October 19, 2025
Suddigaralive News
Uncategorized

ಶಿಕ್ಷಣ ಕೇವಲ ಸರ್ಕಾರಿ ಉದ್ಯೋಗಕ್ಕಷ್ಟೇ ಅಲ್ಲ, ಸಂಸ್ಕಾರಕ್ಕೆಂದು ಭಾವಿಸಿ

ಚಿಕ್ಕಮಗಳೂರು:  ಶೋಷಿತರು, ಬಡವರ್ಗದ ಜನರನ್ನು ಸಮಾಜದ ಮುನ್ನಲೆಗೆ ತರಬೇಕೆಂಬ ಉದ್ದೇಶದೊಂದಿಗೆ ಡಾ. ಬಿ.ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಆಶಯದಂತೆ ಅವರ ಕನಸು ನನಸು ಮಾಡಲು ಶಿಕ್ಷಣ ಅತಿ ಮುಖ್ಯ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.

ನಗರದ ಬಸವೇಶ್ವರ ಬಡಾವಣೆ ಪೈ ಕಲ್ಯಾಣಮಂಟಪ ಹಿಂಭಾಗ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸುಮಾರು ೭ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಾ. ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಉನ್ನತ ಶಿಕ್ಷಣ ಪಡೆದವರು ಹುಲಿಹಾಲಿನ ರೀತಿ ಘರ್ಜಿಸುತ್ತಾರೆ, ಶಿಕ್ಷಣ ಕೇವಲ ಸರ್ಕಾರಿ ಉದ್ಯೋಗಕ್ಕೆ ಎಂದು ಭಾವಿಸದೆ ಬದುಕಿನ ಸಂಸ್ಕಾರ ಕಲಿಯಲು ಎಂದು ಭಾವಿಸುವ ಮೂಲಕ ಶಿಕ್ಷಣ ಪಡೆಯಿರಿ ಎಂದು ಸಲಹೆ ನೀಡಿದರು.

ಸಮಾಜಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ಅವರು ೭ ಕೋಟಿ ರೂ ಅನುದಾನವನ್ನು ವಿದ್ಯಾರ್ಥಿ ನಿಲಯಕ್ಕೆ ಮಂಜೂರು ಮಾಡಿರುವುದನ್ನು ಅಭಿನಂದಿಸಿದ ಅವರು, ಸರ್ಕಾರಿ ಕಟ್ಟಡ ಎಂಬ ತಾತ್ಸಾರ ಮನೋಭಾವ ಬಿಟ್ಟು ಸ್ವಂತ ಮನೆಯಂತೆ ಗುಣಮಟ್ಟದ ಕಟ್ಟಡ ಕಾಮಗಾರಿ ನಡೆಸಬೇಕೆಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಈ ನೂತನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಅತ್ಯಾಧುನಿಕ ರೀತಿಯ ಸೌಲಭ್ಯಗಳು ದೊರೆಯಬೇಕು ಜೊತೆಗೆ ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ಹೇಳಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಆಸರೆಯಾಗಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿಗೂ ಅನುದಾನ ನೀಡಿದೆ ಎಂದರು.

ಈ ನೂತನ ವಸತಿ ನಿಲಯವನ್ನು ಚಿಕ್ಕಮಗಳೂರಿನ ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕೆಂದು ಕರೆನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ವಿದ್ಯೆಯಿಂದ ಯಾರೂ ವಂಚಿತರಾಗಬಾರದು, ಎಲ್ಲರಿಗೂ ಶಿಕ್ಷಣ ಪಡೆಯುವ ಮುಕ್ತ ಅವಕಾಶ ಇರಬೇಕು ಎಂಬ ಹಿನ್ನೆಲೆಯಲ್ಲಿ ಸರ್ಕಾರ ವಸತಿ ನಿಲಯ ನಿರ್ಮಾಣ ಮಾಡಿ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಜ್ಞಾನಾರ್ಜನೆ ಮಾಡಿಕೊಂಡು ಸ್ವಾಭಿಮಾನಿಗಳಾಗಿ ಸಮಾಜಮುಖಿಗಳಾಗಿ ರಾಷ್ಟ್ರದ ಹಿತಕ್ಕೆ ಬದುಕುವ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡಿ ಎಂದು ವಿನಂತಿಸಿದರು.

ಈ ವಸತಿ ನಿಲಯಕ್ಕೆ ಸಿಡಿಎ ನಿವೇಶನ ಮಂಜೂರಾಗಿದ್ದು, ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಈಗಿನ ಸಂಸದರಾಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದು ಮಂಜೂರು ಮಾಡಿದ್ದರು. ಈಗಿನ ರಾಜ್ಯಸರ್ಕಾರ ಪಿಡಬ್ಲೂಡಿ ಇಲಾಖೆ ಮೂಲಕ ೭ ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾ ನಾಯ್ಕ್, ಸದಸ್ಯ ಅರುಣ್ ಕುಮಾರ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ ಶಿವಾನಂದಸ್ವಾಮಿ, ತಾಲ್ಲೂಕು ಅಧ್ಯಕ್ಷ ಮಲ್ಲೇಶ್‌ಸ್ವಾಮಿ ಗುತ್ತಿಗೆದಾರ ರವಿಶಂಕರ್, ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಾಲತಿ ಸ್ವಾಗತಿಸಿ, ಹೆಚ್.ಡಿ ರೇವಣ್ಣ ವಂದಿಸಿದರು.

Consider education not just for government jobs but for culture

Related posts

How to Buy Bitcoin BTC: The Beginners Guide 2025

Team Suddigara

A Love Letter to my Addicted Adult Child

Team Suddigara

Netto Supermarket, Oś Przyjaźni 125A, Poznań 61-689, godziny otwarcia, numer telefonu My CMS

Team Suddigara

Leave a Comment

[t4b-ticker] [t4b-ticker]