ಚಿಕ್ಕಮಗಳೂರು: : ನಗರದ ಉಪ್ಪಳ್ಳಿ ಬಡಾವಣೆಯ ಬಸವರಾಜ ಲೇಔಟ್‌ನಲ್ಲಿ ಸುಮಾರು ೪.೫೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾ ಶ್ರೀ ನಾರಾಯಣಗುರು ಸಮುದಾಯ ಭವನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ನಾರಾಯಣಗುರು ಸಮಿತಿ ಅಧ್ಯಕ್ಷ ಎಂ. ಕೃಷ್ಣಪ್ಪ ದಾಸರಹಳ್ಳಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಈಡಿಗ ಜನಾಂಗದವರು ೧.೫೦ ಲಕ್ಷಕ್ಕೂaz ಅಧಿಕ ಸಂಖ್ಯೆಯಲ್ಲಿ ಇದ್ದು, ಸಮಾಜವು ಆರ್ಥಿಕವಾಗಿ ಬಹಳ ಹಿಂದುಳಿದ ಸಮಾಜವಾಗಿರುತ್ತದೆ. ಈ ನಮ್ಮ ಸಮುದಾಯಕ್ಕೆ ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಸಮುದಾಯ ಭವನದ ಅವಶ್ಯಕತೆ ಇದ್ದು, ಈ ಸಮುದಾಯ ಭವನಕ್ಕೆ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಸಮಜ ಬಾಂಧವರ ಹಲವಾರು ವರ್ಷಗಳ ಹೋರಾಟದ ಫಲವಾಗಿ ೧೦೪೦೦ ಅಡಿ ಅಳತೆಯ ನಿವೇಶನವನ್ನು ೩೨ ಲಕ್ಷಕ್ಕೆ ಸಮಾಜ ಬಾಂಧವರು ನೀಡಿದ ದೇಣಿಗೆ ಹಣದಲ್ಲಿ ಖರೀದಿಸಲಾಗಿದ್ದು, ಈಗಾಗಲೇ ಸಮುದಾಯ ಭವನ ಕಾಮಗಾರಿ ೪೮ ಲಕ್ಷ ರೂಗಳ ವೆಚ್ಚದಲ್ಲಿ ಪಿಲ್ಲರ್‌ಗಳನ್ನು ಅಳವಡಿಸಲು ಸಾಧ್ಯವಾಗಿದೆ. ಈಗಾಗಲೇ ಸಮಾಜ ಬಾಂಧವರು ೮೦ ಲಕ್ಷ ರೂಗಳನ್ನು ಸಾಲದ ರೂಪದಲ್ಲಿ ಪಡೆಯಲಾಗಿದೆ ಎಂದು ಮನವಿ ರೂಪದಲ್ಲಿ ತಿಳಿಸಿದ್ದಾರೆ.
ಈ ಹಿಂದೆ ೨೫ ಲಕ್ಷ ರೂ ಅನುಮೋದನೆಯಾಗಿ ೧೮,೭೫,೦೦೦ ಬಿಡುಗಡೆಯಾಗಿದ್ದು, ಹಣದ ಕೊರತೆಯಿಂದಾಗಿ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಪ್ರಸ್ತುತ ಈ ನಿವೇಶನದಲ್ಲಿ ಮೂರು ಹಂತಸ್ತಿನ ಸಮುದಾಯ ಭವನ ಕಟ್ಟಲು ೪.೫೦ ಲಕ್ಷ ರೂ ಅಂದಾಜು ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಹಣ ಇಲ್ಲದ ಕಾರಣ ಕಾಮಗಾರಿ ಮುಂದುವರೆಸಲು ಸಾಧ್ಯವಾಗಿಲ್ಲ ಎಂದು ವಿವರಿಸಿದ್ದಾರೆ.
ಈ ಎಲ್ಲಾ ಅಂಶಗಳನ್ನು ಸಚಿವರು ಗಂಭೀರವಾಗಿ ಪರಿಗಣಿಸಿ, ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕಾರಿ ಸದಸ್ಯರುಗಳಾದ ಕೆ.ಎಂ. ಗುಣಶೇಖರ್, ಕೆ.ಸಿ. ಶಾಂತಕುಮಾರ್, ಅಯ್ಯಪ್ಪ, ಕುಂಜಪ್ಪ, ಮನೋಹರ್, ಚಂದ್ರಣ್ಣ ಕೋಟೆ, ಸಿ.ಆರ್. ಕುಮಾರ್, ಸಿ.ಆರ್. ಅಶೋಕ್ ಕುಮಾರ್, ಶ್ರೀಧರ್, ಚಂದ್ರು ಮತ್ತಿತರರು ಉಪಸ್ಥಿತರಿದ್ದರು.
Appeal to the District Minister seeking funding for Narayanaguru Community Hall
