October 26, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಕೆನರಾ ಬ್ಯಾಂಕ್‌ನಿಂದ ಸಿಡಿಎ ಕಚೇರಿಗೆ ಕಾರು ಕೊಡುಗೆ

ಕೆನರಾ ಬ್ಯಾಂಕ್‌ನಿಂದ ಸಿಡಿಎ ಕಚೇರಿಗೆ ಕಾರು ಕೊಡುಗೆ

ಚಿಕ್ಕಮಗಳೂರು: ನಗರದ ಬೈಪಾಸ್ ಸಮೀಪದ ಕೆನರಾ ಬ್ಯಾಂಕ್ ಶಾಖೆಯ ಸಿ. ಎಸ್.ಆರ್. ನಿಧಿಯಿಂದ ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಗೆ ೧೨ ಲಕ್ಷ ರೂ. ವೆಚ್ಚದ ಸುಜುಕಿ ಕಂಪನಿ ಯ ಕಾರನ್ನು ಸೋಮವಾರ ಸಂಜೆ ಕೊಡುಗೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಬ್ಯಾಂಕ್ ಈಗಾಗಲೇ ಸಿಎಸ್‌ಆರ್ ನಿಧಿಯಡಿ ಹಲವಾರು ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡಿ ಕೆಲಸ ಮಾಡಿವೆ. ಜೊತೆಗೆ ನಗರಸಭೆ, ಮೆಡಿಕಲ್ ಕಾಲೇ ಜಿಗೂ ವಾಹನಗಳ ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿ ಎಂದರು.

ಮುಂಬರುವ ದಿನಗಳಲ್ಲಿ ಕೆನರಾ ಬ್ಯಾಂಕ್ ಸಿಆರ್‌ಎಸ್ ನಿಧಿಯಡಿ ಹೆಚ್ಚು ಕಾರ್ಯನಿರ್ವಹಿಸಲಿ ಹಾ ಗೂ ಸಿಡಿಎ ಕಚೇರಿ ವ್ಯವಹಾರಗಳು ಈ ಶಾಖೆಯಿಂದ ಕೂಡಿರುವ ಹಿನ್ನೆಲೆ ಇನ್ನಷ್ಟು ಸಾಮಾಜಿಕ ಕಾರ್ಯ ದಲ್ಲಿ ತೊಡಗಲಿದೆ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಆಯುಕ್ತೆ ನಾಗರತ್ನ, ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಕೊಟ್ಟಾರಿ, ಸಹಾಯಕ ವ್ಯವಸ್ಥಾಪಕ ಅನಿಲ್, ನಗರಸಭಾ ಸದಸ್ಯ ಕೀರ್ತಿಶೇಟ್, ಸಿಡಿಎ ಇಂಜಿನಿಯರ್ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.

Canara Bank donates car to CDA office

Related posts

ಸಾಹಿತ್ಯ ಸಮ್ಮೇಳನ ನಿತ್ಯ ನಿರಂತರ ಮಹಿಳೆಯರಿಗೆ ಚಿಂತನೆಯ ದಾರಿಯಾಗಬೇಕು

Team Suddigara

ಜೀವನದ ನೆನಪು ಮೂಡಿಸಲು ಫೋಟೋಗಳು ಸಹಕಾರಿ

Team Suddigara

ಸುಖಮಯ ಬಾಳಿಗೆ ಸದ್ವಿದ್ಯೆ ಸಂಬಂಧ ಸ್ನೇಹ ಮುಖ್ಯ

Team Suddigara

Leave a Comment

[t4b-ticker] [t4b-ticker]