October 26, 2025
Suddigaralive News
ರಾಜ್ಯ

ಇಂದಿನಿಂದ ಹಾಸನಾಂಬೆಯ ದರ್ಶನ

ಹಾಸನ: ಇಲ್ಲಿನ ಹಾಸನಾಂಬ ದೇವಾಲಯದ ಗರ್ಭಗುಡಿಯ ಬಾಗಿಲು ಗುರುವಾರ (ಅ.9) ತೆರೆಯಲಿದ್ದು, ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.

ಅ.23ರಂದು ದೇವಾಲಯದ ಬಾಗಿಲು ಮುಚ್ಚಲಾಗುವುದು. ಮೊದಲ ಹಾಗೂ ಕೊನೆಯ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿಲ್ಲ. ಅ.10 ರಿಂದ 22ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಬಾರಿ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದುಪಡಿಸಲಾಗಿದ್ದು, ಗೋಲ್ಡ್‌ ಪಾಸ್‌ ಜಾರಿಗೊಳಿಸಲಾಗಿದೆ. ಒಂದು ಪಾಸ್‌ಗೆ ಒಬ್ಬರು ಮಾತ್ರ ಬೆಳಿಗ್ಗೆ 7 ರಿಂದ 10ರವರೆಗೆ ದರ್ಶನ ಪಡೆಯಬಹುದು. ಗಣ್ಯರಿಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30ರವರೆಗೆ ಅವಕಾಶ ನೀಡಲಾಗಿದೆ.

‘ಟಿಕೆಟ್‌ ಕಾಯ್ದಿರಿಸುವುದು, ಆಯಾ ದಿನ ದರ್ಶನಕ್ಕೆ ತಗುಲುವ ಸಮಯ, ದರ್ಶನದ ವೇಳಾಪಟ್ಟಿ ಸೇರಿ ವಿವಿಧ ಮಾಹಿತಿಯನ್ನು ಮೊಬೈಲ್‌ ಸಂಖ್ಯೆ 63661–05589 ಗೆ ವಾಟ್ಸ್‌ ಆ್ಯಪ್‌ ಸಂದೇಶ ಕಳುಹಿಸುವ ಮೂಲಕ ಪಡೆಯಬಹುದಾಗಿದೆ’ ಎಂದು ಜಿಲ್ಲಾಡಳಿತವು ಪ್ರಕಟಣೆಯಲ್ಲಿ ತಿಳಿಸಿದೆ.

ವಿವಿಧ ಚಟುವಟಿಕೆ: ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕೃಷಿ ಮೇಳ, ಶ್ವಾನ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರವಾಸೋದ್ಯಮದ ಅಭಿವೃದ್ಧಿಗೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಲು 12 ಪ್ಯಾಕೇಜ್ ಮಾಡಲಾಗಿದೆ. ಹೆಲಿ ಟೂರಿಸಂಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

Visit to Hasanamba from today

Related posts

ಗಾಂಧೀಜಿ, ಶಾಸ್ತ್ರಿಯವರ ತ್ಯಾಗ, ಬಲಿದಾನ ಸದಾ ನಮಗೆ ಆದರ್ಶಪ್ರಾಯ

Team Suddigara

ಸತ್ಯಸಾಯಿ ಗ್ರಾಮದಲ್ಲಿ ಶೀಘ್ರ ಯಕ್ಷಗಾನ, ಜಾನಪದ ರಂಗಕಲೆ ಕಲಿಯಲು ಅವಕಾಶ

Team Suddigara

ಜುಲೈ 1ರಂದು ರಾಜ್ಯಮಟ್ಟದ ಪತ್ರಿಕಾ ದಿನಾಚರಣೆ

Team Suddigara

Leave a Comment

[t4b-ticker] [t4b-ticker]