October 26, 2025
Suddigaralive News
ಎನ್ಆರ್ ಪುರಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಶ್ರೀ ರಂಭಾಪುರಿ ಜಗದ್ಗುರುಗಳವರ ಫೆಬ್ರುವರಿ ಮಾಹೆಯ ಪ್ರವಾಸ ವಿವರ

ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು):   ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ೨೦೨೫ನೇ ಸಾಲಿನ ಫೆಬ್ರುವರಿ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿರುವುದಾಗಿ ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.
ದಿನಾಂಕ ೧ರಂದು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕ ಹಂಪಸಾಗರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಪೀಠಾರೋಹಣದ ೩೪ನೇ ವರ್ಧಂತಿ ಮಹೋತ್ಸವ ಧರ್ಮ ಸಮಾರಂಭ, ೨ರಂದು ಕಲಘಟಗಿ ತಾಲೂಕ ಸುರಶೆಟ್ಟಿಕೊಪ್ಪದಲ್ಲಿ ಶ್ರೀ ಜಗದ್ಗುರು ರೇಣುಕ-ಶ್ರೀ ವೀರಭದ್ರಸ್ವಾಮಿ ಮೂರ್ತಿ ಪ್ರತಿಷ್ಠಾಪನಾ ಸಮಾರಂಭ, ೩ರಂದು ವಿಜಯಪುರ ಜಿಲ್ಲೆ ಲೋಣಿ(ಬಿ.ಕೆ.) ಗ್ರಾಮದಲ್ಲಿ ಶ್ರೀ ಗುರು ರೇವಣಸಿದ್ಧೇಶ್ವರ ಗೋಪುರ ಕಳಸಾರೋಹಣ ಸಮಾರಂಭ,
೫ರಂದು ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟ ತಾಲೂಕ ಮೈಸಲಗಿಯಲ್ಲಿ ಧರ್ಮ ಜಾಗೃತಿ ಸಮಾರಂಭ, ೬ರಂದು ಅಕ್ಕಲಕೋಟ ತಾಲೂಕ ತಡವಾಳದಲ್ಲಿ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ ೭ರಂದು ಕಲಬುರ್ಗಿಯಲ್ಲಿ ಶ್ರೀ ಚೌಧಾಪುರಿ ಹಿರೇಮಠದ ನವೀಕೃತ ಕಟ್ಟಡ ಹಾಗೂ ಗದ್ದುಗೆ ಪ್ರತಿಷ್ಠಾಪನಾ ಸಮಾರಂಭ, ೮ರಂದು ತಿಪಟೂರು ತಾಲೂಕ ಈಚನೂರಿನಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಉದ್ಘಾಟನಾ ಸಮಾರಂಭ,
೧೦ರಂದು ಬೆಳಿಗ್ಗೆ ೧೦ ಗಂಟೆಗೆ ಭದ್ರಾವತಿ ತಾಲೂಕ ವೈಸನಹಳ್ಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ-ಧರ್ಮ ಸಮಾರಂಭ, ಮಧ್ಯಾಹ್ನ ೧೨.೩೦ ಗಂಟೆಗೆ ಶಿವಮೊಗ್ಗ ಜಿಲ್ಲೆ ಹೊಳೆಹಟ್ಟಿ ಹಳೇ ಗ್ರಾಮದಲ್ಲಿ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ ೧೨ರಂದು ಪೌರ್ಣಿಮೆಯ ನಿಮಿತ್ಯ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ವಾಸ್ತವ್ಯ ಇದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು.
ದಿನಾಂಕ ೧೫ರಂದು ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕ ತಿಪ್ಪಾಯಿಕೊಪ್ಪದಲ್ಲಿ ಇಷ್ಟಲಿಂಗ ಮಹಾಪೂಜಾ-ಸಮಾರಂಭ, ೧೬ರಂದು ಸಾಗರದಲ್ಲಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಇಷ್ಟಲಿಂಗ ಮಹಾಪೂಜಾ, ೧೭ರಂದು ಬೇಲೂರು ತಾಲೂಕ ಪಡುವಳಲು ಗ್ರಾಮದಲ್ಲಿ ನೂತನ ದೇವಾಲಯ ಉದ್ಘಾಟನಾ ಸಮಾರಂಭ, ೧೮ರಂದು ಸವದತ್ತಿ ತಾಲೂಕ ಹೂಲಿ ಗ್ರಾಮದಲ್ಲಿ ಲಿಂ.ಶ್ರೀ ಸಂಗಮೇಶ್ವರ ಅಜ್ಜನವರ ಪುಣ್ಯಾರಾಧನೆ ಧರ್ಮ ಸಮಾರಂಭ, ೧೯ರಂದು ಶಹಪುರ ತಾಲೂಕ ದೋರನಹಳ್ಳಿಯಲ್ಲಿ ಶ್ರೀ ಗುರು ಪಟ್ಟಾಧಿಕಾರ ಸಮಾರಂಭ, ದಿನಾಂಕ ೨೧ರಂದು ಸವಣೂರಿನಲ್ಲಿ ನೂತನ ಗೃಹ ಪ್ರವೇಶ-ಸಮಾರಂಭದಲ್ಲಿ ಪಾಲ್ಗೊಳ್ಳುವರು.
ದಿನಾಂಕ ೨೨ರಂದು ಲಕ್ಷ್ಮೇಶ್ವರ ತಾಲೂಕ ಆಡರಕಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ಸಮಾರಂಭ, ೨೩ರಂದು ಹರಿಹರ ತಾಲೂಕ ಗುತ್ತೂರಿನಲ್ಲಿ ಇಷ್ಟಲಿಂಗ ಮಹಾಪೂಜಾ ಧರ್ಮ ಸಮಾರಂಭ, ೨೪ರಂದು ಹೊಳೆನರಸೀಪುರ ತಾಲೂಕ ನಿಡುವಣಿ ಗ್ರಾಮದಲ್ಲಿ ದೇವಾಲಯ ಉದ್ಘಾಟನೆ-ಧರ್ಮ ಸಮಾರಂಭ, ೨೬ರಂದು ವಿಜಯಪುರ ಜಿಲ್ಲೆ ನಾಗಠಾಣದಲ್ಲಿ ಶ್ರೀ ಉದಯಲಿಂಗೇಶ್ವರ ದೇವಸ್ಥಾನ ಉದ್ಘಾಟನಾ ಸಮಾರಂಭ, ೨೭ರಂದು ನರಗುಂದ ಪಂಚಗೃಹ ಹಿರೇಮಠದಲ್ಲಿ ಧರ್ಮ ಜಾಗೃತಿ ಸಮಾರಂಭ, ೨೮ರಂದು ಲಕ್ಷ್ಮೇಶ್ವರ ತಾಲೂಕ ಮುಕ್ತಿಮಂದಿರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು.
ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಸಮಸ್ತ ಜನತೆ ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.
Details of Sri Rambhapuri Jagadguru’s February tour

Related posts

ಮಹಿಳಾ – ಮಕ್ಕಳ ಅಭಿವೃದ್ದಿ ನಿಗಮಕ್ಕೆ ಸರ್ಕಾರದಿಂದ 32 ಕೋಟಿ ರೂ.

Team Suddigara

ಹೃದಯಘಾತ ತಡೆಗೆ ಜನಜಾಗೃತಿ – ವಿಶ್ವ ಹೃದಯ ದಿನಾಚರಣೆ ಉದ್ದೇಶ

Team Suddigara

ನಟನ ರಂಗಭೂಮಿ ಡಿಪ್ಲೋಮಾಗೆ ಆಹ್ವಾನ

Team Suddigara

Leave a Comment

[t4b-ticker] [t4b-ticker]