ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿವಿಧ ಇಲಾಖೆ.ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಹೊರಗುತ್ತಿಗೆ ಕೆಲಸ ಮಾಡುವವರಿಗೆ ಅನೂಕುಲವಾಗುವಂತೆ ಸಹಕಾರಿ ಸಂಘದ ಮೂಲಕ ಶಾಸನಾತ್ಮಕವಾಗಿ ಸೌಲಭ್ಯಗಳನ್ನು ಒದಗಿಸಲು ಸಂಘವನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕಾರ್ಮಿಕ ಇಲಾಖೆ ವತಿಯಿಂದ ಅಯೋಜಿಸಿದ್ದ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ದೊದ್ದೇಶ ಸಂಘ [ನಿ] ರಚಿಸುವ ಕುರಿತು ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಮತ್ತು ತಾಲ್ಲೂಕು ಮುಂತಾದ ವಿವಿಧ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ,ವಾಹನ ಚಾಲಕ ,ಡಿ ಗ್ರೂಪ್. ಅಡಿಗೆ ಇನ್ನಿತರ ಸೇವೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರ ಸಮಸ್ಯೆಗಳನ್ನು ಅರಿತು, ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಕಾರ್ಮಿಕರ ಇಲಾಖೆ ಸಂಘವನ್ನು ಸ್ಥಾಪಿಸಿ ಯಶಸ್ವಿಯಾಗುತ್ತಿರುವುದನ್ನು ಗಮನಿಸಿ ಅದೇ ಮಾದರಿಯಲ್ಲಿ ನಮ್ಮ ಜಿಲ್ಲೆಯಲ್ಲಿರುವ ಸಂಘ ಸ್ಥಾಪನೆಗೆ ಬೇಡಿಕೆ ಇರುವುದರಿಂದ ಜಿಲ್ಲಾ ಕಾರ್ಮಿಕರ ಸೇವೆಗೆ ವಿವಿದೊದ್ದೇಶ ಸಂಘ [ನಿ] ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು.
ಈ ಸಂಘದ ಮೂಲಕ ನೌಕರರಿಗೆ ಕನಿಷ್ಠ ವೇತನ ಪಿ.ಎಫ್, ಇ.ಸಿ.ಎಸ್ ಗಳ ಸೌಲಭ್ಯ ಹಾಗೂ ಹೊಗಗೊತ್ತಿಗೆ ಏಜನ್ಸಿಗಳಿಂದ ಆಗುತ್ತಿರುವ ಸಮಸ್ಯೆಗಳ ಶೋಷಣೆಗಳನ್ನು ತಪ್ಪಿಸಲು ಹಾಗೂ ನೌಕರ ವೇತನ ಪಾವತಿ.ಶಾಸನಾತ್ಮಕವಾಗಿ ನೀಡಬೇಕಾದ ಸೌಲಭ್ಯಗಳನ್ನು ಒದಗಿಸಲು ಸಂಘದ ಮೂಲಕ ಕ್ರಮ ಕೈಗೊಳ್ಳಬಹುದು ಎಂದ ಅವರು ಎಲ್ಲಾ ತಾಲ್ಲೂಕುಗಳಿಂದ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಲಾಗುವುದು ಜಿ.ಪಂ.ಸಿ.ಇ.ಒ ಉಪಾಧ್ಯಕ್ಷರಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿಗೆ ಕಾರ್ಮಿಕರ ಅಧಿಕಾರಿ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಈ ರೀತಿಯಾದ ಸಂಘವನ್ನು ಸ್ಥಾಪಿಸಿ ಏಪ್ರೀಲ್ ೪ ಕ್ಕೆ ಮತ್ತೊಂದು ಸಭೆಯಯನ್ನು ನಡೆಸಿ ಅಂತಿಮ ರೂಪು-ರೇಷ ಸಿದ್ದಪಡಿಸಲಾಗುವುದು ಎಂದು ಹೇಳಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್ ಕೀರ್ತನಾ ,ಉಪಕಾರ್ಯದರ್ಶಿ ಶಂಕರ್ ಕೊರವರ , ಸಹಕಾರ ಇಲಾಖೆಯ ತೇಜಸ್ವಿನಿ, ಕಾರ್ಮಿಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
First meeting on forming a multi-purpose association of district labor services
