May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಅಮಾಯಕ ಬಾಲಕನ ಸಾವಿನ ತನಿಖೆಗೆ ಆಗ್ರಹಿಸಿ ದಸಂಸ ಪ್ರತಿಭಟನೆ

ಚಿಕ್ಕಮಗಳೂರು: ಬಾನಳ್ಳಿ ಬಗ್ಗಸಗೋಡು ಗ್ರಾಮದ ಪ್ರೀತಂ ಸಾವಿನ ತನಿಖೆಯನ್ನು ನ್ಯಾಯಾಂಗಕ್ಕೆ ಒಳಪಡಿಸಿ ಕುಟುಂಬಸ್ಥರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ದಸಂಸ ಮುಖಂಡ ರುಗಳು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಮಾತನಾಡಿ ಮೂಡಿಗೆರೆ ತಾಲ್ಲೂಕಿನ ಬಾ ನಳ್ಳಿ ಬಗ್ಗಸಗೋಡು ಗ್ರಾಮದ ಪ.ಜಾತಿ ಜನಾಂಗದ ಶಿವಣ್ಣ ಎಂಬುವವರ ಪುತ್ರ ಪ್ರೀತಂ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆದರೆ ಕಳೆದ ೧೫ ದಿನಗಳಿಂದ ಶಾಲೆಗೆ ಗೈರಾಗಿದ್ದು ಮನಗಂಡ ಪಾಲಕರು ತೀವ್ರ ಗಾಬರಿಗೊಂಡಿದ್ದಾರೆ ಎಂದರು.

ಪ್ರೀತಂ ಎಂಬ ಬಾಲಕನನ್ನು ಭಾರತಿ ಬೈಲ್ ಗ್ರಾಮದ ವ್ಯಕ್ತಿಯೊರ್ವರು, ಪಾಲಕರು ಇಲ್ಲದ ಸಮಯ ದಲ್ಲಿ ಬಲವಂತವಾಗಿ ಟಿಂಬರ್ ಕೆಲಸಕ್ಕೆ ಕರೆದೊಯ್ದುದಿದ್ದಾರೆ. ಕೆಲಗಂಟೆ ನಂತರ ಮನೆಗೆ ಹಿಂತಿರುಗಿದಾಗ ಶಿವಣ್ಣ, ಕೆಲಸದಾಳಿನ ಮೂಲಕ ಪ್ರೀತಂ ತಲೆಸುತ್ತಿ ಬಿದ್ದಿರುವುದಾಗಿ ತಿಳಿಸಿದ್ದು ಕೂಡಲೇ ತೆರಳಿದಾಗ ಬಿದ್ದಿ ರುವ ಜಾಗ ಬದಲಿಸಿ, ಬೇರೆ ಸಮತಟ್ಟಾದ ಜಾಗದಲ್ಲಿ ಪ್ರೀತಂನನ್ನು ಇರಿಸಿದ್ದಾರೆ ಎಂದು ಹೇಳಿದರು.

ಗಾಬರಿಗೊಂಡ ಪಾಲಕರು ಶೀಘ್ರವೇ ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು, ವೈದ್ಯರು ಪರೀಕ್ಷಿಸಿದಾಗ ಮೃತರಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಈ ವಿಚಾರ ತಿಳಿದ ಭಾರತಿ ಬೈಲ್ ಗ್ರಾಮದ ವ್ಯಕ್ತಿ ಶಿವಣ್ಣ ಎಂಬುವವರನ್ನು ಬಲವಂತದಿಂದ ಬಣಕಲ್ ಪೊಲೀಸ್ ಠಾಣೆಗೆ ಕರೆದುಕೊಂಡು ಅವರೇ ಹೇಳಿಕೆ ಯಂತೆ ಪ್ರಕರಣ ದಾಖಲಿಸಿದ್ದಾರೆ ಎಂದರು.

ಪ್ರೀತಂ ಸಾವು ಹೆಚ್ಚು ಭಾರ ಹೊರೆಸಿದ ಕಾರಣ ಕುಸಿದು ಬಿದ್ದಿರುವ ಸಾಧ್ಯತೆಯಿದೆ. ಹಾಗೂ ಬಾಲ ಅಪರಾಧ ಕಾಯ್ದೆಯ ನಿಯಮದಂತೆ ಮಕ್ಕಳನ್ನು ಯಾವುದೇ ಕೆಲಸಕ್ಕೆ ಕರೆದುಕೊಂಡು ಹೋಗುವಂತಿಲ್ಲ. ಇದು ಪೊಲೀಸ್ ಇಲಾಖೆಗೆ ತಿಳಿದಿದ್ದರೂ ಸಹ ಪ್ರೀತಂ ಬಾಲಕ ಸಾವನ್ನು ಮುಚ್ಚಿ ಹಾಕಲಾಗಿದೆ ಎಂದು ದೂರಿದರು.

ಈ ಪ್ರಕರಣದ ಸಂಬಂಧ ಶಿವಣ್ಣ ಎಂಬುವವರು ಅನೇಕ ತಿಂಗಳು ಕಾಲ ಪೊಲೀಸ್ ಇಲಾಖೆಗೆ ತೆರ ಳಿದರೂ ನ್ಯಾಯ ದೊರಕಿಲ್ಲ. ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ನೇರ ಗಮನಕ್ಕೆ ತಂದರೂ ಯಾವುದೇ ರೀತಿ ಕ್ರಮ ಕೈಗೊಂಡಿರುವುದಿಲ್ಲ ಎಂದರು.

ಕೂಡಲೇ ಪ್ರೀತಂ ಸಾವಿನ ತನಿಖೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಕುಟುಂಬಸ್ಥರ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂ ಜಯ್ಯ, ಮುಖಂಡರುಗಳಾದ ಸಂತೋಷ್ ಲಕ್ಯಾ, ಮಂಜುನಾಥ್ ನಂಬಿಯಾರ್, ವಿರೂಪಾಕ್ಷ, ರಾಕೇಶ್, ಪುಟ್ಟರಾಜು, ಪೂರ್ಣೇಶ್, ಮೃತನ ಕುಟುಂಬಸ್ಥರಾದ ಶಿವಣ್ಣ, ಪ್ರೀತಿ ಹಾಜರಿದ್ದರು.

Dasamsa protests against investigation into death of innocent boy

Related posts

ಅಕ್ಕಿ ವಿತರಣಾ ಕೇಂದ್ರಗಳಿಗೆ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ಭೇಟಿ

Team Suddigara

jಜಿಲ್ಲೆಯ ಕೆರೆಗಳ ಒತ್ತುವರಿ ತೆರವಿಗೆ ಶೀಘ್ರ ಕ್ರಮ ಅಗತ್ಯ

Team Suddigara

ಉಗ್ರರ ದಾಳಿಯಿಂದ ಕೊಪ್ಪ ತಾಲೂಕಿನ ಕುಣಿಮಕ್ಕಿ ಮೂಲದ ಮಂಜುನಾಥ್ ರಾವ್ ಸಾವು

Team Suddigara

Leave a Comment