May 18, 2026
Suddigaralive News
ಚಿಕ್ಕಮಗಳೂರು ನಗರ

ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ… ಚಿತ್ರರಂಗ ಕಂಬನಿ

500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಇಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಹಿರಿಯ ಹಾಸ್ಯ ನಟನ ನಿಧನಕ್ಕೆ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ನಟಿಸಿ ಅಪಾರ ಪ್ರೇಕ್ಷಕರನ್ನು ಸೆಳೆದಿದ್ದ ನಟ ಬ್ಯಾಂಕ್ ಜನಾರ್ಧನ್.

ಹಾಸ್ಯ ನಟನ ಸಾವಿನಿಂದ ಚಿತ್ರರಂಗ ಬಡವಾಗಿದೆ . ಬ್ಯಾಂಕ್ ಜನಾರ್ಧನ್ ಸಿನಿಮಾದಲ್ಲಿದ್ದಾರೆ ಎಂದರೆ ಪ್ರೇಕ್ಷಕರ ಶಿಳ್ಳೆ ,ಚಪ್ಪಾಳೆ ಥಿಯೇಟರ್ ನಲ್ಲಿ ಮುಗಿಲುಮಟ್ಟುತ್ತಿತ್ತು.
ಒಂದು ಸಿನಿಮಾಕ್ಕೆ ಹಾಡು ಡ್ಯಾನ್ಸು ಹೇಗೆ ಮುಖ್ಯವೋ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲಿ ಹಾಸ್ಯವು ಕೂಡ ಅಷ್ಟೇ ಪ್ರಮುಖ ಪಾತ್ರವಹಿಸುತ್ತಿತ್ತು ಈ ರೀತಿಯಲ್ಲಿ ಬ್ಯಾಂಕ್ ಜನಾರ್ಧನ್ ಸಿನಿಮಾದಲ್ಲಿದ್ದಾರೆ ಎಂದರೆ ಪ್ರೇಕ್ಷಕರು ತುಂಬಾ ಎಂಜಾಯ್ ಮಾಡಿ ಸಿನಿಮಾ ನೋಡುತ್ತಿದ್ದರು.
ಅವರ ಅದ್ಭುತ ನಟನೆ ಲಕ್ಷಾಂತರ ಪ್ರೇಕ್ಷಕರನ್ನು ಸೆಳೆದಿತ್ತು ಹಾಗೂ ಇತ್ತೀಚಿನ ಗಳಲ್ಲಿ ಸಿನಿಮಾಕ್ಕೆ ಹಾಸ್ಯ ಕೂಡ ಒಂದು ಪ್ರಮುಖ ಪಾತ್ರವಾಗುತ್ತಿತ್ತು.
ಹಿರಿಯ ನಟರಾದ ಡಾಕ್ಟರ್ ರಾಜಕುಮಾರ್, ಡಾಕ್ಟರ್ ವಿಷ್ಣುವರ್ಧನ್, ಅಂಬರೀಶ್ ಮುಂತಾದ ನಟರೊಂದಿಗೆ ನಟಿಸಿದ್ದ ಬ್ಯಾಂಕ್ ಜನಾರ್ಧನ್ 500ಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಕಿರುತೆರೆಯಲ್ಲಿ ನಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ
ತಮ್ಮ 76 ವಯಸ್ಸಿನಲ್ಲಿ ಹತ್ತು ಹಲವು ನೋವು ನಲಿವುಗಳನ್ನು ಕಂಡಿರುವ ಈ ಹಾಸನಟ ಹಿಂದೆ ಹೃದಯಘಾತವಾಗಿ ಚೇತರಿಸಿಕೊಂಡಿದ್ದರು ಇದೀಗ ಕಳೆದ ಮೂರು ನಾಲ್ಕು ವರ್ಷದಿಂದ ಸಿನಿಮಾ ರಂಗದಿಂದ ದೂರವಿದ್ದ ಹಾಸ್ಯಕಲಾವಿದ ಬ್ಯಾಂಕ್ ಜನಾರ್ಧನ್ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು ಇಂದು ನಿಧನ ಹೊಂದಿದ್ದಾರೆ.
ಗಣ್ಯರು ಹಾಗೂ ಚಿತ್ರನಟರು ಇವರ ನಟನೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಕಂಬನಿ ಮಿಡಿದಿದ್ದಾರೆ.
ಇಂದು ಬೆಂಗಳೂರಿನ ಅವರ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿದ್ದು, ಹಾಸ್ಯ ನಟನ ಅಂತಿಮ ದರ್ಶನಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಹಲವಾರು ನಟ ನಟಿಯರ ದಂಡು ಹರಿದು ಬಂದಿದೆ.

Related posts

ಮಾ.22 ರಂದು ರಾಜ್ಯ ಬಂದ್‌ಗೆ ಕರೆ ಜಿಲ್ಲೆಯ ಜನತೆ ಸಹಕರಿಸಬೇಕು

Team Suddigara

ತೇಗೂರು ಪಂಚಾಯತಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಜಿಲ್ಲಾಡಳಿತಕ್ಕೆ ಮನವಿ

Team Suddigara

 ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಯ ಅವಧಿ ವಿಸ್ತರಣೆ

Team Suddigara

Leave a Comment