October 26, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಚಿಕ್ಕಮಗಳೂರು ಮೆಡಿಕಲ್ ಕಾಲಾಜು-ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಹತ್ತಾರು ಕುಂದುಕೊರತೆ

ಚಿಕ್ಕಮಗಳೂರು:  ಚಿಕ್ಕಮಗಳೂರು ಮೆಡಿಕಲ್ ಕಾಲಾಜು ಮತ್ತು ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಹತ್ತಾರು ಕುಂದುಕೊರತೆಗಳಿದ್ದು, ಈ ಬಗ್ಗೆ ಸರ್ಕಾರಕ್ಕೆ ಒತ್ತಡ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದ್ದಲ್ಲದೆ, ವಿದ್ಯಾರ್ಥಿಗಳಿಂದ ಅಹವಾಲು ಆಲಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿ ಮೊನ್ನೆ ದೇವೀರಮ್ಮನವರ ಬೆಟ್ಟ ಹತ್ತುವಾಗ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕೆಲವು ಪೋಷಕರು ನಮ್ಮನ್ನು ಭೇಟಿಯಾಗಿದ್ದರು ಆ ವೇಳೆ ಕಾಲೇಜು ಹಾಸ್ಟೆಲ್‌ನಲ್ಲಿ ಸಮಸ್ಯೆ ಇದೆ ಎಂದು ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ಹಾಸ್ಟೆಲ್‌ಗೆ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು

ಕಾಲೇಜಿನಲ್ಲಿ ಶೌಚಾಲಯದಲ್ಲಿ ನೀರಿನ ವ್ಯವಸ್ಥೆಯಿಲ್ಲ. ಬಕೆಟ್‌ನಲ್ಲಿ ನೀರು ಹಿಡಿದು ಹೋಗಬೇಕಾದ ಸ್ಥಿತಿ ಇದೆ. ಯಾವುದೇ ಸಿಂಕ್‌ಗಳಲ್ಲೂ ನೀರು ಬರುತ್ತಿಲ್ಲ. ಕೆಟ್ಟ ವಾಸನೆ ಬರುತ್ತಿದೆ. ಇದೆಲ್ಲವೂ ಮೆಡಿಕಲ್ ಕಾಲೇಜಿಗೆ ಗೌರವ ತರುವಂತಹದ್ದಲ್ಲ. ಅಲ್ಲದೆ ಎಲ್ಲ ವಿಷಯಗಳಿಗೂ ಉಪನ್ಯಾಸಕರುಗಳಿಲ್ಲ, ಸರಿಯಾದ ಸಿಬ್ಬಂದಿ ಇಲ್ಲ ಎನ್ನುವ ದೂರುಗಳನ್ನು ವಿದ್ಯಾರ್ಥಿಗಳು ಹೇಳಿದ್ದಾರೆ ಎಂದರು.

ಹಾಸ್ಟೆಲ್‌ನಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆ ಇದೆ. ಆಗಾಗ ವಿದ್ಯುತ್ ಕಡಿತ ಆಗುತ್ತಿರುತ್ತದೆ. ವೋಲ್ಟೇಜ್ ಸಮಸ್ಯೆ ಇದೆ. ಜನರೇಟರ್ ಆಟೋಮ್ಯಾಟಿಕ್ ಚಾಲನೆ ಆಗುವುದಿಲ್ಲ. ಕೆಲವೊಮ್ಮೆ ಇಡೀ ದಿನ ವಿದ್ಯುತ್ ಇರುವುದಿಲ್ಲ ಇದೆಲ್ಲವೂ ಅಮಾನವೀಯ ಎಂದರಲ್ಲದೆ, ಹೈಸ್ಪೀಡ್ ಇಂಟರ್‌ನೆಟ್ ಸಮಸ್ಯೆ ಇದೆ ಎನ್ನುವ ದೂರುಗಳಿವೆ ಎಂದರು.

ಕಸದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಹಾಸ್ಟೆಲ್ ಊಟ-ತಿಂಡಿ ಗುಣಮಟ್ಟ ಮತ್ತು ಅಗತ್ಯದಷ್ಟು ಪೂರೈಕೆಯಲ್ಲಿ ಕೊರತೆ ಇದೆ. ಶುಚಿತ್ವದ ಕೊರತೆ ಇದೆ. ಜೇನು ಹುಳುಗಳ ಕೊರತೆ ಇದೆ. ಕರ್ಟನ್ ರಾಡ್ ಒದಗಿಸಿಲ್ಲ. ಏರ್ ಕಂಡೀಷನ್ ವಿದ್ಯುತ್ ಸಮಸ್ಯೆಯಿಂದಾಗಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ದೂರುಗಳಿವೆ ಎಂದು ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಇದೆ ಹಿಂದೆ ಅಮೃತ್ ಯೋಜನೆಯಲ್ಲಿ ಮೆಡಿಕಲ್ ಕಾಲೇಜಿಗೂ ನೀರು ಒದಗಿಸಬೇಕೆಂದು ಯೋಜನೆಯಲ್ಲಿ ಸೇರಿಸಲಾಗಿತ್ತು. ಅದು ಕಾರ್ಯಗತಕ್ಕೆ ಬಂದಿಲ್ಲ ಎಂದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಸಾರಿಗೆ ವ್ಯವಸ್ಥೆಯು ಸಮರ್ಪಕವಾಗಿಲ್ಲದೆ ತೊಂದರೆ ಆಗಿದೆ. ತಕ್ಷಣಕ್ಕೆ ಊಟ, ಉಪಹಾರ ಬೇಕೆಂದರೆ ಅಗತ್ಯ ಕಾಂಡಿಮೆಂಟ್ಸ್ ನಂತರ ವ್ಯವಸ್ಥೆ ಇಲ್ಲ. ಇದೆಲ್ಲವನ್ನೂ ದಾಖಲಿಸಿಕೊಂಡಿದ್ದೇವೆ ಎಂದರು.

ನಿಯಮಗಳ ಪ್ರಕಾರ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಇಷ್ಟರವೇಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅದಕ್ಕೆ ಸಮಸ್ಯೆ ಏನು ಎನ್ನುವುದನ್ನು ಪರಿಶೀಲಿಸಿ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು. ೬೩೮ ಕೋಟಿ ಖರ್ಚು ಮಾಡಿ ಕೇಂದ್ರ ಮತ್ತು ರಾಜ್ಯದ ಸಹಯೋಗದಲ್ಲಿ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣವಾಗುತ್ತಿದೆ. ೨೦೧೨ರಲ್ಲಿ ನಾವು ಮಂತ್ರಿಯಾಗಿದ್ದಾಗಲೇ ಇದಕ್ಕೆ ಮಂಜೂರಾತಿ ಕೊಡಿಸಿದ್ದೆ. ಸರ್ಕಾರ ಬದಲಾದ ನಂತರ ಅದನ್ನು ರದ್ದು ಪಡಿಸಲಾಗಿತ್ತು.

ನಂತರ ಮತ್ತೆ ನಮ್ಮ ಸರ್ಕಾರ ಬಂದಾಗ ಕೇಂದ್ರ ಹಾಗೂ ರಾಜ್ಯದ ಸಹಯೋಗದೊಂದಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದೇವೆ. ವರ್ಷಕ್ಕೆ ೧೫೦ ಮಂದಿ ಪ್ರವೇಶ ಪಡೆಯುತ್ತಿದ್ದಾರೆ. ಅವರು ಕನಸು ಕಟ್ಟಿಕೊಂಡು ಬಂದಿರುತ್ತಾರೆ. ಅವರಿಗೆ ಐಶಾರಾಮಿ ಸೌಲಭ್ಯ ಇಲ್ಲವಾದರೂ ಅವರ ವಿದ್ಯಾಭ್ಯಾಸಕ್ಕೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ ಇದೆ.

ಕ್ರೀಡಾ ವ್ಯವಸ್ಥೆ ಇಲ್ಲ ಎನ್ನುವ ದೂರು ಸಹ ವಿದ್ಯಾರ್ಥಿಗಳಿಂದ ಬಂದಿದೆ. ಜಾಗವನ್ನು ಮೀಸಲಿಡಲಾಗಿದೆ. ಹಾಸ್ಟೆಲ್ ನಿರ್ಮಾಣದ ವೇಳೆಯೇ ಅದರ ಕಡೆಗೂ ಗಮನ ಕೊಡಬೇಕಿತ್ತು. ಉಳಿದಂತೆ ಎಂಯುಎಸ್‌ಎಸ್‌ಆರ್ ಸ್ಟೇಷನ್‌ಗೆ ಜಾಗ ಮಂಜೂರಾಗಿದೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರೆ ಇಂಧನ ಸಚಿವರಿದ್ದಾರೆ. ಅವರಿಗೆ ತಕ್ಷಣ ಇಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಿದರೆ ಕಾಲೇಜಿಗೂ ಅನುಕೂಲ. ಜೊತೆಗೆ ಪಕ್ಕದಲ್ಲಿರುವ ಕೈಗಾರಿಕಾ ಕೇಂದ್ರ ಮತ್ತು ಗ್ರಾಮಗಳಿಗೂ ಅನುಕೂಲವಾಗುತದೆ ಈ ಬಗ್ಗೆ ಸಚಿವರಲ್ಲಿ ಆಗ್ರಹವನ್ನು ಮಾಡುತ್ತೇನೆ ಎಂದರು.

ಇದಲ್ಲದೆ ಯೂರಾಲಜಿ, ಕಾರ್ಡಿಯಾಲಜಿ ಬೋಧನೆಗೆ ಎಂಎಸ್ ಆಗಿರುವ ಸಿಬ್ಬಂದಿ ಬೇಕು ಅದನ್ನು ಒದಗಿಸಬೇಕು. ಹಾಸ್ಟೆಲ್ ಬ್ಲಾಕ್‌ನಲ್ಲಿ ಮಿನಿ ಗ್ರಂಥಾಲಯ ತೆರೆಯಬೇಕು. ಸ್ವಚ್ಛತೆಗೆ ಇನ್ನಷ್ಟು ಗಮನ ಕೊಡಬೇಕು ಎನ್ನುವ ಆಗ್ರಹ ವಿದ್ಯಾರ್ಥಿಗಳದ್ದಾಗಿದೆ ಎಂದರು. ಎರಡು ಬಾರಿ ವೈದ್ಯಕೀಯ ಶಿಕ್ಷಣ ಸಚಿವರು ಇಲ್ಲಗೆ ಭೇಟಿ ನೀಡಿದರೂ ಸಮಸ್ಯೆಗಳು ಹಾಗೇ ಉಳಿದಿವೆ ಇದರ ಬಗ್ಗೆ ಗಮನಹರಿಸಬೇಕು ಎಂದು ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.

ಈ ವೇಳೆ ನಗರಸಭೆ ಉಪಾಧ್ಯಕ್ಷೆ ಲಲಿತಾ ರಾಜಾನಾಯ್ಕ್, ಮುಖಂಡರುಗಳಾದ ಜಸಂತ ಅನಿಲ್ ಕುಮಾರ್, ಚೈತ್ರಗೌಡ, ಈಶ್ವರಳ್ಳಿ ಮಹೇಶ್, ಪುಷ್ಪರಾಜ್, ಜೀವನ್ ರಂಗನಾಥ್, ಕುಮಾರ್ ಇತರರು ಇದ್ದರು.

Dozens of grievances at Chikmagalur Medical College-Student Hostel

Related posts

ಅಮೇರಿಕಾದೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳದಂತೆ ಆಗ್ರಹಿಸಿ ರೈತ ಸಂಘ ಮನವಿ

Team Suddigara

ಭಾರತದ ಪ್ರತಿಯೊಬ್ಬ ಪ್ರಜೆಯು ಅನುಸರಿಸಬೇಕಾದ ಮಹಾಗ್ರಂಥಾ ಭಾರತೀಯ ಸಂವಿಧಾನ

Team Suddigara

ಗ್ರಾಮೀಣ ಭಾಗದ ಜನರ ಬದುಕು ಹಸನುಗೊಳಿಸಲು ಸರ್ವಪ್ರಯತ್ನ. ಶಾಸಕ ಶ್ರೀನಿವಾಸ್.

Manju Mc

Leave a Comment

[t4b-ticker] [t4b-ticker]