May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಏಕತಾ ನಡಿಗೆ ದೇಶ ಮೊದಲು ಎನ್ನುವ ರಾಷ್ಟ್ರಭಕ್ತರಿಗೆ ಸಲ್ಲುತ್ತದೆ

ಚಿಕ್ಕಮಗಳೂರು:  ನನಗಿಂತ, ನನ್ನ ಜಾತಿಗಿಂತ, ನನ್ನ ಧರ್ಮಕ್ಕಿಂತ ನನ್ನ ದೇಶ ಮೊದಲು ಎನ್ನುವ ರಾಷ್ಟ್ರಭಕ್ತರಿಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ ಈ ಏಕತಾ ನಡಿಗೆ ಸಲ್ಲುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಮೈ ಭಾರತ್ ಕೇಂದ್ರ (ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ) ಕುವೆಂಪು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ನಗರದ ಟೌನ್ ಕ್ಯಾಂಟೀನ್ ಸಮೀಪದಿಂದ ಹೊಸಮನೆ ಬಡಾವಣೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕದವರೆಗೆ ಆಯೋಜಿಸಲಾಗಿದ್ದ ಏಕತಾ ನಡಿಗೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

ಇಡೀ ರಾಷ್ಟ್ರದಲ್ಲಿ, ಜಿಲ್ಲೆಯಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಾಜ ಹೆಮ್ಮೆ ಪಡುವ ಏಕತಾ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹರಿದು ಹಂಚಿಹೋಗಿರುವ ಅನೇಕ ರಾಜರುಗಳನ್ನು ಅಗತ್ಯವಿದ್ದಾಗ ದಂಡ ಪ್ರಯೋಗದ ಮೂಲಕವೂ ಒಗ್ಗೂಡಿಸಿ ಭಾರತದ ಏಕತೆಯನ್ನು ಕಾಪಾಡಿದವರು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು. ಈ ಸಂದರ್ಭದಲ್ಲಿ ಅವರ ಹೆಸರು ನೆನಪಿಸಿಕೊಂಡು ಎಲ್ಲರೂ ಏಕತಾ ನಡಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರ ಮೊದಲು ಎನ್ನುವ ಕಲ್ಪನೆಗೆ ಒತ್ತು ಕೊಟ್ಟು ಕೆಲಸ ಮಾಡುವ ಕಾರ್ಯಕ್ರಮ ಇದಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ ಮಾತನಾಡಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಏಕತಾ ನಡಿಗೆ ಒಂದೆಡೆಯಾದರೆ, ಇನ್ನೊಂದೆಡೆ ಈ ದೇಶದ ವಂದೇ ಮಾತರಂ ಗೀತೆಗೂ ೧೫೦ ವರ್ಷ ತುಂಬಿದೆ. ಆತ್ಮ ನಿರ್ಭರ ಭಾರತ ಎಂದು ನಮ್ಮ ಪ್ರಧಾನಿ ಘೋಷಣೆ ಮಾಡಿದ್ದಾರೆ.

ಆತ್ಮನಿರ್ಭರ ಭಾರತ ಆಗಬೇಕೆನ್ನುವುದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಉದ್ದೇಶವಾಗಿದ್ದು, ನಮ್ಮೆಲ್ಲರ ಆಶಯವೂ ಆಗಿದೆ. ಯುವಪೀಳಿಗೆ ಎತ್ತ ಸಾಗಿದೆ ಎನ್ನುವ ಬಗ್ಗೆಯೂ ನಾವು ಅವಲೋಕನ ಮಾಡಬೇಕಾಗಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಶ್ರೇಷ್ಠ ಭಾಷೆ. ರಾಷ್ಟ್ರ ಕವಿ ನೀಡಿರುವ ನಾಡಗೀತೆ ನಮ್ಮ ಸಂವಿಧಾನದ ಆಶಯ. ಸಂವಿಧಾನದ ಆಶಯದ ಬಗ್ಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ರಾಷ್ಟ್ರದಲ್ಲಿ ಏಕತೆ ಮೂಡಿಸಿ ರಾಷ್ಟ್ರಪ್ರೇಮದ ಬಗ್ಗೆ ನಮ್ಮ ಯುವಪೀಳಿಗೆಯಲ್ಲಿ ಅಗತ್ಯ ವಿಚಾರಗಳನ್ನು ಪ್ರೇರೇಪಿಸಲು ಏಕತಾ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಪ್ರಾಸ್ತಾವಿಕ ಮಾತನಾಡಿ, ಈ ಏಕತಾ ನಡಿಗೆ ಕಾರ್ಯಕ್ರಮವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮ ದಿನಾಚರಣೆ ಅಂಗವಾಗಿ ಇದು ರಾಷ್ಟ್ರಾದ್ಯಂತ ನಡೆದಿದ್ದು, `ಒನ್ ನೇಷನ್, ಒನ್ ವಿಷನ್’ ಇತ್ತೀಚಿನ ದಿನಗಳಲ್ಲಿ ಪ್ರಸ್ತುತವಾಗಿದ್ದು, ಪಟೇಲ್ ಅವರ ದೀರ್ಘ ದೃಷ್ಟಿಯನ್ನು ಸಾರುವ ಸಲುವಾಗಿ ಈ ನಡಿಗೆಯಲ್ಲಿ ಅವರ ಧ್ಯೇಯವನ್ನು ಜೀವನವಿಡೀ ಅಳವಡಿಸಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಪೌರಾಯುಕ್ತ ಬಿ.ಸಿ.ಬಸವರಾಜ್, ಮುಖಂಡರಾದ ಹೆಚ್.ಸಿ.ಕಲ್ಮರುಡಪ್ಪ, ಬೆಳವಾಡಿ ರವೀಂದ್ರ, ದೀಪಕ್ ದೊಡ್ಡಯ್ಯ, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

The march of unity belongs to the patriots who put country first.

Related posts

ಇಂದು ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಾಕ್‌ಡ್ರಿಲ್‌

Team Suddigara

ಮಹಿಳಾ – ಮಕ್ಕಳ ಅಭಿವೃದ್ದಿ ನಿಗಮಕ್ಕೆ ಸರ್ಕಾರದಿಂದ 32 ಕೋಟಿ ರೂ.

Team Suddigara

ಅದ್ದೂರಿಯಾಗಿ ಜರುಗಿದ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ

Team Suddigara

Leave a Comment