October 26, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನಕ್ಕೆ ವಿಶೇಷ ಪೂಜೆ-ಪ್ರಾರ್ಥನೆ

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ೭೮ನೇ ಹುಟ್ಟುಹಬ್ಬದ ಪ್ರಯುಕ್ತ ಭಾನುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ತಾಲ್ಲೂಕು ಕಚೇರಿ ಸಮೀಪದ ಗಣಪತಿ ದೇವಾಲಯ ದಲ್ಲಿ ವಿಶೇಷ ಪೂಜೆ ಹಾಗೂ ಬಡ ಮಕಾನ್ ದರ್ಗಾದಲ್ಲಿ ಪಕ್ಷದ ಕಾರ್ಯಕರ್ತರು ದೀರ್ಘಾಯುಷ್ಯಿಗೆ ಪ್ರಾ ರ್ಥನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಜಾತ್ಯಾತೀತ ಸಿದ್ದಾಂತ ಹಾಗೂ ಶೋಷಿತ ಪರವಾಗಿ ಗಟ್ಟಿಯಾಗಿ ಧ್ವನಿಗೂಡಿಸಿ ಅಪರೂಪದ ನಾಯಕ ಸಿದ್ದರಾಮಯ್ಯನವರು. ೧೯೭೮ರ ಇಸವಿಯಲ್ಲಿ ತಾಲ್ಲೂಕು ಬೋರ್ಡ್ ಸದಸ್ಯರಾಗಿ ಇದೀಗ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯುತ್ತಿದ್ದಾರೆ ಎಂದರು.

ಸಮಾಜವಾದಿ ವಿಚಾರಧಾರೆಗಳಲ್ಲಿ ಗಟಿಬದ್ಧರಾದ ಸಿದ್ದರಾಮಯ್ಯನವರು ಜನಸಾಮಾನ್ಯರ ಕಷ್ಟಕಾಪ ಣ್ಯಗಳಿಗೆ ಸ್ಪಂದಿಸಲು ಈ ಬಾರಿಯ ಸರ್ಕಾರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಿ ರಾಜ್ಯದ ಜನತೆಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಬದುಕು ರೂಪಿಸಿಕೊಟ್ಟ ದೇಶಕಂಡ ಅಪರೂಪದ ರಾಜಕಾರಣಿ ಎಂದು ಹೇಳಿದರು.

ಸಿದ್ದರಾಮಯ್ಯನವರು ಯಾವುದೇ ಒಂದು ಜನಾಂಗ ಮತ್ತು ವಿಚಾರಕ್ಕೆ ಸೀಮಿತರಾದ ನಾಯಕರಲ್ಲ. ಸರ್ವಜನಾಂಗದ ಅಭಿವೃದ್ದಿಗಾಗಿ ಪಣತೊಟ್ಟ ಜನನಾಯಕ ಎಂದ ಅವರು ಡಾ|| ಬಿ.ಆರ್.ಅಂಬೇಡ್ಕರ್, ಬಸವೇಶ್ವರರ ತತ್ವ, ಸಿದ್ದಾಂತಗಳನ್ನು ವೈಯಕ್ತಿಕ ಹಾಗೂ ಪಕ್ಷದಲ್ಲಿ ಅಳವಡಿಸಿಕೊಂಡು ೭೮ರ ಹರೆಯದಲ್ಲೂ ನಾಡಿಗಾಗಿ ದುಡಿಯುತ್ತಿರುವ ನಾಯಕರು ಎಂದು ಬಣ್ಣಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಹಳ್ಳಿಗಾಡಿನ ಬದುಕಿನ ಎಲ್ಲ ಅಡೆತಡೆ ಗಳನ್ನು ಸವಾಲಾಗಿ ಸ್ವೀಕರಿಸಿ ಮೆಟ್ಟಿನಿಂತು ಸಾಧನೆಯ ಶಿಖರ ಏರಿದ ಸಿದ್ದರಾಮಯ್ಯನವರ ಬಾಳದಾರಿ ಅನೇಕರಿಗೆ ಮಾರ್ಗದರ್ಶನ ಮಾತ್ರವಲ್ಲ ಸ್ಪೂರ್ತಿಯಾಗಿದೆ ಎಂದು ತಿಳಿಸಿದರು.

ನಾಡಿನ ಜನತೆ ಹಸಿವಿನಿಂದ ಬಳಲಬಾರದೆಂಬ ದೃಷ್ಟಿಯಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಹಸಿದವರಿಗೆ ಆಸರೆಯಾದ ಸಿದ್ದರಾಮಯ್ಯನವರ ವ್ಯಕ್ತಿತ್ವ, ವಿಚಾರಧಾರೆಗಳು ಇಂದಿನ ಯುವಪೀಳಿಗೆಗೆ ಮಾ ದರಿಯಾಗಿದ್ದು, ಆಧುನಿಕ ಜಗತ್ತಿನಲ್ಲಿ ರಾಜ್ಯದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ ಕಾರ್ಯಕರ್ತರು ಸಿದ್ದರಾಮಯ್ಯನ ವರ ಹುಟ್ಟುಹಬ್ಬ ಆಚರಿಸಲು ವ್ಯಕ್ತಿಯಿಂದಲ್ಲ. ಅವರಲ್ಲಿರುವ ಜಾತ್ಯಾತೀತ ತತ್ವ, ಸಿದ್ದಾಂತವನ್ನು ಒಪ್ಪಿಕೊಂಡು ಹಲವೆಡೆ ಕಾರ್ಯಕರ್ತರು ಜನ್ಮದಿನವನ್ನು ಆಚರಿಸಲು ಕಾರಣವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ತಾಲ್ಲೂಕು ಅಧ್ಯಕ್ಷ ಎಂ.ಮಲ್ಲೇಶ್, ನಗರಸಭೆ ಸದಸ್ಯ ಶಾದಬ್, ಮುಖಂಡರು ಗಳಾದ ಪ್ರವೀಣ್‌ಕುಮಾರ್, ರಾಮಚಂದ್ರ, ಸಿಲ್ವೆಸ್ಟರ್, ಜಗದೀಶ್, ಸುರೇಶ್, ಸುಮ, ಪ್ರಕಾಶ್‌ರೈ, ಅನ್ಸರ್ ಆ ಲಿ, ಲಾಕೇಶ್, ಅಪ್ರೋಜ್, ಶಹಬುದ್ಧೀನ್, ಫಯಾಜ್, ಸುದೀಪ್ ಮತ್ತಿತರರಿದ್ದರು.

Special pooja-prayer on Chief Minister Siddaramaiah’s birthday

Related posts

ಕರ್ನಾಟಕದ ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾದ ಬೆಲೆ ಇದೆ

Team Suddigara

ನಿಡಘಟ್ಟ ಗ್ರಾಮದಲ್ಲಿ ಜನಸಂಪರ್ಕ ಸಭೆ

Team Suddigara

ಅದ್ದೂರಿಯಾಗಿ ಜರುಗಿದ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ

Team Suddigara

Leave a Comment

[t4b-ticker] [t4b-ticker]