May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಅರಣ್ಯ-ಕಂದಾಯ ಭೂಮಿ ಸಮಸ್ಯೆ – ಸರ್ಕಾರ ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಬೇಕು

ಚಿಕ್ಕಮಗಳೂರು:  ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆ ಬಗೆಹರಿಸಲು ಸರ್ಕಾರ ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಬೇಕು. ಗ್ರಾಮ ಮಟ್ಟದಲ್ಲಿ ವರದಿ ತಯಾರಿಸಬೇಕು. ಅದನ್ನು ಬಿಟ್ಟು ಎಸ್‌ಐಟಿ ರಚನೆ ಮಾಡಿರುವುದು ಸೂಕ್ತವಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರೀನ್ ಆರ್ಮಿ‌ ಇಂಡಿಯಾದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಹೇಳಿದರು.

1980ರ ಈಚೆಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಒಪ್ಪಂದದ ಮೇರೆಗೆ ಸಾಮಾಜಿಕ ಅರಣ್ಯಕ್ಕೆ ಕಂದಾಯ ಭೂಮಿ ವರ್ಗಾಯಿಸಲಾಗಿದೆ. ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿಕೊಂಡ ಕಂದಾಯ ಭೂಮಿಗೆ ಅರಣ್ಯ ಎಂದು ಪಹಣಿಯಲ್ಲಿ ನಮೂದಿಸಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ರೈತರ, ದಲಿತರ, ಬಡವರ ಮನೆ, ಕೃಷಿ ಜಮೀನು, ದಾರಿ, ಶಾಲೆಗಳಿಗೆ ಜಾಗ ಮೀಸಲಿಟ್ಟಿಲ್ಲ. ಆದ್ದರಿಂದ 1980ರ ನಂತರದ ಅಧಿಸೂಚಿತ ಅರಣ್ಯ ಪ್ರದೇಶಗಳನ್ನು ಕಾನೂನು ಬಾಹಿರ ಎಂದು ಪರಿಗಣಿಸಬೇಕು. ಇಲ್ಲದಿದ್ದರೆ ಇದು ರೈತರಿಗೆ ಮರಣ ಶಾಸನವಾಗಲಿದೆ. ಪರಿಸರಕ್ಕೆ ಮಾರಕವಾದ ಅಕೇಶಿಯ, ನೀಲಗಿರಿ, ಸಾಗುವಾನಿ ಮರಗಳನ್ನು ಅರಣ್ಯ ಇಲಾಖೆ ಬೆಳೆಸಿದೆ. ಇದರಿಂದಾಗಿ ಆನೆ, ಹುಲಿ, ಕಾಡುಕೋಣ, ಮಂಗ, ನವಿಲು, ಕಾಡು ಹಂದಿಗಳು ರೈತರ ತೋಟ, ಹೊಲ, ಗದ್ದೆಗಳಿಗೆ ಬರುತ್ತಿವೆ ಎಂದು ದೂರಿದರು.

ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್‌ಪೋಸ್ಟ್ ತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು. ಜಿಲ್ಲೆಯ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಬೇಕು. ರಸ್ತೆ ಬದಿಯ ಕಾಡು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಳಿಂಗ ಸರ್ಪಗಳ ಅಧ್ಯಯನದ ಹೆಸರಿನಲ್ಲಿ ಅವುಗಳ ಮೊಟ್ಟೆ ತಂದು ಕೃತಕವಾಗಿ ಮರಿಮಾಡಿ ಪಿಐಜಿ ಅಳವಡಿಸಿರುವುದು ಅವೈಜ್ಞಾನಿಕ. ಇದರಿಂದ ಕಾಳಿಂಗ ಸರ್ಪಗಳ ಸ್ವಾಭಾವಿಕ ಜೀವನಕ್ಕೆ ಧಕ್ಕೆ ಉಂಟಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಾಣಿಗಳ ಹಾವಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ₹1 ಕೋಟಿ, ಅಂಗವಿಕಲರಾದರೆ ₹50 ಲಕ್ಷ ಪರಿಹಾರ ನೀಡಬೇಕು. ಆನೆ ಮತ್ತು ಕಾಡು ಪ್ರಾಣಿಗಳು ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತುಳಸೇಗೌಡ, ರಾಜು, ಜಿಲ್ಲಾ ಸಂಚಾಲಕ ಡಿ.ಎಸ್. ರಮೇಶಗೌಡ ಹಾಜರಿದ್ದರು.

Forest-Revenue Land Issue – Government should form a high-level joint committee

Related posts

ಏ.26ರೊಳಗೆ ಬಾಲ್ಯ ವಿವಾಹ ನಿಷೇಧದ ಸಭೆ ನಡೆಸಲು ಸೂಚನೆ

Team Suddigara

ಪದವೀಧರರು ಸ್ವತಂತ್ರ್ಯವಾಗಿ ಬದುಕುವುದನ್ನು ಕಲಿಯಿರಿ

Team Suddigara

ನಮ್ಮ ದೇಶದ ಭವಿಷ್ಯ ಯುವ ಜನತೆ ಕೈಯಲ್ಲಿದೆ

Team Suddigara

Leave a Comment