆಗೆ ರಾಜ್ಯೋತ್ಸವ ಸಂದೇಶ ನೀಡಿದರು.

    ಕನ್ನಡ ಭಾಷೆ ಕ್ರಿ.ಪೂ ದಿಂದಲೂ ಅಸ್ತಿತ್ವ ಪಡೆದುಕೊಂಡಿದ್ದು, ಕನ್ನಡ ನುಡಿ ಮೊದಲು ಬೆಳಕಿಗೆ ಬಂದಿದು ಚಿಕ್ಕಮಗಳೂರು ಸಮೀಪ ಇರುವ ಬೇಲೂರು ತಾಲ್ಲೂಕಿನ ಹಲ್ಮಿಡಿ ಶಾಸನದಲ್ಲಿ ಪ್ರಸಿದ್ಧಿಯಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳು ಪ್ರಕಾರಗಳು ವಿಶೇಷ ಬೇರುಗಳನ್ನು ತಂದುಕೊಟ್ಟಿದೆ. ನಮ್ಮ ಕನ್ನಡದ ಜನಪದಿಗರು ಜಾನಪದ ಗೀತೆಗಳ ಮೂಲಕ ಈ ನೆಲದ ಸೊಗಡನ್ನು ಹೆಚ್ಚಿಸಿದ್ದಾರೆಂದು ಹೇಳಿದರು.

    ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ‘ಎಲ್ಲಾದರೂ ಇರು, ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು’ ಎನ್ನುವಂತೆ ಎಲ್ಲರು ಕನ್ನಡ ತನ ಉಳಿಸಲು ಕಂಕಣಬದ್ಧರಾಗಬೇಕು. ಸರ್ಕಾರ ೨೦೨೩ ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ಲಿಂಗತಾರತಮ್ಯವನ್ನು ಸರಿದೂಗಿಸುವ ಜಾತ್ಯಾತೀತವಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ವಿರೋಧಿಗಳ ನಿರಂತರ ವಿರೋಧದ ನಡುವೆಯು ಅತ್ಯಂತ ಸಮರ್ಪಕವಾಗಿ ಅನುಷ್ಠಾನಗೊಳಿಸಲಾತ್ತಿದೆ ಎಂದರು.

    ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದರೂ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳದೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತುಕೊಟ್ಟಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಜಿ.ಪಂ ವತಿಯಿಂದ ಹೆಣ್ಣುಮಕ್ಕಳ ಭದ್ರಬಾಲ್ಯ ಸುರಕ್ಷತೆಯ ಬಗ್ಗೆ ಕಾಳಜಿ ಉಳ್ಳ ವಿನೂತನ ವಿಶೇಷ ಕಾರ್ಯಕ್ರಮವಾಗಿದ್ದು, ಇದನ್ನು ಈ ಬಾರಿಯ ಮೈಸೂರು ದಸರಾದಲ್ಲಿ ಸ್ತಬ್ದಚಿತ್ರ ಪ್ರದರ್ಶನದಲ್ಲಿ ತೃತೀಯ ಸ್ಥಾನ ಲಭಿಸಿದೆ ಎಂದು ಹೇಳಿದರು.

    ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳ ಶಾಸಕರುಗಳಿಗೆ ತಲಾ ೫೦ ಕೋಟಿ ರೂ.ನಂತೆ ೨೫೦ ಕೋಟಿ ರೂಗಳ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು. ನಗರದಲ್ಲಿ ನೂತನವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ೧೬ ಕೋಟಿ ರೂ ವೆಚ್ಚದಲ್ಲಿ ಕಡೂರಿನಲ್ಲಿ ಪ್ರಜಾಸೌಧ ಕಟ್ಟಡ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು.

    ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಪ್ರಕ್ರಿಯೆ ಜಿಲ್ಲೆಯ ೯ ತಾಲ್ಲೂಕುಗಳ ಪೈಕಿ ಒಟ್ಟು ೭ ತಾಲ್ಲೂಕುಗಳಲ್ಲಿ ಪೂರ್ಣಗೊಂಡಿದ್ದು, ಇನ್ನುಳಿದ ೨ ತಾಲ್ಲೂಕುಗಳಲ್ಲಿ ಶೀಘ್ರವಾಗಿ ಮುಕ್ತಾಯಗೊಳಿಸಲು ಕ್ರಮವಹಿಸಲಾಗುವುದೆಂದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತರೀಕೆರೆಯ ಅಮೃತಾಪುರ, ಕಡೂರಿನ ಸಿಂಗಟಗೆರೆ, ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳ ನಿರ್ಮಾಣ ಮತ್ತು ಚಿಕ್ಕಮಗಳೂರು ತಾಲ್ಲೂಕಿಗೆ ೨ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಹಾಗೂ ಪ.ಜಾ ಕಾಲೋನಿಗಳ ಮೂಲಕಭೂತ ಸೌಕರ್ಯ ಅಭಿವೃದ್ಧಿಗೆ ೧೨೦.೧೩ ಕೋಟಿ ರೂ ಬಿಡುಗಡೆಯಾಗಿದೆ ಎಂದರು.

    ಕನ್ನಡ ನಮ್ಮ ಮಾತೃಭಾಷೆ, ಕನ್ನಡಾಂಭೆಯ ಮಕ್ಕಳಾದ ನಾವು ನ.೧ ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಾಂಭೆಗೆ ಗೌರವ ಸಲ್ಲಿಸುವುದು ಮಾತ್ರವಲ್ಲ, ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕೆಂದು ಕರೆನೀಡಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಇಲಾಖೆಗಳು ಮತ್ತು ಶಾಲಾ ಕಾಲೇಜುಗಳಿಂದ ಸ್ತಬ್ದಚಿತ್ರಗಳ ಪ್ರದರ್ಶನ ನಡೆಯಿತು. ಪೊಲೀಸ್ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ ವಹಿಸಿದ್ದರು. ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ, ಎಸ್.ಎಲ್ ಭೋಜೇಗೌಡ, ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶಿವಾನಂದಸ್ವಾಮಿ, ಜಿಲ್ಲಾಧಿಕಾರಿ ಸಿ.ಎನ್ ಮೀನಾನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ, ಜಿ.ಪಂ ಸಿಇಓ ಹೆಚ್.ಎಸ್. ಕೀರ್ತನ, ತಹಶೀಲ್ದಾರ್ ರೇಷ್ಮ, ನಗರಸಭಾಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾನಾಯ್ಕ್, ಪೌರಾಯುಕ್ತ ಬಿ.ಸಿ. ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

    All languages ​​are needed to acquire knowledge through the unity of all languages

  • ಇಂದಿರಾಗಾಂಧಿ-ಸರ್ದಾರ್ ವಲ್ಲಭಬಾಯಿ ಪಟೇಲರ ಸ್ಮರಣೆ

    ಇಂದಿರಾಗಾಂಧಿ-ಸರ್ದಾರ್ ವಲ್ಲಭಬಾಯಿ ಪಟೇಲರ ಸ್ಮರಣೆ

    ಚಿಕ್ಕಮಗಳೂರು:  ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಮತ್ತು ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್ ಇವರುಗಳ ಸ್ಮರಣೆಯನ್ನು ಮಾಡುವ ಮೂಲಕ ಅವರ ಆಶಯಗಳನ್ನು ಈಡೇರಿಸಲು ಪ್ರತಿಯೊಬ್ಬರೂ ಪಣತೊಡಬೇಕೆಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಕರೆ ನೀಡಿದರು.

    ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾಗಾಂಧಿಯವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲರ ೧೫೦ ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

    ಇಂದಿರಾಗಾಂಧಿಯವರು ಕೈಗೊಂಡ ದಿಟ್ಟ ನಿರ್ಧಾರ ಹಾಗೂ ಹೋರಾಟಗಳಿಂದ ದೇಶದಲ್ಲಿ ಹಲವಾರು ಕ್ರಾಂತಿಕಾರಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ಮುನ್ನೆಡೆಸಿಕೊಂಡು ಹೋಗಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿ ಇಂದಿರಾಗಾಂಧಿಯವರು ಅಂದು ಜಾರಿಗೆ ತಂದ ೨೧ ಅಂಶಗಳ ಕಾರ್ಯಕ್ರಮಗಳು ಪ್ರಸ್ತುತವಾಗಿ ಕಾರ್ಯನಿರ್ವಹಿಸುತ್ತಿವೆ. ಉಳುವವನೆ ಭೂ ಒಡೆಯ ಕಾರ್ಯಕ್ರಮ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.

    ಈ ರಾಷ್ಟ್ರವನ್ನು ನೂರಾರು ಸಂಸ್ಥಾನಗಳಿಂದ ಒಗ್ಗೂಡಿಸುವಲ್ಲಿ ಕಾರಣಕರ್ತರಾದ ಮಾಜಿ ಉಪ ಪ್ರಧಾನಿ ಹಾಗೂ ಉಕ್ಕಿನ ಮನುಷ್ಯ ಎಂದೇ ಕರೆಸಿಕೊಂಡಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಭಾರತ ಸದಾ ಏಕೀಕರಣ ಶಕ್ತಿಯಾಗಿ ಹೊರಹೊಮ್ಮಲು ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರೂ ಆದ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಭಾರತ ದೇಶದಲ್ಲಿ ಇಷ್ಟೊಂದು ಕ್ರಾಂತಿಕಾರಕ ಬದಲಾವಣೆಗಳು ಕಂಡಿರುವುದು ಇಂದಿರಾಗಾಂಧಿಯವರು ಪ್ರಧಾನಮಂತ್ರಿ ಆದ ಸಂದರ್ಭದಲ್ಲಿ ಮಾತ್ರ ಎಂದು ಹೇಳಿದರು.

    ಜನರ ಹಿತಕ್ಕಾಗಿ ಯಾರು ದುಡಿದಿರುತ್ತಾರೋ ಅವರನ್ನು ರಾಷ್ಟ್ರ ಗುರುತು ಮಾಡುತ್ತದೆ. ಇಂದಿರಾಗಾಂಧಿ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲರಂತಹ ಮಹಾನ್ ನಾಯಕರನ್ನು ನೆನಪು ಮಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಇಂದಿರಾಗಾಂಧಿಯವರು ತನ್ನ ಅಧಿಕಾರದ ಅವಧಿಯಲ್ಲಿ ಉತ್ತಮವಾದ ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಅವುಗಳು ಇಂದು ಉಳಿದಿವೆ. ಅವುಗಳನ್ನು ನಾವುಗಳು ಜೀವನದಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಿದರು.

    ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿರಾಗಾಂಧಿಯವರು ದೇಶದ ಉಳಿವಿಗೆ ತನ್ನ ಪ್ರಾಣವನ್ನು ತ್ಯಜಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದೇಶದ ಐಕ್ಯತೆ, ಅಖಂಡತೆಗಾಗಿ ಹೋರಾಡಿದ್ದಾರೆ. ಅವರ ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಬೇಕು ಎಂದು ತಿಳಿಸಿದರು.

    ಸವಿತಾ ಸಮಾಜದವರು ತಮ್ಮ ಜೀವಿತ ಕಾಲವೆಲ್ಲ ಈ ಸಮಾಜದ ಎಲ್ಲಾ ಧರ್ಮದವರಿಗೂ ತಮ್ಮ ವೃತ್ತಿ ಸೇವೆ ಮಾಡುತ್ತಾ ಬರುತ್ತಿದ್ದು, ಅವರಿಲ್ಲದಿದ್ದರೆ ಮಾನವ ಕಾಡು ಪ್ರಾಣಿಗಳ ಹಾಗೆ ವಿಚಿತ್ರವಾಗಿರಬೇಕಿತ್ತು. ಇದನ್ನು ಅರಿಯದ ಸಿ.ಟಿ.ರವಿ ಸವಿತಾ ಸಮಾಜಕ್ಕೆ ಅವಹೇಳನಕಾರಿ ಪದಗಳನ್ನು ಬಳಸಿ ನೋವುಂಟು ಮಾಡಿದ್ದು, ಸಿ.ಟಿ.ರವಿ ಸವಿತಾ ಸಮಾಜದ ಕ್ಷಮೆ ಕೇಳುವಂತೆ ಒತ್ತಾಯಿಸಿದರು.

    ಜವಾಬ್ದಾರಿ ಸ್ಥಾನದಲ್ಲಿರುವ ಸಿ.ಟಿ.ರವಿಯವರು ಈ ಹಿಂದೆ ಬೆಳಗಾವಿ ಅಧಿವೇಶನದಲ್ಲೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಕೆಟ್ಟ ಪದವನ್ನು ಬಳಸುವ ಮೂಲಕ ನನ್ನ ಬಾಯಿ ಸರಿಯಿಲ್ಲ ಎಂಬಂತೆ ಸಾಬೀತು ಪಡಿಸಿದ್ದು, ಮತ್ತೊಮ್ಮೆ ಸವಿತಾ ಸಮಾಜಕ್ಕೂ ಅವಹೇಳಕಾರಿ ಪದ ಬಳಸಿ ತನ್ನ ಮನಃಸ್ಥಿತಿ ಮತ್ತು ಯೋಗ್ಯತೆ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.

    ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇಂದಿರಾಗಾಂಧಿಯವರ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಪಿ.ತನೋಜ್ ಕುಮಾರ್ ನಾಯ್ಡು, ಚಿಕ್ಕಮಗಳೂರು ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ಬೆಟ್ಟಗೆರೆ ಪ್ರವೀಣ್, ಮುಖಂಡರಾದ ಹೆಚ್.ಇ.ಪ್ರಕಾಶ್, ರಾಘವೇಂದ್ರ, ಬಲ್ಬ್ ರಾಮಣ್ಣ, ಸೋಮಶೇಖರ್, ಸಂತೋಷ್, ರಾಜಶೇಖರ್, ಸುನೀಲ್, ರಸೂಲ್ ಖಾನ್, ಬಾಬು, ಸುರೇಶ್ ಕುಮಾರ್, ನಾಗೇಶ್ ರಾಜ್ ಅರಸ್, ತಂಬಿ, ಜಿಯಾ ಸೇರಿದಂತೆ ಮತ್ತಿತರರು ಇದ್ದರು.

    Indira Gandhi-Sardar Vallabhbai Patel’s Memorial

  • ಸರ್ದಾರ್ ವಲ್ಲಭಬಾಯಿ ಪಟೇಲ್ ದೇಶದ ಏಕತೆಗೆ ಕಾರಣಕರ್ತರು

    ಸರ್ದಾರ್ ವಲ್ಲಭಬಾಯಿ ಪಟೇಲ್ ದೇಶದ ಏಕತೆಗೆ ಕಾರಣಕರ್ತರು

    ಚಿಕ್ಕಮಗಳೂರು:  ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತಿ ಪಡೆದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶದ ಏಕತೆಗೆ ಕಾರಣಕರ್ತರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಿಕ್ರಮ್ ಅಮಟೆ ಹೇಳಿದರು.

    ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಂದು ನಗರದ ಜಿಲ್ಲಾ ಪೊಲೀಸ್ ಕಚೇರಿ ಮುಂಭಾಗದ ಸರ್ಕಲ್ ಬಳಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮದಿನ-ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಅವರು ಮಾತನಾಡಿ ಭಾರತದ ಏಕೀಕರಣಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರನ್ನು ‘ಭಾರತದ ಏಕೀಕರಣದ ರೂವಾರಿ’ ಎಂದು ಕರೆಯಲಾಗುತ್ತದೆ. ಅವರಲ್ಲಿನ ದೇಶಪ್ರೇಮ ಮಾದರಿಯಾಗಿದೆ ಎಂದರು.

    ರಾ?ದ ಏಕತೆ ಮತ್ತು ಸಾರ್ವಭೌಮತೆಯನ್ನು ಕಾಪಾಡಿದ ಹಾಗೂ ಅವುಗಳನ್ನು ತಮ್ಮ ಕಾರ್ಯಗಳ ಮೂಲಕವೇ ಎತ್ತಿ ಹಿಡಿದ ದೇಶದ ಮೊದಲ ಉಪಪ್ರಧಾನಿ ಹಾಗೂ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲರ ಜೀವನ ಮತ್ತು ಆದರ್ಶಗಳು ಈ ಕಾಲಕ್ಕೂ ಪ್ರಸ್ತುತ ಮತ್ತು ಅನುಕರಣೀಯ. ಸ್ವಾತಂತ್ರ್ಯಾನಂತರ ಹರಿದು ಹಂಚಿಹೋಗಿದ್ದ ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿ ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ಸರ್ದಾರ್ ವಲ್ಲಭಭಾಯಿ ಪಟೇಲ್. ಅದು ಸುಲಭದ ಕೆಲಸವಾಗಿರಲಿಲ್ಲ.

    ಸಂಸ್ಥಾನಗಳ ರಾಜಮಹಾರಾಜರೊಂದಿಗೆ ಮಾತುಕತೆ ನಡೆಸುವ ಹೊಣೆಗಾರಿಕೆಯನ್ನು ಪ್ರಧಾನಿ ಜವಾಹರಲಾಲ್ ನೆಹರು ಅವರು ಪಟೇಲ್ ಹಾಗೂ ಭಾರತದ ಕೊನೆಯ ವೈಸರಾಯ್ ಮೌಂಟ್ ಬ್ಯಾಟನ್‌ರ ರಾಜಕೀಯ ಸಲಹೆಗಾರ ವಿ.ಪಿ.ಮೆನನ್ ಅವರಿಗೆ ವಹಿಸಿದರು. ಪರಿಣಾಮಕಾರಿ ಕಾರ್ಯತಂತ್ರ ಮತ್ತು ದೂರದೃಷ್ಟಿಯೊಂದಿಗೆ ಈ ಕೆಲಸಕ್ಕೆ ಅಣಿಯಾದ ಪಟೇಲರು ತಮ್ಮ ಜಾಣ್ಮೆ ಮತ್ತು ಕಠಿಣ ನಿಲುವುಗಳಿಂದಲೇ ಅನೇಕ ಜಟಿಲ ಪರಿಸ್ಥಿತಿಗಳನ್ನು ತಿಳಿಗೊಳಿಸಿದರು ಎಂದರು.

    ಗುಜರಾತಿನ ಏಕಥಾನ್ ಎಂಬ ನಗರದಲ್ಲಿ ಇಂದು ಪ್ರಧಾನ ಮಂತ್ರಿಯವರು ರಾಷ್ಟ್ರೀಯ ಏಕತಾ ದಿನವನ್ನು ಆಚರಿಸುತ್ತಾರೆ ಹಾಗೂ ಬೃಹತ್ ಮಟ್ಟದಲ್ಲಿ ಪೊಲೀಸ್ ಪೆರೇಡ್ ನಡೆಯುತ್ತದೆ ಎಂದು ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅನಂತರ ತಾಲ್ಲೂಕು ಕಚೇರಿಯವರೆಗೆ ನಡೆದ ಮ್ಯಾರಥಾನ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೌರಾಯುಕ್ತ ಬಿ.ಸಿ.ಬಸವರಾಜ್ ಚಾಲನೆ ನೀಡಿದರು.

    ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಉಪಾಧೀಕ್ಷಕ ಶೈಲೇಂದ್ರ, ಪೊಲೀಸ್ ಮತ್ತಿತರ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು, ಮತ್ತಿತರರು ಇದ್ದರು.

    Sardar Vallabhbai Patel is the cause of unity of the country

  • ಪ್ರತ್ಯಕ್ಷ – ಪರೋಕ್ಷವಾಗಿ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ

    ಪ್ರತ್ಯಕ್ಷ – ಪರೋಕ್ಷವಾಗಿ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ

    ಚಿಕ್ಕಮಗಳೂರು:  ಸವಿತಾ ಸಮಾಜಕ್ಕೆ ನನ್ನಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

    ಸವಿತಾ ಸಮಾಜದ ಬಗ್ಗೆ ನಿಷೇಧಿತ ಪದ ಬಳಸಲಾಗಿದೆ ಎನ್ನುವ ಆರೋಪಗಳು ಬಂದಿದ್ದ ಹಿನ್ನೆಲೆಯಲ್ಲಿ ನಗರದ ನೆಹರೂ ರಸ್ತೆ ಕ್ರಾಸ್‌ನಲ್ಲಿರುವ ಸವಿತಾ ಸಮಾಜದ ಸಭಾಂಗಣದಲ್ಲಿ ಸಮಾಜದ ಮುಖಂಡರುಗಳನ್ನು ಖುದ್ದಾಗಿ ಭೇಟಿ ಮಾಡಿ ಅವರು ಮಾತನಾಡಿ ಸವಿತ ಸಮಾಜದ ನೋವು, ಸಂಕಟ, ಕೋಪ, ಹತಾಷೆಯನ್ನು ಅರ್ಥ ಮಾಡಿಕೊಂಡು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನ್ನಿಂದ ಯಾರಿಗೂ ನೋವಾಗಬಾರದು. ನನ್ನಿಂದ ಸಮಾಜಕ್ಕೆ ನೋವಾಗಿದ್ದರೆ ನನಗೆ ಹಾಗೂ ನನ್ನ ಹೆತ್ತ ತಂದೆ, ತಾಯಿಗೆ ಆದ ನೋವು. ಹಾಗೆ ಆಗಿದ್ದರೆ ಮೊದಲು ನಾನು ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದರು.

    ಅನುಭವಿಸಿದವರಿಗೆ ನೋವಿನ ಸಂಕಟ ಗೊತ್ತಾಗುತ್ತದೆ. ಅಲ್ಲದೆ ಸವಿತಾ ಸಮಾಜ ನನ್ನ ಮೇಲೆ ಅಭಿಮಾನವನ್ನೂ ಇಟ್ಟಿದೆ. ಕಳೆದ ಶನಿವಾರ ನಾನು ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದೆ. ಅಲ್ಲಿ ಸ್ಥಳೀಯ ಟಿವಿ ಚಾನೆಲ್‌ನವರು ಇದ್ದರು. ಯಾವುದರಲ್ಲೂ ಸುದ್ದಿ ಆಗಲಿಲ್ಲ. ನಾಲ್ಕು ದಿನಗಳ ನಂತರ ಒಬ್ಬರು ರಾಜಕೀಯವಾಗಿ ನನ್ನ ಜೊತೆ ಇದ್ದು, ಈಗ ಇಲ್ಲದಿರುವ ಒಬ್ಬರ ಸುದ್ದಿ ವಾಹಿನಿಯಲ್ಲಿ ಸುದ್ದಿ ಪ್ರಕಟವಾಯಿತು. ಅಲ್ಲಿಂದಲೇ ವಾಟ್ಸ್ ಆಪ್ ಗ್ರೂಪ್‌ಗಳಲ್ಲಿ ಸವಿತಾ ಸಮಾಜಕ್ಕೆ ಅಪಮಾನ ಮಾಡಿದ ಸಿ.ಟಿ.ರವಿ ಎಂದು ಟ್ರೋಲ್‌ಗಳು ಆರಂಭವಾಯಿತು ಎಂದರು.

    ನನಗೆ ಎದೆ ಬಗೆದು ತೋರಿಸುವಷ್ಟು ಸಾಮರ್ಥ್ಯವಿಲ್ಲ. ನನ್ನ ಭಾವನೆಗಳನ್ನ ಮಾತಿನಲ್ಲಿ ಹೇಳಬಹುದು. ಆ ಸುದ್ದಿ ಗೊತ್ತಾಗುತ್ತಿದ್ದಂತೆ ನಾವು ಸವಿತಾ ಸಮಾಜದವರು ನಮ್ಮ ಆತ್ಮ ಬಂಧುಗಳು, ಅವರಿಗೆ ಅಪಮಾನ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಅಂದೇ ಸ್ಪಷ್ಟನೆ ನೀಡಿದ್ದೇನೆ ಎಂದರು.

    ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ನನ್ನನ್ನು ಸವಿತಾ ಸಮಾಜದವರು ನೋಡುತ್ತಿದ್ದಾರೆ. ಎಂದಿಗೂ ನಾನೂ ಸಮಾಜಕ್ಕೆ ಅಪಮಾನವಾಗುವ ಪದವನ್ನು ಬಳಸಿಲ್ಲ. ಈ ಕಾರಣಕ್ಕೆ ನನ್ನ ಮೇಲೆ ಬಂದಿರುವ ಆರೋಪವನ್ನು ನಂಬಬೇಕೋ, ಬೇಡವೋ ಎನ್ನುವ ಸಂಕಟ ನಿಮ್ಮನ್ನು ಕಾಡುತ್ತಿದೆ. ಬೇರೆ ಯಾರನ್ನೋ ಆದರೆ ಇವರಿಗೆ ಯಾವಾಗ ಬುದ್ಧಿ ಬರುತ್ತದೋ ಎಂದುಕೊಳ್ಳುತ್ತಿದ್ದಿರಿ. ಆದರೆ ನಮ್ಮ ರವಿಯೇ ಹೀಗೆ ಮಾತನಾಡಿದರಲ್ಲ ಎನ್ನುವ ಸಂಕಟ ನಿಮಗಾಗಿದೆ ಎನ್ನುವದನ್ನು ಅರ್ಥಮಾಡಿಕೊಂಡಿದ್ದೇನೆ. ಅದಕ್ಕಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೋವಾಗಿದ್ದರೆ ಅದಕ್ಕಾಗಿ ಕ್ಷಮಾಪಣೆ ಕೋರುತ್ತೇನೆ ಎಂದರು.

    ಈ ವಿಚಾರದಲ್ಲಿ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಎತ್ತಿಕಟ್ಟುವ ಪ್ರಯತ್ನ ಮಾಡಿದರು. ಹೌಸಿಂಗ್ ಬೋರ್ಡ್‌ನ ಒಂದು ಹೋಂಸ್ಟೇನಲ್ಲಿ ಸೇರಿಸಿ ಹೀಗೆ ಮಾಡಬೇಕು, ಹಾಗೇ ಮಾಡಬೇಕೆಂದು ಷಡ್ಯಂತ್ರ ಮಾಡಿದರು. ಏನು ಖರ್ಚು ಬರುತ್ತೆ ಎಲ್ಲವನ್ನೂ ನಾವೇ ನೋಡಿಕೊಳ್ಳುತ್ತೇವೆ ಎಂದು ಒತ್ತಡ ಹೇರಿದರು. ಇಷ್ಟಾದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪ್ರೀತಿಯನ್ನೇ ತೋರಿಸಿ, ಪ್ರೀತಿಯಿಂದಲೇ ನಿಮ್ಮ ನೋವನ್ನು ಹಂಚಿಕೊಂಡಿದ್ದೀರಿ. ಯಾವುದೋ ಒಂದು ಕಾಲದಲ್ಲಿ ನಿಮ್ಮ ಮಗನೋ, ಅಣ್ಣ, ತಮ್ಮನೋ ಆಗಿದ್ದೆ ಎನ್ನಿಸುತ್ತದೆ. ಹಾಗಾಗಿ ಯಾವ ಸಂದರ್ಭದಲ್ಲೂ ನನ್ನನ್ನು ಬಿಟ್ಟು ಕೊಡದೆ ಪ್ರೀತಿ ತೋರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

    ಆರ್‍ಯ ನಯನಜ ಜಿಲ್ಲಾ sಸವಿತಾ ಸಮಾಜ ಅಧ್ಯಕ್ಷ ಎಸ್.ಎನ್.ಮಹಾಲಿಂಗಪ್ಪ, ಕಾರ್ಯದರ್ಶಿ ಎನ್.ಶ್ರೀಧರ್, ನಗರ ಆರ್‍ಯ ನಯನಜ ಜಿಲ್ಲಾ sಸವಿತಾ ಸಮಾಜ ಸಂಘದ ಅಧ್ಯಕ್ಷ ಸಿ.ಎಂ.ಯೋಗೀಶ್, ಯುವ ಘಟಕದ ಅಧ್ಯಕ್ಷ ಧನ್‌ರಾಜ್, ಮಹಿಳಾ ಮುಖಂಡರಾದ ಸುನಂದ, ಸವಿತಾ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ವೆಂಕಟೇಶ್, ಯಶ್ವಿನ್ ಇತರರು ಇದ್ದರು.

    I apologize if I have caused any direct or indirect pain.

  • ಕಾಡಾನೆ ದಾಳಿಗೆ ಸಿಕ್ಕಿ ಇಬ್ಬರು ರೈತರು ಸ್ಥಳದಲ್ಲೇ ಸಾವು

    ಕಾಡಾನೆ ದಾಳಿಗೆ ಸಿಕ್ಕಿ ಇಬ್ಬರು ರೈತರು ಸ್ಥಳದಲ್ಲೇ ಸಾವು

    ಶೃಂಗೇರಿ: ತಾಲ್ಲೂಕಿನ ಕೆರೆಕಟ್ಟೆ ಸಮೀಪ ಬಳಿ ಅರಣ್ಯಕ್ಕೆ ಸೊಪ್ಪು ತರಲು ಹೋಗಿದ್ದ ಇಬ್ಬರು ಕಾಡಾನೆ ದಾಳಿಗೆ ಸಿಕ್ಕಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕೆರೆಕಟ್ಟೆ ಸಮೀಪದ ಕೆರೆಗದ್ದೆಯ ಉಮೇಶ್ ಗೌಡ (54) ಮತ್ತ ಹರೀಶ್ ಶೆಟ್ಟಿ (53) ಮೃತಪಟ್ಟವರು. ಹರೀಶ್ ಅವರು ಬಿಜೆಪಿ ಶಕ್ತಿ ಕೇಂದ್ರದ ಕೆರೆಕಟ್ಟೆ ಭಾಗದ ಅಧ್ಯಕ್ಷರಾಗಿದ್ದರು. ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇವರ ಮನೆಗಳಿದ್ದು, ಕಾಡಿಗೆ ಸೊಪ್ಪು ತರಲು ಹೋದಾಗ ಅವಘಡ ಸಂಭವಿಸಿದೆ.

    ಇಬ್ಬರು ಮೃತಪಟ್ಟಿರುವ ವಿಷಯ ತಿಳಿದಂತೆ, ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶೃಂಗೇರಿ–ಕಾರ್ಕಳ ನಡುವೆ ವಾಹನ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಿದರು. ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ಸ್ಥಳಕ್ಕೆ ಬಂದು ಪ್ರತಿಭಟನಕಾರರ ಮನವೊಲಿಸಲು ಮುಂದಾದರು.

    ಆದರೆ, ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಥಳಕ್ಕೆ ಬರಬೇಕು. ಮೃತರ ಕುಟುಂಬಕ್ಕೆ ತಲಾ ₹50 ಲಕ್ಷ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ಬೆಳಿಗ್ಗೆಯಿಂದ ಸಂಜೆ ತನಕ ವಾಹನ ಸವಾರರು ಪರದಾಡಿದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ ₹20 ಲಕ್ಷ, ಶಾಸಕರು ಹಾಗೂ ಸ್ಥಳೀಯರ ನೆರವಿನಿಂದ ತಲಾ ₹5 ಲಕ್ಷ ಪರಿಹಾರ ನೀಡಲು ನಿರ್ಧರಿಸ ಲಾಯಿತು. ಬಳಿಕ ಸ್ಥಳೀಯರು ಪ್ರತಿಭಟನೆ ಹಿಂಪಡೆದರು.

    Two farmers die on the spot after being attacked by a wild elephant

  • ಸಹಕಾರ ಕೇಂದ್ರ ಬ್ಯಾಂಕ್‌ನಿಂದ 858 ಕೋಟಿ ರೂ. ಕೆಸಿಸಿ ಬೆಳೆ ಸಾಲ ವಿತರಣೆ

    ಸಹಕಾರ ಕೇಂದ್ರ ಬ್ಯಾಂಕ್‌ನಿಂದ 858 ಕೋಟಿ ರೂ. ಕೆಸಿಸಿ ಬೆಳೆ ಸಾಲ ವಿತರಣೆ

    ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ೨೦೨೪-೨೫ನೇ ಸಾಲಿನಲ್ಲಿ ಜಿಲ್ಲೆಯ ೬೯೮೫೦ ರೈತರಿಗೆ ೯೮೩ ಕೋಟಿ ರೂ.ಗಳಷ್ಟು ಕೆಸಿಸಿ ಬೆಳೆ ಸಾಲವನ್ನು ನೀಡಲು ಇರಿಸಿಕೊಂಡಿದ್ದ ಗುರಿಯಲ್ಲಿ ಕಳೆದ ಮಾರ್ಚ್ ಅಂತ್ಯಕ್ಕೆ ೫೬೯೧೫ ರೈತರಿಗೆ ೮೫೮.೨೪ ಕೋಟಿ ರೂ.ಗಳಷ್ಟು ಕೆಸಿಸಿ ಬೆಳೆಸಾಲ ವಿತರಿಸಿದೆ.

    ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ನಬಾರ್ಡ್‌ನ ಕರ್ನಾಟಕ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಡಾ.ಸುರೇಂದ್ರ ಬಾಬು ಅವರ ಸಮ್ಮುಖದಲ್ಲಿ ನಡೆದ ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಬಿ.ನಾಯಕ್ ಅವರು ಬ್ಯಾಂಕ್‌ನ ಪ್ರಗತಿ ವರದಿಯನ್ನು ಮಂಡಿಸಿ ಈ ಮಾಹಿತಿ ನೀಡಿದರು.

    ೨೦೨೫-೨೬ನೇ ಸಾಲಿಗೆ ಹಣಕಾಸಿನ ಲಭ್ಯತೆ ಆಧರಿಸಿ ೧೦೦೦ ಕೋಟಿ ರೂ. ಕೃಷಿ ಸಾಲ ನೀಡುವ ಗುರಿ ಹೊಂದಲಾಗಿದೆ. ೨೦೨೪-೨೫ನೇ ಸಾಲಿಗೆ ಶೇ.೩ರ ಬಡ್ಡಿ ದರದಲ್ಲಿ ೩೩೯ ರೈತರಿಗೆ ೧೭ ಕೋಟಿ ರೂ. ಮಧ್ಯಮಾವಧಿ ಸಾಲ ವಿತರಣಾ ಗುರಿ ನಿಗದಿಪಡಿಸಿಕೊಂಡಿದ್ದು. ಕಳೆದ ಮಾರ್ಚ್ ಅಂತ್ಯಕ್ಕೆ ೨೩೨ ರೈತರಿಗೆ ೧೫.೯೦ ಕೋಟಿ ರೂ. ವಿತರಿಸಲಾಗಿದೆ. ೨೦೨೪-೨೫ನೇ ಸಾಲಿಗೆ ಒಟ್ಟು ೧೨೭೫೯ ಸಾಲಗಾರ ಸದಸ್ಯರಿಗೆ ೪೭೪.೬೭ ಕೋಟಿ ರೂ. ಕೃಷಿಯೇತರ ಸಾಲ ನೀಡಲಾಗಿದೆ. ಪ್ರಸ್ತುತ ವರ್ಷ ೩೭೦ ಕೋಟಿ ರೂ.ಗಳ ಕೃಷಿಯೇತರ ಸಾಲ ವಿತರಣಾ ಗುರಿ ಹೊಂದಿದ್ದು, ಇದರೊಂದಿಗೆ ಎಲ್ಲ ವರ್ಗದ ಜನರ ಶ್ರೇಯೋಭೀವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

    ಬ್ಯಾಂಕ್‌ನಲ್ಲಿ ಕಳೆದ ಮಾರ್ಚ್ ಅಂತ್ಯದವರೆಗೆ ಒಟ್ಟು ೬೪೦೦ ಸ್ವಸಹಾಯ ಗುಂಪುಗಳಿದ್ದು, ೨೦೨೪-೨೫ ರಲ್ಲಿ ೬೧ ಸ್ವಸಹಾಯ ಗುಂಪುಗಳಿಗೆ ೮೯ ಲಕ್ಷ ರೂ.ಗಳ ಸಾಲ ವಿತರಿಸಲಾಗಿದೆ. ಈ ಮೂಲಕ ಜಿಲ್ಲೆಯ ಬಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬಹು ಸೇವಾ ಯೋಜನೆಯ ಮೂಲಕ ೪೩ ಸಂಘಗಳಿಗೆ ೧೫.೯೭ ಕೋಟಿ ರೂ.ಗಳ ಸಾಲವನ್ನು ಕನಿಷ್ಠ ಬಡ್ಡಿ (ಶೇ.೪) ದರದಲ್ಲಿ ಗೋದಾಮು ನಿರ್ಮಾಣಕ್ಕೆ ನೀಡಲಾಗಿದೆ.

    ೨೦೨೪-೨೫ನೇ ಸಾಲಿನ ಅಂತ್ಯಕ್ಕೆ ೬೫.೧೦ ಕೋಟಿ ರೂ. ಷೇರು ಬಂಡವಾಳ ಹೊಂದಿದ್ದು, ೨.೨೦ ಲಕ್ಷಕ್ಕೂ ಹೆಚ್ಚು ಠೇವಣಿದಾರರ ಮೂಲಕ ೧೪೨೬.೭೮ ಕೋಟಿ ರೂ.ಗಳ ವಿವಿಧ ರೀತಿಯ ಠೇವಣಿಯನ್ನು ಸಂಗ್ರಹಿಸಲಾಗಿದೆ. ೨೦೨೩-೨೪ನೇ ಸಾಲಿನಲ್ಲಿ ಶಾಸನಬದ್ಧ ಲೆಕ್ಕಪರಿಶೋಧನೆ ಹಾಗೂ ನಬಾರ್ಡ್ ನಡೆಸಿದ ತಪಾಸಣೆಯಲ್ಲಿ ಈ ಬ್ಯಾಂಕ್ ಸತತವಾಗಿ ಎ.ವರ್ಗೀಕೃತ ಶ್ರೇಣಿಯನ್ನು ಹೊಂದಿದೆ. ಅದೇ ವರ್ಷ ರಾಜ್ಯ ಅಪೆಕ್ಸ್ ಬ್ಯಾಂನಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಡಿಸಿಸಿ ಬ್ಯಾಂಕ್‌ಗಳಿಗೆ ನೀಡುವ ಪ್ರಶಸ್ತಿ ಪೈಕಿ ಈ ಬ್ಯಾಂಕ್‌ಗೆ ೨ನೇ ಸ್ಥಾನ ಲಭಿಸಿದ್ದು, ೨ ಲಕ್ಷ ರೂ.ಗಳ ನಗದು ಪುರಸ್ಕಾರಕ್ಕೂ ಭಾಜನವಾಗಿದೆ.

    ಆಧುನಿಕ ತಂತ್ರಜ್ಞಾನಗಳಾದ ಮೊಬೈಲ್ ಬ್ಯಾಂಕಿಂಗ್ ಸೇವೆ ಹಾಗೂ ಶಾಖೆಗಳಲ್ಲಿ ಮೈಕ್ರೋ ಎಟಿಎಂ ವ್ಯವಸ್ಥೆ ಜಾರಿಗೊಳಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡುತ್ತಿರುವ ಐಎಂಪಿಎಸ್ ಮತ್ತು ಯುಪಿಐ-ಫೋನ್ ಪೇ ಸೇವೆಯನ್ನು ನಮ್ಮ ಬ್ಯಾಂಕ್‌ನ ಗ್ರಾಹಕರಿಗೂ ಒದಗಿಸಿದ್ದು, ಸಹಕಾರ ಬ್ಯಾಂಕ್‌ಗಳು ಸಹ ಷೆಡ್ಯೂಲ್ ಬ್ಯಾಂಕ್‌ಗಳಿಗೆ ಸರಿಸಮಾನವಾದ ಎಲ್ಲ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಉತ್ತಮ ಸೇವೆ ನೀಡಲಾಗುತ್ತಿದೆ. ಪ್ಯಾಕ್ಸ್ ಗಣಕೀಕರಣ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಜಿಲ್ಲೆಯ ೬ ಪ್ಯಾಕ್ಸ್‌ಗಳನ್ನು ಕೇಂದ್ರ ಸರ್ಕಾರದಿಂದ ಇ-ಪ್ಯಾಕ್ಸ್ ಎಂದು ಗುರುತಿಸಿದ್ದು, ಈ ಪೈಕಿ ಚಿಕ್ಕಮಗಳೂರು ತಾಲ್ಲೂಕಿನ ಕೆ.ಆರ್.ಪೇಟೆ ಪ್ಯಾಕ್ಸ್ ರಾಜ್ಯದ ಪ್ರಥಮ ಇ-ಪ್ಯಾಕ್ಸ್ ಎಂದು ಗುರುತಿಸಲ್ಪಟ್ಟಿದೆ.

    ಬ್ಯಾಂಕ್‌ನ ಅಭಿವೃದ್ಧಿ ಹಾಗೂ ತಾಂತ್ರಿಕ ವ್ಯವಸ್ಥೆ ಬಗ್ಗೆ ಮತ್ತು ಬ್ಯಾಂಕ್‌ನಲ್ಲಿ ಯುಪಿಐ-ಫೋನ್ ಪೇ ವ್ಯವಸ್ಥೆ ಜಾರಿಗೊಳಿಸಿರುವ ಬಗ್ಗೆ ನಬಾರ್ಡ್ ಅಧಿಕಾರಿ ಡಾ.ಸುರೇಂದ್ರ ಬಾಬು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಅಭಿವೃದ್ಧಿಗೆ ಸಂಬಂಧಿಸಿದಂತೆ ಸಲಹೆ ನೀಡಿದರು. ಬ್ಯಾಂಕ್‌ನ ಠೇವಣಿ ಸಂಗ್ರಹಣೆ, ಗುಣಮಟ್ಟದ ಸಾಲ ನೀಡಿಕೆ, ಸಾಲ ವಸೂಲಾತಿ ಮತ್ತು ತಾಂತ್ರಿಕ ಅಂಶಗಳ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ಸಾಧಿಸಿರುವುದನ್ನು ಶ್ಲಾಘಿಸಿದರಲ್ಲದೆ, ಉಪಸ್ಥಿತರಿದ್ದ ಬ್ಯಾಂಕ್ ಅಧ್ಯಕ್ಷರಾದ ಡಿ.ಎಸ್.ಸುರೇಶ್, ಉಪಾಧ್ಯಕ್ಷ ಹೆಚ್.ಬಿ.ಸತೀಶ್, ನಿರ್ದೇಶಕರಾದ ಮುಗಳವಳ್ಳಿ ಪರಮೇಶ್ವರಪ್ಪ, ಎಂ.ಎಸ್.ನಿರಂಜನ್ ಅವರನ್ನು ಅಭಿನಂದಿಸಿದರು. ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕ ಇಮ್ಯಾನ್ಯುಯೆಲ್ ರೆಜಿಸ್ ಹಾಜರಿದ್ದರು.

    KCC disburses crop loans worth Rs 858 crore from Cooperative Central Bank

  • ಯುವಜನರು ರಕ್ತದಾನದಲ್ಲಿ ಆಸಕ್ತ್ತಿವಹಿಸಬೇಕು

    ಯುವಜನರು ರಕ್ತದಾನದಲ್ಲಿ ಆಸಕ್ತ್ತಿವಹಿಸಬೇಕು

    ಚಿಕ್ಕಮಗಳೂರು:  ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸಬಹುದಾಗಿದ್ದು ಯುವಜನರು ಆಸಕ್ತಿ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ ಕಿವಿಮಾತು ಹೇಳಿದರು.

    ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ರೆಡ್ ರಿಬ್ಬನ್ ಕ್ಲಬ್, ಎನ್‌ಎಸ್‌ಎಸ್ ಘಟಕ, ಯೂತ್ ರೆಡ್ ಕ್ರಾಸ್, ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಯುವಜನತೆ ದುಶ್ಚಟಗಳಿಗೆ ಒಳಗಾಗದೆ ಆರೋಗ್ಯ ಕಾಪಾಡಿಕೊಂಡಲ್ಲಿ ಪುರುಷರು ಪ್ರತೀ ೩ ತಿಂಗಳಿಗೊಮ್ಮೆ, ಮಹಿಳೆಯರು ಪ್ರತೀ ೪ ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರಲ್ಲದೆ, ತಮ್ಮ ಇಲಾಖೆಯ ವತಿಯಿಂದ ಜಿಲ್ಲಾ ನ್ಯಾಯಾಲಯದಲ್ಲಿ ಸಹ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಿದ್ದು ಮುಂದೆ ನಿರಂತರವಾಗಿ ರಕ್ತದಾನ ಮಾಡಲು ದಾನಿಗಳನ್ನು ಪ್ರೇರೇಪಿಸಲಾಗುವುದು ಎಂದರು,

    ಜಿಲ್ಲಾ ಆಸ್ಪತ್ರೆಯ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ.ಮೊಹಮ್ಮದ್ ಅಪ್ರೋಜ್ ಅಹಮ್ಮದ್ ಪ್ರಾಸ್ತಾವಿಕ ಮಾತನಾಡಿ, ಒಬ್ಬರು ದಾನ ಮಾಡಿದ ರಕ್ತದಿಂದ ಅವಶ್ಯಕತೆ ಇರುವ ಮೂವರು ರೋಗಿಗಳಿಗೆ ಪ್ರಯೋಜನವಾಗುತ್ತದೆ. ರಕ್ತವನ್ನು ನೀಡುವ ಮೊದಲು ಪರೀಕ್ಷೆಗಳನ್ನು ನಡೆಸಿದ ಬಳಿಕ ರಕ್ತವನ್ನು ಸಂಗ್ರಹಿಸಲಾಗುತ್ತದೆ. ಇಂದು ರಕ್ತದ ಅವಶ್ಯಕತೆ ತುಂಬ ಇದ್ದು ೧೮ ವರ್ಷ ತುಂಬಿದ ಪ್ರತಿಯೊಬ್ಬರೂ ರಕ್ತದಾನ ಮಾಡುವಂತೆ ಮತ್ತು ಪ್ರತಿಯೊಬ್ಬರೂ ತಮ್ಮ ಹಾಗೂ ತಮ್ಮ ಮನೆಯಲ್ಲಿರುವವರ ರಕ್ತದ ಗುಂಪು ಬಗ್ಗೆ ತಿಳಿದುಕೊಂಡು ರಕ್ತದಾನ ಮಾಡುವುದು ಮತ್ತು ರಕ್ತದಾನಕ್ಕೆ ಪ್ರೇರೇಪಿಸುವಂತೆ ಕೋರಿದರು.

    ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ ಅವರು ರಕ್ತದಾನ ಕುರಿತಾದ ಪ್ರಮಾಣ ವಚನ ಬೋಧಿಸಿದರು. ಇದೇ ವೇಳೆ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಇಲಾಖೆಯ ವತಿಯಿಂದ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರವನ್ನು ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಆರ್.ಪ್ರಭುಕುಮಾರ್ ವಿತರಿಸಿದರು.

    ಅಧ್ಯಕ್ಷತೆ ವಹಿಸಿದ್ದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ತಸ್ನೀಮ್ ಕೌಸರ್ ಮಣಿಯಾರ್ ಮಾತನಾಡಿ, ಇಂದಿನ ಯುವಕರು ರಕ್ತದಾನ ಮಾಡುವಂತೆ ಪ್ರೇರೇಪಣೆಯ ನುಡಿಯಾಡಿದರು. ಪ್ರತಿಯೊಬ್ಬರೂ ರಕ್ತದಾನ ಮಾಡುವುದರಲ್ಲದೆ, ತಮ್ಮ ಸ್ನೇಹಿತರನ್ನು ರಕ್ತದಾನಕ್ಕೆ ಉತ್ತೇಜಿಸುವಂತೆ ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಹರೀಶ್ ಬಾಬು, ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಶಶಿಕಲಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೀಮಾ, ಕಾಲೇಜಿನ ಉಪನ್ಯಾಸಕ ವರ್ಗದವರು ಭಾಗವಹಿಸಿದ್ದರು. ಪಿಪಿಎಮ್ ಸಂಯೋಜಕ ಕಿರಣ್‌ಕುಮಾರ್ ವಂದಿಸಿದರು.

    Young people should take an interest in blood donation.

  • ತರೀಕೆರೆ ತಾಲೂಕಿನ ರಹಮತ್‌ ಗೆ ರಾಜ್ಯೋತ್ಸವ ಪ್ರಶಸ್ತಿ

    ತರೀಕೆರೆ ತಾಲೂಕಿನ ರಹಮತ್‌ ಗೆ ರಾಜ್ಯೋತ್ಸವ ಪ್ರಶಸ್ತಿ

    ಚಿಕ್ಕಮಗಳೂರು: ೨೦೨೫ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ರಹಮತ್‌ ತರೀಕೆರೆ ಅವರನ್ನು ಆಯ್ಕೆ ಮಾಡಲಾಗಿದೆ. ರಹಮತ್‌ ತರೀಕೆರೆ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಮತಳದವರಾಗಿದ್ದು, ದಸ್ತಗಿರಿಸಾಬ್‌ ಮತ್ತು ಜ್ಯೂಲೇಕ ಬಿ. ದಂಪತಿಗಳ ಪುತ್ರರಾಗಿ ಜನಿಸಿದರು.

    ಕಡುಬಡತನ, ತುಂಬು ಕುಟುಂಬದಲ್ಲಿ ಜನಿಸಿದ ಅವರು, ಕಷ್ಟಕಾಪಣ್ಯಗಳನ್ನು ಬಾಲ್ಯದಲ್ಲಿಯೆ ಅನುಭವಿಸಿದವರು. ಸಮತಳದಿಂದ ತರೀಕೆರೆಗೆ ಅಪ್ಪ ಅಣ್ಣರೊಂದಿಗೆ ಬಂದು ನೆಲೆಸಿದರು. ರೈತರ ಉಪಕರಣಗಳಾದ ಗಾಡಿ ಅಚ್ಚು, ಕತ್ತು, ಕುಡ್ಲು ತಯಾರಿಕಾ ವೃತ್ತಿ (ಕುಲುಮೆ) ಕುಟುಂಬದಲ್ಲಿ ಜನಿಸಿದ ಇವರು ಬಡತನದಲ್ಲಿ ಶಿಕ್ಷಣ ಪಡೆದುಕೊಂಡರು.

    ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಾಲೇಜಿನಲ್ಲಿ ಕನ್ನಡ ವಿಷಯವನ್ನು ಆಯ್ಕೆ ಮಾಡಿಕೊಂಡು ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ೧೯೮೩ರಲ್ಲಿ ಏಳು ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಪ್ರೋ.ಎಚ್‌.ಎಂ.ಚನ್ನಯ್ಯ ಅವರ ಮರ‍್ಗರ‍್ಶನದಲ್ಲಿ ೧೯೮೮ರಲ್ಲಿ ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ ಪ್ರಬಂಧಕ್ಕೆ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡರು.

    ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ರಹಮತ್‌ ತರೀಕೆರೆ ಅವರು, ನಂತರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಭಾಷಾಕಾಯದ ಡೀನ್‌ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ನೆಲೆಸಿದ್ದಾರೆ.

    ಇವರ ಸಾಹಿತ್ಯ ಕೃಷಿಗೆ ಅನೇಕ ಪ್ರಶಸ್ತಿಗಳು ಅರಸಿ ಬಂದಿದ್ದು, ಕತ್ತಿಯಂಚಿನ ದಾರಿ ಕೃತಿಗೆ ೨೦೧೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ದೇಶದಲ್ಲಿ ಅಸಹಿಷ್ಟುತೆಯನ್ನು ವಿರೋಧಿಸಿ ಪ್ರಶಸ್ತಿಯನ್ನು ಮರಳಿಸಿದ್ದರು. ಇದು ಎಲ್ಲರ ಗಮನ ಸೆಳೆದಿತ್ತು. ಪ್ರತಿ ಸಂಸ್ಕೃತಿಗೆ ಕೃತಿಗೆ ರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೯೩), ರ‍್ನಾಟಕ ಸೂಫಿಗಳು ಕೃತಿಗೆ ರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೯೮), ಅಂಡಮಾನ್‌ ಕನಸು ಕೃತಿಗೆ ರ‍್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೨೦೦೦), ಸಾಹಿತ್ಯ ವಿರ‍್ಶಾ ಕ್ಷೇತ್ರದ ಒಟ್ಟು ಕೊಡುಗೆಗಾಗಿ ೨೦೦೮ರಲ್ಲಿ ಜಿಎಸ್‌ಎಸ್‌ ಪ್ರಶಸ್ತಿ, ಶಿವಮೊಗ್ಗ ರ‍್ನಾಟಕ ಸಂಘದಿಂದ ಲಂಕೇಶ್‌ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಾ.ಮಾ.ನಾಯಕ್‌ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದಾರೆ.

    ಪ್ರತಿಸಂಸ್ಕೃತಿ, ರ‍್ನಾಟಕ ಸೂಫಿಗಳು, ಅಂಡಮಾನ್‌ ಕನಸು, ರ‍್ನಾಟಕ ನಾಥಪಂಥ, ರ‍್ಮಪರೀಕ್ಷೆ ಇವರ ಪ್ರಮುಖ ಕೃತಿಗಳಾಗಿದ್ದು, ಜತೆಗೆ ಮರದೊಳಗಿನ ಕಿಚ್ಚು, ಸಾಂಸ್ಕೃತಿಕ ಅಧ್ಯಯನ, ಲೋಕ ವಿರೋಧಿಗಳ ಜೊತೆಯಲ್ಲಿ, ಕತ್ತಿಯಂಚಿನ ದಾರಿ,ಹೊಸ ತಲೆಮಾರಿನ ತಲ್ಲಣ, ಚಿಂತನೆಯ ಪಾಡು, ನೇತುಬಿದ್ದ ನವಿಲು, ರ‍್ನಾಟಕ ಗುರುಪಂಥ ಸೇರಿದಂತೆ ಜನಪದ, ಸಂಶೋಧನೆ, ವಿರ‍್ಶೆ, ಚಿಂತನೆ, ಸಂಕಲನ, ಪ್ರವಾಸ ಕಥನಗಳು, ಜೀವನ ಚರಿತ್ರೆ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

    ರ‍್ದು ಮಾತೃಭಾಷೆಯಾಗಿದ್ದರು ಕನ್ನಡದ ಮೇಲೆ ಒಲವು ಬೆಳೆಸಿಕೊಂಡಿದ್ದ ರಹಮತ್‌ ತರೀಕೆರೆ ಅವರು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ. ಪ್ರಗತಿಪರ ಹೋರಾಟಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ೭೦ನೇ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. ನ.೧ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಕರ‍್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

    Rajyotsava Award to Rahmat of Tarikere Taluk

  • ರಸ್ತೆ ದುರಸ್ಥಿ ಮಾಡದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿಗೆ ಬೀಗ

    ರಸ್ತೆ ದುರಸ್ಥಿ ಮಾಡದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿಗೆ ಬೀಗ

    ಚಿಕ್ಕಮಗಳೂರು: ನಗರ ಸೇರಿ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಒಂದು ತಿಂಗಳಲ್ಲಿ ಸರಿಪಡಿಸದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಹೊಲದಗದ್ದೆ ಗಿರೀಶ್ ಎಚ್ಚರಿಸಿದ್ದಾರೆ.

    ರಸ್ತೆಗಳ ಸ್ಥಿತಿ ಹಿಂದೆಂದೂ ಕಂಡರಿಯದಷ್ಟರ ಮಟ್ಟಿಗೆ ದುಸ್ಥಿತಿಗೆ ತಲುಪಿದೆ. ದುರಸ್ತಿಗೆ ಒತ್ತಾಯಿಸಿ ಹಲವೆಡೆ ಪ್ರತಿಭಟನೆಗಳು ನಡೆದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಮಳೆಯ ಸಬೂಬು ಹೇಳಿಕೊಂಡು ಕಾಲ ತಳ್ಳುತ್ತಿ ದ್ದಾರೆ. ಅಪಘಾತಗಳು ಸಂಭವಿಸಿ ಸಾವು, ನೋವುಗಳು ಉಂಟಾಗುತ್ತಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ರಾಜ್ಯ, ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಜಿಲ್ಲೆಗೆ ಪ್ರವಾಸಿಗರು ಬಂದು ಹೋಗುತ್ತಾರೆ. ಜಿಲ್ಲಾ ಕೇಂದ್ರ ಎಂದು ಹೇಳಿಕೊಳ್ಳಲು ನಾಚಿಕೆ ಪಡುವಷ್ಟು ರಸ್ತೆ ಹಾಳಾಗಿದೆ. ಪ್ರವಾಸಿಗರು  ಲೇವಡಿ ಮಾಡುವಂತಾಗಿದೆ. ಇಷ್ಟಾದರೂ ಸರ್ಕಾರ ಮುಜುಗರ  ಇಲ್ಲದಂತೆ ವರ್ತಿಸುತ್ತಿದೆ ಎಂದಿದ್ದಾರೆ.

    ಶಾಸಕ ಎಚ್.ಡಿ.ತಮ್ಮಯ್ಯ ಅವರು ನಗರದ ರಸ್ತೆ ದುಸ್ಥಿತಿಗೆ ಹಿಂದಿನ ಸರ್ಕಾರದ ಅಮೃತ್ ಯೋಜನೆ, ಒಳಚರಂಡಿ ಯೋಜನೆಗಳು ಕಾರಣ ಎಂದು ಆರೋಪ ಮಾಡಿದ್ದರು. ಅದೇ ಯೋಜನೆಗಳನ್ನು ಜನರಿಗೆ ತೋರಿಸಿ ಗೆದ್ದು ಬಂದರು. ನಂತರ ಎರಡೂವರೆ ವರ್ಷ ಕಳೆದರೂ ಯಾವುದೂ ಸರಿಯಾಗಲಿಲ್ಲ ಎಂದು ದೂರಿದ್ದಾರೆ.

    ಚಿಕ್ಕಮಗಳೂರು-ಮೂಡಿಗೆರೆ ರಸ್ತೆ, ಬಾಳೆಹೊನ್ನೂರು-ಮಲ್ಲಂದೂರು ರಸ್ತೆ ಸೇರಿ ಬಹುತೇಕ ಎಲ್ಲಾ ರಸ್ತೆಗಳು ಹಾಳಾಗಿವೆ. ಮಲ್ಲಂದೂರಿನಿಂದ ಚಿಕ್ಕಮಗಳೂರಿಗೆ 20ಕಿಲೋ ಮೀಟರ್ ದೂರ ಇದ್ದು, 25 ನಿಮಿಷದಲ್ಲಿ ಪ್ರಯಾಣಿಸಬಹುದಾಗಿತ್ತು. ಈಗ ಒಂದೂವರೆ ಗಂಟೆ ಪ್ರಯಾಣ ಮಾಡಬೇಕಾದ ಸ್ಥಿತಿ ಇದೆ. ಸಾರ್ವಜನಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

    ಜನರ ಆಕ್ರೋಶದ ಕಟ್ಟೆ ಒಡೆಯುವ ಲಕ್ಷಣಗಳಿವೆ. ಸಬೂಬು ಹೇಳುವುದನ್ನು ಬಿಟ್ಟು ಒಂದು ತಿಂಗಳಲ್ಲಿ ರಸ್ತೆ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ನಾಗರಿಕರು ಒಟ್ಟಾಗಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

    ಶಾಸಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ಸಾಮಾನ್ಯ ಜನರಿಗೆ ಉದ್ಯೋಗ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ರೈತರಿಗೆ ಶಾಶ್ವತ ನೀರಾವರಿ ಯೋಜನೆ ನೀಡುತ್ತಿಲ್ಲ. ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೆ ಪಾಠ, ಪ್ರವಚನ ಸ್ಥಗಿತಗೊಂಡಿವೆ. ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದರೂ ಕೇಳುವವರಿಲ್ಲ. ಈ ಬಗ್ಗೆ ಶಾಸಕರು ಆಲೋಚನೆಯನ್ನೇ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

    Public Works Department office locked if road not repaired